ವಾರಾಣಸಿ
Wikipedia ಇಂದ
(ವಾರಣಾಸಿ ಇಂದ ಪುನರ್ನಿರ್ದೇಶಿತ)
| ವಾರಣಾಸಿ वाराणसी وارانسی |
|
| ಗಂಗಾ ನದಿ, ವಾರಣಾಸಿ | |
| ರಾಜ್ಯ - ಜಿಲ್ಲೆ |
ಉತ್ತರ ಪ್ರದೇಶ - ವಾರಣಾಸಿ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
1550 km² - 80.71 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
3147927 (ಜಿಲ್ಲೆ) - 1995/ಚದರ ಕಿ.ಮಿ. |
| ಮೇಯರ್ | ಕೌಶಲೇಂದ್ರ ಸಿಂಗ್ |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 221 0** (** area code) - +0542 - UP-65 |
ವಾರಣಾಸಿ, ಕಾಶಿ, ಬನಾರಸ್ ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಎಲ್ಲ ಹಿಂದೂಗಳು ಅತ್ಯಂತ ಪವಿತ್ರಸ್ಥಾನವನ್ನಾಗಿ ಪರಿಗಣಿಸುತ್ತಾರೆ. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. ಗಂಗಾ ನದಿಯ ತಟದಲ್ಲಿರುವ ಈ ನಗರವನ್ನು ವರುಣಾ ಮತ್ತು ಅಸಿ ಎಂಬ ನದಿಗಳು ಸುತ್ತುವರೆದಿವೆ. ಈ ನಗರಕ್ಕೆ ಹಲವಾರು ಸಂತರು ಭೇಟಿನೀಡಿದ್ದಾರೆ.
- ರಾಜಾ ಹರಿಶ್ಚಂದ್ರನು ತನ್ನ ಸಂಪೂರ್ಣ ರಾಜ್ಯವನ್ನು ವಿಶ್ವಾಮಿತ್ರರಿಗೆ ದಾನ ಮಾಡಿ, ಶಿವನ ನಾಡಾದ ಕಾಶಿಯಲ್ಲಿ ಆಶ್ರಯ ಪಡೆದನು
- ದೇಸಿ ಭಾಷೆಯಲ್ಲಿ ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ ತುಲಸೀದಾಸರು ಈ ನಗರದಲ್ಲಿ ವಾಸಿಸುತ್ತಿದ್ದರು
- ಮಧ್ಯಯುಗದಲ್ಲಿ ಸಮನ್ವಯದ ಸಂದೇಶವನ್ನು ಸಾರಿ, ಡಂಭಾಚಾರವನ್ನು ಖಂಡಿಸಿದ ರಾಮಭಕ್ತ ಸಂತ ಕಬೀರರು ಈ ನಗರದವರು
- ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಆಚಾರ್ಯ ಮದನ ಮೋಹನ ಮಾಳವೀಯರು ಕಾಶಿಯಲ್ಲಿ ಮಾಡಿದರು
- ಕಾಶಿಯಲ್ಲಿಯ ಪ್ರಸಿದ್ಧ ವಿಶ್ವನಾಥ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು. ನಂತರದ ವರ್ಷಗಳಲ್ಲಿ ಮರಾಠ ರಾಣಿ ಅಹಲ್ಯಾಬಾಯಿ ಹೋಳ್ಕರ ಸಮೀಪದಲ್ಲಿ ಇದನ್ನು ಪುನಃ ನಿರ್ಮಿಸಿದಳು. ಮೂಲ ದೇವಸ್ಥಾನದ ಅವಶೇಷಗಳ ಮೇಲೆ ’ ಗ್ಯಾನವಾಪಿ ಮಸೀದಿಯನ್ನು’ ಔರಂಗಜೇಬನು ಕಟ್ಟಿಸಿದನು.
- ಪ್ರಸಿದ್ಧ ಬಿಂದು ಮಾಧವ ದೇವಾಲಯವನ್ನು ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು.
- ಕಾಶಿಯಲ್ಲಿರುವ ಪ್ರಸಿದ್ಧ ದೇವತೆಯರು ವಿಶಾಲಾಕ್ಷಿ ಮತ್ತು ಅನ್ನಪೂರ್ಣೆಯರು
- ಕಾಶಿಯ ರೇಶ್ಮೆ ಸೀರೆಗಳು ಪ್ರಸಿದ್ಧ. ಕಬೀರರು ಇಂತಹ ನೇಕಾರರ ಮನೆಯಲ್ಲಿ ಬೆಳೆದರು.
- ಬನಾರಸ ಘರಾಣಾ ಎಂಬ ವಿಶಿಷ್ಟ ಸಂಗೀತ ಪದ್ಧತಿಯನ್ನು ಹಿಂದೂಸ್ತಾನಿ ಸಂಗೀತಕ್ಕೆ ಈ ನಗರವು ಕೊಡುಗೆಯಾಗಿ ಕೊಟ್ಟಿದೆ.
- ಕಾಶಿಯು ತನ್ನ ವಿಶಿಷ್ಟ ಸಂಸ್ಕೃತಿಗಾಗಿ ಪ್ರಸಿದ್ಧವಾಗಿದೆ
- ’ಮಹಾ ಸ್ಮಶಾನ’ವೆಂಬ ಹೆಸರಿನಿಂದ ಕರೆಯಲ್ಪಡುವ ಈ ನಗರದಲ್ಲಿ ಮಣಿಕರ್ಣಿಕಾ ಘಟ್ಟ, ಹರಿಶ್ಚಂದ್ರ ಘಟ್ಟ ಮುಂತಾದ ಪ್ರಸಿದ್ಧ ಸ್ನಾನಘಟ್ಟ ಮತ್ತು ಸ್ಮಶಾನಘಟ್ಟಗಳಿವೆ.
[ಬದಲಾಯಿಸಿ] ಹೆಚ್ಚಿನ ಮಾಹಿತಿ
- ಡಯಾನಾ ಎಕ್ ರ ಪಾಂಡಿತ್ಯ ಪೂರ್ಣಗ್ರಂಥ ’ಬನಾರಸ: ಸಿಟಿ ಆಫ್ ಲಾಯಿಟ್’
- ಎಸ್. ಎಲ್. ಭೈರಪ್ಪನವರ ’ಆವರಣ’