ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್
ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ್' | |
---|---|
Born | ೧೧ ನವಂಬರ್ ೧೮೪೭ ಬಾತ್,ಸಾಮರ್ಸೆಟ್,ಯು.ಕೆ |
Died | ೩ ಮಾರ್ಚ್ ೧೯೦೦ (ಪ್ರಾಯ ೫೨) ಮುಂಬಯಿ,ಭಾರತ |
Years active | 1870s-1890s |
(ನವೆಂಬರ್ ೧೧, ೧೮೪೭-ಮಾರ್ಚ್ ೩, ೧೯೦೦)
ಫ್ರೆಡರಿಕ್ ವಿಲಿಯಮ್ ಸ್ಟೀವೆನ್ಸ್, [೧]ಇಂಗ್ಲೆಂಡ್ ನ, 'ಬಾತ್, 'ಎಂಬ ಊರಿನಲ್ಲಿ (ನವೆಂಬರ್, ೧೧, ೧೮೪೭ ರಲ್ಲಿ ಹುಟ್ಟಿದರು. ೧೮೬೨, ರಲ್ಲಿ ಮುಂಬಯಿನ ಬ್ರಿಟಿಷ್ ಸರ್ಕಾರದ, ಆಫೀಸ್, ಫ್ರೆಡೆರಿಕ್ ವಿಲಿಯಮ್ ಸ್ಟೀವೆನ್ಸ ನವರನ್ನು [೨] ಟ್ರೇನಿ ಎಂಜಿನಿಯರ್, ಆಗಿ ನೇಮಕ ಮಾಡಿದ್ದರು. ೧೮೬೭ ರಲ್ಲಿ, ಆಗಿನ, ಬ್ರಿಟಿಷ್ ಭಾರತದ, 'ಪಬ್ಲಿಕ್ ವರ್ಕ್ಸ್ ಡಿಪಾರ್ಟ್ ಮೆಂಟ್ ಗೆ,' ಸೇರಿದ ಇಂಜಿನಿಯರ್ ಆಗಿ, ಕೆಲಸಮಾಡಿದರು. ಇದಕ್ಕೆ ಮೊದಲು, 'ಪೂನ'ದಲ್ಲಿ ಒಂದು ವರ್ಷ ಕೆಲಸಮಾಡಿದ್ದರು. ಆಮೇಲೆ ಮುಂಬಯಿನ ಆರ್ಕಿಟೆಕ್ಟ್ ಆಫೀಸಿಗೆ ವರ್ಗಮಾಡಿದರು. ೧೮೭೭ ರಲ್ಲಿ ಅವರ ಸೇವೆ (GIP Railway) ಜಿ ಐ.ಪಿ ರೈಲ್ವೆ), ಗೆ ವರ್ಗಾಯಿಸಲ್ಪಟ್ಟಿತು. 'ವಿಕ್ಟೋರಿಯ ಟರ್ಮಿನಸ್,' ಕಟ್ಟಲು. ಸಿಮೆಂಟ್ ಕಾಂಕ್ರೀಟ್, ಇನ್ನೂ ಗೊತ್ತಿಲ್ಲದ ಕಾಲದಲ್ಲಿ, ಕೇವಲ, ಗಾರೆ, ಕಬ್ಬಿಣದ ಕಂಬಗಳು, ಕಮಾನುಗಳು, ಟಿಂಟೆಡ್ ಗಾಜಿನ ಬೃಹತ್ ಗೋಡೆಗಳು, ಮತ್ತು ಕಲ್ಲು-ಚಪ್ಪಡಿಗಳಿಂದ, ನಿರ್ಮಿತವಾದ, 'ಭವ್ಯ ಚರ್ಚ್ ಮಾದರಿ,' ಕಟ್ಟಡವನ್ನು ನೋಡಲು ಕಣ್ಣುಸಾಲದು. ಭಾರತದ ಕಟ್ಟಡಗಳಲ್ಲಿ, 'ತಾಜ್ ಮಹಲ್,' ಬಿಟ್ಟರೆ, ಅತಿಹೆಚ್ಚು ಫೋಟೊ ಚಿತ್ರತೆಗೆದ, ಕಟ್ಟಡವೆಂದರೆ, 'ಮುಂಬಯಿನ ವಿಕ್ಟೋರಿಯ ಟರ್ಮಿನಸ್'. (ಈಗ ಇದರ ಹೆಸರನ್ನು "ಛತ್ರಪತಿ ಶಿವಾಜಿ ಮಹಾರಾಜ್ ರೈಲ್ವೆ ಸ್ಟೇಶನ್ ಎಂದು ಹೆಸರನ್ನು ಬದಲಾಯಿಸಲಾಗಿದೆ)
