ಸತ್ಯಾನಂದ ಪಾತ್ರೋಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತ್ಯಾನಂದ ಪಾತ್ರೋಟ ಇವರು ಕನ್ನಡದ ಹೊಸ ಸಂವೇದನೆಯ ಲೇಖಕರು.

ಜನ್ಮ ಸ್ಥಳ -ಬಾಗಲಕೋಟೆ

ಎಂ.ಎ., ಬಿ.ಎಡ್., ಪಿಎಚ್.ಡಿ. ಗಳಿಸಿದ್ದಾರೆ.

ಕವನ ಸಂಕಲನಗಳು[ಬದಲಾಯಿಸಿ]

  • ಕರಿ ನೆಲದ ಕಲೆಗಳು ೧೯೮೫
  • ಜಾಜಿ ಮಲ್ಲಿಗೆ ೧೯೯೦
  • ಕಲ್ಲಿಗೂ ಗೊತ್ತಿರುವ ಕಥೆ ೧೯೯೪
  • ಕರಿಯ ಕಟ್ಟಿದ ಕವನ. ೧೯೯೮
  • ನನ್ನ ಕನಸಿನ ಹುಡುಗಿ ೧೯೯೮
  • ನದಿಗೊಂದು ಕನಸು ಮತ್ತು ಅವಳು ೨೦೦೪

ನಾಟಕಗಳು[ಬದಲಾಯಿಸಿ]

  • ನಮಗ ಯಾರೂ ಇಲ್ಲೋ ಎಪ್ಪಾ ಸಾಕ್ಷಿ ೧೯೮೫
  • ಮತ್ತೊಬ್ಬ ಏಕಲವ್ಯ. ೧೯೯೮
  • ಹ್ವಾದವರು ೧೯೯೩

ಪ್ರಬಂಧ ಸಂಕಲನ[ಬದಲಾಯಿಸಿ]

  • ಒಂದಿಷ್ಟು ಕ್ಷಣಗಳು.(೧೯೯೪)

ಧ್ವನಿ ಸುರುಳಿ[ಬದಲಾಯಿಸಿ]

ಎದೆಯ ಮಾತು ೨೦೦೧

೧೯೯೨ ರಿಂದ ೧೯೯೫ರ ವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು

೨೦೦೧ ರಿಂದ ೨೦೦೩ರ ವರೆಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದರು

'ಜಾಜಿ ಮಲ್ಲಿಗೆ' ಕವನ ೧೯೯೬-೨೦೦೫ರ ಅವಧಿಯಲ್ಲಿ ದ್ವಿತೀಯ ಪಿಯುಸಿ ಪಠ್ಯವಾಗಿತ್ತು

'ಪ್ರಕೃತಿ' ಕವನ ೨೦೦೯-೨೦೦೩ರ ಅವಧಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಥಮ ಬಿ.ಎಸ್ಸಿ. ಪಠ್ಯವಾಗಿತ್ತು

ಇನ್ನೂ ಅನೇಕ ಕವನಗಳು ಪಠ್ಯದಲ್ಲಿ ಸೇರಿವೆ.

ಸತ್ಯಾನಂದ ಪಾತ್ರೋಟರು ೧೯೯೫ ರಿಂದ ೨೦೦೦ದ ವರೆಗೆ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿದ್ದರು.

ಅನೇಕ ಕವಿಗೋಷ್ಠಿಗಳಲ್ಲಿ ಇವರು ಪಾಲ್ಗೊಂಡಿದ್ದರು.

ಇವರಿಗೆ ೨೦೧೧ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಹಾಗು ೨೦೧೨ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ.

ಉಲ್ಲೇಖಗಳು[ಬದಲಾಯಿಸಿ]