ಶ್ರೀ ರಾಘವೇಶ್ವರ ಭಾರತೀ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಅವಿಚ್ಛಿನ್ನ ಪರಂಪರೆಯ ಶ್ರೀ ರಾಮಚಂದ್ರಾಪುರ ಮಠದ ಗೋಕರ್ಣ ಸಂಸ್ಥಾನದ ಈಗಿನ ಪೀಠಾಧಿಪತಿಗಳು. ಇವರು ಪರಮಪೂಜ್ಯರೂ, ಮಹಾನ್ ತಪಸ್ವಿಗಳೂ, ಶ್ರೇಷ್ಠ ವಿದ್ವಾಂಸರೂ ಆಗಿದ್ದ ಬ್ರಹ್ಮಲೀನ ಶ್ರೀ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರಿಂದ ೧೯೯೪ರ ಏಪ್ರಿಲ್‌ನಲ್ಲಿ ಸಂನ್ಯಾಸ ದೀಕ್ಷೆ ಪಡೆದರು. ೧೯೯೯ರ ಏಪ್ರಿಲ್ ನಲ್ಲಿ ಪೀಠಾರೋಹಣ ಮಾಡಿದಂದಿನಿಂದ ಜೀವ ಜಗತ್ತಿನ ಶಾಂತಿ ಸಮೃದ್ಧಿಗಾಗಿ ತಮ್ಮನ್ನು ಸಮರ್ಪಿಸಿಕೊಂಡರು. ಅಧ್ಯಾತ್ಮದ ಬಲದಿಂದ ಜನಸಮುದಾಯವನ್ನು ಬೆಳಕಿನೆಡೆಗೆ ಕೊಂಡೊಯ್ಯುತ್ತಿರುವ ಜೀವ ಕಾರುಣ್ಯದ ನೆಲೆಯಾಗಿರುವ ಶ್ರೀ ಶ್ರೀಗಳವರು ಈ ಜಗತ್ತು ಅವಿರತವಾಗಿ ಅನಂತಕಾಲದವರೆಗೂ ಪರಮಾನಂದದಲ್ಲಿ ನಿರತವಾಗಲೆನ್ನುವ ಸಂಕಲ್ಪದಿಂದ ಕಾರ್ಯನಿರತರಾಗಿದ್ದಾರೆ. ಪರಮಪೂಜ್ಯರ ಧೀಶಕ್ತಿ, ಪ್ರಜ್ಞಾವಂತಿಕೆ, ತಪೊಬಲ, ಜೀವದಯೆ ಅವರನ್ನು ಈ ಜಗತ್ತಿನ ಶ್ರೇಷ್ಠ ಅಧ್ಯಾತ್ಮ ನಾಯಕರನ್ನಾಗಿಸಿವೆ.
ಪರಿವಿಡಿ |
[ಬದಲಾಯಿಸಿ] ಜನನ ಮತ್ತು ಬಾಲ್ಯ
ತಮ್ಮ ಪೂರ್ವಾಶ್ರಮದಲ್ಲಿ ಸ್ವಾಮೀಜಿ ಅವರು ಹರೀಶ ಶರ್ಮಾ ಎಂಬ ಹೆಸರನ್ನು ಹೊಂದಿದ್ದರು. ಅವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಚದುರವಳ್ಳಿ ಎಂಬ ಹಳ್ಳಿಯಲ್ಲಿ ಜನಿಸಿದರು. ಪ್ರೌಢಶಾಲೆಯವರೆಗೆ ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದರು. ಗೋಕರ್ಣ ಮತ್ತು ವಾರಣಾಸಿಯಲ್ಲಿ ವೈದಿಕ ಶಿಕ್ಷಣವನ್ನು ಪಡೆದು ತಮ್ಮ ೧೮ನೇ ವಯಸ್ಸಿನಲ್ಲಿ ಬ್ರಹ್ಮೈಕ್ಯ ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳಿಂದ ಸಂನ್ಯಾಸ ಸ್ವೀಕರಿಸಿ ಮೈಸೂರಿನಲ್ಲಿ ತಮ್ಮ ವೈದಿಕ ಶಿಕ್ಷಣವನ್ನು ಮುಂದುವರೆಸಿದರು.
[ಬದಲಾಯಿಸಿ] ಸಂನ್ಯಾಸ ಮತ್ತು ಪೀಠಾರೋಹಣ
ಶ್ರೀ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳು ಬ್ರಹ್ಮೈಕ್ಯರಾದ ನಂತರ ರಾಘವೇಶ್ವರ ಭಾರತೀ ಸ್ವಾಮಿಗಳು ೧೯೯೯ರ ಏಪ್ರಿಲ್‍ನಲ್ಲಿ ತಮ್ಮ ೨೩ನೇ ವಯಸ್ಸಿನಲ್ಲಿ ರಾಮಚಂದ್ರಾಪುರ ಮಠದ ಪೀಠಾಧಿಪತಿಯಾಗಿ ಅಭಿಷಿಕ್ತರಾದರು. ಅವರು ತಮ್ಮ ಧರ್ಮತತ್ಪರತೆ, ಕಾರ್ಯೋನ್ಮುಖತೆ, ಸಕ್ರಿಯತೆ, ವಾಕ್ಚಾತುರ್ಯ, ವಿನಯಗಳಿಂದ ಜನಪ್ರಿಯರಾಗಿದ್ದಾರೆ.
