ಪಿ.ಟಿ ಉಷಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
P. T. Usha
ಪಿ ಟಿ ಉಷಾ
ಜನನ
Pilavullakandi Thekkeparambil Usha [೧]

(1964-06-27) ೨೭ ಜೂನ್ ೧೯೬೪ (ವಯಸ್ಸು ೫೯)
ರಾಷ್ಟ್ರೀಯತೆIndian
ಇತರೆ ಹೆಸರುಗಳುPayyoli Express, Golden Girl
ಉದ್ಯೋಗAthlete
ಉದ್ಯೋಗದಾತರುIndian Railways
ಇದಕ್ಕೆ ಖ್ಯಾತರುPadma Shri
ಜೀವನ ಸಂಗಾತಿV. Srinivasan
ಮಕ್ಕಳುUjjwal
ಪೋಷಕರುPaithal, Lakshmi
ಜಾಲತಾಣptusha.org

ಪಿಲವುಲ್ಲಕನ್ಡಿ ತೆಕ್ಕೆಪರಮ್ಬಿಲ್ ಉಷಾ (ಮಲೆಯಾಳಮ್: പിലാവുളളകണ്ടി തെക്കേപറമ്പില്‍ ഉഷ ) (ಜನನ ಜೂನ್ ೨೭, ೧೯೬೪),ಪಿ.ಟಿ ಉಷಾ ಅವರು ಭಾರತದ ಪ್ರಖ್ಯಾತ ಕ್ರೀಡಾಪಟು ಎಂದು ಪರಿಚಿತರಾಗಿದ್ದಾರೆ.ಅವರು ಕೇರಳ ರಾಜ್ಯಕ್ಕೆ ಸೇರಿದವರಾಗಿದ್ದಾರೆ. ಪಿ.ಟಿ ಉಷಾ ಅವರು ೧೯೭೯ ರಿಂದಲೂ ಭಾರತದ ಕ್ರೀಡಾವಲಯದೊಂದಿಗೆ ತಮ್ಮ ಒಡನಾಟ ಹೊಂದಿದ್ದಾರೆ. ಭಾರತದಲ್ಲಿ ಹುಟ್ಟಿದ ಅದ್ವೀತಿಯ ಕ್ರೀಡಾಪಟುವೆಂದು ಅವರನ್ನು ಪರಿಗಣಿಸಲಾಗುತ್ತದೆ.ಅವರನ್ನು "ಭಾರತದ ಓಟದ ರಾಣಿ" ಎನ್ನುತ್ತಾರೆ.[೨] ಅವರನ್ನು ಪಯ್ಯೊಲಿ ಎಕ್ಸ್ ಪ್ರೆಸ್ ಎಂದು ವರ್ಣಿಸಲಾಗುತ್ತದೆ. ಸದ್ಯ ಅವರು ಕೊಯಿಲ್ಯಾಂಡಿಯಲ್ಲಿ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ.

ಪಿ.ಟಿ ಉಷಾ , ಕೇರಳದ ಉತ್ತರ ಮಲಬಾರ್ ನ ಕರಾವಳಿ ಕೊಜಿಕೊಡ್ ಜಿಲ್ಲೆಯ ಪಯ್ಯೊಲಿ ಹಳ್ಳಿಯಲ್ಲಿ ಜನಸಿದ್ದಾರೆ. ಆಗ ೧೯೭೬ರಲ್ಲಿ ಕೇರಳ ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಕ್ರೀಡಾ ಶಾಲೆಯೊಂದನ್ನು ತೆರೆಯಿತು.ಆಗ ಉಷಾ ಅವರನ್ನು ತಮ್ಮ ಜಿಲ್ಲೆಯನ್ನು ಪ್ರತಿನಿಧಿಸುವಂತೆ ಕ್ರೀಡೆಗಳಿಗಾಗಿ ಆಯ್ಕೆಗೊಳಿಸಲಾಯಿತು.

