ಪಾದೇಕಲ್ಲು ವಿಷ್ಣು ಭಟ್ಟ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಪಾದೇಕಲ್ಲು ವಿಷ್ಣು ಭಟ್ಟ | |
---|---|
ಜನನ | ಫೆಬ್ರುವರಿ, ೦೬ ೧೯೫೬ ಪಾದೇಕಲ್ಲು, ಕರೋಪಾಡಿಗ್ರಾಮ,ಬಂಟ್ವಾಳ ತಾಲೂಕು, ದ.ಕ. ಜಿಲ್ಲೆ |
ವೃತ್ತಿ | ಉಪನ್ಯಾಸಕ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಮೈಸೂರು ವಿಶ್ವವಿದ್ಯಾನಿಲಯ |
ಕಾಲ | 20ನೆಯ , ಹಾಗೂ 21ನೆಯ ಶತಮಾನ |
ಪ್ರಕಾರ/ಶೈಲಿ | ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯ, ಲೇಖನ, ವಿಮರ್ಶೆ, ತುಳು ಶಬ್ದಕೋಶ |
ಪ್ರಭಾವಿತರು
|
ಪಾದೇಕಲ್ಲು ವಿಷ್ಣು ಭಟ್ಟ ಇವರು ಕನ್ನಡ ತುಳು ಲೇಖಕರು, ತುಳು ನಿಘಂಟು ರಚನೆಯಲ್ಲಿ ಹಾಗೂ ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ
ಜೀವನ
[ಬದಲಾಯಿಸಿ]ಇವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದಲ್ಲಿ ಹುಟ್ಟಿದರು (ಫೆಬ್ರುವರಿ ೧೬ ೧೯೫೬) ಇವರ ತಂದೆ ಶ್ರೀ ಪಾದೇಕಲ್ಲು ನಾರಾಯಣ ಭಟ್ಟ ತಾಯಿ ಶ್ರೀಮತಿ ಶಾರದಾ. ತಮ್ಮ ಪ್ರಾಥಮಿಕ-ಪ್ರೌಢಶಾಲಾ ವಿದ್ಯಾಭ್ಯಾಸಾನಂತರ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪಡೆದು (1976) ಮಂಗಳಗಂಗೋತ್ರಿಯ ಸ್ನಾತಕೋತ್ತರ ಕೇಂದ್ರದ ಮೂಲಕ ಕನ್ನಡ ಎಂ.ಎ. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಗಳಿಸಿದರು (1978). ‘ಭಾಗವತದ ಯಕ್ಷಗಾನ ಪ್ರಸಂಗಗಳು’ ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು (1997). ಕನ್ನಡ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದರು. ಪ್ರಸ್ತುತ ಈಗ ಅವರು ನಿವೃತ್ತರಾಗಿ ಉಡುಪಿಯ ಆತ್ರಾಡಿ ಎನ್ನುವ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ.
ಸಾಹಿತ್ಯ
[ಬದಲಾಯಿಸಿ]ತುಳುನಿಘಂಟು ಯೋಜನೆಯ ಸಂಪಾದಕರು, ಇವರು ಖ್ಯಾತ ವಿದ್ವಾಂಸ ಸೇಡಿಯಾಪು ಕೃಷ್ಣ ಭಟ್ಟರಿಗೆ ಲಿಪಿಕಾರರಾಗಿ ಸಹಾಯಕರಾಗಿದ್ದುದಲ್ಲದೆ ಅವರ ಹಲವು ಪುಸ್ತಕಗಳನ್ನು ಟಿಪ್ಪಣಿಗಳೊಂದಿಗೆ ಸಂಪಾದಿಸಿದ್ದಾರೆ. ಕನ್ನಡ, ತುಳು ಮತ್ತು ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಸಂಪಾದಿಸಿದ್ದಾರೆ
ಕೃತಿಗಳು
