ವಿಷಯಕ್ಕೆ ಹೋಗು

ಮೊದಲನೇ ಕೃಷ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊದಲನೇ ಕೃಷ್ಣ
Built ಕೈಲಾಸನಾಥ ದೇವಾಲಯ
ಆಳ್ವಿಕೆ c. 756 – c. 774 CE
ಪೂರ್ವಾಧಿಕಾರಿ ದಂತಿದುರ್ಗ
ಉತ್ತರಾಧಿಕಾರಿ ಇಮ್ಮಡಿ ಗೋವಿಂದ
ರಾಷ್ಟ್ರಕೂಟ ಅರಸರು (753-982)
ದಂತಿದುರ್ಗ (735 - 756)
ಮೊದಲನೇ ಕೃಷ್ಣ (756 - 774)
ಇಮ್ಮಡಿ ಗೋವಿಂದ (774 - 780)
ದ್ರುವ ಧಾರಾವರ್ಷ (780 - 793)
ಗೋವಿಂದ III (793 - 814)
ಅಮೋಘವರ್ಷ (814 - 878)
ಕೃಷ್ಣ II (878 - 914)
ಇಂದ್ರ III (914 -929)
ಅಮೋಘವರ್ಷ II (929 - 930)
ಗೋವಿಂದ IV (930 – 936)
ಅಮೋಘವರ್ಷ III (936 – 939)
ಕೃಷ್ಣ III (939 – 967)
ಕೊಟ್ಟಿಗ ಅಮೋಘವರ್ಷ (967 – 972)
ಕರ್ಕ II (972 – 973)
ಇಂದ್ರ IV (973 – 982)
Tailapa II
(Western Chalukyas)
(973-997)

'ಮೊದಲನೇ ಕೃಷ್ಣ' (ಕ್ರಿ.ಶ.೭೫೬-೭೭೪) ರಾಷ್ಟ್ರಕೂಟ ಸಾಮ್ರಾಜ್ಯದ ಅರಸು. ಇವರು ರಾಷ್ಟ್ರಕೂಟ ದೊರೆ ದಂತಿದುರ್ಗ ಅಣ್ಣನ ಮಗ. ಇವರ ಕಾಲದಲ್ಲಿ ಎಲ್ಲೋರದ ಕೈಲಾಸನಾಥ ದೇವಾಲಯ ಸ್ಥಾಪನೆಯಾಯಿತು.ಇವನ ಬಳಿಕ ಇವನ ಮಗ ಎರಡನೇ ಗೋವಿಂದ ಪಟ್ಟವೇರಿದ. ಒಂದನೆಯ ಕೃಷ್ಣ ರಾಷ್ಟ್ರಕೂಟರಲ್ಲಿ ಪ್ರಮುಖನು. ಇತನ ಕಾಲ ಕ್ರಿಶ ೭೫೬ ರಿಂದ ೭೭೪.ರಾಷ್ಟ್ರಕೂಟರ ಸ್ಥಾಪಕ ದಂತಿದುರ್ಗನ ಚಿಕ್ಕಪ್ಪ. ಈತ ಅಧಿಕಾರಕ್ಕೆ ಬರಲು ಕಾರಣವೆಂದರೆ ದಂತಿದುರ್ಗನಿಗೆ ಮಕ‍್ಕಳಿಲ್ಲದ್ದರಿಂದ ಈತನೇ ಅಧಿಕಾರ ವಹಿಸಿಕೊಂಡನು.[]

ಇತಿಹಾಸ

[ಬದಲಾಯಿಸಿ]

ರಾಷ್ಟ್ರಕೂಟರ ಇತಿಹಾಸದಲ್ಲಿ ಇತನ ೧೯ ವರ್ಷಗಳ ಆಳ್ವಿಕೆಯ ಕಾಲ ಅತ್ಯಂತ ಮಹತ್ವಪೂರ್ಣವಾದುದಾಗಿದೆ. ಈತ ಅಧಿಕಾರಕ್ಕೆ ಬಂದ ತರುವಾಯ ಚಾಲುಕ್ಯರ ಮೇಲೆ ದಂಡೆತ್ತಿ ಹೋಗಿ ಎರಡನೆಯ ಕೀರ್ತಿವರ್ಮನನ್ನು ಸೋಲಿಸಿ ಆತ ಮತ್ತೆಂದು ಚೇತರಿಸಿಕೊಳ್ಳದಂತೆ ಮಾಡಿದನು. ಇದರಿಂದಾಗಿ ಬಾದಾಮಿ ಚಾಲುಕ್ಯ ವಂಶವೇ ಕೊನೆಗೊಂಡಿತು. ಆನಂತರ ಗಂಗದೊರೆ ಶ್ರೀ ಪುರುಷನನ್ನು ಸೋಲಿಸಿ ಅವನಿಂದ ಕಪ್ಪಕಾಣಿಕೆ ಪಡೆದು ವೆಂಗಿಮಂಡಲಕ್ಕೆ ಮುತ್ತಿಗೆ ಹಾಕಿ ಪೂರ್ವಚಾಲುಕ್ಯರ ದೊರೆ ನಾಲ್ಕನೆಯ ವಿಷ್ಣುರ್ಧನನನ್ನು ಸೋಲಿಸಿ ತನ್ನ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವಂತೆ ಮಾಡಿ ಕೊಂಕಣವನ್ನು ಗೆದ್ದು ತನ್ನ ಅಧೀನಕ್ಕೆ ತೆಗೆದುಕೊಂಡನು.

