ವಿಷಯಕ್ಕೆ ಹೋಗು

ನಿಟ್ಟೆ ಸಂತೋಷ್‌ ಹೆಗ್ಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎನ್. ಸಂತೋಷ್ ಹೆಗ್ಡೆ
ಸಂತೋಷ ಹೆಗಡೆ
ಜನನಟೆಂಪ್ಲೇಟು:ಹುಟ್ಟಿದ ತಾರೀಖು ಮತ್ತು ವಯಸ್ಸು
ರಾಷ್ಟ್ರೀಯತೆಭಾರತೀಯ
ಶಿಕ್ಷಣ ಸಂಸ್ಥೆಸೇಂಟ್.ಅಲೋಶಿಯಸ್ ಕಾಲೇಜ್, ಮಂಗಳೂರು, ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್, ಸೇಂಟ್. ಜೋಸೆಫ್ಸ್ ಕಾಲೇಜ್, ಬೆಂಗಳೂರು, ಸೆಂಟ್ರೆಲ್ ಕಾಲೇಜ್ ಬೆಂಗಳೂರು, ಯೂನಿವರ್ಸಿಟಿ ಲಾ ಕಾಲೇಜ್
ವೃತ್ತಿಜ್ಯೂರಿ
ಪೋಷಕರು

ನಿಟ್ಟೆ ಸಂತೋಷ್‌ ಹೆಗ್ಡೆ ಯವರು ಭಾರತಸರ್ವೋಚ್ಚ ನ್ಯಾಯಾಲಯದ ಓರ್ವ ಹಿಂದಿನ ನ್ಯಾಯಮೂರ್ತಿಯಾಗಿದ್ದಾರೆ, ಭಾರತದ ಸಾಲಿಸಿಟರ್‌ ಜೆನರಲ್‌ ಹುದ್ದೆಯನ್ನು ಹಿಂದೆ ನಿರ್ವಹಿಸಿದವರಾಗಿದ್ದಾರೆ ಮತ್ತು ಪ್ರಸ್ತುತ ಭಾರತಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರಾಗಿ (ಆಂಬುಡ್ಸ್‌ಮನ್‌-ಸಾರ್ವಜನಿಕ ತನಿಖಾಧಿಕಾರಿ) ಕಾರ್ಯನಿರ್ವಹಿಸುತ್ತಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ಸಂತೋಷ್‌ ಹೆಗ್ಡೆಯವರು ಲೋಕಸಭೆಯ ಹಿಂದಿನ ಸಭಾಪತಿಗಳಾದ ನ್ಯಾಯಮೂರ್ತಿ ಕೆ. ಎಸ್. ಹೆಗ್ಡೆ ಹಾಗೂ ಅವರ ಪತ್ನಿ ಮೀನಾಕ್ಷಿ ಹೆಗ್ಡೆ (ವಿವಾಹಪೂರ್ವ: ಆಡ್ಯಂತಾಯ) ದಂಪತಿಗಳ ಮಗನಾಗಿದ್ದಾರೆ.ಈ ಬಂಟ ದಂಪತಿಗಳಿಗೆ[] ಜನಿಸಿದ ಆರು ಮಂದಿ ಮಕ್ಕಳ ಪೈಕಿ ಅವರು ಒಬ್ಬರಾಗಿದ್ದಾರೆ.ಕರ್ನಾಟಕಉಡುಪಿ ಜಿಲ್ಲೆಗೆ ಸೇರಿದ ನಿಟ್ಟೆ ಎಂಬಲ್ಲಿ ಅವರು ೧೯೪೦ರ ಜೂನ್‌ ೧೬ರಂದು ಜನಿಸಿದರು.[].ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಇರುವ ಸೇಂಟ್‌ ಅಲೋಯ್ಸಿಯಸ್‌ ಕಾಲೇಜು ಹಾಗೂ ಮದ್ರಾಸಿನಲ್ಲಿರುವ ಮದ್ರಾಸ್‌ ಕ್ರಿಶ್ಚಿಯನ್‌‌ ಕಾಲೇಜುಗಳಲ್ಲಿ ಪಡೆದರು. ಅವರು ಬೆಂಗಳೂರಿನ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ತಮ್ಮ ಇಂಟರ್‌ಮೀಡಿಯೆಟ್‌ ಪರೀಕ್ಷೆಯನ್ನು ಸಂಪೂರ್ಣಗೊಳಿಸಿದರು ಮತ್ತು ಸೆಂಟ್ರಲ್‌‌ ಕಾಲೇಜಿನಿಂದ BSc ಪದವಿಯನ್ನು ಪಡೆದರು. ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಿಂದ (ಈಗ ಅದು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಎಂದೇ ಹೆಸರಾಗಿದೆ) ಅವರು ೧೯೬೫ರಲ್ಲಿ ಕಾನೂನು ಪದವಿಯೊಂದನ್ನು ಪಡೆದು ತೇರ್ಗಡೆಯಾದರು.

