ಪ್ರೀತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನುರಕ್ತಿ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಆಸಕ್ತಿ ಲೇಖನಕ್ಕಾಗಿ ಇಲ್ಲಿ ನೋಡಿ.
ಪ್ರೀತಿಯ ಕುರಿತಾದ ಸರಣಿಯೊಂದರ ಭಾಗ‌

ವಿಲಕ್ಷಣವಾಗಿ ಚಿತ್ರಿಸಿದ ಹೃದಯದ ಸಂಕೇತವು
ಸಾಂಪ್ರದಾಯಿಕ ಯೂರೋಪಿಯನ್‌ ಸಂಕೇತವಾಗಿದ್ದು,
ಅದು ಪ್ರೀತಿಯನ್ನು ಪ್ರತಿನಿಧಿಸುತ್ತದೆ.
ಮೂಲಭೂತ ರೂಪಗಳು
ಪ್ರೀತಿ (ವೈಜ್ಞಾನಿಕ ದೃಷ್ಟಿಕೋನಗಳು)
ಪ್ರೀತಿ (ಸಾಂಸ್ಕೃತಿಕ ದೃಷ್ಟಿಕೋನಗಳು)
ಪ್ರೀತಿ (ಗುಣ)
ಮನುಷ್ಯ ಸಂಬಂಧ
ಐತಿಹಾಸಿಕವಾಗಿ
ರಾಜ ಮರ್ಯಾದೆ
ಧಾರ್ಮಿಕ ಪ್ರೀತಿ‌
ಭಾವನೆಯ ವಿಧಗಳು
ಶೃಂಗಾರ ಪ್ರೀತಿ
ಸಾತ್ವಿಕ ಪ್ರೀತಿ‌
ಕೌಟುಂಬಿಕ ಪ್ರೀತಿ‌
ಪ್ರಣಯ ಪ್ರೀತಿ
ಇದನ್ನೂ ನೋಡಿರಿ
ಪ್ರತಿಯಾಗಿ ಹಿಂತಿರುಗಿಸದ ಪ್ರೀತಿ
ವಿರಹ ವೇದನೆ

ಪ್ರೀತಿ ಮತ್ತು ಪ್ರೇಮ[ಬದಲಾಯಿಸಿ]

  • ಪ್ರೀತಿ ಅಥವಾ ಪ್ರೇಮ ಎಂಬುದು ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಪೈಕಿ ಯಾವುದಾದರೂ ಒಂದು ಭಾವವಾಗಿದ್ದು, ಪ್ರಬಲವಾದ ಒಲವು ವಾತ್ಸಲ್ಯ]][೧] ಮತ್ತು ಬಾಂಧವ್ಯಗಳ ಒಂದು ಸಂವೇದನೆಗೆ ಅದು ಸಂಬಂಧಿಸಿರುತ್ತದೆ.
  • ಪ್ರಾಚೀನ ಗ್ರೀಕ್ ತತ್ವಜ್ಞಾನಿಗಳು ಪ್ರೇಮ ಅಥವಾ ಪ್ರೀತಿಯ ಆರು ಪ್ರಕಾರಗಳನ್ನು ಗುರುತಿಸಿದ್ದಾರೆ: ಮೂಲಭೂತವಾಗಿ, ಕೌಟುಂಬಿಕ ಪ್ರೀತಿ (ಗ್ರೀಕ್, ಸ್ಟಾರ್ಜ್‌ನಲ್ಲಿ), ಸ್ನೇಹಪರ ಪ್ರೀತಿ ಅಥವಾ ಪ್ಲಾಟೋನಿಕ್ ಪ್ರೀತಿ (ಫಿಲಿಯಾ - "ಸಹೋದರ ಪ್ರೀತಿ",), ಪ್ರಣಯ ಪ್ರೀತಿ (ಇರೋಸ್), ಸ್ವ-ಪ್ರೀತಿ (ಫಿಲೌಟಿಯಾ), ಅತಿಥಿ ಪ್ರೀತಿ (ಕ್ಸೆನಿಯಾ) ಮತ್ತು ದೈವಿಕ ಪ್ರೀತಿ (ಅಗಾಪೆ). ಆಧುನಿಕ ಲೇಖಕರು ಪ್ರೀತಿಯ ಮತ್ತಷ್ಟು ಪ್ರಭೇದಗಳನ್ನು ಗುರುತಿಸಿದ್ದಾರೆ: ಅಪೇಕ್ಷಿಸದ ಪ್ರೀತಿ, ಖಾಲಿ ಪ್ರೀತಿ, ಒಡನಾಡಿ ಪ್ರೀತಿ, ಪೂರ್ಣ ಪ್ರೀತಿ, ಮೋಹಗೊಂಡ ಪ್ರೀತಿ, ಸ್ವ-ಪ್ರೀತಿ ಮತ್ತು ಸೌಜನ್ಯ ಪ್ರೀತಿ. ಗಂಡು ಹೆಣ್ಣಿನ ಪ್ರಾಕೃತಿಕ ಆಕರ್ಷಣೆಯಿಂದ ಕೂಡಿದ ಪ್ರೀತಿಯನ್ನು ಪ್ರೇಮವೆಂದೂ, ಸ್ವಾರ್ಥವಿಲ್ಲದ ತಾಯಿ ಮತ್ತು ಮಗುವಿನ ಸಂಬಂಧದ ರೀತಿಯ ಮಾನಸಿಕ ಬಂಧನವನ್ನು ಪ್ರೀತಿಯೆಂದು ಕರೆಯುವುದು ಅರ್ಥ ಗೊಂದಲದ ನಿವಾರಣೆ ದೃಷ್ಟಿಯಿಂದ ಸೂಕ್ತವಾದುದು. [೨]
  • ಪ್ರೇಮ ಎಂಬುದು ಎಂಬುದು ನಾಟಕವಲ್ಲ ಅದು ನಿಮ್ಮ ಜೀವನವನ್ನ ರೂಪಿಸುತ್ತದೆ. ಕೆಲವೊಮ್ಮೆ ಪ್ರೇಮ ಎಂಬುದು- ಪ್ರೀತಿ ಮತ್ತು ದ್ವೇಷದಿಂದ ಕೂಡಿರುತ್ತದೆ. ಕೊನೆಗೆ ಪ್ರೇಮ ಸುಖದಿಂದ ಅಂತ್ಯವಾಗುದಿಲ್ಲ. ಪ್ರೇಮಿಗಳು ಸಾಯುತ್ತಾರೆ; ಸಲಿಂ, ಅನಾರ್ಕಲಿ, ರೋಮಿಯೋ ಜೂಲಿಯಟ್ ರಂತಹ ಅಮರ ಪ್ರೇಮಿಗಳು ಸತ್ತರೆ ಹೊರತು ಪ್ರೀತಿಯನ್ನ ಬಿಟ್ಟು ಕೊಡಲಿಲ್ಲ; ಆದರೆ, ಪ್ರೇಮ ಅಮರವಾಯಿತು. ಪ್ರೀತಿ ಎಂಬುದು ಅಂದ ನೋಡಿ ಅಥವಾ ಅಂತಸ್ತನ್ನು ನೋಡಿ ಬರುವುದಲ್ಲ ಅದು ಭಾವನೆಗಳ ಒಂದು ಲೋಕ ಎರೆಡು ಮನಸ್ಸಿನ ಭಾವನೆಗಳನ್ನು ಇಬ್ಬರು ಬೆತ್ತಲೆ ಗೋಳಿಸುವುದು ಪ್ರೀತಿ ಅಕ್ಷರಸ್ತರನ್ನು ಒಬ್ಬ ಕವಿಯನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದೆ ಆದರೆ ಭಾವನೆ ಮತ್ತು ಪ್ರೀತಿಗೆ ಬೆಳೆಕೊಡದೆ ದುಡ್ಡಿನ ಅಮಲಿನಲ್ಲಿ ತೇಲಾಡುತ್ತಿರುವುದೇ ಹೆಚ್ಚು

Love is not about how much

You say I love you

But how much that you can

Prove that it's true

ನೀವು ಜೀವನದಲ್ಲಿ ಎಷ್ಟು ಸಲ ಮೋಸ ಹೋಗಬಹುದು ಅದಕ್ಕೆ ಕಾರಣ ನಿಮ್ಮ ಬುದ್ಧಿವಂತಿಕೆಯಲ್ಲ ನಾವು ಅವರ ಮೇಲೆ ಇಟ್ಟಿರೋ ನಂಬಿಕೆಯಿಂದ ಮನದಾಳದ ಮಾತೇ ಪ್ರೀತಿ ಮರೆಯಲಾಗದ ನೆನಪೆ ಪ್ರೀತಿ ಮುಗಿಯದ ಕಥೆಯೇ ಪ್ರೀತಿ ದಡವಿಲ್ಲದೆ

ಪ್ರೀತಿ ಎಂದರೆ ಎರೆಡು ದೇಹಗಳು ಬೆತ್ತಲಾಗುವುದಲ್ಲ ಎರೆಡು ಮನಸ್ಸಿನ ಭಾವನೆಗಳು ಬೆತ್ತ ಲಾಗುವುದೇ ಪ್ರೀತಿ

ಪ್ರೀತಿಯಲ್ಲಿ ನೀನು ಪ್ರಾವೀತ್ಯತೆ ಕಂಡು ಕೊಳ್ಳಬೇಕೆಂದರೆ ನೀನು ಅವಳ ಅಥವಾ ಅವನ ಸೌಂದರ್ಯ ನೋಡಿ ಪ್ರೀತಿಸಬಾರದು

Puttu virat (ಪುಟ್ಟನ ಭಾವನೆ)-- ?ಉಲ್ಲೇಖದ ಅಗತ್ಯವಿದೆ

ಪರಿಚಯ[ಬದಲಾಯಿಸಿ]

ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸಾಮಾನ್ಯವಾಗಿ ಸೂಚಿಸುತ್ತದೆ.ಆದರೂ, ಪ್ರಣಯ ಪ್ರೀತಿಯ ಭಾವೋದ್ರಿಕ್ತ ವಾಂಛೆ ಹಾಗೂ ಅನ್ಯೋನ್ಯತೆಯಿಂದ ಹಿಡಿದು ಕೌಟುಂಬಿಕ ಮತ್ತು ಸಾತ್ವಿಕ ಪ್ರೀತಿ[೩] ಲೈಂಗಿಕೇತರ ಭಾವನಾತ್ಮಕ ನಿಕಟತೆಯವರೆಗೆ ಮತ್ತು ಅಲ್ಲಿಂದ, ಧಾರ್ಮಿಕ ಪ್ರೀತಿ[೪] ಗಾಢ ಐಕ್ಯತೆ ಅಥವಾ ಉಪಾಸನೆಯವರೆಗಿನ ವಿವಿಧ ಭಾವನೆಗಳ ಅನುಭೂತಿಗಳ ಶ್ರೀಮಂತಿಕೆಯನ್ನು ಪ್ರೀತಿಯ ಈ ಸೀಮಿತ ಪರಿಕಲ್ಪನೆಯು ಒಳಗೊಳ್ಳುತ್ತದೆ. ತನ್ನ ವೈವಿಧ್ಯಮಯ ರೂಪಗಳಲ್ಲಿ ಅಂತರ್‌ವ್ಯಕ್ತೀಯ ಸಂಬಂಧಗಳ ಬಹುಮುಖ್ಯ ಸುಲಭಕಾರಕವಾಗಿ ವರ್ತಿಸುವ ಪ್ರೀತಿಯು ತನ್ನ ಮನಶ್ಯಾಸ್ತ್ರೀಯ ಪ್ರಾಮುಖ್ಯತೆಯ ಕಾರಣದಿಂದಾಗಿ ಸೃಜನಶೀಲ ಕಲೆಗಳಲ್ಲಿನ ಬಹಳ ಸಾಮಾನ್ಯವಾದ ವಸ್ತುಗಳಲ್ಲಿ ಒಂದಾಗಿ ನಿಂತಿದೆ.

ವ್ಯಾಖ್ಯಾನಗಳು[ಬದಲಾಯಿಸಿ]

ಸೋದರರ ಪ್ರೀತಿ‌ (ಹಾಸ್ಟೆಕ್‌ ಮೂಲದ ಕೊಲಂಬಸ್‌ಪೂರ್ವ ಶಿಲ್ಪ ಕಲಾಕೃತಿ 250–900 A.D.) ಮೆಕ್ಸಿಕೋದ ವೆರಾಕ್ರೂಸ್‌ನ ಕ್ಸಲಪಾದಲ್ಲಿರುವ ಮಾನವಶಾಸ್ತ್ರದ ವಸ್ತುಸಂಗ್ರಹಾಲಯ

"ಲವ್‌"(LOVE) ಎನ್ನುವ ಆಂಗ್ಲ ಪದವು ಅದಕ್ಕೆ ಸಂಬಂಧಿಸಿದ, ಆದರೆ ವಿವಿಧ ಸಂದರ್ಭಗಳಲ್ಲಿ ವಿಶಿಷ್ಟವಾಗಿ ಧ್ವನಿಸುವ ವೈವಿಧ್ಯಮಯ ಅರ್ಥಗಳನ್ನು ಹೊಂದಬಲ್ಲುದಾಗಿದೆ. ಮುಖ್ಯವಾಗಿ "ಪ್ರೀತಿ"ಯ ಕುರಿತಾಗಿ ಸಾರಾಂಶ ರೂಪದಲ್ಲಿ ಹೇಳಲು ಇಂಗ್ಲಿಷ್ ಭಾಷೆಯು ನೆಚ್ಚಿಕೊಂಡಿರುವ ವಿಭಿನ್ನ ಪರಿಕಲ್ಪನೆಗಳಲ್ಲಿ ಕೆಲವೊಂದನ್ನು ಅಭಿವ್ಯಕ್ತಿಸಲು ಇತರ ಭಾಷೆಗಳು ಆಗಾಗ್ಗೆ ಅನೇಕ ಪದಗಳನ್ನು ಬಳಸುತ್ತವೆ. ಅಧಿಕಸಂಖ್ಯೆಯಲ್ಲಿರುವ "ಪ್ರೀತಿ" ಎಂಬುದಕ್ಕಿರುವ ಗ್ರೀಕ್‌ ಪದಗಳು ಇದಕ್ಕೊಂದು ಉದಾಹರಣೆಯಾಗಿದೆ. ಹೀಗಾಗಿ ಪ್ರೀತಿಯ ಪರಿಕಲ್ಪನೆಯನ್ನು ರೂಪಿಸುವಲ್ಲಿನ ಸಾಂಸ್ಕೃತಿಕ ಭಿನ್ನತೆಗಳ ಕಾರಣದಿಂದಾಗಿ ಅದಕ್ಕೆ ಯಾವುದೇ ಸಾರ್ವತ್ರಿಕ ವ್ಯಾಖ್ಯಾನವನ್ನು ನೀಡುವುದು ದುಪ್ಪಟ್ಟು ಕಷ್ಟಕರವಾಗಿದೆ.[೫]

ಎರಡು ಕೈಗಳು ಹೃದಯಾಕಾರದ ರೂಪರೇಖೆಯನ್ನು ರಚಿಸುತ್ತಿರುವುದು
  • ಪ್ರೀತಿಯ ಸ್ವರೂಪ ಅಥವಾ ಮೂಲಸತ್ವವು ಆಗಿಂದಾಗ್ಗೆ ಚರ್ಚೆಗೊಳಗಾಗುವ ವಿಷಯವಾದರೂ ಸಹ, ಯಾವುದು ಪ್ರೀತಿ ಅಲ್ಲವಾಗಿದೆ ಎಂದು ನಿರ್ಣಯಿಸುವುದರ ಮೂಲಕ ಈ ಪದದ ವಿಭಿನ್ನ ಆಯಾಮಗಳನ್ನು ವಿಶದೀಕರಿಸಿ ಕೊಳ್ಳ ಬಹುದಾಗಿದೆ. ಗುಣಾತ್ಮಕ ಭಾವದ ಒಂದು ಸಾರ್ವತ್ರಿಕ ಅಭಿವ್ಯಕ್ತಿಯಂತಿರುವ (ಇಷ್ಟ ಎಂಬುವುದರ ಪ್ರಬಲ ರೂಪ) ಪ್ರೀತಿಯು ದ್ವೇಷದೊಂದಿಗೆ (ಅಥವಾ ತಟಸ್ಥ ಭಾವಶೂನ್ಯತೆಯೊಂದಿಗೆ) ಸಾಮಾನ್ಯವಾಗಿ ತದ್ವಿರುದ್ಧ ಸಂಬಂಧವನ್ನು ಹೊಂದಿದೆ; ಪ್ರಣಯ ಬಾಂಧವ್ಯದ ಕಡಿಮೆ ಲೈಂಗಿಕ ಮತ್ತು ಹೆಚ್ಚು ಭಾವನಾತ್ಮಕ ಸಲಿಗೆಯ ರೂಪವಾಗಿರುವ ಪ್ರೀತಿಯು ಸಾಮಾನ್ಯವಾಗಿ ಕಾಮದೊಂದಿಗೆ ವೈಲಕ್ಷಣ್ಯವನ್ನು ಎತ್ತಿತೋರಿಸುತ್ತದೆ.
  • ಅದೇ ರೀತಿಯಲ್ಲಿ, ಪ್ರೀತಿ ಎಂಬ ಪದದ ಇತರ ವ್ಯಾಖ್ಯೆಗಳನ್ನು ಕೆಲವೊಂದು ಸಂದರ್ಭಗಳಲ್ಲಿ ಆತ್ಮೀಯ ಸ್ನೇಹಗಳಿಗೆ ಅನ್ವಯಿಸಬಹುದಾದರೂ, ಪ್ರಣಯದ ಉಚ್ಚಸ್ವರದೊಂದಿಗಿನ ಅಂತರ್‌ವ್ಯಕ್ತೀಯ ಸಂಬಂಧದ ರೂಪವಾಗಿರುವ ಪ್ರೀತಿಯು, ಸಾಮಾನ್ಯವಾಗಿ ಸ್ನೇಹದೊಂದಿಗಿನ ವೈಲಕ್ಷಣ್ಯ ವನ್ನು ತೋರಿಸುತ್ತದೆ.
  • ಇದನ್ನು ಅಮೂರ್ತವಾಗಿ ಚರ್ಚಿಸಿದಾಗ, ಓರ್ವ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಗಾಗಿ ಪಡೆದ ಅನುಭವವಾದ ಅಂತರ್‌ವ್ಯಕ್ತೀಯ ಪ್ರೀತಿಯನ್ನು ಸಾಮಾನ್ಯವಾಗಿ ಪ್ರೀತಿ ಯು ಸೂಚಿಸುತ್ತದೆ. ತನ್ನ ಕುರಿತಾದ ಕಾಳಜಿಯನ್ನೂ (ಹೋಲಿಕೆ: ಆತ್ಮಶ್ಲಾಘನಾ ಪ್ರವೃತ್ತಿ) ಒಳಗೊಂಡಂತೆ, ಒಂದು ವಸ್ತು ಅಥವಾ ವ್ಯಕ್ತಿಗಾಗಿ ಕಾಳಜಿ ವಹಿಸುವುದನ್ನು ಅಥವಾ ಅವರೊಂದಿಗೆ ಗುರುತಿಸಿಕೊಳ್ಳುವುದನ್ನು ಪ್ರೀತಿಯು ಕೆಲವೊಮ್ಮೆ ಒಳಗೊಳ್ಳುತ್ತದೆ.
  • ಅಂತರ್‌-ಸಾಂಸ್ಕೃತಿಕವಾಗಿ ಪ್ರೀತಿಯನ್ನು ಅರ್ಥೈಸಿಕೊಳ್ಳಲು ಮತ್ತಷ್ಟು ಹೇಳುವುದಾದರೆ, ಪ್ರೀತಿ ಎಂಬ ಪರಿಕಲ್ಪನೆಯ ಆಲೋಚನೆಗಳು ಕಾಲದಿಂದ ಕಾಲಕ್ಕೆ ಮಹತ್ತರವಾಗಿ ಬದಲಾವಣೆಯಾಗಿವೆ. ಪ್ರೀತಿಯನ್ನು ಅರ್ಥೈಸಿಕೊಳ್ಳುವಲ್ಲಿನ ವಿಭಿನ್ನ-ಸಂಸ್ಕೃತಿಗಳ ಅಭಿಪ್ರಾಯಭೇದಗಳ ಜೊತೆಗೆ, ಪ್ರೀತಿಯ ಕುರಿತಾದ ಆಲೋಚನೆಗಳೂ ಸಹ ಕಾಲಾನಂತರದಲ್ಲಿ ಮಹತ್ತರವಾಗಿ ಬದಲಾವಣೆಯಾಗಿವೆ. ಪ್ರಣಯ ಸಂಬಂಧಗಳು ಈ ಮುಂಚೆಯೇ ಅಸ್ತಿತ್ವದಲ್ಲಿದ್ದುದು ಪ್ರಾಚೀನ ಪ್ರೇಮ ಕವಿತೆಗಳಿಂದ ದೃಢೀಕರಿಸಲ್ಪಟ್ಟಿದ್ದರೂ ಸಹ, ಕೆಲವು ಇತಿಹಾಸತಜ್ಞರು ಪ್ರಣಯ ಪ್ರೀತಿಯ ಆಧುನಿಕ ಪರಿಕಲ್ಪನೆಗಳನ್ನು ಮಧ್ಯಕಾಲೀನ ಯುಗದ ಅಥವಾ ನಂತರದ ಸುಸಂಸ್ಕತ ಯೂರೋಪ್‌ ಕಾಲಕ್ಕೆ ಕೊಂಡೊಯ್ಯುತ್ತಾರೆ.

