ವಿಷಯಕ್ಕೆ ಹೋಗು

ಯು. ಬಿ. ಪವನಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ. ಯು.ಬಿ ಪವನಜ
Born
ಪವನಜ

ಉಬರಡ್ಕ
Educationಎಂ.ಎಸ್ಸಿ ರಸಾಯನಶಾಸ್ತ್ರ, ಪಿಎಚ್.ಡಿ
Known forಕಂಪ್ಯೂಟರ್ ತಂತ್ರಾಂಶ ತಜ್ಞ, ಕನ್ನಡದ ಪ್ರಥಮ ಅಂತರಜಾಲತಾಣ ನಿರ್ಮಾಪಕ
Websitepavanaja.com

ಡಾ. ಉಬರಡ್ಕ ಬೆಳ್ಳಿಪ್ಪಾಡಿ ಪವನಜ,[] ಒಬ್ಬ ವಿಜ್ಞಾನಿ, ಸಾಫ್ಟವೇರ್ ತಂತ್ರಜ್ಞ. ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದಲ್ಲಿ ಮಾಹಿತಿ ಸಾಹಿತ್ಯ ಲೇಖಕರಾಗಿದ್ದಾರೆ. ಅನೇಕ ಪತ್ರಿಕೆಗಳಲ್ಲಿ ಇವರ ಮಾಹಿತಿ ತಂತ್ರಜ್ಞಾನ ಸಂಬಂಧಿತ ಅಂಕಣಗಳು ಹಾಗೂ ಲೇಖನಗಳು ಪ್ರಕಟವಾಗಿವೆ. ಕರ್ನಾಟಕ ಸರಕಾರದ ಕನ್ನಡ ತಂತ್ರಾಂಶ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕನ್ನಡದ ಪ್ರಪ್ರಥಮ ಅಂತರಜಾಲ ತಾಣ ವಿಶ್ವಕನ್ನಡ.ಕಾಂದ ಸೃಷ್ಟಿಕರ್ತರಾಗಿದ್ದಾರೆ.

ಜನನ/ವಿದ್ಯಾಭ್ಯಾಸ/ವೃತ್ತಿಜೀವನ

  • ಪವನಜರು, ಕರ್ನಾಟಕ ಮತ್ತು ಕೇರಳ ಗಡಿಯ ಬೆಳ್ಳಿಪ್ಪಾಡಿ ಎಂಬ ಹಳ್ಳಿಯಲ್ಲಿ ಜನಿಸಿದರು. []
  • ಮೈಸೂರು ವಿ.ವಿ.ಯಿಂದ ಎಂ.ಎಸ್ಸಿ ಪದವಿ, ಬಾಂಬೆ ವಿ.ವಿ.ಯಿಂದ ಪಿಎಚ್.ಡಿ., ತೈವಾನ್‌ನಲ್ಲಿ ಉನ್ನತ ಸಂಶೋಧನೆ.
  • ಮುಂಬಯಿಯ ಬಾಬಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ (ಬಿಎಆರ್‌ಸಿ) ೧೫ ವರ್ಷಗಳ ಕಾಲ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ, ೧೯೯೭ರ ಜೂನ್‌‍ನಲ್ಲಿ ಬಿ.ಎ.ಆರ್‌.ಸಿ. ವಿಜ್ಞಾನಿ ಹುದ್ದೆಗೆ ರಾಜೀನಾಮೆ ಇತ್ತು ಬೆಂಗಳೂರಿಗೆ ಆಗಮನ.
  • ಹಲವು ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ/ಸಲಹೆಗಾರ. ಅವುಗಳಲ್ಲಿ ಕೆಲವು - ಟ್ಯಾಲಿ ಸೊಲೂಶನ್ಸ್, ಮೈಕ್ರೊಸಾಫ್ಟ್ ರಿಸರ್ಚ್ ಲ್ಯಾಬ್ಸ್ ಇಂಡಿಯಾ, ಮೈಕ್ರೋಸಾಫ್ಟ್ ಇಂಡಿಯಾ, ಕೊಮ್ಯಾಟ್ ಟೆಕ್ನೋಲೋಜೀಸ್, ಮಣಿಪಾಲ್ ಗ್ಲೋಬಲ್ ಎಜುಕೇಶನ್, ಎಕ್ಸೆಲ್‍ಸಾಫ್ಟ್ ಟೆಕ್ನೋಲೋಜೀಸ್ ಮೈಸೂರು.
  • ದಿ ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿಯ "ಆಕ್ಸೆಸ್ ಟು ನೊಲೆಜ್" ಟೀಮ್ ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್.[]

