ಬ್ಯಾಬಿಲೋನ್
32°32′11″N 44°25′15″E / 32.53639°N 44.42083°E
ಬ್ಯಾಬಿಲೋನ್ (ಗ್ರೀಕ್ Βαβυλών ನ, ಅಕೇಡಿಯನ್ ಭಾಷೆಯಿಂದ: ಬ್ಯಾಬಿಲಿ, ಬ್ಯಾಬಿಲಾ ) ಪ್ರಾಚೀನ ಮೆಸಪಟೋಮಿಯ ನಾಗರಿಕತೆಯಲ್ಲಿದ್ದಂತಹ ನಗರ-ರಾಜ್ಯ ವಾಗಿದೆ. ಇದರ ಅವಶೇಷಗಳನ್ನು ಈಗಿನ ಅಲ್ ಹಿಲ್ಲಾಹ, ಬ್ಯಾಬಿಲ್ ಪ್ರಾಂತ್ಯ, ಇರಾಕ್,ಬಾಗ್ದಾದ್ ನ ದಕ್ಷಿಣಕ್ಕೆ ಸುಮಾರು 85 ಕಿಲೋಮೀಟರ್ (55 mi) ದೂರದಲ್ಲಿರುವ ಪ್ರದೇಶಗಳಲ್ಲಿ ಕಾಣಬಹುದು. ಪುರಾತನ ನಗರವೆಂದು ಪ್ರಖ್ಯಾತವಾಗಿರುವ ಇಂದಿನ ಬ್ಯಾಬಿಲೋನ್ ನಗರದಲ್ಲಿ ಉಳಿದುಕೊಂಡಿರುವುದೇನೆಂದರೆ ದಿಣ್ಣೆಗಳು, ಅಥವಾ ಪ್ರಾಚೀನ ವಸತಿ ಅವಶೇಷಗಳಿಂದಾದ ಕೃತಕ ಗುಡ್ಡಗಳು,ಹಾಗು ಮುರಿದು ಬಿದ್ದಿರುವ ಮಣ್ಣಿನ ಇಟ್ಟಿಗೆಗಳಿಂದ ಕಟ್ಟಲಾದ ಕಟ್ಟಡಗಳು ಹಾಗು ಟೈಗ್ರಿಸ್ ಮತ್ತು ಯೂಫ್ರೆಟೀಸ್ ನದಿಗಳ ಮಧ್ಯದಲ್ಲಿರುವ ಫಲವತ್ತಾದ ಮೆಸಪಟೋಮಿಯನ್ ಬಯಲಿನಲ್ಲಿರುವ ಭಗ್ನಾವಶೇಷಗಳು. ಇದನ್ನು ಪುನರ್ನಿರ್ಮಿಸಲಾಗಿದೆ, ಬ್ಯಾಬಿಲೋನ್ ಮೊದಲು ಒಂದು ಚಿಕ್ಕ ನಗರವಾಗಿತ್ತು. ಕ್ರಿಸ್ತಪೂರ್ವ 3ನೇ ಸಹಸ್ರವರ್ಷದ ಆರಂಭದಲ್ಲಿ ಕಾಣಿಸಿಕೊಂಡಿತು. ನಗರವು ಅಭಿವೃದ್ಧಿಗೊಂಡಂತೆ ಪ್ರಾಮುಖ್ಯತೆಯನ್ನು ಪಡೆಯುತ್ತಾ ಹೋಯಿತಲ್ಲದೇ, ಮೊದಲನೆಯ ಬ್ಯಾಬಿಲೋನಿಯನ್ ರಾಜ ಸಂತತಿಯ ಉದಯದ ಮೂಲಕ ರಾಜಕೀಯವಾಗಿಯೂ ಪರಿಗಣಿಸಲ್ಪಟ್ಟಿತು. ಇದು ಕ್ರಿಸ್ತಪೂರ್ವ 2300 ರ ಸುಮಾರಿಗೆ ಬ್ಯಾಬಿಲೋನಿಯಾದ "ಪವಿತ್ರ ನಗರ" ವಾಗಿತ್ತು,[ಸೂಕ್ತ ಉಲ್ಲೇಖನ ಬೇಕು] ಅಲ್ಲದೇ ಕ್ರಿಸ್ತಪೂರ್ವ 612 ರಿಂದ 539 ರ ವರೆಗೆ ನಿಯೋ-ಬ್ಯಾಬಿಲೋನಿಯನ್ ಸಾಮ್ರಾಜ್ಯದ ನೆಲೆಯಾಗಿತ್ತು. ಬ್ಯಾಬಿಲೋನ್ ನ ತೂಗು ತೋಟ ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿದೆ.