ವೃತ್ತಿಜೀವನ[ಬದಲಾಯಿಸಿ]

ನಂತರ ಅವರು ೧೯೭೯ ರಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಗೇಮ್ಸ್ ನಲ್ಲಿ ಭಾಗವಹಿಸಿದರು.ಆ ರಾಷ್ಟ್ರೀಯ ಶಾಲಾ ಕ್ರೀಡೆಗಳಲ್ಲಿ ಒ.ಎಂ ನಂಬಿಯಾರ್ ಅವರು ಉಷಾರ ಪ್ರತಿಭೆ ಗುರುತಿಸಿದರು.ನಂತರ ಅವರ ಕ್ರೀಡಾಜೀವನದುದ್ದಕ್ಕೂ ಅವರೇ ಉಷಾಗೆ ತರಬೇತುದಾರರಾದರು. ಅವರ ಚೊಚ್ಚಿಲ ಕ್ರೀಡಾ ಸ್ಪರ್ಧೆ ೧೯೮೦ ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಅವರು ಅಷ್ಟಾಗಿ ಪ್ರತಿಭೆ ತೋರಲಿಲ್ಲ. ನಂತರ ೧೯೮೨ ರಲ್ಲಿ ನವದೆಹಲಿ ಏಷ್ಯಾಡ್ ನ ೧೦೦ ಮೀ ಮತ್ತು ೨೦೦ ಮೀ.ಓಟದ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದರು.ಒಂದು ವರ್ಷದ ಬಳಿಕ ಕುವೇತ್ ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್ ನಲ್ಲಿನ ೪೦೦ ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ನೂತನ ಏಷಿಯನ್ ದಾಖಲೆ ನಿರ್ಮಿಸಿದರು.[ಸೂಕ್ತ ಉಲ್ಲೇಖನ ಬೇಕು] ಉಷಾ ಅವರು ೧೯೮೩-೮೯ ರ ಅವಧಿಯಲ್ಲಿ ATF ನಲ್ಲಿ ೧೩ ಚಿನ್ನದ ಪದಕಗಳನ್ನು ಗಳಿಸಿದರು.(ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ) ಲಾಸ್ ಎಂಜಿಲ್ಸ್ ನಲ್ಲಿ ೧೯೮೪ ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ೪೦೦ ಮೀಟರ್ಸ್ ನ ಹರ್ಡಲ್ಸನ ಸೆಮಿಫೈನಲ್ಸ್ ನಲ್ಲಿ ಮೊದಲಿಗರಾದರೆ ಅಂತಿಮ ಸ್ಪರ್ಧೆಯಲ್ಲಿ ಮುಗ್ಗರಿಸಿದರು. ಮಿಲ್ಖಾ ಸಿಂಗ್ ಅವರ ೧೯೬೦ ರ ಸಾಧನೆ ಪ್ರಕರಣದಲ್ಲಾದಂತೆ ಅವರಿಗೆ ಈ ಅತ್ಯಂತ ಕೂದಲೆಳೆಯಲ್ಲಿಯೇ ಮೂರನೆಯ ಸ್ಥಾನಕ್ಕೆ ಆಯ್ಕೆಯಾದದ್ದು ಮರುಕಳಿಸಿದಂತಾಯಿತು. ಉಷಾ ಕೇವಲ ೧/೧೦೦ ಸೆಕೆಂಡುಗಳ ಅವಧಿಯಲ್ಲಿ ಕಂಚು ಪಡೆಯುವಲ್ಲಿ ವಿಫಲಗೊಂಡರು. ಒಲಿಂಪಿಕ್ಸ್ ಕ್ರೀಡೆಗಳಲ್ಲಿ ೪೦೦ ಮೀ.ಹರ್ಡಲ್ಸ್ ನ ಸೆಮಿ ಫೈನಲ್ ಗೆ ತಲುಪುವ ಮೂಲಕ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.(ಐದನೆಯ ಭಾರತೀಯರಾಗಿದ್ದಾರೆ)