[೬]

ನಿರಾಕಾರ ಪ್ರೀತಿ[ಬದಲಾಯಿಸಿ]

  • ವ್ಯಕ್ತಿಯೋರ್ವನು ಒಂದು ದೇಶ, ತತ್ವ ಅಥವಾ ಒಂದು ಗುರಿಯನ್ನು ಮಹತ್ತರವಾಗಿ ಗೌರವಿಸಿದರೆ ಮತ್ತು ಅದಕ್ಕೆ ಆಳವಾಗಿ ಬದ್ಧನಾಗಿದ್ದರೆ, ಅದನ್ನು ಅವನು ಪ್ರೀತಿಸುತ್ತಿದ್ದಾನೆ ಎಂದು ಹೇಳಬಹುದು. ಅದೇ ರೀತಿಯಲ್ಲಿ, ಅವುಗಳ ಕಾರಣದಿಂದ ಬರುವ ಸಹಾನುಭೂತಿಯ ಪ್ರಭಾವ ಹಾಗೂ ಸ್ವಯಂಸೇವಕರ "ಪ್ರೀತಿ"ಯು ಕೆಲವೊಮ್ಮೆ ಅಂತರ್‌ವ್ಯಕ್ತೀಯ ಪ್ರೀತಿಗೆ ಬದಲಾಗಿ, ಸ್ವಾರ್ಥರಾಹಿತ್ಯ ಮತ್ತು ಪ್ರಬಲ ರಾಜಕೀಯ ಗಾಢನಂಬಿಕೆಗಳೊಂದಿಗೆ ಜೊತೆಗೂಡಿದ ನಿರಾಕಾರ ಪ್ರೀತಿಯನ್ನು ಹೊಂದಿರಬಹುದು.
  • ಐಹಿಕ ವಸ್ತುಗಳು, ಪ್ರಾಣಿಗಳು ಅಥವಾ ಚಟುವಟಿಕೆಗಳೊಂದಿಗೆ ಬಂಧವನ್ನು ಏರ್ಪಡಿಸಿಕೊಳ್ಳುವಲ್ಲಿ ಅಥವಾ ಅದು ಸಾಧ್ಯವಾಗದಿದ್ದರೆ ಅವುಗಳೊಂದಿಗೆ ಗುರುತಿಸಿಕೊಳ್ಳುವಲ್ಲಿ ಜನರು ತಮ್ಮನ್ನು ತೊಡಗಿಸಿಕೊಂಡರೆ, ಅವುಗಳನ್ನು ಜನರು "ಪ್ರೀತಿ" ಮಾಡಲೂಬಹುದು. ಒಂದು ವೇಳೆ ಲೈಂಗಿಕಾಸಕ್ತಿಯೂ ಇದರಲ್ಲಿ ಸೇರಿದ್ದರೆ, ಇಂತಹ ಸ್ಥಿತಿಯನ್ನು ಅಸಹಜ ಲೈಂಗಿಕ ಪ್ರಚೋದನೆ ಎನ್ನುತ್ತಾರೆ.[೮]

ಅಂತರ್‌ವ್ಯಕ್ತೀಯ ಪ್ರೀತಿ‌[ಬದಲಾಯಿಸಿ]

ಫ್ಯ್ರಾಂಕ್‌ ಡಿಕ್ಸೀ ಚಿತ್ರಿಸಿರುವ ಮೂಲ ಮಾದರಿಯ ಪ್ರೇಮಿಗಳಾದ ರೋಮಿಯೋ ಮತ್ತು ಜೂಲಿಯಟ್‌ ಚಿತ್ರಗಳು
  • ಅಂತರ್‌ವ್ಯಕ್ತೀಯ ಪ್ರೀತಿಯು ಮನುಷ್ಯರ ನಡುವಿನ ಪ್ರೀತಿಯನ್ನು ಸೂಚಿಸುತ್ತದೆ. ಇದು ಮತ್ತೊಬ್ಬರೆಡೆಗಿನ ಒಂದು ಸಾಧಾರಣವಾದ ಮಮತೆ ಗಿಂತಲೂ ಮಿಗಿಲಾದ ಒಂದು ಪ್ರಬಲವಾದ ಭಾವನೆಯೆನ್ನಬಹುದು. ಪ್ರತಿಯಾಗಿ ತೋರಿಸದ ಪ್ರೀತಿಯ ಭಾವನೆಗಳಿಗೆ ಪ್ರತಿಯಾಗಿ ಹಿಂತಿರುಗಿಸದ ಪ್ರೀತಿ ಎಂದು ಕರೆಯಲಾಗುತ್ತದೆ. ಅಂತರ್‌ವ್ಯಕ್ತೀಯ ಪ್ರೀತಿಯು ಅಂತರ್‌ವ್ಯಕ್ತೀಯ ಸಂಬಂಧಗಳೊಂದಿಗೆ ನಿಕಟವಾದ ಸಂಬಂಧ ಹೊಂದಿದೆ.
  • ಈ ರೀತಿಯ ಪ್ರೀತಿಯು ಕುಟುಂಬದ ಸದಸ್ಯರ ನಡುವೆ, ಸ್ನೇಹಿತರ ನಡುವೆ ಮತ್ತು ದಂಪತಿಗಳ ನಡುವೆ ಅಸ್ಥಿತ್ವದಲ್ಲಿರಬಹುದು. ಪ್ರೀತಿಗೆ ಸಂಬಂಧಿಸಿದ ಅಸಂಖ್ಯಾತ ಮಾನಸಿಕ ರೋಗಗಳೂ ಅಸ್ತಿತ್ವದಲ್ಲಿವೆ. ಉದಾಹರಣೆಗೆ ಕಾಮೋನ್ಮಾದ. ಪ್ರೀತಿ ಎಂಬ ಅದ್ಭುತ ವಿಷಯದ ಕುರಿತು ತತ್ವಶಾಸ್ತ್ರ ಮತ್ತು ಧರ್ಮಗಳು ಇತಿಹಾಸದಾದ್ಯಂತ ಅತೀವ ಚಿಂತನೆಯನ್ನಯ ನಡೆಸಿವೆ.
  • ಕಳೆದ ಶತಮಾನದಲ್ಲಿ ಮನಶ್ಯಾಸ್ತ್ರೀಯ ಅಧ್ಯಯನವು ಈ ವಿಷಯದ ಮೇಲೆ ಅಪಾರ ಪ್ರಮಾಣದ ಬರಹವನ್ನು ಕೃತಿಗಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ, ವಿಕಾಸವಾದಿ ಮನಶ್ಯಾಸ್ತ್ರ, ವಿಕಾಸವಾದಿ ಜೀವಶಾಸ್ತ್ರ, ಮಾನವಶಾಸ್ತ್ರ, ನರವಿಜ್ಞಾನ ಮತ್ತು ಜೀವಶಾಸ್ತ್ರದ ವಿಜ್ಞಾನ ಶಾಖೆಗಳು ಪ್ರೀತಿಯ ಸ್ವರೂಪ ಮತ್ತು ಕಾರ್ಯವಿಧಾನಗಳ ಗ್ರಹಿಕೆಯನ್ನು ವಿಸ್ತರಿಸಿವೆ.

ರಾಸಾಯನಿಕ ತಳಹದಿ[ಬದಲಾಯಿಸಿ]

  • ಹಸಿವು ಅಥವಾ ಬಾಯಾರಿಕೆಯಂತೆ ಪ್ರೀತಿಯನ್ನೂ ಸಹ ಸಸ್ತನಿಯ ಪ್ರವೃತ್ತಿಯೊಂದರಂತೆ ಕಾಣಲು ಲೈಂಗಿಕತೆಯ ಜೈವಿಕ ಮಾದರಿಗಳು ಒಲವು ತೋರಿಸುತ್ತವೆ.[೯]

ಪ್ರೀತಿಯ ವಿಷಯದಲ್ಲಿನ ಅಗ್ರಗಣ್ಯ ಪರಿಣಿತೆಯಾದ ಹೆಲೆನ್‌ ಫಿಶರ್, ಕೆಲಮಟ್ಟಿಗೆ ಅತಿಕ್ರಮಿಸುವ ಮೂರು ಹಂತಗಳಾಗಿ ಪ್ರೀತಿಯ ಅನುಭೂತಿಯನ್ನು ವಿಂಗಡಿಸುತ್ತಾಳೆ.

  • ಅವುಗಳೆಂದರೆ, ಭೋಗಾಪೇಕ್ಷೆ, ಆಕರ್ಷಣೆ ಮತ್ತು ಅನುರಾಗ. ಭೋಗಾಪೇಕ್ಷೆಯು ಜನರನ್ನು ಇತರರಿಗೆ ತೆರೆದಿಡುತ್ತದೆ; ಜನರು ಮೈಥುನದ ಮೇಲೆ ತಮ್ಮ ಶಕ್ತಿಯನ್ನು ಹರಿಸುವಂತೆ ಪ್ರಣಯದ ಆಕರ್ಷಣೆಯು ಹುರಿದುಂಬಿಸುತ್ತದೆ; ಮತ್ತು ಮಗುವೊಂದನ್ನು ಶೈಶವಾವಸ್ಥೆಯವರೆಗೆ ಸಲಹುವುದಕ್ಕೆ ಸಂಬಂಧಿಸಿ ಸಂಗಾತಿಯನ್ನು (ವಾಸ್ತವವಾಗಿ ಮಗು) ಸಾಕಷ್ಟು ಕಾಲದವರೆಗೆ ಸಹಿಸಿಕೊಳ್ಳುವುದನ್ನು ಅನುರಾಗವು ಒಳಗೊಂಡಿರುತ್ತದೆ.
  • ಭೋಗಾಪೇಕ್ಷೆಯು ಮೈಥುನವನ್ನು ಉತ್ತೇಜಿಸುವ ಆರಂಭಿಕ ಕಾಮೋದ್ರೇಕದ ಲೈಂಗಿಕ ಬಯಕೆಯಾಗಿದ್ದು ಟೆಸ್ಟೋಸ್ಟೆರಾನ್‌ ಮತ್ತು ಈಸ್ಟ್ರೋಜೆನ್‌ನಂತಹ ರಾಸಾಯನಿಕಗಳು ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆ ಯಾಗುವ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಕೆಲವು ವಾರಗಳು ಅಥವಾ ತಿಂಗಳುಗಳಿಗಿಂತ ಹೆಚ್ಚಿನ ಅವಧಿಯವರೆಗೆ ಈ ಪರಿಣಾಮಗಳು ಇರುವುದು ಅಪರೂಪ.
  • ಆಕರ್ಷಣೆಎನ್ನುವುದು ನಿರ್ದಿಷ್ಟ ವ್ಯಕ್ತಿಯ ಮೈಥುನಕ್ಕೆ ಬೇಕಾದ ಹೆಚ್ಚು ವ್ಯಕ್ತಿಗತವಾದ ಮತ್ತು ಪ್ರಣಯಾಪೇಕ್ಷಿತ ವಾಂಛೆ. ಇದು ವ್ಯಕ್ತಿಗತ ಮೈಥುನದ ಸ್ವರೂಪಗಳಿಗೆ ಬದ್ಧತೆಯ ಭೋಗಾಪೇಕ್ಷೆಯಿಂದಾಗಿ ಬೆಳೆಯುತ್ತದೆ. ಜನರು ಪ್ರೀತಿಯ ಬಲೆಯಲ್ಲಿ ಸಿಲುಕಿದಾಗ, ಫೆರೋಮೋನ್‌ಗಳು, ಡೋಪಮೈನ್, ನೋರ್‌ಪಿನೆಫ್ರೀನ್ ಮತ್ತು ಸೆರೋಟೋನಿನ್‌ಗಳನ್ನು ಒಳಗೊಂಡಿರುವ ರಾಸಾಯನಿಕಗಳ ನಿರ್ದಿಷ್ಟ ಗುಂಪೊಂದನ್ನು ಮೆದುಳು ಸುಸಂಗತವಾಗಿ ಬಿಡುಗಡೆಮಾಡುತ್ತದೆ ಎಂಬುದನ್ನು ನರವಿಜ್ಞಾನದಲ್ಲಿನ ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ.
  • ಆಂಫೆಟಮೀನ್‌ಗಳನ್ನು ಹೋಲುವ ರೀತಿಯಲ್ಲಿಯೇ ವರ್ತಿಸುವ ಈ ರಾಸಾಯನಿಕಗಳು ಮೆದುಳಿನ ಆನಂದ ಕೇಂದ್ರವನ್ನು ಪ್ರಚೋದಿಸುವುದೇ ಅಲ್ಲದೇ ಹೃದಯದ ಬಡಿತವನ್ನು ಹೆಚ್ಚಿಸುವುದು, ಹಸಿವು ಮತ್ತು ನಿದ್ರೆಯನ್ನು ಕಡಿಮೆ ಮಾಡುವುದು ಹಾಗೂ ಉದ್ದೀಪನದ ತೀವ್ರ ಅನುಭವದಂತಹ ಅಡ್ಡಪರಿಣಾಮಗಳಿಗೆ ಕಾರಣವಾಗುತ್ತದೆ. ಈ ಹಂತ ಸಾಮಾನ್ಯವಾಗಿ ಒಂದೂವರೆ ವರ್ಷದಿಂದ ಮೂರು ವರ್ಷಗಳವರೆಗೆ ಇರುತ್ತದೆ ಎಂಬುದನ್ನು ಸಂಶೋಧನೆಗಳು ಸೂಚಿಸಿವೆ.