ನಗರದ ಹೆಸರು
[ಬದಲಾಯಿಸಿ]ಗ್ರೀಕ್ ನ ಪದವಾದ Βαβυλών, ಬ್ಯಾಬಿಲೋನಿಯನ್ ಬ್ಯಾಬಿಲಿ ಯ ರೂಪಾಂತರವಾಗಿದೆ. ಕ್ರಿಸ್ತಪೂರ್ವ 1ನೇ ಸಹಸ್ರವರ್ಷದಲ್ಲಿಯೇ ಇದ್ದಂತಹ ಬ್ಯಾಬಿಲೋನಿಯನ್ ಎಂಬ ಹೆಸರು ಮೊದಲಿನ ಬ್ಯಾಬಿಲ್ಲಿ ಯಿಂದ ಕ್ರಿಸ್ತಪೂರ್ವ 2ನೇ ಸಹಸ್ರವರ್ಷದಲ್ಲಿ ಬದಲಾಯಿಸಲ್ಪಟ್ಟಿತು,ಇದರ ಅರ್ಥ "ದೇವರ ಸಾಮೀಪ್ಯ"(ದೇವರನ್ನು ಕಾಣುವ ಮುಕ್ತಿದ್ವಾರ) (ಬ್ಯಾಬ್-ಇಲಿ )ವೆಂದು ಜನಪ್ರಿಯ ವ್ಯುತ್ಪತ್ತಿಶಾಸ್ತ್ರದಲ್ಲಿ ಹೇಳಲಾಗಿದೆ.[೧] ಮೊದಲಿದ್ದಂತಹ ಬ್ಯಾಬಿಲ್ಲ ಹೆಸರು ಸೆಮೈಟ್ ಭಾಷಾವರ್ಗಕ್ಕೆ ಸೇರಿರದ ಮೂಲ ಅಥವಾ ಅರ್ಥ ಗೊತ್ತಿಲ್ಲದ ಭಾಷೆಯಿಂದ ಬಂದಿರುವಂತೆ ತೋರುತ್ತದೆ.[೨]
ಹೀಬ್ರೂ ಬೈಬಲ್,ನಲ್ಲಿ ಇದು בָּבֶל (ಬ್ಯಾಬೆಲ್ ಎಂಬ ಹೆಸರಿನಲ್ಲಿ ಕಾಣಿಸಿಕೊಂಡಿದೆ),ಬೈಬಲ್ ಎಂಬ ಕ್ರಿಯಾಪದ ದಿಂದ "ಗೊಂದಲ ಗೊಳಿಸು"בלבל ಎಂಬ ಅರ್ಥಕೊಡುವ ಮೂಲಕ ಈ ಪದದ ಅರ್ಥ "ಗೊಂದಲ" ವೆಂದಾಗುತ್ತದೆ(viz.ಭಾಷೆಗಳಲ್ಲಿ),ಎಂದು ಬುಕ್ ಆಫ್ ಜೀನಿಯಸ್ 11:9 ಅರ್ಥೈಸಿದೆ. ಸಿರಿಯಾಕ್ ನಲ್ಲಿ ܒܒܠBāwēl (ಬವೆಲ), ಹಾಗು ಅರಬಿಕ್ ನಲ್ಲಿبابل ಬ್ಯಾಬಿಲ್ ಎಂದು ಕರೆಯಲಾಗುತ್ತದೆ.
