ಸಂಕ್ಷಿಪ್ತ ಪೂಜಾಕ್ರಮ
ಸಂಕ್ಷಿಪ್ತ ಪೂಜೆ ಯ ಕ್ರಮ
[ಬದಲಾಯಿಸಿ]ಮಂತ್ರಗಳಿಲ್ಲದೆ ಚುಟುಕಾಗಿ ಪೂಜೆ ಮಾಡುವ ವಿಧಾನ ಹೇಳಿದೆ . ಸ್ತೋತ್ರ ಮಂತ್ರಗಳನ್ನೂ ಹೇಳಿಕೊಳ್ಳಬಹುದು. ಹೆಣ್ಣು ಮಕ್ಕಳೂ ಈ ಕ್ರಮ ಅನುಸರಿಸಬಹುದು. ಎಲ್ಲಾ ಪೂಜೆಗೂ ಇದೇ ಕ್ರಮ ; ಪೂಜೆ ಮಾಡುವ ದೇವ ದೇವಿಯರ ಹೆಸರು ಹೇಳಿದರಾಯಿತು; ಸ್ತ್ರೀ ದೇವತೆಗೆ ತುದಿಯಲ್ಲಿ ದೀರ್ಘ ಸೇರಿಸಿ ಹೇಳ ಬೇಕು ಉದಾ : ಸರಸ್ವತೀ ; ಅಂಬಿಕಾ -ಹೀಗೆ ; ನಮಃ ಹೇಳುವಾಗ - ಸರಸ್ವತ್ಯೈ (ತ್+ತ್+ಐ) ಅಂಬಿಕಾಯೈ ನಮಃ ; ಲಕ್ಷ್ಮೀ ದೇವ್ಯೈ ನಮಃ|| ಗುರವೇ ನಮಃ ; ಶಿವಾಯ ನಮಃ || ವಿಷ್ಣುವೇ ನಮಃ || ಓಂ ಅಥವಾ ಶ್ರೀ ಸೇರಿಸಿ ಅಥವಾ ಎರಡನ್ನೂ ಸೇರಿಸಿ ಹೇಳಬೇಕು - ಹೆಂಗಸರೂ ಓಂ ಕಾರವನ್ನು ಹೇಳಬಹುದು , ದೋಷವಿಲ್ಲ. . (ಈ ಕೆಳಗಿನ ಕ್ರಮವನ್ನು ಎಲ್ಲಾ ಜಾತಿ ಮತದವರೂ ಅವರವರ ಇಷ್ಟ ದೇವತೆಯ ಹೆಸರು ಹೇಳಿ ಪೂಜೆ ಮಾಡಬಹುದು.)
- ರೂಡಿಯಲ್ಲಿರುವ ಪದ್ದತಿ (ತಪ್ಪಿದ್ದರೆ ತಿದ್ದಿಕೊಳ್ಳಿ) ಈ ಕ್ರಮವನ್ನು ಹೊಸದಾಗಿ ರೂಡಿಸಿಕೊಳ್ಳಬೇಕೆನ್ನುವವರು ಈ ಕೆಳಗಿನ ಕ್ರಿಯೆಗಳ ಪಟ್ಟಿಯನ್ನು ಮಾಡಿ ಮಂಟಪದ ಹತ್ತಿರ ತೂಗು ಹಾಕಿಕೊಂಡರೆ ಸುಲಭವಾಗುವುದು
ಪೀಠಿಕೆ :
[ಬದಲಾಯಿಸಿ]ಪೂಜೆಗೆ ಸಾಮಾನ್ಯವಾಗಿ ಉತ್ತರ ಅಥವಾ ಪೂರ್ವಕ್ಕೆ ಅಭಿಮುಖವಾಗಿ ಕುಳಿತುಕೊಳ್ಳುವುದು. ದೇವರ ಮಂಟಪ ಪಶ್ಚಿಮ ಅಭಿಮುಖವಾಗಿದ್ದರೆ ಮಂಟಪಕ್ಕೇ ಎದುರಾಗಿ ಪಶ್ಚಿಮಕ್ಕೆ ಆಭಿಮುಖವಾಗಿ ಕುಳಿತುಕೊಳ್ಳಬೇಕಾಗುತ್ತೆ. ಆದ್ದರಿಂದ ದೆವರ ಮಂಟಪವು ಪೂರ್ವ ಅಥವಾ ಉತ್ತರ ಅಭಿಮುಖವಾಗಿ ಇರುವುದು ಒಳ್ಳೆಯದು. ಆಗ ದೇವರ ಮಂಟಪವು ಎಡಕ್ಕೆ ಬರುವಂತೆ ಇದ್ದು ಪೂಜೆಗೆ ಅನುಕೂಲವಾಗುವುದು . ದಕ್ಷಿಣಕ್ಕೆ ಮುಖ ಮಾಡಿ ಕುಳಿತು ಪೂಜೆ ಮಾಡುವ ಕ್ರಮ ಇಲ್ಲ - ಕಾರಣ - ಅದು ಯಮಧರ್ಮನ ಲೋಕದ ದಿಕ್ಕು.