[ಬದಲಾಯಿಸಿ] ಧಾರ್ಮಿಕ ಚಿಂತನೆ ಮತ್ತು ಚಟುವಟಿಕೆಗಳು
ಇತರ ಸಾಮಾಜಿಕ ಚಟುವಟಿಕೆಗಳ ಜೊತೆಗೆ, ವೈದಿಕ ಸಂಸ್ಕೃತಿಯನ್ನು ಉಳಿಸುವ ಕಡೆ ಮೊದಲು ಪ್ರಾಧಾನ್ಯತೆ ನೀಡಿದರು. ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಬೆಂಗಳೂರಿನ ಗಿರಿನಗರದ ಬಳಿಯಿರುವ ರಾಮಾಶ್ರಮ, ಶಿರಸಿಯ ಅಂಬಾಗಿರಿಯ ರಾಮಕೃಷ್ಣ ಕಲಿಕಾ ಮಠ, ಚೋಕಡಿ-ಬೆಳ್ಳಾರೆ-ಸುಳ್ಯದ ಶ್ರೀ ರಾಮ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನ ಮತ್ತು ಮಠಗಳು ಸ್ವಾಮೀಜಿಯವರ ಕೆಲಸ ಮತ್ತು ಸಾಮರ್ಥ್ಯಗಳನ್ನು ಮೆಚ್ಚಿ ರಾಮಚಂದ್ರಾಪುರ ಮಠದೊಂದಿಗೆ ವಿಲೀನಗೊಂಡವು.
ಗ್ರಾಮೀಣ ಪ್ರದೇಶದ ಜನರ ಕಣ್ಣಿನ ಆರೋಗ್ಯಕ್ಕಾಗಿ ಧರ್ಮದ ಎಲ್ಲೆಯನ್ನು ಮೀರಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬ್ಳ ತಾಲೂಕಿನ ಮುಜಂಗಾವು ಎಂಬಲ್ಲಿ ಭಾರತೀ ನೇತ್ರ ಚಿಕಿತ್ಸಾಲಯ ಪ್ರಾರಂಭಿಸಿದರು.
[ಬದಲಾಯಿಸಿ] ಪಾರಂಪರಿಕ ಬಿರುದುಬಾವಲಿಗಳು
ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯವರ್ಯ, ಪದವಾಕ್ಯಪ್ರಮಾಣಪಾರಾವಾರಪಾರೀಣ,
ಯಮನಿಯಮಾಸನಪ್ರಾಣಾಯಾಮಪ್ರತ್ಯಾಹಾರಧ್ಯಾನಧಾರಣಸಮಾಧ್ಯಷಾಂಗಯೋಗಾನುಷ್ಠಾನನಿಷ್ಠ,
ಷಡ್ದರ್ಶನಸ್ಥಾಪನಾಚಾರ್ಯ, ತಪಶ್ಚಕ್ರವರ್ತ್ಯಾದ್ಯನೇಕವಿಶೇಷಣವಿಶಿಷ್ಟ
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶಿಷ್ಯ
ಶ್ರೀ ಸುರೇಶ್ವರಾಚಾರ್ಯ ಜ್ಯೇಷ್ಠ ಶಿಷ್ಯ ವಿದ್ಯಾನಂದಾಚಾರ್ಯಾವಿಛ್ಛಿನ್ನಗುರುಪರಂಪರಾಪ್ರಾಪ್ತ
ಸಕಲನಿಗಮಾಗಮಸಾರಹೃದಯ, ಸಾಂಖ್ಯತ್ರಯ ಪ್ರತಿಪಾದಕ, ವೈದಿಕಮಾರ್ಗ ಪ್ರವರ್ತಕ, ಸರ್ವತಂತ್ರಸ್ವತಂತ್ರಾದಿಬಿರುದಾಂಕಿತ
ವಿದ್ಯಾನಗರ ಮಹಾರಾಜಧಾನೀ ವೈಭವಸಿಂಹಾಸನಾಧೀಶ್ವರ,
ವಿಖ್ಯಾತವ್ಯಾಖ್ಯಾನ ಸಿಂಹಾಸನಾರೂಢ ಶ್ರೀಮದ್ರಾಜಾಧಿರಾಜಗುರು,
ಶ್ರೀ ಗೋಕರ್ಣಮಂಡಲಾಚಾರ್ಯ
ಶ್ರೀಮಚ್ಛತಶೃಂಗಪುರವರಾಧೀಶ್ವರ,
ಶ್ರೀಮಚ್ಛರಾವತೀತೀರವಾಸ,
ಶ್ರೀಮದ್ರಾಮಚಂದ್ರಾಪುರಮಠಸ್ಥ
ಶ್ರೀಮದ್ರಾಮಚಂದ್ರಚಂದ್ರಮೌಳೀಶ್ವರಪಾದಪದ್ಮಾರಾಧಕ
ಶ್ರೀಮದ್ರಾಘವೇಂದ್ರಭಾರತೀ ಶ್ರೀಗುರುಕರಕಮಲಸಂಜಾತ
|| ಶ್ರೀಮದ್ರಾಘವೇಶ್ವರ ಭಾರತೀ ಶ್ರೀ ಸ್ವಾಮಿನಃ ||