ವೃತ್ತಿಜೀವನ

[ಬದಲಾಯಿಸಿ]

ಶಿಷ್ಯವೃತ್ತಿ ತರಬೇತಿಯನ್ನು ಸಂಪೂರ್ಣಗೊಳಿಸಿದ ನಂತರ, ೧೯೬೬ರ ಜನವರಿಯಲ್ಲಿ ಅವರು ಓರ್ವ ವಕೀಲರಾಗಿ ತಮ್ಮ ಹೆಸರನ್ನು ದಾಖಲೆ ಮಾಡಿಕೊಂಡರು ಹಾಗೂ ೧೯೮೪ರ ಮೇ ತಿಂಗಳಲ್ಲಿ ಅವರು ಹಿರಿಯ ವಕೀಲರಾಗಿ ನಿಯೋಜಿಸಲ್ಪಟ್ಟರು. ೧೯೮೪ರ ಫೆಬ್ರುವರಿಯಲ್ಲಿ ಅವರು ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದಂತೆ ಅಡ್ವೊಕೇಟ್‌ ಜೆನರಲ್‌ ಆಗಿ ನೇಮಿಸಲ್ಪಟ್ಟರು ಮತ್ತು ೧೯೮೮ರ ಆಗಸ್ಟ್‌ವರೆಗೂ ಅವರು ಆ ಸ್ಥಾನದಲ್ಲಿದ್ದರು. ೧೯೮೯ರ ಡಿಸೆಂಬರ್‌ನಿಂದ ೧೯೯೦ರ ನವೆಂಬರ್‌ವರೆಗೆ ಅವರು ಭಾರತ ಒಕ್ಕೂಟದ ಹೆಚ್ಚುವರಿ ಸಾಲಿಸಿಟರ್‌ ಜೆನರಲ್‌ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದರು. ೨೫-೦೪-೧೯೯೮ರಂದು ಭಾರತದ ಸಾಲಿಸಿಟರ್‌ ಜೆನರಲ್‌ ಆಗಿ ಅವರು ಮರು-ನೇಮಿಸಲ್ಪಟ್ಟರು. ನಿಟ್ಟೆ ಸಂತೋಷ್‌ ಹೆಗ್ಡೆಯವರು ೦೮-೦೧-೧೯೯೯ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ಓರ್ವ ನ್ಯಾಯಾಧೀಶರಾಗಿ ನೇಮಿಸಲ್ಪಟ್ಟರು. ೨೦೦೫ರ ಜೂನ್‌ನಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಅವರು ನಿವೃತ್ತಿ ಹೊಂದಿದರು. ೨೦೦೫ A.D.ಯಲ್ಲಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಕಾನೂನು ಪದವಿಯ ಗೌರವಾರ್ಥ ಡಾಕ್ಟರೇಟ್‌ನ್ನು ಪ್ರದಾನ ಮಾಡಲಾಯಿತು.[] ನವದೆಹಲಿಯಲ್ಲಿರುವ ದೂರಸಂಪರ್ಕ ವಿವಾದದ ಫೈಸಲಾತಿ ಅಪೀಲು ಸ್ವೀಕರಿಸುವ ನ್ಯಾಯಮಂಡಲಿಯ ಅಧ್ಯಕ್ಷರಾಗಿ ಒಂದು ಸಂಕ್ಷಿಪ್ತ ಅವಧಿಗೆ ಅವರು ಕಾರ್ಯನಿರ್ವಹಿಸಿದರು.ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟೆಲಿಕಾಮ್‌ ರೆಗ್ಯುಲೇಟರಿ ಅಥಾರಿಟಿ ಆಫ್‌ ಇಂಡಿಯಾ-TRAI), ದೂರಸಂಪರ್ಕ ಗ್ರಾಹಕರು ಮತ್ತು ದೂರಸಂಪರ್ಕ ಸೇವೆ ಒದಗಿಸುವವರ ನಡುವಿನ ವಿವಾದವನ್ನು ಪರಿಹರಿಸುವುದಕ್ಕೆ ಸಂಬಂಧಿಸಿದ ಪ್ರಾಧಿಕಾರವಾಗಿರಲಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು.[] ೨೦೦೬ರ ಆಗಸ್ಟ್‌ ೩ರಂದು ಕರ್ನಾಟಕ ರಾಜ್ಯದ ಲೋಕಾಯುಕ್ತರಾಗಿ ಐದು ವರ್ಷಗಳ ಒಂದು ಅವಧಿಗೆ ಅವರು ನೇಮಿಸಲಾಗಿತ್ತು, ಆಗಸ್ಟ್ ೦೨ ೨೦೧೧ ರಂದು ನಿವೃತ್ತಿ ಹೊಂದಿದರು.

