ಫೀಫಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟೆಂಪ್ಲೇಟು:Infobox Organization

ಸಾಮಾನ್ಯವಾಗಿ ಫೀಫಾ (ಎಲ್ಲೆಡೆ ಟೆಂಪ್ಲೇಟು:3/) ಎಂದು ಕರೆಯಲ್ಪಡುವ, ದಿ ಫೆಡರೇಷನ್ ಇಂಟರ್ನ್ಯಾಷನಲೆ ಡಿ ಫುಟ್ ಬಾಲ್ ಅಸೋಸಿಯೇಶನ್ (ಇಂಗ್ಲೀಷ್: ಇಂಟರ್ನ್ಯಾಷನಲ್ ಫೆಡರೇಷನ್ ಆಫ್ ಅಸೋಸಿಯೇಶನ್ ಫುಟ್ ಬಾಲ್ ), ಫುಟ್ ಬಾಲ್ ಸಂಸ್ಥೆಯ ಆಡಳಿತ ನಡೆಸುತ್ತಿರುವ ಅಂತರಾಷ್ಟ್ರೀಯ ಸಂಘಟನೆಯಾಗಿದೆ. ಅದರ ಕೇಂದ್ರ ಕಾರ್ಯಸ್ಥಾನ ಸ್ವಿಡ್ಜರ್ಲ್ಯಾಂಡಿನ ಜ್ಯೂರಿಚ್ ನಲ್ಲಿದೆ ಹಾಗೂ ಅದರ ಪ್ರಚಲಿತ ಅಧ್ಯಕ್ಷರು ಸೆಪ್ ಬ್ಲಾಟರ್. ಫೀಫಾ ಫುಟ್ ಬಾಲ್ ನ ಪ್ರಮುಖ ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗೆ, ವಿಶೇಷವಾಗಿ 1930 ರಿಂದ ನಡೆಸಲ್ಪಡುತ್ತಿರುವ, ಫೀಫಾ ವಿಶ್ವ ಕಪ್ ಅನ್ನುಸಂಘಟಿಸುವುದು ಮತ್ತು ಪ್ರದರ್ಶನಕ್ಕೆ ಜವಾಬ್ದಾರವಾಗಿದೆ.

ಇಂಟರ್ನ್ಯಾಷನಲ್ ಒಲಂಪಿಕ್ ಕಮಿಟಿಗಿಂತ ಮೂರು ಹೆಚ್ಚು ಮತ್ತು ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ಗಿಂತ ಐದು ಕಡಿಮೆ ಯಂತೆ, ಫೀಫಾ 208 ಸದಸ್ಯ ಸಂಸ್ಥೆಗಳನ್ನು ಹೊಂದಿದೆ.

ಪರಿವಿಡಿ

[ಬದಲಾಯಿಸಿ] ಇತಿಹಾಸ

ಅಂತರಾಷ್ಟ್ರೀಯ ಗೊತ್ತುಪಡಿಸಿದ ಪಂದ್ಯಗಳ ಹೆಚ್ಚುತ್ತಿರುವ ಜನಪ್ರಿಯತೆಯ ಕಾರಣ 20 ನೇ ಶತಮಾನದ ಪ್ರಾರಂಭದಲ್ಲಿ ಕ್ರೀಡೆಯ ಮೇಲ್ವಿಚಾರಣೆ ನೋಡಿಕೊಳ್ಳಲು ಒಂದು ಏಕೈಕ ಸಂಸ್ಥೆಯ ಅವಶ್ಯಕತೆಯು ಸಹಜವಾಗಿಯೇ ಕಂಡುಬಂದಿತು. ಫೀಫಾ 21 ನೇ ಮೇ 1904 ರಲ್ಲಿ ಪ್ಯಾರಿಸ್ ನಲ್ಲಿ ಪ್ರಾರಂಭಿಸಲ್ಪಟ್ಟಿತು; ಫ್ರೆಂಚ್ ಮಾತನಾಡುವ ದೇಶಗಳ ಹೊರಗೂ ಸಹ ಫ್ರೆಂಚ್ ಹೆಸರು ಮತ್ತು ಅಕ್ಷರಗಳಿಂದಾದ ಶಬ್ದವು ಹಾಗೆಯೇ ಉಳಿದಿದೆ. ಬೆಲ್ಜಿಯಂ, ಡೆನ್ಮಾರ್ಕ್, ಫ್ರಾನ್ಸ್, ದಿ ನೆದರ್ಲ್ಯಾಂಡ್ಸ್, ಸ್ಪೇನ್, ಸ್ವೀಡನ್ ಮತ್ತು ಸ್ವಿಡ್ಜರ್ಲ್ಯಾಂಡ್ ಗಳು ಸಂಸ್ಥಾಪಕ ಸದಸ್ಯರು. ಹಾಗೂ, ಅದೇ ದಿನವೇ, ಜರ್ಮನ್ ಸಂಸ್ಥೆಯು ಒಂದು ತಂತಿವಾರ್ತೆಯ ಮುಖಾಂತರ ತಾನೂ ಸದಸ್ಯನಾಗಿ ಸೇರಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿತು. ರಾಬರ್ಟ್ ಗ್ಯೌರಿನ್ ಅದರ ಮೊದಲ ಅಧ್ಯಕ್ಷರು.

ಈಗ ಒಂದು ಸದಸ್ಯ ಸಂಸ್ಥೆಯಾಗಿರುವ ಇಂಗ್ಲೆಂಡ್ ನ ಡೇನಿಯಲ್ ಬುರ್ಲೆ ವೂಲ್ ಫಾಲ್ ರವರು 1906 ರಲ್ಲಿ ಗ್ಯೌರಿನ್ ಬದಲಿಗೆ ಬಂದರು. ಫೀಫಾದ ಸಂಸ್ಥಾಪನೆಯ ತತ್ವಗಳಿಗೆ ವಿರುದ್ಧವಾಗಿ, ವೃತ್ತಿಪರ ಫುಟ್ ಬಾಲ್ ಆಟಗಾರರ ಹಾಜರಿ ಇದ್ದಾಗ್ಯೂ, ಲಂಡನ್ನಿನ 1908 ರ ಒಲಂಪಿಕ್ಸ್ ನಲ್ಲಿ ನಡೆಸಲಾದ ಫುಟ್ ಬಾಲ್ ಕ್ರೀಡೆಗಳು ಬಹಳ ಯಶಸ್ವಿಯಾಯಿತು.

1908 ರಲ್ಲಿ ದಕ್ಷಿಣ ಆಫ್ರಿಕಾ, 1912 ರಲ್ಲಿ ಅರ್ಜೆಂಟಿನಾ ಹಾಗೂ ಚಿಲಿ, ಮತ್ತು 1913 ರಲ್ಲಿ ಕೆನಡ ಹಾಗೂ ಸಂಯುಕ್ತ ಸಂಸ್ಥಾನಗಳ ಅರ್ಜಿಗಳ ಜೊತೆ ಫೀಫಾದ ಸದಸ್ಯತ್ವವು ಯುರೋಪಿನಾಚೆಗೂ ವಿಸ್ತರಿಸಲ್ಪಟ್ಟಿತು.

