ಸ್ಮೃತಿ ಮಂದಾನ

ವಿಕಿಪೀಡಿಯ ಇಂದ
Jump to navigation Jump to search


ಸ್ಮೃತಿ ಶ್ರೀನಿವಾಸ ಮಂದಾನ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಎಡಗೈ ಬ್ಯಾಟ್ಸಮಾನ್ ಹಾಗು ಬಲಗೈ ಆಫ್ ಬ್ರೇಕ್ ಬೌಲರ್.

ಸ್ಮೃತಿ ಮಂದಾನ

ಆರಂಭಿಕ ಜೀವನ[ಬದಲಾಯಿಸಿ]

ಸ್ಮೃತಿ ರವರು ಜುಲೈ ೧೮, ೧೯೯೬ರಂದು ಮುಂಬೈಯಲ್ಲಿ ಸ್ಮಿತಾ ಹಾಗು ಶ್ರೀನಿವಾಸ ದಂಪತಿಗೆ ಜನಿಸಿದರು. ಇವರು ೦೨ ವರ್ಷದವರಿದ್ದಾಗ ಇವರ ಕುಟುಂಬ ಸಾಂಗಲಿ ಜಿಲ್ಲೆಯಲ್ಲಿ ವಾಸಿಸಲಾರಂಭಿಸಿದರು. ಇವರ ಪ್ರಾರ್ಥಮಿಕ ಶಿಕ್ಷಣ ಸಂಪೂರ್ಣವಾಗಿ ಅಲ್ಲಿಯೇ ಮುಗಿಸಿದರು. ಇವರ ತಂಡೆ ಶ್ರೀನಿವಾಸ ಹಾಗು ಸಹೋದರ ಶ್ರವಣ್ ಇಬ್ಬರೂ ಸಾಂಗಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಅಟಗಾರರು. ಇವರ ಸಹೋದರ, ಶ್ರವಣ್ ಮಹಾರಾಷ್ಟ್ರದ ೧೬ರ ವಯ್ಯೋಮಿತಿ ತಂಡದಲ್ಲಿ ಆಟವಾಡಿದ್ದು ಇವರಿಗೆ ಪ್ರೇರಣೆ ಆಯಿತು. ಇವರು ತಮ್ಮ ೦೯ನೇ ವಯಸ್ಸಿನಲ್ಲೆ ಮಹಾರಾಷ್ಟ್ರದ ೧೫ರ ವಯ್ಯೋಮಿತಿ ತಂಡಕ್ಕೆ ಆಯ್ಕೆಯಾದರು. ಹಾಗೆ ತಮ್ಮ ೧೧ನೇ ವಯಸ್ಸಿನಲ್ಲೆ ಮಹಾರಾಷ್ಟ್ರದ ೧೯ರ ವಯ್ಯೋಮಿತಿ ತಂಡಕ್ಕೆ ಆಯ್ಕೆಯಾದರು. ಸ್ಮೃತಿರವರಿಗೆ ಇವರ ಕುಟುಂಬದಿಂದ ಸಾಕಷ್ಟು ಬೆಂಬಲ ಸಿಕ್ಕಿತು.[೧]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ಅಕ್ಟೋಬರ್ ೨೦೧೩ರಲ್ಲಿ ಮಂದಾನಾ, ಮಹಾರಾಷ್ಟ್ರ ತಂಡದ ಪರವಾಗಿ ಗುಜರಾತ್ ವಿರುದ್ದ ನೆಡೆದ ಏಕದಿನ ಪಂದ್ಯವೊಂದರಲ್ಲಿ ದ್ವಿಶತಕವನ್ನು ಬಾರಿಸಿದ ಮೊದಲ ಭಾರತೀಯ ಮಹಿಳೆ ಎಂಬ ಧಾಖಲೆಯನ್ನು ಬರೆದರು. ೨೦೧೬ರಲ್ಲಿ ನಡೆದ ಉಮೆನ್ಸ್ ಚಾಲೆಂಜರ್ ಟ್ರೋಫೀಯಲ್ಲಿ ಮಂದಾನ ಇಂಡಿಯಾ ರೆಡ್ ತಂಡದ ಪರವಾಗಿ ಇಂಡಿಯಾ ಬ್ಲೂ ವಿರುದ್ಧ ನಡೆದ ಫೈನಲ್‌ನಲ್ಲಿ ಅಜೇಯ ೬೨ ರನ ಗಳಿಸಿ ಗೆಲುವಿನ ರುವಾರಿಯಾದರು ಹಾಗೆ ಆ ಸರಣಿಯಲ್ಲಿ ಮೂರು ಅರ್ಧ ಶತಕಗಳನ್ನು ಬಾರಿಸಿದರು.[೨][೩]


ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ‍್ ೦೫, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ಮಂದಾನಾ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಏಪ್ರಿಲ್ ೧೦, ೨೦೧೩ರಲ್ಲಿ ಅಹ್ಮದಾಬಾದ್ನಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ನಡೆದ ಎರಡನೇ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ಆಗಸ್ಟ್ ೧೩, ೨೦೧೪ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೪][೫][೬]


ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೪೪ ಪಂದ್ಯಗಳು[೭]
 • ಟೆಸ್ಟ್ ಕ್ರಿಕೆಟ್ : ೦೨ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೫೦ ಪಂದ್ಯಗಳು


ಅರ್ಧ ಶತಕಗಳು[ಬದಲಾಯಿಸಿ]

 1. ಟಿ-೨೦ ಪಂದ್ಯಗಳಲ್ಲಿ : ೦೫
 2. ಟೆಸ್ಟ್ ಪಂದ್ಯಗಳಲ್ಲಿ : ೦೧
 3. ಏಕದಿನ ಪಂದ್ಯಗಳಲ್ಲಿ : ೧೩

ಶತಕಗಳು[ಬದಲಾಯಿಸಿ]

 1. ಏಕದಿನ ಪಂದ್ಯಗಳಲ್ಲಿ : ೦೩


ಉಲ್ಲೇಖಗಳು[ಬದಲಾಯಿಸಿ]

 1. http://www.espncricinfo.com/women/content/story/984993.html
 2. http://www.wisdenindia.com/cricket-news/mandhana-powers-india-red-to-title/226886
 3. https://www.cricbuzz.com/profiles/10012/smriti-mandhana
 4. http://www.espncricinfo.com/series/12157/scorecard/625900/india-women-vs-bangladesh-women-3rd-t20i-bangladesh-women-tour-of-india-2012-13
 5. http://www.espncricinfo.com/series/11662/scorecard/722387/england-women-vs-india-women-only-test-india-women-tour-of-england-2014
 6. http://www.espncricinfo.com/series/12157/scorecard/625902/india-women-vs-bangladesh-women-2nd-odi-bangladesh-women-tour-of-india-2012-13
 7. http://www.espncricinfo.com/india/content/player/597806.html