ಶಿಕಾರಿಪುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶಿಕಾರಿಪುರವು ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ತಾಲ್ಲೂಕು ಕೇಂದ್ರ. ಇದು ಕರ್ನಾಟಕದ ಅರೆಮಲೆನಾಡು ಭಾಗದಲ್ಲಿ ಇರುವ ಊರು. ಈ ಊರಿನ ಸಮೀಪ ಕುಮುದ್ವತಿ ನದಿ ಹರಿಯುತ್ತದೆ,ಸ್ಥಳೀಯರು ಈ ನದಿಯನ್ನು ಗೌರಿಹಳ್ಳ ಎಂದೂ ಕರೆಯುವರು. ಶಿಕಾರಿಪುರದ ಬಳಿ ಇರುವ ಈಸೂರು ಗ್ರಾಮ ಸ್ವಾತಂತ್ರ ಹೊರಾಟಕ್ಕೆ ಪ್ರಸಿದ್ದಿ. ಶಿಕಾರಿಪುರದ ಬಳಿ ಇರುವ ಮತ್ತೊಂದು ಗ್ರಾಮ ಕಾಗಿನಲ್ಲಿ, ಇದು ಶಿಕಾರಿಪುರ-ಹೊನ್ನಾಳಿ ರಸ್ತೆಯಲ್ಲಿ ೧೫ ಕಿ.ಮೀ. ದೊರದಲ್ಲಿದೆ.

ಪರಿವಿಡಿ

[ಬದಲಾಯಿಸಿ] ಪ್ರಮುಖ ದೇವಸ್ಠಾನಗಳು

ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನ-ಶಿಕಾರಿಪುರ ಇದೊಂದು ಪ್ರಾಚೀನ ದೇಗುಲ. ಶ್ರೀ ರಾಮದೂತ ಹನುಮಂತ ಹುಚ್ಚುರಾಯನೆಂದು (ಸಂಸ್ಕೃತದಲ್ಲಿ ಭ್ರಾಂತೇಶ) ಇಲ್ಲಿ ಕರೆಯಲ್ಪಡುವನು. ಈತನೇ ಶಿಕಾರಿಪುರದ ಗ್ರಾಮದೇವತೆ, ದೇಗುಲದ ಮುಖ್ಯದೇವ. ಇಲ್ಲಿ ಸೀತಾ-ಲಕ್ಷ್ಮಣರ ಸಹಿತ ಶ್ರೀರಾಮನ ವಿಗ್ರಹಗಳೂ ಇಲ್ಲಿವೆ. ದೇಗುಲ ಸಮೀಪವೇ ಇರುವ ಕೆರೆಯಲ್ಲಿ ಈಗ ಪೂಜಿಸಲ್ಪಡುತ್ತಿರುವ ಮೂರ್ತಿ ಮುಳುಗಿತ್ತೆಂದೂ, ಭಕ್ತನೋರ್ವನ ಕನಸಿನಲ್ಲಿ ಶ್ರೀ ದೇವರು ಕಾಣಿಸಿಕೊಂಡು ತನ್ನ ಇರುವಿಕೆಯನ್ನು ತಿಳಿಸಿದ ನಂತರ ದೇಗುಲದಲ್ಲಿ ಸ್ಥಾಪಿಸಲಾಯಿತೆಂದೂ ಪ್ರತೀತಿಯಿದೆ. ಮೈಸೂರಿನ ಆಡಳಿತಗಾರ ಟೀಪು ಸುಲ್ತಾನನು ಶ್ರೀ ಹುಚ್ಚೂರಾಯನಿಗೆ ಬಂಗಾರದ ಬಾಸಿಂಗವೇ ಮೊದಲಾದ ಆಭರಣಗಳನ್ನು ನೀಡಿದನೆಂಬ ಇತಿಹಾಸವಿದೆ. ಪ್ರತಿವರ್ಷವೂ ಜರುಗುವ ಜಾತ್ರೆಯು ಬಹುಪ್ರಸಿದ್ಧವಾಗಿದ್ದು, ಸಾವಿರಾರು ಜನ ಆಗ ದೇವರ ದರ್ಶನ ಪಡೆಯುತ್ತಾರೆ. ದೇಗುಲದ ಮುಂದೆ ಹಾದು ಹೋಗುವ ಬೀದಿಯಲ್ಲಿ ಶ್ರೀ ದೇವರನ್ನು ರಥದಲ್ಲಿ ಕೊಂಡು ಹೋಗುವರು. ಈ ರಸ್ತೆಗೆ ಈ ಕಾರಣದಿಂದ ರಥಬೀದಿ ಎಂಬ ಹೆಸರಿದೆ. ಇತ್ತೀಚೆಗಷ್ಟೆ ದೇಗುಲದ ಜೀರ್ಣೋದ್ಧಾರ ನಡೆಯುತ್ತಿದ್ದು, ಪ್ರವೇಶದ್ವಾರದ ಮೇಲೆ ಗದೆ ಹಿಡಿದು ಮೊಣಕಾಲೂರಿ ಕುಳಿತಿರುವ ಮಾರುತಿಯ ಸುಂದರ ವಿಗ್ರಹವನ್ನು ನಿರ್ಮಿಸಲಾಗಿದೆ. ಶಿಕಾರಿಪುರ ಶಿವಮೊಗ್ಗ ಜಿಲ್ಲೆಯ ಒನ್ದು ಅಭಿವ್ರುದ್ಧಿಯಾದ ತಾಲ್ಲುಕು ಹಾಗು ಇದನ್ನು ಈ ಜಿಲ್ಲೆಯ ಭತ್ತದ ಕಣ್ಜಾ ಯೆನ್ನ್ದೆ ಕರೆಯಲಾಗುತ್ತದೆ ಅಥಿ ಹೆಚ್ಛು ಭತ್ತ ಬೆಳೆಯುವ ತಾಲ್ಲುಕು. ಮುಖ್ಯವಾಗಿ ಶಿಕಾರಿಪುರದಿನ್ದ ೨೩ ಕಿಲೊಮೀಟರ್ ದೂರದಲ್ಲಿ ಬೆಲ್ಲಿಗಾವಿ ಎನ್ನುವ ಸ್ಥಳವಿದ್ದು ಗಥಕಾಲದ ವೈಭವವನ್ನು ಸಾರುತ್ತದೆ.ಈ ಪ್ರದೇಶವು ಹೊಯ್ಸಳರ ಆಳ್ವೀಕೆಯನ್ನು ಕನ್ಮ್ದಿದ್ದು ಕೆಲ ದೇವಸ್ತಾನಗಳು ಹೊಯ್ಸಳ ಶೈಲಿಯ ಕಟ್ಟದವನ್ನು ಹೊನ್ದಿರುತ್ತದೆ ಹಾಗು ಈ ಸ್ಥಳ ನಾಟ್ಯರಾನಿ ಶಾನ್ಠಲೆ ಯ ತವರೂರಾಗಿದೆ. ಇಲ್ಲಿ ಕೆದಾರೇಶ್ವರ,ಅಮರನಾಥೆಶ್ವರ ಹಾಗು ಇನ್ನಿಥರ ಪ್ರಸಿದ್ಧ ದೇವಸ್ಥಾನಗಳು ಇವೆ.

