ವಿಷಯಕ್ಕೆ ಹೋಗು

ಸದಸ್ಯ:Shambhavii/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯ

[ಬದಲಾಯಿಸಿ]
ಬೆಂಗಳೂರು

ನನ್ನ ಹೆಸರು ಶಂಭವಿ. ನನ್ನ ವಯಸ್ಸು ಹತ್ತೊಂಬತ್ತು. ನನ್ನ ಹುಟ್ಟಿದ ಸ್ಥಳ ಬೆಂಗಳೂರು. ನನ್ನ ಮನೆಯಲ್ಲಿ ನಾನು ನನ್ನ ತಂದೆ-ತಾಯಿ ಜೊತೆ ಇರುತ್ತೇನೆ.ನಾನು ಇವಾಗ ಸ್ನ್ಯಾತಕೊತರ ಪದವಿಯ ಮೊದಲನೇ ವರುಷದ ವಿದ್ಯಾರ್ಥಿನಿ ಆಗಿದ್ದೇನೆ. ನನ್ನ ತಂದೆ-ತಾಯಿಯ ಮೂಲ ಸ್ಥಳವು ಇತಿಹಾಸ ಪ್ರಸಿದ್ದವಾದ ಚಾಲುಕ್ಯರ ರಾಜಧಾನಿಯಾದ ಬಾದಾಮಿ ಪಟ್ಟಣ. ಇದು ಶಿಲೆಗಳ ತವರೂರು ಎಂದು ಪ್ರಸಿದ್ಧವಾಗಿದೆ.

ವಿದ್ಯಾಭ್ಯಾಸ

[ಬದಲಾಯಿಸಿ]

ನಾನು ನನ್ನ ವಿಧ್ಯಭ್ಯಾಸವನ್ನು ಒಂದನೇ ತರಗತಿ ಇಂದ ಹತ್ತನೇ ತರಗತಿವರಗೆ ಆಕ್ಟ್ಸ್ ಇಸಿಸ್ ಶಾಲೆಯಲ್ಲಿ ಓದಿದ್ದೇನೆ. ನಾನು ಓದಿದ್ದು ವಿಜ್ಞಾನ ಪಠ್ಯಕ್ರಮ. ನನ್ನ ಶಾಲೆ ನನಗೆ ಬಹಳಷ್ಟು ಕಳಿಸಿದೆ. ಶಾಲೆಯ ನಂತರ ನಾನು ಕ್ರೈಸ್ಟ್ ಜೂನಿಯರ್ ಕಾಲೇಜ್ನಲ್ಲಿ ಕರ್ನಾಟಕ ಸ್ಟೇಟ್ ಪಠ್ಯಕ್ರಮದಲ್ಲಿ ವಿಜ್ಞಾನವನ್ನು ಮುಂದುವರಿಸಿದೆ. ಈಗ ನಾನು ಕ್ರೈಸ್ಟ್ ಡೀಮ್ಡ್ ಟು ಬಿ ಯೂನಿವೆರ್ಸಿಟಿನಲ್ಲಿ ಕಲಾ ಪದವೀಧರದಲ್ಲಿ ಮನೋವಿಜ್ಞಾನ, ಸಮಾಜಶಾಸ್ತ್ರ ಮತ್ತು ಇಂಗ್ಲೀಷ್ ಸಾಹಿತ್ಯ ಅಧ್ಯಯನವನ್ನು ಮಾಡುತಿದ್ದೇನೆ. ಇದು ಮೂರು ವರುಷದ ಪದವಿ. ಅದರ ನಂತರ ನನಗೆ ಮನೋವಿಜ್ಞಾನ ಮಾಸ್ಟರ್ಸ್ ಮಾಡಬೇಕು ಎಂಬ ಆಸೆಯಿದೆ.