- ಪಂಚಾಯತನ ದೇವತೆಗಳು ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು. ಇವುಗಳಲ್ಲಿ ಆಯಾ ದೇವತೆಗಳ ಭಕ್ತರು ಮುಖ್ಯ ದೇವತೆಯನ್ನು ಮಧ್ಯದಲ್ಲಿಟ್ಟು ಉಳಿದ ದೇವತೆಗಳನ್ನು ಸುತ್ತಲೂ ಇಟ್ಟು ಪೂಜಿಸಬೇಕು. ಈ ಐದೂ ದೆವತೆಗಳಿಗೆ ಬೇರೆ ಬೇರೆಬಗೆಯ ಶಿಲೆಗಳಿವೆ. ಮೂರ್ತಿಗಳ ಬದಲು ಅವುಗಳನ್ನಿಟ್ಟು ಅಭಿಶೇಕ ಪೂಜೆ ಮಾಡುವ ಪದ್ಧತಿಗಳಿವೆ.
- ವಿಷ್ಣು ಕೇಂದ್ರ ; ಶಿವ -ಪೂರ್ವ ಉತ್ತರ ಮಧ್ಯೆ-ಈಶಾನ್ಯ ದಲ್ಲಿ; ಗಣಪತಿ ಪೂರ್ವ ದಕ್ಷಿಣ ಮದ್ಯೆ ಆಗ್ನೇಯ ದಲ್ಲಿ ; ಸೂರ್ಯ ಪಶ್ಚಿಮ ದಕ್ಷಿಣ ಮಧ್ಯೆ ನೈರುತ್ಯ ದಲ್ಲಿ ; ಅಂಬಿಕಾ: ಪಶ್ಚಿಮ ಉತ್ತರ ಮಧ್ಯೆ -ವಾಯವ್ಯದಲ್ಲಿ. ಅವರವರ ಮನೆದೇವರ ಮೂರ್ತಿಯನ್ನು ಇಟ್ಟು ಪೂಜಿಸಬಹುದು- ಅದರ ಹೆಸರು ಹೇಳಿ ಆವಾಹನೆ , ನಮಸ್ಕಾರ ,ಸ್ತೋತ್ರ, ಪ್ರಾರ್ಥನೆ ಮಾಡುವುದು.
- (ಆವಾಹನೆ=ಕರೆಯುವುದು, ಸ್ತೋತ್ರ =ಮಹಿಮೆ ಹೊಗಳುವುದು, ಪ್ರಾರ್ಥನೆ =ಬೇಡಿಕೊಳ್ಳುವುದು- ಕೇಳಿಕೊಳ್ಳುವುದು . ಆಯು, ಆರೋಗ್ಯ, ಒಳ್ಳೆಯ ಬುದ್ಧಿ , ಕಷ್ಟ ನಿವಾರಣೆ, ಸುಖ, ಸಂಪತ್ತು, ಜ್ಞಾನ , ವೈರಾಗ್ಯ , ಇತ್ಯಾದಿ ಕೊಡು ಎಂದು ಕೇಳಿಕೊಳ್ಳುವುದು - ಪ್ರಾರ್ಥನೆ . - ನಿತ್ಯ ಪೂಜಾ ವಿಧಿಯಲ್ಲಿ ಅನಾಯಾಸೇನ ಮರಣ ; ವಿನಾ ದೈನ್ಯೇನ ಜೀವನ ವನ್ನು ಮತ್ತು ದೇವರಲ್ಲಿ ಅಚಂಚಲ ಭಕ್ತಿಯನ್ನೂ ಬೇಡಿಕೊಳ್ಳುವ ಮಂತ್ರವಿದೆ .)