ಪಿ.ಟಿ ಉಷಾ ಅವರು ೧೯೮೬ ರಲ್ಲಿ ಸಿಯೊಲ್ ನಲ್ಲಿ ನಡೆದ ೧೦ ನೆಯ ಏಷಿಯನ್ ಗೇಮ್ಸ್ ನಲ್ಲಿನ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ ೪ ಚಿನ್ನ ೧ ರಜತ ಪದಕಗಳನ್ನು ಪಡೆದರು. ಇಲ್ಲಿ ಅವರು ಭಾಗವಹಿಸಿದ ಎಲ್ಲಾ ಏಷಿಯನ್ ಗೇಮ್ಸ್ ನಲ್ಲಿ ದಾಖಲೆ ಮಾಡಿದರು.ಜಕಾರ್ತಾದಲ್ಲಿ ೧೯೮೫ ರಲ್ಲಿ ನಡೆದ ೬ನೆಯ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್ ನಲ್ಲಿ ಐದು ಚಿನ್ನದ ಪದಕ ಗಳಿಸಿದರು. ಅವರು ಅದೇ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಏಕಾಂಗಿಯಾಗಿ ಆರು ಪದಕ ಗೆದ್ದ ಏಕೈಕ ಕ್ರೀಡಾಳು ಎನಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಉಷಾ, ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಮಟ್ಟದ ೧೦೧ ಪದಕಗಳಿಗೆ ಭಾಜನರಾಗಿದ್ದಾರೆ. ಸದ್ಯ ಅವರು ದಕ್ಷಿಣ ರೈಲ್ವೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರನ್ನು ೧೯೮೫ ರಲ್ಲಿ ಪದ್ಮಶ್ರೀ ಮತ್ತು ಅರ್ಜುನ ಪ್ರಶಸ್ತಿ ಗಳನ್ನು ನೀಡಿ ಗೌರವಿಸಲಾಯಿತು.

ಸಾಧನೆಗಳು[ಬದಲಾಯಿಸಿ]

ಪದಕ ದಾಖಲೆ
Center
ಪಿ.ಟಿ ಉಷಾ
Women's athletics


Asian Games


Silver medal – second place 1982 New Delhi 2 No.s
Gold medal – first place 1986 Seoul 4 No.s
Silver medal – second place 1986 Seoul 1 No.
Silver medal – second place 1990 Beijing 3 No.s
Silver medal – second place 1994 Hiroshima 1 No.
  • ೧೯೮೦ : -- ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದು

ಕರಾಚಿಯ ಇಂಟರ್ ನ್ಯಾಶನಲ್ ಇನ್ವೈಟೇಶನ್ ಸ್ಪರ್ಧೆಗಳಲ್ಲಿ ೪ ಚಿನ್ನದ ಪದಕ ಗೆದ್ದಿದ್ದು.

  • ೧೯೮೧ : -- ಪುಣೆ ಇಂಟ್: ಇನ್ವೈಟೇಶನ್ ಮೀಟ್ ಗಳಲ್ಲಿ ೨ ಚಿನ್ನದ ಪದಕಗಳು.

ಹಿಸ್ಸಾರ್ ಇಂಟ್ ನಲ್ಲಿ: ಇನ್ವೈಟೇಶನ್ ಮೀಟ್ ನಲ್ಲಿ ೧ ಚಿನ್ನದ ಪದಕ. ಲೂಧಿಯಾನಾ ಇಂಟ್: ಇನ್ವೈಟೇಶನ್ ಮೀಟ್ ನಲ್ಲಿ ೨ ಚಿನ್ನದ ಪದಕಗಳು.

  • ೧೯೮೨ : -- ಸಿಯೊಲ್ ನಲ್ಲಿ ನಡೆದ ವರ್ಲ್ಡ್ ಜೂನಿಯರ್ ಮೀಟ್ ನಲ್ಲಿ ೧ ಚಿನ್ನ ಮತ್ತು ೧ ಕಂಚಿನ ಪದಕ.

ನವದೆಹಲಿ ಏಷಿಯನ್ ಗೇಮ್ಸ್ ನಲ್ಲಿ ೨ ರಜತ ಪದಕ.

  • ೧೯೮೩ : -- ಕುವೇತ್ ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ನಲ್ಲಿ ೧ ಚಿನ್ನ ೧ ರಜತ ಪದಕ

೨ ಚಿನ್ನ, ಇಂಟ್ ನಲ್ಲಿ: ನವದೆಹಲಿಯ ರಾಷ್ಟ್ರೀಯ ಇನ್ವೈಟೇಶನ್ ಮೀಟ್ ೨ ಚಿನ್ನ, ಇಂಟ್ ನಲ್ಲಿ: ನವದೆಹಲಿಯ ರಾಷ್ಟ್ರೀಯ ಇನ್ವೈಟೇಶನ್ ಮೀಟ್

