ರೂಬಾರ್ಬ್
ರೂಬಾರ್ಬ್ (ರೀಯಮ್ ರಬಾರ್ಬರಮ್) ಪಾಲಿಗೊನೇಸಿಯಿ ಕುಟುಂಬದಲ್ಲಿನ ಸಸ್ಯದ ಒಂದು ಪ್ರಜಾತಿ. ಅದು ಗಿಡ್ಡನೆಯ, ದಪ್ಪ ಬೇರುಕಾಂಡಗಳಿಂದ ಬೆಳೆಯುವ ಒಂದು ಮೂಲಿಕೆಯಂಥ ಬಹುವಾರ್ಷಿಕ ಸಸ್ಯ. ಅದು ಉದ್ದನೆಯ ತಿರುಳಿನಿಂದ ಕೂಡಿದ ಕಾಮುಗಳನ್ನು ಹೊಂದಿರುವ ಸ್ವಲ್ಪ ತ್ರಿಕೋನಾಕಾರದ ದೊಡ್ಡ ಎಲೆಗಳನ್ನು ಮತ್ತು ದೊಡ್ಡ ಸಂಯುಕ್ತ ಎಲೆಯಂಥ ಹಸಿರು ಮಿಶ್ರಿತ ಬಿಳಿಯಿಂದ ಗುಲಾಬಿ ಬಣ್ಣದ ಹೂಗೊಂಚಲುಗಳಲ್ಲಿ ಗುಂಪುಗೂಡಲ್ಪಟ್ಟಿರುವ ಚಿಕ್ಕ ಹೂವುಗಳನ್ನು ಉತ್ಪತ್ತಿ ಮಾಡುತ್ತದೆ. ಅಡಿಗೆ ಬಳಕೆಯಲ್ಲಿ, ತಾಜಾ ಎಳೆಯ ಎಲೆ ಕಾಮುಗಳು (ತೊಟ್ಟುಗಳು) ಗರಿಗರಿಯಾಗಿರುತ್ತವೆ ಮತ್ತು ತೀಕ್ಷ್ಣ, ಒಗರು ರುಚಿಯನ್ನು ಹೊಂದಿರುತ್ತವೆ.[೧]
ಇತರ ಹೆಸರಗಳು
[ಬದಲಾಯಿಸಿ]ರೇವಂಡ್ ಚಿನಿ' ಮೂಲಿಕೆ ಇದನ್ನು ಇಂಡಿಯನ್ ರುಬಾರ್ಬ್ ಎಂದೂ ಕೂಡ ಕರೆಯಲಾಗುತ್ತದೆ. ಆಯುರ್ವೇದದಲ್ಲಿ ಇದಕ್ಕೆ ಆಮ್ಲವೇತಾಸ್ ಎಂದು ಕರೆಯುತ್ತಾರೆ. ಇದು ಅನೇಕ ಗಂಭೀರ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ವಾಸ್ತವದಲ್ಲಿ ಆಮ್ಲವೇತಾಸ ಹಿಮಾಲಯದ ಎತ್ತರದ ಸ್ಥಳಗಳಲ್ಲಿ ಕಂಡುಬರುತ್ತದೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಕಾಶ್ಮೀರ, ಸಿಕ್ಕಿಂ, ಅಸ್ಸಾಂ ಮುಂತಾದ ರಾಜ್ಯಗಳಲ್ಲಿ ಇದು ನಿಮಗೆ ಕಾಣಸಿಗುತ್ತದೆ. ರೇವಂಡ್ ಚೀನಿ ರುಚಿ ಕಹಿಯ ಜೊತೆಗೆ ಕಟುವಾಗಿರುತ್ತದೆ. ಇದರ ಪರಿಣಾಮ ತಣ್ಣಗಿರುತ್ತದೆ. ರೇವಂಡ್ ಚಿನಿಯನ್ನು ಇಂಗ್ಲಿಷ್‌ನಲ್ಲಿ 'Rhubarb' ಎಂದು ಕರೆಯಲಾಗುತ್ತದೆ. ಇದಕ್ಕೆ ವಿವಿಧ ರಾಜ್ಯಗಳಲ್ಲಿ ಡೋಲು, ಅರ್ಚ, ರೇವತಿಕಾ ಇತ್ಯಾದಿ ಹೆಸರುಗಳಿವೆ. ರೆವಂಡ್ ಚೀನಿಯನ್ನು ಔಷಧಿ ತಯಾರಿಸಲು ಶತಮಾನಗಳಿಂದ ಬಳಸಲಾಗುತ್ತಿದೆ. ಇದು ಅನೇಕ ಗಂಭೀರ ಕಾಯಿಲೆಗಳನ್ನು ಬೇರುಸಮೇತ ಕಿತ್ತೆಸೆಯುತ್ತದೆ ಎಂದು ಹೇಳಾಗುತ್ತದೆ.[೨]