ತಂತ್ರ ಪೂಜಾವಿಧಿ
[ಬದಲಾಯಿಸಿ]ಈ ಕೆಳಗಿನ ೧೬ ಸಾಲುಗಳನ್ನು ಬಾಯಿಗೆ ಕಲಿತರೆ , ಅದೇ ಕ್ರಮದಲ್ಲಿ ಪೂಜೆ ಮಾಡಲು ಸುಲಭ ; ಕ್ರಮ ತಪ್ಪುವುದಿಲ್ಲ .
- ಆರಂಭ
- ಶ್ರೀ ಗಣೇಶಾಯ ನಮಃ || ಓಂ ಶ್ರೀ ಗುರುಬ್ಯೋ ನಮಃ
- ದೇವ ದೇವತಾ ಆಗಮನಾರ್ಥೇ ಘಂಟಾವಾದನಂ ಕೃತ್ವಾ , |
- ಚತುರ‍್ದಶ ದ್ವಾರ ಪಾಲ ಪೂಜಾಂ ಕುರ್ಯಾತು ||೧||
- ಸಂಕಲ್ಪಂ ಕೃತ್ವಾ ಗಾಯತ್ರಿ ಮಂತ್ರೇಣ ಕಲಶಂ ಪೂಜಯೇತ್ |
- ದೇವತಾ ಧ್ಯಾನಂಕೃತ್ವಾ , ಆವಾಹನಂ ಕುರ್ಯಾತು || ೨||
- ಆಸನಂ ದದ್ಯಾತು , ನಂತರಂ ಪಾದ್ಯಂ ಅರ್ಘ್ಯಂ ಆಚಮನಂ|
- ಸ್ನಾನಂ ಪುನಃ ಶುದ್ಧೋದಕ ಸ್ನಾನಂ ಚ ವಸ್ತ್ರಂ ಆಭರಣ ಸಮರ್ಪಣಂ ||೩||
- ನಂತರಂ ಉಪವೀತಂ ಚ ಗಂಧಂ ಚ ಅಕ್ಷತಾಂ ಪುಷ್ಪಂ ಸಮರ್ಪಣಂ |
- ನಾಮ ಪೂಜಾಂ ಪುಷ್ಪ ಸಹಿತಂ ನಂತರಂ ಧೂಪ ದೀಪಂ ಸಮರ್ಪಯೇತ್ ||೪||
- ಭೋಜನಾರ್ಥಂ ಫಲಂ ತಾಂಬೂಲಂ ನೇವೇದ್ಯಂ ಕುರ್ಯಾತ್ |
- ಕುರ್ಯಾತ್ ಮಂಗಲ ನೀರಾಜನಂ ; ತದನಂತರಂ ಪ್ರದಕ್ಷಿಣ ನಮಸ್ಕಾರಂ ||೫||
- ಗಂಧಾಕ್ಷತ ದೂರ್ವಸಹಿತಂ ಪ್ರಸನ್ನಾರ್ಘ್ಯಂ ದದ್ಯಾತು |
- ದೇವತಾ ಪ್ರಾರ್ಥನಂ ಪುನಃ ದೇವ ವಂದನಂ ||೬||
- ಲೋಪದೋಷ ನಿವಾರಣಾರ್ಥಂ ವಿಷ್ಣು ಸ್ಮರಣಂ ಕುರ್ಯಾತ್ |
- ಪೂಜಾಫಲಂ ಕೃಷ್ಣಾರ್ಪಣಂ ಕೃತ್ವಾ |ತೀರ್ಥ ಪ್ರಸಾದಂ ಸ್ವೀಕರೇತ್,
- ಘಂಟಾ ನಾದೇನ ವಿಸರ್ಜಯೇತ್||೭||
ವಿವರಣೆ
[ಬದಲಾಯಿಸಿ]- ಪ್ರಾರ್ಥನೆ :ಓಂ, ಶ್ರೀ ಗಣೇಶಾಯ ನಮಃ || ಶ್ರೀ ಗುರುಭ್ಯೋ ನಮಃ ||
