ಸ್ಮೃತಿ ಮಂದಾನ
ವಯಕ್ತಿಕ ಮಾಹಿತಿ | ||||||||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಪೂರ್ಣ ಹೆಸರು | ಸ್ಮೃತಿ ಶ್ರೀನಿವಾಸ್ ಮಂದಾನ | |||||||||||||||||||||||||||||||||||||||||||||||||||||||||||||||||
ಹುಟ್ಟು | ಮುಂಬೈ, ಮಹಾರಾಷ್ಟ್ರ, ಭಾರತ | ೧೮ ಜುಲೈ ೧೯೯೬|||||||||||||||||||||||||||||||||||||||||||||||||||||||||||||||||
ಬ್ಯಾಟಿಂಗ್ | ಎಡಗೈ | |||||||||||||||||||||||||||||||||||||||||||||||||||||||||||||||||
ಬೌಲಿಂಗ್ | ಬಲಗೈ | |||||||||||||||||||||||||||||||||||||||||||||||||||||||||||||||||
ಪಾತ್ರ | ಬ್ಯಾಟ್ಸ್ ವುಮನ್ | |||||||||||||||||||||||||||||||||||||||||||||||||||||||||||||||||
ಅಂತಾರಾಷ್ಟ್ರೀಯ ಮಾಹಿತಿ | ||||||||||||||||||||||||||||||||||||||||||||||||||||||||||||||||||
ರಾಷ್ಟೀಯ ತಂಡ | ||||||||||||||||||||||||||||||||||||||||||||||||||||||||||||||||||
ಟೆಸ್ಟ್ ಚೊಚ್ಚಲ (ಕ್ಯಾಪ್ ೭೫) | ೧೩ ಆಗಸ್ಟ್ ೨೦೧೪ v ಇಂಗ್ಲೆಂಡ್ | |||||||||||||||||||||||||||||||||||||||||||||||||||||||||||||||||
ಕೊನೆಯ ಟೆಸ್ಟ್ | ೧೬ ನವೆಂಬರ್ ೨೦೧೪ v ದಕ್ಷಿಣ ಆಫ್ರಿಕಾ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಚೊಚ್ಚಲ (ಕ್ಯಾಪ್ ೧೦೬) | ೧೦ ಎಪ್ರೀಲ್ ೨೦೧೩ v ಬಾಂಗ್ಲಾದೇಶ | |||||||||||||||||||||||||||||||||||||||||||||||||||||||||||||||||
ಕೊನೆಯ ಅಂ. ಏಕದಿನ | ೬ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್ | |||||||||||||||||||||||||||||||||||||||||||||||||||||||||||||||||
ಅಂ. ಏಕದಿನ ಅಂಗಿ ನಂ. | ೧೮ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಚೊಚ್ಚಲ (ಕ್ಯಾಪ್ ೪೦) | ೫ ಎಪ್ರೀಲ್ ೨೦೧೩ v ಬಾಂಗ್ಲಾದೇಶ | |||||||||||||||||||||||||||||||||||||||||||||||||||||||||||||||||
ಕೊನೆಯ ಟಿ೨೦ಐ | ೨೦ ನವೆಂಬರ್ ೨೦೧೯ v ವೆಸ್ಟ್ ಇಂಡೀಸ್ | |||||||||||||||||||||||||||||||||||||||||||||||||||||||||||||||||
ಟಿ೨೦ಐ ಅಂಗಿ ನಂ. | ೧೮ | |||||||||||||||||||||||||||||||||||||||||||||||||||||||||||||||||
ದೇಶೀಯ ತಂಡದ ಮಾಹಿತಿ | ||||||||||||||||||||||||||||||||||||||||||||||||||||||||||||||||||
ವರ್ಷಗಳು | ತಂಡ | |||||||||||||||||||||||||||||||||||||||||||||||||||||||||||||||||
೨೦೧೬-೧೭ | ಬ್ರಿಸ್ಬೇನ್ ಹೀಟ್ | |||||||||||||||||||||||||||||||||||||||||||||||||||||||||||||||||
೨೦೧೮-ಇಂದಿನವರೆಗೆ | ಹೊಬಾರ್ಟ್ ಚಂಡಮಾರುತಗಳು | |||||||||||||||||||||||||||||||||||||||||||||||||||||||||||||||||
೨೦೧೮-ಇಂದಿನವರೆಗೆ | ಪಾಶ್ಚಾತ್ಯ ಬಿರುಗಾಳಿ | |||||||||||||||||||||||||||||||||||||||||||||||||||||||||||||||||
೨೦೧೮-ಇಂದಿನವರೆಗೆ | ಟ್ರೇಲ್ಬ್ಲೇಜರ್ಗಳು | |||||||||||||||||||||||||||||||||||||||||||||||||||||||||||||||||
ವೃತ್ತಿ ಅಂಕಿಅಂಶಗಳು | ||||||||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||||||||
ಮೂಲ: Cricinfo, 20 November 2019 |
ಆರಂಭಿಕ ಜೀವನ
[ಬದಲಾಯಿಸಿ]ಸ್ಮೃತಿಯವರು ಜುಲೈ ೧೮, ೧೯೯೬ರಂದು ಮುಂಬೈಯಲ್ಲಿ ಸ್ಮಿತಾ ಹಾಗು ಶ್ರೀನಿವಾಸ ದಂಪತಿಗೆ ಜನಿಸಿದರು. ಇವರು ಎರಡು ವರ್ಷದವರಿದ್ದಾಗ ಇವರ ಕುಟುಂಬ ಸಾಂಗಲಿ ಜಿಲ್ಲೆಯಲ್ಲಿ ವಾಸಿಸಲಾರಂಭಿಸಿತು. ಇವರು ತಮ್ಮ ಸಂಪೂರ್ಣ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದರು. ಇವರ ತಂದೆ ಶ್ರೀನಿವಾಸ ಹಾಗು ಸಹೋದರ ಶ್ರವಣ್ ಇಬ್ಬರೂ ಸಾಂಗಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಆಟಗಾರರು. ಇವರ ಸಹೋದರ, ಶ್ರವಣ್ ಮಹಾರಾಷ್ಟ್ರದ ೧೬ರ ವಯೋಮಿತಿ ತಂಡದಲ್ಲಿ ಆಟವಾಡಿದ್ದು ಇವರಿಗೆ ಪ್ರೇರಣೆ ಆಯಿತು. ಇವರು ತಮ್ಮ ಒಂಬತ್ತನೇ ವಯಸ್ಸಿನಲ್ಲೇ ಮಹಾರಾಷ್ಟ್ರದ ೧೫ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ಹಾಗೆಯೇ ತಮ್ಮ ೧೧ನೇ ವಯಸ್ಸಿನಲ್ಲೇ ಮಹಾರಾಷ್ಟ್ರದ ೧೯ರ ವಯೋಮಿತಿ ತಂಡಕ್ಕೆ ಆಯ್ಕೆಯಾದರು. ಸ್ಮೃತಿಯವರಿಗೆ ತಮ್ಮ ಕುಟುಂಬದಿಂದ ಸಾಕಷ್ಟು ಬೆಂಬಲ ಸಿಕ್ಕಿತು.[೧]
ವೃತ್ತಿ ಜೀವನ
[ಬದಲಾಯಿಸಿ]ಪ್ರಥಮ ದರ್ಜೆ ಕ್ರಿಕೆಟ್