  • ೧೯೮೪ : -- ಇಂಗ್ಲೆವುಡ್ U.S.A ನ ಇಂಟ್ ನಲ್ಲಿನ ನ್ಯಾಶನಲ್ ಮೀಟ್ ನಲ್ಲಿ ೧ ಚಿನ್ನದ ಪದಕ

ಲಾಸ್ ಎಂಜಿಲ್ಸ್ ಒಲಿಂಪಿಕ್ಸ್ ಗೇಮ್ಸ್ ನ ೪೦೦ ಮೀ ನಲ್ಲಿ ಭಾಗವಹಿಸಿದ್ದು. ಎಂ.ಎಚ್ ನಲ್ಲಿ ಮತ್ತು ೧೦೦ ನೆಯ ಸೆಕೆಂಡ್ ಅಂತರದಲ್ಲೇ ಕಂಚು ಕೈತಪ್ಪಿದ್ದು,ಆದರೆ ಅವರು ಅತ್ಯಂತ ಉತ್ತಮ ಅವಧಿ ೫೫.೪೨ ಸೆಕೆಂಡ್ ಗಳನ್ನು ದಾಖಲಿಸಿದ್ದು ಸಾಧನೆಯೇ ಸರಿ.ಅದೇ ತೆರನಾಗಿ ೪x ೪೦೦ ಮೀ.ರಿಲೆನಲ್ಲಿ ೭ ನೆಯ ಸ್ಥಾನ ಗಳಿಸಿದರು. ಸಿಂಗಾಪೂರ್ ನಲ್ಲಿ ನಡೆದ ಎಂಟು ದೇಶಗಳ ಇಂಟ್: ಇನ್ವೈಟೇಶನ್ ಮೀಟ್ ನಲ್ಲಿ ೩ ಚಿನ್ನದ ಪದಕಗಳು. ೪೦೦ ಮೀ.ನಲ್ಲಿ ೪ನೆಯ ಸ್ಥಾನಎಂ.ಎಚ್ ಇಂಟ್ ನಲ್ಲಿ : ಟೊಕಿಯೊದಲ್ಲಿ ನಡೆದ ರಾಷ್ಟ್ರೀಯ ಇನ್ವೈಟೇಶನ್ ಮೀಟ್

  • ೧೯೮೫ : -- ಝೆಕ್ ರಿಪಬ್ಲಿಕ್ ನ ಒಲೊಮೊಗ್ ನಲ್ಲಿ ನಡೆದ ವರ್ಲ್ಡ್ ರೈಲ್ವೆ ಮೀಟ್ ನಲ್ಲಿ ೨ ಚಿನ್ನ ಮತ್ತು ೨ ರಜತ ಪದಕಗಳು ಅಲ್ಲದೇ ಅವರನ್ನು ಅತ್ಯುತ್ತಮ ರೈಲ್ವೆ ಕ್ರೀಡಾಪಟುವೆಂದು ಗೌರವಿಸಲಾಯಿತು. ಇಂಡಿಯನ್ ರೈಲ್ವೆಗಾಗಿ ಈ ಗೌರವಕ್ಕೆ ಪಾತ್ರರಾದ ಏಕೈಕ ಕ್ರೀಡಾಳು ಅವರಾಗಿದ್ದಾರೆ.ಯಾವುದೇ ಭಾರತೀಯ ಪುರುಷ ಅಥವಾ ಮಹಿಳೆ ಈ ರೈಲ್ವೆ ಪುರಸ್ಕಾರಕ್ಕೆ ಪಾತ್ರರಾಗಿಲ್ಲ.