ಕರ್ನಾಟಕದ ಲೋಕಾಯುಕ್ತರಾಗಿ

[ಬದಲಾಯಿಸಿ]

ಬಳ್ಳಾರಿಯಲ್ಲಿನ ಗಣಿಗಳಲ್ಲಿ ಕಂಡುಬಂದ ಪ್ರಮುಖ ಕ್ರಮಬಾಹಿರತೆಗಳನ್ನು ಲೋಕಾಯುಕ್ತರು ಬಹಿರಂಗಪಡಿಸಿದ್ದರು; ಓಬಳಾಪುರಂ ಮೈನಿಂಗ್‌‌ ಕಂಪನಿಯ ಸ್ವಾಮ್ಯತ್ವದಲ್ಲಿರುವ ಹಾಗೂ ಕರ್ನಾಟಕ ಸರ್ಕಾರದಲ್ಲಿ[] ಮಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿರುವ G. ಕರುಣಾಕರ ರೆಡ್ಡಿ, G. ಜನಾರ್ದನ ರೆಡ್ಡಿ ಮತ್ತು G. ಸೋಮಶೇಖರ ರೆಡ್ಡಿ ಮಾಲೀಕತ್ವದ ಗಣಿಗಳೂ ಇವುಗಳಲ್ಲಿ ಸೇರಿದ್ದವು. ಪರಿಸರ ವೃತ್ತಾಂತಕ್ಕೆ ಸಂಬಂಧಿಸಿದಂತೆ ಮತ್ತು ರಾಜ್ಯದ ಬೊಕ್ಕಸಕ್ಕೆ ಆಳವಾದ ಪ್ರತಿಕೂಲ ಪರಿಣಾಮವನ್ನು ಉಂಟುಮಾಡುತ್ತಿರುವ, ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಕುರಿತಾಗಿ ಅವರು ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.[]. ಬಳ್ಳಾರಿಯಲ್ಲಿನ ಕಬ್ಬಿಣದ-ಅದಿರಿನ ಗಣಿಗಾರಿಕೆಯಲ್ಲಿ ನಡೆಯುತ್ತಿರುವ ಪ್ರಮುಖ ಉಲ್ಲಂಘನೆಗಳು ಮತ್ತು ಅಮೂಲಾಗ್ರವಾದ ಭ್ರಷ್ಟಾಚಾರಗಳನ್ನು ಲೋಕಾಯುಕ್ತರಿಂದ ರೂಪಿಸಲ್ಪಟ್ಟ ವರದಿಯೊಂದು ಬಯಲು ಮಾಡಿತು. ಹಲವು ಸ್ವರೂಪದ ಉಲ್ಲಂಘನೆಗಳು ಇಲ್ಲಿ ಕಂಡುಬಂದಿದ್ದವು; ಅವಕಾಶ ನೀಡಲಾಗಿದ್ದ ಭೌಗೋಳಿಕ ಪ್ರದೇಶದಲ್ಲಿನ ಉಲ್ಲಂಘನೆಗಳಷ್ಟೇ ಅಲ್ಲದೇ, ಅರಣ್ಯ ಜಮೀನಿನ ಒತ್ತುವರಿ, ಕಬ್ಬಿಣದ ಅದಿರಿನ ಮಾರುಕಟ್ಟೆ ಬೆಲೆಗೆ ಹೋಲಿಸಿದಾಗ ಹೆಚ್ಚಿನ ರೀತಿಯಲ್ಲಿ ರಾಜ್ಯ ಗಣಿಗಾರಿಕೆಯ ರಾಯಧನಗಳು ತುಲನಾತ್ಮಕವಾಗಿ ತೀರಾ ಅಲ್ಪಪ್ರಮಾಣದಲ್ಲಿ ಪಾವತಿಯಾಗಿರುವುದು ಹಾಗೂ ಸರ್ಕಾರದ ಗಣಿಗಾರಿಕಾ ಅಸ್ತಿತ್ವಗಳಲ್ಲಿನ ವ್ಯವಸ್ಥಿತವಾದ ಕೊರತೆ ಇವೆಲ್ಲವೂ ಉಲ್ಲಂಘನೆಗಳಿಗೆ ಸಾಕ್ಷಿಯಾಗಿದ್ದವು. ಸಾರ್ವಜನಿಕ ಹಿತಾಸಕ್ತಿಗೆ ಉಂಟಾದ ಹಾನಿಯ ಪ್ರಮಾಣವು ಎಷ್ಟೊಂದು ಗಂಭೀರ ಸ್ವರೂಪದಲ್ಲಿತ್ತೆಂದರೆ, ಕಬ್ಬಿಣದ ಅದಿರಿನ ಎಲ್ಲಾ ರಫ್ತುಕಾರ್ಯಗಳ ಮೇಲೂ ನಿಷೇಧ ಹೇರುವಂತೆ ಹಾಗೂ ಕಬ್ಬಿಣ ಮತ್ತು ಉಕ್ಕಿನ[][] ವಶವರ್ತಿಯಾದ ಉತ್ಪಾದನೆಗೆ ಸಂಬಂಧಿಸಿದಂತೆ ಕಬ್ಬಿಣ ಅದಿರಿನ ಉತ್ಪಾದನೆಯನ್ನು ಸೀಮಿತಗೊಳಿಸುವಂತೆ ಅವರು ಶಿಫಾರಸು ಮಾಡಿದರು.