ಮೊದಲನೆ ಮಹಾಯುದ್ಧ ಕಾಲದಲ್ಲಿ, ಅನೇಕ ಆಟಗಾರರನ್ನು ಯುದ್ಧಕ್ಕೆ ಕಳುಹಿಸಿದ ಕಾರಣ ಮತ್ತು ಅಂತರಾಷ್ಟ್ರೀಯ ನಿಶ್ಚಯಗೊಳಿಸಿದ ಪಂದ್ಯಗಳಿಗೆ ಪ್ರಯಾಣದ ಸಾಧ್ಯತೆಗಳು ತೀವ್ರವಾಗಿ ನಿಯಂತ್ರಿಸಲ್ಪಟ್ಟಿದ್ದರಿಂದ, ಕೆಲವೇ ಅಂತರಾಷ್ಟ್ರೀಯವಾಗಿ ಗೊತ್ತುಪಡಿಸಿದ ಕ್ರೀಡಾಸ್ಪರ್ಧೆಗಳಿದ್ದವು, ಹಾಗೂ ಸಂಸ್ಥೆಯ ಉಳಿಯುವಿಕೆಯೇ ಅನುಮಾನದಲ್ಲಿತ್ತು. ಯುದ್ಧಾ ನಂತರ, ವೂಲ್ ಫಾಲ್ ರ ಮರಣವನ್ನು ಅನುಸರಿಸಿ, ಡಚ್ ನವರಾದ ಕಾರ್ಲ್ ಹಿರ್ಷ್ ಮನ್ ರಿಂದ ಸಂಸ್ಥೆಯು ನಡೆಸಲ್ಪಡುತ್ತಿತ್ತು. ಆದರೆ ಹೋಮ್ ನೇಷನ್ಸ್(ಇಂಗ್ಲೆಂಡಿನ) ನ ಹಿಂತೆಗೆತದ ಕಾರಣ, ಅದು ನಾಶವಾಗುವುದರಿಂದ ಉಳಿಯಿತು, ಅವರು ತಮ್ಮ ಇತ್ತೀಚಿನ ಮಹಾಯುದ್ಧದ ಶತೃಗಳ ಜೊತೆ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಷ್ಟವಿಲ್ಲವೆಂಬುದನ್ನು ಎತ್ತಿ ಹೇಳಿತು. ಹೋಮ್ ನೇಷನ್ಸ್ ನವರು ನಂತರ ತಮ್ಮ ಸದಸ್ಯತ್ವವನ್ನು ಪುನರಾರಂಭಿಸಿದರು.

ಫೀಫಾದ ವಸ್ತು ಸಂಗ್ರಹವನ್ನು ಇಂಗ್ಲೆಂಡಿನಲ್ಲಿನ ನ್ಯಾಷನಲ್ ಫುಟ್ ಬಾಲ್ ಮ್ಯೂಸಿಯಂ ನಲ್ಲಿ ಇಡಲಾಗಿದೆ.

[ಬದಲಾಯಿಸಿ] ರಚನೆ

ಆರು ಖಂಡಾಂತರ ಕೂಟಗಳೊಂದಿಗೆ ವಿಶ್ವದ ಭೂಪಟ

ಫೀಫಾ ಸ್ವಿಡ್ಜರ್ಲ್ಯಾಂಡಿನ ಕಾನೂನುಗಳ ಪ್ರಕಾರ ಸ್ಥಾಪಿಸಲ್ಪಟ್ಟ ಒಂದು ಸಂಸ್ಥೆಯಾಗಿದೆ. ಅದರ ಕೇಂದ್ರ ಕಾರ್ಯಸ್ಥಳವು ಜ್ಯೂರಿಚ್ ನಲ್ಲಿದೆ.

ಪ್ರತಿ ನೊಂದಾಯಿಸಲ್ಪಟ್ಟ ಸದಸ್ಯ ಸಂಸ್ಥೆಗಳಿಂದ ಪ್ರತಿನಿಧಿಗಳ ರಚನೆಯ ಒಂದು ಸಭೆ, ಫೀಫಾ ಕಾಂಗ್ರೆಸ್ ಫೀಫದ ಪ್ರಧಾನ ಅಂಗವಾಗಿದೆ. ಕಾಂಗ್ರೆಸ್ ಸಾಮಾನ್ಯ ಸಭೆಗಳಲ್ಲಿ ಪ್ರತಿ ವರುಷವೂ ಒಂದು ಬಾರಿ ಸೇರುತ್ತದೆ, ಹಾಗೂ ಹೆಚ್ಚುವರಿಯಾಗಿ ವಿಶೇಷ ಸಭೆಗಳು 1998 ರಿಂದ ಮರುಷಕ್ಕೊಂಮ್ಮೆ ನಡೆಸಲ್ಪಡುತ್ತಿವೆ. ಕೇವಲ ಕಾಂಗ್ರೆಸ್ ಮಾತ್ರ ಫೀಫದ ಕಾಯಿದೆಗಳಿಗೆ ಬದಲಾವಣೆ ತರಬಹುದು.

ಕಾಂಗ್ರೆಸ್ ಫೀಫಾದ ಅಧ್ಯಕ್ಷರು, ಅದರ ಪ್ರಧಾನ ಕಾರ್ಯದರ್ಶಿ ಹಾಗೂ ಫೀಫಾದ ಕಾರ್ಯನಿರ್ವಾಹಕ ಸಮಿತಿಯ ಇತರೆ ಸದಸ್ಯರನ್ನು ಚುನಾಯಿಸುತ್ತದೆ. ಅದರ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಫೀಫಾದ ಮುಖ್ಯ ಕಚೇರಿಯ ಮೇಲ್ವಿಚಾರಕರು, ಮತ್ತು ಸುಮಾರು 280 ಸದಸ್ಯರ ಸಿಬ್ಬಂದಿಯ ಜೊತೆ ಪ್ರಧಾನ ಸಚಿವಾಲಯದಿಂದ ಕಾರ್ಯರೂಪಕ್ಕೆ ತರಲ್ಪಟ್ಟ, ಅದರ ದಿನನಿತ್ಯದ ಆಡಳಿತಗಳಿಗೆ ಜವಾಬ್ದಾರಿವಹಿಸುತ್ತಾರೆ.

ಅಧ್ಯಕ್ಷರಿಂದ ಸಭಾಪತಿ ಸ್ಥಾನ ವಹಿಸಲ್ಪಟ್ಟ ಫೀಫಾದ ಕಾರ್ಯನಿರ್ವಾಹಕ ಸಮಿತಿಯು, ಕಾಂಗ್ರೆಸ್ ವಿರಾಮ ಕಾಲದಲ್ಲಿ ಸಂಸ್ಥೆಯ ಮುಖ್ಯ ತೀರ್ಮಾನ ಕೈಗೊಳ್ಳುವ ಅಂಗವಾಗಿದೆ. ಕಾರ್ಯನಿರ್ವಾಹಕ ಸಮಿತಿಯ ಅಧಿಕಾರದ ಕೈಕೆಳಗೆ ಅಥವ ಸ್ಥಿರವಾದ ಸಮಿತಿಯಂತೆ ಕಾಂಗ್ರೆಸ್ ನಿಂದ ರಚಿಸಲ್ಪಟ್ಟ ಅನೇಕ ಇತರೆ ಭಾಗಗಳನ್ನು ಸಹ ಫೀಫಾದ ವಿಶ್ವವ್ಯಾಪಿ ಸಂಸ್ಥೆಯ ರಚನೆಯು ಹೊಂದಿದೆ. ಆ ಅಂಗ ಸಂಸ್ಥೆಗಳಲ್ಲಿ ಫೈನಾನ್ಸ್ ಕಮಿಟಿ, ದಿ ಡಿಸೆಪ್ಲಿನರಿ ಕಮಿಟಿ, ರೆಫರಿಗಳ ಕಮಿಟಿ ಮುಂತಾದುವುಗಳಿವೆ.