ಇತಿಹಾಸ
[ಬದಲಾಯಿಸಿ]ಬ್ಯಾಬಿಲೋನ್ ಅನ್ನು ಸರ್ಗನ್ ಆಫ್ ಅಕ್ಕೆಡ್ ನ ಅಳ್ವಿಕೆಯ ಶಾಸನಫಲಕದ ಮೇಲೆ ಹೆಸರಿಸಲಾಗಿದೆ (ca.ಕ್ರಿಸ್ತಪೂರ್ವ 24ನೇ ಶತಮಾನದ ಕಾಲಾನುಕ್ರಮವಾಗಿ ಜೋಡಿಸಿದ ಘಟನೆಗಳ ಪಟ್ಟಿ). "ವೈಂಡರ್ ಕ್ರಾನಿಕಲ್" ನಲ್ಲಿ , ಸರ್ಗನ್ ನೇ ಬ್ಯಾಬಿಲೋನ್ ಅನ್ನು "ಅಕ್ಕೆಡ್ ನ ವಿರುದ್ಧವಾಗಿ" ಕಟ್ಟಿದನು ಎಂದು ಹೇಳಲಾಗಿದೆ (ABC 19:51). ಇದೇ ರೀತಿಯಾಗಿ ಇತರ ಕ್ರಾನಿಕಲ್ (ಕಾಲಾನುಕ್ರಮವಾಗಿ ಬರೆದಿರುವ ದಾಖಲೆ ಪುಸ್ತಕ) ಗಳಲ್ಲಿ ಸರ್ಗನ್ "ಬ್ಯಾಬಿಲೋನ್ ನ ಆಳವಾದ ಕೆಸರನ್ನು ಹೊರತೆಗೆದದ್ದಲ್ಲದೇ , ಬ್ಯಾಬಿಲೋನ್ ನನ್ನು ಅಗೇಡ್ ನ ಪ್ರತಿರೂಪವಾಗಿಸಿದ" ಎಂದು ತಿಳಿಸಲಾಗಿದೆ. (ABC 20:18-19). ಇತ್ತೀಚೆಗೆ ಕೆಲವು ಸಂಶೋಧಕರು, ಆ ಮೂಲಗಳು ಅಕ್ಕೆಡ್ ನ ಸರ್ಗನ್ ಗಿಂತ ನಿಯೋ-ಅಸಿರಿಯನ್ ಸಾಮ್ರಾಜ್ಯದ ಸರ್ಗನ್ II ನನ್ನು ಸೂಚಿಸಿರಬಹುದು ಎಂದು ತಿಳಿಸಿದ್ದಾರೆ.[೩]
ಬಾಷಾಶಾಸ್ತ್ರಜ್ಞನಾದ I.J. ಗೆಲ್ಬ್ ಸೇರಿದಂತೆ ಕೆಲವು ವಿದ್ವಾಂಸರು, ಬ್ಯಾಬಿಲ್ ಎಂಬ ಹೆಸರು ಹಿಂದೆ ಇದ್ದಂತಹ ನಗರದ ಹೆಸರಿನ ಪ್ರತಿಧ್ವನಿಯಾಗಿದೆ ಎಂದು ತಿಳಿಸಿದ್ದಾರೆ. ರಣಜಿತ್ ಪಾಲ್ ನ ಪ್ರಕಾರ ಈ ನಗರವು ಪೂರ್ವದಲ್ಲಿತ್ತು .[೪] ಹರ್ಜ್ ಫೆಲ್ಡ್ ಜಮ್ ಶಿದ್ ಕಟ್ಟಿದಂತಹ ಇರಾನ್ ನ ಬವೆರ್ ನಗರದ ಬಗ್ಗೆ ಬರೆದಿದ್ದಾನೆ; ಬ್ಯಾಬಿಲ್ ಎಂಬ ಹೆಸರು ಬವೆರ್ ನ ಪ್ರತಿಧ್ವನಿಯಾಗಿದೆ. ಡೇವಿಡ್ ರಾಲ್ ನಿಜವಾದ ಬ್ಯಾಬಿಲೋನ್ ಅನ್ನು ಎರಿಡು