ವಿವಾದಗಳು

[ಬದಲಾಯಿಸಿ]
  • ಆಗ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ( BBMP ) ಆಯುಕ್ತರಾಗಿದ್ದ S.ಸುಬ್ರಮಣ್ಯರವರನ್ನು[] ತೆಗೆದುಹಾಕುವಂತೆ ಕರ್ನಾಟಕದ ಮುಖ್ಯಮಂತ್ರಿಯ ಮೇಲೆ ಹೆಗ್ಡೆಯವರು ಒತ್ತಡ ಹೇರಿದರು ಎಂಬ ಆಪಾದನೆಯು ಅವರ ಮೇಲೆ ಬಂದಿತ್ತು.. ಮಳೆಗಾಲದ ಅವಧಿಯಲ್ಲಿ ನೀರಲ್ಲಿ ಮುಳುಗಿ ಆಗುವ ಅಪಘಾತಗಳೂ ಸೇರಿದಂತೆ, ಬೆಂಗಳೂರಿನ ಕಳಪೆ ನಿರ್ವಹಣೆಗೆ ಸಂಬಂಧಿಸಿದಂತೆ ಹೊಣೆಗಾರನನ್ನಾಗಿಸಲಾಗಿದ್ದ BBMPಯ ನೇತೃತ್ವವನ್ನು ಸುಬ್ರಮಣ್ಯ ವಹಿಸಿಕೊಂಡಿದ್ದರು.[೧೦].
  • ಹೆಗ್ಡೆಯವರು ತಮ್ಮ ವೃತ್ತಿಜೀವನದ[೧೧] ಉದ್ದಕ್ಕೂ ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲವಾದರೂ, BJP ರಾಜ್ಯ ಸರ್ಕಾರದ ಸಮಾವೇಶವೊಂದಕ್ಕೆ ಒಂದು ದಿನ ಮುಂಚಿತವಾಗಿ ತಮ್ಮ ರಾಜೀನಾಮೆಯನ್ನು ಸಲ್ಲಿಸುವ ಕಾಲಯೋಜನೆಯಲ್ಲಿನ ಅವರ ರಾಜಕೀಯ ಉದ್ದೇಶಗಳನ್ನು ಕೆಲವೊಂದು ಜನರು ಪ್ರಶ್ನಿಸಿದ್ದಾರೆ.

ಲೋಕಾಯುಕ್ತರ ಹುದ್ದೆಗೆ ನೀಡಿದ ರಾಜೀನಾಮೆ

[ಬದಲಾಯಿಸಿ]

