ವೆಲ್ವೆಟ್ ಗಿಡ
Celosia argentea subsp. {{{subspecies}}} | |
---|---|
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಗಣ: | ಕ್ಯಾರ್ಯೋಫಿಲಾಲೀಸ್ |
ಕುಟುಂಬ: | ಅಮರ್‍ಯಾಂತೇಸೀ |
ಕುಲ: | ಸಿಲೋಸಿಯಾ |
ಪ್ರಜಾತಿ: | |
Trinomial name | |
Celosia argentea subsp. {{{subspecies}}} | |
Synonyms | |
ವೆಲ್ವೆಟ್ ಗಿಡ ಅಮರಾಂತೇಸೀ ಕುಟುಂಬದ ಸಿಲೋಸಿಯಾ ಕ್ರಿಸ್ಟೆಟಾ ಎಂಬ ಸಸ್ಯ. ಅಲಂಕಾರಕ್ಕಾಗಿ ಮನೆಯ ಕೈತೋಟ ಮತ್ತು ಉದ್ಯಾನವನಗಳಲ್ಲಿ ಬೆಳೆಸಲಾಗುತ್ತದೆ. ಇದಕ್ಕೆ ಸಂಸ್ಕೃತದಲ್ಲಿ ಮಯೂರಶಿಖ ಎಂದು ಹೆಸರು. ಸಮತಟ್ಟಾದ ಪ್ರದೇಶಗಳಲ್ಲಿ ಮತ್ತು ಸುಮಾರು 1500 ಮೀ ಎತ್ತರದವರೆಗೆ ಹಿಮಾಲಯ ಪ್ರದೇಶದಲ್ಲಿ ಬೆಳೆಯುತ್ತದೆ.
ಸಸ್ಯ ವಿವರಣೆ
[ಬದಲಾಯಿಸಿ]ಇದರಲ್ಲಿ ವಿವಿಧ ಆಕಾರಗಳ, ವಿಚಿತ್ರ ರೂಪಗಳ ಹೂಗೊಂಚಲುಗಳಿರುವುವು. ಒಂದೊಂದು ಗೊಂಚಲಿನಲ್ಲಿಯೂ ಅಸಂಖ್ಯ ಹೂಗಳುಂಟು.
ಸಾಮಾನ್ಯವಾಗಿ 1-2 ಮೀ ಎತ್ತರಕ್ಕೆ ಬೆಳೆಯುವ ಈ ಸಸ್ಯದಲ್ಲಿ ಪ್ರತಿ ಗೆಣ್ಣಿನಲ್ಲಿಯೂ ಒಂದು ಎಲೆ ಇದೆ. ಕಾಂಡದ ತುದಿಯಲ್ಲಿ ಹೂಗೊಂಚಲಿದೆ. ಹೂ ದಳಗಳು ಒಂದು ಸುತ್ತಿನಲ್ಲಿರುತ್ತವೆ. ಮೊದಲ ಸುತ್ತಿನ ಕೇಸರಗಳು 5 ಹಾಗೂ ಎರಡನೆಯ ಸುತ್ತಿನ ಬಂಜೆ ಕೇಸರಗಳು ಒಟ್ಟಿಗೆ ಸೇರಿ ಬಟ್ಟಲಿನಂತಾಗುತ್ತವೆ. ಅಂಡಾಶಯ 2 ಶಲಾಕಾಶಯಗಳಿಂದಾಗಿರುವುದು. ಹೂಗಳು ಫಲಿತಗೊಂಡ ಅನಂತರ ಯುಟ್ರಿಕಲ್ (ಹಣ್ಣು) ಬಿಡುತ್ತವೆ.
ಉಪಯೋಗಗಳು
[ಬದಲಾಯಿಸಿ]ಈ ಗಿಡದ ಎಲೆಗಳನ್ನು ಆಹಾರವಾಗಿ ಬಳಸುತ್ತಾರೆ. ಕಾಂಡದಲ್ಲಿರುವ ರಬ್ಬರಿನಂಥ ನಾರುಗಳಿಂದ ಹಗ್ಗಗಳನ್ನು ತಯಾರಿಸುತ್ತಾರೆ. ಬೀಜಗಳನ್ನು ಮೂತ್ರರೋಗ ಮತ್ತು ಕಫಶಾಮಕವಾಗಿಯೂ ಬಳಸಲಾಗುತ್ತದೆ.
ಛಾಯಾಂಕಣ
[ಬದಲಾಯಿಸಿ]-
Yellow Celosia argentea var. cristata
-
Pink Celosia argentea var. cristata
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "Celosia argentea var. cristata". International Plant Names Index (IPNI) (in ಇಂಗ್ಲಿಷ್). Royal Botanic Gardens, Kew; Harvard University Herbaria & Libraries; Australian National Botanic Gardens. Retrieved 4 July 2012.
- ↑ "Celosia argentea f. cristata (L.) Schinz, Nat. Pflanzenfam., ed. 2 [Engler & Prantl] 16c: 29 (1934)". International Plant Names Index (IPNI) (in ಇಂಗ್ಲಿಷ್). Royal Botanic Gardens, Kew; Harvard University Herbaria & Libraries; Australian National Botanic Gardens. Retrieved 4 July 2012.