ಲತಾ ಹಂಸಲೇಖ
ಲತಾ ಹಂಸಲೇಖ | |
---|---|
ಜನನ | |
ವೃತ್ತಿ |
|
ಸಕ್ರಿಯ ವರ್ಷಗಳು | ೧೯೮೬- ಈವರೆಗೆ |
ಸಂಗಾತಿ | ಹಂಸಲೇಖ |
ಪ್ರಶಸ್ತಿಗಳು | ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ |
Musical career | |
ಸಂಗೀತ ಶೈಲಿ |
|
ಲತಾ ಹಂಸಲೇಖ (ಹುಟ್ಟು: ೧೨ ಡಿಸೆಂಬರ್, ೧೯೫೭), ಕನ್ನಡದಲ್ಲಿ ಹಾಡುವ ಹಿನ್ನೆಲೆಗಾಯಕಿ.[೧][೨] ಚಲನಚಿತ್ರಗೀತೆ, ಜನಪದಗೀತೆ ಮತ್ತು ಭಕ್ತಿಗೀತೆಗಳ ಹಾಡುವಿಕೆಗೆ ಲತಾ ಹೆಸರಾಗಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಹೆಂಡತಿಯಾದ ಇವರು, ಅರುಣೋದಯ ಚಿತ್ರದ ‛ಆ ಅರುಣೋದಯ ಚಂದ’ ಹಾಡಿಗೆ ೧೯೯೯-೨೦೦೦ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಅತ್ತ್ಯುತ್ತಮ ಹಿನ್ನೆಲೆಗಾಯಕಿ ಪ್ರಶಸ್ತಿ ಪಡೆದಿದ್ದಾರೆ.[೩]
ವೈಯಕ್ತಿಕ ಜೀವನ
[ಬದಲಾಯಿಸಿ]ಲತಾ ಹುಟ್ಟಿದ್ದು ೧೨ ಡಿಸೆಂಬರ್ ೧೯೫೭ರಲ್ಲಿ, ಬೆಂಗಳೂರಿನ ಬಸವನಗುಡಿಯಲ್ಲಿ. ತಂದೆ ಮಿತ್ರಾನಂದ ಕುಮಾರ್, ತಾಯಿ ಶಾರದ.
ಲತಾ ಮದುವೆಯಾಗಿದ್ದು ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು. ಇವರಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ.[೪][೫][೬][೭]
ಗಾಯಕಿಯಾಗಿ
[ಬದಲಾಯಿಸಿ]ವೇದಿಕೆ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ಲತಾ ಅವರು, ಹಂಸಲೇಖ ಅವರ ಅಣ್ಣ ಜಿ. ಬಾಲಕೃಷ್ಣ ನಡೆಸುತ್ತಿದ್ದ ‛ಗಾನಶಾರದ ಆರ್ಕೆಸ್ತ್ರಾ’ ತಂಡದಲ್ಲಿನ ಗಾಯಕಿಯಾದರು. [೮] ಬಳಿಕ ಹಂಸಲೇಖ ಸಂಗೀತ ನಿರ್ದೇಶಿಸಿದ ಪ್ರೇಮಲೋಕ ಚಿತ್ರದ ‛ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ’ ಹಾಡನ್ನು ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡುವ ಮೂಲಕ ಚಲನಚಿತ್ರ ಹಿನ್ನೆಲೆಗಾಯಕಿಯಾಗಿ ಮುನ್ನೆಲೆಗೆ ಬಂದರು. ಇದಾದ ಬಳಿಕ ಸಾಕಷ್ಟು ಯಶಸ್ವೀ ಹಾಡುಗಳನ್ನು ಲತಾ ಹಾಡಿದ್ದಾರೆ.
ಎಸ್. ಪಿ. ಬಾಲಸುಬ್ರಹ್ಮಣ್ಯಂ, ಮನೋ, ಕೆ. ಎಸ್. ಚಿತ್ರಾ, ಬಿ. ಆರ್. ಛಾಯಾ, ಮಂಜುಳಾ ಗುರುರಾಜ್, ರಾಜೇಶ್ ಕೃಷ್ಣನ್ ಮುಂತಾದ ಗಾಯಕರೊಂದಿಗೆ ಲತಾ ಹಾಡಿದ್ದಾರೆ.