೨೦೧೦ರ ಜೂನ್‌ ೨೩ರಂದು ಹೆಗ್ಡೆಯವರು ತಮ್ಮ ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ನೀಡಿದರು; ಮಂತ್ರಿ J. ಕೃಷ್ಣ ಪಾಲೇಮಾರ್‌‌‌‌ರವರ ಆದೇಶಾನುಸಾರ ಓರ್ವ ಪ್ರಾಮಾಣಿಕ ಅಧಿಕಾರಿಯು (ಅರಣ್ಯ ಇಲಾಖೆಯ ಉಪ ಸಂಗೋಪನಾಧಿಕಾರಿಯಾಗಿದ್ದ R ಗೋಕುಲ್‌) ಅಮಾನತುಗೊಳಿಸಲ್ಪಟ್ಟ ನಂತರ ಹಾಗೂ ಈ ನಿಟ್ಟಿನಲ್ಲಿ ಅವರಿಗೆ ನೆರವಾಗುವಲ್ಲಿ[೧೨] ತಾವು ಅಸಮರ್ಥರಾಗಿರುವುದಾಗಿ ಭಾವಿಸಿದ ನಂತರ ಹೆಗ್ಡೆಯವರು ಈ ಕ್ರಮಕ್ಕೆ ಮುಂದಾದರು. ತಾವು ಹಮ್ಮಿಕೊಂಡ ಭ್ರಷ್ಟಾಚಾರ-ವಿರೋಧಿ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಾಧ್ಯವಾಗದಂತಾದ ತಮ್ಮ ಅಶಕ್ತತೆಗೆ ಕರ್ನಾಟಕ ಸರ್ಕಾರ[೧೩] ಅಸಹಕಾರಿ ಧೋರಣೆಯೇ ಕಾರಣ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ರಾಜೀನಾಮೆಯ ನಂತರ ಅವರು ಹೇಳಿಕೆ ನೀಡಿದ್ದು ಹೀಗೆ:

ಮಾರ್ಚ್‌ ೨೦ರಂದು ನಮ್ಮ ತಂಡದ ವತಿಯಿಂದ ನಡೆಸಲಾದ ದಾಳಿಯೊಂದರಲ್ಲಿ ವಶಪಡಿಸಿಕೊಳ್ಳಲಾದ ಕಬ್ಬಿಣ ಅದಿರನ್ನು ಬೆಲೆಕೇರಿ ಬಂದರಿನಿಂದ ಕಾನೂನು ಬಾಹಿರವಾದ ರೀತಿಯಲ್ಲಿ ರಫ್ತುಮಾಡಲು ನಡೆಸಿದ ಪ್ರಯತ್ನಗಳನ್ನು ಬಹಿರಂಗಪಡಿಸಿದರು ಎಂಬ ಕಾರಣಕ್ಕಾಗಿ, ಓರ್ವ ಅಧಿಕಾರಿಯನ್ನು ಅಮಾನತುಗೊಳಿಸಬೇಕು ಎಂಬುದಾಗಿ ಸಂಪುಟದ ಸಚಿವರೊಬ್ಬರು ಬಯಸಿದರು. ಸದರಿ ಅಧಿಕಾರಿಯು ನನ್ನ ನೆರವನ್ನು ಬಯಸಿದಾಗ, ನಾನು ಏನನ್ನೂ ಮಾಡಲಾಗಲಿಲ್ಲ.... ಇವೆಲ್ಲದರ ಜೊತೆಗೆ, ನಾನು ಯಾರೆಲ್ಲಾ ಅಧಿಕಾರಿಗಳ ವಿರುದ್ಧ ದಾಳಿಗಳನ್ನು ನಡೆಸಿ ಅಮಾನತುಗೊಳಿಸಿದ್ದೆನೋ, ಅವರೆಲ್ಲರೂ ಅವರವರ ಸ್ಥಾನಗಳಲ್ಲಿ ಪುನಃ ಸ್ಥಾಪಿಸಲ್ಪಟ್ಟಿದ್ದರು,[೧೨].

ವ್ಯಾವಹಾರಿಕ ಹಿತಾಸಕ್ತಿಗಳನ್ನು ಹೊಂದಿರುವ ಕೆಲವೊಂದು ರಾಜಕಾರಣಿಗಳ ಪರವಾಗಿ ಬಂದರು ಖಾತೆ ಸಚಿವ ಪಾಲೇಮಾರ್‌‌ರವರು ಗೋಕುಲ್‌ರ ಅಮಾನತಿಗಾಗಿ ಶಿಫಾರಸು ಮಾಡಿದ್ದರು ಎಂಬಂಥ ಮಾಧ್ಯಮಗಳ ಊಹನದ[೧೪] ನಡುವೆಯೇ, ಗೋಕುಲ್‌ರನ್ನು ಅಮಾನತುಗೊಳಿಸುವುದಕ್ಕೆ ಸಂಬಂಧಿಸಿದ ತಮ್ಮ ಶಿಫಾರಸನ್ನು ಪಾಲೇಮಾರ್‌ ಸಮರ್ಥಿಸಿಕೊಂಡರು; ಈ ಹಗರಣಕ್ಕೆ ಸಂಬಂಧಿಸಿದ ಸಭೆಯೊಂದರಲ್ಲಿ ಗೋಕುಲ್‌ ಪಾಲ್ಗೊಳ್ಳಲಿಲ್ಲವಾದ್ದರಿಂದ, ಹಗರಣದಲ್ಲಿ ಸ್ವತಃ[೧೪] ಅವರೂ ಭಾಗಿಯಾಗಿರಬಹುದೆಂಬ ಶಂಕೆಗಳು ಉದ್ಭವವಾಗಿದ್ದರಿಂದಾಗಿ ಅವರ ಅಮಾನತು ಕ್ರಮವನ್ನು ಕೈಗೊಳ್ಳಬೇಕಾಯಿತು ಎಂಬುದು ಸಚಿವರ ಸಮರ್ಥನೆಯಾಗಿತ್ತು. ವಾಸ್ತವವಾಗಿ, ಪತ್ರಿಕಾಗೋಷ್ಠಿಯೊಂದರಲ್ಲಿ ಹೆಗ್ಡೆಯವರು ಸೂಚ್ಯವಾಗಿ ಹೀಗೆ ಹೇಳಿದರು:

