ದಕ್ಷಿಣ ಕನ್ನಡ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದಕ್ಷಿಣ ಕನ್ನಡ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆ

ದಕ್ಷಿಣ ಕನ್ನಡ ಕರ್ನಾಟಕ ರಾಜ್ಯದ ಒಂದು ಕರಾವಳಿ ಜಿಲ್ಲೆ. ಈ ಜಿಲ್ಲೆಯ ಕೇಂದ್ರಸ್ಥಳ ಹಾಗೂ ಮುಖ್ಯ ನಗರ ಮಂಗಳೂರು. ದಕ್ಷಿಣ ಕನ್ನಡ ಜಿಲ್ಲೆಯ ಜನಸಂಖ್ಯೆ ೧೮,೯೬,೪೦೩ (೨೦೦೧ರ ಜನಗಣತಿಯಂತೆ).[೧] ಇದು ೧೯೯೧ರ ಜನಸಂಖ್ಯೆಗಿಂತ ಶೇ. ೧೪.೫೧ ರಷ್ಟು ಹೆಚ್ಚಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐದು ತಾಲೂಕುಗಳಿವೆ: ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಹಾಗೂ ಬೆಳ್ತಂಗಡಿ.

ಕೆಲವು ವರ್ಷಗಳ ಹಿಂದೆ ಇನ್ನೂ ಮೂರು ತಾಲೂಕುಗಳು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದ್ದವು: ಉಡುಪಿ, ಕುಂದಾಪುರ ಮತ್ತು ಕಾರ್ಕಳ. ಆಗಸ್ಟ್ ೧೯೯೭ ರಲ್ಲಿ ಈ ತಾಲೂಕುಗಳನ್ನು ಉಡುಪಿ ಜಿಲ್ಲೆಯ ಭಾಗವಾಗಿ ಘೋಷಿಸಲಾಯಿತು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ತುಳುನಾಡು ಎಂದೂ ಕರೆಯಲಾಗುತ್ತದೆ. ತುಳು ಭಾಷೆ ಇಲ್ಲಿನ ಪ್ರಮುಖ ಭಾಷೆಯಾದ್ದರಿಂದ ಈ ಹೆಸರು ಬಂದಿದೆ.

ಪಣಂಬೂರಿನಲ್ಲಿ ಸೂರ್ಯಾಸ್ತಮಾನ
ಪಣಂಬೂರಿನಲ್ಲಿ ಸೂರ್ಯಾಸ್ತಮಾನ

ಪರಿವಿಡಿ

[ಬದಲಾಯಿಸಿ] ಇತಿಹಾಸ

೧೮೬೦ರ ಹಿ೦ದೆ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಟ್ಟಾಗಿ ಕೆನರ ಎ೦ದು ಕರೆಯಲಾಗುತ್ತಿತ್ತು. ೧೯೬೦ರಲ್ಲಿ ಬ್ರಿಟೀಷರು ಈ ಭಾಗವನ್ನು ಉತ್ತರ ಕೆನರ ಮತ್ತು ದಕ್ಷಿಣ ಕೆನರ ಎ೦ದು ವಿ೦ಗಡಿಸಿದರು. ೧೮೬೨ರಲ್ಲಿ ಉತ್ತರ ಕೆನರವನ್ನು ಬೊ೦ಬೆಯ್ ಪ್ರೆಸಿಡೆ೦ಸ್ಸಿ ಹಾಗು ದಕ್ಷಿಣ ಕೆನರವನ್ನು ಮದ್ರಾಸ್ ಪ್ರೆಸಿಡೆ೦ಸ್ಸಿಗೆ ಸೇರಿಸಲಾಯಿತು. ಕು೦ದಾಪುರ ತಾಲೂಕು ಮೊದಲು ಉತ್ತರ ಕೆನರದಲ್ಲಿದ್ದರೂ ನ೦ತರ ದಕ್ಷಿಣ ಕೆನರಕ್ಕೆ ಸೇರಿಸಲಾಯಿತು.


ಸ್ವತ೦ತ್ರ್ಯದ ನ೦ತರ ಈ ಜಿಲ್ಲೆ ಈಗಿನ ದಕ್ಷಿಣ ಕನ್ನಡ, ಉಡುಪಿ ಹಾಗು ಕಾಸರಗೋಡು ಜಿಲ್ಲೆಗಳನ್ನು ಒಳಗೊ೦ಡಿತ್ತು. ೧೯೫೬ರ ಪುನರ್ ವಿ೦ಗಡನೆ ಸ೦ದರ್ಭದಲ್ಲಿ ಅವಿಭಾಜಿತ ದಕ್ಷಿಣ ಕನ್ನಡವನ್ನು ಮೈಸೂರು ರಾಜ್ಯಕ್ಕೆ ಹಾಗು ಕಾಸರಗೋಡು ಜಿಲ್ಲೆಯನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು. ನ೦ತರ ಕರ್ನಾಟಕ ಸರ್ಕಾರ ಆಗಸ್ಟ್ ೧೯೯೭ರಲ್ಲಿ, ಆಡಳಿತ ದೃಷ್ಟಿಯಿ೦ದ ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಾಗಿ ವಿ೦ಗಡಿಸಿತು.

ಯಕ್ಷಗಾನ ವೇಷ
ಯಕ್ಷಗಾನ ವೇಷ

[ಬದಲಾಯಿಸಿ] ಭಾಷೆಗಳು

ತುಳು ದಕ್ಷಿಣ ಕನ್ನಡದ ಪ್ರಮುಖ ಭಾಷೆ. ಕನ್ನಡ, ಹವ್ಯಾಕ ಕನ್ನಡ, ಕು೦ದಾಪುರ ಕನ್ನಡ, ಅರೆಭಾಷೆ ಕನ್ನಡ, ಬ್ಯಾರಿ ಭಾಷೆ ಮತ್ತು ಕೊ೦ಕಣಿ ಇಲ್ಲಿನ ಇತರೆ ಭಾಷೆಗಳು.

ಕುಕ್ಕೆ ಸುಬ್ರಮಣ್ಯ ದೇವಸ್ಠಾನ
ಕುಕ್ಕೆ ಸುಬ್ರಮಣ್ಯ ದೇವಸ್ಠಾನ

[ಬದಲಾಯಿಸಿ] ಐತಿಹಾಸಿಕ ಸ್ಥಳಗಳು

ಮೂಡಬಿದರೆ:ಸಾವಿರ ಕ೦ಬದ ಬಸದಿ.

ಧರ್ಮಸ್ಥಳ: ಶ್ರೀ ಮ೦ಜುನಾಥ ಸ್ವಾಮಿಯ ದೇವಾಸ್ಥಾನ.

ಕದ್ರಿ.

ಕಟೀಲು.

ಉಳ್ಳಾಲ.

ತಲಪಾಡಿ.

ಕುಕ್ಕೆ ಸುಬ್ರಮಣ್ಯ.


[ಬದಲಾಯಿಸಿ] ಇವನ್ನೂ ನೋಡಿ

[ಬದಲಾಯಿಸಿ] ಮೂಲಗಳು

  1. Census data. Retrieved on 2006-09-09.


ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
ವೈಯಕ್ತಿಕ ಉಪಕರಣಗಳು
ಇತರ ಭಾಷೆಗಳು