ಪ್ರಶಸ್ತಿಗಳು
[ಬದಲಾಯಿಸಿ]- ೧೯೯೯-೨೦೦೦ – ಕರ್ನಾಟಕ ರಾಜ್ಯ ಚಲನಚಿತ್ರ ಅತ್ತ್ಯುತ್ತಮ ಹಿನ್ನೆಲೆಗಾಯಕಿ ಪ್ರಶಸ್ತಿ
- ೨೦೧೭ - ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಡಾ. ರಾಜಕುಮಾರ್ ಪ್ರಶಸ್ತಿ[೯]
ಕೆಲವು ಪ್ರಸಿದ್ಧ ಹಾಡುಗಳು
[ಬದಲಾಯಿಸಿ]- ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ (ಪ್ರೇಮಲೋಕ)
- ಹಸಿರುಗಾಜಿನ ಬಳೆಗಳೇ (ಅವನೇ ನನ್ನ ಗಂಡ)
- ಕಾವೇರಿ ತೀರದಲ್ಲಿ ಮುಂಗಾರಿಗೆ (ಚೈತ್ರದ ಪ್ರೇಮಾಂಜಲಿ)
- ಆಕಾರದಲ್ಲಿ ಗುಲಾಬಿ ರಂಗಿದೆ (ಅಂಜದ ಗಂಡು)
- ಮಾವಿನಮರವೇ ಮಾವಿನಮರವೇ ನನ್ನ ಮರೆತೆಯ (ಬಾಳೊಂದು ಭಾವಗೀತೆ)
- ಸಾರು ಸಾರು ಮಿಲ್ಟ್ರಿ ಸಾರು (ಮುತ್ತಿನ ಹಾರ)
- ಹೂವಮ್ಮ ಹೂವಮ್ಮ ನಿನ್ನ ಮನಸು ಹೂವಮ್ಮ (ಮೋಜುಗಾರ ಸೊಗಸುಗಾರ)
- ಕಾಲೇಜಿಗೂ ಥ್ಯಾಂಕ್ಸ್ (ಜೂಟ್)
- ಮನಸೆಲ್ಲಾ ನೀನೇ (ಮನಸೆಲ್ಲಾ ನೀನೇ)
ಮುಂತಾದವು.
ಉಲ್ಲೇಖಗಳು
[ಬದಲಾಯಿಸಿ]- ↑ "Bengaluru gets all women post office on International Women's Day". egov.eletsonline. 11 March 2020. Retrieved 19 April 2021.
- ↑ "Kannada actors, singers to perform at eighth edition of Karunada Sambrama". The New Indian Express. 8 December 2018. Retrieved 19 April 2021.
- ↑ "Shivaraj, Tara, Anu bag State film awards". The Hindu. Chennai, India. 2001-12-17. Archived from the original on 2013-11-02. Retrieved 19 April 2021.
- ↑ Jagadish Angadi (23 October 2020). "Hamsalekha: I learnt my art from folk balladeers". Deccan Herald. Retrieved 19 April 2021.
- ↑ "Hamsalekha family". Tollywood celebrities. Retrieved 19 April 2021.
- ↑ "Hamsalekha : Hits, Audio, Songs, Movies, Full Biography, Age, Family, Awards". Gulabigang official. Retrieved 19 April 2021.
- ↑ "ಲತಾ ಹಂಸಲೇಖ ಜೀವನಚರಿತ್ರೆ" [Latha Hamsalekha biography]. Filmibeat (in Kannada). 19 April 2021.
{{cite news}}
: CS1 maint: unrecognized language (link) - ↑ "ಸಂಗೀತವೇ ನನ್ನ ಜೀವ, ಜೀವಾಳ" [Music is my life, force]. Vijaya Karnataka (in Kannada). 15 November 2015. Retrieved 19 April 2021.
{{cite news}}
: CS1 maint: unrecognized language (link) - ↑ "PHOTOS STEAL THE SHOW AT CHITRAVANI AWARDS". Bangalore Mirror. 30 January 2017. Retrieved 19 April 2021.