ತನ್ನ ವಿಶ್ವವ್ಯಾಪಿ ಸಂಸ್ಥೆಗಳೂ ಅಲ್ಲದೆ (ಅಧ್ಯಕ್ಷೀಯ, ಕಾರ್ಯನಿರ್ವಾಹಕ ಸಮಿತಿ, ಕಾಂಗ್ರೆಸ್ ಮುಂತಾದುವು) ವಿವಿಧ ಖಂಡಗಳು ಹಾಗೂ ಜಗತ್ತಿನ ಪ್ರದೇಶಗಳಲ್ಲಿ ಪಂದ್ಯದ ಮೇಲ್ವಿಚಾರಣೆ ನೋಡಿಕೊಳ್ಳುವ ಫೀಫಾದಿಂದ ಗುರುತಿಸಲ್ಪಟ್ಟಿರುವ ಆರು ವಿವಿಧ ಖಂಡ ಕೂಟಗಳಿವೆ. ರಾಷ್ಟ್ರೀಯ ಸಂಸ್ಥೆಗಳು ಫೀಫಾದ ಸದಸ್ಯರಾಗಿರುತ್ತಾರೆ, ಹಾಗೂ ವಿವಿಧ ಖಂಡಗಳ ಕೂಟಗಳು ಅಲ್ಲ. ವಿವಿಧ ಖಂಡಗಳ ಕೂಟಗಳಿಗೆ ಫೀಫಾದ ಕಾನೂನಿನ ಅಡಿ ಸೇರಿಸಿಕೊಳ್ಳಲಾಗಿದೆ. ಫೀಫಾದ ಸ್ಪರ್ಧೆಗಳ ಪ್ರವೇಶಕ್ಕಾಗಿ ಯೋಗ್ಯತೆ ಪಡೆಯಲು ಅವರ ತಂಡಗಳು ಅವರ ರಾಷ್ಟ್ರವು ಭೌಗೋಳಿಕವಾಗಿ ಶಾಶ್ವತ ನಿವಾಸಿಯಾಗಿರುವ ಖಂಡ ಕೂಟ ಹಾಗೂ ಫೀಫಾ ಎರಡಕ್ಕೂ ರಾಷ್ಟ್ರೀಯ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿರಲೇ ಬೇಕು (ಕೆಳಗೆ ಪಟ್ಟಿ ಮಾಡಿರುವ ಕೆಲವು ಭೌಗೋಳಿಕ ಅಪವಾದಗಳ ಸಹಿತ):

ಟೆಂಪ್ಲೇಟು:Colorbox ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿನ AFC – ಏಷಿಯನ್ ಫುಟ್ ಬಾಲ್ ಕಾನ್ಫಿಡರೇಶನ್
ಟೆಂಪ್ಲೇಟು:Colorbox ಆಫ್ರಿಕಾದಲ್ಲಿನ CAF – ಕಾನ್ಫಿಡರೇಶನ್ ಆಫ್ರಿಕೇಯಿನ್ ಡಿ ಫುಟ್ ಬಾಲ್
ಟೆಂಪ್ಲೇಟು:Colorbox ಉತ್ತರ ಅಮೇರಿಕಾ ಮತ್ತು ಮಧ್ಯ ಅಮೇರಿಕಾ ದಲ್ಲಿನ CONCACAF – ಕಾನ್ಫಿಡರೇಶನ್ ಆಫ್ ನಾರ್ಥ್, ಸೆಂಟ್ರಲ್ ಅಮೇರಿಕನ್ ಮತ್ತು ಕೆರೆಬಿಯನ್ ಅಸೋಸಿಯೇಷನ್ ಫುಟ್ ಬಾಲ್
ಟೆಂಪ್ಲೇಟು:Colorbox ದಕ್ಷಿಣ ಅಮೇರಿಕಾದ CONMEBOL - ಕಾನ್ಫಿಡರೇಶನ್ ಸುಡಾಮೇರಿಕಾನ ಡಿ ಫುಟ್ ಬಾಲ್
ಟೆಂಪ್ಲೇಟು:Colorbox ಓಶೀಯಾನ ದಲ್ಲಿನ OFC – ಓಶೀಯಾನ ಫುಟ್ ಬಾಲ್ ಕಾನ್ಫಿಡರೇಶನ್
ಟೆಂಪ್ಲೇಟು:Colorbox ಯುರೋಪಿನಲ್ಲಿನ UEFA – ಯೂನಿಯನ್ ಆಫ್ ಯುರೋಪಿಯನ್ ಫುಟ್ ಬಾಲ್ ಅಸೋಸಿಯೇಶನ್

ಯುರೋಪ್ ಮತ್ತು ಏಷ್ಯಾ ಮಧ್ಯೆ ಪರಂಪರೆಯ ಗಡಿಯಲ್ಲೇ ಕುಳಿತಿರುವ ರಾಷ್ಟ್ರಗಳು ತಮ್ಮ ಆಯ್ಕೆಯ ಖಂಡದ ಕೂಟವನ್ನು ಸಾಮಾನ್ಯವಾಗಿ ಹೊಂದಿದ್ದಾರೆ. ಪರಿಣಾಮವಾಗಿ, ತಮ್ಮ ಭೂಭಾಗವು ಏಷ್ಯಾದಲ್ಲೇ ದೊಡ್ಡ ಪ್ರಮಾಣದಲ್ಲಿದ್ದಾಗ್ಯೂ, ರಷ್ಯಾ, ಟರ್ಕಿ, ಸೈಪ್ರೆಸ್, ಅರ್ಮೇನಿಯಾ, ಅಝರ್ ಬೈಜಾನ್ ಮತ್ತು ಜಾರ್ಜಿಯಾ ಒಳಗೊಂಡಂತಹ ಅನೇಕ ಅಂತರ ಖಂಡದ ದೇಶಗಳು UEFA ಯ ಭಾಗವಾಗಿರಲು ಆಯ್ಕೆ ಮಾಡಿಕೊಂಡಿವೆ. ತನ್ನ ಫುಟ್ ಬಾಲ್ ತಂಡಗಳನ್ನು ಅನೇಕ AFC ದೇಶಗಳಿಂದ ದಶಕಗಳ ಕಾಲ ಬಹಿಷ್ಕರಿಸಲ್ಪಟ್ಟಿದ್ದು, ಸಂಪೂರ್ಣವಾಗಿ ಏಷ್ಯಾದೊಳಗೆ ಇದ್ದರೂ ಸಹ ಇಸ್ರೇಲ್, 1994 ರಲ್ಲಿ UEFA ಗೆ ಸೇರಿತು. 2002 ರಲ್ಲಿ ಕಜಾಖಸ್ತಾನ್ AFC ಯಿಂದ UEFA ಗೆ ಸೇರಿತು. 2006 ರ ಜನವರಿಯಲ್ಲಿ ಅಸ್ಟ್ರೇಲಿಯಾ OFC ಯಿಂದ AFC ಗೆ ತೀರ ಇತ್ತೀಚೆಗೆ ಬದಲಾಯಿಸಿಕೊಂಡಿತು.