ಅಂಕಣ ಬರವಣಿಗೆ

ಕನ್ನಡ ಮತ್ತು ಗಣಕ ಕ್ಷೇತ್ರದಲ್ಲಿ

  • ಕನ್ನಡ ಅಕ್ಷರಗಳನ್ನು ಕಲಿಯಲು ಸಹಾಯಕವಾಗುವ "ಕನ್ನಡ ಕಲಿ" ಎಂಬ ಕಂಪ್ಯೂಟರ್ ಆಟದ ತಯಾರಿಕೆ.[]
  • ವಿಶ್ವಾದ್ಯಂತ ಮಕ್ಕಳಿಗೆ ಕ್ರಮವಿಧಿ ರಚನೆಯ ಮೂಲತತ್ವಗಳನ್ನು ಕಲಿಸಲು ಬಳಸಲಾಗುವ ಲೋಗೋ ಎಂಬ ತಂತ್ರಾಂಶದ ಕನ್ನಡ ಅವತರಣಿಕೆಯನ್ನು ಸಿದ್ಧಪಡಿಸಲಾಗಿದೆ.[]
  • ಬಹುಭಾಷೀಯ ಸ್ಮಾರ್ಟ್‌ಟ್ಯಾಗ್‌ಗಳು (ಆಫೀಸ್ ಎಕ್ಸ್‌ಪಿಗಾಗಿರುವ) ಮತ್ತು ವಿಬಿ ಡಾಟ್‌ನೆಟ್ ಬಳಸಿ ಕೆಲವು ಆನ್ವಯಿಕ ತಂತ್ರಾಂಶಗಳನ್ನು ಸಿದ್ಧಪಡಿಸಲಾಗಿದೆ. ಭಾರತದಲ್ಲಿರುವ ಮೈಕ್ರೋಸಾಫ್ಟ್ ಕಂಪನಿಯು ಸಂಘಟಿಸಿದ್ದ ಅಖಿಲಭಾರತ ಸ್ಮಾರ್ಟ್‌ಟ್ಯಾಗ್ ಸ್ಪರ್ಧೆಯಲ್ಲಿ ಈ ತಂತ್ರಾಂಶಗಳು ಮೂರನೆಯ ಬಹುಮಾನವನ್ನು ಪಡೆದಿವೆ.
  • ಗಣಕಗಳಲ್ಲಿ ಕನ್ನಡ ಬಾಷಾ ಬಳಕೆಯನ್ನು ಸುಗಮಗೊಳಿಸಲು, ಹಲವು ಶಿಷ್ಟತೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕನ್ನಡದ ಉತ್ಸಾಹಿ ತಂತ್ರಜ್ಞರು ಮತ್ತು ವೃತ್ತಿಪರರು ಹಾಗೂ ಸಾಹಿತಿಗಳು ಸೇರಿ ಆರಂಭಿಸಿರುವ ಕನ್ನಡ ಗಣಕ ಪರಿಷತ್ತಿನ ಸ್ಥಾಪಕ ಸದಸ್ಯರಲ್ಲೊಬ್ಬ. ನುಡಿ ತಂತ್ರಾಂಶದ ತಯಾರಿಕೆಯಲ್ಲಿ ತಾಂತ್ರಿಕವಾದ ಪ್ರಮುಖ ಪಾತ್ರ.[]
  • ಶಾಲಾ ಮಕ್ಕಳಿಗಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕನ್ನಡದಲ್ಲಿ ಪ್ರಕಟಿಸುವ "ಬಾಲ ವಿಜ್ಞಾನ" ಪತ್ರಿಕೆಯ ಸಂಪಾದಕ ಮಂಡಳಿಯ ಸದಸ್ಯರಾಗಿ ಮೂರು ವರ್ಷಗಳ ಸೇವೆ.
  • ಗಣಕಗಳಲ್ಲಿ ಕನ್ನಡವನ್ನು ಬಳಸುವಲ್ಲಿನ ಶಿಷ್ಟತೆಗಳನ್ನು ರಚಿಸಲು ಕರ್ನಾಟಕ ರಾಜ್ಯ ಸರ್ಕಾರವು ನೇಮಿಸಿದ್ದ ಸಮಿತಿಯಲ್ಲಿ ಸದಸ್ಯರಾಗಿ ಸೇವೆ.
  • ೨೦೦೦ರ ಸೆಪ್ಟೆಂಬರ್‌ನಲ್ಲಿ ಅಮೆರಿಕದ ಟೆಕ್ಸಾಸ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಅಂಗವಾಗಿ ಹೊರತರಲಾದ ವಿಶೇಷ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯಲ್ಲಿ ಸದಸ್ಯರಾಗಿ ಸೇವೆ.

