ಪೆಸಿಫಿಕ್ ಮಹಾಸಾಗರ
ಗೋಚರ
(ಶಾಂತ ಮಹಾಸಾಗರ ಇಂದ ಪುನರ್ನಿರ್ದೇಶಿತ)
ಭೂಮಿಯ ಐದು ಮಹಾಸಾಗರಗಳು |
---|
ಪೆಸಿಫಿಕ್ ಮಹಾಸಾಗರ ಭೂಮಿಯ ಅತ್ಯಂತ ದೊಡ್ಡ ಮಹಾಸಾಗರ. ಲ್ಯಾಟಿನ್ ಭಾಷೆಯಲ್ಲಿ "ಶಾಂತ ಸಾಗರ" ಎಂಬ ಅರ್ಥದ ಈ ಹೆಸರಿನ್ನಿಟ್ಟವನು ಪೋರ್ಚುಗೀಯ ನಾವಿಕ ಫರ್ಡಿನ್ಯಾಂಡ್ ಮೆಗೆಲನ್. ಅಮೆರಿಕಾ ಭೂಖಂಡಗಳ ಪಶ್ಚಿಮಕ್ಕೆ ಹಾಗೂ ಏಷ್ಯಾ ಮತ್ತು ಆಸ್ಟ್ರೇಲಿಯಾ ಭೂಖಂಡಗಳ ಪೂರ್ವದ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ಈ ಅಗಾಧ ಜಲರಾಶಿಯು ಭೂಮಿಯ ಒಟ್ಟು ವಿಸ್ತೀರ್ಣದ ೩೫.೨೫% ಪ್ರದೇಶವನ್ನು ಆವರಿಸಿಕೊಂಡಿದೆ. ಇದರ ಅತ್ಯಧಿಕ ಅಗಲ ೧೬,೮೮೦ ಕಿ.ಮೀ. ಅತ್ಯಂತ ಹೆಚ್ಚಿನ ಆಳ ೧೧,೫೧೬ ಮೀ. ( ಮಿಂಡನಾವ್ ಆಳ). ಈ ಸಾಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ದ್ವೀಪಸಮೂಹಗಳಿವೆ. ಇವನ್ನು ಮೈಕ್ರೋನೇಷ್ಯಾ, ಮೆಲಾನೇಷ್ಯಾ ಹಾಗೂ ಪಾಲಿನೇಷ್ಯಾ ಎಂಬುದಾಗಿ ವರ್ಗೀಕರಿಸಲಾಗಿದೆ.