ದಕ್ಷಿಣ ಅಮೇರಿಕಾ ದೇಶಗಳಾಗಿದ್ದಾಗ್ಯೂ ಗಯಾನ ಹಾಗೂ ಸುರೀನಾಮ್ ಯಾವಾಗಲೂ CONCACAF ನ ಸದಸ್ಯರಾಗಿದ್ದಾರೆ

ಒಟ್ಟಾಗಿ, 129 ಮಹಿಳಾ ರಾಷ್ಟ್ರೀಯ ತಂಡಗಳಲ್ಲದೆ, 208 ರಾಷ್ಟ್ರೀಯ ಸಂಸ್ಥೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಪುರುಷರ ರಾಷ್ಟ್ರೀಯ ತಂಡಗಳನ್ನು ಫೀಫಾ ಅಂಗೀಕರಿಸುತ್ತದೆ; ರಾಷ್ಟ್ರೀಯ ಫುಟ್ ಬಾಲ್ ತಂಡಗಳ ಯಾದಿ ಮತ್ತು ಅವುಗಳ ಪರಸ್ಪರ ದೇಶದ ಸಂಕೇತಗಳನ್ನು ನೋಡಿರಿ. ವಿಸ್ಮಯಕರವಾಗಿ, ಇಂಗ್ಲೆಂಡಿನಲ್ಲಿರುವ ನಾಲ್ಕು ಹೋಮ್ ನೇಶನ್ಸ್ ಅಲ್ಲದೇ, ಪ್ಯಾಲೆಸ್ಟೈನ್ ನಂತಹ ರಾಜಕೀಯವಾಗಿ ವಿವಾದವುಳ್ಳ ಪ್ರದೇಶಗಳಂತಹ ಅನೇಕ ಪರಮಾಧಿಕಾರವಿಲ್ಲದ ಅಸ್ತಿತ್ವಗಳನ್ನು ಭಿನ್ನ ದೇಶಗಳೆಂದು ಫೀಫಾ ಮಾನ್ಯ ಮಾಡಿರುವ ಕಾರಣ, ಯುನೈಟೆಡ್ ನೇಶನ್ಸ್ ಗಿಂತ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಫೀಫಾ ಹೊಂದಿದೆ.[೧] ಫೀಫಾದ ವಿಶ್ವ ಶ್ರೇಯಾಂಕಗಳು ಪ್ರತಿ ತಿಂಗಳೂ ಅಪ್ ಡೇಟ್ ಮಾಡಲ್ಪಡುತ್ತವೆ ಮತ್ತು ಅಂತರಾಷ್ಟ್ರೀಯ ಸ್ಪರ್ಧೆಗಳು, ಯೋಗ್ಯತಾ ಪಂದ್ಯಗಳು ಹಾಗೂ ಗೆಳೆತನದ ಪಂದ್ಯಗಳಲ್ಲಿ ಅವರ ಸಾಧನೆಗಳ ಆಧಾರದ ಮೇಲೆ ಪ್ರತಿ ತಂಡಕ್ಕೂ ಶ್ರೇಣಿಯನ್ನು ಕೊಡಲಾಗುತ್ತದೆ. ಒಂದು ವರ್ಷಕ್ಕೆ ನಾಲ್ಕು ಬಾರಿ ಅಪ್ ಡೇಟ್ ಮಾಡಲ್ಪಡುವ, ಮಹಿಳಾ ಫುಟ್ ಬಾಲ್ ಗೂ ಸಹ ವಿಶ್ವ ಶ್ರೇಯಾಂಕಗಳನ್ನು ಕೊಡಲಾಗುತ್ತದೆ.

[ಬದಲಾಯಿಸಿ] ಮಾನ್ಯತೆಗಳು ಮತ್ತು ಪ್ರಶಸ್ತಿಗಳು

ತಂಡ ಹಾಗೂ ಅಂತರಾಷ್ಟ್ರೀಯ ಫುಟ್ ಬಾಲ್ ನ ಸಾಧನೆಗಳನ್ನು ಸಹ ಮಾನ್ಯ ಮಾಡುವಂತಹ ಅದರ ವಾರ್ಷಿಕ ಪ್ರಶಸ್ತಿಗಳ ಸಮಾರಂಭದ ಭಾಗವಾಗಿ ಉನ್ನತ ಮಟ್ಟದ ವರ್ಷದ ಪುರುಷರ ಹಾಗೂ ಮಹಿಳಾ ಆಟಗಾರರಿಗೆ ಫೀಫಾ ವರ್ಷದ ವಿಶ್ವ ಆಟಗಾರನೆಂಬ ಪ್ರಶಸ್ತಿಯನ್ನು ಪ್ರತಿ ವರ್ಷವೂ ಫೀಫಾ ಕೊಡುತ್ತದೆ.

1994 ರಲ್ಲಿ ಫೀಫಾ ಫೀಫಾ ವರ್ಲ್ಡ ಕಪ್ ಆಲ್-ಟೈಮ್ ಟೀಮ್ ಅನ್ನು ಪ್ರಕಟಿಸಿತು.

2002 ರಲ್ಲಿ, ಒಂದು ಮತದಾನದಲ್ಲಿ ಅಭಿಮಾನಿಗಳಿಂದ ಆಯ್ಕೆ ಮಾಡಲ್ಪಟ್ಟ ಎಲ್ಲಾ ಕಾಲದ ಸರ್ವ ಪ್ರತಿಭಾಶಾಲಿ ಒಂದು ತಂಡವನ್ನು, ಫೀಫಾ ಡ್ರೀಮ್ ಟೀಮ್ ಅನ್ನು ಫೀಫಾ ಘೋಷಿಸಿತು.

2004 ರಲ್ಲಿ ತನ್ನ ಶತಮಾನೋತ್ಸವದ ಆಚರಣೆಗಳ ಒಂದು ಭಾಗವಾಗಿ ಫ್ರಾನ್ಸ್ ಮತ್ತು ಬ್ರೆಜಿಲ್ ನಡುವೆ ಒಂದು ಶತಮಾನದ ಪಂದ್ಯವನ್ನು ಫೀಫಾ ವ್ಯವಸ್ಥೆ ಮಾಡಿತು.