[೧೦]

  • ಭೋಗಾಪೇಕ್ಷೆ ಮತ್ತು ಆಕರ್ಷಣೆಯ ಎರಡೂ ಹಂತಗಳನ್ನು ತಾತ್ಕಾಲಿಕ ಎಂದು ಪರಿಗಣಿಸಲಾಗಿರುವುದರಿಂದ, ಒಂದು ಸಂಬಂಧ ದೀರ್ಘಕಾಲದವರೆಗೆ ಮುಂದುವರಿಯಬೇಕಾದರೆ ಮೂರನೇ ಹಂತದ ಅಗತ್ಯವಿದೆ. ಬಾಂಧವ್ಯ ಎನ್ನುವುದು ಒಂದು ಬಂಧಕಶಕ್ತಿಯಾಗಿದ್ದು ಅದು ಸಂಬಂಧಗಳನ್ನು ಹಲವು ವರ್ಷಗಳವರೆಗೆ, ಅಷ್ಟೇ ಏಕೆ ದಶಗಳವರೆಗೆ ಮುಂದುವರಿಸಿಕೊಂಡು ಹೋಗುತ್ತದೆ.
  • ಬಾಂಧವ್ಯ ಎನ್ನುವುದು ಸಾಮಾನ್ಯವಾಗಿ ಮದುವೆ ಅಥವಾ ಮಕ್ಕಳು ಎನ್ನುವ ಬದ್ಧತೆಗಳನ್ನು ಆಧರಿಸಿರುತ್ತದೆ ಅಥವಾ ಸಮಾನ ಆಸಕ್ತಿಗಳನ್ನಾಧರಿಸಿದ ಪರಸ್ಪರ ಸ್ನೇಹವನ್ನು ಅವಲಂಬಿಸಿರುತ್ತದೆ. ಅಲ್ಪಾವಧಿಯ ಸಂಬಂಧಗಳು ಹೊಂದಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸಂಬಂಧವನ್ನು ಇದು ಆಕ್ಸಿಟೋಸಿನ್‌ ಮತ್ತು ವ್ಯಾಸೋಪ್ರೆಸ್ಸಿನ್‌ನಂತಹ ರಾಸಾಯನಿಕಗಳ ಉನ್ನತ ಮಟ್ಟಗಳೊಂದಿಗೆ ಹೊಂದಿದೆ.[೧೦]
  • ಜನರು ಮೊದಲು ಪ್ರೀತಿಯಲ್ಲಿ ಬಿದ್ದಾಗ ನರದ ಬೆಳವಣಿಗೆಯ ಅಂಶ(ನರ್ವ್‌ ಗ್ರೋಥ್ ಪ್ಯಾಕ್ಟರ್‌-NGF) ಎಂದು ಕರೆಯಲ್ಪಡುವ ಪ್ರೋಟೀನ್‌ ಕಣಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ; ಆದರೆ ಒಂದು ವರ್ಷದ ಬಳಿಕ ಇವು ಸಹಜ ಸ್ಥಿತಿಗೆ ಮರಳುತ್ತವೆ ಎಂದು ಎನ್‌ಝೋ ಇಮ್ಯಾನ್ಯುಯೆಲ್‌ ಮತ್ತು ಅವರ ಸಹೋದ್ಯೊಗಿಗಳು ವರದಿ ಮಾಡಿದ್ದಾರೆ. [೧೧]

ಮನಃಶ್ಯಾಸ್ತ್ರೀಯ ತಳಹದಿ[ಬದಲಾಯಿಸಿ]

ಅಜ್ಜಿ ಮತ್ತು ಮೊಮ್ಮಗು, ಶ್ರೀಲಂಕ
  • ಪ್ರೀತಿ ಎನ್ನುವುದು ಒಂದು ಸಂವೇದನೆಯ ಮತ್ತು ಸಾಮಾಜಿಕ ವಿದ್ಯಮಾನ ಎಂದು ಮನಶ್ಯಾಸ್ತ್ರ ವರ್ಣಿಸುತ್ತದೆ. ರಾಬರ್ಟ್‌ ಸ್ಟೆರ್ನ್‌ಬರ್ಗ್‌ ಎನ್ನುವ ಮನಶ್ಯಾಸ್ತ್ರಜ್ಞ ಪ್ರೀತಿಯ ತ್ರಿಕೋನ ಸಿದ್ಧಾಂತವೊಂದನ್ನು ರೂಪಿಸಿದ್ದು, ಅನ್ಯೋನ್ಯತೆ, ಬದ್ಧತೆ ಹಾಗೂ ಭಾವೋದ್ರೇಕ ಎಂಬ ಮೂರು ವಿಭಿನ್ನ ಅಂಶಗಳನ್ನು ಪ್ರೀತಿಯು ಒಳಗೊಂಡಿರುತ್ತದೆ ಎಂದು ಸಮರ್ಥಿಸಿದ್ದಾರೆ.
  • ಸಲಿಗೆ ಅಥವಾ ಅನ್ಯೋನ್ಯತೆ ಎನ್ನುವುದು ಇಬ್ಬರು ವ್ಯಕ್ತಿಗಳು ವಿನಿಮಯ ಮಾಡಿಕೊಳ್ಳುವ ದೃಢನಂಬಿಕೆಗಳು ಮತ್ತು ಖಾಸಗಿ ಬದುಕಿನ ರಹಸ್ಯ ವಿಚಾರಗಳ ರೂಪದಲ್ಲಿರುತ್ತದೆ. ಇದು ಸಾಮಾನ್ಯವಾಗಿ ಸ್ನೇಹ ಮತ್ತು ಪ್ರಣಯ ಪ್ರೇಮದಂತಹ ಸಂಬಂಧಗಳಲ್ಲಿ ಕಂಡುಬರುತ್ತದೆ. ಮತ್ತೊಂದೆಡೆ, ಬದ್ಧತೆಯೆನ್ನುವುದು ಸಂಬಂಧವು ಶಾಶ್ವತ ಎನ್ನುವುದರ ಕುರಿತಾದ ನಿರೀಕ್ಷೆಯಾಗಿರುತ್ತದೆ. ಪ್ರೀತಿಯ ಕೊನೆಯ ಮತ್ತು ಅತಿ ಸಾಮಾನ್ಯ ಸ್ವರೂಪವೆಂದರೆ ಲೈಂಗಿಕ ಆಕರ್ಷಣೆ ಮತ್ತು ಭಾವೋದ್ರೇಕ.
  • ಭಾವೋದ್ರಿಕ್ತ ಪ್ರೀತಿಯು ವ್ಯಾಮೋಹದಲ್ಲಷ್ಟೇ ಅಲ್ಲದೇ ಪ್ರಣಯದ ಪ್ರೀತಿಯಲ್ಲಿಯೂ ಕಂಡುಬರುತ್ತದೆ. ಪ್ರೀತಿಯ ಮೂರು ಸ್ವರೂಪಗಳನ್ನೂ ಈ ಮೂರು ಅಂಶಗಳ ಬದಲಾಗುವ ಸಂಯೋಜನೆಗಳಂತೆಯೇ ನೋಡಲಾಗುತ್ತದೆ.ಅಮೆರಿಕದ ಮನಶ್ಯಾಸ್ತ್ರಜ್ಞ ಜಿಕ್‌ ರೂಬಿನ್‌ ಪ್ರೀತಿ ಯನ್ನು ಮನೋಮಾಪನ ಶಾಸ್ತ್ರದಿಂದ ವ್ಯಾಖ್ಯಾನಿಸುವ ಪ್ರಯತ್ನ ನಡೆಸುತ್ತಾರೆ. ಬಾಂಧವ್ಯ, ಆರೈಕೆ ಮತ್ತು ಅನ್ಯೋನ್ಯತೆ ಎನ್ನುವ ಮೂರು ಅಂಶಗಳು ಪ್ರೀತಿಯನ್ನು ರೂಪಿಸುತ್ತವೆ ಎಂದು ಅವನ ಸಂಶೋಧನೆಗಳು ತಿಳಿಸುತ್ತವೆ.[೧೨]

[೧೩]

  • ಧನಾತ್ಮಕ ಮತ್ತು ಋಣಾತ್ಮಕ ಆವೇಶಗಳು ಅಥವಾ ಶಕ್ತಿಗಳು ಪರಸ್ಪರ ಆಕರ್ಷಿಲ್ಪಡುತ್ತವೆ ಎನ್ನುವುದನ್ನು ತೋರಿಸಿಕೊಟ್ಟ ಕೂಲಾಮ್‌ನ ನಿಯಮದಂತಹ ವಿದ್ಯುತ್‌ ಸಿದ್ಧಾಂತಗಳಲ್ಲಿನ ಬೆಳವಣಿಗೆಯನ್ನು ಅನುಸರಿಸಿ, ಮನುಷ್ಯನ ಬದುಕಿನಲ್ಲಿ "ವಿರುದ್ಧ ಗುಣಗಳು ಆಕರ್ಷಿಸಲ್ಪಡುತ್ತವೆ" ಎಂಬ ಹೋಲಿಕೆಯ ವಿಷಯಗಳು ಅಭಿವೃದ್ಧಿಗೊಂಡವು.
  • ಕಳೆದ ಶತಮಾನದುದ್ದಕ್ಕೂ ಕೈಗೊಳ್ಳಲಾದ, ಮನುಷ್ಯನ ಮೈಥುನದ ಸ್ವಭಾವಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಸಾಮಾನ್ಯವಾಗಿ ಇದು ಸತ್ಯವಾಗಿ ಕಂಡಿಲ್ಲ. ಏಕೆಂದರೆ ಗುಣ ಮತ್ತು ವ್ಯಕ್ತಿತ್ವದ ವಿಚಾರಕ್ಕೆ ಬಂದಾಗ, ಜನರು ತಮ್ಮಂತೆಯೇ ಇರುವ ಜನರನ್ನು ಇಷ್ಟಪಡುವ ಪ್ರವೃತ್ತಿ ಹೊಂದಿರುತ್ತಾರೆ. ಆದರೂ, ರೋಗನಿರೋಧಕ ವ್ಯವಸ್ಥೆಗಳಂತಹ ಕೆಲವೊಂದು ಅಸಹಜ ಮತ್ತು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮನುಷ್ಯರು ಇತರರಿಗೆ ಎಂದರೆ ತಮಗಿಂತ ಭಿನ್ನವಾಗಿರುವ ವ್ಯಕ್ತಿಗಳಿಗೆ (ಉದಾಹರಣೆಗೆ, ಲಂಬಕೋನೀಯ ರೋಗನಿರೋಧಕ ವ್ಯವಸ್ಥೆಯೊಂದಿಗಿನ ವ್ಯಕ್ತಿಗಳು) ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂದು ಕಂಡುಬರುತ್ತದೆ.
  • ಇಂತಹ ಸಂದರ್ಭಗಳಲ್ಲಿ ಹುಟ್ಟುವ ಮಗು ಈ ಎರಡೂ ಸೃಷ್ಟಿಗಳ ಉತ್ತಮಿಕೆಯನ್ನು ಪಡೆದಿರುತ್ತದೆ.[೧೪]ಇತ್ತೀಚಿನ ವರ್ಷಗಳಲ್ಲಿ, ಮನುಷ್ಯ ಸಂಬಂಧದ ಕುರಿತಾದ ವಿವಿಧ ಸಿದ್ಧಾಂತಗಳು ರೂಪುಗೊಂಡಿವೆ ಈ ಸಿದ್ಧಾಂತಗಳು ಒಲವು, ಬಂಧನಗಳು, ಬಾಂಧವ್ಯಗಳು ಮತ್ತು ವೈವಾಹಿಕ ಸಂಬಂಧಗಳ ಕುರಿತು ವರ್ಣಿಸಿವೆ.
  • ಕೆಲವು ಪಾಶ್ಚಿಮಾತ್ಯ ಪ್ರಮಾಣಗ್ರಂಥಗಳು ಪರೋಪಕಾರಿ ಮತ್ತು ಆತ್ಮರತಿ ಎಂಬ ಎರಡು ಮುಖ್ಯ ಘಟಕಗಳಾಗಿ ವಿಂಗಡಿಸಲ್ಪಡುತ್ತವೆ. ಅನ್ವಯಿಕ ಮನಶ್ಯಾಸ್ತ್ರ ಕ್ಷೇತ್ರದಲ್ಲಿ ಪ್ರೀತಿ ಮತ್ತು ಕೆಡಕುಗಳ ವ್ಯಾಖ್ಯಾನಗಳನ್ನು ಪರಿಶೋಧಿಸಿದ ಸ್ಕಾಟ್‌ ಪೆಕ್‌ನ ಕೃತಿಗಳಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು. ಪ್ರೀತಿ ಎನ್ನುವುದು "ಮತ್ತೊಬ್ಬರ ಉದಾತ್ತತೆಯ ಬೆಳವಣಿಗೆಗೆ ತೋರುವ ಕಾಳಜಿ" ಹಾಗೂ ಸರಳ ಸ್ವಾರಾಧನೆಯ ಸಂಯೋಜನೆ ಎಂದು ಪೆಕ್‌ ಸಮರ್ಥಿಸಿಕೊಳ್ಳುತ್ತಾನೆ.[೧೫] ಒಟ್ಟಾರೆಯಾಗಿ ಹೇಳುವುದಾದರೆ, ಪ್ರೀತಿ ಎಂಬುದು ಬರೀ ಭಾವನೆ ಮಾತ್ರವೇ ಅಲ್ಲ, ಅದೊಂದು ಚಟುವಟಿಕೆ ಕೂಡಾ.

ವೈಜ್ಞಾನಿಕ ಮಾದರಿಗಳ ಹೋಲಿಕೆ[ಬದಲಾಯಿಸಿ]

  • ಪ್ರೀತಿಯ ಜೈವಿಕ ಮಾದರಿಗಳು ಪ್ರೀತಿಯನ್ನು ಹಸಿವು ಮತ್ತು ಬಾಯಾರಿಕೆಯಂತೆಯೇ ಸಸ್ತನಿಗಳ ಒಂದು ಪ್ರವೃತ್ತಿ ಅಥವಾ ಪ್ರಚೋದನೆಯಂತೆ ನೋಡಲು ಬಯಸುತ್ತವೆ.[೯] ಮನಶ್ಯಾಸ್ತ್ರವು ಪ್ರೀತಿಯನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಕ್ಕಿಂತ ಮಿಗಿಲಾಗಿ ನೋಡುತ್ತದೆ. ಈ ಎರಡೂ ದೃಷ್ಟಿಕೋನಗಳಲ್ಲಿ ಬಹುಶಃ ಸತ್ಯಾಂಶಗಳಿರಬಹುದು.
  • ಪ್ರೀತಿಯು ನಿಸ್ಸಂಶಯವಾಗಿ ಹಾರ್ಮೋನ್‌ಗಳು (ಉದಾಹರಣೆಗೆ, ಆಕ್ಸಿಟೋಸಿನ್‌), ನ್ಯೂರೋಟ್ರೋಫಿನ್‌ಗಳು (ಉದಾಹರಣೆಗೆ, NGF) ಮತ್ತು ಫೆರೋಮೋನ್‌‌ಗಳಿಂದ ಪ್ರಭಾವಿತವಾಗಿರುತ್ತದೆ ಹಾಗೂ ಪ್ರೀತಿಯಲ್ಲಿ ಸಿಲುಕಿರುವ ಜನ ಹೇಗೆ ಯೋಚಿಸುತ್ತಾರೆ ಮತ್ತು ವರ್ತಿಸುತ್ತಾರೆ ಎಂಬುದು ಪ್ರೀತಿಯ ಬಗೆಗೆ ಅವರಿಗಿರುವ ಪರಿಕಲ್ಪನೆಯಿಂದ ಪ್ರಭಾವಿತಗೊಂಡಿರುತ್ತದೆ.
  • ಜೀವಶಾಸ್ತ್ರದಲ್ಲಿನ ರೂಢಿಗತ ದೃಷ್ಟಿಯ ಪ್ರಕಾರ ಪ್ರೀತಿಯಲ್ಲಿ ಎರಡು ಮುಖ್ಯ ಪ್ರೇರಕಶಕ್ತಿಗಳಿರುತ್ತವೆ. ಅವುಗಳೆಂದರೆ, ಲೈಂಗಿಕ ಆಕರ್ಷಣೆ ಮತ್ತು ಬಾಂಧವ್ಯ.ವಯಸ್ಕರ ನಡುವಿನ ಬಾಂಧವ್ಯ ಅದೇ ತತ್ವಗಳ ಮೇಲೆ ಕಾರ್ಯ ನಿರ್ವಹಿಸುತ್ತದೆಯೆಂದು ಭಾವಿಸಲಾಗಿದ್ದು, ಅದು ಶಿಶು ತನ್ನ ತಾಯಿಗೆ ಹೊಂದಿಕೊಂಡಿರುವಂತೆ ಮಾಡುತ್ತದೆ.
  • ಸಾಂಪ್ರದಾಯಿಕ ಮನಶ್ಯಾಸ್ತ್ರೀಯ ದೃಷ್ಟಿಕೋನವು ಪ್ರೀತಿಯನ್ನು ಒಡನಾಟದ ಪ್ರೀತಿ ಮತ್ತು ಭಾವೋದ್ರಿಕ್ತ ಪ್ರೀತಿಯ ಮಿಶ್ರಣವಾಗಿ ನೋಡುತ್ತದೆ.ಭಾವೋದ್ರಿಕ್ತ ಪ್ರೀತಿಯು ತೀವ್ರ ಹಾತೊರೆಯುವ ಸ್ವಭಾವವನ್ನು ಹೊಂದಿದ್ದು, ಶಾರೀರಿಕ ಪ್ರಚೋದನೆಯು (ಉಸಿರಾಟದ ಶೀಘ್ರತೆ, ತೀವ್ರ ಹೃದಯದ ಬಡಿತ) ಅನೇಕಸಲ ಅದರ ಜೊತೆಗೂಡುತ್ತದೆ.
  • ಒಡನಾಟದ ಪ್ರೀತಿಯು ಒಲವಷ್ಟೇ ಅಲ್ಲದೇ ಅನ್ಯೋನ್ಯತೆಯ ಒಂದು ಅನುಭವವಾಗಿದ್ದು ಅದರ ಜೊತೆ ಶಾರೀರಿಕ ಪ್ರಚೋದನೆಯಿರುವುದಿಲ್ಲ. ಪ್ರೀತಿಯ ಮೋಹಪರವಶತೆಗೆ ಸಿಲುಕಿರುವವರ ಮೆದುಳಿನ ಪರೀಕ್ಷೆಗಳು ಮನೋರೋಗಿಗಳ ಮೆದುಳಿನ ಲಕ್ಷಣಗಳನ್ನು ಹೋಲುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
  • ಹಸಿವು, ಬಾಯಾರಿಕೆ ಮತ್ತು ಮಾದಕವಸ್ತುಗಳ ಹಂಬಲಿಕೆಗಳು ಮೆದುಳಿನಲ್ಲಿ ಚಟುವಟಿಕೆಯನ್ನು ಹುಟ್ಟುಹಾಕುವ ಪ್ರದೇಶದಲ್ಲೇ ಪ್ರೀತಿಯೂ ಕೂಡ ಚಟುವಟಿಕೆಯನ್ನು ಹುಟ್ಟುಹಾಕುತ್ತದೆ. ಹಾಗಾಗಿ ಹೊಸ ಪ್ರೀತಿ ಮಾನಸಿಕವಾಗಿರುವುದಕ್ಕಿಂತ ಹೆಚ್ಚು ದೈಹಿಕವಾಗಿರುವ ಸಾಧ್ಯತೆಗಳಿವೆ.ಕಾಲಾನಂತರದಲ್ಲಿ ಪ್ರೀತಿಯೆಡೆಗಿನ ಈ ಸ್ಪಂದನೆಯು ಪಕ್ವವಾಗಿ, ಮೆದುಳಿನ ವಿವಿಧ ಪ್ರದೇಶಗಳು, ಮುಖ್ಯವಾಗಿ ದೀರ್ಘಾವಧಿಯ ಬದ್ಧತೆಗಳನ್ನು ಒಳಗೊಂಡ ಪ್ರದೇಶಗಳು ಕ್ರಿಯಾಶೀಲಗೊಳ್ಳುತ್ತವೆ.

