ವಿಷಯಕ್ಕೆ ಹೋಗು

ಸತ್ಯಾನಂದ ಪಾತ್ರೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸತ್ಯಾನಂದ ಪಾತ್ರೋಟ.

ಸತ್ಯಾನಂದ ಪಾತ್ರೋಟ

‘ಜಾಜಿಮಲ್ಲಿಗೆ ಕವಿ’ ಎಂದೇ ನಾಡಿನಾಧ್ಯಾಂತ ಪ್ರಸಿದ್ಧರಾಗಿರುವ ಡಾ. ಸತ್ಯಾನಂದ ಪಾತ್ರೋಟ ತುಳಿತಕ್ಕೊಗಾದ ಜನಾಂಗದ ನೋವು ಮತ್ತು ಆಕ್ರೋಶಗಳನ್ನು ಸಂಯಮದಿಂದ ಅಭಿವ್ಯಕ್ತಿಸುವ ಶಕ್ತಿಶಾಲಿ ಕವಿ.

ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದ ಪಾತ್ರೋಟರು ತಮ್ಮ ಬರವಣಿಗೆಯ ಮೂಲಕ ಅಭಿವ್ಯಕ್ತಿಸಿರುವ ಸಾಮಾಜಿಕ ಕಳಕಳಿಯು ಅನನ್ಯವಾದದು. ಇವರ ಕವಿತೆಗಳು ದಲಿತ ಲೋಕದಿಂದ ಬಂದ ಹೊಸದನಿ. ಬದುಕಿನಲ್ಲಿ ಕಂಡುಂಡ ನೋವು ನಲಿವುಗಳನ್ನು ಋಜುವಾತುಗೊಳಿಸುವಂತೆ ಅರಳಿ ನಿಂತಿವೆ. ದಿನ ನಿತ್ಯದ ಬದುಕಿನಲ್ಲಿ ಕಂಡ ಪ್ರೀತಿಯ ಹದ, ತುಳಿತ ತಳಮಳಗಳೇ ಇವರ ಕವನಗಳ ಅಂತರ್ಜಲ. ದಲಿತ ಸಮುದಾಯಕ್ಕೆ ನ್ಯಾಯವಾಗಿ ಸಲ್ಲಬೇಕಾದ ಪಾಲು ಅಷ್ಟಾಗಿ ಸಿಕ್ಕಿಲ್ಲವೆಂಬ ನೋವು, ನಿರಾಶೆ ಅವರನ್ನು ಕಾಡುತ್ತಿದೆ ಹೀಗಾಗಿ ಆ ಮನೋಧರ್ಮದ ಒಳದನಿಯ ಮುಖೇನ ಸತ್ಯಾನಂದ ಪಾತ್ರೋಟರ ಬರವಣಿಗೆ ಕನ್ನಡ ಸಾಹಿತ್ಯಕ್ಕೆ ಹೊಸ ಸಂವೇದನೆಯನ್ನು ಜೋಡಿಸಿದೆ.

ಇವರ ಕಾವ್ಯ ಬಡವರ ಪರವಾಗಿ ಮಾತನಾಡುತ್ತದೆ. ಶೋಷಿತರ ಕುರಿತು ಕಥೆ ಹೇಳುತ್ತದೆ. ತಮ್ಮ ಶ್ರಮದ ಫಲವನ್ನು ಅನುಭವಿಸಲಾಗದವರ,ಸಂಕಟವನ್ನು ಎತ್ತಿ ತೋರಿಸುತ್ತದೆ ಅವರ ಪಾಡೆ ಇಲ್ಲಿ ಹಾಡಾಗಿ ಕಣ್ಣಿಗೆ ಕಟ್ಟುತ್ತದೆ ಇಂಥವರ ಬದುಕನ್ನು ಅಭಿವ್ಯಕ್ತಿಸುವಲ್ಲಿ ರೊಚ್ಚು, ಆವೇಶಗಳಿಗೆ ಬದಲಾಗಿ ಸಮಚಿತ್ತದ ಹುಡುಕಾಟದ ಕರುಳರಿಯುವ ವ್ಯಂಗ್ಯವನ್ನು ಕಲಾತ್ಮಕ ನೇಲೆಯಿಂದ ಚಿತ್ರಿಸಿವೆ.