[ಬದಲಾಯಿಸಿ] ಪ್ರಶಾಸನ ಮತ್ತು ಪಂದ್ಯದ ವಿಕಾಸ

[ಬದಲಾಯಿಸಿ] ಕ್ರೀಡೆಯ ಕಾಯ್ದೆಗಳು

ಲಾಸ್ ಆಫ್ ದಿ ಗೇಮ್ ಎಂದು ಅಧಿಕಾರಯುತವಾಗಿ ಕರೆಯಲ್ಪಡುವ ಫುಟ್ ಬಾಲ್ ಅನ್ನು ಆಳುವ ಕಾಯ್ದೆಗಳು, ಕೇವಲ ಫೀಫಾದ್ದೊಂದೆ ಜವಾಬ್ದಾರಿಯಲ್ಲ; ಅವು ಇಂಟರ್ನ್ಯಾಷನಲ್ ಫುಟ್ ಬಾಲ್ ಅಸೋಸಿಯೇಷನ್ ಬೋರ್ಡ್ (IFAB) ಎಂದು ಕರೆಯಲಾಗುವ ಒಂದು ಸಂಸ್ಥೆಯಿಂದ ನೋಡಿಕೊಳ್ಳಲ್ಪಡುತ್ತವೆ. ಫೀಫಾ ಈ ಸಮಿತಿಯಲ್ಲಿ ತನ್ನ ಸದಸ್ಯರನ್ನು ಹೊಂದಿದೆ (ನಾಲ್ಕು ಪ್ರತಿನಿಧಿಗಳು); ಉಳಿದ ನಾಲ್ವರನ್ನು ಯುನೈಟೆಡ್ ಕಿಂಗ್ಡಂಮ್ ನ ಫುಟ್ ಬಾಲ್ ಸಂಘಗಳು ಒದಗಿಸುತ್ತವೆ: ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಹಾಗೂ ನಾರ್ದರನ್ ಐರ್ಲೆಂಡ್, ಇವರು 1882 ರಲ್ಲಿ IFAB ಯನ್ನು ಜಂಟಿಯಾಗಿ ಸ್ಥಾಪಿಸಿದರು ಹಾಗೂ ಪಂದ್ಯದ ಇತಿಹಾಸ ಮತ್ತು ರಚನೆಗಾಗಿ ಮಾನ್ಯ ಮಾಡಲ್ಪಟ್ಟಿವೆ. ಎಂಟರಲ್ಲಿ ಕಡೇ ಪಕ್ಷ ಆರು ಪ್ರತಿನಿಧಿಗಳಾದರೂ ಪಂದ್ಯದ ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಬದಲಾವಣೆಗಳನ್ನು ಒಪ್ಪಲೇ ಬೇಕು.

[ಬದಲಾಯಿಸಿ] ರಾಷ್ಟ್ರೀಯ ಸಂಸ್ಥೆಗಳ ಶಿಸ್ತು

ವಿಶ್ವದಾದ್ಯಂತ ಪಂದ್ಯದ ಪ್ರಗತಿ ಹಾಗೂ ಕ್ರೀಡೆಯನ್ನು ಕ್ರಮಬದ್ಧವಾಗಿ ನಡೆಸಲು ಫೀಫಾ ಮೇಲಿಂದ ಮೇಲೆ ಸಕ್ರೀಯವಾದ ಪಾತ್ರಗಳನ್ನು ವಹಿಸುತ್ತದೆ. ಸಂಬಂಧಿಸಿದ ಸದಸ್ಯ ಸಂಘಗಳು ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದಾಗ ಇಲ್ಲವೇ ಒಂದು ಸರ್ಕಾರವು ಫೀಫಾದ ಸಂಬಂಧಪಟ್ಟ ಸದಸ್ಯ ಸಂಸ್ಥೆಗಳ ಕಾರ್ಯ ನಡೆಸುವಲ್ಲಿ ಹಸ್ತಕ್ಷೇಪ ಮಾಡಿದಾಗ ಸಂಬಂಧ ಪಟ್ಟಂತಹ ಸದಸ್ಯರು ಹಾಗೂ ತಂಡಗಳನ್ನು ಅಂತರಾಷ್ಟ್ರೀಯ ಸ್ಪರ್ಧೆಗಳಿಂದ ವಜಾ ಮಾಡುವುದು ಅದರ ಅನುಮೋದನೆಗಳಲ್ಲೊಂದು.

ಒಬ್ಬ ಆಟಗಾರನು ಗರಿಷ್ಠವಾಗಿ ಮೂರು ಕ್ಲಬ್ ಗಳಿಗೆ ದಾಖಲಿಸಲ್ಪಡಬಹುದೆಂದೂ ಮತ್ತು ಒಂದು ವರ್ಷದಲ್ಲಿ, ಜುಲೈ 1 ರಿಂದ ಜೂನ್ 30 ರ ವರಗೆ, ಅಧಿಕಾರದ ಪಂದ್ಯಗಳಲ್ಲಿ ಗರಿಷ್ಠವಾಗಿ ಎರಡರಲ್ಲಿ ಬಾಗವಹಿಸಬಹುದೆನ್ನುವ, ವಿಶೇಷವಾಗಿ ಆ ದಿನಾಂಕದ ಗಡಿಯನ್ನು ದಾಟುವ ಋತುಮಾನದಂತಹ ದೇಶಗಳಲ್ಲಿ, ಹಿಂದಿನ ಎರಡು ಐರ್ಲೆಂಡ್ ಅಂತರಾಷ್ಟ್ರೀಯ ಪಂದ್ಯಗಳಸಂಗತಿಯಂತೆ, 2007 ರ ಒಂದು ನಿರ್ಣಯವು ವಿವಾದಕ್ಕೆ ಕಾರಣವಾಯಿತು. ಈ ವಿವಾದದ ನೇರ ಪರಿಣಾಮವಾಗಿ, ಋತುಮಾನಗಳನ್ನು ದಾಟಿದ ಹಂತಗಳ ಜೊತೆ ಒಕ್ಕೂಟಗಳ ನಡುವೆ ವರ್ಗಾವಣೆಗಳನ್ನು ಹೊಂದಿಸಲು ಮುಂದಿನ ವರ್ಷ ಫೀಫಾ ಈ ತೀರ್ಮಾನವನ್ನು ಮಾರ್ಪಡಿಸಿತು.

[ಬದಲಾಯಿಸಿ] ಫೀಫಾ ಸ್ತುತಿ ಗೀತೆ

UEFA ಚಾಂಪಿಯನ್ಸ್ ಲೀಗ್ ನಂತೆ, 1994 ರ ಫೀಫಾ ವಿಶ್ವ ಕಪ್ ನಿಂದೀಚೆಗೆ, ಫೀಫಾವು ಜರ್ಮನ್ ಗೀತಕಾರ ಫ್ರಾನ್ಜ್ ಲ್ಯಾಂಬರ್ಟ್ ರಿಂದ ರಚಿಸಲ್ಪಟ್ಟ ಒಂದು ಸ್ತುತಿ ಗೀತೆಯನ್ನು ಅಳವಡಿಸಿಕೊಂಡಿದೆ. ಅಂತರಾಷ್ಟ್ರೀಯ ಸ್ನೇಹ ಪಂದ್ಯಗಳು, ಫೀಫಾ ವಿಶ್ವ ಕಪ್, ಫೀಫಾ ಮಹಿಳೆಯರ ವಿಶ್ವ ಕಪ್, ಫೀಫಾ U-20 ವಿಶ್ವ ಕಪ್, ಫೀಫಾ U-17 ವಿಶ್ವ ಕಪ್, ಫೀಫಾ U-20 ಮಹಿಳಾ ವಿಶ್ವ ಕಪ್, ಫೀಫಾ U-17 ಮಹಿಳಾ ವಿಶ್ವ ಕಪ್, ಫೀಫಾ ಫುಟ್ ಸಾಲ್ ವಿಶ್ವ ಕಪ್, ಫೀಫಾ ಬೀಚ್ ಸಾಕರ್ ವಿಶ್ವ ಕಪ್, ಮತ್ತು ಫೀಫಾ ಕ್ಲಬ್ ವಿಶ್ವ ಕಪ್ ನಂತಹ ಫೀಫಾ ಅನುಮತಿಸಿದ ಅಧಿಕಾರದ ಕ್ರೀಡಾ ಸ್ಪರ್ಧೆಗಳು ಮತ್ತು ಫೀಫಾ ಪಂದ್ಯಗಳ ಪ್ರಾರಂಭದಲ್ಲಿ ಫೀಫಾ ಸ್ತುತಿ ಗೀತೆಯನ್ನು ನುಡಿಸುತ್ತಾರೆ.[೨]

