ವಿಷಯಕ್ಕೆ ಹೋಗು

ಶ್ಯೋಕ್ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶ್ಯೋಕ್ ನದಿ
ಶ್ಯೋಕ್ ನದಿ ಮತ್ತು ಕಣಿವೆ
35 ಮೀಟರ್ ಉದ್ದದ ಮೈತ್ರೇಯ ಬುದ್ಧನ ಪ್ರತಿಮೆ. ಶ್ಯೋಕ್ ನದಿಗೆ ಅಭಿಮುಖವಾಗಿದೆ.

'ಶ್ಯೋಕ್ ನದಿ (ಅಕ್ಷರಶಃ ಸಾವಿನ ನದಿ')[] ಸಿಂಧೂ ನದಿಯ ಒಂದು ಉಪನದಿಯಾಗಿದೆ. ಇದು ಉತ್ತರ ಲಡಾಖ್ ಮೂಲಕ ಹರಿಯುತ್ತದೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರವೇಶಿಸುತ್ತದೆ. ಇದು ಸುಮಾರು 550 km (340 mi) ಉದ್ದವಿದೆ.

ಶ್ಯೋಕ್ ನದಿಯು ಸಿಯಾಚಿನ್ ಹಿಮನದಿಯ ನಾಲಿಗೆಗಳಲ್ಲಿ ಒಂದಾದ ರೀಮೋ ಹಿಮನದಿಯಲ್ಲಿ ಹುಟ್ಟುತ್ತದೆ. ಶ್ಯೋಕ್ ನದಿಯ ಜೋಡಣೆಯು ಅತ್ಯಂತ ಅಸಾಮಾನ್ಯವಾದುದಾಗಿದೆ. ಇದು ರೀಮೋ ಹಿಮನದಿಯಿಂದ ಹುಟ್ಟಿಕೊಂಡು ನಂತರ ಆಗ್ನೇಯ ದಿಕ್ಕಿನಲ್ಲಿ ಹರಿಯುತ್ತದೆ ಮತ್ತು ಪಾಂಗೊಂಗ್ ಶ್ರೇಣಿಯನ್ನು ಸೇರಿಕೊಂಡು, ವಾಯವ್ಯ ದಿಕ್ಕಿನಲ್ಲಿ ತನ್ನ ಹಿಂದಿನ ಮಾರ್ಗಕ್ಕೆ ಸಮಾನಾಂತರವಾಗಿ ಹರಿಯುತ್ತದೆ. ನುಬ್ರಾ ನದಿಯ ಸಂಗಮದಲ್ಲಿ ಶ್ಯೋಕ್ ಕಣಿವೆಯು ವಿಸ್ತಾರಗೊಳ್ಳುತ್ತದೆ ಆದರೆ ಇದ್ದಕ್ಕಿದ್ದಂತೆ ಯಗುಲುಂಗ್ ಬಳಿ ಕಿರಿದಾದ ಕಮರಿಯಾಗಿ ಬದಲಾಗುತ್ತದೆ ಮತ್ತು ಬಾಲ್ಟಿಸ್ತಾನ್ ಪ್ರವೇಶಿಸುವ ಮುನ್ನ ಬೋಗ್‍ಡಾಂಗ್, ತುರ್ತುಕ್ ಹಾಗೂ ತ್ಯಾಕ್ಷಿ ಮೂಲಕ ಮುಂದುವರಿಯುತ್ತದೆ.[] ಶ್ಯೋಕ್ ಕಣಿವೆಯ ಮತ್ತೆ ಸಾಲ್ಟೋರೋ ನದಿಯ ಸಂಗಮದ ಹತ್ತಿರ ಘುರ್ಸೇ ಕಣಿವೆಯಲ್ಲಿ ಅಗಲವಾಗುತ್ತದೆ. ಸ್ಕಾರ್ಡು ಪಟ್ಟಣದ ಪೂರ್ವದಲ್ಲಿರುವ ಕೆರಿಸ್‌ನಲ್ಲಿ ಈ ನದಿ ಸಿಂಧೂವನ್ನು ಸೇರುತ್ತದೆ.[][]

ಶ್ಯೋಕ್ ಕಣಿವೆ

[ಬದಲಾಯಿಸಿ]

ಶ್ಯೋಕ್ ಕಣಿವೆಯು ಲಡಾಖ್‌ನಲ್ಲಿರುವ ಶ್ಯೋಕ್ ನದಿಯ ಕಣಿವೆ. ಈ ಕಣಿವೆಯು ನುಬ್ರಾ ಕಣಿವೆಯ ಹತ್ತಿರದಲ್ಲಿದೆ. ಲಡಾಖ್ ಶ್ರೇಣಿಯ ಮೇಲೆ ಖಾರ್ದುಂಗ್ ಲಾ ಲೇಹ್‌ನ ಉತ್ತರಕ್ಕೆ ಇದ್ದು ಶ್ಯೋಕ್ ಮತ್ತು ನುಬ್ರಾ ಕಣಿವೆಗಳ ಹೆಬ್ಬಾಗಿಲಂತಿದೆ. ಸಿಯಾಚಿನ್ ಗ್ಲೇಸಿಯರ್ ನಂತರದ ಕಣಿವೆಯ ಭಾಗದಲ್ಲಿದೆ.

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

ಅಡಿಟಿಪ್ಪಣಿಗಳು

[ಬದಲಾಯಿಸಿ]

 

  1. Harish Kapadia (1999). Across Peaks & Passes in Ladakh, Zanskar & East Karakoram. Indus Publishing. p. 230. ISBN 978-81-7387-100-9. Shyok: river of death. (Sheo: death).
  2. "Turtuk, the village on the India-Pak border, is where the clichés stop and fantasies begin". Archived from the original on 15 May 2015.
  3. Aerial view of river junction
  4. Bennett-Jones, Owen; Brown, Lindsay; Mock, John (1 September 2004). Pakistan and the Karakoram Highway. Lonely Planet Regional Guides (6th Revised ed.). Lonely Planet Publications. p. 306. ISBN 978-0-86442-709-0. Retrieved 2009-08-26.

ಹೊರಗಿನ ಕೊಂಡಿಗಳು

[ಬದಲಾಯಿಸಿ]