ಆಸಕ್ತಿ

[ಬದಲಾಯಿಸಿ]
ಕ್ರಿಕೆಟ್
ಎಡ್ ಶೀರನ

ನಾವು ಪ್ರತಿವರುಷವು ಒಂದೊಂದು ಪ್ರೇಕ್ಷಣೆಯ ಸ್ಥಳಗಳಿಗೆ ಪ್ರವಾಸ ಹೋಗುತ್ತಿರುತ್ತೇವೆ. ಅದರಲ್ಲೂ ನನಗೆ ನಿಸರ್ಗ ಮತ್ತು ಚಾರಿತ್ರಿಕ ಸ್ಥಳಗಳೆಂದರೆ ತುಂಬಾ ಇಷ್ಟ. ಉದಾಹರಣೆಗೆ ಊಟಿ, ಮುನ್ನಾರು, ಮೈಸೂರು, ವಿಜಯಪುರ ಮತ್ತು ಬೇಳೂರು-ಹಳೇಬೀಡು. ನನಗೆ ಓದುವ ಹವ್ಯಾಸವಿದ್ದು ಅದರಲ್ಲಿ ಜಾನ್ ಮಿಲ್ಟನ್, ವಿಲಿಯಂ ವರ್ಡ್ಸ್ವರ್ತ್, ರಾಬರ್ಟ್ ಬ್ರೌನಿಂಗ್ ಅವರ ಕವಿತೆಗಳು ಮತ್ತು ವಿಲಿಯಂ ಷೇಕ್ಸ್ಪಿಯರ್ ಅವರ ನಾಟಕಗಳು ಹಾಗು ಪೌಲೊ ಕೋಎಲ್ಹೋ ಅವರ ಕಾದಂಬರಿಗಳು ತುಂಬಾ ಇಷ್ಟ. ನನಗೆ ಸಂಗೀತಮಯವಾದ ಹಾಡುಗಳನ್ನು ಕೇಳುವ ಹವ್ಯಾಸವಿದೆ. ಅದರಲ್ಲೂ ನನಗೆ ಎಡ್ ಶೀರನ ಹಾಗು ಬ್ರಿಟಿನೇ ಸ್ಪಿಯರ್ಸ್ ಅವರ ಸಂಗೀತ ಬಹಳ ಇಷ್ಟ. ಇನ್ನು ಕ್ರೀಡೆಗಳಲ್ಲಿ ನನಗೆ ಕ್ರಿಕೆಟ್ ತುಂಬಾ ಇಷ್ಟ. ನನ್ನ ಮೆಚ್ಚಿನ ಆಟಗಾರ ಮ್.ಸ್ ಧೋನಿ. ನನ್ನ ಜೀವನದ ಗುರಿ ಎಲ್ಲರನ್ನು ಖುಷಿಪಡಿಸಬೇಕೆಂದು ಹಾಗು ಸಮಾಜದಲ್ಲಿರುವ ಅವ್ಯವಸ್ಥೆಗಳನ್ನು ಆದಷ್ಟು ಸರಿಪಡಿಸಬೇಕೆಂದು.ನನಗೆ ಕವಿತೆಗಳನ್ನು ಬರಿಯುವ ಚಟವಿದೆ. ನಾನು ನನ್ನ ಮನಸಿನ ಮಾತನ್ನು ಕವಿತೆಗಳ ಮೂಲಕ ಬರಿಯುತ್ತೆನೆ. ನನಗೆ ಅಧ್ಯಾಪಕರ ಕೆಲಸ ಬಹಳ ಇಷ್ಟ ಹಾಗು ನಾನು ಅವರನ್ನು ಗೌರವಿಸುತ್ತೇನೆ. ನನಗೆ ಅವರಂತೆ ವಿದ್ಯೆಯನ್ನು ಹಂಚುವಂತ ಕೆಲಸ ಮಾಡಲು ಇಷ್ಟ.ಅಲ್ಲದೆ ನಾನು ಯಾವಾಗಲು ನಾನು ಮಾಡುವ ಎಲ್ಲ ಕೆಲಸದಲ್ಲೂ ನನ್ನನ್ನು ನಾನು ನಂಬುತ್ತೇನೆ. ಹಾಗು ನನ್ನ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ.ನಾನು ಯಾವಾಗಲು ಪ್ರತಿಯೊಂದು ಕ್ಷಣವನ್ನು ಜೀವಿಸಬೇಕೆಂದು ತಿಳಿದುಕೊಂಡಿದ್ದೇನೆ.

ಸಾಧನೆಗಳು

[ಬದಲಾಯಿಸಿ]

ನಾನು ಶಾಲೆಯಲ್ಲಿ ಇದ್ದಾಗ ಶಾಲೆಯ ನಾಯಕಿಯಾಗಲು ಅವಕಾಶ ಸಿಕ್ಕಿತ್ತು. ನಾನು ಬರೆದ ಒಂದೆರಡು ಪದ್ಯಗಳು ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ನನಗೆ ಕಲೆ ಮತ್ತು ಕರಕುಶಲತೆಯಲ್ಲಿ ಮೊದಲನೇ ಪ್ರಶಸ್ತಿ ಸಿಕ್ಕಿತ್ತು. ಹತ್ತನೇ ತರಗತಿಯಲ್ಲಿ ಒಳ್ಳೆಯ ಗುರುತುಗಳಿಗೆ ಪ್ರಶಸ್ತಿ ಸಿಕ್ಕಿತ್ತು.