ಸಾಂಸ್ಕೃತಿಕ ದೃಷ್ಟಿಕೋನಗಳು[ಬದಲಾಯಿಸಿ]

ಪರ್ಷಿಯನ್‌[ಬದಲಾಯಿಸಿ]

ಈವನ್ ಆಫ್ಟರ್ ಆಲ್ ದಿಸ್ ಟೈಮ್‌

ದಿ ಸನ್ ನೆವರ್ ಸೇಸ್ ಟು ದಿ ಅರ್ಥ್, "ಯು ಓ ಮಿ."
ಲುಕ್‌ ವಾಟ್‌ ಹ್ಯಾಪನ್ಸ್‌ ವಿತ್ ಎ ಲವ್ ಲೈಕ್‌ ದಟ್‌

!'

ಇಟ್‌ ಲೈಟ್ಸ್ ದಿ ಹೋಲ್ ಸ್ಕೈ. (ಹಫೀಜ್‌)

ರೂಮಿ, ಹಫೀಜ್‌ ಮತ್ತು ಸಾದಿ ಇವರು ಪರ್ಷಿಯನ್‌ ಭಾಷೆ ಮತ್ತು ಸಂಸ್ಕೃತಿ ಕೊಡುಗೆಯಾಗಿ ನೀಡಿರುವ ಭಾವೋದ್ರೇಕ ಮತ್ತು ಪ್ರೀತಿಯ ಹೆಗ್ಗುರುತುಗಳು. ಎಷ್ಘ್‌‌‌ ಎಂಬುದು ಪ್ರೀತಿಗಿರುವ ಪರ್ಷಿಯನ್‌ ಪದವಾಗಿದ್ದು, ಇದು ಅರೇಬಿಕ್‌ನ ಇಷ್ಕ್‌ ನಿಂದ ವ್ಯುತ್ಪತ್ತಿ ಹೊಂದಿದೆ. ಪರ್ಷಿಯನ್‌ ಸಂಸ್ಕೃತಿಯಲ್ಲಿ ಪ್ರತಿಯೊಂದೂ ಪ್ರೀತಿಯಿಂದ ಆವರಿಸಲ್ಪಟ್ಟಿದೆ ಮತ್ತು ಎಲ್ಲವೂ ಪ್ರೀತಿಗೋಸ್ಕರವೇ ಇದೆ; ಸ್ನೇಹಿತರು ಮತ್ತು ಕುಟುಂಬ, ಗಂಡ ಮತ್ತು ಹೆಂಡತಿಯರನ್ನು ಪ್ರೀತಿಸುವುದರಿಂದ ಇದು ಆರಂಭವಾಗಿ, ಅಂತಿಮವಾಗಿ ಜೀವನದ ಅಂತಿಮ ಗುರಿಯಾದ ದೈವಿಕ ಪ್ರೀತಿಯವರೆಗೂ ತಲುಪುತ್ತದೆ. ಏಳು ಶತಮಾನಗಳಿಗೂ ಹಿಂದೆ ಸಾದಿ ಹೀಗೆ ಬರೆಯುತ್ತಾರೆ:

ದಿ ಚಿಲ್ಡ್ರನ್ ಆಫ್ ಆಡಮ್ ಆರ್ ಲಿಂಬ್ಸ್ ಆಫ್ ಒನ್ ಬಾಡಿ
ಹ್ಯಾವಿಂಗ್ ಬೀನ್ ಕ್ರಿಯೇಟೆಡ್ ಆಫ್ ಒನ್ ಎಸೆನ್ಸ್.
ವೆನ್ ದಿ ಕ್ಯಲಾಮಿಟಿ ಆಫ್ ಟೈಮ್ ಅಫ್ಲಿಕ್ಟ್ಸ್ ಒನ್ ಲಿಂಬ್‌
ದಿ ಅದರ್ ಲಿಂಬ್ಸ್‌ ಕೆನಾಟ್ ರಿಮೈನ್ ಅಟ್ ರೆಸ್ಟ್‌
ಇಫ್ ಯು ಹ್ಯಾವ್ ನೋ ಸಿಂಪಥಿ ಫಾರ್ ದಿ ಟ್ರಬಲ್ಸ್ ಆಫ್ ಅದರ್ಸ್
ಯೂ ಆರ್ ನಾಟ್ ವರ್ದಿ ಟು ಬಿ ಕಾಲ್ಡ್‌ ಬೈ ದಿ ನೇಮ್ ಆಫ್ "ಮ್ಯಾನ್."

ಚೀನೀ ಮತ್ತು ಇತರೆ ಸಿನಿಕ್‌ ಸಂಸ್ಕೃತಿಗಳು[ಬದಲಾಯಿಸಿ]

(愛) ಎಂಬ ಪ್ರೀತಿಯ ಸಾಂಪ್ರದಾಯಿಕ ಚೀನೀ ಪದವು, ಮಹತ್ತರವಾದ ಭಾವನೆಯನ್ನು ತೋರ್ಪಡಿಸುವ "ಸ್ವೀಕಾರ", "ಸಂವೇದನೆ" ಅಥವಾ "ಗ್ರಹಿಕೆ"ಯ ಒಳಗೆ ಹೃದಯವನ್ನು (ಮಧ್ಯದಲ್ಲಿ) ಒಳಗೊಂಡಿದೆ.

ಸಮಕಾಲೀನ ಚೀನೀ ಭಾಷೆ ಮತ್ತು ಸಂಸ್ಕೃತಿಯಲ್ಲಿ ಪ್ರೀತಿ ಎಂಬ ಪರಿಕಲ್ಪನೆಯನ್ನು ಅಭಿವ್ಯಕ್ತಿಸಲು ಹಲವು ಪರಿಭಾಷೆಗಳು ಮತ್ತು ಮೂಲಪದಗಳು ಬಳಕೆಯಲ್ಲಿವೆ.

  • ಇದು ಕ್ವಿಂಗ್‌ ಚಕ್ರವರ್ತಿಯ ಮೊದಲ ಹೆಸರಾಗಿತ್ತು.
  • (愛) ಎನ್ನುವುದು ಕ್ರಿಯಾಪದವಾಗಿ (ಉದಾಹರಣೆಗೆ ವೋ ಐ ನಿ , "ನಾನು ನಿನ್ನ ಪ್ರೀತಿಸುತ್ತೇನೆ") ಅಥವಾ ನಾಮಪದವಾಗಿ ಅದರಲ್ಲೂ ವಿಶೇಷವಾಗಿ ಐಕ್ವಿಂಗ್‌ ನಲ್ಲಿ "ಪ್ರೀತಿ" ಅಥವಾ "ಪ್ರಣಯ"ವಾಗಿ ಬಳಕೆಯಾಗುತ್ತದೆ.

ಚೀನಾದಲ್ಲಿ 1949ರಿಂದ "ಸಂಗಾತಿ"ಯನ್ನು ("ಹೆಂಡತಿ" ಮತ್ತು "ಗಂಡ"ನಿಗೆ ಪ್ರತ್ಯೇಕ ಪರಿಭಾಷೆಗಳಿವೆ, ಮೂಲತಃ ಇವಕ್ಕೆ ಅಷ್ಟು ಮಹತ್ವ ನೀಡಿರಲಿಲ್ಲ.) ಸೂಚಿಸಲು ಬಳಸುತ್ತಿರುವ ಪದಗಳಲ್ಲಿ ಐರೆನ್‌ (愛人, ಮೂಲತಃ "ಪ್ರೇಮಿ" ಎಂದರ್ಥ ಅಥವಾ ಮತ್ತಷ್ಟು ಅಕ್ಷರಶಃ ಹೇಳುವುದಾದರೆ, "ಒಲುಮೆಯ ವ್ಯಕ್ತಿ") ಪ್ರಧಾನ ಪದವಾಗಿದೆ. ಈ ಪದ ಒಮ್ಮೆ ನೇತ್ಯಾತ್ಮಕ ವ್ಯಂಗ್ಯಾರ್ಥ ಪಡೆದುಕೊಂಡಿದ್ದು, ಅದು ತೈವಾನ್‌ನ ಹಲವು ಭಾಷೆಗಳಲ್ಲಿ ಈಗಲೂ ಉಳಿದುಬಂದಿದೆ.

  • ಲಿಯಾನ್‌‌ (戀) ಎನ್ನುವ ಪದ ಸಾಮಾನ್ಯವಾಗಿ ಒಂಟಿಯಾಗಿ ಬಳಕೆಯಾಗುವುದಿಲ್ಲ ಬದಲಿಗೆ "ಪ್ರೀತಿಯಲ್ಲಿ ದೇವರು"(談戀愛, ಟಾನ್‌ ಲಿಯಾನ್‌'ಐ —ಇದು ಅನ್ನೂ ಒಳಗೊಂಡಿದೆ), "ಪ್ರೇಮಿ" (戀人, ಲಿಯಾನ್‌ರೆನ್‌ ) ಅಥವಾ "ಸಲಿಂಗಕಾಮ" (同性戀, ಟಾಂಗ್ಸಿಂಗ್‌ಲಿಯಾನ್‌ ) ಎನ್ನುವಂಥ ಪರಿಭಾಷೆಗಳ ಭಾಗವಾಗಿ ಬಳಕೆಯಾಗುತ್ತದೆ.
  • ಕ್ವಿಂಗ್‌ (情) ಎಂಬ ಪದಕ್ಕೆ ಸಾಮಾನ್ಯವಾಗಿ "ಸಂವೇದನೆ" ಅಥವ "ಭಾವನೆ" ಎಂಬ ಅರ್ಥಗಳಿವೆ, ಇದು ಹಲವುವೇಳೆ ಬೇರೆ ಬೇರೆ ಸನ್ನಿವೇಶಗಳಲ್ಲಿ "ಪ್ರೀತಿ" ಎನ್ನುವ ಅರ್ಥವನ್ನು ಸೂಚಿಸುತ್ತದೆ. ಇದು ಐಕ್ವಿಂಗ್‌( 愛情) ಎಂಬ ಪದದಲ್ಲಿ ಅಡಕಗೊಂಡಿದೆ; "ಪ್ರೇಮಿ" (情人) ಎನ್ನುವುದಕ್ಕೆ ಕ್ವಿನ್‌ಗ್ರೆನ್‌ ಎನ್ನುವ ಪದ ಬಳಕೆಯಾಗುತ್ತದೆ.
  • ಕನ್‌ಫ್ಯೂಷಿಯಸ್‌ ಮತ‌ದಲ್ಲಿ ಲಿಯಾನ್‌ ಎಂದರೆ ಸದ್ಗುಣದ ಹಿತಚಿಂತಕ ಪ್ರೀತಿ ಎಂದರ್ಥ. ಲಿಯಾನ್‌ ಮನುಷ್ಯರೆಲ್ಲರಿಂದ ಅನುಸರಿಸಲ್ಪಡಬೇಕಷ್ಟೇ ಅಲ್ಲದೆ ಅದು ನೈತಿಕ ಬದುಕನ್ನು ಬಿಂಬಿಸಬೇಕು. ಮೋಜಿ ಎನ್ನುವ ಚೀನೀ ತತ್ವಜ್ಞಾನಿ ಕನ್‌ಫ್ಯೂಷಿಯಸ್‌ ಮತದ ಲಿಯಾನ್‌ ಎಂಬುದಕ್ಕೆ ಪ್ರತಿಕ್ರಿಯೆಯಾಗಿ (愛) ಎನ್ನುವ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದನು.
  • ಮೋಹಿಸಮ್‌ನಲ್ಲಿ ಎನ್ನುವುದು ಇಡೀ ಜೀವಜಗತ್ತಿಗೆ ತೋರುವ, ಪ್ರತಿಯಾಗಿ ಏನನ್ನೂ ಬಯಸದ ಸಾರ್ವತ್ರಿಕ ಪ್ರೀತಿ. ಇದು ಕೇವಲ ಸ್ನೇಹಿತರು ಅಥವಾ ಕುಟುಂಬ ವರ್ಗಕ್ಕೆ ಮಾತ್ರ ತೋರುವ ಸೀಮಿತ ಪ್ರೀತಿಯಲ್ಲ. ಅತಿವರ್ತನೆ ಮತ್ತು ಆಕ್ರಮಣಕಾರಿ ಯುದ್ಧಗಳು ಗೆ ಹಾನಿಕಾರಕ. ಮೋಜಿಯ ಆಲೋಚನೆ ಪ್ರಭಾವಶಾಲಿಯಾಗಿದ್ದರೂ, ಕನ್‌ಫ್ಯೂಷಿಯನ್‌ ಲಿಯಾನ್‌ ಎಂಬುದು ಬಹುತೇಕ ಚೀನಿಯರ ಪ್ರೀತಿಯ ಗ್ರಹಿಕೆಯಾಗಿದೆ.
  • ಗಾನ್‌ಕ್ವಿಂಗ್‌ (感情) ಎನ್ನುವುದು ತಾದಾತ್ಮ್ಯ ಅನುಭೂತಿಗೆ ಅಸ್ಪಷ್ಟವಾಗಿ ಹೋಲುವ ಸಂಬಂಧವೊಂದರ "ಸಂವೇದನೆ". ಇನ್ನೊಬ್ಬರಿಗೆ ನೆರವಾಗುವ ಅಥವಾ ಇನ್ನೊಬ್ಬರಿಗಾಗಿ ಕೆಲಸ ಮಾಡುವ ಮೂಲಕ ಮತ್ತು ಮತ್ತೋರ್ವ ವ್ಯಕ್ತಿ ಅಥವಾ ಯಾವುದೇ ವಸ್ತುವಿನ ಕಡೆಗೆ ಭಾವನಾತ್ಮಕ ಸಂಬಂಧವನ್ನು ಹೊಂದುವ ಮೂಲಕ ಸಾಧಿಸುವ ಉತ್ತಮ ಗಾನ್‌ಕ್ವಿಂಗ್ ಅನ್ನು ನಿರ್ಮಿಸುವುದರಿಂದ ಓರ್ವ ವ್ಯಕ್ತಿಯು ಪ್ರೀತಿಯನ್ನು ಅಭಿವ್ಯಕ್ತಿಸುತ್ತಾನೆ.
  • ಯಾನ್‌ಫೆನ್‌ (緣份) ಎನ್ನುವುದು ಪರಿಮಿತ ವಿಧಿನಿಯಮಗಳನ್ನು ಸಂಪರ್ಕಿಸುವ ಪದವಾಗಿದೆ. ಅರ್ಥಪೂರ್ಣ ಸಂಬಂಧವೊಂದು ಹಲವು ವೇಳೆ ಪ್ರಬಲ ಯಾನ್‌ಫೆನ್‌ ನ ಅವಲಂಬಿಯಂತೆ ಭಾವಿಸಲ್ಪಡುತ್ತದೆ. ಆಕಸ್ಮಿಕ ಶೋಧನಾಶಕ್ತಿಯನ್ನು ಇದು ತುಂಬಾ ಹೋಲುತ್ತದೆ. ಇಂಗ್ಲಿಷ್‌ನಲ್ಲಿ, "ದೆ ವರ್‌ ಮೇಡ್‌ ಫಾರ್ ಈಚ್‌ ಅದರ್‌", "ಫೇಟ್‌" ಆರ್ "ಡೆಸ್ಟಿನಿ" ಎಂಬ ಇದೇ ರೀತಿಯ ಕಲ್ಪನೀಕರಣವಿದೆ.
  • "ಆರಂಭಿಕ ಪ್ರೀತಿ" ಎಂಬ ಅಕ್ಷರಶಃ ಅರ್ಥ ಹೊಂದಿರುವ ಜಾವೋಲಿಯನ್‌ (ಸರಳೀಕೃತ: 早恋, ಸಾಂಪ್ರದಾಯಿಕ: 早戀, ಪಿನ್‌ಯಿನ್‌: zǎoliàn) ಪ್ರಣಯ ಅನುಭೂತಿಗಳಿಗಾಗಿ ಅಥವಾ ಮಕ್ಕಳ ಅಥವಾ ವಯಸ್ಕರ ನಡುವಿನ ಬಾಂಧವ್ಯಗಳಿಗಾಗಿ ಪದೇ ಪದೇ ಬಳಕೆಯಾಗುತ್ತಿರುವ ಒಂದು ಸಮಕಾಲೀನ ಪಾರಿಭಾಷಿಕ ಶಬ್ದ.
  • ಜಾವೋಲಿನ್ ಎಂಬ ಪರಿಕಲ್ಪನೆ ಹದಿಹರೆಯದ ಪ್ರಿಯಕರ ಅಥವಾ ಪ್ರಿಯತಮೆಯರ ನಡುವಿನ ಸಂಬಂಧಗಳನ್ನಷ್ಟೇ ಅಲ್ಲದೇ, ಬಾಲ್ಯ ಅಥವಾ ಹದಿಹರೆಯದ "ಅಲ್ಪಕಾಲದ ವ್ಯಾಮೋಹಗಳನ್ನು" ವರ್ಣಿಸುತ್ತದೆ. ಸಮಕಾಲೀನ ಚೀನಿ ಸಂಸ್ಕೃತಿಯಲ್ಲಿರುವ ಪ್ರಚಲಿತ ನಂಬಿಕೆಯನ್ನು ಈ ಪರಿಕಲ್ಪನೆ ಪ್ರಮುಖವಾಗಿ ಸೂಚಿಸುತ್ತದೆ.
  • ಇದರ ಪ್ರಕಾರ, ಯುವಜನತೆ ಅವರ ಅಧ್ಯಯನದ ಬೇಡಿಕೆಗಳ ಕಾರಣದಿಂದ (ವಿಶೇಷವಾಗಿ ಚೀನಾದ ಅತ್ಯುನ್ನತ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಇದು ಸತ್ಯ) ಮತ್ತು ತಮ್ಮ ಭವಿಷ್ಯದ ಯಶಸ್ಸಿನ ಅವಕಾಶಗಳು ಅಪಾಯಕ್ಕೆ ಸಿಲುಕದಂತೆ ಕಾಪಾಡಲು ಪ್ರಣಯ ಸಂಬಂಧಗಳನ್ನು ರೂಪಿಸಿಕೊಳ್ಳುವಂತಿಲ್ಲ. ಚೀನೀ ವೃತ್ತಪತ್ರಿಕೆಗಳಲ್ಲಿ ಮತ್ತು ಇತರೆ ಮಾಧ್ಯಮಗಳಲ್ಲಿ ಈ ವಿಚಾರದ ಪ್ರಸ್ತುತತೆ ಮತ್ತು ಪೋಷಕರ ಗಾಬರಿಗಳು ಹಾಗೂ ವಿದ್ಯಾರ್ಥಿಗಳಿಗೆ ಇದರ ಗ್ರಹೀತ ಅಪಾಯಗಳ ಕುರಿತು ವಿವರವಾದ ವರದಿಗಳು ಪ್ರಕಟವಾಗಿವೆ.