ಪ್ರಾಗ್ಯುನಲ್ಲಿ ನಡೆದ ೪೦೦ ಮೀ.ಹರ್ಡಲ್ಸ್ ವರ್ಲ್ಡ್ ಗ್ರ್ಯಾಂಡ್ ಪ್ರಿಕ್ಸ್ ಮೀಟ್ ೫ನೆಯ ಸ್ಥಾನ ಲಂಡನ್ ನಲ್ಲಿ ನಡೆದ ವರ್ಲ್ಡ ಗ್ರ್ಯಾಂಡ್ ಪ್ರಿಕ್ಸ್ ಮೀಟ್ ನ ೪೦೦ ಮೀ,ಹರ್ಡಲ್ಸ್ ನಲ್ಲಿ ಕಂಚಿನ ಪದಕ ಬ್ರಿಟ್ಸ್ಲಾವಾದಲ್ಲಿ ನಡೆದ ವರ್ಲ್ಡ ಗ್ರ್ಯಾಂಡ್ ಪ್ರಿಕ್ಸ್ ಮೀಟ್ ನ ೪೦೦ ಮೀ,ನಲ್ಲಿ ರಜತ ಪದಕ ಪ್ಯಾರಿಸ್ ನಲ್ಲಿ ನಡೆದ ವರ್ಲ್ಡ ಗ್ರ್ಯಾಂಡ್ ಪ್ರಿಕ್ಸ್ ಮೀಟ್ ನ ೪೦೦ ಮೀ,ನಲ್ಲಿ ೪ನೆಯ ಸ್ಥಾನ ಬುಡಾಪೆಸ್ಟ್ಯನಲ್ಲಿ ನಡೆದ ವರ್ಲ್ಡ ಗ್ರ್ಯಾಂಡ್ ಪ್ರಿಕ್ಸ್ ಮೀಟ್ ನ ೪೦೦ ಮೀ,ನಲ್ಲಿ ಕಂಚಿನ ಪದಕ ಲಂಡನ್ ನಲ್ಲಿ ನಡೆದ ವರ್ಲ್ಡ ಗ್ರ್ಯಾಂಡ್ ಪ್ರಿಕ್ಸ್ ಮೀಟ್ ನ ೪೦೦ ಮೀ,ನಲ್ಲಿ ರಜತ ಪದಕ ಒಸ್ಟ್ಯ್ರಾವಾದಲ್ಲಿ ನಡೆದ ವರ್ಲ್ಡ ಗ್ರ್ಯಾಂಡ್ ಪ್ರಿಕ್ಸ್ ಮೀಟ್ ನಲ್ಲಿ ರಜತ ಪದಕ ೫ನೆಯ ಸ್ಥಾನ ೪೦೦ ಮೀ.ನಲ್ಲಿM.H. & ೪ನೆಯ ಸ್ಥಾನ ೪೦೦ ಮೀ.ನಲ್ಲಿವಿಶ್ವ ಕಪ್ ನಲ್ಲಿ ಮೀಟರ್ಸ್ ಕ್ಯಾನ್ ಬೆರಾ ದಲ್ಲಿ ನಡೆದ ಚಾಂಪಿಯನ್ ಶಿಪ್ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ನಲ್ಲಿ ೫ ಚಿನ್ನದ ಪದಕಗಳು ಮತ್ತು ೧ ಕಂಚಿನ ಪದಕ ಜಕಾರ್ತಾದಲ್ಲಿ.

  • ೧೯೮೬ : -- ಮಾಸ್ಕೊದಲ್ಲಿ ನಡೆದ ೪೦೦ ಮೀ. ಗುಡ್ ಉಯಿಲ್ ಗೇಮ್ಸ್ ನಲ್ಲಿ ೬ನೆಯ ಸ್ಥಾನ.

ಸಿಯೊಲ್ ನಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ೪ ಚಿನ್ನದ ಪದಕಗಳು ಮತ್ತು ೧ ರಜತ ಪದಕ. ಮಲೆಸಿಯನ್ ಒಪನ್ ಅಥ್ಲೆಟಿಕ್ ಮೀಟ್ ೧ ಚಿನ್ನದ ಪದಕ. ಸಿಂಗಾಪೂರ್ ದಲ್ಲಿ ನಡೆದ ಲಯನ್ಸ್ ಅಥ್ಲೆಟಿಕ್ ಮೀಟ್ ನಲ್ಲಿ ೩ ಚಿನ್ನದ ಪದಕಗಳು. ನವದೆಹಲಿಯಲ್ಲಿ ನಡೆದ ಫೋರ್ ನೇಶನ್ಸ್ ಇಂಟ್ ನ ನ್ಯಾಶನಲ್ ಇನ್ವೈಟೇಶನ್ ಮೀಟ್ ನಲ್ಲಿ ೨ ಚಿನ್ನದ ಪದಕಗಳು.

