ನಾಡ ಗೀತೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ 'ಕಿಶೋರಚಂದ್ರವಾಣಿ' ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು.

ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. 2004ರ ಫೆ. 23ರಂದು ರಾಜ್ಯ ಸರ್ಕಾರ ಅದನ್ನು ‘ನಾಡಗೀತೆ’ಯಾಗಿ ಗೌರವಿಸಿ ಅದಕ್ಕೊಂದು ವಿಶೇಷ ಸ್ಥಾನ ನೀಡಿತು.

ವಿವಾದ[ಬದಲಾಯಿಸಿ]

ನಾಡಗೀತೆ ವಿವಾದ
ಈಗಾಗಲೇ ರಾಜ್ಯ ಸರ್ಕಾರ ಜಿ.ಎಸ್‌.ಶಿವರುದ್ರಪ್ಪ, ಚನ್ನವೀರ ಕಣವಿ ನೇತೃತ್ವದ ಸಮಿತಿಗಳನ್ನು ರಚಿಸಿ ವರದಿಗಳನ್ನು ಸಿದ್ಧಪಡಿಸಿದೆ. ಸ್ವತಃ ಶ್ರೇಷ್ಠ ಕವಿ­ಗಳಾದ ಅವರೇ ನಾಡ ಗೀತೆಯನ್ನು ಸಂಕ್ಷಿಪ್ತಗೊಳಿಸಿ ವರದಿ ಕೊಟ್ಟಿ­ದ್ದಾರೆ. ಈಚೆಗೆ ಗಾಯಕ ಮತ್ತು ನಿವೃತ್ತ ಹಿರಿಯ ಅಧಿಕಾರಿ ವೈ.ಕೆ.­ಮುದ್ದುಕೃಷ್ಣ ನಾಡಗೀತೆಯ ಸಂಕ್ಷಿಪ್ತೀಕರಣವನ್ನು ಬೆಂಬಲಿಸಿದ್ದಾರೆ. ಆ ಕಾರಣ ಯಾವುದೇ ಒತ್ತಡಕ್ಕೂ ಮಣಿಯದೆ ಸರ್ಕಾರ ಜಿ.ಎಸ್‌.ಶಿವರುದ್ರಪ್ಪ ಅಥವಾ ಚನ್ನವೀರ ಕಣವಿಯವರ ಶಿಫಾರಸು­ಗಳಲ್ಲಿ ಒಂದನ್ನು ಒಪ್ಪಿ, ಆ ಸಂಕ್ಷಿಪ್ತಗೊಂಡ ನಾಡಗೀತೆಗೆ ಸೂಕ್ತವಾದ ರಾಗಾ-­ಲಾ­ಪನೆ ರೂಪಿಸಿ ಅದನ್ನು ಅಧಿಕೃತವಾಗಿ ಘೋಷಿಸಬೇಕು. ಡಾ. ಚಿದಾನಂದ ಮೂರ್ತಿಯವರ ಅಭಿಪ್ರಾಯ. ಪ್ರಜಾವಾಣಿ -22/11/2014)

ಮಧ್ವಾಚಾರ್ಯರ ಹೆಸರು ಸೇರ್ಪಡೆ[೧] ಮತ್ತು ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಬಸವೇಶ್ವರರ ಹೆಸರು ಕೈ ಬಿಡಬೇಕೆಂಬ ವಿಚಾರಗಳ ಕುರಿತು ಧರ್ಮ ಗುರುಗಳು, ಸಾಹಿತಿಗಳು ಮತ್ತು ರಾಜಕಾರಣಿಗಳ ನೆಡುವೆ ತೀವ್ರ ಚರ್ಚೆ ನಡೆದು ವಿಷಯ ವಿವಾದ ಸ್ವರೂಪ ಪಡೆಯಿತು. ಕೆಲವರು ಈ ಗೀತೆ ನಾಡ ಗೀತೆಯಾಗಲು ಅರ್ಹವಾಗಿಲ್ಲವೆಂದು ಕೂಡ ವಾದಿಸಿದರು. ಪಾಟೀಲ ಪುಟ್ಟಪ್ಪ ಅವರು ಈ ಗೀತೆಯಲ್ಲಿ ಮಹಿಳೆಯರಿಗೆ ಸ್ಥಾನವಿಲ್ಲ ಕಿತ್ತೂರು ಚೆನ್ನಮ್ಮಳ ಹೆಸರು ಬರಬೇಕು ಎಂದು ವಾದಿಸಿದರು. ಮೂಲ ಕೃತಿಯ ೨೩ ಸಾಲುಗಳು ಮಾತ್ರ ನಾಡ ಗೀತೆಯಲ್ಲಿರುವುದು ಎಂದಾಗಿತ್ತು ಆದರೆ ಕೊನೆಯಲ್ಲಿ ಕರ್ನಾಟಕ ಸರ್ಕಾರ ಗೀತೆಗೆ ಯಾವುದೆ ಬದಲಾವಣೆ ಮಾಡದೆ ಕವಿ ಬರೆದ ಮೂಲ ಕೃತಿಯನ್ನು ಹಾಗೆ ಉಳಿಸಿಕೊಂಡಿತು.[೨]