[ಬದಲಾಯಿಸಿ] ಶ್ರೀ ದತ್ತಮಂದಿರ

ಇದನ್ನು ಶ್ರೀ ಕೇವಲಾನಂದರೆಂಬ ಸಂನ್ಯಾಸಿಗಳು ೭೦ರ ದಶಕದಲ್ಲಿ ಸ್ಥಾಪಿಸಿದರು. ಹುಚ್ಚುರಾಯನ ಕೆರೆಯ ದಂಡೆಯಲ್ಲಿದೆ. ಇದೊಂದು ದತ್ತ ಪರಂಪರೆಗೆ ಸೇರಿದ ಆಶ್ರಮ. ಇಲ್ಲಿ ಶ್ರೀ ಶಾರದೆ, ಶ್ರೀ ಶಂಕರಾಚಾರ್ಯ ಹಾಗು ಶ್ರೀ ದತ್ತಾತ್ರೇಯನ ಬಿಳಿಶಿಲೆಯ ವಿಗ್ರಹಗಳಿವೆ.

[ಬದಲಾಯಿಸಿ] ಮುಖ್ಯ ಸ್ಥಳಗಳು

ಉಡುಗಣಿ-ಅಕ್ಕಮಹಾದೇವಿಯ ಜನ್ಮಸ್ಥಳ-ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳ ವೃಂದಾವನ ಇದೆ.

[ಬದಲಾಯಿಸಿ] ಈ ಭಾಗದ ಪ್ರಮುಖ ವ್ಯಕ್ತಿಗಳು

  • ಅನುಭಾವಿ ಅಲ್ಲಮಪ್ರಭು
  • ಶರಣೆ ಅಕ್ಕ ಮಹಾದೇವಿ
  • ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ-ಜನ್ಮಸ್ಥಳ
  • ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ- ಇವರ ವಿಧಾನ ಸಭಾಕ್ಷೇತ್ರ
  • ಎಸ್.ಆರ್. ರಾವ್, ಹರಪ್ಪಾ-ಮೊಹಂಜೊದಾರೊ ಖ್ಯಾತಿಯ ಪುರಾತತ್ವ ಶಾಸ್ತ್ರ ತಙ್ಞರು
  • ದಿವಂಗತ, ಶ್ರೀ. ಶಿಕಾರಿಪುರ ಹರಿಹರೇಶ್ವರ, ಅಮೆರಿಕದಲ್ಲಿ ೩೭ ವರ್ಷದುಡಿದು, ಅಲ್ಲಿನ ಕನ್ನಡಜನರ ಮನಸ್ಸನ್ನು ಒಂದುಗೂಡಿಸಿ, ಕನ್ನಡಪರ ಚಟುವಟಿಕೆಗಳನ್ನು ಪ್ರಾರಂಭಿಸಿದರು. ತಮ್ಮ ನಿವೃತ್ತಿಯ ಬಳಿಕ, ಮೈಸೂರಿನಲ್ಲಿ ವಾಸ್ತವ್ಯಹೂಡಿ ಅನವರತ ಕನ್ನಡಕ್ಕಾಗಿ ದುಡಿದ ಕನ್ನಡದ ಪರಿಚಾರಕ.
  • ಅನುಭಾವ ಮಂಟಪದ ವಚನಕಾರರಾದ ಸತ್ಯಕ್ಕ,ಮುಕ್ತಾಯಕ್ಕ ಅಜಗಣ್ಣ,ಇಕ್ಕದ ಮಾರಯ್ಯ, ಅಂಕದ ಮಾರಯ್ಯ ಇವರೆಲ್ಲಾ ಈ ತಾಲ್ಲೂಕಿನವರೆ


ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು