ವೆಸ್ಟನ್ ಎ ಪ್ರೈಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು ಉಲ್ಲೇಖಗಳನ್ನು ಸೇರಿಸಿದೆ.
ಚು added image #WPWP
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧ ನೇ ಸಾಲು: ೧ ನೇ ಸಾಲು:
{{Infobox person
{{Infobox person
| name =ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್
| name =ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್
| image =
| image =Westonaprice2.jpg| caption =
| caption =
| birth_name = ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್
| birth_name = ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್
| birth_date = {{birth date|1870|9|6}}
| birth_date = {{birth date|1870|9|6}}

೧೫:೦೭, ೧೪ ಜುಲೈ ೨೦೨೧ ನಂತೆ ಪರಿಷ್ಕರಣೆ

ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್
ಚಿತ್ರ:Westonaprice2.jpg
Born
ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್

(೧೮೭೦-೦೯-೦೬)೬ ಸೆಪ್ಟೆಂಬರ್ ೧೮೭೦
DiedJanuary 23, 1948(1948-01-23) (aged 77)
Alma materಮಿಚಿಗನ್ ವಿಶ್ವವಿದ್ಯಾಲಯ
Occupation(s)ದಂತವೈದ್ಯ, ವೈದ್ಯಕೀಯ ಸಂಶೋಧಕ

ವೆಸ್ಟನ್ ಆಂಡ್ರ್ಯೂ ವಾಲ್ಲಿಯೂ ಪ್ರೈಸ್[೧] (ಸೆಪ್ಟೆಂಬರ್ 6, 1870 – ಜನವರಿ 23, 1948) ಪ್ರಾಥಮಿಕವಾಗಿ ಪೋಷಣೆ, ದಂತದ ಆರೋಗ್ಯ ಮತ್ತು ಭೌತಿಕ ಆರೋಗ್ಯ ಬಗ್ಗೆ ಸಂಬಂಧ ಕಲ್ಪಿಸುವ ಸಿದ್ಧಾಂತವನ್ನು ಮಂಡಿಸಿದ ಒಬ್ಬ ದಂತ ವೈದ್ಯ ಎಂದು ತಿಳಿಯಲ್ಪಡುತ್ತಾನೆ. ಆತನು 'ನ್ಯಾಶನಲ್ ಡೆಂಟಲ್ ಅಸೋಸಿಯೇಶನ್' ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಿದನು. ಅದು ನಂತರ 'ಅಮೇರಿಕನ್ ಡೆಂಟಲ್ ಅಸೋಸಿಯೇಶನ್' ನ ಒಂದು ಭಾಗವಾಯಿತು. ಆತನು 1914 ರಿಂದ 1928 ವರೆಗೆ ಅದರ ಚೇರ್ಮನ್ ಆಗಿದ್ದನು.[೨][೩][೪]


ಪ್ರೈಸ್ ನು ಪ್ರಾರಂಭದಲ್ಲಿ ದಂತದ ಸಂಶೋಧನೆಯನ್ನು 'ಎಂಡೋಡೋಂಟಿಕ್ ಥೆರಪಿ' ಮತ್ತು 'ಪಲ್ಪ ಲೆಸ್ ಟೀತ್ ' ಮತ್ತು ವಿಶಾಲವಾದ ವ್ಯವಸ್ಥೆಯ ರೋಗವಾದ, ಬಹಳಷ್ಟು ಹಲ್ಲುಗಳ ಮತ್ತು ಟಾನ್ಸಿಲ್ ಗಳ ತೆಗೆಯುವುದಕ್ಕೆ ಕಾರಣವಾದ ' ಫೋಕಲ್ ಇನ್ ಪೆಕ್ಷನ್ ಥಿಯರಿ'ಗೆ ಸಂಬಂಧಿಸಿದಂತೆ ಮಾಡಿದನು.