[ಬದಲಾಯಿಸಿ]ಸ್ವಂತ ರಚನೆಗಳು
[ಬದಲಾಯಿಸಿ]- ಸೇಡಿಯಾಪು - 1996
- ಸೇಡಿಯಾಪು ಕೃಷ್ಣ ಭಟ್ಟರು -1997
- ಪಂಡಿತವರೇಣ್ಯ - 2002
- ಶ್ರೀಭಾಗವತೊ - 2007
- ಪ್ರಸಂಗ ವಿಶ್ಲೇಷಣೆ - 2007
- ಏರ್ಯ ಲಕ್ಷ್ಮೀನಾರಾಯಣ ಆಳ್ವ
- ಶ್ರೀ ಕುಮಾರಿಲಭಟ್ಟರು - 2014
- ಬೆಳಗಿನ ನಲ್ನುಡಿ - 2016
- ಸಾಹಿತ್ಯಾಧ್ಯಯನ - 2016
- ಯಕ್ಷಗಾನಾಧ್ಯಾಯನ - 2016
- ಯಕ್ಷಗಾನ ಕಲಾತಪಸ್ವಿ ಮಾಂಬಾಡಿ ನಾರಾಯಣ ಭಾಗವತರು - 2016
- ಸ್ವಪ್ರಯತ್ನದ ಧೀಮಂತ ಲೇಖಕ ಅಂಬಾತನಯ ಮುದ್ರಾಡಿ - 2017
- ಹಳಗನ್ನಡ-ಹೊಸಗನ್ನಡಗಳ ಮಧ್ಯಮಣಿ ಕವಿ ಮುದ್ದಣ - 2017
- ಕನ್ನಡ ಸಾಹಿತ್ಯ ಪರಿಚಾರಕ ಪ್ರೊ. ಎಂ. ರಾಮಚಂದ್ರ - 2017
- ವೈಷ್ಣವಿದೇವೀಸಂದರ್ಶನ - 2018
ಸಂಪಾದಿತ ಕೃತಿಗಳು
[ಬದಲಾಯಿಸಿ]- ವಿಚಾರ ಪ್ರಪಂಚ - 1992
- ಸ್ಕಂದ ವೈಭವ - 1993
- ಚಂದ್ರಖಂಡ (ಪರಿವರ್ಧಿತ ಮತ್ತು ಅನುಬಂಧಿತ) ಮತ್ತು ಕೆಲವು ಸಣ್ಣ ಕಾವ್ಯಗಳು - 1994
- ತುಳುವರಿವರು - 1997
- ಕೇಶಿರಾಜದರ್ಪಣ - 1999
- ಪುರಂದರದಾಸರ ಕೀರ್ತನೆಗಳು - 2001
- ಶಾರದಾರಾಧನಮ್ - 2003
- ಸಾವಿರದ ಗದ್ಯ - 2003
- ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗಳು - 2004
- ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ -2004
- ಶ್ರೀರಾಮಾಶ್ವಮೇಧಂ - 2006
- ಸೇಡಿಯಾಪು ಛಂದಸ್ಸಂಪುಟ - 2006
- ಯಕ್ಷಗಾನ ಪ್ರಸಂಗ ಸಂಚಯ - 2006
- ಯಕ್ಷಗಾನ ಗ್ರಂಥಸೂಚಿ - 2006
- ಯಕ್ಷಗಾನ ಭಾಗವತ ಪ್ರಸಂಗಗಳು - 2006
- ಸುಕೃತಿ - 2006
- ತುಳುಛಂದೋವಿನ್ಯಾಸ - 2007
- ಶಬ್ದಾರ್ಥಶೋಧ - 2008
- ವೇದವೇದಾಂಗಪರಿವಾರ - 2010
- ಅನನ್ಯವ್ಯಕ್ತಿ - 2010
- ವಿದ್ವಜ್ಜೀವಿತ - 2011
- ಭಾನುಮತಿಯ ನೆತ್ತ - 2012
- ಭಾರತೀಯ ಸಂವೇದನೆ : ಸಂವಾದ - 2012
- ಮಹಾಜನಪದ - 2014
- ಪುರಾಣಲೋಕ - 2015
- ಯಕ್ಷಗಾನ ಪ್ರಸಂಗಸಂಪುಟ - 1- 2015
- ಯಕ್ಷಗಾನ ಶ್ರೀಕೃಷ್ಣದಿನಾಶ್ವಮೇಧ ಮತ್ತು ದ್ರೋಣಪರ್ವ - 2015
- ಯಕ್ಷಗಾನ ಪ್ರಸಂಗಸಂಪುಟ - 2- 2016
ಸಹಸಂಪಾದಿತ ಕೃತಿಗಳು
[ಬದಲಾಯಿಸಿ]- ರಂಗವೈಖರಿ - 1981
- ಪೊನ್ನಕಂಠಿ - 1997
- ಏರ್ಯ - 1999
- ಮಂತ್ರಮಂಜರೀ - 2002
- ಶತಾಂಜಲಿ - 2002
- ಜ್ಯೋತಿಷಸÀಂವಾದ - 2003
- ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಾವ್ಯ ಸಂಪುಟ - 2003
- ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಾದಂಬರಿ ಸಂಪುಟ
- ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಕಥಾಸಂಪುಟ - 2004
- ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ಗದ್ಯ ಸಂಪುಟ - 2004
- ಕಡೆಂಗೋಡ್ಲು ಶಂಕರ ಭಟ್ಟ ಸಮಗ್ರ ನಾಟಕ ಸಂಪುಟ - 2004
- ಯಕ್ಷಭೀಮನ ನೂರು ಹೆಜ್ಜೆಗಳು - 2004
- ಕಾಲಪುರುಷ - 2005
- ಹರಿದಾಸ ಕೀರ್ತನ - 2005
- ವಾಚಿಕ - 2009
- ಕನ್ನಡ ತುಳು ಶಬ್ದ ಪ್ರಯೋಗಕೋಶ - 2009
- ಸುಮನಸ - 2010
- ಜಗತ್‍ಸಾಹಿತ್ಯಪ್ರವೇಶಿಕೆ- 2016
- ಪುರೋಹಿತಸ್ಮರಣ (ಮಿತ್ತೂರು ಪುರೋಹಿತ ಶಂಕರನಾರಾಯಣ ಭಟ್ಟ, ಮೈಕೆ ಶಂಕರನಾರಾಯಣ ಭಟ್ಟ ಶತಮಾನ ಸಂಸ್ಮರಣಸಂಪುಟ) – 2018
ಅನುವಾದ ಕೃತಿಗಳು
[ಬದಲಾಯಿಸಿ]ಸತೀ ಕಮಲೆ– 1997
ಪ್ರಶಸ್ತಿ/ಗೌರವಗಳು
[ಬದಲಾಯಿಸಿ]- ಉಡುಪಿ ಶ್ರೀ ಶೀರೂರು ಮಠದಿಂದ ಶ್ರೀಕೃಷ್ಣನುಗ್ರಹ ಪ್ರಶಸ್ತಿ - 1996
- ಸಾಹಿತ್ಯ ಪರಿಷತ್ತಿನ ವಾರ್ಷಿಕ ಸಮ್ಮೇಳನದಲ್ಲಿ ಸಮ್ಮಾನ - 2011
- ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿ ವಿದ್ವತ್‍ಪ್ರಶಸ್ತಿ - 2014
- ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಸೇಡಿಯಾಪು ಪ್ರಶಸ್ತಿ - 2015
- ಶೃಂಗೇರಿ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ವರ್ಧಂತ್ಯುತ್ಸವ ವಿದ್ವತ್ ಸಮ್ಮಾನ - 2015
- ಉಡುಪಿ ಶ್ರೀ ಪೇಜಾವರ ಮಠದಿಂದ ರಾಮವಿಠಲ ಪ್ರಶಸ್ತಿ - 2016
- ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ `ಯಕ್ಷಗಾನಾಧ್ಯಯನ’ ಕೃತಿಗೆ - 2017
- ಕಾಂತಾವರ ಕನ್ನಡ ಸಂಘದ `ನಾಡಿಗೆ ನಮಸ್ಕಾರ’ ಮಾಲಿಕೆಯಲ್ಲಿ `ಪಂಡಿತ ಪರಂಪರೆಯ ಪಾದೇಕಲ್ಲು ವಿಷ್ಣು ಭಟ್ಟ’ ಎಂಬ ಕೃತಿ ಬಿಡುಗಡೆಯಾಗಿದೆ. ಲೇಖಕರು - ಡಾ. ಎಸ್. ಅರ್. ಅರುಣಕುಮಾರ್ – 2018
- ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ - 2018
- ಬ್ರಹ್ಮಶ್ರೀ ಮಿತ್ತೂರು ಪುರೋಹಿತ ತಿಮ್ಮಯ್ಯ ಭಟ್ಟ ಸಂಪ್ರತಿಷ್ಠಾನ ವಿದ್ವತ್‍ಪ್ರಶಸ್ತಿ - 2018