ಸಂ. ಫ್ರಾನ್ಸಿಸ್ ಕ್ಸೇವಿಯರ್ ಚರ್ಚು, ಮಂಗಳೂರು
ಸಂ. ಫ್ರಾನ್ಸಿಸ್ ಕ್ಸೇವಿಯರ್ ಚರ್ಚು, ಸಾಮಾನ್ಯವಾಗಿ ಇದನ್ನು ಬಿಜೈ ಚರ್ಚು ಎಂದು ಹೆಸರುವಾಸಿಯಾಗಿದ್ದು, ಒಂದು ರೋಮನ್ ಕಥೋಲಿಕ ಚರ್ಚ್ ಆಗಿದ್ದು, ಇದು ಮಂಗಳುರು ನಗರದ ಬಿಜೈ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಚರ್ಚನ್ನು ೧೮೬೯ರಲ್ಲಿ ನಿರ್ಮಿಸಲಾಗಿದ್ದು, ಇದರ ಸಂಪೂರ್ಣ ಸ್ಥಳದ ವಿಸ್ತೀರ್ಣವು ೫.೩೧ ಎಕರೆಯನ್ನು ಹೊಂದಿದೆ. ಇದನ್ನು ಬ್ರಿಟೀಷ್ ಸರಕಾರ ಇವರಿಂದ ೨೧ ನವೆಂಬರ್ ೧೮೬೯ರಲ್ಲಿ ಪಡೆದುದಾಗಿದೆ. ಮೂಲ ರಚನೆಯ ಕಟ್ಟಡವು ಪ್ರಾರ್ಥನಾಲಯವಾಗಿದ್ದು, ಅದರಿಂದ ಭಾನುವಾರದ ಬಲಿಪೂಜೆಗಳು ನಡೆಯುತ್ತಿದ್ದವು.[೧]
ಇತಿಹಾಸ
[ಬದಲಾಯಿಸಿ]ಬಿಜೈ ಸುತ್ತಮುತ್ತಲಿನ ಪ್ರದೇಶವನ್ನು ಕ್ಯಾಥೆಡ್ರಲ್ ಚರ್ಚು ಸುಮಾರು ಎರಡು ದಶಕಗಳ ಕಾಲ ಆವರಿಸಿತ್ತು. ಈ ಪ್ರದೇಶದ ಮಂಗಳೂರು ಕಥೋಲಿಕರು ಭಕ್ತರು ದೂರದ ಚರ್ಚುಗಳಿಗೆ ಹೋಗುವ ಕಷ್ಟವನ್ನು ನಿವಾರಿಸಲು ಹಾಗೂ ಅವರ ಅನುಕೂಲಕ್ಕಾಗಿ ಇಲ್ಲಿ ಪ್ರಾರ್ಥನಾಲಯವನ್ನು ನಿರ್ಮಿಸಲಾಗಿತ್ತು. ಕ್ಯಾಥೆಡ್ರಲ್ ಚರ್ಚಿನಿಂದ ಗುರುಗಳು ಇಲ್ಲಿ ಭಾನುವಾರದ ಬಲಿಪೂಜೆಗಳನ್ನು ಇಲ್ಲಿ ಬಂದು ನೆರವೇರಿಸುತ್ತಿದ್ದರು.