ಜಪಾನಿಯರು[ಬದಲಾಯಿಸಿ]

  • ಜಪಾನಿಯರ ಬೌದ್ಧ ಧರ್ಮದಲ್ಲಿ (愛) ಎನ್ನುವುದು ಕಾಳಜಿಯುಳ್ಳ ಭಾವೋದ್ರಿಕ್ತ ಪ್ರೀತಿ ಮತ್ತು ಒಂದು ಮೂಲಭೂತ ಬಯಕೆ. ಇದು ಸ್ವಾರ್ಥದ ಕಡೆಗೆ ಬೆಳೆಯಬಹುದು ಅಥವಾ ನಿಸ್ವಾರ್ಥತೆ ಹಾಗೂ ಜ್ಞಾನೋದಯದ ಕಡೆಗೆ ಬೆಳೆಯಬಹುದು.ಆಮೇ (甘え) ಎಂಬ ಜಪಾನಿಯರ ಪದದ ಅರ್ಥ "ಪ್ರಸನ್ನಗೊಳಿಸುವ ಅವಲಂಬನೆ' ಎಂದಾಗಿದ್ದು, ಇದು ಜಪಾನಿನ ಶಿಶುಪಾಲನಾ ಸಂಸ್ಕೃತಿಯ ಭಾಗವಾಗಿದೆ.
  • ಜಪಾನಿನ ತಾಯಿಯರು ತಮ್ಮ ಮಕ್ಕಳನ್ನು ತಬ್ಬಿಕೊಳ್ಳುವುದು ಮತ್ತು ಅವರ ಆಸೆಗಳನ್ನು ಪೂರೈಸುವುದು ನಿರೀಕ್ಷೆಯಾಗಿರುತ್ತದೆ. ಅದೇ ರೀತಿ ಮಕ್ಕಳು ತಮ್ಮ ತಾಯಿಯರೊಂದಿಗೆ ಅಂಟಿಕೊಂಡಿರುವುದು ಮತ್ತು ಅವರ ಸೇವೆ ಮಾಡುವ ಮೂಲಕ ತಾಯಿಯರಿಗೆ ಪ್ರತಿಫಲ ನೀಡುವುದನ್ನು ನಿರೀಕ್ಷಿಸಲಾಗಿದೆ. ನಂತರದ ಬದುಕಿನಲ್ಲಿ ಜಪಾನಿಯರ ಸಾಮಾಜಿಕ ವರ್ತನೆಯು ತಾಯಿ-ಮಗುವಿನ ನಡುವಿನ ಆಮೇ ಆಧಾರದ ಮೇಲೆ ರೂಪುಗೊಳ್ಳುತ್ತವೆ ಎಂದು ಕೆಲವು ಸಮಾಜಶಾಸ್ತ್ರಜ್ಞರು ಸೂಚಿಸಿದ್ದಾರೆ.

ಪ್ರಾಚೀನ ಗ್ರೀಕ್‌[ಬದಲಾಯಿಸಿ]

  • ಪ್ರೀತಿ ಎನ್ನುವ ಪದ ಬಳಕೆಯಾಗುವ ಹಲವು ವಿಭಿನ್ನ ಸಂವೇದನೆಗಳನ್ನು ಗ್ರೀಕ್‌ ವಿಂಗಡಿಸುತ್ತದೆ. ಉದಾಹರಣೆಗೆ, ‌ಫಿಲಿಯಾ , ಎರೋಸ್‌ , ಅಗಾಪೆ , ಸ್ಟ್ರೋರ್ಜ್‌ ಮತ್ತು ಕ್ಸೇನಿಯಾ ಎಂಬ ಪದಗಳನ್ನು ಪ್ರಾಚೀನ ಗ್ರೀಕ್ ಹೊಂದಿದೆ.
  • ಆದರೆ ಗ್ರೀಕ್‌ನಲ್ಲಿ (ಬೇರೆ ಹಲವು ಭಾಷೆಗಳಲ್ಲಿರುವಂತೆ), ಈ ಪದಗಳ ಅರ್ಥವನ್ನು ಸಂಪೂರ್ಣವಾಗಿ ಪ್ರತ್ಯೇಕಿಸುವುದು ಐತಿಹಾಸಿಕವಾಗಿ ಅತ್ಯಂತ ಕಷ್ಟಕರವಾಗಿ ಮಾರ್ಪಟ್ಟಿದೆ. ಇದೇ ವೇಳೆ, ಬೈಬಲ್‌ನ ಪ್ರಾಚೀನ ಗ್ರೀಕ್ ಬರಹವು ಅಗಾಪೋ ಎಂಬ ಕ್ರಿಯಾಪದವು ಫಿಲಿಯೋ ಎಂಬ ಪದವು ಹೊಂದಿರುವ ಅರ್ಥವನ್ನೇ ಹೊಂದಿರುವ ಉದಾಹರಣೆಗಳನ್ನು ಒಳಗೊಂಡಿದೆ.
  • ಅಗಾಪೆ (ἀγάπηagápē ) ಎಂದರೆ ಆಧುನಿಕ ಗ್ರೀಕ್‌ನಲ್ಲಿ ಪ್ರೀತಿ ಎಂದರ್ಥ. ಎಸ್'ಅಗಾಪೋ ಎಂಬ ಪಾರಿಭಾಷಿಕ ಪದಕ್ಕೆ ಗ್ರೀಕ್‌ನಲ್ಲಿ ನಾನು ನಿನ್ನ ಪ್ರೀತಿಸುತ್ತೇನೆ ಎಂದರ್ಥ. ಅಗಾಪೋ ಎನ್ನುವ ಪದ ನಾನು ಪ್ರೀತಿಸುತ್ತೇನೆ ಎಂಬ ಕ್ರಿಯಾಪದ.ಎರೋಸ್‌ ಎಂಬ ಪದ ಸೂಚಿಸುವ ದೈಹಿಕ ಆಕರ್ಷಣೆಗಿಂತ, ಅಗಾಪೆ ಎನ್ನುವ ಪದ ಸಾಮಾನ್ಯವಾಗಿ "ಶುದ್ಧ", ಆದರ್ಶ ಪ್ರೀತಿಯನ್ನು ಸೂಚಿಸುತ್ತದೆ.
  • ಆದರೆ ಎರೋಸ್‌ ಪದ ಸೂಚಿಸುವ ಅರ್ಥದಲ್ಲಿ ಅಗಾಪೆ ಬಳಕೆಯಾದ ಕೆಲವು ಉದಾಹರಣೆಗಳು ಸಿಗುತ್ತವೆ. ಇದು "ಆತ್ಮದ ಪ್ರೀತಿ" ಎಂಬರ್ಥದಲ್ಲೂ ಅನುವಾದವಾಗಿದೆ.

ಎರೋಸ್‌ (ἔρως érōs ) ಎಂದರೆ ಇಂದ್ರಿಯ ಅಪೇಕ್ಷೆ ಮತ್ತು ಹಾತೊರೆಯುವ ಗುಣ ಹೊಂದಿರುವ ಭಾವೋದ್ರಿಕ್ತ ಪ್ರೀತಿ‌.

  • ಗ್ರೀಕ್‌ ಪದ ಎರೋಟ ಎಂಬುದಕ್ಕೆ ಪ್ರೀತಿಯಲ್ಲಿ ಎಂಬರ್ಥವಿದೆ. ತತ್ವಜ್ಞಾನಿ ಪ್ಲೇಟೊ ತನ್ನದೇ ಸ್ವಂತ ವ್ಯಾಖ್ಯಾನವನ್ನು ಪರಿಷ್ಕರಿಸಿದ್ದಾರೆ. ಎರೋಸ್‌ ಎಂಬುದು ಓರ್ವ ವ್ಯಕ್ತಿಯ ಕುರಿತಾದ ಆರಂಭಿಕ ಭಾವನೆಯಾಗಿ ರುತ್ತಾದರೂ, ಚಿಂತನೆಯಾಗುತ್ತಾ ಹೋದಂತೆ ಇದು ಅದೇ ವ್ಯಕ್ತಿಯೊಳಗೆ ಕಂಡುಕೊಳ್ಳುವ ಸೌಂದರ್ಯದ ಗುಣಗ್ರಹಣವಾಗುತ್ತದೆ ಅಥವಾ ಕೆಲವೊಮ್ಮೆ ಸ್ವತಃ ಸೌಂದರ್ಯವನ್ನೇ ಮೆಚ್ಚಿಕೊಳ್ಳುವುದೂ ಆಗುತ್ತದೆ.
  • ಸೌಂದರ್ಯದ ಅರಿವನ್ನು ಪುನರ್‌ಮನನ ಮಾಡಿಕೊಳ್ಳುವಲ್ಲಿ ಎರೋಸ್‌ ಆತ್ಮಕ್ಕೆ ಸಹಕರಿಸುತ್ತದೆಯಷ್ಟೇ ಅಲ್ಲದೆ ಆಧ್ಯಾತ್ಮಿಕ ಸತ್ಯದ ಅರಿವನ್ನು ಒದಗಿಸುತ್ತದೆ. ಪ್ರೇಮಿಗಳು ಮತ್ತು ತತ್ವಜ್ಞಾನಿಗಳು ಸತ್ಯಶೋಧನೆಗೆ ಎರೋಸ್‌ನಿಂದ ಸ್ಪೂರ್ತಿ ಪಡೆದಿದ್ದಾರೆ. ಕೆಲವು ಅನುವಾದಗಳು ಇದನ್ನು "ದೈಹಿಕ ಪ್ರೀತಿ" ಎಂದು ದಾಖಲಿಸಿವೆ.
  • ಫಿಲಿಯಾ (φιλία philía ) ಎನ್ನುವುದು ಒಂದು ನಿರ್ವಿಕಾರ ಸದ್ಗುಣಶೀಲ ಪ್ರೀತಿಯಾಗಿದ್ದು, ಈ ಪರಿಕಲ್ಪನೆಯನ್ನು ಅರಿಸ್ಟಾಟಲ್‌ ಅಭಿವೃದ್ಧಿಪಡಿಸಿದ್ದರು. ಇದು ಸ್ನೇಹಿತರಿಗೆ, ಕುಟುಂಬಕ್ಕೆ ಮತ್ತು ಸಮುದಾಯಕ್ಕೆ ತೋರುವ ನಿಷ್ಠೆಯನ್ನು ಒಳಗೊಳ್ಳುತ್ತದೆ ಹಾಗೂ ಸದ್ಗುಣ, ಸಮಾನತೆ ಮತ್ತು ಅನ್ಯೋನ್ಯತೆಯನ್ನು ಇದು ಬಯಸುತ್ತದೆ.
  • ಫಿಲಿಯಾ, ಕಾರ್ಯಸಾಧ್ಯ ಕಾರಣಗಳಿಂದ ಪ್ರೇರಣೆ ಪಡೆದಿದೆ; ಇದರಲ್ಲಿ ತೊಡಗಿಸಿಕೊಂಡ ಒಬ್ಬರು ಅಥವಾ ಇಬ್ಬರೂ ವ್ಯಕ್ತಿಗಳು ಈ ಸಂಬಂಧದ ಲಾಭ ಪಡೆಯುತ್ತಾರೆ. ಇದು "ಬೌದ್ಧಿಕ ಪ್ರೀತಿ" ಎಂಬ ಅರ್ಥವನ್ನೂ ಕೊಡುತ್ತದೆ. ಸ್ಟೋರ್ಜ್‌ (στοργή storgē ) ಎಂಬುದು ಪೋಷಕರು ತಮ್ಮ ಮಕ್ಕಳ ಮೇಲೆ ತೋರಿಸುವ ಪ್ರೀತಿಯಂತೆ ಸ್ವಾಭಾವಿಕ ಪ್ರೀತಿಯಾಗಿದೆ.
  • ಕ್ಸೇನಿಯಾ (ξενία xenía ) ಎಂದರೆ ಅತಿಥಿ ಸತ್ಕಾರವಾಗಿದ್ದು, ಇದು ಪ್ರಾಚೀನ ಗ್ರೀಸ್‌ನಲ್ಲಿ ಅತ್ಯಂತ ಪ್ರಮುಖವಾದ ಸಂಪ್ರದಾಯವಾಗಿತ್ತು. ಇದು ಈ ಹಿಂದೆ ಅಪರಿಚಿತರಾಗಿದ್ದ ಓರ್ವ ಆತಿಥೇಯ ಮತ್ತು ಅವನ ಅತಿಥಿಯ ನಡುವೆ ರೂಪುಗೊಳ್ಳುವ, ಬಹುತೇಕವಾಗಿ ಒಂದು ಆಚರಣೆಯಾಗಿದ್ದ ಸ್ನೇಹವಾಗಿತ್ತು. ಅತಿಥೇಯ ಅತಿಥಿಗೆ ಉಪಚರಿಸುತ್ತಾರೆ ಮತ್ತು ಆಶ್ರಯ ನೀಡುತ್ತಾರೆ.
  • ಇದಕ್ಕೆ ಪ್ರತಿಯಾಗಿ ಅತಿಥಿ ಕೇವಲ ಕೃತಜ್ಞತೆಯನ್ನಷ್ಟೇ ಸಲ್ಲಿಸುವುದು ಸಾಕಾಗಿರುತ್ತದೆ. ಇದರ ಮಹತ್ವವನ್ನು ಗ್ರೀಕ್ ಪುರಾಣದುದ್ದಕ್ಕೂ ಕಾಣಬಹುದು, ನಿರ್ದಿಷ್ಟವಾಗಿ ಹೋಮರ್‌ನ ಇಲಿಯಡ್‌ ಮತ್ತು ಒಡಿಸ್ಸಿ ಮಹಾಕಾವ್ಯಗಳಲ್ಲಿ ಗುರುತಿಸಬಹುದು.

ಟಿರ್ಕಿಷ್‌ (ಷಾಮನ್‌ & ಇಸ್ಲಾಮಿಕ್‌)[ಬದಲಾಯಿಸಿ]

  • ಟಿರ್ಕಿಷ್‌ ಭಾಷೆಯಲ್ಲಿ "ಪ್ರೀತಿ" ಎನ್ನುವ ಪದ ಹಲವು ಅರ್ಥಗಳನ್ನು ಪಡೆದುಕೊಂಡಿದೆ. ಒಬ್ಬ ವ್ಯಕ್ತಿ ದೇವರನ್ನು, ಒಬ್ಬ ವ್ಯಕ್ತಿಯನ್ನು, ತಂದೆ-ತಾಯಿಯರನ್ನು ಅಥವಾ ಕುಟುಂಬವನ್ನು ಪ್ರೀತಿಸಬಹುದು. ಆದರೆ ಆ ವ್ಯಕ್ತಿ ವಿರುದ್ಧ ಲಿಂಗದ ಒಬ್ಬ ವ್ಯಕ್ತಿಯನ್ನು ಮಾತ್ರವೇ "ಪ್ರೀತಿ"ಸಬಹುದು, ಇಂತಹ ಪ್ರೀತಿಗೆ ಅವರು ಬಳಸುವ ಪದ "ಆಸ್ಕ್‌" ( "aşk").Aşk (ಆಸ್ಕ್‌) ಎನ್ನುವುದು ಪ್ರೀತಿಸುವುದರ ಅಥವಾ "ಪ್ರೀತಿಯಲ್ಲಿ" ಸಿಲುಕಿರುವ ಒಂದು ಭಾವನೆ.
  • ಇದು ಟರ್ಕಿಷ್‌ನಲ್ಲಿ ಇಂದಿಗೂ ಅಸ್ಥಿತ್ವದಲ್ಲಿದೆ. ಟರ್ಕಿಯರು ಕೇವಲ ತಮ್ಮ ಪ್ರಣಯ ಅಥವಾ ಲೈಂಗಿಕ ಪ್ರೀತಿಯ ಸಂವೇದನೆಯಲ್ಲಿ ಈ ಪದವನ್ನು ಬಳಸಿದ್ದಾರೆ. ಒಬ್ಬ ಟಿರ್ಕಿ ತಾನು ಒಬ್ಬರನ್ನು ಪ್ರೀತಿಸುತ್ತೇನೆ (aşk) ಎಂದು ಹೇಳಿದರೆ, ಅದು ಒಬ್ಬ ವ್ಯಕ್ತಿಯು ಅವನ ಅಥವಾ ಅವಳ ತಂದೆ-ತಾಯಿಗಳಿಗೆ ತೋರಿಸುವ ರೀತಿಯ ಪ್ರೀತಿಯಲ್ಲ; ಅದು ಕೇವಲ ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದ್ದು ಮತ್ತು ಅದು ಬಹುದೊಡ್ಡ ವ್ಯಾಮೋಹವನ್ನು ಸೂಚಿಸುತ್ತದೆ. ಈ ಪದ ಟರ್ಕಿಕ್‌ ಭಾಷೆಗಳಾದ ಅಜೆರ್‌ಬೈಜನಿ (eşq) ಮತ್ತು ಕಜಕ್‌ (ғашық) ಭಾಷೆಗಳಲ್ಲೂ ಸಾಮಾನ್ಯವಾಗಿದೆ.