ವಾಸ್ತುಶಿಲ್ಪ

[ಬದಲಾಯಿಸಿ]

ಒಂದನೇ ಕೃಷ್ಣ ಮಹಾನಿರ್ಮಾಣಕಾರ ಎಂಬ ಕೀರ್ತಿಗೆ ಭಾಜನನಾಗಿದ್ದಾನೆ. ಎಲ್ಲೋರದ ಪ್ರಸಿದ್ಧ ಕೈಲಾಸನಾಥದೇವಾಲಯ ಇವನ ಕಾಲದಲ್ಲಿಯೇ ನಿರ್ಮಾಣವಾಯಿತು[]. (ಏಕಶಿಲೆಯನ್ನು ಕೊರೆದು ನಿರ್ಮಿಸಿರುವ) ಇಡೀ ದೇವಾಲಯವನ್ನು ಗುಡ್ಡದ ಬೃಹತ್ ಬಂಡೆಯೊಂದರಿಂದ ಕಡಿದು ಕೊರೆದು, ನಿರ್ಮಿಸಿರುವುದು ಇಲ್ಲಿಯ ವಿಶೇಷ. ಇದು ೨೭೬ ಅಡಿಉದ್ದ, ೧೫೪ಅಡಿ ಅಗಲ ೧೦೦ಅಡಿ ಎತ್ತರ೧೦೭ ಅಡಿ ಆಳ ಒಳಗಿಳಿದಿರುವ ಈ ದೇವಾಲಯ ನಾಲ್ಕು ಮುಖ್ಯಭಾಗಗಳಾದ ಗರ್ಭಗುಡಿ, ಮಹಾದ್ವಾರ, ನಂದಿಮಂಟಪ ಮತ್ತು ಸುತ್ತಲಿನ ಪ್ರಾಕಾರ, ಎತ್ತರವಾದ ಜಗತಿಯನ್ನು ನಿರ್ಮಿಸಿಕೊಂಡು ಅದರ ಮೇಲೆ ಆನೆಗಳನ್ನು ಕೊರೆದು ಆನಂತರ ದೇವಾಲಯದ ಗೋಡೆ ಬಾಗಿಲುಗಳು, ಜಾಲಂಧ್ರಗಳು ಚಿಕ್ಕ ಮತ್ತು ದೊಡ್ಡ ಗೋಪುರಗಳನ್ನು ನಿರ್ಮಿಸಲಾಗಿದೆ. ಗರ್ಭಗೃಹದ ಮೇಲೆ ಹದಿನಾರು ಕಂಬಗಳಿಂದ ಕೂಡಿದ ನವರಂಗ ಮಂಟಪವಿದೆ. ದೇವಾಲಯದ ಸುತ್ತಲು ಕೈಸಾಲೆಯನ್ನು ನಿರ್ಮಿಸಲಾಗಿದೆ. ಬಲಭಾಗದ ಕೈಸಾಲೆಯ ಮೇಲೆ ಲಲಿತೇಶ್ವರ ದೇವಾಲಯವಿದೆ. ಮುಂದೆ ನಂದಿ ಮಂಟಪವಿದೆ. ಈ ದೇವಾಲಯವನ್ನು ನಿರ್ಮಿಸಲು ಸಾವಿರಾರು ಕುಶಲಕರ್ಮಿಗಳು ಅನೇಕ ವರ್ಷಗಳ ಕಾಲ ದುಡಿದಿದ್ದಾರೆ.

ವಿನ್ಯಾಸ

[ಬದಲಾಯಿಸಿ]

ದೇವಾಲಯದ ಹೊರ ಒಳ ಗೋಡೆಗಳನ್ನು ಸುಂದರವಾದ ಮತ್ತು ಕಲಾತ್ಮಕವಾದ ರಾಮಾಯಣ ಮತ್ತು ಮಹಾಭಾರತ ದೃಶ್ಯಗಳಾದ ದಶಾವತಾರ, ನರಸಿಂಹಾವಾತಾರ, ನಟರಾಜ, ಮತ್ತು ರಾವಣ ಕೈಲಾಸ ಪರ್ವತವನ್ನು ಎತ್ತುವ ದೃಶ್ಯಗಳು ಕಣ್ಮನ ಸೆಳಯುವಂತೆ ಅಲಂಕೃತಗೊಂಡಿವೆ. ನಿಜವಾಗಿಯೂ ಇದೊಂದು ಅದ್ಭುತ ಮತ್ತು ಆಶ್ಚರ್ಯಕರ ಸೃಷ್ಟಿ ಎನಿಸುತ್ತದೆ.

ಗ್ರಂಥ ಋಣ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. https://kanaja.in/archives/119157[permanent dead link]
  2. ಭಾರತೀಯ ಪುರಾತತ್ವ ಇಲಾಖೆಯ ಜಾಲತಾಣ