- ೧) ದೇವತಾ ಆಗಮನಕ್ಕಾಗಿ ಘಂಟಾನಾದ; (ಮಂಟಪವನ್ನು ಶುಚಿಗೊಳಿಸಿಮಂಟಪದ ಒಳಗೆ ಎಲ್ಲಾ ದಿಕ್ಕಿಗೆ ಹೂವು ಇಡುವುದು)
- ೨) ಚತುರ್ದಿಶ ದ್ವಾರ ಪಾಲ ಪೂಜೆ (ನಾಲ್ಕು ದಿಕ್ಕುಗಳಲ್ಲಿರುವ ದೇವತೆಗಳ ಪೂಜೆ-
- (ಮಂಟಪದೊಳಗೆ ನಾಲ್ಕು ದಿಕ್ಕಿಗೆ ಹೂವು ಇಡುವುದು/ ಹಾಕುವುದು)
- ೩) ಸಂಕಲ್ಪ (ಅಸ್ಮಿನ್ ಶುಭದಿನೇ ಶ್ರೀಪರಮೇಶ್ವರ ಪ್ರೀತ್ಯರ್ಥಂ ಯಥಾಶಕ್ತಿ ಯಥಾಜ್ಞಾನ ದೇವ ಪೂಜಾಂಕರಿಷ್ಯೇ -ನೀರು ಬಿಡು)
- ೪) ಕಲಶಪೂಜೆ - ಕಲಶಕ್ಕೆ (ನೀರು ತುಂಬಿದ ಚಂಬಿಗೆ) ಹೂ ದೂರ್ವೆ ಹಾಕಿ ಗಾಯತ್ರಿ ಮಂತ್ರ ಹೇಳುವುದು.
- ೫) ಧ್ಯಾನ- (ಸೂರ್ಯಗಣಪತಿ ಅಂಬಿಕಾ ಶಿವ ವಿಷ್ಣು ದೇವತಾಭ್ಯೋ ನಮಃ) (ಇಷ್ಟವಾದ ದೇವತೆಯ ಹೆಸರು ಹೇಳಿ- ನಮಃ ಎಂದು ಕೈಮುಗಿದು ನಮಸ್ಕರಿಸುವುದು)
- ೬)ಆವಾಹನ -((ಸೂರ್ಯಗಣಪತಿ ಅಂಬಿಕಾ ಶಿವ ವಿಷ್ಣುಂ - ಲಕ್ಕ್ಮೀ ನಾರಾಯಣಂ ಆವಾಹಯಾಮಿ ಅಥವಾ ಇಷ್ಟ ದೇವರ ಹೆಸರು ಹೇಳುವುದು.)
- ೭) ಆಸನಂ ಸಮರ್ಪಯಾಮಿ || (ಪೀಠವನ್ನು ಮುಟ್ಟುವುದು )
- ೮) ಪಾದ್ಯ - ಸಮರ್ಪಯಾಮಿ (ದೇವರ ಮೂರ್ತಿ ಪಾದಕ್ಕೆ ನೀರು ಹಾಕುವುದು-ಚಮಚದಲ್ಲಿ ತಟ್ಟೆಗೆ ನೀರುಬಿಡುವುದು ' ಪ್ರೋಕ್ಷಣೆ ಮಾಡಿದರೂ ಸರಿ)
- ೯)ಅರ್ಘ್ಯಂ ಸಮರ್ಪಯಾಮಿ - (ದೇವರ ಮೂರ್ತಿ ಹಸ್ತಕ್ಕೆ ನೀರು ಹಾಕುವುದು -ಮೇಲಿನಂತೆ - ಚಿಮುಕಿಸಿದರೂ ತಟ್ಟೆಗೆ ನೀರು ಬಿಟ್ಟರೂ, ದೇವರಿಗೆ ತಲುಪುವುದು.)