[ಬದಲಾಯಿಸಿ] ಟೀಕೆಗಳು

[ಬದಲಾಯಿಸಿ] ಆರ್ಥಿಕ ಅಕ್ರಮಗಳ ಆಪಾದನೆಗಳು

ಮೇ 2006 ರಲ್ಲಿ ಬ್ರಿಟಿಷ್ ತನಿಖಾ ವರದಿಗಾರ ಆಂಡ್ರೂ ಜೆನ್ನಿಂಗ್ಸ್ ರ ಪುಸ್ತಕ ಫೌಲ್! ಫೀಫಾದ ಮಾರುಕಟ್ಟೆ ಮಾಡುವ ಪಾಲುದಾರ ISL ನ ಕುಸಿಯುವಿಕೆಯನ್ನು ಅನುಸರಿಸಿ ಅಂತರಾಷ್ಟ್ರೀಯ ಗುತ್ತಿಗೆಗಾಗಿ ಹಣದ ಹಗರಣವನ್ನು ವಿವರಿಸುವ ಒಂದು ಆಪಾದನೆಯಿಂದ ಫುಟ್ ಬಾಲ್ ಪ್ರಪಂಚದೊಳಗೆ, ದಿ ಸೀಕ್ರಟ್ ವರ್ಲ್ಡ್ ಆಫ್ ಫೀಫಾ: ಬ್ರೈಬ್ಸ್, ವೋಟ್ ರಿಗ್ಗಿಂಗ್ ಮತ್ತು ಟಿಕೆಟ್ ಸ್ಕಾಂಡಲ್ಸ್ (ಹಾರ್ಪರ್ ಕಾಲಿನ್ಸ್) ವಿವಾದವನ್ನು ಸೃಷ್ಟಿಸಿತು, ಹಾಗೂ ಹೇಗೆ ಕೆಲವು ಫುಟ್ ಬಾಲ್ ಅಧಿಕಾರಿಗಳು ತಾವು ಪಡೆದ ಲಂಚದ ಹಣವನ್ನು ಗುಟ್ಟಾಗಿ ಹಿಂದಿರುಗಿಸಲು ಒತ್ತಾಯಿಸಲ್ಪಟ್ಟರೆಂಬುದನ್ನು ಬಹಿರಂಗ ಪಡಿಸಿತು. ಫೀಫಾದ ಸೆಪ್ ಬ್ಲಾಟರ್ ರ ಮುಂದುವರಿದ ಹಿಡಿತದ ಜಗಳದಲ್ಲಿ ಮತದ ಮೋಸವು ಸಂಭವಿಸಿದೆಯೆಂಬುದನ್ನು ಸಹ ಆ ಪುಸ್ತಕವು ಆಪಾದಿಸಿದೆ.

ಫೌಲ್ ನ ಬಿಡುಗಡೆಯ ಕೆಲವೇ ಸಮಯದ ನಂತರ ಜೆನ್ನಿಂಗ್ಸ್ ರಿಂದ ಒಂದು ಬಿಬಿಸಿ ದೂರದರ್ಶನದ ಪ್ರಸಾರದಲ್ಲಿ ಜಾಹೀರು ಮಾಡಲ್ಪಟ್ಟ ಮತ್ತು ಬಿಬಿಸಿ ವಾರ್ತಾ ಕಾರ್ಯಕ್ರಮಕ್ಕಾಗಿ ಬಿಬಿಸಿ ನಿರ್ಮಾಪಕ ರೋಜರ್ ಕೊರ್ಕ್ ರ ಪನೋರಮಾ ಪ್ರಸಾರವಾಯಿತು. ಜೂನ್ 11, 2006 ರ, ಒಂದು ಘಂಟೆಯ ಕಾರ್ಯಕ್ರಮದ ಪ್ರಸಾರದಲ್ಲಿ, ಫುಟ್ ಬಾಲ್ ಅಧಿಕಾರಿಗಳಿಂದ ಒಂದು ಮಿಲಿಯನ್ ಪೌಂಡ್ ಗಳಿಗಿಂತಲೂ ಹೆಚ್ಚಿನ ಬೆಲೆಯ ಲಂಚದ ಹಣವನ್ನು ಹಿಂದಿರುಗಿಸಲು ಒಂದು ಗುಟ್ಟಾದ ವ್ಯಾಪಾರದಲ್ಲಿ ಅವರ ಪಾತ್ರಕ್ಕಾಗಿ ಸ್ವಿಸ್ ಪೋಲೀಸರಿಂದ ಸೆಪ್ ಬ್ಲಾಟರ್ ತನಿಖೆ ಮಾಡಲ್ಪಟ್ಟಿದ್ದಾರೆಂದು ಜೆನ್ನಿಂಗ್ಸ್ ಹಾಗೂ ಪನೋರಮಾ ತಂಡವು ಒಪ್ಪುತ್ತದೆ.