[ಬದಲಾಯಿಸಿ]ಅಕ್ಟೋಬರ್ ೨೦೧೩ರಲ್ಲಿ ಮಂದಾನಾ, ಮಹಾರಾಷ್ಟ್ರ ತಂಡದ ಪರವಾಗಿ ಗುಜರಾತ್ ವಿರುದ್ದ ನಡೆದ ಏಕದಿನ ಪಂದ್ಯವೊಂದರಲ್ಲಿ ದ್ವಿಶತಕವನ್ನು ಬಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಧಾಖಲೆಯನ್ನು ಬರೆದರು. ೨೦೧೬ರಲ್ಲಿ ನಡೆದ ಉಮೆನ್ಸ್ ಚಾಲೆಂಜರ್ ಟ್ರೋಫೀಯಲ್ಲಿ ಮಂದಾನ ಇಂಡಿಯಾ ರೆಡ್ ತಂಡದ ಪರವಾಗಿ ಇಂಡಿಯಾ ಬ್ಲೂ ವಿರುದ್ಧ ನಡೆದ ಫೈನಲ್‌ನಲ್ಲಿ ಅಜೇಯ ೬೨ ರನ ಗಳಿಸಿ ಗೆಲುವಿನ ರುವಾರಿಯಾದರು ಹಾಗೆ ಆ ಸರಣಿಯಲ್ಲಿ ಮೂರು ಅರ್ಧ ಶತಕಗಳನ್ನು ಬಾರಿಸಿದರು.[೨][೩]
ಅಂತರರಾಷ್ಟ್ರೀಯ ಕ್ರಿಕೆಟ್
[ಬದಲಾಯಿಸಿ]ಏಪ್ರಿಲ‍್ ೦೫, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ಮಂದಾನಾ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಏಪ್ರಿಲ್ ೧೦, ೨೦೧೩ರಲ್ಲಿ ಅಹ್ಮದಾಬಾದ್ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ಆಗಸ್ಟ್ ೧೩, ೨೦೧೪ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೪][೫][೬]
ಪಂದ್ಯಗಳು
[ಬದಲಾಯಿಸಿ]- ಏಕದಿನ ಕ್ರಿಕೆಟ್ : ೪೪ ಪಂದ್ಯಗಳು[೭]
- ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು
- ಟಿ-೨೦ ಕ್ರಿಕೆಟ್ : ೫೦ ಪಂದ್ಯಗಳು
ಅರ್ಧ ಶತಕಗಳು
[ಬದಲಾಯಿಸಿ]- ಟಿ-೨೦ ಪಂದ್ಯಗಳಲ್ಲಿ : ೦೫
- ಟೆಸ್ಟ್ ಪಂದ್ಯಗಳಲ್ಲಿ : ೦೧
- ಏಕದಿನ ಪಂದ್ಯಗಳಲ್ಲಿ : ೧೩
ಶತಕಗಳು
[ಬದಲಾಯಿಸಿ]- ಏಕದಿನ ಪಂದ್ಯಗಳಲ್ಲಿ : ೦೩
ಗ್ಯಾಲರಿ
[ಬದಲಾಯಿಸಿ]-
ಅರ್ಜುನ ಪ್ರಶಸ್ತಿ ನೀಡಲಾಯಿತು
ಉಲ್ಲೇಖಗಳು
[ಬದಲಾಯಿಸಿ]- ↑ http://www.espncricinfo.com/women/content/story/984993.html
- ↑ "ಆರ್ಕೈವ್ ನಕಲು". Archived from the original on 2018-12-24. Retrieved 2018-11-16.
- ↑ https://www.cricbuzz.com/profiles/10012/smriti-mandhana
- ↑ http://www.espncricinfo.com/series/12157/scorecard/625900/india-women-vs-bangladesh-women-3rd-t20i-bangladesh-women-tour-of-india-2012-13
- ↑ http://www.espncricinfo.com/series/11662/scorecard/722387/england-women-vs-india-women-only-test-india-women-tour-of-england-2014
- ↑ http://www.espncricinfo.com/series/12157/scorecard/625902/india-women-vs-bangladesh-women-2nd-odi-bangladesh-women-tour-of-india-2012-13
- ↑ http://www.espncricinfo.com/india/content/player/597806.html