ಆರೋಗ್ಯ ಉಪಯೋಗಗಳು
[ಬದಲಾಯಿಸಿ]ಗಾಯಗಳನ್ನು ತ್ವರಿತವಾಗಿ ಗುಣಪಡಿಸಲು ಸಹಾಯಕವಾಗಿದೆ
[ಬದಲಾಯಿಸಿ]ರೆವಂಡ್ ಚೀನಿ ಗಾಯಗಳನ್ನು ತ್ವರಿತವಾಗಿ ಗುಣಪಡಿಸುವ ಕೆಲಸ ಮಾಡುತ್ತದೆ. ಯಾವುದೇ ರೀತಿಯ ಗಾಯದ ಮೇಲೆ ಇದನ್ನು ಬಳಸಬಹುದು. ನೀವು ಮೊದಲು ಅದರ ಬೇರುಗಳನ್ನು ಪುಡಿಮಾಡಿ ನಂತರ ಗಾಯದ ಮೇಲೆ ಅನ್ವಯಿಸಬೇಕು.[೩]
ಹಲ್ಲುನೋವು ಕಡಿಮೆಯಾಗುತ್ತದೆ
[ಬದಲಾಯಿಸಿ]ರೇವಂಡ್ ಚೀನಿ ಹಲ್ಲುನೋವಿನಿಂದ ಪರಿಹಾರವನ್ನು ನೀಡುತ್ತದೆ. ಇದಲ್ಲದೆ, ಇದು ಬಾಯಿಯ ದುರ್ವಾಸನೆ, ಜುಮ್ಮೆನಿಸುವಿಕೆ ಮುಂತಾದ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಇದಕ್ಕಾಗಿ ನೀವು ಕೇವಲ ರೇವಂಡ್ ಚೀನಿ ಪುಡಿಯನ್ನು ತಯಾರಿಸಬೇಕು ಮತ್ತು ಅದನ್ನು ಹಲ್ಲುಗಳಿಗೆ ಅನ್ವಯಿಸಬೇಕು.
ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸಿಕೊಳ್ಳಲು
[ಬದಲಾಯಿಸಿ]ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಈ ಗಿಡಮೂಲಿಕೆ ಸಹಕಾರಿಯಾಗಿದೆ. ನಿಮಗೆ ಮಲಬದ್ಧತೆಯ ಸಮಸ್ಯೆ ಇದ್ದರೆ ಇದನ್ನು ಸೇವಿಸುವ ಮೂಲಕ ನಿಮ್ಮ ಸಮಸ್ಯೆಯನ್ನು ಪರಿಹರಿಸಬಹುದು. ಇದಲ್ಲದೆ, ಇದು ತೂಕ ಇಳಿಕೆಗೂ ಕೂಡ ಸಹಾಯ ಮಾಡುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "ರೂಬಾರ್ಬ್". Retrieved 30 August 2024.
- ↑ "ಹಲವು ಗಂಭೀರ ಕಾಯಿಲೆಗಳನ್ನು ತೊಡೆದು ಹಾಕುತ್ತೆ ಹಿಮಾಲಯದಲ್ಲಿ ಕಂಡುಬರುವ ಈ ಗಿಡಮೂಲಿಕೆ!". Zee News Kannada. 13 July 2023. Retrieved 30 August 2024.
- ↑ "ಹಲವು ಗಂಭೀರ ಕಾಯಿಲೆಗಳನ್ನು ತೊಡೆದು ಹಾಕುತ್ತೆ ಹಿಮಾಲಯದಲ್ಲಿ ಕಂಡುಬರುವ ಈ ಗಿಡಮೂಲಿಕೆ!". Zee News Kannada. 13 July 2023. Retrieved 30 August 2024.