ರಘುಪತಿ ಶೃಂಗೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಘುಪತಿ ಶೃಂಗೇರಿ
ಕಾರ್ಟೂನಿಸ್ಟ್, ಕ್ಯಾರಿಕೇಚರಿಸ್ಟ್, ಸಚಿತ್ರಕಾರರು
ಜನನ ೪ ಏಪ್ರಿಲ್, ೧೯೭೩
ರಾಷ್ಟ್ರೀಯತೆ ಭಾರತೀಯ
ಸ್ಥಳ ಶೃಂಗೇರಿ ಬಳಿ ಇರುವ ನೆಮ್ಮಾರು
ತಂದೆ ಶೃಂಗೇಶ್ವರ ರಾವ್
ತಾಯಿ ಯಶೋದ
ಅಣ್ಣ ವ್ಯಂಗ್ಯಚಿತ್ರಕಾರ ದಿವಂಗತ ಸತೀಶ ಶೃಂಗೇರಿ
ಅಕ್ಕ ಅತುಲಾ ರಮೇಶ್
ಪತ್ನಿ ಅಶ್ವಿನಿ ರಘು
ಮಕ್ಕಳು ಪ್ರಣವ್, ಪ್ರಣತಿ



ರಘುಪತಿ ಶೃಂಗೇರಿ ವ್ಯಂಗ್ಯಚಿತ್ರಕಾರರಲ್ಲೊಬ್ಬರು. ಈ ಕ್ಷೇತ್ರದಲ್ಲಿ ಸಕ್ರಿಯವಾಗಿ ಮಾಧ್ಯಮಗಳಲ್ಲಿ ೧೫೦೦೦ ಹೆಚ್ಚು ಕಾರ್ಟೂನ್, ಕ್ಯಾರಿಕೇಚರ್ ರಚಿಸಿದ್ದಾರೆ. ೨೦೧೯ ರಲ್ಲಿ , ಭಾರತದ ನಕ್ಷೆ ಇಸ್ರೊವಿಗೆ " ಇಡೀ ದೇಶ ನಿಮ್ಮೊಂದಿಗೆ ಇದೆ"; ಎಂಬ ಸಂದೇಶ ನೀಡಿದ ಕೃತಿ ಇವರದ್ದು.

ಪರಿಚಯ[ಬದಲಾಯಿಸಿ]

ಕನ್ನಡದ ಪತ್ರಿಕೆಗಳಲ್ಲಿ ಕಾರ್ಟೂನ್, ಕ್ಯಾರಿಕೇಚರ್ ರಚಿಸಿರುವ ಕಾರ್ಟೂನ್ ಕ್ಷೇತ್ರದಲ್ಲಿ ಬಹುಮಾನಗಳು, ಸಮ್ಮಾನಗಳಿಗೆ ಪಾತ್ರರಾಗಿದ್ದಾರೆ. ಅಷ್ಟಲ್ಲದೆ ಕಾರ್ಟೂನ್ ಸ್ಪರ್ಧೆಗಳಿಗೆ ನಿರ್ಣಾಯಕರಾಗಿ, ಕರ್ನಾಟಕ ಕಾರ್ಟೂನಿಸ್ಟ್ ಸಂಘದ ಸಹಕಾರ್ಯದರ್ಶಿಗಳಾಗಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿದ್ಯಾಭ್ಯಾಸ[ಬದಲಾಯಿಸಿ]

ದಾವಣಗೆರೆಯಲ್ಲಿ ಫ಼ೈನ್ ಆರ್ಟ್ಸ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಮೊದಲ ಕಾರ್ಟೂನ್ " ವಿಕ್ರಮ" [೧]ಎಂಬ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಇದಲ್ಲದೇ ಸುಮಾರು ೨ ವರುಷಗಳ ಕಾಲ ಇವರು ರಚಿಸಿದ ಕಾರ್ಟೊನ್ ಸ್ಟ್ರಿಪ್ ಮಂಗಳ ಪತ್ರಿಕೆಯಲ್ಲಿ ಮೂಡಿತು.

ವೃತ್ತಿ[ಬದಲಾಯಿಸಿ]

ಪ್ರಸ್ತುತ ಬೆಂಗಳೂರಿನ ಟಿಸಿಎಸ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಕೃತಿಗಳು[ಬದಲಾಯಿಸಿ]

೧. ದೇಶ, ವಿದೇಶದ ಪ್ರಖ್ಯಾತ ನಾಮರ ಕಾರ್ಟೂನ್, ಕ್ಯಾರಿಕೇಚರ್ಗಳು.

೨. ಕಾರ್ಟೂನ್ ಬಗ್ಗೆ ಇವರ ಪುಸ್ತಕಗಳು.

೩. ಕಾರ್ಟೂನ್ ಕ್ಷೇತ್ರವನ್ನು ವೃತ್ತಿಯನ್ನಾಗಿ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಲೇಖನಗಳು[೨]

ಪ್ರಶಸ್ತಿಗಳು[ಬದಲಾಯಿಸಿ]

ರಘುಪತಿಯವರ ಪ್ರಕಟಿತ ಕಾರ್ಟೂನ್ಗಳನ್ನು ಒಳಕೊಂಡ ಪುಸ್ತಕ ೧. ದಕ್ಷಿಣ ಕೊರಿಯಾ, ಜರ್ಮನಿ ಮುಂತಾದ ದೇಶಗಳಲ್ಲಿ, ಆರ್. ಕೆ. ಲಕ್ಷ್ಮಣ್[೩], ಮಾರಿಯೋ ಮಿರಾಂಡ [೪] ಮುಂತಾದ ಖ್ಯಾತ ವ್ಯಂಗ್ಯಚಿತ್ರಕಾರರ ಜತೆ ಇವರ ಕೃತಿಗಳು ಪ್ರದಶಿಸಲ್ಪಟ್ಟಿವೆ.

೨. ಅಂತರರಾಷ್ಟ್ರೀಯ ಮಟ್ಟದಲ್ಲಿ ೭, ರಾಷ್ಟ್ರೀಯ ಮಟ್ಟದಲ್ಲಿ ೬ ಹಾಗು ರಾಜ್ಯ ಮಟ್ಟದಲ್ಲಿ ೩ ಪ್ರಶಸ್ತಿಗಳು ಪಡೆದಿರುತ್ತಾರೆ.

೪. ಗೌರೀಶ್ ಅಕ್ಕಿ ಸ್ಟುಡಿಯೊ ಹಾಗೊ ಬೀಬೀಸೀ ಟೀವಿಯಲ್ಲಿ, ಹಲವಾರು ಪತ್ರಿಕೆಗಳಲ್ಲಿ ಇವರ ಸಂದರ್ಶನ ಮಾಡಲಾಗಿದೆ. thumb|ಚಹಾ ಎಲೆಗಳು ಹಾಗು ಬ್ರಶ್ ಬಳಸಿ ತಯಾರಿಸಿದ ಪ್ರಧಾನಿ ಮೋದಿಯವರ ಚಿತ್ರ

ಉಲ್ಲೇಖ[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2020-08-12. Retrieved 2020-03-13.
  2. https://www.deccanherald.com/supplements/dh-education/converse-with-cartoons-799331.html
  3. ಆರ್.ಕೆ.ಲಕ್ಷ್ಮಣ್
  4. ಮಾರಿಯೊ ಮಿರಾಂಡ