1930ರಲ್ಲಿ ಪ್ರೈಸ್ ನು ತನ್ನ ಆಸಕ್ತಿಯನ್ನು ಪೋಷಣೆಯ ಕಡೆಗೆ ತಿರುಗಿಸಿದನು. 1939ರಲ್ಲಿ ತನ್ನ ಜಾಗತಿಕ ತಿರುಗಾಟದಲ್ಲಿ ಅಭ್ಯಸಿಸಿದ ವಿವಿಧ ಸಂಸ್ಕೃತಿಗಳ ಆಹಾರ ಪದ್ಧತಿ ಮತ್ತು ಪೋಷಣೆಯನ್ನು ವಿವರವಾಗಿ 'ನ್ಯುಟ್ರಿಶನ್ ಆಂಡ್ ಫಿಸಿಕಲ್ ಡಿಜೆನರೇಶನ್' ಎಂಬ ಗ್ರಂಥವನ್ನು ಪ್ರಕಾಶಿಸಿದನು.

ಈ ಪುಸ್ತಕವು ಪಾಶ್ಚಿಮಾತ್ಯ ಆಧುನಿಕ ಆಹಾರ ಪದ್ದತಿಯು(ಮುಖ್ಯವಾಗಿ ಹಿಟ್ಟು, ಸಕ್ಕರೆ ಮತ್ತು ಆಧುನಿಕ ಸಂಸ್ಕರಿತ ಆಹಾರಗಳು) ಪೋಷಣೆಯ ಕೊರತೆಗೆ ಕಾರಣವಾಗಿರುವುದಲ್ಲದೆ, ಬಹಳ ದಂತ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರುವುದು ಎಂದು ನಿಶ್ಚಯಿಸುತ್ತದೆ. ಆತನು ಗಮನಿಸಿದ ದಂತ ಸಮಸ್ಯೆಗಳಲ್ಲಿ ಮುಖದ ಸರಿಯಾದ ರಚನೆಯ(ಹಲ್ಲುಗಳ ಒಂದೇಕಡೆ ಸೇರುವುದನ್ನು ತಪ್ಪಿಸಲು) ಜತೆಗೆ ದಂತ ಕುಳಿಗಳು ಸೇರಿವೆ. ಈ ಕೆಲಸಕ್ಕೆ ಮಿಶ್ರ ಪ್ರತಿಕ್ರಿಯೆಗಳು ಬಂದರೂ, 'ಕಾಂಟ್ರವರ್ಶಿಯಲ್ ಡೆಂಟಿಸ್ಟ್ರಿ' ಮತ್ತು 'ನ್ಯೂಟ್ರಿಶನಲ್ ಥಿಯರಿ' ಸೇರಿದಂತೆ ಈಗ ಬಹಳ ವಿವಿಧ ಸಿದ್ಧಾಂತಗಳನ್ನು ಹುಟ್ಟುಹಾಕಲು ಉಲ್ಲೇಖಿಸಲಾಗುವುದು ಮುಂದುವರೆದಿದೆ.

ಪೂರ್ವ ಜೀವನ

ಪ್ರೈಸ್ ನು ಕೆನಡ ದೇಶದ ಒಂಟಾರಿಯೊದ ನ್ಯೂಬರ್ಗ ನಲ್ಲಿ ದಿನಾಂಕ ಸೆಪ್ಟೆಂಬರ್ 6 ರಂದು 1870 ರಂದು ಜನಿಸಿದನು. ಪ್ರೈಸ್ನು ಮಿಚಿಗನ್ ವಿಶ್ವವಿದ್ಯಾಲಯದ ದಂತವೈದ್ಯ ಕಾಲೇಜಿನಲ್ಲಿ 1893ನೇ ಇಸವಿಯಲ್ಲಿ ಪದವಿ ಪಡೆದನು. ತನ್ನ ವೃತ್ತಿ ಜೀವನವನ್ನು ನಾರ್ಥ ಡಕೋಟದ ಗ್ರಾಂಡ್ ಪೋರ್ಕ್ಸ್ ನಲ್ಲಿ ಪ್ರಾರಂಭಿಸಿದನು. ಅದೆ ವರ್ಷದಲ್ಲಿ ಒಹಿಯೊದ ಕ್ಲೀವ್ಲ್ಯಾಂಡ್ ಗೆ ಸ್ಥಳಾಂತರಗೊಂಡನು.