  • ೧೯೮೭ : -- ಸಿಂಗಾಪೂರ್ ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ನಲ್ಲಿ ೩ ಚಿನ್ನದ ಪದಕಗಳು ಮತ್ತು ೨ ರಜತ ಪದಕಗಳು.

ಕೌಲಾಲಂಪೂರ್ ನಲ್ಲಿ ನಡೆದ ಮಲೆಸಿಯನ್ ಒಪನ್ ಅಥ್ಲೆಟಿಕ್ ಮೀಟ್ ನಲ್ಲಿ ೨ ಚಿನ್ನದ ಪದಕಗಳು ನವದೆಹಲಿಯಲ್ಲಿ ನಡೆದ ಇಂಟ್ ಇನ್ವೈಟೇಶನ್ ಮೀಟ್ ನಲ್ಲಿ ೩ ಚಿನ್ನದ ಪದಕಗಳು. ಕೊಲ್ಕತ್ತಾದಲ್ಲಿ ನಡೆದ ಸೌತ್ ಏಷಿಯನ್ ಫೆಡರೇಶನ್ ಗೇಮ್ಸ್ ನಲ್ಲಿ ೫ ಚಿನ್ನದ ಪದಕಗಳು. ರೋಮ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದು.ಅವರು ೪೦೦ ಮೀ.ಹರ್ಡಲ್ಸ್ } ನ ಸೆಮಿ ಫೈನಲ್ಸ್ ನಲ್ಲಿ ಓಡಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಪ್ರಿ-ಒಲಿಂಪಿಕ್ಸ್ ಇಂಟರ್ ನ್ಯಾಶನಲ್ ಅಥ್ಲೆಟಿಕ್ ಮೀಟ್ ನಲ್ಲಿ ೨ ಚಿನ್ನದ ಪದಕಗಳನ್ನು ಪಡೆದಿದ್ದ್ದಾರೆ. ಸಿಯೊಲ್ ಒಲಿಂಪಿಕ್ಸ್ ನ ೪೦೦ ಮೀ.ಹರ್ಡ್ಸಲ್ಸ್ ನಲ್ಲಿ ಭಾಗವಹಿಸಿದ್ದಾರೆ.

  • ೧೯೮೯ : -- ನವದೆಹಲಿಯಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ನಲ್ಲಿ ೪ ಚಿನ್ನದ ಪದಕ ಹಾಗು ೨ ರಜತ ಪದಕಗಳನ್ನು ಗಳಿಸಿದ್ದಾರೆ.

ಕೊಲ್ಕತ್ತಾದಲ್ಲಿ ನಡೆದ ಇಂಟರ್ ನ್ಯಾಶನಲ್ ಇನ್ವೈಟೇಶನ್ ಮೀಟ್ ನಲ್ಲಿ ೩ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಮಲೆಸಿಯನ್ ಅಥ್ಲೆಟಿಕ್ ಮೀಟ್ ನಲ್ಲಿ ೪ ಚಿನ್ನದ ಪದಕಗಳು.

  • ೧೯೯೦ : -- ಬೀಜಿಂಗ್ ಏಷಿಯನ್ ಗೇಮ್ಸ್ ನಲ್ಲಿ ೩ ರಜತ ಪದಕಗಳು
  • ೧೯೯೪ : -- ಹಿರೊಶಿಮಾ ಏಷಿಯನ್ ಗೇಮ್ಸ್ ನಲ್ಲಿ ೧ ರಜತ ಪದಕ.

ಪುಣೆಯಲ್ಲಿ ನಡೆದ ಇಂಟರ್ ನ್ಯಾಶನಲ್ ಪರ್ಮಿಟ್ ಮೀಟ್ ನಲ್ಲಿ ೧ ಕಂಚಿನ ಪದಕ.

ಪುಣೆಯಲ್ಲಿ ನಡೆದ ಇಂಟರ್ ನ್ಯಾಶನಲ್ ಪರ್ಮಿಟ್ ಮೀಟ್ ನಲ್ಲಿ ೧ ಕಂಚಿನ ಪದಕ.

  • ೧೯೯೬ : -- ಅಟ್ಲಾಂಟಾ ಒಲಿಂಪಿಕ್ಸ್ ಗೇಮ್ಸ್ ಅ ನಲ್ಲಿ ಭಾಗವಹಿಸಿದ್ದು.

