ತಬು (ನಟಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Tabu

Tabu at the release of Filhaal...
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Tabassum Hashmi
(1970-11-04) ೪ ನವೆಂಬರ್ ೧೯೭೦ (ವಯಸ್ಸು ೫೩)
Hyderabad, India
ಬೇರೆ ಹೆಸರುಗಳು Tabbu
ವೃತ್ತಿ Actress
ವರ್ಷಗಳು ಸಕ್ರಿಯ ೧೯೯೧, ೧೯೯೪ – present
ಪತಿ/ಪತ್ನಿ None

ತಬು ಹಿಂದಿ:तब्बूತೆಲುಗು:తబస్సుం హష్మి(೪ ನೇ ನವೆಣಬರ್ ೧೯೭೦ ರಣದು ತಬಸ್ಸುಮ್ ಹಶ್ಮಿ ಎಂದು ಜನಸಿದ) ಒಬ್ಬ ಭಾರತೀಯ ಚಲನಚಿತ್ರಗಳ ಅಭಿನೇತ್ರಿ. ಒಂದು ಅಮೇರಿಕಾದ ಚಲನಚಿತ್ರವೂ ಸೇರಿದಂತೆ ತೆಲುಗು, ತಮಿಳು, ಮಲೆಯಳಂ, ಮರಾಠಿ ಹಾಗೂ ಬೆಂಗಾಳಿ ಭಾಷೆಗಳನ್ನಿನ ಚಲನಚಿತ್ರಗಳಲ್ಲಿ ನಟಿಸಿದ್ದರೂ, ಅವರು ಮುಖ್ಯಯವಾಗಿ ಹಿಂದಿ ಚಲನಚಿತ್ರಗಳಲ್ಲಿ ಅಭಿಸಯಿಸಿದ್ದಾರೆ. ಅವರು ಎರಡು ಬಾರಿ ಅತ್ಯುತ್ತಮ ಶ್ರೇಷ್ಠ ನಟಿ ಎಂದು ರಾಷ್ಟ್ರೀಯ ಚಲನ ಪ್ರಶಸ್ತಿ ಗೆದ್ದಿದ್ದಾರೆ, ಹಾಗೂ ಅವರು ಅತ್ಯುತ್ತಮ ಮಹಿಳಾ ಅಭಿನೇತ್ರಿ ಎಂದು ಫಿಲ್ಮ್ ಫೇರ್ನ ವಿಮರ್ಶಕರ ಪ್ರಶಸ್ತಿಯನ್ನು ನಾಲ್ಕು ಬಾರಿ ಪಡೆದು ಅತಿ ಹೆಚ್ಚು ಬಾರಿ ಪಡೆದ ದಾಖಲೆ ಹೊಂದಿದ್ದಾರೆ.

ಕೆಲವು ಆಪಾವಾದಗಳಿದ್ದಾಗ್ಯೂ ತಬು ರವರು ಗಣನೀಯವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಹಣಗಳಿಕೆಯ ಪ್ರೇಕ್ಷಕರಿಗಿಂದ ಹೆಚ್ಚು ವಿಮರ್ಶಾತ್ಮಕ ಪ್ರಶಂಸೆಗಳನ್ನು ಶೇಕರಿಸುವಂತಹ ಕಲಾತ್ಮಕ, ಕಡಿಮೆ ವೆಚ್ಚದ ಚಿತ್ರಗಳಲ್ಲಿ ಅಭಿನಯಿಸುವುದಕ್ಕೆ ಪ್ರಖ್ಯಾತರಾಗಿದ್ದಾರೆ. ಅವರು ಕಾಣಿಸಿಕೊಂಡ ಬಾರ್ಡರ್ (೧೯೯೭), ಸಾಜನ್ ಚಲೆ ಸಸುರಾಲ್ (೧೯೯೬), ಬೀವಿ ನಂ. ೧ ಹಾಗೂ Hum Saath-Saath Hain: We Stand United ೧೯೯೯ ನಂತಹ ವ್ಯಾವಹಾರಿಕವಾಗಿ ಯಶಸ್ವಿಯಾದ ಚಿತ್ರಗಳೂ ಕಡಿಮೆ, ಹಾಗೂ ಈ ಚಿತ್ರಗಳಲ್ಲಿ ಅವರ ಪಾತ್ರಗಳೂ ಬಹಳ ಚಿಕ್ಕವು. ಮಾಚಿಸ್ (೧೯೯೬), ವಿರಾಸತ್ (೧೯೯೭), ಹು ತು ತು (೧೯೯೯), ಅಸ್ತಿತ್ವ (೨೦೦೦), ಚಾಂದನಿ ಬಾರ್ (೨೦೦೧), ಮಕ್ವುಬೂಲ್ (೨೦೦೩) ಹಾಗೂ ಚೀನಿ ಕಂ ಅವರ ಅತ್ಯಂತ ಹೆರಾದ ಅಭಿನಯಗಳಾಗಿವೆ. ಮೀರಾ ನಾಯರ್ ರವರ ಅಮೇರಿಕಾದ ಚಲನಚಿತ್ರ, ದಿ ನೇಮ್ ಸೇಕ್ ನಲ್ಲಿನ ಅವರ ಮಹತ್ವದ ಪಾತ್ರವೂ ಸಹ ಹೆಚ್ಚಿ ಪ್ರಶಂಸೆ ಗಳಿಸಿತು. ಚಿತ್ರಗಳಲ್ಲಿನ ತಮ್ಮ ಪಾತ್ರಗಳ ಬಗ್ಗೆ ಆಯ್ಕೆ ಮಾಡುವುದರಲ್ಲಿ ಹೆಸರಾದ ಅವರು ಹೀಗೆ ಹೇಳಿದ್ದಾರೆ, "ನನ್ನ ಮನ ಮುಟ್ಟುವ ಚಿತ್ರಗಳಲ್ಲಿ ಮಾತ್ರ ನಟಿಸುತ್ತೇನೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತಂಡದ ಇತರೆ ಸಹ ಕಲಾವಿದರು ಮತ್ತು ನಿರ್ದೇಶಕರು ನನ್ನಲ್ಲಿ ಆಸಕ್ತಿ ಮೂಡಿಸಬೇಕು".[೧]

ಆರಂಭಿಕ ಜೀವನ[ಬದಲಾಯಿಸಿ]