ಸಂಶೋಧನೆ

ತಂತ್ರಜ್ಞಾನ ಪ್ರಗತಿ

ಪ್ರೈಸ್ನು ದಂತ ರೋಗಗಳಿಗೆ ತಾಂತ್ರಿಕ ಪರಿಹಾರಗಳನ್ನು ವೃದ್ಧಿಸುವತ್ತ ಸಂಶೋಧನೆಯನ್ನು ಮಾಡಿದನು. ಆತನು ಲೋಹ ಮತ್ತು ಪಿಂಗಾಣಿಯನ್ನು ಒಂದುಗೂಡಿಸಿದ ಪಿಂಗಾಣಿಯ ಕೆತ್ತನೆಗಳನ್ನು ತಯಾರಿಸಲು 'ಪೈರೋಮೀಟರ್ ಡೆಂಟಲ್ ಪರ್ನಾಸ್' ಎಂಬ ಉಪಕರಣವನ್ನು ಕಂಡುಹಿಡಿದು ಅಭಿವೃದ್ಧಿ ಪಡಿಸಿದನು. ಆತನು 1900ರ ಪೂರ್ವದಲ್ಲಿ ದಂತ 'ಸ್ಕಿಯಾಗ್ರಾಪ್' ತಯಾರಿಸುವ ಸುಧಾರಣೆಯಲ್ಲಿ ಸಂಶೋಧನೆಯನ್ನು ಮಾಡಿದನು ಮತ್ತು ಕ್ಯಾನ್ಸರ್ ಮೇಲೆ ಎಕ್ಸ್ ರೇ ಪರಿಣಾಮವನ್ನು ಅಧ್ಯಯನ ಮಾಡಲು ವಿಶೇಷ ಉಪಕರಣಗಳನ್ನು ಅಭಿವೃದ್ಧಿ ಪಡಿಸಿದನು. ಆತನ ಹೆಚ್ಚಿನ ಕೆಲಸಗಳು ಆತನು ಸದಸ್ಯನಾದ ವಿವಿಧ ವೃತ್ತಿಪರ ಸೊಸೈಟಿಗಳಲ್ಲಿ ತೋರಿಸಲ್ಪಟ್ಟಿದೆ. ಆತನ ರೇಡಿಯೊಗ್ರಾಪ್ಗಳ ಕೆಲಸಗಳಲ್ಲಿ ದಂತ ಅಧ್ಯಯನಕ್ಕಾಗಿ ಅಗ್ರಗಾಮಿಯಾದ ಹೊಸ ರೇಡಿಯಾಲಜಿಯ ತಂತ್ರ ಮತ್ತು ಎಂಡೋಡೋಂಟಿಕ್ ಚಿಕಿತ್ಸೆ ಪಡೆದ ಹಲ್ಲುಗಳ ವಿಚ್ಛೇದಗಳು ಸೇರಿವೆ. ಆತನ 1904ರ ಸಮನಾಂತರ ಮತ್ತು ಕೋನ ದ್ವಿಭಾಗಿಸುವ ತಂತ್ರ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಡಾ. ಗೊರ್ಡನ್ ಪಿಟ್ಜಗೆರಾಲ್ಡ್ನ ಕೆಲಸವಾಗುವರೆಗೆ 1940ರ ಕೊನೆಯ ಭಾಗದವರೆಗೆ ಜನಪ್ರಿಯ ವಾಗಲಿಲ್ಲ. ದಂತವೈದ್ಯರು ಹಿಂದಿನ ದಂತ ಚಿಕಿತ್ಸೆಗಳ ಸಾಕ್ಷಿಯನ್ನು ಕೊನೆಯಲ್ಲಿ ನೋಡಲು ಸಾದ್ಯವಾಗುವುದರಿಂದ ರೇಡಿಯೊಗ್ರಾಪ್ಗಳ ಉಪಯೋಗದ ರೂಢಿಯು ದಂತವೈದ್ಯ(ಡೆಂಟಿಸ್ಟ್ರಿ)ದಲ್ಲಿ ಒಂದು ಹೊಸ ಶಕೆಯನ್ನು ಪ್ರಾರಂಭಿಸಿತು.

