ವಿಷಯಕ್ಕೆ ಹೋಗು

ವಿ. ಮುನಿವೆಂಕಟಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ವಿ.ಮುನಿವೆಂಕಟಪ್ಪ[] ಕನ್ನಡದ ಕವಿ[], ವಿಮರ್ಶಕ, ಪ್ರಬುದ್ಧ ಚಿಂತಕ, ಸಂಶೋಧಕ, ಬಂಡಾಯ ಸಾಹಿತಿ[], ಹೋರಾಟಗಾರ - ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು. ಡಾ.ವಿ.ಮುನಿವೆಂಕಟಪ್ಪ[]ನವರಿಗೆ ಬರವಣಿಗೆ ಬಂಡೇಳುವ ಪ್ರಮುಖ ಅಸ್ತ್ರವಾಯಿತು.

ಜನನ/ಜೀವನ

[ಬದಲಾಯಿಸಿ]

ಇವರು ಕೋಲಾರ ತಾಲ್ಲೋಕಿನ ಯಡಹಳ್ಳಿಯಲ್ಲಿ ೧೯೪೯ ಏಪ್ರಿಲ್ ೧೦ ರಂದು ಬಡ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ವೆಂಕಟಗಿರಿಯಮ್ಮ. ವಿಜ್ಞಾನ ಪದವೀಧರರು. ಕಷ್ಟಪಟ್ಟು ಕೃಷಿ ವಿಷಯದಲ್ಲಿ ಎಂ.ಎಸ್ಸಿ ಪದವಿ ಗಳಿಸಿ, ಅನಂತರ ಗಂಭೀರ ಅಧ್ಯಯನ ನಡೆಸಿ ಕೃಷಿ ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿ ಪಡೆದರು. ಬಿ.ಇ.ಡಿ ಸರ್ಕಾರಿ ಅಧಿಕಾರಿಯಾಗಿದ್ದರು. ೧೯೬೮ರಲ್ಲಿ ಡಿ.ತಿಮ್ಮರಾಯಪ್ಪನವರ ನೇತೃತ್ವದಲ್ಲಿ ದಲಿತ ಕ್ರಿಯಾ ಸಮಿತಿ ಮತ್ತು ದಲಿತ ಸಂಘರ್ಷ ಸಮಿತಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.

ನಿರ್ವಹಿಸಿದ ಕರ್ತವ್ಯಗಳು

[ಬದಲಾಯಿಸಿ]
  1. ಕರ್ನಾಟಕ ದಲಿತ ಲೇಖಕ-ಕಲಾವಿದರ ಬಳಗದ ಸಂಚಾಲಕರಾಗಿ
  2. ಕರ್ನಾಟಕ ವಿಚಾರವಾದಿ ಒಕ್ಕೂಟದ ಅಧ್ಯಕ್ಷರಾಗಿ
  3. ಮೈಸೂರಿನ ಚೇತನ ಟ್ರಸ್ಟ್ ನ ಅಧ್ಯಕ್ಷರಾಗಿ
  4. ದಲಿತ ಸಾಹಿತ್ಯ ಸಂಘಟನೆಯ ಸಕ್ರಿಯ ಸದಸ್ಯರು
  5. ಬಂಡಾಯ ಸಾಹಿತ್ಯ ಸಂಘಟನೆಯ ಸಕ್ರಿಯ ಸದಸ್ಯರು
  6. ಕರ್ನಾಟಕ ದಲಿತ ಚಳುವಳಿಯ ಸ್ಥಾಪಕ ಸದಸ್ಯರು

ಸಾಹಿತ್ಯ ಸೇವೆ

[ಬದಲಾಯಿಸಿ]