ಪ್ರಾಚೀನ ರೋಮನ್‌ (ಲ್ಯಾಟಿನ್‌)[ಬದಲಾಯಿಸಿ]

  • ಇಂಗ್ಲಿಷ್‌ನ "ಪ್ರೀತಿ" ಎಂಬ ಪದಕ್ಕೆ ಸಂವಾದಿಯಾಗಿ ಲ್ಯಾಟಿನ್‌ ಭಾಷೆ ಹಲವು ವಿಭಿನ್ನ ಕ್ರಿಯಾಪದಗಳನ್ನು ಹೊಂದಿದೆ. ಪ್ರೀತಿಸು ಎಂಬುದಕ್ಕೆ ಅಮಾರೆ (Amāre) ಎನ್ನುವುದು ಮೂಲಪದ. ಇದು ಇಟಾಲಿಯನ್‌ ಭಾಷೆಯಲ್ಲಿ ಇಂದಿಗೂ ಬಳಕೆಯಲ್ಲಿದೆ. ರೋಮನ್ನರು ಇದನ್ನು ಪ್ರೀತಿಯ ಸಂವೇದನೆಯಲ್ಲಷ್ಟೇ ಅಲ್ಲದೇ, ಪ್ರಣಯದ ಅಥವಾ ಲೈಂಗಿಕ ಸಂವೇದನೆಯಲ್ಲಿಯೂ ಬಳಸಿದರು.
  • ಈ ಕ್ರಿಯಾಪದದಿಂದ ಅಮಾನ್ಸ್ ‌-ಓರ್ವ ಪ್ರೇಮಿ, ಅಮಾಟೋರ್‌-"ವೃತ್ತಿನಿರತ ಪ್ರೇಮಿ" ಎಂಬ ಪದಗಳು ಹುಟ್ಟಿದ್ದು, ಕೆಲವೊಮ್ಮೆ ವ್ಯಭಿಚಾರದ ಸಾಮಾನ್ಯ ಅಭಿಪ್ರಾಯದಲ್ಲೂ ಇದು ಬಳಕೆಯಾಗುತ್ತದೆ. ಅಮೈಕಾ ಎಂಬುದು ಇಂಗ್ಲಿಷ್‌ ಸಂವೇದನೆಯಲ್ಲಿ "ಗರ್ಲ್‌ ಫ್ರೆಂಡ್‌ ಅಥವಾ ಗೆಳತಿ" ಎಂಬರ್ಥದಲ್ಲಿದ್ದು, ಕೆಲವು ವೇಳೆ ಇದನ್ನು ಸೌಮ್ಯೋಕ್ತಿಯಲ್ಲಿ ವೇಶ್ಯೆಯೊಬ್ಬಳಿಗೆ ಅನ್ವಯಿಸಲಾಗುತ್ತದೆ.
  • ಇದಕ್ಕೆ ಅನುಗುಣವಾದ ನಾಮಪದ ಅಮೋರ್‌ (ರೋಮನ್ನರಿಗೆ ಈ ಪದದ ಮಹತ್ವ ಏನು ಎಂಬುದನ್ನು ನಗರದ ಹೆಸರಾದ ರೋಮ್‌- ಲ್ಯಾಟಿನ್‌ನಲ್ಲಿ: ರೋಮ - ಎಂಬ ಉದಾಹರಣೆಯ ಮೂಲಕ ನೊಡಬಹುದಾಗಿದೆ. ಏಕೆಂದರೆ ಅಮೋರ್ ಎಂಬ ಪದವನ್ನು ವರ್ಣಪಲ್ಲಟಗೊಳಿಸಿದರೆ ರೋಮ ಎಂಬುದು ಗೋಚರಿಸುತ್ತದೆ.
  • ಪ್ರಾಚೀನ ಯುಗದಲ್ಲಿ ಇದನ್ನು ನಗರದ ರಹಸ್ಯ ಹೆಸರನ್ನಾಗಿ ವ್ಯಾಪಕವಾಗಿ ಬಳಸಲಾಗಿತ್ತು.)[೧೬] ಪ್ರೇಮ ಸಂಬಂಧಗಳನ್ನು ಅಥವಾ ಲೈಂಗಿಕ ಸಾಹಸಗಳನ್ನು ಸೂಚಿಸಲೂ ಸಹ ಈ ಪದವು ಬಹುವಚನದ ರೂಪದಲ್ಲಿ ಬಳಕೆಯಾಗುತ್ತದೆ.
  • ಇದೇ ಮೂಲದಿಂದ ಅಮಿಕಸ್ ‌-"ಸ್ನೇಹಿತ" ಮತ್ತು ಅಮಿಕಿಟಿಯಾ -"ಸ್ನೇಹ" (ಪರಸ್ಪರರ ಪ್ರಯೋಜನಗಳನ್ನು ಆಧರಿಸಿ ಮತ್ತು ಇದಕ್ಕನುಗುಣವಾಗಿ "ಕೃತಜ್ಞತೆ" ಅಥವಾ "ವರ್ಚಸ್ಸು"ಗಳಿಗೆ ಅತಿ ಸಮೀಪವಾಗಿ) ಎಂಬ ಪದಗಳೂ ಹುಟ್ಟಿವೆ ಸಿಸಿರೋ ಎಂಬ ಲೇಖಕ ಬರೆದಿರುವ "ಆನ್ ಫ್ರೆಂಡ್‌ಷಿಪ್‌ " (ಡಿ ಅಮಿಕಿಟಿಯಾ ) ಎಂಬ ಪ್ರಬಂಧ ಒಂದು ಹಂತದವರೆಗೆ ಈ ಭಾವನೆಯನ್ನು ಕುರಿತು ಚರ್ಚಿಸುತ್ತದೆ.
  • ಓವಿಡ್‌ ಎಂಬ ಲೇಖಕ ಅರ್ಸ್ ಅಮಟೋರಿಯ (ದಿ ಆರ್ಟ್‌ ಆಫ್ ಲವ್ ) (ಪ್ರೀತಿಯ ಕಲೆ) ಎಂಬ, ಡೇಟಿಂಗ್‌ ಕುರಿತಾದ ಒಂದು ಮಾರ್ಗದರ್ಶಿ ಕೃತಿಯನ್ನು ಬರೆದಿದ್ದು, ಇದು ಅನೈತಿಕ ಸಂಬಂಧಗಳಿಂದ ಹಿಡಿದು ಅತಿ ಕಾಳಜಿಯುಳ್ಳ ಪೋಷಕರವರೆಗೆ ಎಲ್ಲವನ್ನೂ ಆಳವಾಗಿ ಚರ್ಚಿಸುತ್ತದೆ.
  • ಚಿತ್ರಣವನ್ನು ಒಂದಿಷ್ಟು ಜಟಿಲಗೊಳಿಸುವ ನಿಟ್ಟಿನಲ್ಲಿ, ಇಂಗ್ಲಿಷ್‌ ಸರಳವಾಗಿ ಇಷ್ಟಪಡು ಎಂದು ಹೇಳುವುದನ್ನು ಲ್ಯಾಟಿನ್‌ ಭಾಷೆ ಕೆಲವೊಮ್ಮೆ ಅಮಾರೆ ಎಂದು ಬಳಸುತ್ತದೆ. ಆದರೂ, ಲ್ಯಾಟಿನ್‌ ಭಾಷೆಯಲ್ಲಿ ಪ್ಲೇಸೆರೆ ಅಥವಾ ಡಿಲೆಕ್ಟಾರೆ ಎಂಬ ಪದಗಳಿಂದ ಈ ಭಾವನೆ ಸಾಮಾನ್ಯವಾಗಿ ಮತ್ತಷ್ಟು ಸ್ಪುಟವಾಗಿ ಅಭಿವ್ಯಕ್ತಿಸಲ್ಪಡುತ್ತದೆ.
  • ಇವು ಹೆಚ್ಚು ಆಡುಮಾತಿನ ಶೈಲಿಯಲ್ಲಿ ಬಳಕೆಯಾಗುತ್ತವೆ. ಡಿಲೆಕ್ಟಾರೆ ಎಂಬ ಪದವು ಕ್ಯಾಟಲ್ಲಸ್‌ನ ಪ್ರೇಮಕವಿತೆಗಳಲ್ಲಿ ಹಲವು ಕಡೆ ಬಳಕೆಯಾಗಿದೆ. ಡಿಲಿಗೆರೆ ಎಂಬ ಪದ ಹಲವು ವೇಳೆ "ಪ್ರೀತಿಯಿಂದಿರು" "ಗೌರವಿಸು" ಎಂಬ ಭಾವನೆಯನ್ನು ಅಭಿವ್ಯಕ್ತಿಪಡಿಸುತ್ತದೆ. ತೀರ ವಿರಳವಾಗಿ ಪ್ರಣಯ ಪ್ರೀತಿಯನ್ನು ಸೂಚಿಸಲು ಈ ಪದ ಬಳಕೆಯಾಗುತ್ತದೆ.
  • ಇಬ್ಬರು ಪುರುಷರ ಸ್ನೇಹವನ್ನು ವರ್ಣಿಸಲು ಈ ಪದ ಸೂಕ್ತವಾಗಿದೆ. ಆದರೂ, ಆ ಪದಕ್ಕೆ ಸರಿ ಹೊಂದುವ ನಾಮಪದವಾದ ಡಿಲಿಗೆಂಟಿಯಾ ವು, "ಶ್ರದ್ಧೆ" ಅಥವಾ "ಜಾಗರೂಕತೆ" ಎಂಬ ಅರ್ಥಗಳನ್ನು ಹೊಂದಿದೆ. ಅಲ್ಲದೆ ಕ್ರಿಯಾಪದದೊಂದಿಗೆ ಲಾಕ್ಷಣಿಕ ಅತಿಕ್ರಮಣವನ್ನು ಹೊಂದಿದೆ. ಅಬ್ಸರ್ವೇರ್‌ ಎಂಬುದು ಡಿಲಿಗೆಲೆ ಎಂಬ ಪದಕ್ಕೆ ಸಮಾನಾರ್ಥಕ ಪದ;
  • ಇಂಗ್ಲಿಷ್‌ನೊಂದಿಗೆ ಒಂದೇ ಭಾಷಾಕುಲದಿಂದ ಬಂದಿದ್ದರೂ ಸಹ, ಈ ಕ್ರಿಯಾಪದ ಮತ್ತು ಇದರ ಸಂವಾದಿ ನಾಮಪದ ಅಬ್ಸರ್ವೇಟಿಯಾ , ಕೆಲವೊಮ್ಮೆ "ಗೌರವ" ಅಥವಾ "ಒಲವು" ಎಂಬ ಅರ್ಥಗಳನ್ನು ಸೂಚಿಸುತ್ತವೆ. ಕ್ರಿಶ್ಚಿಯನ್‌ ಬೈಬಲ್‌ನ ಲ್ಯಾಟಿನ್‌ ಅನುವಾದಗಳಲ್ಲಿ ಕ್ಯಾರಿಟಾಸ್‌ ಎಂಬ ಪದವು "ಉದಾರ ಪ್ರೀತಿ‌" ಎಂಬ ಅರ್ಥ ನೀಡಲು ಬಳಕೆಯಾಗಿದೆ. ಆದರೆ ಪಾಗನ್‌ ರೋಮನ್ ಸಾಹಿತ್ಯದಲ್ಲಿ ಈ ಅರ್ಥವು ಎಲ್ಲೂ ಕಂಡುಬರುವುದಿಲ್ಲ. ಇದು ಗ್ರೀಕ್‌ ಪದದ ಸಂಯೋಜನೆಯಿಂದ ವ್ಯುತ್ಪತ್ತಿ ಹೊಂದಿರುವುದರಿಂದ ಇದಕ್ಕೆ ಯಾವುದೇ ಸಂವಾದಿ ಕ್ರಿಯಾಪದಗಳಿಲ್ಲ.

ಧಾರ್ಮಿಕ ದೃಷ್ಟಿಕೋನಗಳು[ಬದಲಾಯಿಸಿ]

ಅಬ್ರಹಾಮಿಕ್‌ ಧರ್ಮಗಳು[ಬದಲಾಯಿಸಿ]

ರಾಬರ್ಟ್ ಇಂಡಿಯಾನನ 1977 "ಲವ್‌ ಸ್ಕಲ್‌ಪ್ಚರ್‌" ಇಸ್ರೇಲ್‌ನಲ್ಲಿನ ಅಹಾವಾವನ್ನು ಹೊರಹೊಮ್ಮಿಸುತ್ತಿರುವುದು.

ಯೂಹೂದಿ ಧರ್ಮ[ಬದಲಾಯಿಸಿ]

  • ಹೀಬ್ರೂ ಧರ್ಮದಲ್ಲಿ, ಅಹಾವಾ ಎಂಬ ಪದ ಅಂತರ್‌ವ್ಯಕ್ತೀಯ ಪ್ರೀತಿ ಮತ್ತು ದೇವರ ಪ್ರೀತಿ ಎಂಬರ್ಥದಲ್ಲಿ ಅತ್ಯಂತ ಸಾಮಾನ್ಯವಾಗಿ ಬಳಕೆಯಾಗುತ್ತದೆ. ಜನಗಳ ನಡುವಿನ ಪ್ರೀತಿ ಹಾಗೂ ಮನುಷ್ಯ ಮತ್ತು ದೇವರ ನಡುವಿನ ಪ್ರೀತಿಯ ಎರಡೂ ಸಂದರ್ಭಗಳಲ್ಲೂ ಪ್ರೀತಿಯ ವಿಸ್ತೃತ ವ್ಯಾಖ್ಯಾನವನ್ನು ಯಹೂದಿ ಧರ್ಮ ನೀಡುತ್ತದೆ.
  • ಮನುಷ್ಯರ ನಡುವಿನ ಪ್ರೀತಿಗೆ ಸಂಬಂಧಿಸಿದಂತೆ ಹೀಬ್ರೂಗಳ ಪವಿತ್ರಗ್ರಂಥ ಟೋರಾಈ ರೀತಿ ಹೇಳುತ್ತದೆ, "ನಿನ್ನನ್ನು ನೀನು ಪ್ರೀತಿಸುವಷ್ಟೇ ನಿನ್ನ ನೆರೆಹೊರೆಯವರನ್ನೂ ಪ್ರೀತಿಸು" (ಲೆವಿಟಿಕಸ್‌‌ 19:18)ಮನುಷ್ಯ ಮತ್ತು ದೇವರ ನಡುವಿನ ಪ್ರೀತಿಗೆ ಸಂಬಂಧಿಸಿದಂತೆ, "ನಿನ್ನ ಹೃದಯಪೂರ್ವಕವಾಗಿ, ನಿನ್ನ ಆತ್ಮಪೂರ್ವಕವಾಗಿ ಮತ್ತು ನಿನ್ನ ಸಾಮರ್ಥ್ಯಪೂರಕವಾಗಿ" ದೇವರನ್ನು ಪ್ರೀತಿಸಬೇಕು ಎಂದು ಓರ್ವನನ್ನು ಅದು ಆಜ್ಞಾಪಿಸಿದೆ (ಡಿಯೂಟರೋನಮಿ 6:5); ಇದನ್ನು ಮಿಷ್‌ನಾಹ್‌ (ಯಹೂದಿಗಳ ಮೌಖಿಕ ಕಾನೂನಿನ ಕೇಂದ್ರ ಬರಹ) ಆಯ್ದುಕೊಂಡಿದ್ದು, ಉತ್ತಮ ಕಾರ್ಯಗಳು, ನಿರ್ದಿಷ್ಟವಾದ ಗಂಭೀರ ನಿಯಮೋಲ್ಲಂಘನೆಗಳನ್ನು ಎಸಗುವುದಕ್ಕೆ ಬದಲು ಒಬ್ಬರ ಬದುಕನ್ನು ತ್ಯಾಗ ಮಾಡುವ ಇಚ್ಛೆ, ಒಬ್ಬನ ಸಂಪತ್ತೆಲ್ಲವನ್ನು ತ್ಯಾಗ ಮಾಡುವ ಇಚ್ಛೆ ಮತ್ತು ಯಾವುದೇ ಸಂಕಷ್ಟದಲ್ಲಿದ್ದರೂ ದೇವರಿಗೆ ಆಭಾರಿಯಾಗಿರು ಎಂಬ ಒಳ್ಳೆಯ ಗುಣಗಳನ್ನು ಸೂಚಿಸಲು ಆರಿಸಿಕೊಳ್ಳಲಾಗಿದೆ (ಟ್ಯಾಕ್ಟೇಟ್ ಬೆರಾಚೋಥ್‌ 9:5).
  • ದೈವಿಕ ಕಾರ್ಯಗಳನ್ನು ಅವಲೋಕಿಸುವ ಅಥವಾ ಪ್ರಕೃತಿಯ ಅದ್ಭುತಗಳಿಗೆ ಸಾಕ್ಷಿಯಾಗುವ ಮೂಲಕ ಈ ಪ್ರೀತಿಯನ್ನು ಹೇಗೆ ಬೆಳೆಸಲು ಸಾಧ್ಯ ಎಂಬ ವಿಚಾರದಲ್ಲಿ ರಾಬಿನಿಕ್‌ ಸಾಹಿತ್ಯ ಭಿನ್ನವಾಗುತ್ತದೆ. ವೈವಾಹಿಕ ಜೋಡಿಗಳ ನಡುವೆ ಇರುವ ಪ್ರೀತಿಯ ಕುರಿತು ಹೇಳುವುದಾದರೆ, ಇದು ಜೀವನಕ್ಕೆ ಅತ್ಯಗತ್ಯ ಅಂಶವೆಂದು ಪರಿಗಣಿಸಲ್ಪಟ್ಟಿದೆ:
  • "ನೀನು ಪ್ರೀತಿಸುವ ಮಡದಿಯಲ್ಲಿ ನಿನ್ನ ಬದುಕನ್ನು ಕಾಣು" (ಎಕ್ಲೆಸಿಯೇಟ್ಸ್‌ 9:9)ಬೈಬಲ್‌ಗೆ ಸಂಬಂಧಿಸಿದ ಸಾಂಗ್‌ ಆಫ್‌ ಸೋಲೋಮನ್‌ ಪುಸ್ತಕವನ್ನು, ದೇವರು ಮತ್ತು ಅವನ ಜನರ ನಡುವಿನ ಪ್ರೀತಿಯ ರಮ್ಯ ರೂಪಕ ಎಂದು ಪರಿಗಣಿಸಲಾಗಿದ್ದರೂ ಇದನ್ನು ಹಾಗೇ ಓದುತ್ತಾ ಹೋದಾಗ ಅದೊಂದು ಪ್ರೀತಿಯ ಹಾಡಿನಂತೆ ಭಾಸವಾಗುತ್ತದೆ. ಯಹೂದಿಗಳ ದೃಷ್ಟಿಕೋನದಲ್ಲಿ ಪ್ರೀತಿಯನ್ನು ವ್ಯಾಖ್ಯಾನಿಸುವಾಗ, 20ನೇ ಶತಮಾನದ ರಾಬ್ಬಿ ಎಲಿಯಾಹು ಎಲೀಜೆರ್‌ ಡೆಸ್ಲರ್‌ ಆಗಿಂದಾಗ್ಗೆ ಈ ರೀತಿ ಉಲ್ಲೇಖಿಸುತ್ತಾನೆ "ಪಡೆಯುವ ನಿರೀಕ್ಷೆಯಿಲ್ಲದೆ ಕೊಡುವುದು" (ಅವನ ಮಿಚ್‌ತಾವ್‌ ಮಿ-ಇಲಿಯಾಹು ವಿನಿಂದ, ಸಂ 1)

ಕ್ರೈಸ್ತ ಧರ್ಮ[ಬದಲಾಯಿಸಿ]

ಗಿಯೋವನ್ನಿ ಬ್ಯಾಗ್ಲಿಯೋನ್‌ ಬರೆದಿರುವ ಸೇಕ್ರೆಡ್‌ ಲವ್‌ ವರ್ಸಸ್‌ ಪ್ರೊಫೇನ್‌ ಲವ್‌ (1602–03)

ಕ್ರೈಸ್ತ ಧರ್ಮದ ನಂಬಿಕೆಯ ಪ್ರಕಾರ ಪ್ರೀತಿ ದೇವರಿಂದ ಬರುತ್ತದೆ. ಗ್ರೀಕ್‌ನಲ್ಲಿ ಎರೋಸ್‌ ಎಂದು ಕರೆಯಲ್ಪಡುವ ಗಂಡು ಮತ್ತು ಹೆಣ್ಣಿನ ಪ್ರೀತಿ ಹಾಗೂ ಇತರರ ನಿಸ್ವಾರ್ಥ ಪ್ರೀತಿ(ಅಗಾಪೆ ), ಇವುಗಳನ್ನು ಅನುಕ್ರಮವಾಗಿ "ಅರೋಹಣ" ಪ್ರೀತಿ ಮತ್ತು "ಅವರೋಹಣ" ಪ್ರೀತಿ ಎಂದು ಅಲ್ಲಲ್ಲಿ ಹೋಲಿಸಲಾಗಿದೆ. ಆದರೆ ಅಂತಿಮವಾಗಿ ಅವು ಒಂದೇ ಆಗಿವೆ.[೧೭] ಕ್ರೈಸ್ತ ಸಮುದಾಯದಲ್ಲಿ ನಿಯತವಾಗಿ ಉಲ್ಲೇಖವಾಗುವ, "ಪ್ರೀತಿ"ಗೆ ಸಂಬಂಧಿಸಿದಂತೆ ಹಲವು ಪದಗಳು ಗ್ರೀಕ್‌ನಲ್ಲಿವೆ.