- ೧೦)ಆಚಮನಂ ಸಮರ್ಪಯಾಮಿ - ಸಮರ್ಪಯಾಮಿ (ಆಚಮನ- ಕುಡಿಯಲು ನೀರು; ದೇವರ ಮೂರ್ತಿ ಹಸ್ತಕ್ಕೆ ನೀರು ಹಾಕುವುದು -ಮೇಲಿನಂತೆ-)
- ೧೧) ದೇವರಿಗೆ ಅಭಿಷೇಕ ಮಾಡುವುದು ತೊಳೆದು ಪುನಃ ಅಭಿಷೇಕ; (ಫೋಟೋ ಆದರೆ ನೀರು ಚಿಮುಕಿಸಬಹುದು
- ೧೨)ವಸ್ತ್ರಂ ; ಆಭರಣಂ ; ಉಪವೀತಂ (ಸಮರ್ಪಯಾಮಿ )- ಎಲ್ಲದಕ್ಕೂ ಒಂದೊಂದು ಹೂವು ಹಾಕುವುದು
- ೧೩)ಗಂಧ ಅಕ್ಷತೆ ಹೂವು (ಗಂಧವನ್ನು ಹೂವಿಗೆ ಹಚ್ಚಿ ಹಾಕಬಹುದು- ಅರಿಶಿನ- ಕುಂಕುಮವನ್ನು ಹೂವಿಗೆ ಮುಟ್ಟಿಸಿ ಹಾಕಬಹುದು)
- (ಹಾಕುವಾಗ ದೇವರ ಹೆಸರು ಹೇಳಿ ಹಾಕಬೇಕು ಉದಾ: ಓಂ ಶಿವಾಯ ನಮಃ, ವಿಷ್ಣವೇನಮಃ)
- ೧೪) ಧೂಪ ದೀಪಂ ಸಮರ್ಪಯಾಮಿ (ತೋರಿಸುವುದು).
- ೧೫) ಭೋಜನಾರ್ಥಂ ಫಲಂ ಸಮರ್ಪಯಾಮಿ ತಾಂಬೂಲ ಸಮರ್ಪಯಾಮಿ- ನೇವೇದ್ಯ ಮಾಡುವುದು.
- ೧೬) ಮಂಗಲ ನೀರಾಜನಂ ಸಮರ್ಪಯಾಮಿ- ಆರತಿ.
- ೧೭) ಗಂಧಾಕ್ಷತ ದೂರ್ವಸಹಿತಂ ಪ್ರಸನ್ನಾರ್ಘ್ಯಂ ಸಮರ್ಪಯಾಮಿ (ಕೊಡುವುದು-) ಅಂಗೈಯಿಂದ ತಟ್ಟೆಗೆ ನೀರು ಬಿಡುವುದು.
- ೧೮) ದೇವತಾ ಪ್ರಾರ್ಥನಂ -ಪ್ರಾರ್ಥನೆ ಮಾಡುವುದು (ಸಮರ್ಪಯಾಮಿ);ದೇವರನ್ನು ಕೊಡು ಎಂದು ಕೇಳುವುದು. ಪ್ರಾರ್ಥನೆಯ ಯಾವುದೇ ಶ್ಲೋಕವನ್ನು- ಪದ್ಯವನ್ನು-ಕೀರ್ತನೆಯನ್ನು ಹೇಳಬಹುದು. ಉದಾ: "ಸದ್‍ಬುದ್ಧಿಯನ್ನೂ, ವಿದ್ಯೆಯನ್ನೂ, ಸಂಪತ್ತನ್ನೂ ಕೊಡು"
- ೧೯) ದೇವ ವಂದನಂ ಪ್ರದಕ್ಷಿಣ ನಮಸ್ಕಾರ (ಸಮರ್ಪಯಾಮಿ)ಎಡದಿಂದ ಬಲಕ್ಕೆ ತಿರುಗಿ ಪ್ರದಕ್ಷಿಣೆ.