೧೯೭೦ ಎಂದು ಇತರೆ ಅನೇಕ ಮೂಲಗಳು ಸೂಚನೆಗಳನ್ನು ಮಾಡಿದರೂ,[೨] ತಬು ರವರು ೧೯೭೧ ರಲ್ಲಿ ಜುಮಾಲ್ ಹಶ್ಮಿ ಹಾಗೂ ರಿಜ್ವಾನ್ ರವರಿಗೆ ಹೈದರಾಬಾದ್ ನಲ್ಲಿ ಜನಿಸಿದರು. ಕೆಲವೇ ಸಮಯಗಳ ನಂತರ, ಅವರ ತಂದೆ ತಾಯಿಗಳು ವಿವಾಹ ವಿಚ್ಛೇದನ ಪಡೆದರು. ಅವರ ತಾಯಿಯವರು ಶಾಲಾ ಅಧ್ಯಾಪಕಿ ಹಾಗೂ ಅವರ ತಾಯಿಯ ಕಡೆಯ ತಾತಾ ಅಜ್ಜಿ ಒಂದು ಶಾಲೆಯನ್ನು ನಡೆಸುತ್ತಿದ್ದ ನಿವೃತ್ತ ಪ್ರಾರಾಧ್ಯಾಪಕರು. ಅವರ ತಾತ ಮಹಮ್ಮದ್ ಅಹಸಾನ್ ಗಣಿತದ ಪ್ರಾಧ್ಯಾಪಕರಾಗಿದ್ದರು, ಹಾಗೂ ಅವರ ಅಜ್ಜಿ ಆಂಗ್ಲ ಸಾಹಿತ್ಯದ ಪ್ರಾಧ್ಯಾಯಪಕರಾಗಿದ್ದರು. ಅವರು ಹೈದರಾಬಾದ್ ನಲ್ಲಿ ಸೆಯಿಂಟ್. ಆಂನ್ಸ್ ಶಾಲೆಯಲ್ಲಿ ಓದಲು ಹೋಗುತ್ತಿದ್ದರು. ತಬು ೧೯೮೩ ರಲ್ಲಿ ಮುಂಬಯಿಗೆ ತೆರಳಿ ಎರಡು ವರ್ಷಗಳ ಕಾಲ ಸೆಯಿಂಟ್. ಕ್ಸೇವಿಯರ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.[೩]

ಅವರು ಶಬಾನ ಅಜ್ಮಿಯವರ ಸಹೋದರಿ ಹಾಗೂ ನಟಿ ಫರ್ಹಾ ನಾಜ್ ರವರ ಕಿರಿಯ ತಂಗಿ. ಅವರು ,ಮುಂಬಯಿ ಹಾಗೂ ಹೈದರಾಬಾದ್ ನಲ್ಲಿ ಮನೆಗಳನ್ನು ಹೊಂದಿದ್ದಾರೆ.[೪]

ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ವೃತ್ತಿಜೀವನ[ಬದಲಾಯಿಸಿ]

ತಬಸ್ಸುಮ್ "ತಬು" ಹಶ್ಮಿ ಅವರು 'ಬಜಾರ್' ಚಲನಚಿತ್ರದಲ್ಲಿ ಒಂದು ಚಿಕ್ಕ ಪಾತ್ರದಲ್ಲಿ (೧೯೮೦) ರಲ್ಲಿ ಕಾಣಿಸಿಕೊಂಡರು, ಹಾಗೂ ಮುಂದೆ ಹದಿನೈದನೆಯ ವಯಸ್ಸಿನಲ್ಲಿ ಹಮ್ ನೌಜವಾನ್ (೧೯೮೫) ರ ಚಲನಚಿತ್ರದಲ್ಲಿ ದೇವ್ ಆನಂದ್ ಅವರ ಮಗಳಾಗಿ ಅವರು ಅಭಿನಯಿಸಿದರು. ಕೂಲಿ. ನಂ೧ ಎಂಬ ತೆಲಗು ಚಲನಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ನಟಿಯಾಗಿ ಪಾತ್ರವಹಿಸಿದರು. ಡಿಸೆಂಬರ್ ೧೯೮೭ ರಲ್ಲಿ, ಬೋನಿ ಕಪೂರ್ ರವರು ರೂಪ್ ಕಿ ರಾಣಿ ಚೋರೋ ಕ ರಾಜಾ ಮತ್ತು ಪ್ರೇಮ್ ಎಂಬ ದೊಡ್ಡ ಚಿತ್ರಗಳನ್ನು ಪ್ರಾರಂಭಿಸಿದರು. ಪ್ರೇಮ್ ಚಲನಚಿತ್ರದಲ್ಲಿ, ತಬು ರವರು ಸಂಜಯ್ ಕಪೂರರ ವಿರುದ್ಧ ನಟಿಸಲು ಸಹಿ ಹಾಕಿದರು. ಆ ಚಲನಚಿತ್ರವು ತಯಾರಕೆ ಮಾಡುವಲ್ಲಿ ಎಂಟು ವರ್ಷಗಳಾದವು. ತಬು ಒಮ್ಮೆ ತಮಾಷೆಗಾಗಿ ಹೇಳಿದರು, "ನನಗೆ ದಶಕದ ಅತ್ಯಂತ ಹೆಚ್ಚು ಕಾಲ ಕಾಯುತ್ತಿರುವ ಹೊಸದಾಗಿ ಬಂದಿರುವಳು". ಅವರ ನಾಯಕ ನಟಿಯಾದ ಹಿಂದಿಯಲ್ಲಿ ಮೊದಲು ಬಿಡುಗಡೆಯಾದ ಚಲನಚಿತ್ರ ಪೆಹ್ಲಾ ಪೆಹ್ಲಾ ಪ್ಯಾರ್ ಚಿತ್ರದಲ್ಲಿ ಯಾರ ಗಮನಕ್ಕೂ ಬಾರಲೇ ಇಲ್ಲ.[೫] ಅವರು ಅಜಯ್ ದೇವಗನ್ ವಿರುದ್ಧ ವಿಜಯಪಥ್ ನಲ್ಲಿ (೧೯೯೪) ತಮ್ಮ ಪಾತ್ರದಿಂದಾಗಿ ಪ್ರಾಮುಖ್ಯತೆಗೆ ಬಂದರು ಹಾಗೂ ಅದಕ್ಕಾಗಿ ಅವರು ಫಿಲ್ಮ್ ಫೇರ್ ನಿಂದ ಅತ್ಯುತ್ತಮ ಮಹಿಳಾ ಪ್ರಥಮ ಪ್ರವೇಶದ ಪ್ರಶಸ್ತಿಯನ್ನು ಸ್ವೀಕರಿಸಿದರು. ಗಲ್ಲಾ ಪೆಟ್ಟಿಗೆಯಲ್ಲಿ ಹೆಚ್ಚು ಗಳಿಸದೆ ಅಷ್ಟು ಚೆನ್ನಾಗಿ ನಡೆಯದ ಅನೇಕ ಚಲನಚಿತ್ರಗಳು ಇದನ್ನು ಹಿಂಬಾಲಿಸಿದವು.

ಯಶಸ್ಸು, ೨೦೦೩–ಇಲ್ಲಿಯವರೆಗೆ[ಬದಲಾಯಿಸಿ]

೧೯೯೬ ರಲ್ಲಿ, ತಬು ರವರ ಎಂಟು ಚಲನಚಿತ್ರಗಳು ಬಿಡುಗಡೆಯಾದವು. ಸಾಜನ್ ಚಲೆ ಸಸುರಾಲ್ ಹಾಗೂ ಜೀತ್ ಎಂಬ ಎರಡು ಚಲನಚಿತ್ರಗಳು ಹೆಚ್ಚು ಯಶಸ್ವಿಯಾದವು; ಈ ಎರಡೂ ಚಿತ್ರಗಳು ಆ ವರ್ಷದ ಪ್ರಮುಖ ಐದು ಚಲನಚಿತ್ರಗಳಲ್ಲಿ ಒಂದಾಗಿ ಇದ್ದವು.[೬] ಅವರ ಮತ್ತೊಂದು ಪ್ರಮುಖ ಚಲನಚಿತ್ರ ಪ್ರಖ್ಯಾತ ಗೀತರಚನೆಕಾರ ಹಾಗೂ ನಿರ್ದೇಶಕ ಗುಲ್ಜಾರ್ ಅವರ ಮಾಚಿಸ್ ವಿಮರ್ಶಾತ್ಮಕವಾಗಿ ಜಯಗಳಿಸಿತು. ಸಿಖ್ಖರ ದಂಗೆಯ ಉದ್ಭವದಲ್ಲಿ ಸಿಲುಕಿದ ಪಂಜಾಬಿ ಮಹಿಳೆಯಾಗಿ ಅವರ ಪಾತ್ರದಲ್ಲಿನ ಅಭಿನಯವು ಪ್ರಶಂಶಿಸಲ್ಪಟ್ಟಿತು; ಅವರು ತಮ್ಮ ಅಭಿನಯಕ್ಕಾಗಿ /ಸಾಧನೆಗೆಅತ್ಯುತ್ತಮ ನಟಿಯ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆಲ್ಲುವತ್ತ ಸಾಗಿದರು.

ತಬುರವರ ೧೯೯೭ ರ ಮೊದಲ ಬಿಡುಗಡೆಯ ಚಲನಚಿತ್ರ ಜೆ.ಪಿ.ದತ್ತಾ ಅವರ ಬಾರ್ಡರ್ . ೧೯೭೧ ರಲ್ಲಿನ ಭಾರತ - ಪಾಕಿಸ್ತಾನ ರ ನಡುವೆ ಆ ಕಾಲದಲ್ಲಿ ಲೊಂಗಾವಾಲದ ಯುದ್ಧದ ಸುತ್ತ ನಡೆದ ನೈಜ ಘಟನೆಯ ಬಗ್ಗೆಯ ಚಲಚನಚಿತ್ರವಾಗಿತ್ತು. ಅವರು ಆ ಚಲನಚಿತ್ರದಲ್ಲಿ ಸನ್ನಿ ದೆಯೊಲ್ ರ ಪತ್ನಿಯ ಪಾತ್ರದಲ್ಲಿ ಅಭಿನಯಿಸಿದ್ದರು. ಅವರದ್ದು ಚಿಕ್ಕ ಪಾತ್ರವಾಗಿದ್ದರೂ ಆ ಚಲನಚಿತ್ರವು ೧೯೯೭ ರಲ್ಲಿನ ಅತ್ಯಂತ ಯಶಸ್ವಿ ಚಿತ್ರವಾಗಿ ಪರಿಣಮಿಸಿತು.[೭] ಆ ವರುಷದಲ್ಲಿನ ಅವರು ವಿಮರ್ಶಾತ್ಮಕವಾಗಿ ಅತ್ಯಂತ ಯಶಸ್ವಿಯಾದ ಚಿತ್ರ ವಿರಾಸತ್ ನಲ್ಲಿಯೂ ಸಹ ಅಭಿನಯನವನ್ನು ಮಾಡಿದರು. ಆ ಚಲನಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ಅತ್ಯುತ್ತಮವಾಗಿ ಯಶಸ್ವಿಯಾಗಿತ್ತು; ತಬು ರವರು ತಮ್ಮ ಅಭಿನಯಕ್ಕಾಗಿ ಫಿಲ್ಮ್ ಫೇರ್ ವಿಮರ್ಶಿ ಮಾಡುವವರ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿಯನ್ನು ಪಡೆದುಕೊಂಡರು.

೧೯೯೯ ರಲ್ಲಿ, ಅವರು ಎರಡು ಬಹುವಾಗಿ ಯಶಸ್ವಿಯಾದ ಬಹು - ತಾರೆಯರ ಜೊತೆ ಅಭಿನಯಿಸಿದ ಚಲನಚಿತ್ರಗಳಾದ ಬಿವಿ ನಂ. ೧ ಹಾಗೂ Hum Saath-Saath Hain: We Stand United ಚಿತ್ರಗಳಲ್ಲಿ ನಟಿಸಿದರು. ಆ ಎರಡೂ ಚಲನಚಿತ್ರಗಳು ಅನುಕ್ರಮವಾಗಿ ಆ ವರ್ಷದ ಮೊದಲೆನೆಯ ಹಾಗೂ ಎರಡನೆಯ ಅತ್ಯಂತ ಯಶಸ್ವಿ ಚಿತ್ರಗಳಾಗಿದ್ದವು.[೮]

ಚಿತ್ರ:Aditi(Tabu)&Shreekant(Sachin Khedekar).jpg
ಸಚಿನ್ ಖಾಂಡೇಕರ್ ಅವರ ಜೊತೆ ಅಸ್ತಿತ್ವದಲ್ಲಿ ತಬು ಅವರು ಅದಿತಿಯಾಗಿ

೨೦೦೦ ರಂದರ, ಈ ತಾರೆಯು ಹೇರಾಫೇರಿ ಹಾಗೂ ಅಸ್ತಿತ್ವ ಚಲನಚಿತ್ರಗಳಲ್ಲಿ ನಟಿಸಿದರು. ಅವರ ಮೊದಲಯನ ಚಲನಚಿತ್ರ ಯಶಸ್ವಿಯಾಗಿ ನಡೆಯಿತು ಹಾಗೂ ಎರಡನೆಯದು ವಿಮರ್ಶಾಕ್ಮತವಾಗಿ ಜಯಗಳಿಸಲ್ಪಟ್ಟಿತು.[೯]ಅಸ್ತಿತ್ವ ಚಲನಚಿತ್ರಕ್ಕೆ ಅವರ ಅತ್ಯುತ್ತಮ ನಟನೆ/ಸಾಧನೆಗಾಗಿ ಮೂರನೆಯ ಬಾರಿ ಫಿಲ್ಮ್ ಫೇರ್ ನಲ್ಲಿ ಅವರು ವಿಮರ್ಶಕರ ಪ್ರಶಸ್ತಿಯನ್ನು ಗಳಿಕೊಂಡರು.[೧೦]

ಅವರು ೨೦೦೧ ರಲ್ಲಿ ಮಾಧುರ್ ಭಂಡಾರ್ಕರ್ ರಿಂದ ನಿರ್ದೇಶಿಸಲ್ಪಟ್ಟ ಚಾಂದಿನಿ ಬಾರ್ ನಲ್ಲಿ ನಟಿಸಿದರು. ಒಬ್ಬ ಬಾರ್ ನೃತ್ಯಗಾತಿಯ ಪಾತ್ರದಲ್ಲಿ ಅವರ ಅಭಿನಯವು ಸರ್ವಾನುಮತದ ಪ್ರಶಂಸೆಯನ್ನು ಗೋಳಿಸಿತು, ಹಾಗೂ ಅವರು ತಮ್ಮ ಚಿತ್ರದಲ್ಲಿನ ಸಾಧನೆಗಾಗಿ / ನಟನೆಗಾಗಿ ಎರಡನೆಯ ಬಾರಿ ರಾಷ್ಟ್ರೀಯ ಚಲನಚಿತ್ರಗಳಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು.[೧೧] ವಿಮರ್ಶಕರಾದ, ತರನ್ ಆದರ್ಶ್ ಬರೆದರು "ಚಾಂದನಿ ಬಾರ್ ಚಲನಚಿತ್ರದುದ್ದಕ್ಕೂ ತಬುರವರ ಚಿತ್ರ ಹಾಗೂ ಅದರ ಬಗ್ಗೆ ಬೇರೆ ಅಭಿಪ್ರಾಯಗಳೇ ಇಲ್ಲ. ಅವರ ಅಭಿನಯವು ಅತ್ಯಂತ ಹೆಚ್ಚು ಅಂಕಗಳನ್ನು ಪಡೆಯಲು ಅರ್ಹವಾಗಿವೆ ಹಾಗೂ ಸಹಜವಾಗಿಯೇ ಎಲ್ಲಾ ಪ್ರಶಸ್ತಿಗಳಿಗೆ ಅರ್ಹವಾಗಿದೆ. ಅವರ ನಟನೆಯಲ್ಲಿನ ಅಭಿನಯನಕ್ಕೆ ಯಾವುದೇ ಲೋಪದೋಷಗಳಾಗಿಲ್ಲ ಮತ್ತು ಪ್ರೇಕ್ಷಕರ ಮನಸ್ಸಿನ ಮೇಲೆ ಅವರ ಪಾತ್ರದ ಪ್ರಭಾವವೂ ಸಹ ಅವರಿಗೆ ಉತ್ತಮವಾದ - ಹೊಂದಿಕೊಳ್ಳುತ್ತವೆ ಎಂದು ಆ ಪಾತ್ರದ ಕಾರಣಕ್ಕಾಗಿ ಎಂದು ಮತ್ತೋರ್ವ ವಿಮರ್ಶಕರು ಬರೆದರು".[೧೨] ಮತ್ತೋರ್ವ ವಿಮರ್ಶಗಾರರು ಅಭಿಪ್ರಾಯಪಟ್ಟರು, "ನಮ್ಮಲ್ಲಿರುವ ಅದ್ಭುತ ಒಬ್ಬ ನಟಿಯಾದ ಅವರು ಚಲನಚಿತ್ರಗಳನ್ನು ತಮ್ಮ ಭುಜಗಳ ಮೇಲೆ ಚಿತ್ರವನ್ನು ತೆಗೆದುಕೊಂಡು ಹೋಗುತ್ತಾರೆ, ತಮ್ಮ ಜವಾಬ್ದಾರಿಯರಿತು ನಡೆಸುವ ಒಬ್ಬ ನಟಿಯಿದ್ದರ, ಅದು ತಬು ವಾಡಿಕೆಯಂತೆ. ಸರ್ವೇಸಾಮಾನ್ಯವಾಗಿ, ಅವರು ಮಿಂಚುತ್ತಾರೆ."[೧೩]

ಅವರು ಅನೇಕ ತೆಲುಗು ಚಲನಚಿತ್ರಗಳಲ್ಲಿ ಅಭಿಯಿಸಿದ್ದಾರೆ, ಅವುಗಳಲ್ಲಿ ಕೂಲಿನಂ. ೧ ಹಾಗೂ ನಿನ್ನೆ ಪೆಲ್ಲಡುಥ ಸೇರಿದಂತೆ ಅನೇಕ ಚಿತ್ರಗಳು ಹೆಚ್ಚು ಯಶಸ್ವಿಯಾಗಿವೆ, ಎರಡನೆಯದು ಅವರ ಅತ್ಯಂತ ಪ್ರಸಿದ್ಧ ಹಾಗೂ ಜನಪ್ರಿಯ ಚಲನಚಿತ್ರಗಳಲ್ಲಿ ಒಂದು.[೧೪]

೨೦೦೩ ರಲ್ಲಿ ವಿಲಿಯಮ್ ಶೇಕ್ಸಪಿಯರ್ರವರ ಮ್ಯಾಕೆಬತ್ ನ ಮಾರ್ಪಾಡಾದ ಒಂದು ಚಲನಚಿತ್ರದಲ್ಲಿ ಅಭಿನಯಿಸಿದರು. ಈ ತಾರೆಯು ಶ್ರೀಮತಿ ಲೇಡಿ ಮ್ಯಾಕಬೆತ್ ರವರ ಪಾತ್ರಧಾರಿತ ನಿಮ್ಮಿ ಯಾಗಿ ಅಭಿನಯಿಸಿದರು. ಮಕ್ಬೂಲ್ ಎಂಬ ಶಿರೋನಾಮೆಯ ಆ ಚಲನಚಿತ್ರವು ವಿಶಾಲ್ ಭಾರದ್ವಾಜ್ ರವರಿಂದ ನಿರ್ದೇಶಿಸಲ್ಪಟ್ಟಿತು ಹಾಗೂ ೨೦೦೩ ರ ಟೊರಾಂಟೊ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಥಮವಾಗಿ ಪ್ರದರ್ಶಿಸಲ್ಪಟ್ಟಿತು.[೧೫] ಮಕ್ಬೂಲ್ ಗಲ್ಲಾ ಪೆಟ್ಟಿಗೆಯಲ್ಲಿ ಗೆಲ್ಲಲು ಸೋತಿತು, ಆದರೆ ಹೆಚ್ಚಿನ ರೀತಿಯಲ್ಲಿ ಪ್ರಶಂಸಿಸಲ್ಪಟ್ಟಿತು. ತಬು ಅವರ ಅಭಿನಯವು ಬಹಳ ವಿಮರ್ಶಾತ್ಮಕವಾಗಿ ಜನಪ್ರಿಯಗೊಂಡಿತು; ವಿಮರ್ಶಕರಾದ ರೊನ್ ಅಹ್ಲುವಾಲಿಯ ಹೇಳಿದರು, "ತಬು ಒಂದು ಕಪ್ಪು ಪಾತ್ರದಲ್ಲಿ ಮಿಂಚಿದ್ದಾರೆ. ಬಾಲಿವುಡ್ ನಲ್ಲಿನ ಅತ್ಯಂತ ಬಹುಮುಖ್ಯ ಸಾಮರ್ಥ್ಯದ ನಟಿಯು ಎರಡನೆಯ ಸ್ವಭಾವದಂತಹ ನೀಚತೆಗೆ ಇಳಿಯುತ್ತಾಳೆ. ಅವರು ವಿಪತ್ತನ್ನು ಉಂಟು ಮಾಡುವ ಭ್ರಷ್ಟಳಾಗಿದ್ದಾಳೆ, ಆದರೆ ಇನ್ನೂ ಹೆಚ್ಚು ಅಧಮಳಾಗುವಂತೆ ತನ್ನ ಮುಖದ ಮೇಲೆ ಮುಗ್ಧ ನೋಟವನ್ನು ಇರಿಸುತ್ತಾಳೆ. ತಬು ತಮ್ಮ ಚುಚ್ಚು ಮಾತುಗಳನ್ನು ಆಡುತ್ತಾ ಸಂಭಾಷಿಸುವ ವಿಧಾನ ಅತ್ಯುತ್ತಮ. ಅವರು ಕ್ರಮೇಣವಾದ ಬುದ್ಧಭ್ರಮಣೆಯು ಹೃದಯ ಕಲಕವಂತಹದ್ದು ಹಾಗೂ ಅವರ ಕೊನೆಯ ಉದ್ರೇಕವು ಖಂಡಿತವಾಗಿಯೂ ಚಲನಚಿತ್ರದ ಪ್ರಮುಖ ನೋಟ".[೧೬] ಮತ್ತೊಬ್ಬ ವಿಮರ್ಶಕರು ಬರೆಯುತ್ತಾರೆ, "ತಬು ಅವರು ಒಂದು ಸಂಕೀರ್ಣವಾದ ಪಾತ್ರದಲ್ಲಿ ಅಭಿನಯನದ ಮೂಲಕ ಮಿಂಚಿದ್ದಾರೆ. ಅವರ ಪಾತ್ರಾಭಿನಯವು ಚಿತ್ರದಲ್ಲಿ ಪ್ರಶಸ್ತಿಗಳಿಗೆ ಯೋಗ್ಯವಾಗಿದೆ. ಈ ಪಾತ್ರವು ಚಾಂದನಿ ಬಾರ್ ನಂತರ ಇದು ಬಹಳ ಕಾದವರೆಗೆ ನೆನಪಿನಲ್ಲಿ ಉಳಿಯುವಂತಹ ಮತ್ತೊಂದು ಪಾತ್ರವಾಗಿದೆ".[೧೭]

ಅವರಿಗೆ ಫನಾ ದಲ್ಲಿ (೨೦೦೬) ರಲ್ಲಿ ಅಮೀರ್ ಖಾನ್ ಮತ್ತು ಕಜೋಲ್ ಅವರ ಜೊತೆ ಸಹ ಅಭಿನೇತ್ರಿಯಾಗಿ ಪೋಷಕ ಪಾತ್ರವು ಆ ಚಲನಚಿತ್ರದಲ್ಲಿ ದೊರೆಯಿತು. ಆ ಚಲನಚಿತ್ರವು ಆ ವರ್ಷದ ನಾಲ್ಕನೆಯ ಅತ್ಯಂತ ಯಶಸ್ವಿ ಚಿತ್ರವಾಗಿ ಮಂದುವರಿಯಿತು.[೧೮]

೨೦೦೭ ರಲ್ಲಿ, ಮೀರಾ ನಾಯರ್ ರವರು ನಿರ್ದೇಶಿಸಿದ, ತಬು ತಮ್ಮ ಮೊದಲ ಹಾಲಿವುಡ್ ಚಲನಚಿತ್ರ ದಿ ನೇಮ್ ಸೇಕ್ ನಲ್ಲಿ ಅಭಿನಯಿಸಿದರು. ಆ ಚಲನಚಿತ್ರವು ಪರದೇಶಗಳಲ್ಲಿ ಅತ್ಯುತ್ತಮ ನಡೆದ ಚಲನಚಿತ್ರವಾಯಿತು.[೧೯] ಅವರು ಚೀನಿ ಕಮ್ ಚಲನಚಿತ್ರದಲ್ಲಿಯೂ ಸಹ ಅಭಿನಯಿಸಿದ್ದರು, ಅದರಲ್ಲಿ ಅಮಿತಾಭ್ ಬಚ್ಚನ್ ರವರು ನಟಿಸಿದ ೬೪ - ವರ್ಷದ ವೃದ್ಧನನ್ನು ಪ್ರೀತಿಸುವ ೩೪ - ವರ್ಷದ ಮಹಿಳೆಯಾಗಿ ಅವರು ಪಾತ್ರವನ್ನು ವಹಿಸಿದ್ದಾರೆ ವಿಮರ್ಶಕರು ಆ ಚಲನಚಿತ್ರಗಳತ್ತ ಸಾಮಾನ್ಯವಾಗಿ ಸಕಾರಾತ್ಮಕವಾಗಿದ್ದಾರೆ; ತರನ್ ಆದರ್ಶ್ ಹೇಳಿದರು, "ಆ ಚಲನಚಿತ್ರದಲ್ಲಿ ಸಹ ತಾರೆಯ ಪ್ರಬಲ ಸಮ್ಮುಖದ ದುಸ್ಸಾಧ್ಯತೆ ಇದ್ದಾಗ್ಯೂ ತಬು ರವರು ತಮ್ಮ ಕಾಲ ಮೇಲೆ ನಿಂತಿದ್ದಾರೆ. ಅವರು ಉತ್ಕೃಷ್ಟವಾಗಿದ್ದಾರೆ."[೨೦] ಆ ಚಲನಚಿತ್ರವು ಸ್ವದೇಶದಲ್ಲಿ ಚೆನ್ನಾಗಿ ನಡೆಯದಿದ್ದರೂ, ಅದು ಪರದೇಶಗಳಲ್ಲಿ ವಿಶೇಷವಾಗಿ ಇಂಗ್ಲೆಂಡ್ ಹಾಗೂ ಅಮೇರಿಕಾಗಳಲ್ಲಿ ಹೆಚ್ಚು ಯಶಸ್ವಿಯಾಯಿತು.[೨೧]

ಅವರು ವೊಗ್ ಇಂಡಿಯಾ ' ದ ಜನವರಿ ೨೦೦೯ ರ ಸಂಚಿಕೆಯ' ಮುಖ ಪುಟದ ಮೇಲೆ ಕಾಣಿಸಿಕೊಳ್ಳುವುದರ ಮೂಲಕ ೨೦೦೯ ರನ್ನು ಪ್ರಾರಂಭಿಸಿದರು.

ವೈಯಕ್ತಿಕ ಜೀವನ[ಬದಲಾಯಿಸಿ]

ಅವರು ನೊಯಿಡಾ ನಲ್ಲಿನ ಚಲನಚಿತ್ರ ಹಾಗೂ ದೂರದರ್ಶನದ ಏಷಿಯಾ ಅಕಾಡೆಮಿಯ ಅಂತರಾಷ್ಟ್ರೀಯ ಕ್ಲಬ್ ನ ಅಜೀವ ಸದಸ್ಯೆಯಾಗಿದ್ದಾರೆ.

೧೯೯೮ ರಲ್ಲಿ, ಸಲ್ಮಾನ್ ಖಾನ್, ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ ಹಾಗೂ ನೀಲಂ ರಂತಹ ಸಹ ನಟರ ಜೊತೆ 'ಹಮ್ ಸಾಥ್ ಸಾಥ್ ಹೈ ' ಚಲನಚಿತ್ರದ ಚಿತ್ರೀಕರಣದ ಅವಧಿಯಲ್ಲಿ ಕಂಕಣಿ ಯಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದರೆಂದು ಆಪಾದಿಸಲ್ಪಟ್ಟರು.[೨೨] ಆ ಆಪಾದನೆಗಳು ಕೆಲವೇ ಸಮಯದ ನಂತರ ತೆಗೆದು ಹಾಕಲ್ಪಟ್ಟವು ಹಾಗೂ ತಬು ರವರು ಬಿಡುಗಡೆಯಾದರು.[೨೩]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

Year (ಚಿತ್ರೀಕರಣ) ಪಾತ್ರ ಟಿಪ್ಪಣಿಗಳು
೧೯೮೫ ಹಮ್ ನೌಜವಾನ್ ಪ್ರಿಯಾ ಒಬ್ಬ ಬಾಲ ಕಲಾವಿದೆಯಾಗಿ ಮತ್ತು ದೇವ್ ಆನಂದ್ ಅವರ ಪುತ್ರಿಯಾಗಿ
೧೯೯೧ ಕೂಲಿ ನಂ. ೧ ತೆಲುಗು ಚಿತ್ರ
೧೯೯೪ ಪೆಹಲಾ ಪೆಹಲಾ ಪ್ಯಾರ್ ಸಪ್ನಾ
ವಿಜಯ್ ಪಥ್ ಮೋಹಿನಿ ಬಿನ್ ಮೋನ ವಿಜೇತೆ, ಫಿಲ್ಮ್‌ಫೇರ್‌ ಅತ್ಯುತ್ತಮ ಆರಂಭಿಕ ನಟಿ ಪ್ರಶಸ್ತಿ,
೧೯೯೫ ಪ್ರೇಮ್‌ ಲಾಚಿ/ಸೋನಿಯಾ ಜೆಟ್ಲೆ
ಸಾಜನ್ ಕೀ ಬಾಹೋ ಮೆ ಕವಿತಾ
ಸಿಸಿನ್ದ್ರಿ ತೆಲುಗು ಚಿತ್ರ
ಹಕೀಕತ್‌‌ ಸುಧಾ
೧೯೯೬ ಸಾಜನ್ ಚಲೇ ಸಸುರಾಲ್ ದಿವ್ಯಾ ಖುರಾನಾ
ಕಾಲಾಪಾನಿ ಪಾರ್ವತಿ ಮಲಯಾಳಂ ಚಿತ್ರ
ಕಾಧಲ್ ದೇಸಮ್ ದಿವ್ಯ ತಮಿಳು ಚಲನಚಿತ್ರ
ಪ್ರಶಸ್ತಿ ವಿಜೇತೆ ಫಿಲ್ಮ್ ಫೇರ್ ಅತ್ಯುತ್ತಮ ಅಭಿನೇತ್ರಿ ಪ್ರಶಸ್ತಿ (ತಮಿಳು)
ಹಿಮ್ಮತ್ ಅಂಜು
ತು ಚೋರ್ ಮೈ ಸಿಪಾಹಿ ಕಾಜಲ್
ಜೀತ್‌ ತುಳಸಿ ವಿಶೇಷ ಪಾತ್ರಾಭಿನಯ ನಾಮನಿರ್ದೇಶಿತ, ಫಿಲ್ಮ್ ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ
ನಿನೇ ಪೆಲ್ಲದಾಥ ಮಹಾಲಕ್ಷ್ಮಿ ತೆಲುಗು ಚಿತ್ರ
ಪ್ರಶಸ್ತಿ ವಿಜೇತೆ , ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ (ತೆಲುಗು)
ಮಾಚಿಸ್ ವೀರಂದ್ರ ಪ್ರಶಸ್ತಿ ವಿಜೇತೆ , ಚಲನಚಿತ್ರಗಳಲ್ಲಿ ರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿ ನಾಮನಿರ್ದೇಶನ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ
೧೯೯೭ ವಿರಾಸತ್ ಗೆಹನ ಪ್ರಶಸ್ತಿ ವಿಜೇತ , ಅತ್ಯುತ್ತಮ ನಟನೆ/ಸಾಧನೆಗೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ
ದರ್ಮಿಯಾನ್ * ಚಿತ್ರ
ಬಾರ್ಡರ್ ಕುಲದೀಪ್ ಅವರ ಪತ್ನಿಯಾಗಿ
ಇರುವರ್ ಸೆಲ್ವಂ ಅವರ ಪ್ರೇಮಿಕೆಯಾಗಿ ತಮಿಳು ಚಲನಚಿತ್ರ
೧೯೯೮ ಚಾಚಿ ೪೨೦ ಜಾನಕಿ ಪಾಸ್ವಾನ್
ಅವಿಡ ಮಾ ಅವಿಡೆ ಅರ್ಚನಾ ತೆಲುಗು ಚಿತ್ರ
ಎರಡು ಸಾವಿರದ ಒಂದು ಬಿಲ್ಲು
ಹನುಮಾನ್ ಅಂಜ
೧೯೯೯ ಕೊಹರಂ: ದಿ ಎಕ್ಸಪ್ಲೋಷನ್ ಇನ್ಸಪೆಕ್ಟರ್ ಕಿರಣ್ ಪಾಟೇಕರ್
Hum Saath-Saath Hain: We Stand United ಸಾಧನಾ
ಹು ತು ತು ಪನ್ನಾ. ಪ್ರಶಸ್ತಿ ವಿಜೇತ , ಅತ್ಯುತ್ತಮ ನಟನೆ/ಸಾಧನೆಗೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಗೆ ನಾಮನಿರ್ದೇಶನ
ಬಿವಿ ನಂ.೧ ಲವ್ಲೀ
ತಕ್ಷಕ್ ಸುಮನ್
ತಾಯಿನ್ ಮನಿಖೋಡಿ ರಾಣಿ ತಮಿಳು ಚಲನಚಿತ್ರ
೨೦೦೦ ಶೇಗಿಥಿಯೆ ಎಸಿಪಿ ಗಾಯತ್ರಿ ತಮಿಳು ಚಲನಚಿತ್ರ
ಕವರ್ ಸ್ಟೋರಿ ಜಾಸ್ಮಿನ್ ಮಲಯಾಳಂ ಚಲನಚಿತ್ರ
ಹೇರಾ ಫೇರಿ ಅನುರಾಧಾ ಶಿವಶಂಕರ್ ಪಾಣಿಕರ್
ಕಂಡುಕೊಂಡೈನ್ ಕಂಡುಕೊಂಡೈನ್ ಸೌಮಿಯ ತಮಿಳು ಚಲನಚಿತ್ರ
ತಕರೀಬ್ ರೋಶನಿ ಚೌಬೇ
ದಿಲ್ ಪೆ ಮತ್ ಲೇ ಯಾರ್ ಕಾಮ್ಯ ಲಾಲ್
ಶಿಕಾರಿ ಸುಮನ್
ಅಸ್ತಿತ್ವಾ ಅದಿತಿ ಪ್ರಶಸ್ತಿ ವಿ ಜೇತ, ಅತ್ಯುತ್ತಮ ನಟನೆ/ಸಾಧನೆಗೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ
ನಾಮನಿರ್ದೇಶನ, ಫಿಲ್ಮ್ ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ, ಮರಾಠಿ ಚಲನಚಿತ್ರ
೨೦೦೧ ಘಾತ್ ಕವಿತ ಚೌಧುರಿ
ದಿಲ್ ನೆ ಫಿರ್ ಯಾದ್ ಕಿಯಾ ರೋಶನಿ ಬಾತ್ರ
ಚಾಂದನಿ ಬಾರ್ ಮುಮ್ತಾಜ್ ಅಲಿ ಅನ್ಸಾರಿ ಪ್ರಶಸ್ತಿ ವಿಜೇತೆ , ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಅತ್ಯುತ್ತಮ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶನ
ಆಮ್ದನಿ ಅಟ್ಟನ್ನಿ ಖರ್ಚಾ ರುಪೈಯಾ ಮೀನಾ
೨೦೦೨ ಮಾ ತುಝೆ ಸಲಾಂ ಕ್ಯಾಪ್ಟನ್ ಸೋನಿಯಾ ಖನ್ನಾ
ಫಿಲ್ಹಾಲ್... ರೆವಾ ಸಿಂಗ್
ಚೆನ್ನಕೇಶವ ರೆಡ್ಡಿ ಸೀತಾ ತೆಲುಗು ಚಿತ್ರ
ಜಿಂದಗಿ ಖೋಬಸೂರತ್ ಹೈ ಶಾಲು
ಸಾಥಿಯಾ ಸಾವಿತ್ರಿ ರಾವ್ ಅತಿಥಿ ಪಾತ್ರ
೨೦೦೩ ಅಬರ್ ಅರನ್ಯೆ ಅಮೃತಾ ಬಂಗಾಳಿ ಚಿತ್ರ
ಖಂಜರ್: ದಿ ಕ್ನೈಫ್ ಶಿಲ್ಪಾ
ಹವಾ ಸಂಜನಾ
Jaal: The Trap ನೇಹಾ ಪಂಡಿತ್
ಮಕ್ಬೂಲ್ ನಿಮ್ಮಿ
೨೦೦೪ ಮೈ ಹೂ ನಾ ಗೌರವ ನಟರಾಗಿ
Meenaxi: A Tale of Three Cities ಮೀನಾಕ್ಷಿ/ಮರಿಯ
೨೦೦೫ ಸಿಲ್‌ಸಿಲೇ ರೆಹನ
ಭಾಗಮತಿ ಭಾಗಮತಿ
ಅಂದರಿವಾಡು ಶಾಂತಿ ತೆಲುಗು ಚಿತ್ರ
೨೦೦೬ ಆಘಾತ ಗೀತ ತೆಲುಗು ಚಿತ್ರ
ಫನಾ ಮಾಲಿನಿ ತ್ಯಾಗಿ
೨೦೦೭ ಸರಹದ್ ಪಾರ್ ಪಮ್ಮಿ
ದಿ ನೇಮ್‌ಸೇಕ್‌ ಅಶಿಮ ಗಂಗೂಲಿ
ಚೀನೀ ಕಮ್ ನೀನಾ ವರ್ಮಾ ಪ್ರಶಸ್ತಿ ವಿಜೇತ , ಅತ್ಯುತ್ತಮ ನಟನೆ/ಸಾಧನೆಗೆ ಫಿಲ್ಮ್‌ಫೇರ್ ವಿಮರ್ಶಕರ ಪ್ರಶಸ್ತಿ
ಓಂ ಶಾಂತಿ ಓಂ ಸ್ವಯಂ ಆಕೆಯೇ ಪಾತ್ರ ದೀವಾನಗೀ ದೀವಾನಗೀ ಹಾಡಿನಲ್ಲಿ ಗೌರವ ನಟಿ
೨೦೦೮ ಇಡೀ ಸಂಗತಿ ಸ್ವರಾಜ್ಯ ಲಕ್ಷ್ಮೀ ತೆಲುಗು ಚಿತ್ರ
ಪಾಂಡುರಂಗಡು ಅಮೃತ ತೆಲುಗು ಚಿತ್ರ
೨೦೧೦ ತೋ ಬಾತ್ ಪಕ್ಕಿ ರಜೇಶ್ವರಿ
ಸೀಸನ್ಸ್ ಗ್ರೀಟಿಂಗ್ಸ್ ಚಿತ್ರೀಕರಣಗೊಳ್ಳುತ್ತಿದೆ
ಉರುಮಿ ಒಂದು ಚಿಕ್ಕ ವಿಶೇಷ ಪಾತ್ರದಲ್ಲಿ ಚಿತ್ರೀಕರಣದಲ್ಲಿದೆ (ಮಲೆಯಾಳಂ)
ದಿ ಲೆಜೆಂಡ್ ಆಫ್ ಕುನಾಲ್ ತಿಶ್ಯಾರಕ್ಷಿತ ಚಿತ್ರೀಕರಣಗೊಳ್ಳುತ್ತಿದೆ
೨೦೧೧ ಬಂದಾ ಯೇ ಬಿಂದಾಸ್ ಹೇ ನಿರ್ಮಾಣದ-ನಂತರ ಕೆಲಸದಲ್ಲಿದೆ

ಇವನ್ನೂ ಗಮನಿಸಿ[ಬದಲಾಯಿಸಿ]

  • ಭಾರತೀಯ ಚಲನಚಿತ್ರ ನಟಿಯರ ಪಟ್ಟಿ
Awards
ಫಿಲ್ಮ್‌ಫೇರ್‌ ಪ್ರಶಸ್ತಿ
ಪೂರ್ವಾಧಿಕಾರಿ
None
Best Debut
for Vijaypath

1995
ಉತ್ತರಾಧಿಕಾರಿ
Twinkle Khanna
for Barsaat
ಪೂರ್ವಾಧಿಕಾರಿ
Manisha Koirala
for Khamoshi: The Musical
Best Actress (Critics)
for Virasat

1998
ಉತ್ತರಾಧಿಕಾರಿ
Shefali Shah
for Satya
ಪೂರ್ವಾಧಿಕಾರಿ
Shefali Shah
for Satya
Best Actress (Critics)
for Hu Tu Tu

2000
ಉತ್ತರಾಧಿಕಾರಿ
Tabu
for Astitva
ಪೂರ್ವಾಧಿಕಾರಿ
Tabu
for Hu Tu Tu
Best Actress (Critics)
for Astitva

2001
ಉತ್ತರಾಧಿಕಾರಿ
Karisma Kapoor
for Zubeidaa
ಪೂರ್ವಾಧಿಕಾರಿ
Kareena Kapoor
for Omkara
Best Actress (Critics)
for Cheeni Kum

2008
ಉತ್ತರಾಧಿಕಾರಿ
Shahana Goswami
for Rock On!!
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
ಪೂರ್ವಾಧಿಕಾರಿ
Seema Biswas
for Bandit Queen
Best Actress
for Maachis

1997
ಉತ್ತರಾಧಿಕಾರಿ
Indrani Haldar
&
Rituparna Sengupta
for Dahan
ಪೂರ್ವಾಧಿಕಾರಿ
Raveena Tandon
for Daman: A Victim of Marital Violence
Best Actress
for Chandni Bar
with
Sobhana
for Mitr - My Friend

2002
ಉತ್ತರಾಧಿಕಾರಿ
Konkona Sen Sharma
for Mr. and Mrs. Iyer

ಉಲ್ಲೇಖಗಳು[ಬದಲಾಯಿಸಿ]

  1. Banerjee, Arnab (5 June 2007). "Tabu: making understatement an art". hindustantimes.com. Archived from the original on 17 ಅಕ್ಟೋಬರ್ 2007. Retrieved 10 October 2007.
  2. Nihalani, Govind; Chatterjee, Saibal (2003). Encyclopaedia of Hindi cinema. Encyclopaedia Britannica (India), Popular Prakashan. p. 634. ISBN 8179910660.{{cite book}}: CS1 maint: multiple names: authors list (link)
  3. Martyris, Nina (26 April 2003). "When dosa was a luxury". Times of India. Retrieved 10 October 2007.
  4. Bhatt, Rajeev (9 March 2007). "Tabu: As she likes it!". Hinduonnet.com. Archived from the original on 17 ಅಕ್ಟೋಬರ್ 2007. Retrieved 10 October 2007.
  5. Dhawan, M.L. (15 April 2001). "She wows with her acting prowess". rediff.com. Retrieved 13 October 2007.
  6. "Box Office Results 1996". BoxOfficeIndia.Com. Archived from the original on 24 September 2007. Retrieved 10 October 2007.
  7. "Box Office Results 1997". BoxOfficeIndia.Com. Archived from the original on 24 September 2007. Retrieved 10 October 2007.
  8. "Box Office Results 1999". BoxOfficeIndia.Com. Archived from the original on 7 October 2007. Retrieved 10 October 2007.
  9. "Box Office Results 2000". BoxOfficeIndia.Com. Archived from the original on 24 September 2007. Retrieved 10 October 2007.
  10. "Filmfare Awards 2000". Filmfare. Archived from the original on 25 ಡಿಸೆಂಬರ್ 2018. Retrieved 10 October 2007.
  11. Rediff Entertainment Bureau (26 July 2002). "Tabu, Shobhana share National Award for Best Actress". rediff.com. Retrieved 10 October 2007.
  12. Adarsh, Taran (25 September 2001). "Chandni Bar review from indiafm.com". Indiafm.com. Retrieved 10 October 2007.
  13. Kumar, Salil (27 September 2001). "Chandni Bar review from rediff.com". rediff.com. Retrieved 10 October 2007.
  14. "Yuva Samrat's First Silver Jubilee Hit Ninne Pelladatha". cinegoer.com. 31 March 2001. Archived from the original on 17 ಸೆಪ್ಟೆಂಬರ್ 2007. Retrieved 10 October 2007.
  15. "Maqbool premieres at Toronto International Film Festival". Videovision.Com. Archived from the original on 23 ಸೆಪ್ಟೆಂಬರ್ 2006. Retrieved 10 October 2007.
  16. Ahluwalia, Ron (30 January 2004). "Tabu: She is menacing and seductive". planetbollywood.com. Archived from the original on 17 ಅಕ್ಟೋಬರ್ 2007. Retrieved 10 October 2007.
  17. Adrash, Taran (30 January 2004). "Review of Maqbool from indiafm.com". Indiafm.com. Retrieved 10 October 2007.
  18. "Box Office Results 2006". BoxOfficeIndia.Com. Archived from the original on 13 August 2007. Retrieved 10 October 2007.
  19. Tuteja, Joginder (23 March 2007). "The Namesake earns third 1 crore plus week". glamsham.com. Archived from the original on 17 ಅಕ್ಟೋಬರ್ 2007. Retrieved 10 October 2007.
  20. Adarsh, Taran (25 May 2007). "Cheeni Kum review from indiafm.com". Indiafm.com. Retrieved 10 October 2007.
  21. Adarsh, Taran (30 May 2007). "Overseas box office report: 30 May 2007". Indiafm.com. Retrieved 10 October 2007.
  22. Special Correspondent (25 August 2007). "Blackbuck case: Tabu, Salman, Saif charged with poaching". hindi.com. Archived from the original on 12 ಅಕ್ಟೋಬರ್ 2007. Retrieved 10 October 2007.
  23. Pillai, Pai (1 September 2007). "Salman Khan expresses faith in judiciary". news.sawf.org. Retrieved 10 October 2007.

ಬಾಹ್ಯ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ತಬು_(ನಟಿ)&oldid=1063996" ಇಂದ ಪಡೆಯಲ್ಪಟ್ಟಿದೆ