ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಕೊಂಡಿಯನ್ನು ಸರಿಪಡಿಸಿದ್ದೇನೆ.
ಚು added image #WPWP
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨ ನೇ ಸಾಲು: ೨ ನೇ ಸಾಲು:
{{Infobox person
{{Infobox person
|name =ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್'
|name =ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್'
|image =
|image =Frederick William Stevens.jpg|caption =
|caption =
|birth_date =೧೧ ನವಂಬರ್ ೧೮೪೭
|birth_date =೧೧ ನವಂಬರ್ ೧೮೪೭
|birth_place =[[ಬಾತ್,ಸಾಮರ್‍ಸೆಟ್]],ಯು.ಕೆ
|birth_place =[[ಬಾತ್,ಸಾಮರ್‍ಸೆಟ್]],ಯು.ಕೆ

೧೫:೦೪, ೧೪ ಜುಲೈ ೨೦೨೧ ನಂತೆ ಪರಿಷ್ಕರಣೆ

ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್'
Born೧೧ ನವಂಬರ್ ೧೮೪೭
Died೩ ಮಾರ್ಚ್ ೧೯೦೦ (ಪ್ರಾಯ ೫೨)
ಮುಂಬಯಿ,ಭಾರತ
Years active1870s-1890s

(ನವೆಂಬರ್ ೧೧, ೧೮೪೭-ಮಾರ್ಚ್ ೩, ೧೯೦೦)

ಫ್ರೆಡರಿಕ್ ವಿಲಿಯಮ್ ಸ್ಟೀವೆನ್ಸ್, [೧]ಇಂಗ್ಲೆಂಡ್ ನ, 'ಬಾತ್, 'ಎಂಬ ಊರಿನಲ್ಲಿ (ನವೆಂಬರ್, ೧೧, ೧೮೪೭ ರಲ್ಲಿ ಹುಟ್ಟಿದರು. ೧೮೬೨, ರಲ್ಲಿ ಮುಂಬಯಿನ ಬ್ರಿಟಿಷ್ ಸರ್ಕಾರದ, ಆಫೀಸ್, ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ ನವರನ್ನು [೨] ಟ್ರೇನಿ ಎಂಜಿನಿಯರ್, ಆಗಿ ನೇಮಕ ಮಾಡಿದ್ದರು. ೧೮೬೭ ರಲ್ಲಿ, ಆಗಿನ, ಬ್ರಿಟಿಷ್ ಭಾರತದ, 'ಪಬ್ಲಿಕ್ ವರ್ಕ್ಸ್ ಡಿಪಾರ್ಟ್ ಮೆಂಟ್ ಗೆ,' ಸೇರಿದ ಇಂಜಿನಿಯರ್ ಆಗಿ, ಕೆಲಸಮಾಡಿದರು. ಇದಕ್ಕೆ ಮೊದಲು, 'ಪೂನ'ದಲ್ಲಿ ಒಂದು ವರ್ಷ ಕೆಲಸಮಾಡಿದ್ದರು. ಆಮೇಲೆ ಮುಂಬಯಿನ ಆರ್ಕಿಟೆಕ್ಟ್ ಆಫೀಸಿಗೆ ವರ್ಗಮಾಡಿದರು. ೧೮೭೭ ರಲ್ಲಿ ಅವರ ಸೇವೆ (GIP Railway) ಜಿ ಐ.ಪಿ ರೈಲ್ವೆ), ಗೆ ವರ್ಗಾಯಿಸಲ್ಪಟ್ಟಿತು. 'ವಿಕ್ಟೋರಿಯ ಟರ್ಮಿನಸ್,' ಕಟ್ಟಲು. ಸಿಮೆಂಟ್ ಕಾಂಕ್ರೀಟ್, ಇನ್ನೂ ಗೊತ್ತಿಲ್ಲದ ಕಾಲದಲ್ಲಿ, ಕೇವಲ, ಗಾರೆ, ಕಬ್ಬಿಣದ ಕಂಬಗಳು, ಕಮಾನುಗಳು, ಟಿಂಟೆಡ್ ಗಾಜಿನ ಬೃಹತ್ ಗೋಡೆಗಳು, ಮತ್ತು ಕಲ್ಲು-ಚಪ್ಪಡಿಗಳಿಂದ, ನಿರ್ಮಿತವಾದ, 'ಭವ್ಯ ಚರ್ಚ್ ಮಾದರಿ,' ಕಟ್ಟಡವನ್ನು ನೋಡಲು ಕಣ್ಣುಸಾಲದು. ಭಾರತದ ಕಟ್ಟಡಗಳಲ್ಲಿ, 'ತಾಜ್ ಮಹಲ್,' ಬಿಟ್ಟರೆ, ಅತಿಹೆಚ್ಚು ಫೋಟೊ ಚಿತ್ರತೆಗೆದ, ಕಟ್ಟಡವೆಂದರೆ, 'ಮುಂಬಯಿನ ವಿಕ್ಟೋರಿಯ ಟರ್ಮಿನಸ್'. (ಈಗ ಇದರ ಹೆಸರನ್ನು "ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಸ್ಟೇಶನ್ ಎಂದು ಹೆಸರನ್ನು ಬದಲಾಯಿಸಲಾಗಿದೆ)

