ವಿಷಯಕ್ಕೆ ಹೋಗು

ಭಾರತಿಯ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
India
ಸಂಘಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ICC ದರ್ಜೆಪೂರ್ಣ ಸದಸ್ಯ (1926)
ICC ಪ್ರದೇಶಏಷ್ಯಾ
ಟೆಸ್ಟ್ ಪಂದ್ಯಗಳು
ಮೊದಲ ಟೆಸ್ಟ್India India vs. ವೆಸ್ಟ್ ಇಂಡೀಸ್
(ಬೆಂಗಳೂರು ; 31 October 1976)
ಏಕದಿನ ಅಂತಾರಾಷ್ಟ್ರೀಯ
ಮೊದಲ ODIIndia India vs. ಇಂಗ್ಲೆಂಡ್
(ಕಲ್ಕತ್ತಾ; 1 ಜನವರಿ 1978)
ವಿಶ್ವಕಪ್ ಪ್ರದರ್ಶನಗಳು8 (1978ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶರನ್ನರ್-ಅಪ್ (2005)
ಟಿ20 ಅಂತಾರಾಷ್ಟ್ರೀಯ
ಮೊದಲ T20IIndia India vs. ಇಂಗ್ಲೆಂಡ್
(ಡರ್ಬಿ; 5 August 2006)
ಟಿ20 ವಿಶ್ವಕಪ್‌ ಪ್ರದರ್ಶನಗಳು4 (2009ರಲ್ಲಿ ಮೊದಲು)
ಅತ್ಯುತ್ತಮ ಫಲಿತಾಂಶಸೆಮಿಫೈನಲ್ (2009, 2010)
25 ನವೆಂಬರ್ 2016ರ ಪ್ರಕಾರ

ಭಾರತ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡ (ವುಮೆನ್ ಇನ್ ಬ್ಲೂ ) ಇದು ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸುತ್ತದೆ. ಐಸಿಸಿ ಮಹಿಳಾ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸುವ ಎಂಟು ತಂಡಗಳಲ್ಲಿ ಒಂದಾಗಿದೆ,ಅಂತರಾಷ್ಟ್ರೀಯ ಮಹಿಳಾ ಕ್ರಿಕೆಟ್ನ ಅತ್ಯುನ್ನತ ಮಟ್ಟ,ಈ ತಂಡವು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ನಿಂದ ಆಯೋಜಿಸಲ್ಪಟ್ಟಿದೆ.ಭಾರತವು 1976 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ತನ್ನ ಪ್ರಥಮ ಟೆಸ್ಟ್ ಪಂದ್ಯವನ್ನು ಮತ್ತು ಮತ್ತು 1978 ರ ವಿಶ್ವಕಪ್ನಲ್ಲಿ ಅದರ ಏಕದಿನ ಅಂತರಾಷ್ಟ್ರೀಯ (ODI) ಚೊಚ್ಚಲ ಪಂದ್ಯ, ಆಡಿತು . ತಂಡವು 2005 ರ ವಿಶ್ವ ಕಪ್ನ ಅಂತಿಮ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ 98 ರನ್ಗಳಿಂದ ಸೋತಿತು. ಮತ್ತು 1997, 2000, ಮತ್ತು 2009 ರ ವಿಶ್ವ ಕಪ್ನಲ್ಲಿ ಸೆಮಿಫೈನಲ್ಸ್ ಆಡಿದೆ .ಭಾರತವು ಟ್ವೆಂಟಿ -20 ವಿಶ್ವಕಪ್ನ ಎರಡು ಸಂದರ್ಭಗಳಲ್ಲಿ (2009 ಮತ್ತು 2010) ಸೆಮಿ-ಫೈನಲ್ ಪಂದ್ಯಗಳನ್ನು ಕೂಡಾ ತಲುಪಿದೆ .[][][][][]

ಇತಿಹಾಸ

[ಬದಲಾಯಿಸಿ]