ಭಾರತದಲ್ಲಿ ಪ್ರಥಮ ರೈಲ್ವೆ ಸಾರಿಗೆ ವ್ಯವಸ್ಥೆ,
[ಬದಲಾಯಿಸಿ]ರೈಲ್ವೆ ಸಾರಿಗೆ ವ್ಯವಸ್ಥೆಯ ರೂಪು-ರೇಷೆಗಳು ಇಂಗ್ಲೆಂಡ್ ನಲ್ಲೂ ಸರಿಯಾಗಿ ರೂಪುಗೊಳ್ಳದ ಕಾಲದಲ್ಲಿ, ಭಾರತದ ವಾಣಿಜ್ಯ ರಾಜಧಾನಿ ಬೊಂಬಾಯಿನ 'ವೀ. ಟಿ,' ಯಿಂದ 'ಠಾಣೆ,' ವರೆಗಿನ, ೩೪ ಕಿ. ಮೀಟರ್ ಗಳ, ಐತಿಹಾಸಿಕ ಪ್ರಯಾಣವಾಗಿತ್ತು. ನಂತರ ಆ ಜಾಗದಲ್ಲೇ, ಬೃಹತ್ ರೈಲು-ಟರ್ಮಿನಸ್ ನ್ನು ನಿರ್ಮಿಸಲು, ನೀಲ-ನಕ್ಷೆಯನ್ನು ತಯಾರುಮಾಡಲಾಯಿತು. 'ಫ್ರೆಡರಿಕ್ ವಿಲಿಯಮ್ ಸ್ಟೀವನ್ಸ್', ರವರು ವಿಶ್ವದ ಅತಿ ಭವ್ಯಕಟ್ಟಡಗಳಲ್ಲೊಂದಾದ, "ವಿಕ್ಟೋರಿಯ ಟರ್ಮಿನಸ್ " ನ್ನು ನಿರ್ಮಿಸಿದರು. ೧೨೫ ವರ್ಷಗಳಾದರೂ ಇಂದಿಗೂ ಸುಭದ್ರವಾಗಿದ್ದು, ಕಂಗೊಳಿಸುತ್ತಿರುವ ಮಹಲ್, 'ಬ್ರಿಟಿಷ್ ಆಸಕ್ತಿ', 'ಕಾರ್ಯತತ್ಪರತೆ,' ಹಾಗೂ 'ವೈಭವ ಪ್ರದರ್ಶನ,' ದ ಪ್ರತೀಕವಾಗಿದೆ.
- 'ಮ್ಯುನಿಸಿಪಲ್ ಕಾರ್ಪೊರೇಷನ್ ಆಫ್ ಇಂಡಿಯ,' ಭಾರತದ ಗೋಥಿಕ್ ಶೈಲಿಯಲ್ಲಿ, ಕಟ್ಟಡವನ್ನೂ ನಿರ್ಮಿಸಿದ್ದಾರೆ.
- 'ರಾಯಲ್ ಆಲ್ ಪ್ಫ್ರೆಡ್ ಸೇಲರ್ಸ್ ಹೋಮ್',
- 'ಅಪ್ಪೊಲೊ ಬಂದರ್ ಪೋಸ್ಟ್ ಆಫೀಸ್', ಮ್ಯುಸ್,
- 'ಚರ್ಚ್ ಗೇಟ್,' ನ ಪ್ರಧಾನ ರೈಲ್ವೆ ಕಛೇರಿ, (ಬಿ.ಬಿ. ಮತ್ತು ಸಿ.ಐ ನ).
- 'ಓರಿಯೆಂಟಲ್ ಲೈಫ್ ಅಶ್ಶೂ ರೆನ್ಸ್,' ಆಫೀಸಸ್, (ಇದು, 'ಫ್ಲೋರಾ ಫೌಂಟೆನ್,' ನ ಬಳಿ ಇದೆ)
ನಿಧನ
[ಬದಲಾಯಿಸಿ]ಮಾರ್ಚ್, ೩, ೧೯೦೦ ರಲ್ಲಿ, ವಿಲಿಯಮ್ ಸ್ಟೀವೆನ್ಸ್,'ತೀವ್ರವಾದ ಮಲೇರಿಯ ಜ್ವರದಿಂದ, ನರಳಿ ಮುಂಬಯಿನಲ್ಲಿ ಮರಣಹೊಂದಿದರು. ಅವರ ಪಾರ್ಥಿವ ಶರೀರವನ್ನು, ಮುಂಬಯಿನ 'ಸಿವ್ರಿ ಸಿಮೆಟ್ರಿ,' ಯಲ್ಲಿ ದಫನಾಯಿಸಲಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ The Post Office London Directory frederic williams stevens
- ↑ Frederick William Stevens (1847–1900)