ಎಂಡೋಡೋಂಟಿಕ್ಸ್ ಮತ್ತು ಸೋಂಕು ಕೇಂದ್ರಿತ

ಪ್ರೈಸ್ನು ಪಲ್ಪ ಲೆಸ್ ಮತ್ತು ಎಂಡೋಡೋಂಟಿಕ್ ಚಿಕಿತ್ಸೆ ಪಡೆದ ಹಲ್ಲುಗಳ ಮೇಲೆ ಸಂಶೋಧನೆಯನ್ನು ಮಾಡುವಲ್ಲಿ ತನ್ನ ವೃತ್ತಿಗತಿಯ 25 ವರ್ಷಗಳನ್ನು ಕಳೆದನು. ಇವುಗಳು ಸೋಂಕು ಕೇಂದ್ರಿತ ಸಿದ್ಧಾಂತ(ಫೋಕಲ್ ಇನ್ ಪೆಕ್ಷನ್ ಥಿಯರಿ)ವನ್ನು ಬೆಂಬಲಿಸಿದವು. ಇದರ ಪ್ರಕಾರ, ಮೈಬಣ್ಣ, ಕರುಳಿನ ತೊಂದರೆಗಳು ಮತ್ತು ರಕ್ತಹೀನತೆ ಸೇರಿದಂತೆ ಮೈಸ್ಥಿತಿಗಳನ್ನು ಬಾಯಿಯ ಸೋಂಕುಗಳ ಮೂಲಕ ವಿವರಿಸಬಹುದು. ಈ ಸಿದ್ಧಾಂತದ ಪ್ರಕಾರ, ಸಾಮಾನ್ಯವಾಗಿ ರೋಗ ಪೀಡಿತವಾಗುವುದನ್ನು ತಡೆಯಲು, ಸೋಂಕು ತಗುಲಿದ ಹಲ್ಲುಗಳನ್ನು ರೂಟ್ ಕ್ಯಾನಲ್ ಮಾಡುವುದಕ್ಕಿಂತಲೂ, ದಂತ ಕೀಳುವಿಕೆಯ ಮೂಲಕ ಚಿಕಿತ್ಸೆ ಮಾಡುವುದು ಒಳಿತು. ಆತನ ಸಂಶೋಧನೆಗೆ ತಳಹದಿಯಾದ ಸ್ಥಿತಿಯ ವರದಿಗಳು ಮತ್ತು ಇಲಿಗಳ ಮೇಲೆ ಮಾಡಿದ 'ಪ್ರಾಣಿ ಅಧ್ಯಯನ'ಗಳು, ಮುಖ್ಯವಲ್ಲದ ಪಲ್ಪ ಇರುವ ಹಲ್ಲುಗಳನ್ನು ತೆಗೆದುಹಾಕಿದ ನಂತರ ನಾಟಕೀಯವಾಗಿ ಸುಧಾರಣೆಯನ್ನು ತೋರಿಸಿದೆಯೆಂದು ಪ್ರತಿಪಾದಿಸುತ್ತವೆ. ಪ್ರೈಸ್ನ ಸಂಶೋಧನೆಯು 1920ರ ದಂತ ಸಾಹಿತ್ಯದ ವಿಶಾಲವಾದ ಕೋಶದಲ್ಲಿ ಅಡಕವಾಗಲ್ಪಟ್ಟಿದೆಯಲ್ಲದೆ, ಸೋಂಕು ತಗುಲಿದ ಹಲ್ಲುಗಳನ್ನು ಎಂಡೋಡೋಂಟಿಕ್ ಚಿಕಿತ್ಸೆ ಮಾಡುವುದಕ್ಕಿಂತಲೂ ಎಲ್ಲಾ ಕಡೆ ಒಪ್ಪಿಗೆಯಾದ ದಂತ ಕೀಳುವಿಕೆಯ ರೂಢಿಯು ಇದರ ಕಾಣಿಕೆಯಾಗಿದೆ. ಪ್ರೈಸ್ನ 1925 ರಲ್ಲಿ ಪ್ರಕಾಶಿತ 'ಡೆಂಟಲ್ ಇನ್ಪೆಕ್ಶನ್ಸ್ ಆಂಡ್ ರಿಲೇಟೆಡ್ ಡಿಜೆನೆರೇಟಿವ್ ಡಿಸೀಸಸ್' ನಲ್ಲಿನ 'ಪéಾಲ್ಟೀ ಬ್ಯಾಕ್ಟಿರಿಯಲ್ ಟೆಕ್ನಿಕ್', 1927ರಲ್ಲಿ ಪುನರ್ವಿಚಾರಕ್ಕೆ ಒಳಪಟ್ಟು, ವಿವಾದಗಳಿದ್ದರೂ, ಆತನ 'ಡೆಂಟಲ್ ಇನ್ಪೆಕ್ಶನ್ಸ್, ಓರಲ್ ಆಂಡ್ ಸಿಸ್ಟೆಮಿಕ್' 1930ರ ಮದ್ಯದಲ್ಲಿ ಪ್ರಕಾಶಗೊಂಡ ಪಠ್ಯಪುಸ್ತಕಗಳಲ್ಲಿ ಉಲ್ಲೇಖಗಳಾಗಿ ಮತ್ತು ರೋಗಪರೀಕ್ಷೆಗಳ ದಾರಿತೋರಿಕೆಗಳಾಗಿದ್ದವು.