ಕಾವ್ಯ ಕೃತಿಗಳು

[ಬದಲಾಯಿಸಿ]
  1. ಕೆಂಡದ ನಡುವೆ -೧೯೮೨
  2. ಸ್ವಾಭಿಮಾನದ ಬೀಡಿಗೆ-೧೯೮೯
  3. ಕಾಡು ಕಣಿವೆಯ ಹಕ್ಕಿ-೨೦೦೦
  4. ಬುದ್ಧ ಮತ್ತು ಅಂಗುಲಿ ಮಾಲ-

ನಾಟಕಗಳು

[ಬದಲಾಯಿಸಿ]
  1. ಬಾಲಕ ಅಂಬೇಡ್ಕರ್
  2. ಮಹಾಚೇತನ ಅಂಬೇಡ್ಕರ್
  3. ಐಕ್ಯಗೀತೆ[]

ಸಂಪಾದಿತ ಕೃತಿಗಳು

[ಬದಲಾಯಿಸಿ]
  1. ದಲಿತ ಚಳುವಳಿ-ಒಂದು ಅವಲೋಕನ-೧೯೯೮
  2. ದಲಿತ ಸಾಹಿತ್ಯ ದರ್ಶನ[]
  3. ದಲಿತ ಚೇತನ
  4. ಬಹುಜನ ಕಾವ್ಯ
  5. ಮತಾಂತರ ಮತ್ತು ಇತರ ಲೇಖನಗಳು
  6. ದಲಿತ ಸಾಹಿತ್ಯ ಸಂವಾದ
  7. ದಲಿತ ಚಳುವಳಿ ಮತ್ತು ಸಾಹಿತ್ಯ[]

ಆತ್ಮಕಥೆ

[ಬದಲಾಯಿಸಿ]

ಅಂತ್ಯಜನ ಅಂತರಂಗ

ಸಂಪುಟಗಳು

[ಬದಲಾಯಿಸಿ]

ದಲಿತ ಚಳುವಳಿ ಚರಿತ್ರೆ[]-ಸಂಪುಟ ೧ರಿಂದ ೧೦ರವರೆಗೆ {{colend|2

ಪ್ರಶಸ್ತಿ/ಬಿರುದು/ಗೌರವ ಪುರಸ್ಕಾರ

[ಬದಲಾಯಿಸಿ]
  1. ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ-೧೯೮೮-ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ, ನವದೆಹಲಿ
  2. ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ-೨೦೦೨-ಕರ್ನಾಟಕ ಸರ್ಕಾರದಿಂದ
  3. ಮೈಸೂರು ರತ್ನ ಪ್ರಶಸ್ತಿ-೨೦೦೩-ಮೈಸೂರು ಸಾಂಸ್ಕೃತಿಕ ಪ್ರತಿಷ್ಠಾನ

ಉಲ್ಲೇಖಗಳು

[ಬದಲಾಯಿಸಿ]
  1. http://karnatakasahithyaacademy.org/?page_id=1202
  2. "ಆರ್ಕೈವ್ ನಕಲು". Archived from the original on 2017-06-11. Retrieved 2016-12-30.
  3. http://www.prajavani.net/news/article/2014/10/25/276279.html
  4. http://www.udayavani.com/tags/%E0%B2%B8%E0%B2%BE%E0%B2%B9%E0%B2%BF%E0%B2%A4%E0%B2%BF-%E0%B2%A1%E0%B2%BE-%E0%B2%B5%E0%B2%BF-%E0%B2%AE%E0%B3%81%E0%B2%A8%E0%B2%BF%E0%B2%B5%E0%B3%86%E0%B2%82%E0%B2%95%E0%B2%9F%E0%B2%AA%E0%B3%8D%E0%B2%AA
  5. http://vijaykarnataka.indiatimes.com/district/mysuru/-/articleshow/46413695.cms
  6. http://dinaprakashana.blogspot.in/2014/09/blog-post_15.html
  7. http://mannevishwanath.blogspot.in/2011/05/blog-post_2823.html
  8. http://www.prajavani.net/news/article/2011/05/02/17377.html