ವಿಷಯಕ್ಕೆ ಹೋಗು

ಯುಗ (ಹಿಂದೂ ತತ್ವಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಹಿಂದೂ ತತ್ವಶಾಸ್ತ್ರದಲ್ಲಿ ಯುಗವು ಒಂದು ನಾಲ್ಕು ಅವಧಿಯ ಚಕ್ರದಲ್ಲಿ ಒಂದು ಶಕ, ಪರ್ವ ಅಥವಾ ಕಾಲಮಾನದ ಹೆಸರು. ಹಿಂದೂ ವಿಶ್ವವಿಜ್ಞಾನದ ಪ್ರಕಾರ, ಬ್ರಹ್ಮಾಂಡದಲ್ಲಿ ಜೀವರಾಶಿಯು ಪ್ರತಿ ೪.೧ ರಿಂದ ೮.೨ ಬಿಲಿಯ ವರ್ಷಗಳಲ್ಲಿ ಸೃಷ್ಟಿಯಾಗುತ್ತದೆ ಮತ್ತು ನಾಶವಾಗುತ್ತದೆ ಮತ್ತು ಇದು ಬ್ರಹ್ಮನ ಒಂದು ಪೂರ್ಣ ದಿನ (ಹಗಲು ಮತ್ತು ರಾತ್ರಿ). ಬ್ರಹ್ಮನನ ಜೀವಮಾನವೇ ೩೧೧ ಟ್ರಿಲಿಯ ಹಾಗು ೪೦ ಬಿಲಿಯ ವರ್ಷಗಳಿರಬಹುದು. ಒಂದು ಯುಗದ ಚಕ್ರದಲ್ಲಿ ೪ ಯುಗಗಳಿರುತ್ತದೆ‌. ಸತ್ಯ ಯುಗ - ಮಾನವನ ಸರಾಸರಿ ಆಯುಶು ೧೦೦೦೦೦ ವರ್ಷಗಳು.ಸದ್ಗುಣವೆ ಸರ್ವೋಚ್ಚ ಆದಿಪತ್ಯವಾಗಿತ್ತು.ಮಾನವನ ಘಣತೆ ೨೧ ಮೊಳವಾಗಿತ್ತು. ತ್ರೇತ ಯುಗ - ಮಾನವನ ಸರಾಸರಿ ಆಯುಶು ೧೦೦೦೦ ವರ್ಷಗಳು. ೩ ಬಾಗದ ಸದ್ಗುಣ ಆಗು ೧ಬಾಗದ ಪಾಪದಿಂದ ಕೂಡಿ ಮಾನವನ ಘಣತೆ ೧೪ ಮೊಳವಾಯಿತು. ದ್ವಪರ ಯುಗ - ಮಾನವನ ಸರಾಸರಿ ಆಯುಶು ೧೦೦೦ ವರ್ಷಗಳು.ಅರ್ದ ಸದ್ಗುಣ ಮತ್ತರ್ದ ಪಾಪದಿಂದ ಕೂಡಿ ಮಾನವನ ಘಣತೆ ೭ ಮೊಳಗಳಿಗೆ ಕುಸಿಯಿತು. ಕಲಿ ಯುಗ - ಮಾನವನ ಸರಾಸರಿ ಆಯುಶು ೧೦೦ ವರ್ಷಗಳು. ಮೂರು ಬಾಗದಷ್ಟು ಪಾಪ ಹಾಗು ೧ ಬಾಗ ಸದ್ಗುಣ ಕೂಡಿದ ಈ ಯುಗ ಸಾಮಾನ್ಯ ಮಾನವನ ಘಣತೆ ೩.೫ ಮೊಳೆಗಳಾಗಿದೆ.