ವಂ.ಸೆಬಾಸ್ಟಿಯನ್ ನೊರೊನ್ಹಾ ಅವರನ್ನು ಬಿಜೈ ಪ್ರಾರ್ಥನಾಲಯಕ್ಕೆ ನಿವಾಸಿ ಧರ್ಮಗುರುಗಳನ್ನಾಗಿ ಬಿಷಪ್ ಪೌಲ್ ಪೆರಿನಿ ಯೆ.ಸ. ಅವರು ೨೨ ಮಾರ್ಚ್ ೧೯೧೨ರಲ್ಲಿ ಒದಗಿಸಿದ್ದುದರಿಂದ, ವಂ. ಸೆಬಾಸ್ಟಿಯನ್ ಅವರು ಮಂಗಳೂರು ಕಥೋಲಿಕ ಯುವಜನತೆಗಾಗಿ ಪ್ರಾಥಮಿಕ ಶಾಲೆಯನ್ನು, ಸಂ. ಫ್ರಾನ್ಸಿಸ್ ಕ್ಸೇವಿಯರ್ ಬಾಲಕರ ಶಾಲೆ ಮತ್ತು ಲೂರ್ಡ್ಸ್ ಬಾಲಕಿಯರ ಶಾಲೆಗಳನ್ನು ೧೯೧೫ರಲ್ಲಿ ಪ್ರಾರಂಭಿಸಿದರು. ಅವರ ನಂತರ ೧೯೨೦ರಲ್ಲಿ ಬಂದ ವಂ. ಜೋಸೆಫ್ ಪೀಟರ್ ಫೆರ್ನಾಂಡಿಸ್, ಅವರು ಚರ್ಚ್ ನಿವಾಸದ ಒಂದು ಭಾಗವನ್ನು ನಿರ್ಮಿಸಿದರು. ಪ್ರಸ್ತುತ ಚರ್ಚ್ ಕಟ್ಟಡವನ್ನು ವಂ. ಎ.ಇ.ಸಿ. ಕುಲಾಸೊ ಅವರು ೧೯೨೮ರಲ್ಲಿ ನಿರ್ಮಿಸಿದ್ದಾರೆ. ಅವರು ಚರ್ಚ್ ನಿವಾಸದ ಉಳಿದ ಭಾಗವನ್ನು ಪೂರ್ತಿಗೊಳಿಸಿ, ಶಾಲಾ ಕಟ್ಟಡವನ್ನು ಕಟ್ಟಿದ್ದಲ್ಲದೇ ಬೆಲ್ಫ್ರೀ ರೂಪುರೇಷೆಯನ್ನು ಮಾಡಿದ್ದು, ಇದನ್ನು ವಂ. ಲಿಯೊ ಸಲ್ಡಾನ್ಹ ಅವರು ೧೯೩೭ರಲ್ಲಿ ಸಂಪೂರ್ಣಗೊಳಿಸದರು. ೧೯೬೩ರಲ್ಲಿ ವಂ.ಮೊನ್ಸಿಂಜೊರ್ ಜೆ.ಎಮ್.ಪಿಂಟೊ ಅವರ ಸಹಾಯದಿಂದ ಅರ್ಸುಲಾಯ್ನ್ ಫ್ರಾನ್ಸಿಸ್ಕನ್ ಧರ್ಮಭಗಿನಿಯರು ೧೦ನೇ ತರಗತಿಯವರೆಗೆ ಬಾಲಕಿಯರಿಗಾಗಿ ಪ್ರೌಢಶಾಲೆಯನ್ನು ಪ್ರಾರಂಭಿಸಿದರು. ೧೯೬೩ರಲ್ಲಿ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ.[೨]
೧೯೯೫-೨೦೦೩
[ಬದಲಾಯಿಸಿ]ವಂ. ಬರ್ನಾಡ್ ಎಲ್. ಡಿಸೋಜಾ ಅವರು ಬಿಜೈ ಚರ್ಚ್-ಗೆ ೧೯೯೫ರಲ್ಲಿ ಚರ್ಚ್ ಧರ್ಮಗುರು ಗಳಾಗಿ ಬಂದು, ಶೀಘ್ರಗತಿಯಲಲ್ಇ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸಿದರು. ತೀರಾ ಪಶ್ಚಿಮದಲ್ಲಿರುವ ಸ್ಮಶಾನವನ್ನು ಸಮತಟ್ಟುಗೊಳಿಸಲಾಗಿದ್ದು, ಶಾಶ್ವತ ಸಮಾಧಿಗಳನ್ನು ಉತ್ತಮ ದರ್ಜೆಗೇರಿಸಲಾಯಿತು. ಮೈದಾನವನ್ನು ಸಮಗೊಳಿಸಿ, ೩೫ಸೆಂಟ್ಸ್ ಜಾಗದಲ್ಲಿ ಸಮುದಾಯ ಭವನವನ್ನು ನಿರ್ಮಿಸಿ, ೫೨ ಸೆಂಟ್ಸ್ ಜಾಗದಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶವನ್ನು ಒದಗಿಸಲಾಯಿತು. ಸಮುದಾಯ ಭವನವನ್ನು ಒಂದು ವರ್ಷಷ ಕಾಲಾವಧಿಯಲಲ್ಇ ನಿರ್ಮಿಸಿ ಡಿಸೆಂಬರ್ ೧೯೯೭ರಲ್ಲಿ ಉದ್ಘಾಟಿಸಲಾಯಿತು. ಬಿಜೈ ಚರ್ಚ್ ಸಭಾಂಗಣವು ಪ್ರಸ್ತುತ ೧೦೦೦ ಆಸನಗಳು, ಒಂದು ವೇದಿಕೆ, ೧೦೦೦ ಆಸನಗಳ ಮಹಡಿ, ಒಂದು ವೆರಾಂಡ ಮತ್ತು ವೇದಿಕೆಯ ಕೆಳ ಅಂತಸ್ತಿನಲ್ಲಿ ೨೦೦ ಆಸನಗಳನ್ನು ಹೊಂದಿರುವ ಸಣ್ಣ ಸಭಾಂಗಣವು ಧ್ವನಿವರ್ಧಕಗಳಿಂದ ಸಂಪೂರ್ಣವಾಗಿ ಹೊಂದಿದೆ. ಇದರ ಒಟ್ಟು ನಿರ್ಮಾಣ ವೆಚ್ಚ ೭.