ಪನೋರಮಾ ಪ್ರಸಾರದಲ್ಲಿ ಕೊಡಲ್ಪಟ್ಟ ಎಲ್ಲಾ ಸಾಕ್ಷ್ಯಗಳು ಒಂದು ವೇಷ ಮರೆಸಿಕೊಂಡ ಧ್ವನಿ, ಬಾಹ್ಯ ಚಹರೆ, ಅಥವ ಎರಡೂ, ಒಂದನ್ನು ಉಳಿಸಿ, ಮುಖಾಂತರ ಒದಗಿಸಲ್ಪಟ್ಟವು; ಸಂಯುಕ್ತ ಸಂಸ್ಥಾನದಲ್ಲಿನ ಟೊವ್ ಸನ್ ವಿಶ್ವವಿದ್ಯಾಲಯದ ಹಿಂದಿನ ಒಬ್ಬ ಉಪನ್ಯಾಸಕಾರರಾದ, ಮೆಲ್ ಬ್ರೆನ್ನಾನ್ (ಮತ್ತು CONCACAF ಗೆ 2001-2003 ರವರೆಗೆ ವಿಶೇಷ ಯೋಜನೆಗಳ ಮುಖ್ಯಸ್ಥರು, ಇ-ಫೀಫಾ ಯೋಜನೆ ಮತ್ತು ಒಂದು ಫೀಫಾ ವಿಶ್ವ ಕಪ್ ನ ಪ್ರತಿನಿಧಿ), CONCACAF ಮತ್ತು ಫೀಫಾ ಮುಖಂಡತ್ವದಿಂದ ಅನಾಚಾರ, ಅಕ್ರಮ, ಭ್ರಷ್ಟಾಚಾರ, ಮತ್ತು ದುರಾಸೆಯ ಸಾಕಷ್ಟು ಗಣನೀಯ ಆಪಾದನೆಗಳ ಸಹಿತ ಸಾರ್ವಜನಿಕೆವಾಗಿ ಹೇಳಿದ ಉನ್ನತ ಮಟ್ಟದ ಫುಟ್ ಬಾಲ್ ಆಡಳಿತದ ಒಳಗಿನ ವ್ಯಕ್ತಿಯಾದರು. ಪನೋರಮಾದ ಪ್ರದರ್ಶನದ ಅವಧಿಯಲ್ಲಿ, ಬ್ರೆನ್ನಾನ್-ವಿಶ್ವ ಫುಟ್ ಬಾಲ್ ಪ್ರಶಾಸನದ ಇತಿಹಾಸದಲ್ಲಿ ಅತ್ಯುನ್ನತ ಮಟ್ಟದ ಆಫ್ರಿಕನ್-ಅಮೇರಿಕನ್-ಜೆನ್ನಿಂಗ್ಸ್ ಮತ್ತು ಅನೇಕ ಇತರರು CONCACAF ನಲ್ಲಿ ಹಣದ ಅನುಚಿತ ಹಂಚುವಿಕೆಗಳ ಆಪಾದನೆಗಳನ್ನು ಬಹಿರಂಗ ಪಡಿಸಿದರು, ಹಾಗೂ ಫೀಫಾದಲ್ಲಿಯೂ ತದ್ರೂಪು ವರ್ತನೆಗಳು ಮತ್ತು ತೋರಿಕೆಯ CONCACAF ನಡುವೆ ಸಂಬಂಧಗಳ ಗಮನ ಸೆಳೆಯಿತು. ಬ್ರೆನ್ನಾನ್ ರ ಪುಸ್ತಕ, ದಿ ಅಪ್ರೆಂಟೈಸ್: ಟ್ರಾಜಿಕಾಮಿಕ್ ಟೈಮ್ಸ್ ಅಮಾಂಗ್ ದಿ ಮೆನ್ ರನ್ನಿಂಗ್-ಆಂಡ್ ರೂಯ್ನಿಂಗ್-ವರ್ಲ್ಡ್ ಫುಟ್ ಬಾಲ್ 2010 ರಲ್ಲಿ ಬಿಡುಗಡೆಯಾಗುವುದು.

[ಬದಲಾಯಿಸಿ] ವಿಡಿಯೊ ಮರುಪ್ರಸಾರ

ಆನಂತರದ ಶಿಸ್ತಿನ ಅಂಗೀಕಾರಗಳಿಗೆ ಅದು ಅನುಮತಿಸಿದ್ದಾಗ್ಯೂ, ಫೀಫಾ ಪಂದ್ಯಗಳ ಕಾಲದಲ್ಲಿ ವಿಡಿಯೊ ಸಾಕ್ಷಿಗಳನ್ನು ಒಪ್ಪುವುದಿಲ್ಲ.[೩] 1970 ರ ಇಂಟರ್ನ್ಯಾಷನಲ್ ಫುಟ್ ಬಾಲ್ ಅಸೋಸಿಯೇಶನ್ ಬೋರ್ಡ್ನ ಸಭೆಯಲ್ಲಿ "ಆಟದ ತೀರ್ಪುಗಾರರ ಯಾವುದೇ ತೀರ್ಮಾನದ ಮೇಲೆ ಪ್ರಭಾವ ಬೀರುವಂತೆ ಬೆಳಕು ಚೆಲ್ಲುವ ಅಥವ ಬೆಳಕು ಚೆಲ್ಲ ಬಹುದಾದ ನಿಧಾನ ಚಲನೆಯ ಮರುಪ್ರಸಾರದಿಂದ ದೂರ ಉಳಿಯುವಂತೆ ದೂರದರ್ಶನ ಅಧಿಕಾರಿಗಳನ್ನು ಪ್ರಾರ್ಥಿಸಲು ಒಪ್ಪಿಕೊಂಡರು".[೪] 2008 ರಲ್ಲಿ, ಫೀಫಾದ ಅಧ್ಯಕ್ಷ ಸೆಪ್ ಬ್ಲಾಟರ್ ಹೇಳಿದರು: "ಅದು ಹೇಗಿದೆಯೊ ಹಾಗೆಯೇ ಇರಲಿ ಮತ್ತು ನಾವು ತಪ್ಪುಗಳ ಸಹಿತ (ಫುಟ್ ಬಾಲ್ ಅನ್ನು) ಬಿಟ್ಟು ಬಿಡೋಣ, ದೂರದರ್ಶನದ ಕಂಪನಿಗಳು [ನಿರ್ಣಾಯಕನು] ಸರಿಯೇ ಅಥವ ತಪ್ಪೇ ಎಂದು ತಿಳಿಸುವ ಅಧಿಕಾರವನ್ನು ಹೊಂದಿರುತ್ತಾರೆ, ಆದರೂ ಪಂದ್ಯದ ನಿರ್ಣಾಯಕನೇ ತೀರ್ಮಾನಗಳನ್ನು ಕೈಗೊಳ್ಳುವವನು - ಆತ ಒಬ್ಬ ಮನುಷ್ಯ, ಒಂದು ಯಂತ್ರವಲ್ಲ."[೫]

ಅಂತಹ ದೊಡ್ಡ ಮೈದಾನದಲ್ಲಿ 22 ಆಟಗಾರರ ಚಟುವಟಿಕೆಗಳ ಜಾಡಿನ ತೊಡಕುಗಳು ಬಂದಾಗ ತರ್ತು ಮರುಪ್ರಸಾರದ ಅವಶ್ಯಕತೆಯಿದೆ ಎಂದು ಹೇಳಲ್ಪಟ್ಟಿದೆ,[೬] ಮತ್ತು ಪಂದ್ಯದ ದಿಕ್ಕನ್ನು ಬದಲಿಸುವಂತಹ ಬೇರೆಯವುಗಳಿಗಿಂತ ಅಂತಹ ಘಟನೆಗಳು ಹೆಚ್ಚು ಸಂಭಾವ್ಯವಾದ್ದರಿಂದ, ಚೆಂಡು ಗೋಲ್ ನ ರೇಖೆಯನ್ನು ದಾಟಿದೆಯೆ ಹೇಗೆ ಹಾಗೂ ಬುಕ್ ಮಾಡುವ ಅಥವ ರೆಡ್ ಕಾರ್ಡ್ ಗಳಿಗೆ ದಾರಿಮಾಡಿಕೊಡುವಂತಹ ತಪ್ಪುಗಳು, ಪೆನಾಲ್ಟಿ ಪ್ರಸಂಗಗಳಲ್ಲಿ ತಕ್ಷಣದ ಮರುಪ್ರಸಾರವನ್ನು ಉಪಯೋಗಿಸ ಬಹುದೆಂದು ಸೂಚಿಸಲ್ಪಟ್ಟಿದೆ.[೭]