ಒಂದು ವೇಳೆ ಗೋಕುಲ್‌ರನ್ನು ಕೇವಲ ಒಂದು ದಿನದ ಮಟ್ಟಿಗಾದರೂ ಅಮಾನತುಗೊಳಿಸಿದ್ದೇ ಆದಲ್ಲಿ, ಓರ್ವ ಹೊಸ ತನಿಖಾಧಿಕಾರಿಯನ್ನು ಆ ಜಾಗದಲ್ಲಿ ನೇಮಿಸಲು ಸಾಧ್ಯವಾಗುತ್ತದೆ ಮತ್ತು ಸಾವಿರಾರು ಕೋಟಿಗಳಷ್ಟು ದೊಡ್ಡ ಮೊತ್ತವನ್ನು ಒಳಗೊಂಡಿರುವ ಇಂಥದೊಂದು ಬೃಹತ್‌ ಹಗರಣವನ್ನು ಮುಚ್ಚಿಹಾಕಲು ಸಾಧ್ಯವಾಗುತ್ತದೆ ಎಂಬುದೇ ಇದರ ಹಿಂದಿನ ಸಮಗ್ರ ಪರಿಕಲ್ಪನೆಯಾಗಿತ್ತು.... ತನಿಖೆಯನ್ನು ಕೈಗೊಂಡಿದ್ದ ಗೋಕುಲ್‌ಗಾಗಿ, ಅದೀಗ ಅವರ ಕೈಬಿಟ್ಟು ಹೋಗುತ್ತಿರುವ ಸಂದರ್ಭದಲ್ಲೂ ನಾನು ಏನೂ ನೆರವು ನೀಡಲು ಅಸಮರ್ಥನಾಗಿದ್ದೇನೆ. ನಾನು ತೀರಾ ಕ್ಷೋಭೆಗೊಳಗಾಗಿದ್ದೆ ಮತ್ತು ಎರಡು ದಿನಗಳವರೆಗೆ ನನಗೆ ನಿದ್ರೆಮಾಡಲಾಗಲಿಲ್ಲ. ಈ ಕುರಿತು ನನ್ನ ಹೆಂಡತಿಗೆ ತಿಳಿಸಿದೆ ಮತ್ತು ಬುಧವಾರದಂದು ರಾಜೀನಾಮೆ ನೀಡಲು ನಿರ್ಧರಿಸಿದೆ.[೧೫]

ಬೆಲೆಕೇರಿ ಬಂದರು ಹಗರಣ ಎಂದೇ ಪ್ರಚಲಿತವಾಗಿರುವ ಈ ವಿಷಯವು ಕಾನೂನು ಬಾಹಿರವಾಗಿರುವ ೩.೫ ದಶಲಕ್ಷ ಟನ್ನುಗಳಷ್ಟು ಕಬ್ಬಿಣದ ಅದಿರಿಗೆ ಸಂಬಂಧಿಸಿದ್ದು, ಬೆಲೆಕೇರಿ ಬಂದರಿನಿಂದ ರಫ್ತುಮಾಡಲ್ಪಡಲೆಂದು ಅದು ಸಿದ್ಧವಾಗಿತ್ತು ಮತ್ತು ಇದು G. ಜನಾರ್ದನ ರೆಡ್ಡಿ ನೇತೃತ್ವದ ಶಕ್ತಿಯುತ ಗಣಿಗಾರಿಕಾ ವಶೀಲಿಗೆ ಸಂಬಂಧಿಸಿದುದಾಗಿತ್ತು. ಈ ಅದಿರನ್ನು ಗೋಕುಲ್‌ರವರು ವಶಪಡಿಸಿಕೊಂಡ ನಂತರ ಹಾಗೂ ಸೂಕ್ತವಾದ ದಾಖಲೆ ಪತ್ರಗಳಿಲ್ಲದೆಯೇ ಅದರ ರಫ್ತುಮಾಡುವುದಕ್ಕೆ ಅನುಮತಿ ನೀಡಲು ಉಚ್ಚ ನ್ಯಾಯಾಲಯವು ನಿರಾಕರಿಸಿದ ನಂತರ, ಸದರಿ ಅದಿರಿನ ಒಂದು ಬೃಹತ್‌ ಭಾಗವು ಬಂದರಿನಿಂದ[೧೬] ಒಳಗೊಳಗೇ ರಫ್ತುಮಾಡಲ್ಪಟ್ಟಿತ್ತು. ಇಂಥ ಸನ್ನಿವೇಶಗಳಲ್ಲಿ[೧೭] ಸಲಹೆ ನೀಡುವ ಲೋಕಾಯುಕ್ತರ ಹುದ್ದೆಯು ಎದುರಿಸುವ ಅಸಹಾಯಕತೆಗೆ ಒತ್ತುನೀಡಲು ಹೆಗ್ಡೆಯವರ ರಾಜೀನಾಮೆಯು ಬಯಸಿತು.