ಭಾರತದಲ್ಲಿ ಪ್ರಥಮ ರೈಲ್ವೆ ಸಾರಿಗೆ ವ್ಯವಸ್ಥೆ,

ರೈಲ್ವೆ ಸಾರಿಗೆ ವ್ಯವಸ್ಥೆಯ ರೂಪು-ರೇಷೆಗಳು ಇಂಗ್ಲೆಂಡ್ ನಲ್ಲೂ ಸರಿಯಾಗಿ ರೂಪುಗೊಳ್ಳದ ಕಾಲದಲ್ಲಿ, ಭಾರತದ ವಾಣಿಜ್ಯ ರಾಜಧಾನಿ ಬೊಂಬಾಯಿನ 'ವೀ. ಟಿ,' ಯಿಂದ 'ಠಾಣೆ,' ವರೆಗಿನ, ೩೪ ಕಿ. ಮೀಟರ್ ಗಳ, ಐತಿಹಾಸಿಕ ಪ್ರಯಾಣವಾಗಿತ್ತು. ನಂತರ ಆ ಜಾಗದಲ್ಲೇ, ಬೃಹತ್ ರೈಲು-ಟರ್ಮಿನಸ್ ನ್ನು ನಿರ್ಮಿಸಲು, ನೀಲ-ನಕ್ಷೆಯನ್ನು ತಯಾರುಮಾಡಲಾಯಿತು. 'ಫ್ರೆಡರಿಕ್ ವಿಲಿಯಮ್ ಸ್ಟೀವನ್ಸ್', ರವರು ವಿಶ್ವದ ಅತಿ ಭವ್ಯಕಟ್ಟಡಗಳಲ್ಲೊಂದಾದ, "ವಿಕ್ಟೋರಿಯ ಟರ್ಮಿನಸ್ " ನ್ನು ನಿರ್ಮಿಸಿದರು. ೧೨೫ ವರ್ಷಗಳಾದರೂ ಇಂದಿಗೂ ಸುಭದ್ರವಾಗಿದ್ದು, ಕಂಗೊಳಿಸುತ್ತಿರುವ ಮಹಲ್, 'ಬ್ರಿಟಿಷ್ ಆಸಕ್ತಿ', 'ಕಾರ್ಯತತ್ಪರತೆ,' ಹಾಗೂ 'ವೈಭವ ಪ್ರದರ್ಶನ,' ದ ಪ್ರತೀಕವಾಗಿದೆ.

ನಿಧನ

ಮಾರ್ಚ್, ೩, ೧೯೦೦ ರಲ್ಲಿ, ವಿಲಿಯಮ್ ಸ್ಟೀವೆನ್ಸ್,'ತೀವ್ರವಾದ ಮಲೇರಿಯ ಜ್ವರದಿಂದ, ನರಳಿ ಮುಂಬಯಿನಲ್ಲಿ ಮರಣಹೊಂದಿದರು. ಅವರ ಪಾರ್ಥಿವ ಶರೀರವನ್ನು, ಮುಂಬಯಿನ 'ಸಿವ್ರಿ ಸಿಮೆಟ್ರಿ,' ಯಲ್ಲಿ ದಫನಾಯಿಸಲಾಯಿತು.

ಉಲ್ಲೇಖಗಳು

  1. The Post Office London Directory frederic williams stevens
  2. Frederick William Stevens (1847–1900)

ಬಾಹ್ಯ ಸಂಪರ್ಕಗಳು

  1. Frederick_William_Stevens,English Wikipedia
  2. Great-great-granddaughter of CST architect Frederick William Stevens visits his grave