ರಗ್ಬಿ ಯೂನಿಯನ್, ಕ್ರಿಕೆಟ್, ಅಮೇರಿಕನ್ ಫುಟ್ ಬಾಲ್, ಕೆನೇಡಿಯನ್ ಫುಟ್ ಬಾಲ್, ಬ್ಯಾಸ್ಕೆಟ್ ಬಾಲ್, ಟೆನ್ನಿಸ್, ಮತ್ತು ಐಸ್ ಹಾಕಿ ಯನ್ನು ಒಳಗೊಂಡಂತಹ, ಇತರೆ ಕ್ರೀಡೆಗಳಲ್ಲಿ ತುರ್ತು ಮರುಪ್ರಸಾರವು ಈಗಾಗಲೇ ಉಪಯೋಗದಲ್ಲಿದೆ ಎಂದು ವಿಮರ್ಶಕರೂ ಸಹ ಸ್ಪಷ್ಟ ಪಡಿಸುತ್ತಾರೆ.[೬][೮][೯][೧೦][೧೧] ವಿಡಿಯೊ ಮರುಪ್ರಸಾರದ ಒಬ್ಬ ಪ್ರಮುಖ ಪ್ರತಿಪಾದಕ, ಪೋರ್ಚುಗಲ್ ನ ತರಬೇತುದಾರ ಕಾರ್ಲೋಸ್ ಕ್ವೈರೋಜ್"ಪಂದ್ಯದ ವಿಶ್ವಾಸಾರ್ಹತೆ" ಪೇಚಿನಲ್ಲಿದೆ ಎಂದು ಹೇಳುತ್ತಾ ಬರೆದಿದ್ದಾರೆ.[೧೨]

[ಬದಲಾಯಿಸಿ] ಫೀಫಾ ವಿನ್ಯಾಸ ಮಾಡಿದ ಕ್ರೀಡಾ ಸ್ಪರ್ಧೆಗಳು

ಪುರುಷರ ಕ್ರೀಡಾ ಸ್ಪರ್ಧೆಗಳು

ಮಹಿಳೆಯರ ಕ್ರೀಡಾ ಸ್ಪರ್ಧೆಗಳು

[ಬದಲಾಯಿಸಿ] ಪ್ರಾಯೋಜಕರು

ಈ ಕೆಳಗಿನವರು ಫೀಫಾದ ಪ್ರಾಯೋಜಕರು ("ಫೀಫಾ ಪಾಲುದಾರರೆಂದು" ಹೆಸರಿಸಲ್ಪಟ್ಟಿದ್ದಾರೆ):

[ಬದಲಾಯಿಸಿ] ಇವನ್ನೂ ನೋಡಿರಿ

[ಬದಲಾಯಿಸಿ] ಆಕರಗಳು

  1. http://www.bruisedearth.org/?p=137 ಜೋರ್ಡಾನ್ ನೊಡನೆ ಮೊದಲನೆಯ ಪ್ಯಾಲಸ್ಟೇನಿಯನ್ ಪಂದ್ಯದ ವರದಿ
  2. FIFA anthem. YouTube. ಮರುಕಳಿಸಿದ ದಿನಾಂಕ 2010-05-19.
  3. "Fifa rules out video evidence", The Guardian, 5 January 2005. Retrieved on 29 November 2009. 
  4. IFAB (27 June 1970). Minutes of the AGM. Soccer South Bay Referee Association. ಮರುಕಳಿಸಿದ ದಿನಾಂಕ 29 November 2009.
  5. http://www.cbc.ca/sports/soccer/story/2008/03/08/fifa-instant-replay.html
  6. ೬.೦ ೬.೧ http://www.wired.com/epicenter/2009/11/soccer-resists-the-instant-replay-despite-criticism/
  7. http://sportsillustrated.cnn.com/2008/writers/gabriele_marcotti/09/25/replay/#ixzz0rLxI0iY7
  8. ಇತರ ಕ್ರೀಡೆಗಳಲ್ಲಿ ವಿಡಿಯೊ ಮರುಪ್ರಸಾದ ಉಪಯೋಗದ ಬಗ್ಗೆ ಪಂದ್ಯದ ಕಾನೂನುಗಳು ಹಾಗೂ ಕಾಯ್ದೆಗಳು:
  9. http://news.yahoo.com/s/afp/20100628/tc_afp/fblwc2010refereestechnology_20100628161359
  10. http://soccer.fanhouse.com/2010/06/27/the-world-cup-needs-instant-replay-now/
  11. http://bleacherreport.com/articles/296307-video-technology-in-soccer-the-time-is-now
  12. Robert Smith (June 28, 2010). FIFA turns deaf ear to calls for replay. vancouversun.com. Agence France-Presse. ಮರುಕಳಿಸಿದ ದಿನಾಂಕ June 24, 2010.

[ಬದಲಾಯಿಸಿ] ಹೆಚ್ಚಿನ ಓದಿಗಾಗಿ

  • ಪೌಲ್ ಡರ್ಬಿ, ಆಫ್ರಿಕ ಫುಟ್ ಬಾಲ್ ಮತ್ತು ಫೀಫಾ: ಪಾಲಿಟಿಕ್ಸ್, ಕಲೋನಿಯಲಿಸಮ್ ಮತ್ತು ರೆಸಿಸ್ಟೆಂನ್ಸ್ (ಜಾಗತಿಕ ಸಮಾಜದಲ್ಲಿ ಕ್ರೀಡೆ), ಫ್ರಾಂಕ್ ಕಾಸ್ ಪ್ರಕಾಶಕರು 2002, ISBN 0-7146-8029-X
  • ಜಾನ್ ಸುಗ್ದೆನ್, ಫೀಫಾ ಮತ್ತು ದಿ ಕಂಟೆಸ್ಟ್ ಫಾರ್ ದಿ ವರ್ಲ್ಡ್ ಫುಟ್ ಬಾಲ್ , ಪೊಲೈಟಿ ಪ್ರೆಸ್ 1998, ISBN 0-7456-1661-5
  • ಜಿಮ್ ಟ್ರೆಕರ್, ಚಾರ್ಲ್ಸ್ ಮೈಯರ್ಸ್, ಜೆ. ಬ್ರೆಟ್ ವೈಟ್ ಸೆಲ್, ಸಂಪಾದಕರು, ವುಮೆನ್ಸ್ ಸಾಕರ್: ದಿ ಗೇಮ್ ಮತ್ತು ಫೀಫಾ ವರ್ಲ್ಡ್ ಕಪ್, ಯೂನಿವರ್ಸ್ 2000, ಪರಿಷ್ಕರಿಸಿದ ಆವೃತ್ತಿ ISBN 0-7893-0527-5

[ಬದಲಾಯಿಸಿ] ಬಾಹ್ಯ ಕೊಂಡಿಗಳು

ನಿರ್ದೇಶಾಂಕಗಳು: 47°22′53″N 8°34′28″E / {{{dec-lat}}}, {{{dec-long}}} ಟೆಂಪ್ಲೇಟು:International Sports Federations

"http://kn.wikipedia.org/w/index.php?title=ಫೀಫಾ&oldid=255469" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು