ತವಿಲ್
| ಕರ್ನಾಟಕ ಸಂಗೀತ | |
|---|---|
| ಪರಿಕಲ್ಪನೆಗಳು | |
| Compositions | |
| ಸಂಗೀತೋಪಕರಣಗಳು | |
|
ಮಾಧುರ್ಯ: ಸರಸ್ವತಿ ವೀಣ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಖಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ |
|
| ಸಂಗೀತಕಾರರು | |
ತವಿಲ್ (ಕನ್ನಡದಲ್ಲಿ ಡೋಲು)ಇದು ನಾಗಸ್ವರ ಮೇಳದಲ್ಲಿ ಉಪಯೋಗಿಸುವ ತಾಳವಾದ್ಯ.ಇದು ಒಂದು ಜಾನಪದ ವಾದ್ಯವಾದರೂ ಈಗ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ನುಡಿಸಲ್ಪಡುತ್ತದೆ.
[ಬದಲಾಯಿಸಿ] ರಚನೆ
ಇದು ಆಕಾರದಲ್ಲಿ ಮೃದಂಗವನ್ನು ಹೋಲುತ್ತದೆಯಾದರೂ ಅದಕ್ಕಿಂತ ದೊಡ್ಡದಿರುತ್ತದೆ. ಇದನ್ನು ಹಲಸು ಮರದ ಒಂದೇ ತುಂಡನ್ನು ಕೊರೆದು ಮಾಡಿರುತ್ತಾರೆ.ಎರಡೂ ಕಡೆಗಳಲ್ಲಿ ಹಾಕಿರುವ ವೃತ್ತಾಕಾರದ ಹದಮಾಡಿದ ಚರ್ಮಗಳನ್ನು ಚರ್ಮದ ಪಟ್ಟಿಗಳಿಂದ ಎಳೆದು ಕಟ್ಟಿರುತ್ತಾರೆ.ಮಧ್ಯಭಾಗದಲ್ಲಿ ವಾದ್ಯದ ಸುತ್ತಲೂ ಮತ್ತೊಂದು ಚರ್ಮದ ಪಟ್ಟಿಯನ್ನು ಕಟ್ಟಿರುತ್ತಾರೆ. ಇದನ್ನು ಬಿಗಿ ಅಥವಾ ಸಡಿಲ ಮಾಡುವುದರಿಂದ ಬೇಕಾದ ಶ್ರುತಿಯನ್ನು ಪಡೆಯಬಹುದಾಗಿದೆ.
[ಬದಲಾಯಿಸಿ] ನುಡಿಸುವಿಕೆ
ಇದರ ಎಡ ಭಾಗವನ್ನು ಸಣ್ಣ ಕೋಲಿನಿಂದಲೂ ಬಲ ಭಾಗವನ್ನು ಬೆರಳುಗಳಿಂದಲೂ ನುಡಿಸುತ್ತಾರೆ.ಬೆರಳುಗಳಿಗೆ ಟೊಪ್ಪಿಗೆಗಳನ್ನು ಧರಿಸುತ್ತಾರೆ.ಹೆಚ್ಚಾಗಿ ಕುಳಿತುಕೊಂಡು ನುಡಿಸುವುದಾದರೂ ಉತ್ಸವ ಮುಂತಾದ ಸಂದರ್ಭಗಳಲ್ಲಿ ಕೊರಳಿಗೆ ಬಟ್ಟೆಯಿಂದ ಇಳಿಬಿಟ್ಟು ನುಡಿಸುತ್ತಾರೆ.