- ೨೦) ಲೋಪದೋಷ ನಿವಾರಣಾರ್ಥಂ ವಿಷ್ಣು ಸ್ಮರಣೆ ಮಾಡುವುದು| (ಪೂಜಾ ಫಲಂ -$) ಕೃಷ್ಣಾರ್ಪಣ ಎಂದು ತುಳಸಿ ನೀರು ಬಿಡುವುದು
- ೨೧)ತೀರ್ಥ ಪ್ರಸಾದ ಸ್ವೀಕಾರ (ಅಕಾಲ ಮರಣ-ವ್ಯಾಧಿ -ಕಷ್ಟ ನಿವಾರಣೆ ಗಾಗಿ ತೀರ್ಥ ಸ್ವೀಕಾರ)
- ೨೨) ಘಂಟಾ ನಾದ ಮಾಡುವುದು ( ಘಂಟಾ ನಾದದಿಂದ ದೇವರ ವಿಸರ್ಜನೆ.)
- (ಟಿಪ್ಪಣಿ : $ ಅನಾಸಕ್ತಿ ಯೋಗ (ಕರ್ಮಯೋಗ) ದ ಪ್ರಕಾರ ಯಾವ ಫಲವನ್ನೂ ಬಯಸದೆ ಇರುವುದು -ತುಳಸಿ ನೀರು ಬಿಡುವುದು)
ನೋಡಿ :
[ಬದಲಾಯಿಸಿ]- ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿ- ಸಂಧ್ಯಾವಂದನೆ ಬೋಧಾಯನ ಸ್ಮಾರ್ಥ ಹವ್ಯಕ ಪದ್ಧತಿ .
- ಹವ್ಯಕ |
- ಗಾಯತ್ರೀ ಪುಟ೨
- ಸಂಧ್ಯಾವಂದನ ಪೂರ್ಣಪಾಠ ಟಿಪ್ಪಣಿ, ಅರ್ಥ , ಸೂಚನೆ ಗಳೊಂದಿಗೆ.
- ಸಂಧ್ಯಾವಂದನೆ ಮಂತ್ರ - ಟಿಪ್ಪಣಿ, ಅರ್ಥ , ಸೂಚನೆ ಗಳೊಂದಿಗೆ.-ಸಂಕ್ಷಿಪ್ತ ರೂಪ
- ದೇವತಾರ್ಚನ ವಿಧಿ
- ಸಂಕ್ಷಿಪ್ತ ಪೂಜಾಕ್ರಮ
- ಹವ್ಯಕ
ಉಲ್ಲೇಖ
[ಬದಲಾಯಿಸಿ]- ↑ ಹಸ್ತ ಪ್ರತಿ : ದಿವಂಗತ.. ತಿಮ್ಮ್ಯೆಯ್ಯ ಕೊಲ್ಲೂರಯ್ಯ ಹೆಗಡೆ | ಬೇಗಡೀಪಾಲು ಇವರು , ೨೬/೧೦/೧೯೪೨ ರಲ್ಲಿ ಬರೆದ ಹಸ್ತ ಪ್ರತಿ
- ↑ ಸಂಧ್ಯಾವಂದನೆಯ ತತ್ವಾರ್ಥ: ಶ್ರೀ ಯಡತೊರೆ ಸುಬ್ರಾಯ ಶರ್ಮಾ.
- ↑ ಯಜುರ್ವೇದ ನಿತ್ಯ ಕರ್ಮ: (ಸಂಗ್ರಹಕರು) || ಶ್ರೀ || ಶಂಕರಶಾಸ್ತ್ರಿಗಳು
- ↑ ಬೋಧಾಯನೀಯ ನಿತ್ಯ ಕರ್ಮ ಪ್ರದೀಪಃ : ಬರಿಗೆ ಗಣೇಶ ಭಟ್ಟರು.- ಹವ್ಯಕ ಸಂಪದಭಿವೃಧ್ಧಿ ಸಮಾಜ ಕೇಡಲೇಸರ ಭೀಮನಕೋಣೆ ಸಾಗರತಾ||