  • ಅಗಾಪೆ : ಹೊಸ ಒಡಂಬಡಿಕೆಯಲ್ಲಿ, agapē ಎಂಬುದಕ್ಕೆ ಉದಾರ, ನಿಸ್ವಾರ್ಥ, ಪರೋಪಕಾರಿಯಾದ ಮತ್ತು ಬೇಷರತ್ತಾದ ಎಂಬರ್ಥಗಳಿವೆ. ಇದು ಮಾತಾಪಿತೃಗಳ ಪ್ರೀತಿ‌ಯಾಗಿದ್ದು, ಜಗತ್ತಿನಲ್ಲಿ ಒಳ್ಳೆಯತನವನ್ನು ಹುಟ್ಟುಹಾಕುವಂತೆ ಇದನ್ನು ಕಾಣಲಾಗುತ್ತದೆ; ಮಾನವೀಯತೆಯನ್ನು ಪ್ರೀತಿಸುವ ಮೂಲಕ ದೇವರನ್ನು ಕಾಣುವ ಮಾರ್ಗ ಇದಾಗಿದ್ದು, ಕ್ರೈಸ್ತರು ಒಬ್ಬರಿಗೊಬ್ಬರು ಹೊಂದಲು ಬಯಸುವ ಪ್ರೀತಿಯಂತೆ ಇದು ಕಂಡುಬರುತ್ತದೆ.
  • ಫಿಲಿಯೋ : ಹೊಸ ಒಡಂಬಡಿಕೆಯಲ್ಲೂ ಬಳಕೆಯಾಗಿರುವ ಫಿಲಿಯೋ ಎಂಬ ಪದವು ಸಂತೋಷಕರವೆಂದು ಕಾಣುವ ಯಾವುದಾದರೊಂದಕ್ಕೆ ಮನುಷ್ಯನು ತೋರುವ ಸ್ಪಂದನೆಯಾಗಿದೆ.

ಇದು "ಭ್ರಾತೃತ್ವದ ಪ್ರೀತಿ" ಎಂದೂ ಹೆಸರಾಗಿದೆ.

ಧರ್ಮಪ್ರಚಾರಕ ಪಾಲ್‌ ಪ್ರೀತಿಯನ್ನು ಎಲ್ಲದರ ಅತ್ಯಂತ ಪ್ರಮುಖವಾದ ಸದ್ಗುಣ ಎಂದು ವೈಭವೀಕರಿಸಿದ್ಧಾನೆ.

  • 1 ಕೋರಿಂಥಿಯನ್ಸ್‌‌ ಕೃತಿಯಲ್ಲಿ ಬರುವ ಜನಪ್ರಿಯ ಕವಿತೆಯೊಂದರಲ್ಲಿ ಪ್ರೀತಿಯನ್ನು ವರ್ಣಿಸುತ್ತಾ ಅವನು ಹೀಗೆ ಬರೆಯುತ್ತಾನೆ, "ಪ್ರೀತಿಯೆಂದರೆ ಸಹನಶೀಲತೆ, ಪ್ರೀತಿಯೆಂದರೆ ದಯೆ .ಇದು ಅಸೂಯೆಯಲ್ಲ, ಇದು ಜಂಬಪಡುವುದಿಲ್ಲ, ಇದು ಹೆಮ್ಮೆ ಪಡುವುದಿಲ್ಲ. ಇದು ಒರಟಲ್ಲ, ಇದು ಸ್ವಾರ್ಥಸಾಧಕವಲ್ಲ, ಇದು ಅಷ್ಟು ಸುಲಭವಾಗಿ ಕೋಪಕ್ಕೆ ತುತ್ತಾಗುವುದಿಲ್ಲ.
  • ಇದು ಅನ್ಯಾಯ-ಅಕ್ರಮಗಳ ದಾಖಲೆಯನ್ನಿಡುವುದಿಲ್ಲ. ಪ್ರೀತಿ ಕೆಡುಕಿನಲ್ಲಿ ಸಂತೋಷ ಕಾಣುವುದಿಲ್ಲ; ಬದಲಿಗೆ ಸತ್ಯದ ಮೂಲಕ ಆನಂದ ಹೊಂದುತ್ತದೆ. ಇದು ಸದಾ ರಕ್ಷಿಸುತ್ತದೆ, ಸದಾ ನಂಬುತ್ತದೆ, ಸದಾ ಭರವಸೆಯಿಡುತ್ತದೆ, ಮತ್ತು ನಿರಂತರ ಪ್ರಯತ್ನದಲ್ಲಿ ತೊಡಗುತ್ತದೆ ." (1 Cor. 13:4–7, NIV)
  • ಧರ್ಮಪ್ರಚಾರಕ ಜಾನ್‌ ಹೀಗೆ ಬರೆಯುತ್ತಾರೆ. "ದೇವರು, ತನ್ನ ಒಬ್ಬನೇ ಒಬ್ಬ ಮಗನಿಗೆ ಕೊಡುಗೆಯಾಗಿ ನೀಡಿದ ಜಗತ್ತನ್ನು ಬಹುವಾಗಿ ಪ್ರೀತಿಸಿದನು, ಯಾರು ಅವನಲ್ಲಿ ನಂಬಿಕೆಯಿಡುತ್ತಾರೋ ಅವರು ಹಾಳಾಗುವುದಿಲ್ಲ; ಬದಲಿಗೆ ಶಾಶ್ವತ ಬದುಕನ್ನು ಹೊಂದುತ್ತಾರೆ . ದೇವರು ತನ್ನ ಮಗನನ್ನು ಪ್ರಪಂಚವನ್ನು ವಿಧಿಸಲು ಈ ಜಗತ್ತಿನೊಳಗೆ ಕಳಿಸಲಿಲ್ಲ; ಬದಲಿಗೆ ಅವನ ಮೂಲಕ ಜಗತ್ತನ್ನು ಸಂರಕ್ಷಿಸಲು ಕಳಿಸಿದನು.
  • ಯಾರು ಅವನಲ್ಲಿ ನಂಬಿಕೆಯಿಡುತ್ತಾರೋ ಅವರು ಯಾವ ತೊಂದರೆಗೂ ಒಳಗಾಗುವುದಿಲ್ಲ, ಆದರೆ ಯಾರು ಅವನನ್ನು ನಂಬುವುದಿಲ್ಲವೋ ಅವರು ಈಗಾಗಲೇ ಇರುವ ತಮ್ಮ ನಿತ್ಯ ಯಾತನೆಗಳಲ್ಲೇ ಉಳಿಯುತ್ತಾರೆ. ಏಕೆಂದರೆ ಅವರು ದೇವರ ಒಬ್ಬನೇ ಒಬ್ಬ ಮಗನ ಹೆಸರಲ್ಲಿ ನಂಬಿಕೆ ಇಟ್ಟಿರುವುದಿಲ್ಲ .
  • "(ಜಾನ್‌ 3:16–18, NIV) ಜಾನ್‌ ಮುಂದುವರಿಸುತ್ತಾ ಹೀಗೆ ಹೇಳುತ್ತಾರೆ "ಆತ್ಮೀಯ ಗೆಳೆಯರೇ, ಪ್ರೀತಿ ಎನ್ನುವುದು ದೇವರಿಂದ ಬರುವ ವಸ್ತುವಾದ್ದರಿಂದ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸೋಣ . ಪ್ರೀತಿಸುವ ಪ್ರತಿಯೊಬ್ಬರೂ ದೇವರಿಂದ ಹುಟ್ಟಿದವರಾಗಿರುತ್ತಾರೆ ಮತ್ತು ದೇವರನ್ನು ತಿಳಿದಿರುತ್ತಾರೆ. ಯಾರು ಪ್ರೀತಿಸುವುದಿಲ್ಲವೋ ಅವರು ದೇವರನ್ನು ತಿಳಿಯುವುದಿಲ್ಲ, ಏಕೆಂದರೆ ದೇವೆರೆಂದರೆ ಪ್ರೀತಿ " ( ಜಾನ್‌ 1 4:7–8, NIV) ಪ್ರತಿಯೊಬ್ಬರಿಗೂ ಪ್ರೀತಿ ಮತ್ತು ಕಾಮಾಸಕ್ತಿಗಳ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿರಬೇಕೆಂದು ಸಂತ ಅಗಸ್ಟೀನ್ ಹೇಳುತ್ತಾರೆ.
  • ಸಂತ ಅಗಸ್ಟೀನ್‌ ಪ್ರಕಾರ, ಭೋಗಾಕಾಂಕ್ಷೆ ಎನ್ನುವುದು ಅತಿಯಾದ ವ್ಯಾಮೋಹ, ಆದರೆ ಪ್ರೀತಿಸುವುದು ಮತ್ತು ಮತ್ತೊಬ್ಬರಿಂದ ಪ್ರೀತಿಸಿಕೊಳ್ಳುವುದು ಎಂಬುದು ಅವನು ಜೀವನಪರ್ಯಂತ ಹುಡುಕುವುದೇ ಆಗಿರುತ್ತದೆ. ಅವರು ಮತ್ತೆ ಹೇಳುತ್ತಾರೆ, "ನಾನು ಪ್ರೀತಿಯನ್ನು ಪ್ರೀತಿಸುತ್ತಿದ್ದೆ." ಅಂತಿಮವಾಗಿ ಅವನು ಪ್ರೀತಿಯಲ್ಲಿ ಬೀಳುತ್ತಾನೆ ಮತ್ತು ಮರಳಿ ದೇವರಿಂದ ಪ್ರೀತಿಯನ್ನು ಪಡೆಯುತ್ತಾನೆ.
  • ಸಂತ ಅಗಸ್ಟೀನ್ ಹೀಗೆ ಹೇಳುತ್ತಾರೆ, ನಿನ್ನನ್ನು ಸಂಪೂರ್ಣವಾಗಿ ಮತ್ತು ಸತ್ಯವಾಗಿ ಪ್ರೀತಿಸುವುದು ದೇವರು ಮಾತ್ರ. ಏಕೆಂದರೆ ಮನುಷ್ಯ ಪ್ರೀತಿಯಲ್ಲಿ ಮಾತ್ರವೇ "ಮಾತ್ಸರ್ಯ, ಸಂಶಯ, ಭಯ, ಕೋಪ ಮತ್ತು ಕಿತ್ತಾಟ" ಮುಂತಾದ ನ್ಯೂನತೆಗಳಿರಲು ಸಾಧ್ಯ. ಸಂತ ಅಗಸ್ಟೀನ್ ಪ್ರಕಾರ, ದೇವರನ್ನು ಪ್ರೀತಿಸುವುದೆಂದರೆ, "ನಿಮ್ಮದೇ ಆದ ಶಾಂತಿಯನ್ನು ಪಡೆಯುವುದೇ" ಆಗಿರುತ್ತದೆ. (ಸಂತ ಅಗಸ್ಟೀನ್ ಅವರ ಪಾಪನಿವೇದನೆಗಳು)
  • ಕ್ರೈಸ್ತ ದೇವತಾಶಾಸ್ತ್ರಜ್ಞರು ದೇವರನ್ನು ಪ್ರೀತಿಯ ಮೂಲವಾಗಿ ಕಾಣುತ್ತಾರೆ. ಇದೇ ಪ್ರೀತಿ ಮನುಷ್ಯರಲ್ಲಿ ಮತ್ತು ಅವರ ಪ್ರೀತಿಯ ಸಂಬಂಧಗಳಲ್ಲಿ ಪ್ರತಿಫಲನವಾಗುತ್ತದೆ. ಪ್ರಭಾವಿ ಕ್ರೈಸ್ತ ದೇವತಾಶಾಸ್ತ್ರಜ್ಞ C.S. ಲೆವಿಸ್‌ ದಿ ಫೋರ್‌ ಲವ್ಸ್‌ ಎನ್ನುವ ಕೃತಿಯನ್ನು ಬರೆದನು.
  • ಬೆನೆಡಿಕ್ಟ್‌ XVI "ದೇವರೇ ಪ್ರೀತಿ" ಎಂಬುದರ ಮೇಲೆ ತನ್ನ ಮೊದಲ ಪೋಪ್‌ ಸುತ್ತೋಲೆಯನ್ನು ಬರೆದನು. ಪ್ರೇಮ ಸ್ವರೂಪಿಯಾಗಿರುವ ದೇವರ ಚಿತ್ರದಲ್ಲಿ ಸೃಷ್ಟಿಯಾಗಿರುವ ಮನುಷ್ಯ ಪ್ರೀತಿಯನ್ನು ಅನುಸರಿಸಬಲ್ಲ; ದೇವರ ಪ್ರೀತಿಯನ್ನು ತಮ್ಮ ಚಿಂತನೆಯಲ್ಲಿ (ಎರೋಸ್‌) ಪಡೆದುಕೊಳ್ಳುವ ಮತ್ತು ಅದನ್ನು ಅನುಭವಿಸುವ ಮೂಲಕ ದೇವರಿಗೆ ಮತ್ತು ಇತರರಿಗೆ ತನ್ನನ್ನು ತಾನೆ ಅರ್ಪಿಸಿಕೊಳ್ಳಬಲ್ಲ (ಅಗಾಪೆ) ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ, ಪ್ರೀತಿಯ ಈ ಜೀವನ, ಕಲ್ಕತ್ತಾದ ತೆರೆಸಾ ಮತ್ತು ಪೂಜ್ಯ ವರ್ಜಿನ್‌ ಮೇರಿಯಂಥ ಸಂತರ ಬದುಕಾಗಿದೆ ಮತ್ತು ದೇವರು ತಮ್ಮನ್ನು ಪ್ರೀತಿಸುತ್ತಾನೆ ಎಂದು ನಂಬಿದಾಗ ಕ್ರೈಸ್ತರು ಅನುಸರಿಸುವ ಮಾರ್ಗವಾಗಿದೆ. [೧೭]

ಇಸ್ಲಾಂ ಮತ್ತು ಅರಬ್‌[ಬದಲಾಯಿಸಿ]

  • ಒಂದು ರೀತಿಯ ಪ್ರಜ್ಞೆಯಲ್ಲಿ, ಬದುಕಿನ ಬಗೆಗಿನ ಇಸ್ಲಾಮಿಕ್‌ ದೃಷ್ಟಿಕೋನವನ್ನು ಪ್ರೀತಿಯು ಒಳಗೊಳ್ಳುತ್ತದೆ. ನಂಬಿಕೆ ಹೊಂದಿರುವ ಎಲ್ಲರಿಗೂ ಅನ್ವಯಿಸುವ ವಿಶ್ವ ಭ್ರಾತೃತ್ವವಾಗಿ ಅದು ಒಳಗೊಳ್ಳುತ್ತದೆ. ದೇವರೇ ಪ್ರೀತಿ ಎಂದು ಹೇಳುವ ಯಾವುದೇ ಉಲ್ಲೇಖಗಳು ಅಲ್ಲೆಲ್ಲೂ ಇಲ್ಲ. ಆದರೆ ದೇವರ(ಅಲ್ಲಾ) 99 ಹೆಸರುಗಳ ಪೈಕಿ ಅಲ್‌-ವಾದುದ್‌ ಅಥವಾ "ದಿ ಲವಿಂಗ್‌ ಒನ್‌" ಎಂಬ ಹೆಸರಿದ್ದು, ಇದು ಸುರಾ 11:90ರಲ್ಲಿ ಮಾತ್ರವಲ್ಲದೇ ಸುರಾ 85:14ರಲ್ಲೂ ಸಹ ಕಂಡುಬಂದಿದೆ. ಇದು "ಪ್ರೇಮಭರಿತ ದಯಾಮಯಿಯಾಗಿರುವ" ದೇವರನ್ನು ಸೂಚಿಸುತ್ತದೆ. ನಂಬಿಕೆಯಿರುವ ಎಲ್ಲರೂ ದೇವರ ಪ್ರೀತಿಯನ್ನು ಪಡೆಯುತ್ತಾರೆ.
  • ಆದರೆ ಯಾವ ಪ್ರಮಾಣದಲ್ಲಿ ಅಥವಾ ಪ್ರಯತ್ನದಲ್ಲಿ ಆತ ದೇವರನ್ನು ಸಂತುಷ್ಟಪಡಿಸಿದ್ದಾನೆ ಎಂಬುದು ಎನ್ನುವುದು ಆಯಾ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ಇಷ್ಕ್‌ , ಅಥವಾ ದೈವಿಕ ಪ್ರೀತಿ ಸೂಫಿ ತತ್ವದ ಎದ್ದು ಕಾಣುವ ಅಂಶ.