ಇವರ ‘ಬಡವನಾದರೆ ಏನು ಪ್ರಿಯೆ/ಕೈತುತ್ತು ತಿನಿಸುವೆ' ಕರ್ನಾಟಕದ ಮನೆ ಮಾತಾಗಿದೆ. ಆಟೋ ರಿಕ್ಷಾ, ಟ್ರಕ್ಕು, ಬಸ್ಸು, ಹೋಟೇಲ್, ಗೂಡಂಗಡಿಗಳಲ್ಲಿ ನಿತ್ಯ ಕೇಳಬಹುದಾಗಿದೆ. ಯುಟುಬಿನಲ್ಲಿ ಸುಮಾರು ೪ ಕೋಟಿ ಜನ ಇದನ್ನು ಕೇಳಿದ್ದಾರೆ ಎಂಬ ಮಾತಿದೆ. ಬಹುತೇಕರು ಇದನ್ನು ತಮ್ಮ ಮೊಬೈಲಿಗೆ ರಿಂಗಟೋನಾಗಿಸಿಕೊಂಡಿದ್ದಾರೆ. ೫ನೇ ವರ್ಗ, ೭ನೇ ವರ್ಗ, ಪಿಯುಸಿಯಿಂದ ಹಿಡಿದು ಸುಮಾರು ೮ ವಿಶ್ವವಿದ್ಯಾಲಯದ ವಿವಿಧ ತರಗತಿಗಳಿಗೆ ಇವರ ಕವಿತೆಗಳು ಪಠ್ಯವಾಗಿ ವಿಶ್ವ ವಿದ್ಯಾಲಯದ ಕವಿ ಎಂದೇ ಪ್ರಸಿದ್ಧರಾಗಿದ್ದಾರೆ.

ಇವರ ಮೇಲೆ ೨ ಎಂಫಿಲ್, ೨ ಪಿಎಚ್‌ಡಿ ಆಗಿದ್ದರೆ ಇನ್ನೆರಡು ನಡದಿವೆ. ಸಾಹಿತ್ಯ ಅಕಾಡೆಮಿಯ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರಿಗೆ ಕರ್ನಾಟಕ ರಾಜ್ಯೋತ್ಸವ ಹಾಗೂ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ದೊರಕಿವೆ ‘ ಬಟಾ ಬಯಲು’ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ದೊರಕಿದೆ.

‘ಜಾಲಿಮರದಲ್ಲೊಂದು ಜಾಜಿಮಲ್ಲಿಗೆ ಇದು ನನ್ನ ಜೀವನ’ ಇತ್ತೀಚಿಗೆ ಬಂದ ಆತ್ಮಕಥನ.

ಕವನ ಸಂಕಲನಗಳು

[ಬದಲಾಯಿಸಿ]
  • ಕರಿ ನೆಲದ ಕಲೆಗಳು ೧೯೮೫
  • ಜಾಜಿ ಮಲ್ಲಿಗೆ ೧೯೯೦
  • ಕಲ್ಲಿಗೂ ಗೊತ್ತಿರುವ ಕಥೆ
೧೯೯೪
  • ಕರಿಯ ಕಟ್ಟಿದ ಕವನ. ೧೯೯೮
  • ನನ್ನ ಕನಸಿನ ಹುಡುಗಿ ೧೯೯೮
  • ನದಿಗೊಂದು ಕನಸು ಮತ್ತು ಅವಳು ೨೦೦೪

ನಾಟಕಗಳು

[ಬದಲಾಯಿಸಿ]
  • ನಮಗ ಯಾರೂ ಇಲ್ಲೋ ಎಪ್ಪಾ ಸಾಕ್ಷಿ ೧೯೮೫
  • ಮತ್ತೊಬ್ಬ ಏಕಲವ್ಯ. ೧೯೯೮
  • ಹ್ವಾದವರು ೧೯೯೩

ಪ್ರಬಂಧ ಸಂಕಲನ

[ಬದಲಾಯಿಸಿ]
  • ಒಂದಿಷ್ಟು ಕ್ಷಣಗಳು.(೧೯೯೪)

ಧ್ವನಿ ಸುರುಳಿ

[ಬದಲಾಯಿಸಿ]

ಎದೆಯ ಮಾತು ೨೦೦೧

೧೯೯೨ ರಿಂದ ೧೯೯೫ರ ವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು

೨೦೦೧ ರಿಂದ ೨೦೦೩ರ ವರೆಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದರು

'ಜಾಜಿ ಮಲ್ಲಿಗೆ' ಕವನ ೧೯೯೬-೨೦೦೫ರ ಅವಧಿಯಲ್ಲಿ ದ್ವಿತೀಯ ಪಿಯುಸಿ ಪಠ್ಯವಾಗಿತ್ತು

'ಪ್ರಕೃತಿ' ಕವನ ೨೦೦೯-೨೦೦೩ರ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಬಿ.ಎಸ್ಸಿ. ಪಠ್ಯವಾಗಿತ್ತು

ಇನ್ನೂ ಅನೇಕ ಕವನಗಳು ಪಠ್ಯದಲ್ಲಿ ಸೇರಿವೆ.

ಸತ್ಯಾನಂದ ಪಾತ್ರೋಟರು ೧೯೯೫ ರಿಂದ ೨೦೦೦ದ ವರೆಗೆ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದರು.

ಅನೇಕ ಕವಿಗೋಷ್ಠಿಗಳಲ್ಲಿ ಇವರು ಪಾಲ್ಗೊಂಡಿದ್ದರು.

ಇವರಿಗೆ ೨೦೧೧ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗು ೨೦೧೨ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ.

ಉಲ್ಲೇಖಗಳು

[ಬದಲಾಯಿಸಿ]