ಪುಣೆಯಲ್ಲಿ ನಡೆದ ಇಂಟರ್ ನ್ಯಾಶನಲ್ ಪರ್ಮಿಟ್ ಮೀಟ್ ನಲ್ಲಿ ೧ ರಜತ ಪದಕ.

  • ೧೯೯೭ : -- ಪಟಿಯಾಲಾ ನಲ್ಲಿ ನಡೆದ ಇಂಟರ್ ನ್ಯಾಶನಲ್ ಪರ್ಮಿಟ್ ಮೀಟ್ ನಲ್ಲಿ ೧ ಚಿನ್ನದ ಪದಕ.
  • ೧೯೯೮ : -- ಫುಕೊಕಾದಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಫೀಲ್ಡ್ ಮೀಟ್ ನಲ್ಲಿ ೧ ಚಿನ್ನದ ಪದಕ,೧ ರಜತ ಪದಕ ಮತ್ತು ೨ ಕಂಚಿನ ಅಪ್ದಕಗಳು.

ರಾಜಾ ಭಲೆಂದ್ರಸಿಂಗ್ ಇಂಟರ್ ನ್ಯಾಶನಲ್ ನಲ್ಲಿ ೨ ಚಿನ್ನದ ಪದಕಗಳು ಮತ್ತು ೧ ರಜತ ಪದಕ ನವದೆಹಲಿಯಲ್ಲಿನ ಅಥ್ಲೀಟಿಕ್ ಮೀಟ್

ಬ್ಯಾಂಕಾಕ್ ನಲ್ಲಿನ ಏಷಿಯನ್ ಗೇಮ್ಸ್ ನ ೪x೪೦೦ ಮೀ.ನಲ್ಲಿ ಪಾಲ್ಗೊಂಡಾಗ ೧ ರಜತ ಪದಕ.ರಿಲೆ ಸದಸ್ಯರಾಗಿ

  • ೧೯೯೯ : -- ಕಠ್ಮಂಡುವಿನಲ್ಲಿ ನಡೆದ SAF ಗೇಮ್ಸ್ ನಲ್ಲಿ ೧ ಚಿನ್ನದ ಪದಕ ಮತ್ತು ೨ ರಜತ ಪದಕಗಳು

ನವದೆಹಲಿಯ ರಾಜಾ ಭಲೆಂದ್ರಸಿಂಗ್ ಇಂಟರ್ ನ್ಯಾಶನಲ್ ನಲ್ಲಿ ೧ ಚಿನ್ನದ ಪದಕ.

ವಿಶ್ವ ದಾಖಲೆಗಳು[ಬದಲಾಯಿಸಿ]

ಇಂಡೊನೇಶಿಯಾಜಕಾರ್ತಾದಲ್ಲಿ ೧೯೮೫ ರಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ಉಷಾ ಅವರು ೧೦೦.೨೦೦ ಮತ್ತು ೪೦೦ ಮೀಟರ್ ವೇಗದ ಓಟದ ಸ್ಪರ್ಧೆಯಲ್ಲಿ ೫ ಚಿನ್ನದ ಪದಕಗಳನ್ನು ಗೆದ್ದರು,ಅದರ ಜೊತೆಯಲ್ಲಿಯೇ ೪೦೦ ಮೀಟರ್ ಹರಡಲ್ಸ್ ಮತ್ತು ೪ x ೪೦೦ ಮೀಟರ್ ರಿಲೆಯನಲ್ಲಿ ಈ ಸಾಧನೆ ಮಾಡಿದರು. ಅವರು ೪ x ೧೦೦ ಮೀಟರ್ ರಿಲೆಯಲ್ಲಿ ಸಹ ಕಂಚಿನ ಪದಕಕ್ಕೆ ಭಾಜನರಾದರು. ಬಹುಶಃ ಸಿಂಗಲ್ ಟ್ರ್ಯಾಕ್ ಮೀಟ್ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದ ದಾಖಲೆ ಮಾಡಿದ ಏಕೈಕ ಮಹಿಳೆಯಾಗಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