ಸತತವಾದ ಪ್ರತಿಭಟನೆಗಳು ಮತ್ತು ಸಾರ್ವಜನಿಕ ಒತ್ತಡದ[೧೮] ನಂತರ, ೩೫ ಲಕ್ಷ ಮೆಟ್ರಿಕ್‌ ಟನ್ನುಗಳಷ್ಟು ಕಬ್ಬಿಣದ ಅದಿರನ್ನು[೧೯] ಒಳಗೊಂಡಿರುವ, ಬೆಲೆಕೇರಿ ಬಂದರಿನಲ್ಲಿ ನಡೆದ ಕಾನೂನು ಬಾಹಿರವಾದ ಕಬ್ಬಿಣದ-ಅದಿರಿನ ರಫ್ತು ವ್ಯವಹಾರವೊಂದನ್ನು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಒಪ್ಪಿಕೊಂಡರು.

BJPಯ ರಾಷ್ಟ್ರೀಯ ನಾಯಕತ್ವದಿಂದ ಕೈಗೊಳ್ಳಲಾದ ಮನವೊಲಿಸುವಿಕೆಯ ನಂತರ, ನ್ಯಾಯಮೂರ್ತಿ ಹೆಗ್ಡೆಯವರು ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಂಡರು ಮತ್ತು ಲೋಕಾಯುಕ್ತರ ಹುದ್ದೆಯಲ್ಲಿ ಮುಂದುವರಿಯಲು ಒಪ್ಪಿದರು. ಇದರಿಂದಾಗಿ, ಸಾರ್ವಜನಿಕ ಸೇವೆಯಲ್ಲಿರುವ ಓರ್ವ ಪ್ರಾಮಾಣಿಕ ವ್ಯಕ್ತಿಯು ತನ್ನ ಹುದ್ದೆಯನ್ನು ತ್ಯಜಿಸುವಂಥ[೨೦] ಸನ್ನಿವೇಶವು ನಿರ್ಮಾಣವಾಗಲು ಅವಕಾಶ ಮಾಡಿಕೊಡುವ ಮೂಲಕ, BJP ಆಳ್ವಿಕೆಯ ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಪಕ್ಷವು ಒಂದು ಪ್ರಮುಖ ಮುಖಭಂಗಕ್ಕೆ ತನ್ನನ್ನು ಈಡುಮಾಡಿಕೊಂಡಂತಾಯಿತು.

