ಮೊದಲನೆಯ ಕೆಂಪೇಗೌಡ
ವಿಕಿಪೀಡಿಯ ಇಂದ
ಮೊದಲನೆಯ ಕೆಂಪೇಗೌಡನು (೧೫೧೩-೧೫೬೯) ವಿಜಯನಗರ ಸಾಮ್ರಾಜ್ಯದ ಸಾಮಂತವಾಗಿದ್ದ ಯಲಹಂಕದ ಪಾಳೇಗಾರನಾಗಿದ್ದನು. ಮೊದಲಿಗೆ, ಅವನು ನಿರ್ಮಿಸಿದ ಆ ಪಟ್ಟಣವನ್ನು ಬೆಂದಕಾಳೂರು ಎಂದು ಕರೆದನು. ನಂತರ, ಬ್ರಿಟಿಷರು ಭಾರತವನ್ನು ಆಕ್ರಮಿಸಿದಾಗ, ಅವರು ಅದನ್ನು ಬ್ಯಾಂಗಲೋರ್ ಎಂದು ಪುನರ್‌ನಾಮಕರಣ ಮಾಡಿದರು. ಈಗ ಸರ್ಕಾರವು ಅಧಿಕೃತವಾಗಿ ಈ ಪಟ್ಟಣವನ್ನು ಬೆಂಗಳೂರು ಎಂದೇ ಕರೆಯುತ್ತದೆ. ಅವನು ಭಾರತದ ನಗರವಾದ ಬೆಂಗಳೂರನ್ನು ೧೫೩೭ರಲ್ಲಿ ಸ್ಥಾಪಿಸಿದನೆಂದು ನಂಬಲಾಗಿದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |