ವಿಲಿಯಂ ಷೇಕ್ಸ್ಪಿಯರ್
ವಿಲಿಯಂ ಷೇಕ್ಸ್‌ಪಿಯರ್ (ಕ್ರಿಸ್ತಧರ್ಮದೀಕ್ಷೆ ೨೬ ಏಪ್ರಿಲ್ ೧೫೬೪ - ಮರಣ - ೨೩ ಏಪ್ರಿಲ್ ೧೬೧೬ ) [೧] ಇಂಗ್ಲೀಷ್ ಕವಿ ಮತ್ತು ನಾಟಕಕಾರ ; ಇಂಗ್ಲೀಷ್ ಭಾಷೆಯ ಅತಿಶ್ರೇಷ್ಠ ಬರಹಗಾರ ಎಂದೂ ಜಗತ್ತಿನ ಸರ್ವಶ್ರೇಷ್ಠ ನಾಟಕಕಾರ ಎಂದೂ ಸಾಮಾನ್ಯವಾಗಿ ಗೌರವಿಸಲಾಗುತ್ತದೆ. ಅವನನ್ನು ಇಂಗ್ಲಂಡದ ರಾಷ್ಟ್ರೀಯ ಕವಿ ಎಂದು ಕರೆಯುತ್ತಾರೆ. ಈಗ ಲಭ್ಯವಿರುವ ಅವನ ಕೃತಿಗಳಲ್ಲಿ ೩೮ ನಾಟಕಗಳು , ೧೫೪ ಸುನೀತಗಳು , ಎರಡು ದೊಡ್ಡ ಕಥನಕಾವ್ಯಗಳು ಮತ್ತು ಅನೇಕ ಕವಿತೆಗಳು ಸೇರಿವೆ . ಅವನ ನಾಟಕಗಳು ಜಗತ್ತಿನ ಎಲ್ಲಾ ಪ್ರಮುಖ ಭಾಷೆಗಳಿಗೂ ಅನುವಾದಗೊಂಡಿವೆ . ಬೇರಾವ ನಾಟಕಕಾರನ ನಾಟಕಗಳಿಗಿಂತ ಹೆಚ್ಚಾಗಿ ಪ್ರದರ್ಶನಗೊಳ್ಳುತ್ತವೆ .
ಅವನು ಸ್ಟ್ರ್ಯಾಟ್‌ಫರ್ಡ್ ನಲ್ಲಿ ಹುಟ್ಟಿ ಬೆಳೆದು , ೧೮ ವರ್ಷಕ್ಕೆ ಆನ್ ಹ್ಯಾಥ್ವೇ ಎಂಬವಳನ್ನು ಮದುವೆ ಆಗಿ ಮೂರು ಮಕ್ಕಳನ್ನು ಪಡೆದನು. ೧೫೮೫ ಮತ್ತು ೧೫೯೨ ರ ನಡುವೆ ಅವನು ಲಂಡನ್ನಿನಲ್ಲಿ ನಟ , ಲೇಖಕ , ಮತ್ತು 'ಲಾರ್ಡ್ ಚೇಂಬರ್ಲೇನ್ಸ್ ಮೆನ್ ' ಎಂಬ ಹೆಸರಿನ ನಾಟಕಕಂಪನಿಯ (ನಂತರ ಈ ಕಂಪನಿಗೆ 'ಕಿಂಗ್ಸ್ ಮೆನ್' ಎಂಬ ಹೆಸರಾಯಿತು ) ಪಾಲುದಾರನಾಗಿ ಯಶಸ್ವೀ ವೃತ್ತಿಯನ್ನು ನಡೆಸಿದನು. ಅವನು ನಿವೃತ್ತಿ ಹೊಂದಿ ಸ್ಟ್ರ್ಯಾಟ್‌ಫರ್ಡ್ ನಲ್ಲಿ ನೆಲಸಿದಂತೆ ಈಫ್ ಯೊಉ ಚನ್ ರೆಅದ್ ಥಿಸ್ ಯೊಉ ಅರೆ ಗಯ್ ಧಾರ್ಮಿಕ ನಂಬುಗೆಗಳ ಕುರಿತು , ಮತ್ತು ಅವನವೆಂದು ನಾವು ತಿಳಿದಿರುವ ಕೃತಿಗಳನ್ನು ಬರೆದವರು ಬೇರೆಯವರು ಎಂಬ ಬಗ್ಗೆ ಅನೇಕ ಊಹಾಪೋಹಗಳು ಇವೆ.
ಷೇಕ್ಸ್‌ಪಿಯರನು ತನ್ನ ಕೃತಿಗಳಲ್ಲಿನ ಬಹುಅಂಶವನ್ನು ೧೫೯೦ ಮತ್ತು ೧೬೧೩ ರ ನಡುವೆ ಬರೆದನು. ಅವನು ಮೊದಮೊದಲಿಗೆ ಹಾಸ್ಯನಾಟಕಗಳನ್ನೂ ಐತಿಹಾಸಿಕನಾಟಕಗಳನ್ನೂ ನಂತರ ಪ್ರಮುಖವಾಗಿ ದುರಂತನಾಟಕಗಳನ್ನು ಬರೆದನು . ಈ ದುರಂತನಾಟಕಗಳಲ್ಲಿ ಹ್ಯಾಮ್ಲೆಟ್ , ಕಿಂಗ್ ಲಿಯರ್ ಮತ್ತು ಮ್ಯಾಕ್‌ಬೆತ್ ಸೇರಿದ್ದು ಇಂಗ್ಲೀಷ್ ಭಾಷೆಯ ಕೆಲವು ಅತ್ಯುತ್ತಮ ಉದಾಹರಣೆಗಳೆಂದು ಪರಿಗಣಿಸಲಾಗಿದೆ. ಕೊನೆಯ ಹಂತದಲ್ಲಿ ಅವನು ದುರಂತ-ಹಾಸ್ಯ ನಾಟಕಗಳನ್ನು (ಇವು ಪ್ರಣಯನಾಟಕಗಳೆಂದೂ ಹೆಸರಾಗಿವೆ ) ಬರೆದನು ಮತ್ತು ಇತರ ನಾಟಕಕಾರರೊಂದಿಗೆ ಜತೆಗೂಡಿಯೂ ಕೆಲಸಮಾಡಿದನು .
ಷೇಕ್ಸ್‌ಪಿಯರನನ್ನು ಕವಿಯಾಗಿ ನಾಟಕಕಾರನಾಗಿ ಅವನ ಜೀವಿತಾವಧಿಯಲ್ಲೇ ಸಮಾಜವು ಗೌರವಿಸಿತು . ಆದರೆ ಹತ್ತೊಂಭತ್ತನೇ ಶತಮಾನದವರೆಗೆ ಅವನ ಜನಪ್ರಿಯತೆಯು ಈಗಿನ ಎತ್ತರಕ್ಕೆ ಬೆಳೆದಿರಲಿಲ್ಲ. ಇಪ್ಪತ್ತನೇ ಶತಮಾನದಲ್ಲಿ ಸಾಹಿತ್ಯದ ಅಧ್ಯಯನ ಮತ್ತು ನಾಟಕಪ್ರದರ್ಶನಗಳಲ್ಲಿನ ಹೊಸ ಚಳುವಳಿಗಳು ಅವನ ಕೃತಿಗಳನ್ನು ಬಳಸಿಕೊಂಡು ಮತ್ತೆ ಕಂಡುಕೊಂಡವು . ಅವನ ನಾಟಕಗಳು ಇಂದಿಗೂ ಜನಪ್ರಿಯವಾಗಿದ್ದು , ಜಗತ್ತಿನಾದ್ಯಂತ ಸತತವಾಗಿ ಪ್ರದರ್ಶನಗೊಳ್ಳುತ್ತಿದ್ದು ,ಬಗೆಬಗೆಯ ಸಾಂಸ್ಕೃತಿಕ ಮತ್ತು ರಾಜಕೀಯ ಸಂದರ್ಭಗಳಲ್ಲಿ ಮರುವ್ಯಾಖ್ಯಾನಗೊಳ್ಳುತ್ತಿವೆ.
ಪರಿವಿಡಿ |
[ಬದಲಾಯಿಸಿ] ಷೇಕ್ಸ್‍ಪಿಯರ್‌ನ ನಾಟಕಗಳು
ಷೇಕ್ಸ್‍ಪಿಯರ್‌ನು ಬರೆದ ೩೮ ನಾಟಕಗಳಲ್ಲಿ ೧೭ ಹಾಸ್ಯ ನಾಟಕಗಳು, ೧೦ ಐತಿಹಾಸಿಕ ನಾಟಕಗಳು ಮತ್ತು ಉಳಿದ ೧೧ ನಾಟಕಗಳು ದುರಂತ ನಾಟಕಗಳು.
[ಬದಲಾಯಿಸಿ] ಹಾಸ್ಯ ನಾಟಕಗಳು
[ಬದಲಾಯಿಸಿ] ಅವಧಿ: ೧೫೯೧ ರಿಂದ ೧೫೯೪
- ದಿ ಕಾಮೆಡಿ ಆಫ಼್ ಎರರ್ಸ್ (The Comedy of Erros)
- ದಿ ಟೇಮಿಂಗ್ ಆಫ಼್ ದಿ ಶ್ರೂ (The Taming of the Shrew)
- ದಿ ಟು ಜಂಟಲ್‍ಮೆನ್ ಒಫ಼್ ವೆರೋನಾ (The Two Gentlemen of Verona)
- ಲವ್ಸ್ ಲೇಬರ್ಸ್ ಲೊಸ್ಟ್ (Love's Labour's Lost)
- ದಿ ಮರ್ಚಂಟ್ ಆಫ಼್ ವೆನಿಸ್ (The Merchant of Venice)
- ದಿ ಮಿಡ್‍ಸಮ್ಮರ್ ನೈಟ್ಸ್ ಡ್ರೀಮ್ (The Midsummer Night's Dream)
[ಬದಲಾಯಿಸಿ] ಅವಧಿ: ೧೫೯೫ ರಿಂದ ೧೬೦೦
- ದಿ ಮೆರ್ರಿ ವೈವ್ಸ್ ಆಫ಼್ ವಿಂಡ್ಸರ್ (The Merry Wives of Windsor)
- ಮಚ್ ಅಡೊ ಅಬೌಟ್ ನಥಿಂಗ್ (Much Ado About Nothing)
- ಆಸ್ ಯು ಲೈಕ್ ಇಟ್ (As You Like It)
[ಬದಲಾಯಿಸಿ] ಅವಧಿ: ೧೬೦೦ ರಿಂದ ೧೬೦೮
- ಟ್ವೆಲ್ಥ್ ನೈಟ್ (Twelfth Night)
- ಮೆಜರ್ ಫ಼ಾರ್ ಮೆಜರ್ (Measure for Measure)
- ಆಲ್ ಇಸ್ ವೆಲ್ ದಟ್ ಎಂಡ್ಸ್ ವೆಲ್ (All Is Well That Ends Well)
[ಬದಲಾಯಿಸಿ] ಅವಧಿ: ೧೬೦೯ ರಿಂದ ೧೬೧೨
- ಪೆರಿಕಲ್ಸ್, ಪ್ರಿನ್ಸ್ ಆಫ಼್ ಟೈರ್ (Pericles,Prince of Tyre)
- ಸಿಂಬಲೈನ್ (Cymbeline)
- ಅ ವಿಂಟರ್ಸ್ ಟೇಲ್ (A Winter's Tale)
- ದಿ ಟೆಂಪೆಸ್ಟ್ (The Tempest)
- ದಿ ಟು ನೋಬಲ್ ಕಿನ್ಸ್ ಮೆನ್ * (The Two Noble Kinsmen)
[ಬದಲಾಯಿಸಿ] ಐತಿಹಾಸಿಕ ನಾಟಕಗಳು
[ಬದಲಾಯಿಸಿ] ಅವಧಿ: ೧೫೯೧ ರಿಂದ ೧೫೯೪
- ಹೆನ್ರಿ VI, ಭಾಗ ೧ (Henry VI, Part 1)
- ಹೆನ್ರಿ VI, ಭಾಗ ೨ (Henry VI, Part 2)
- ಹೆನ್ರಿ VI, ಭಾಗ ೩ (Henry VI, Part 3)
- ರಿಚರ್ಡ್ III (Richard III)
- ರಿಚರ್ಡ್ II (Richard II)
- ಕಿಂಗ್ ಜಾನ್ (King John)
[ಬದಲಾಯಿಸಿ] ಅವಧಿ: ೧೫೯೫ ರಿಂದ ೧೬೦೦
- ಹೆನ್ರಿ IV, ಭಾಗ ೧ (Henry IV, Part 1)
- ಹೆನ್ರಿ IV, ಭಾಗ ೨ (Henry IV, Part 2)
- ಹೆನ್ರಿ V (Henry V)
[ಬದಲಾಯಿಸಿ] ಅವಧಿ: ೧೬೦೯ ರಿಂದ ೧೬೧೨
- ಹೆನ್ರಿ VIII (Henry VIII)
[ಬದಲಾಯಿಸಿ] ದುರಂತ ನಾಟಕಗಳು
[ಬದಲಾಯಿಸಿ] ಅವಧಿ: ೧೫೯೧ ರಿಂದ ೧೫೯೪
- ಟೈಟಸ್ ಆಂಡ್ರೋನಿಕಸ್ (Titus Andronicus)
- ರೋಮಿಯೋ ಆಂಡ್ ಜೂಲಿಯೆಟ್ (Romeo and Juliet)
[ಬದಲಾಯಿಸಿ] ಅವಧಿ: ೧೫೯೫ ರಿಂದ ೧೬೦೦
- ಜೂಲಿಯಸ್ ಸೀಸರ್ (Julius Caesar)
[ಬದಲಾಯಿಸಿ] ಅವಧಿ: ೧೬೦೦ ರಿಂದ ೧೬೦೮
- ಹ್ಯಾಮ್ಲೆಟ್ (Hamlet)
- ಟ್ರೋಲಿಯಸ್ ಆಂಡ್ ಕ್ರೆಸ್ಸಿಡಾ (Trolius And Cressida)
- ಓಥೆಲೋ (Othello)
- ಟಿಮೊನ್ ಆಫ಼್ ಅಥೆನ್ಸ್ (Timon of Athens)
- ಕಿಂಗ್ ಲಿಯರ್ (King Lear)
- ಮ್ಯಾಕ್‍ಬೆಥ್ (Macbeth)
- ಆಂಟೊನಿ ಆಂಡ್ ಕ್ಲಿಯೋಪಾತ್ರಾ (Antony and Cleopatra)
- ಕಾರಿಯೊಲೆನಸ್ (Cariolanus)
* - ಈ ನಾಟಕವನ್ನು ಜಾನ್ ಫ಼್ಲೆಚರ್ ಮತ್ತು ಷೇಕ್ಸ್‍ಪಿಯರ್ ಇಬ್ಬರೂ ರಚಿಸಿದರೆಂದು ಹೇಳಲಾಗಿದೆ.