ಮಂತ್ರಿಮಂಡಲ
ಗೋಚರ
ಮಂತ್ರಿಮಂಡಲವು (ಸಚಿವ ಸಂಪುಟ) ಮೇಲ್ದರ್ಜೆಯ ಸರ್ಕಾರಿ ಅಧಿಕಾರಿಗಳ ಗುಂಪು, ಮತ್ತು ಸಾಮಾನ್ಯವಾಗಿ ಕಾರ್ಯಾಂಗ ಶಾಖೆಯ ಉನ್ನತ ನಾಯಕರನ್ನು ಹೊಂದಿರುತ್ತದೆ. ಮಂತ್ರಿಮಂಡಲದ ಸದಸ್ಯರನ್ನು ಸಾಮಾನ್ಯವಾಗಿ ಸಂಪುಟ ಸಚಿವರು ಅಥವಾ ಕಾರ್ಯದರ್ಶಿಗಳು ಎಂದು ಕರೆಯಲಾಗುತ್ತದೆ. ಮಂತ್ರಿಮಂಡಲದ ಕಾರ್ಯವು ಬದಲಾಗುತ್ತದೆ: ಕೆಲವು ದೇಶಗಳಲ್ಲಿ ಇದು ಸಾಮೂಹಿಕ ಜವಾಬ್ದಾರಿಯಿರುವ ಸಹೋದ್ಯೋಗಿಗಳು ಇರುವ ನಿರ್ಧಾರ ಮಾಡುವ ಗುಂಪಾಗಿದ್ದರೆ, ಇತರ ದೇಶಗಳಲ್ಲಿ ಇದು ಸಂಪೂರ್ಣವಾಗಿ ಸಲಹಾ ಗುಂಪಾಗಿ ಅಥವಾ ನಿರ್ಧಾರ ಮಾಡುವ ದೇಶದ/ರಾಜ್ಯದ ಮುಖ್ಯಸ್ಥ ಅಥವಾ ಸರ್ಕಾರದ ಮುಖ್ಯಸ್ಥನಿಗೆ ಸಹಾಯಕ ಸಂಸ್ಥೆಯಾಗಿ ಕಾರ್ಯನಿರ್ವಹಿಸಬಹುದು.[೧] ಮಂತ್ರಿಮಂಡಲಗಳು ಸಾಮಾನ್ಯವಾಗಿ ಸರ್ಕಾರದ ದೈನಂದಿನ ನಿರ್ವಹಣೆ ಮತ್ತು ದಿಢೀರ್ ಘಟನೆಗಳ ಪ್ರತಿಕ್ರಿಯೆಗೆ ಹೊಣೆಯಾಗಿರುವ ಗುಂಪುಗಳಾಗಿರುತ್ತವೆ, ನ್ಯಾಯಾಂಗ ಮತ್ತು ಶಾಸಕಾಂಗ ಶಾಖೆಗಳು ದೀರ್ಘ ಪ್ರಕ್ರಿಯೆಗಳ ಪ್ರಕಾರ, ಅಧಿವೇಶನಗಳಲ್ಲಿ ಲಯಬದ್ಧ ವೇಗದಲ್ಲಿ ಕೆಲಸಮಾಡುತ್ತವೆ.