  • ಅರ್ಜುನ ಪ್ರಶಸ್ತಿ ,೧೯೮೪ ರಲ್ಲಿ ಪಡೆದಿದ್ದು.
  • ಅತ್ಯುತ್ತಮ ಮಹಿಳಾ ಅಥ್ಲೆಟಿ, ೧೯೮೫ ರಲ್ಲಿ ಜಕಾರ್ತಾದಲ್ಲಿನ ಏಷಿಯನ್ ಅಥ್ಲೆಟಿಕ್ ಮೀಟ್ ಸ್ಪರ್ಧೆ.
  • ೧೯೮೪ ರಲ್ಲಿ ಪದ್ಮಶ್ರೀ.
  • ಬೆಸ್ಟ್ ಅಥ್ಲೆಟಿ ಏಷಿಯನ್ ಅವಾರ್ಡ್ ಗಳು; ೧೯೮೪,೧೯೮೫,೧೯೮೬,೧೯೮೭,and ೧೯೮೯ ರಲ್ಲಿ.
  • ಅತ್ಯುತ್ತಮ ರೈಲ್ವೆ ಕ್ರೀಡಾಳು ಮಾರ್ಶಲ್ ಟಿಟೊ ಪ್ರಶಸ್ತಿ ೧೯೮೪,೧೯೮೫,೧೯೮೯ and ೧೯೯೦ ರಲ್ಲಿ.
  • ೧೯೮೬ ರಲ್ಲಿ ಸಿಯೊಲ್ ಏಷಿಯನ್ ಗೇಮ್ಸ್ , ನಲ್ಲಿ ಅತ್ಯುತ್ತಮ ಅಥ್ಲೆಟಿಯಾಗಿ ಆದಿದಾಸ್ ಗೊಲ್ಡನ್ ಶೂ ಅವಾರ್ಡ್ ಪಡೆದದ್ದು.
  • ಅಥ್ಲೆಟಿಕ್ಸ್ ನಲ್ಲಿ ಅತ್ಯುತ್ತಮ ಸಾಧನೆಗಾಗಿ ಮೂವತ್ತು ಇಂಟರ್ ನ್ಯಾಶನಲ್ ಅವಾರ್ಡ್ಸ್ .
  • ಕೇರಳ ಸ್ಪೋರ್ಟ್ಸ್ ಜರ್ನಾಲಿಸ್ಟ್ಸ್ ಅವಾರ್ಡ್, ೧೯೯೯ ರ ವರ್ಷದ ಪ್ರಶಸ್ತಿ.
  • ಅತ್ಯುತ್ತಮ ಅಥ್ಲೆಟಿಗಾಗಿ ವರ್ಲ್ಡ್ ಟ್ರೊಫಿ ೧೯೮೫, ೧೯೮೬ ರಲ್ಲಿನ ಪ್ರಶಸ್ತಿಗಳು

ಇವನ್ನೂ ಗಮನಿಸಿ[ಬದಲಾಯಿಸಿ]

  • ಭಾರತೀಯ ಮಹಿಳಾ ಕ್ರೀಡಾಪಟುಗಳ ಪಟ್ಟಿ
  • ಕೇರಳ ಒಲಿಂಪಿಯನ್ಸ್ ರ ಪಟ್ಟಿ
  • ಅಥ್ಲೆಟಿಕ್ಸ್ ನಲ್ಲಿ ಭಾರತೀಯ ರಾಷ್ಟ್ರೀಯ ದಾಖಲೆಗಳು

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. P. T. USHA Personal Profile at www.ptusha.org
  2. "ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್: ಎ ಜೇಂಟ್ ಸ್ಟ್ರೈಡ್ ಫಾರ್ವರ್ಡ್" (PDF). Archived from the original (PDF) on 2008-12-01. Retrieved 2010-12-09.

ಪಿ.ಟಿ. ಉಷಾ ಪರ್ಸನಲ್ ಪ್ರೊಫೈಲ್ at www.ptusha.org

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಇಂಡಿಯಾಸ್’ ೫೦ ಮೊಸ್ಟ್ ಇಲುಸ್ಟ್ರೇಯಿಸ್ ಉಮೆನ್ (ISBN ೮೧-೮೮೦೮೬-೧೯-೩) ಬೈ ಇಂದ್ರಾ ಗುಪ್ತಾ