1700 ರ ದಶಕದ ಆರಂಭದಲ್ಲಿ ಬ್ರಿಟಿಷ್ರು ಭಾರತಕ್ಕೆ ಕ್ರಿಕೆಟ್ ಅನ್ನು ಪರಿಚಯಿಸಿದರು . 1721 ರಲ್ಲಿ ಮೊದಲ ಕ್ರಿಕೆಟ್ ಪಂದ್ಯ ಆಡಲಾಯಿತು.1848 ರಲ್ಲಿ ಬಾಂಬೆಯ ಪಾರ್ಸಿ ಸಮುದಾಯದಿಂದ ಮೊದಲ ಭಾರತೀಯ ಕ್ರಿಕೆಟ್ ಕ್ಲಬ್ ಅನ್ನು ಸ್ಥಾಪಿಸಲಾಯಿತು. 1877 ರಲ್ಲಿ ಯುರೋಪಿಯನ್ನರ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದರು .ಮೊದಲ ಅಧಿಕೃತ ಭಾರತೀಯ ಕ್ರಿಕೆಟ್ ತಂಡವನ್ನು 1911 ರಲ್ಲಿ ರಚಿಸಲಾಯಿತು ಮತ್ತು ಇಂಗ್ಲೆಂಡಿಗೆ ಪ್ರವಾಸ ಮಾಡಿತು ಅಲ್ಲಿ ಇಂಗ್ಲಿಷ್ ಕೌಂಟಿ ತಂಡಗಳ ಜೊತೆ ಆಡಿಸಲಾಯಿತು .ಭಾರತ ತಂಡವು 1932 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಪ್ರಾರಂಭಿಸಿದರು. 1934ರಲ್ಲಿ ಮೊದಲ ಮಹಿಳಾ ಟೆಸ್ಟ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಿತು. 1973 ರಲ್ಲಿ ಭಾರತದ ಮಹಿಳಾ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪನೆಯಾಯಿತು.ವೆಸ್ಟ್ ಇಂಡೀಸ್ ವಿರುದ್ಧ ಭಾರತೀಯ ಮಹಿಳಾ ತಂಡ 1976 ರಲ್ಲಿ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡಿದರು.ಮಹಿಳಾ ಕ್ರಿಕೆಟ್ ಅನ್ನು ಅಭಿವೃದ್ಧಿಪಡಿಸಲು ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನ ಪ್ರಾರಂಭದ ಭಾಗವಾಗಿ, ಮಹಿಳಾ ಕ್ರಿಕೆಟ್ ಅಸೋಸಿಯೇಷನ್ ಆಫ್ ಇಂಡಿಯಾವು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯೊಂದಿಗೆ ವಿಲೀನಗೊಂಡಿತು .[]

ಪ್ರಸ್ತುತ ಅಂತಾರಾಷ್ಟ್ರೀಯ ಶ್ರೇಯಾಂಕಗಳು ಟಾಪ್ 10 ತಂಡಗಳು

[ಬದಲಾಯಿಸಿ]

ಐಸಿಸಿ ಮಹಿಳಾ ಶ್ರೇಯಾಂಕಗಳು ಟೆಸ್ಟ್, ಒಡಿಐ ಮತ್ತು ಟಿ 20ಐಗಳಿಂದ ಒಂದೇ ಶ್ರೇಯಾಂಕದ ವ್ಯವಸ್ಥೆಯಲ್ಲಿ ಫಲಿತಾಂಶಗಳನ್ನು ಸಂಯೋಜಿಸುತ್ತದೆ.

ಐಸಿಸಿ ಮಹಿಳಾ ಶ್ರೇಯಾಂಕಗಳು
ಶ್ರೇಯಾಂಕ ತಂಡ ಪಂದ್ಯಗಳು ಅಂಕಗಳು ರೇಟಿಂಗ್
1 ಆಸ್ಟ್ರೇಲಿಯಾ 54 6887 128
2 ಇಂಗ್ಲೆಂಡ್ 47 5742 122
3 ನ್ಯೂಜಿಲೆಂಡ್ 59 7029 119
4 ಭಾರತ 52 5785 111
5 ವೆಸ್ಟ್ ಇಂಡೀಸ್ 52 5607 108
6 ದಕ್ಷಿಣ ಆಫ್ರಿಕಾ 71 6457 91
7 ಪಾಕಿಸ್ತಾನ್ 56 4247 76
8 ಶ್ರೀಲಂಕಾ 53 3576 67 ದ
9 ಬಾಂಗ್ಲಾದೇಶ 30 1254 42
10 ಐರ್ಲೆಂಡ್ 31 1016 33
Reference: ICC Women's Rankings, ICC Women's Championship, 21 May 2017
"Matches" is the number of matches played in the 12-24 months since the October before last, plus half the number in the 24 months before that.

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Cricket and Politics in Colonial India". Ramachandra Guha. 1998. Archived from the original on 2012-07-09. Retrieved 2017-06-25.
  2. "India in England, 1911". Cricket Archive. Archived from the original on 2009-03-18. Retrieved 2017-06-25.
  3. "England v India 1932". Cricinfo.
  4. "List of women's Test matches". Cricinfo. Archived from the original on 20 July 2012. {{cite web}}: Unknown parameter |dead-url= ignored (help)
  5. "India women Test matches". Cricinfo. Archived from the original on 15 July 2012. {{cite web}}: Unknown parameter |dead-url= ignored (help)
  6. "Better days for women's cricket?". Rediff. 14 November 2006. Archived from the original on 4 June 2011. {{cite news}}: Unknown parameter |deadurl= ignored (help)