೫ ಮಿಲಿಯ ರೂಪಾಯಿಗಳು ಆಗಿರುತ್ತದೆ.[೩]
೨೦೦೩ರಿಂದೀಚೆಗೆ
[ಬದಲಾಯಿಸಿ]೧೯೯೮ರಲ್ಲಿ ಬಿಜೈ ಚರ್ಚ್ ವಾಣಿಜ್ಯ ಸಂಕೀರ್ಣದ ನಿರ್ಮಾಣವು ವಂ. ಬರ್ನಾಡ್ ಅವರು ಕೈಗೊಂಡ ಮಹತ್ತರ ಮತ್ತು ಅಭಿವೃದ್ದಿ ಕಾರ್ಯವಾಗಿದೆ, ಇದು ಬಿಜೈ ಸುತ್ತಮುತ್ತಲಿನ ಪ್ರದೇಶಗಳಿಗೆ ಆರ್ಥಿಕ ವಿನಿಮಯ ತಾಣವಾಗಿ ಬೆಳೆಯಿತು. ವಂ. ಜೋಸೆಫ್ ಪೀಟರ್ ತಾವ್ರೊ ಅವರು ಬಿಜೈ ಚರ್ಚ್ ಧರ್ಮಗುರು ಹಾಗೂ ಲೂರ್ಡ್ಸ್ ಕೇಂದ್ರೀಯ ಶಾಲೆಯ ಮ್ಯಾನೇಜರ್ ಆಗಿ ನೇಮಕಗೊಂಡರು. ಕೆಲವೇ ಕಾಲಾನಂತರದಲ್ಲಿ ಈ ಶಾಲೆಯು ನವ ದೆಹಲಿಯಲ್ಲಿರುವ ಸಿ.ಬಿ.ಎಸ್.ಸಿಯ ಅನುಮೋದನೆಗೊಳಪಟ್ಟಿತು.
ಬಿಜೈ ಚರ್ಚ್ ೨೦೧೧ರಲ್ಲಿ ಶತಮಾನೋತ್ಸವವನ್ನು ಆಚರಿಸಿತು. ಪ್ರಸ್ತುತ ಇದು ೧೨೫೦ ಕುಟುಂಬದ, ಸುಮಾರು ೬೦೦೦ ಕಥೋಲಿಕರನ್ನು ಬಿಜೈ ಪರಿಸರದ ಸದಸ್ಯರನ್ನೊಳಗೊಂಡಿದೆ.[೪]
ಉಲ್ಲೇಖಗಳುReferences
[ಬದಲಾಯಿಸಿ]- ↑ "St Francis Xavier Church – Bejai". Bejaichurch.com. Archived from the original on 31 ಡಿಸೆಂಬರ್ 2011. Retrieved 19 ಜನವರಿ 2012.
- ↑ "St. Francis Xavier Church – Bejai, Mangalore". Church News Site. Archived from the original on 21 ಫೆಬ್ರವರಿ 2014. Retrieved 19 ಜನವರಿ 2012.
- ↑ "Bejai Church: 100 Years – To Rejoice, Celebrate and Dedicate". Daiji World. Archived from the original on 3 ಅಕ್ಟೋಬರ್ 2011. Retrieved 19 ಜನವರಿ 2012.
- ↑ "Bejai parish set to celebrate 100 years". ಟೈಮ್ಸ್ ಆಫ್ ಇಂಡಿಯ. 3 ಆಗಸ್ಟ್ 2011. Archived from the original on 7 ಜುಲೈ 2012. Retrieved 19 ಜನವರಿ 2012.
ಬಾಹ್ಯ ಕೊಂಡಿಗಳು
[ಬದಲಾಯಿಸಿ]