ವಿಶ್ವಕನ್ನಡ

  • ವಿಶ್ವಕನ್ನಡ-ಕನ್ನಡದ ಮೊದಲ ಜಾಲತಾಣ ೧೯೯೬ರಲ್ಲಿ ಆರಂಭ[]
  • ಕನ್ನಡದ ಮೊದಲ ಆನ್‌ಲೈನ್ ಪತ್ರಿಕೆ[]
  • ಡೈನಮಿಕ್ ಫಾಂಟುಗಳನ್ನು ಬಳಸಿದ ಮೊದಲ ಭಾರತೀಯ ಭಾಷೆಯ ಜಾಲತಾಣ.

ನಿರ್ವಹಿಸಿರುವ ಜವಾಬ್ದಾರಿಗಳು

  • ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮದ ಸ್ನಾತಕೋತ್ತರ ಪದವಿ ಕೋರ್ಸ್‌ನ ಅಧ್ಯಯನ ಮಂಡಳಿ ಸದಸ್ಯ.
  • ಹಂಪಿ ಕನ್ನಡ ವಿಶ್ವವಿದ್ಯಾಲಯದ ದೂರಶಿಕ್ಷಣ ಕೇಂದ್ರವು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿರುವ ’ಮಾಹಿತಿ ತಂತ್ರಜ್ಞಾನ’ ಕೋರ್ಸ್‌ನ ಅಧ್ಯಯನ ಮಂಡಳಿಯ ಪ್ರಥಮ ಅಧ್ಯಕ್ಷ ಮತ್ತು ಪ್ರಸ್ತುತ ಸದಸ್ಯ.
  • ೨೦೦೪, ಮಾರ್ಚ್-ಎಪ್ರಿಲ್, ಅಕ್ಟೋಬರ್ ನಲ್ಲಿ, ಮೈಕ್ರೋಸಾಫ್ಟ್ ಕಂಪೆನಿಯ ಪರವಾಗಿ ಭಾರತದ ಪ್ರಮುಖ ನಗರಗಳಲ್ಲಿ ಭಾರತೀಯ ಭಾಷೆಗಳಲ್ಲಿ ತಂತ್ರಾಂಶ ತಯಾರಿಯ ಬಗ್ಗೆ ಕಾರ್ಯಶಿಬಿರ ನಿರ್ವಹಣೆ.
  • ೨೦೦೭-೦೯ ರಲ್ಲಿ ಮಣಿಪಾಲ ಶಿಕ್ಷಣ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ವೃತ್ತಿ ನಿರ್ವಹಣೆ.
  • ೨೦೧೦ರಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಕನ್ನಡ ಸಹಜಭಾಷಾ ಸಂಸ್ಕರಣೆಗೆ ಸಲಹಾ ಸಮಿತಿಯ ಸದಸ್ಯರು.
  • ಶ್ರೀರಾಮಚಂದ್ರಾಪುರ ಮಠದ ಗೋರಕ್ಷಾ ಆಭಿಯಾನದ ಪರವಾಗಿ `ಗೋವಿಶ್ವ' ಎಂಬ e-ಪತ್ರಿಕೆಯ ಸ್ಥಾಪಕ ಸಂಪಾದಕ.[]
  • ಕರಾವಳಿ ವಿಕಿಮೀಡಿಯನ್ಸ್ ಸ್ಥಾಪಕ ಕಾರ್ಯದರ್ಶಿ.[೧೦]
  • ಅಂತರಜಾಲತಾಣ ವಿಳಾಸಗಳನ್ನು ಕನ್ನಡೀಕರಿಸಲು ಬೇಕಾದ ಶಿಷ್ಟತೆಯನ್ನು ರೂಪಿಸುವ ಸಮಿತಿ (ICANN) ಸದಸ್ಯ.[೧೧]