ಕೈಗಾರಿಕಾ ಯೋಜನೆಗಳಿಗೆ ಸಂಬಂಧಿಸಿದಂತಿರುವ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿನ (ಕರ್ನಾಟಕ ಇಂಡಸ್ಟ್ರಿಯಲ್‌ ಏರಿಯಾಸ್‌ ಡೆವಲಪ್‌ಮೆಂಟ್‌ ಬೋರ್ಡ್‌-KIADB) ೧೦೭ ಕೋಟಿ ಮೌಲ್ಯದ ವಂಚನೆಯನ್ನು ಸೆಪ್ಟೆಂಬರ್‌ ೨೨ರಂದು ಕರ್ನಾಟಕ ಲೋಕಾಯುಕ್ತರಾಗಿ ಸಂತೋಷ್‌ ಹೆಗ್ಡೆಯವರು ಹೊರಗೆಡವಿದರು.KIADBಗೆ ಸೇರಿದ ಕೆಲವೊಂದು ಅಧಿಕಾರಿಗಳು ಹಾಗೂ ಕೆಲವೊಂದು ಖಾಸಗಿ ವ್ಯಕ್ತಿಗಳು ಈ ವ್ಯವಹಾರದಲ್ಲಿ ಪಾಲ್ಗೊಂಡಿದ್ದು, ಇದರಿಂದಾಗಿ ರಾಜ್ಯ ಬೊಕ್ಕಸಕ್ಕೆ ಕೋಟಿಗಟ್ಟಲೆ ರೂಪಾಯಿಗಳಷ್ಟು ನಷ್ಟವು ಉಂಟಾಗಿತ್ತು. ಈ ನಿಟ್ಟಿನಲ್ಲಿ ದಾಳಿಮಾಡಿದ್ದ ಲೋಕಾಯುಕ್ತ ಪತ್ತೇದಾರರು, ಭ್ರಷ್ಟಾಚಾರ ತಡೆಗಟ್ಟುವಿಕೆಯ ಕಾಯಿದೆಯ ಕಲಮು ೧೩ (೧) (C) ಮತ್ತು (D) ಅಡಿಯಲ್ಲಿ ಹಾಗೂ ಭಾರತೀಯ ದಂಡ ಸಂಹಿತೆಯ ೪೬೫, ೪೬೨, ೪೭೧ ಮತ್ತು ೪೨೦ ಕಲಮುಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡರು.

ಉಲ್ಲೇಖಗಳು

[ಬದಲಾಯಿಸಿ]
  1. "ಭಾರತದ ಸಂಸತ್ತು". Archived from the original on 2011-04-29. Retrieved 2010-12-22.
  2. "Biodata of Justice Nitte Santosh Hegde" (PDF). www.kar.nic.in. Archived from the original (PDF) on 2011-05-17. Retrieved 2009-09-07.
  3. "Honorary doctorate for Santosh Hegde". Chennai, India: ದಿ ಹಿಂದೂ. 2006-02-11. Archived from the original on 2009-10-08. Retrieved 2009-09-07.
  4. "Justice Santosh Hegde". Voice&Data. Archived from the original on 2010-05-16. Retrieved 2009-09-07.
  5. "Reddys have the last laugh, national mines regulator has both hands tied". Indian Express. Archived from the original on 2012-01-21. Retrieved 2010-06-24.
  6. "Illegal mining: Lokayukta slams Government". Chennai, India: ದಿ ಹಿಂದೂ. 2009-07-14. Archived from the original on 2009-07-17. Retrieved 2009-09-07.
  7. "Santosh Hegde Interview: 'Mining Lease Is Used As James Bond's Gun'". Tehelka. Archived from the original on 2012-09-11. Retrieved 2010-12-22.
  8. "Santosh Hegde Full Interview: 'Mining Lease Is Used As James Bond's Gun'". Tehelka. Archived from the original on 2012-09-19. Retrieved 2010-12-22.
  9. "Under fire BBMP chief edged out". Deccan Chronicle. Archived from the original on 2011-07-23. Retrieved 2009-09-07.
  10. "Subramanya shunted out of BBMP". ಟೈಮ್ಸ್ ಆಫ್ ಇಂಡಿಯ. 2009-06-12. Retrieved 2010-06-30.
  11. "Karnataka: Lokayukta: How Many Seas...: A good man goes, head held high. Ethical cleansing in reverse?". Outlook. Retrieved 2010-07-05.
  12. ೧೨.೦ ೧೨.೧ "'I was helpless in protecting an honest officer'". SIFY.
  13. "Lokayukta indicts BSY govt, quits". Deccan Herald. Retrieved 2010-06-24.
  14. ೧೪.೦ ೧೪.೧ "Palemar says he meant no disrespect to the Lokayukta". Chennai, India: The Hindu. 2010-06-25. Archived from the original on 2010-06-30. Retrieved 2010-12-22.
  15. "'Iron ore scam can runs to Rs 2,500 crore'". Express Buzz.[ಶಾಶ್ವತವಾಗಿ ಮಡಿದ ಕೊಂಡಿ]
  16. "Cong 'backs' Hegde and alleges BJP-mafia nexus". India Today.
  17. "I had to go to save Gokul: Lokayukta". Deccan Chronicle. Archived from the original on 2010-06-28. Retrieved 2010-12-22.
  18. "Karnataka govt faces Hegde heat". The Indian Express.
  19. "Yeddyurappa admits iron ore racket". The Indian Express.
  20. "Hegde to stay, says can't ignore father-like Advani". The Indian Express. Archived from the original on 2011-04-24. Retrieved 2010-12-22.