ಸಂಗೀತ ಸಂಯೋಜನೆ[ಬದಲಾಯಿಸಿ]

ಕುವೆಂಪು ವಿರಚಿತ ಗೀತೆಗೆ ಮೊಟ್ಟ ಮೊದಲ ಬಾರಿಗೆ ಮೈಸೂರು ಅನಂತಸ್ವಾಮಿ ಅವರು ರಾಗ ಸಂಯೋಜನೆ ಮಾಡಿದರು. ನಂತರದ ದಿನಗಳಲ್ಲಿ ಸಿ. ಅಶ್ವಥ್ ಅವರ ಸಂಯೋಜನೆ ಜನಪ್ರಿಯತೆ ಗಳಿಸಿತು. ಯಾರ ರಾಗ ಸಂಯೋಜನೆ ಬಳಸಬೇಕು ಎಂಬುದರ ಬಗ್ಗೆ ಕೂಡಾ ವಿವಾದ ಉಂಟಾಗಿತ್ತು. ಪ್ರೊ. ಶಿವರುದ್ರಪ್ಪ ಅವರ ಸಮಿತಿ ಮೈಸೂರು ಅನಂತಸ್ವಾಮಿ ಅವರ ಸ್ವರ ಸಂಯೋಜನೆಯನ್ನು ಶಿಫಾರಸು ಮಾಡಿತ್ತು. ಮೊದಲು ಆರಿಸಲಾದ ಗೀತೆ ->

ಮೊದಲು ಆರಿಸಲಾದ ಗೀತೆ ಹೀಗಿತ್ತೇ?