ಪ್ರೈಸ್ನು ಕ್ಯಾಲಿಪೋರ್ನಿಯಾದ ಸಂಟಾ ಮೋನಿಕಾದಲ್ಲಿ ತೀರಿಹೋದ ಮೂರು ವರ್ಷಗಳ ನಂತರ, 'ಜರ್ನಲ್ ಆಪ್ ದಿ ಅಮೆರಿಕನ್ ಡೆಂಟಲ್ ಅಸೋಸಿಯೇಷಿನ್'ನ ಒಂದು ವಿಶೇಷ ಪುನಾವಲೋಕನಾ ಬಿಡುಗಡೆಯಲ್ಲಿ ಲಕ್ಷದ ಪ್ರಮಾಣವನ್ನು 'ತೆಗೆದುಹಾಕುವಿಕೆ'ಯಿಂದ 'ಎಂಡೋ ಡೆಂಟಲ್ ಡೆಂಟಿಸಿ'್ಟ್ರಗೆ ಬದಲಾಯಿಸಿರುವುದನ್ನು ಒಪ್ಪಿಕೊಂಡಿತು. ಆಧುನಿಕ ಸಂಶೋಧನೆಗೆ ಹೋಲಿಸಿದರೆ, ಪ್ರೈಸ್ನ ಅಧ್ಯಯನಗಳು ಸರಿಯಾದ ಕಂಟ್ರೋಲ್ ಗ್ರೂಪ್ ಗಳಿಲ್ಲದೆ ಸೊರಗುವುದಲ್ಲದೆ, ಅತಿಹೆಚ್ಚಿನ ಬ್ಯಾಕ್ಟಿರಿಯಾದ ಬಳಕೆಯು 'ಹಲ್ಲುಗಳನ್ನು ತೆಗೆದುಹಾಕಿದ' ಸಂದರ್ಭದಲ್ಲಿ ಬ್ಯಾಕ್ಟಿರಿಯಾದಿಂದ ಮಲಿನಗೊಂಡಿರುವುದು ಪ್ರಾಯೋಗಿಕ ಪಕ್ಷಪಾತಕ್ಕೆ ಕಾರಣವಾಯಿತು.

ಇವುಗಳನ್ನೂ ನೋಡಿ

ಉಲ್ಲೇಖಗಳು

  1. name="history">Ambler, Henry Lovejoy (1911). History of Denistry in Cleveland, Ohio. pp. 44–56.
  2. "Weston A Price" New York Times Jan 24, 1948
  3. (1925) The Nebraska State Medical Journal, Volume 10, Issue 6; pg 205
  4. (1928) British Journal of Dental Science Volumes 72–73; Page 101


ಬಾಹ್ಯ ಕೊಂಡಿಗಳು