ಪ್ರೀತಿ ಎನ್ನುವುದು ವಿಶ್ವಕ್ಕೆ ನೀಡಲಾದ ದೇವರ ಮೂಲತತ್ವದ ಪ್ರದರ್ಶನ ಎಂಬುದು ಸೂಫಿಗಳ ನಂಬಿಕೆ.

  • ದೇವರು ಸೌಂದರ್ಯವನ್ನು ಗುರುತಿಸಲು ಅಪೇಕ್ಷಿಸುತ್ತಾನೆ ಮತ್ತು ಒಬ್ಬನು ತನ್ನನ್ನು ತಾನೆ ನೋಡಿಕೊಳ್ಳಲು ಕನ್ನಡಿಯಲ್ಲಿ ಇಣುಕುವಂತೆ, ದೇವರು ಪ್ರಕೃತಿಯ ಪ್ರೇರಕ ಶಕ್ತಿಗಳೊಳಗೇ ಅವನ್ನು "ನೋಡುತ್ತಾನೆ". ಎಲ್ಲವೂ ದೇವರ ಪ್ರತಿಬಿಂಬವೇ ಆಗಿರುವಾಗ, ಸ್ಪಷ್ಟವಾಗಿ ಕಾಣುವ ಕುರೂಪದಲ್ಲೂ ಸೌಂದರ್ಯವನ್ನು ಹುಡುಕಲು ಸೂಫಿ ತತ್ವದ ಜ್ಞಾನಶಾಖೆಯು ಪ್ರಯತ್ನಿಸುತ್ತದೆ.
  • ಸೂಫಿ ತತ್ವವನ್ನು ಪ್ರೀತಿಯ ಧರ್ಮ ಎಂದು ಅನೇಕ ಸಲ ಕರೆಯಲಾಗಿದೆ.ಸೂಫಿ ತತ್ವದಲ್ಲಿ ದೇವರನ್ನು ಮೂರು ಮುಖ್ಯ ಪರಿಭಾಷೆಗಳಲ್ಲಿ ಗುರುತಿಸಲಾಗುತ್ತದೆ. ಅವೆಂದರೆ, ಪ್ರೇಮಿ, ಪ್ರೀತಿಸಲ್ಪಟ್ಟವರು ಮತ್ತು ಕಡುಪ್ರೇಮದವರು. ಈ ಪರಿಭಾಷೆಗಳಲ್ಲಿ ಕೊನೆಯದಾಗಿರುವ ಕಡುಪ್ರೇಮದವರು ಎಂಬುದು ಸೂಫಿ ಕವನಗಳಲ್ಲಿ ಬಹಳ ಕಡೆ ಕಂಡುಬರುತ್ತದೆ.
  • ಪ್ರೀತಿಯ ಮೂಲಕ ಮಾನವಕುಲವು ತನ್ನ ಅಂತರ್ಗತ ಶುದ್ಧತೆ ಮತ್ತು ದೈವಕೃಪೆಗೆ ಮರಳಬಹುದು ಎಂಬುದು ಸೂಫಿ ತತ್ವದ ಒಂದು ಸಾಮಾನ್ಯ ದೃಷ್ಟಿಕೋನ. ದೇವರ ಮೇಲಿನ ತಮ್ಮ ಪ್ರೀತಿಯ ಕಾರಣದಿಂದಾಗಿ ಸೂಫಿ ಸಂತರು "ಅಮಲೇರಿದ" ಸ್ಥಿತಿಗೆ ಕುಖ್ಯಾತರು. ಇದರಿಂದ ಇವರ ತತ್ವಪದ ಮತ್ತು ಸಂಗೀತದಲ್ಲಿ ಮದ್ಯದ ಕುರಿತಾದ ಉಲ್ಲೇಖಗಳು ನಿರಂತರವಾಗಿ ಕಂಡುಬರುತ್ತವೆ.

ಪೌರ್ವಾತ್ಯ ಧರ್ಮಗಳು[ಬದಲಾಯಿಸಿ]

ಬೌದ್ಧ ಧರ್ಮ[ಬದಲಾಯಿಸಿ]

  • ಬೌದ್ಧ ಧರ್ಮದಲ್ಲಿ, ಕಾಮ ಎಂಬುದು ಐಂದ್ರಿಯಿಕವಾಗಿರುವ, ಲೈಂಗಿಕ ಪ್ರೀತಿ. ಇದು ಸ್ವಾರ್ಥವಾಗಿರುವುದರಿಂದ ಜ್ಞಾನೋದಯವನ್ನು ಪಡೆಯುವ ಮಾರ್ಗದಲ್ಲಿ ಇದು ಒಂದು ಅಡಚಣೆಯಾಗಿದೆ. ಕರುಣಾ ಎಂಬುದು ಇತರರ ನೋವನ್ನು ಕಡಿಮೆ ಮಾಡುವ ಸಹಾನುಭೂತಿ ಮತ್ತು ಕರುಣೆಯಾಗಿದೆ. ಇದು ಜ್ಞಾನಕ್ಕೆ ಪೂರಕ ಮತ್ತು ಜ್ಞಾನೋದಯಕ್ಕೆ ಅಗತ್ಯವಾದದ್ದು.
  • ಅದ್ವೇಸ ಮತ್ತು ಮೆಟ್ಟಾ ಗಳು ಧರ್ಮಾರ್ಥ ಪ್ರೀತಿ‌ಗಳು. ಈ ಪ್ರೀತಿ ಷರತ್ತುಗಳಿಂದ ಮುಕ್ತವಾಗಿರುತ್ತದೆ ಮತ್ತು ಇದಕ್ಕೆ ಗಮನಾರ್ಹವಾದ ಅತ್ಮ ಅಂಗೀಕಾರದ ಅಗತ್ಯವಿರುತ್ತದೆ. ಬಾಂಧವ್ಯ ಮತ್ತು ಲೈಂಗಿಕತೆಯ ಕುರಿತಾಗಿರುವ ಹಾಗೂ ಸ್ವ-ಹಿತಾಸಕ್ತಿಯಿಲ್ಲದೆ ಸಂಭವಿಸುವುದು ಅಪರೂಪವಾಗಿರುವ ಸಾಮಾನ್ಯ ಪ್ರೀತಿಗಿಂತ ಇದು ಸ್ವಲ್ಪ ವಿಭಿನ್ನವಾಗಿದೆ. ಇದರ ಬದಲಿಗೆ, ಬೌದ್ಧಧರ್ಮದಲ್ಲಿ ಇದು ನಿರ್ಲಿಪ್ತತೆ ಮತ್ತು ಇತರರ ಯೋಗಕ್ಷೇಮದಲ್ಲಿನ ನಿಸ್ವಾರ್ಥ ಆಸಕ್ತಿಯನ್ನು ಸೂಚಿಸುತ್ತದೆ.
  • ಮಹಾಯಾನ ಬೌದ್ಧಧರ್ಮದಲ್ಲಿರುವ ಬೋಧಿಸತ್ವ ಅದರ್ಶವು, ಸಂಕಟದಲ್ಲಿ ತೊಳಲಾಡುತ್ತಿರುವ ಜಗತ್ತಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಓರ್ವನು ಕೈಗೊಳ್ಳಬೇಕಾದ ಸರ್ವಸಂಗ ಪರಿತ್ಯಾಗವನ್ನು ಒಳಗೊಳ್ಳುತ್ತದೆ. ಬೋಧಿಸತ್ವದ ಮಾರ್ಗವನ್ನು ಅನುಸರಿಸಲು ಹೊಂದಿರಬೇಕಾದ ಅತ್ಯಂತ ಶಕ್ತಿಶಾಲಿ ಪ್ರೇರಣೆಯೆಂದರೆ, ನಿಸ್ವಾರ್ಥದ ಮಿತಿಯಲ್ಲೇ ಆತ್ಮೋದ್ಧಾರ ಮತ್ತು ಎಲ್ಲ ಸಚೇತನ ಜೀವಿಗಳಿಗೆ ಪರೋಪಕಾರಿಯಾದ ಪ್ರೀತಿ‌ಯನ್ನು ತೋರಿಸುವುದು.

ಹಿಂದೂ ಧರ್ಮ[ಬದಲಾಯಿಸಿ]

  • ಹಿಂದೂ ಧರ್ಮದಲ್ಲಿ ಕಾಮ ಸಂತೋಷಕರ, ಇಲ್ಲಿ ಲೈಂಗಿಕ ಪ್ರೀತಿಗೆ ಕಾಮದೇವ ಎಂಬ ಮಾನವರೂಪ ಕೊಡಲಾಗಿದೆ. ಇವನೇ ಕಾಮದ ಅಧಿದೇವತೆ. ಹಿಂದೂ ಧರ್ಮದ ಹಲವು ಜ್ಞಾನಶಾಖೆಗಳ ಪ್ರಕಾರ ಇದು ಜೀವನದಲ್ಲಿನ ಮೂರನೆಯ ತುದಿ (ಪುರುಷಾರ್ಥ ). ಕಾಮದೇವನನ್ನು ಹಲವುವೇಳೆ ಕಬ್ಬಿನ ಜಲ್ಲೆಯ ಬಿಲ್ಲು ಮತ್ತು ಪುಷ್ಟಬಾಣ ಹಿಡಿದು ನಿಂತಿರುವಂತೆ ಚಿತ್ರಿಸಲಾಗಿದೆ.
  • ಇವನು ದೊಡ್ಡ ಗಿಳಿಯೊಂದರ ಮೇಲೆ ಸವಾರಿ ಮಾಡಬಹುದು. ಇವನು ಸಾಮಾನ್ಯವಾಗಿ ತನ್ನ ಪತ್ನಿ ರತಿ ಹಾಗೂ ತನ್ನ ಒಡನಾಡಿ ಮತ್ತು ವಸಂತ ಋತುವಿನ ಅಧಿದೇವನಾದ ವಸಂತನೊಂದಿಗಿರುತ್ತಾನೆ. ಕಾಮ ಮತ್ತು ರತಿಯರ ಕಲ್ಲಿನ ವಿಗ್ರಹಗಳನ್ನು ಭಾರತಕರ್ನಾಟಕಬೇಲೂರಿನಲ್ಲಿರುವ ಚೆನ್ನಕೇಶವ ದೇವಾಲಯದ ಬಾಗಿಲ ಮೇಲೆ ಕಾಣಬಹುದು. ಕಾಮ ನ ಮತ್ತೊಂದು ಹೆಸರು ಮಾರ .
  • ಕಾಮ ಕ್ಕೆ ವಿರುದ್ಧವಾಗಿ ಪ್ರೇಮ – ಅಥವಾ ಪ್ರೇಮ್‌ – ಎನ್ನುವುದು ಉನ್ನತ ಪ್ರೀತಿಯನ್ನು ಸೂಚಿಸುತ್ತದೆ. ಕರುಣಾ ಎಂದರೆ ಸಹಾನುಭೂತಿ ಮತ್ತು ಕರುಣೆ, ಇದು ಇತರರ ಕಷ್ಟಗಳಿಗೆ ಸ್ಪಂದಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಭಕ್ತಿ ಎನ್ನುವುದು ಸಂಸ್ಕೃತದ ಪರಿಭಾಷೆಯಾಗಿದ್ದು, ಇದಕ್ಕೆ "ಪರಮ ಶ್ರೇಷ್ಠ ಭಗವಂತನಿಗೆ ತೋರುವ ಪ್ರೀತಿಪೂರ್ವಕ ಭಕ್ತಿ" ಎಂಬ ಅರ್ಥವಿದೆ.
  • ಭಕ್ತಿ ಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಯನ್ನು ಭಕ್ತ ಎನ್ನಲಾಗುತ್ತದೆ. ಹಿಂದೂ ಬರಹಗಾರರು, ಮತಧರ್ಮಶಾಸ್ತ್ರಜ್ಞರು ಮತ್ತು ತತ್ವಜ್ಞಾನಿಗಳು ಭಕ್ತಿ ಯನ್ನು ಒಂಭತ್ತು ರೂಪಗಳಾಗಿ ವಿಂಗಡಿಸಿದ್ದಾರೆ. ಇದನ್ನು ನಾವು ಭಾಗವತ ಪುರಾಣ ಮತ್ತು ತುಳಸೀದಾಸರ ಕೃತಿಗಳಲ್ಲಿ ಕಾಣಬಹುದು. ಅನಾಮಿಕನೊಬ್ಬ (ನಾರದ ಬರೆದಿದ್ದಾನೆಂಬ ನಂಬಿಕೆಯಿದೆ) ಬರೆದಿರುವ ನಾರದ ಭಕ್ತಿ ಸೂತ್ರಗಳು ಎಂಬ ತಾತ್ವಿಕ ಬರವಣಿಗೆಯಲ್ಲಿ ಪ್ರೀತಿಯನ್ನು ಹನ್ನೊಂದು ರೂಪಗಳಾಗಿ ವಿಂಗಡಿಸಲಾಗಿದೆ.

ಇದನ್ನೂ ನೋಡಿರಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಆಕ್ಸ್‌ಫರ್ಡ್‌ ಇಲ್ಲಸ್ಟ್ರೇಟೆಡ್‌ ಅಮೆರಿಕನ್‌ ಡಿಕ್ಷ್‌ನರಿ (1998) + ಮೆರಿಯಾಮ್‌ -ವೆಬ್‌ಸ್ಟರ್‌ ಕಾಲೇಜಿಯೇಟ್‌ ಡಿಕ್ಷ್‌ನರಿ (2000)
  2. ["What Is Love? A Philosophy of Life". HuffPost. 5 December 2014. Retrieved 2 October 2020.-9]
  3. Kristeller, Paul Oskar (1980). Renaissance Thought and the Arts: Collected Essays. Princeton University. ISBN 0-691-02010-8.
  4. Mascaró, Juan (2003). The Bhagavad Gita. Penguin Classics. ISBN 0-140-44918-3. (J. ಮಸ್ಕಾರೋ, ಅನುವಾವಾದಕ)
  5. Kay, Paul (1984). "What is the Sapir-Whorf Hypothesis?". American Anthropologist. New Series. 86 (1): 65–79. doi:10.1525/aa.1984.86.1.02a00050. {{cite journal}}: Unknown parameter |month= ignored (help)
  6. "Ancient Love Poetry". Archived from the original on 2007-09-30. Retrieved 2021-08-10.
  7. Leibniz, Gottfried. "Confessio philosophi". Wikisource edition. Retrieved Mar 25, 2009.
  8. DiscoveryHealth. "Paraphilia". Archived from the original on 2007-12-12. Retrieved 2007-12-16.
  9. ೯.೦ ೯.೧ Lewis, Thomas (2000). A General Theory of Love. Random House. ISBN 0-375-70922-3. {{cite book}}: Unknown parameter |coauthors= ignored (|author= suggested) (help)
  10. ೧೦.೦ ೧೦.೧ Winston, Robert (2004). Human. Smithsonian Institution.
  11. Emanuele, E. (2005). [http: //www. biopsychiatry.com/lovengf.htm "Raised plasma nerve growth factor levels associated with early-stage romantic love"]. Psychoneuroendocrinology. Sept. 05. {{cite journal}}: Check |url= value (help); Unknown parameter |coauthor= ignored (|author= suggested) (help)
  12. Rubin, Zick (1970). "Measurement of Romantic Love". Journal of Personality and Social Psychology. 16: 265–27. doi:10.1037/h0029841.
  13. Rubin, Zick (1973). Liking and Loving: an invitation to social psychology. New York: Holt, Rinehart & Winston.
  14. Berscheid, Ellen (1969). Interpersonal Attraction. Addison-Wesley Publishing Co. CCCN 69-17443. {{cite book}}: Unknown parameter |coauthors= ignored (|author= suggested) (help)
  15. Peck, Scott (1978). The Road Less Traveled. Simon & Schuster. p. 169. ISBN 0-671-25067-1.
  16. ಥಾಮಸ್‌ ಕೋವ್ಸ್‌-ಜುಲಾಫ್‌, ರೀಡೆನ್‌ ಮತ್ತು ಸ್ಕ್ವೀಜೆನ್‌, ಮ್ಯೂನಿಚ್‌, 1972.
  17. ೧೭.೦ ೧೭.೧ Pope Benedict XVI. "papal encyclical, Deus Caritas Est".

ಮೂಲಗಳು[ಬದಲಾಯಿಸಿ]

  • Chadwick, Henry (1998). Saint Augustine Confessions. Oxford: Oxford University Press.
  • Fisher, Helen. Why We Love: the Nature and Chemistry of Romantic Love.
  • Singer, Irving (1966). The Nature of Love (v.1 reprinted and later volumes from The University of Chicago Press, 1984 ed.). Random House. ISBN 0-226-76094-4. {{cite book}}: Unknown parameter |subtitle= ignored (help)
  • Sternberg, R.J. (1986). "A triangular theory of love". Psychological Review. 93: 119–135. doi:10.1037/0033-295X.93.2.119.
  • Sternberg, R.J. (1987). "Liking versus loving: A comparative evaluation of theories". Psychological Bulletin. 102: 331–345. doi:10.1037/0033-2909.102.3.331.
  • Tennov, Dorothy (1979). Love and Limerence: the Experience of Being in Love. New York: Stein and Day. ISBN 0-812-86134-5.
  • Wood Samuel E., Ellen Wood and Denise Boyd (2005). The World of Psychology (5th ed.). Pearson Education. p. 402–403.

ಹೊರಗಿನ ಕೊಂಡಿಗಳು[ಬದಲಾಯಿಸಿ]

Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
"https://kn.wikipedia.org/w/index.php?title=ಪ್ರೀತಿ&oldid=1203732" ಇಂದ ಪಡೆಯಲ್ಪಟ್ಟಿದೆ