ನಾಡಗೀತೆ

 • ಜಯ ಭಾರತ ಜನನಿಯ ತನುಜಾತೆ,
 • ಜಯ ಹೇ ಕರ್ನಾಟಕ ಮಾತೆ!
 • ಜಯ ಸುಂದರ ನದಿ ವನಗಳ ನಾಡೇ,
 • ಜಯ ಹೇ ರಸಋಷಿಗಳ ಬೀಡೆ!
 • ಜಯ ಭಾರತ ಜನನಿಯ ತನುಜಾತೆ,
 • ಜಯ ಹೇ ಕರ್ನಾಟಕ ಮಾತೆ!
 • -
 • ಜಯ ಹೇ ಕರ್ನಾಟಕ ಮಾತೆ!
 • ಜಯ ಭಾರತ ಜನನಿಯ ತನುಜಾತೆ,
 • ಜಯ ಹೇ ಕರ್ನಾಟಕ ಮಾತೆ!
 • -
 • ಜನನಿಯ ಜೋಗುಳ ವೇದದ ಘೋಷ,
 • ಜನನಿಗೆ ಜೀವವು ನಿನ್ನಾವೇಶ,
 • ಹಸುರಿನ ಗಿರಿಗಳ ಸಾಲೇ,
 • ನಿನ್ನಯ ಕೊರಳಿನ ಮಾಲೆ,
 • ಕಪಿಲ ಪತಂಜಲ ಗೌತಮ ಜಿನನುತ,
 • ಭಾರತ ಜನನಿಯ ತನುಜಾತೆ !
 • -
 • ಜಯ ಹೇ ಕರ್ನಾಟಕ ಮಾತೆ!
 • ಜಯ ಭಾರತ ಜನನಿಯ ತನುಜಾತೆ,
 • ಜಯ ಹೇ ಕರ್ನಾಟಕ ಮಾತೆ!
 • -
 • :ಸರ್ವ ಜನಾಂಗದ ಶಾಂತಿಯ ತೋಟ,
 • ರಸಿಕರ ಕಂಗಳ ಸೆಳೆಯುವ ನೋಟ
 • ಹಿಂದೂ ಕ್ರೈಸ್ತ ಮುಸಲ್ಮಾನ,
 • ಪಾರಸಿಕ ಜೈನರುದ್ಯಾನ
 • ಜನಕನ ಹೋಲುವ ದೊರೆಗಳ ಧಾಮ,
 • ಗಾಯಕ ವೈಣಿಕರಾರಾಮ.
 • -
 • ಜಯ ಹೇ ಕರ್ನಾಟಕ ಮಾತೆ!
 • ಜಯ ಭಾರತ ಜನನಿಯ ತನುಜಾತೆ,
 • ಜಯ ಹೇ ಕರ್ನಾಟಕ ಮಾತೆ!
 • ಕನ್ನಡ ನುಡಿ ಕುಣಿದಾಡುವ ಗೇಹ,
 • ಕನ್ನಡ ತಾಯಿಯ ಮಕ್ಕಳ ದೇಹ
 • ಭಾರತ ಜನನಿಯ ತನುಜಾತೆ,
 • -
 • ಜಯ ಹೇ ಕರ್ನಾಟಕ ಮಾತೆ
 • ಜಯ ಸುಂದರ ನದಿ ವನಗಳ ನಾಡೇ,
 • ಜಯ ಹೇ ರಸಋಷಿಗಳ ಬೀಡೆ!
 • ಜಯ ಹೇ ಕರ್ನಾಟಕ ಮಾತೆ!
 • (ಪಲ್ಲವಿಯನ್ನು ಕೊನೆಯಲ್ಲಿ ಮಾತ್ರಾ ಹೇಳಿದರೆ ಅನುಕೂಲವೆಂಬ ಅಭಿಪ್ರಾಯವೂ ಇದೆ)

ನಾಡ ಗೀತೆ[ಬದಲಾಯಿಸಿ]

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !

ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಜಯ ಹೇ ಕರ್ನಾಟಕ ಮಾತೆ!

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !

ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ

ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!

ಮೊದಲು ಆರಿಸಿದ ಭಾಗ[ಬದಲಾಯಿಸಿ]

1956ರಲ್ಲಿ ರಾಜ್ಯ ಏಕೀಕರಣಗೊಂಡರೂ ಕರ್ನಾಟಕ ಸರ್ಕಾರ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿಗಾಗಿ 2003ರಲ್ಲಿ ಅವರ ಕವನ ‘ಜಯ ಭಾರತ ಜನನಿಯ ತನುಜಾತೆ’ಯನ್ನು ‘ನಾಡಗೀತೆ’ ಎಂದು ಘೋಷಿಸಿತು. ಆ ಕವನದ ಏಳು ಪದ್ಯ ಖಂಡಗಳಲ್ಲಿ ನಾಲ್ಕು ಪದ್ಯ ಖಂಡಗಳನ್ನು ಉಳಿಸಿಕೊಂಡಿತು. ‘ಜಯ ಹೇ ಕರ್ನಾಟಕ ಮಾತೆ...’, ‘ಜನನಿಯ ಜೋಗುಳ ವೇದದ ಘೋಷ...’, ‘ಸರ್ವ ಜನಾಂಗದ ಶಾಂತಿಯ ತೋಟ...’, ‘ಕನ್ನಡ ನುಡಿ ಕುಣಿದಾಡುವ ಗೇಹ...’ ಎಂದು ಆರಂಭವಾಗುತ್ತವೆ ಆ ಪದ್ಯ ಭಾಗಗಳು.

ಇಡೀ ಕವನವನ್ನು ನಾಡಗೀತೆ­ಯಾಗಿ ಘೋಷಿಸಬೇಕು ಎಂದು ಕೆಲವರು ಒತ್ತಡ ಹಾಕಿದ್ದರಿಂದ 2004­ರಲ್ಲಿ ಇಡೀ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಲಾಯಿತು.

ಉಲ್ಲೇಖಗಳು[ಬದಲಾಯಿಸಿ]

"http://kn.wikipedia.org/w/index.php?title=ನಾಡ_ಗೀತೆ&oldid=523694" ಇಂದ ಪಡೆಯಲ್ಪಟ್ಟಿದೆ