ಸನ್ಮಾನ ಮತ್ತು ಪ್ರಶಸ್ತಿಗಳು

  • ಮೈಕ್ರೋಸಾಫ್ಟ್ ಕಂಪನಿಯು ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಷನಲ್ ಎಂಬುದಾಗಿ ಗುರುತಿಸಿದೆ. ಮೈಕ್ರೋಸಾಫ್ಟ್ ಕಂಪೆನಿಯು ಜಗತ್ತಿನಾದ್ಯಂತ ಸುಮಾರು ಜನರನ್ನು ಮಾಹಿತಿ ತಂತ್ರಜ್ಞಾನದ ವಿವಿಧ ವಿಭಾಗಗಳಲ್ಲಿ ಮೋಸ್ಟ್ ವ್ಯಾಲ್ಯುವೇಬಲ್ ಪ್ರೊಫೆಶನಲ್ ಎಂದು ಗುರುತಿಸಿದ್ದು ಡಾ. ಪವನಜ ಅವರು ಭಾರತೀಯ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಶೇಷ ವ್ಯಕ್ತಿಯಾಗಿದ್ದಾರೆ.[೧೨]
  • ನವಂಬರ್ ೨೧, ೨೦೦೫ರಲ್ಲಿ, ಬೆಂಗಳೂರಿನ ರಾಜಾಜಿನಗರ ಹಬ್ಬದಲ್ಲಿ ಸನ್ಮಾನ.
  • ೨೦೦೬ನೆ ಸಾಲಿನ ಕನ್ನಡ ಲೋಗೋ ತಂತ್ರಾಂಶ ತಯಾರಿಕೆಯ, ಮಂಥನ ಪ್ರಶಸ್ತಿ.[೧೩]

ಉಲ್ಲೇಖಗಳು

  1. Overview, Ubaradka Mittur is small village located in Sulya Taluka of Dakshina Kannada district, Karnataka
  2. Dr.U.B.Pavanaja-A Profile
  3. The Centre for Internet & Society - former staff members'
  4. From Kannada to keyboards
  5. "ಕನ್ನಡ ಲೋಗೋ". Archived from the original on 2020-04-29. Retrieved 2020-04-05.
  6. [೧]
  7. FROM KANNADA TO KEYBOARDS: AN INDIAN LANGUAGE ENTERS THE CYBERAGE
  8. FROM KANNADA TO KEYBOARDS: AN INDIAN LANGUAGE ENTERS THE CYBERAGE
  9. http://hareraama.in/tag/ಗೋವಿಶ್ವ/page/2/
  10. https://meta.wikimedia.org/wiki/Karavali_Wikimedians
  11. https://community.icann.org/download/attachments/53776300/NBGP%20-%20Meeting%2020180105.pdf?version=1&modificationDate=1515609427000&api=v2
  12. https://mvp.microsoft.com/en-us/PublicProfile/8804?fullName=Pavanaja%20U%20Bellippady
  13. http://manthanaward.org/wp-content/uploads/files/Manthan%20Book%202006.pdf, page 96

ಬಾಹ್ಯ ಸಂಪರ್ಕಗಳು