ನ ಜೊತೆಯಲ್ಲಿ ಗುರುತಿಸಲಾಗಿದೆ ಎಂಬುದನ್ನು ತಿಳಿಸಿದ್ದಾನೆ. ಬೈಬಲ್ಲಿನ ಸೃಷ್ಟಿಪರ್ವ 10 ರಲ್ಲಿ ,ಬ್ಯಾಬೆಲ್ (ಬ್ಯಾಬಿಲೋನ್) ಅನ್ನು ನಿಜವಾಗಿ ಸ್ಥಾಪಿಸಿದವನು ದೊಡ್ಡ ಬೇಟೆಗಾರ ಎಂದು ತಿಳಿಸಲಾಗಿದೆ . ಜಾನ್ ಓಟ್ಸ್ ತನ್ನ ಪುಸ್ತಕದಲ್ಲಿ ಬ್ಯಾಬಿಲೋನ್ , "ದೇವರುಗಳ ಸಾಮೀಪ್ಯದ" ಅನುವಾದವಾಗಿದೆ ಎಂದು ಹೇಳಿದ್ದಾಳೆ. ಇದನ್ನು ಆಧುನಿಕ ವಿದ್ವಾಂಸರು ಕೆಲದಿನಗಳ ವರೆಗೆ ಮಾತ್ರ ಒಪ್ಪಿಕೊಂಡಿದ್ದರು.
ಸುಮಾರು ವರ್ಷಗಳ ಕೆಳಗೆ ,ಬ್ಯಾಬಿಲೋನ್ ನ ಜನಸಂಖ್ಯೆ ಹಾಗು ಶಕ್ತಿಯು ಕುಂದಿತು. ಸುಮಾರು 20ನೇ ಶತಮಾನದ ಕ್ರಿಸ್ತಪೂರ್ವ ದಿಂದ , ಇದನ್ನು ಪಶ್ಚಿಮದ ನೋಮ್ಯಾಡಿಕ್ ಬುಡಕಟ್ಟು ಜನಾಂಗವಾದ ಅಮೋರೈಟ್ಸ್ ರು ವಶಪಡಿಸಿಕೊಂಡರು.ಇವರು ಅಕ್ಕೇಡಿಯನ್ನರಂತೆ ಸೆಮೈಟ್ ಭಾಷೆಯನ್ನು ಮಾತನಾಡುವವರಾಗಿದ್ದು, ಅವರಂತೆ ವ್ಯವಸಾಯ ಮಾಡದೆ ಕುರಿ ಮೇಯಿಸುವುದನ್ನು ತಮ್ಮ ಉದ್ಯೋಗವಾಗಿಸಿಕೊಂಡಿದ್ದರು.
ಹಳೆಯ ಬ್ಯಾಬಿಲೋನಿಯನ್ ಕಾಲ
[ಬದಲಾಯಿಸಿ]ಮೊದಲನೇ ಬ್ಯಾಬಿಲೋನಿಯನ್ ರಾಜ ಸಂತತಿಯನ್ನು ಸುಮು-ಅಬುಮ್ಎಂಬುವವನು ಸ್ಥಾಪಿಸಿದನು,ಆದರೆ ಶತಮಾನದ ನಂತರ ಹಮ್ಮುರಬಿ ಸಾಮ್ರಾಜ್ಯದ ರಾಜಧಾನಿಯಾಗುವ ವರೆಗೂ ಈ ನಗರ-ರಾಜ್ಯವನ್ನು ಸುತ್ತಲಿನ ಕೆಲ ರಾಜ್ಯಗಳು ನಿಯಂತ್ರಿಸುತ್ತಿದ್ದವು (r. ಕ್ರಿಸ್ತಪೂರ್ವ 1728–1686 ಅಲ್ಪ ಕಾಲಾವಧಿ). ಅನಂತರ ಇದು ಬ್ಯಾಬಿಲೋನಿಯ ಎಂಬ ಹೆಸರಿನಲ್ಲಿ ಆ ಪ್ರದೇಶದ ರಾಜಧಾನಿಯಾಗಿ ಮುಂದುವರೆಯಿತು– ಆದರೂ ಕಸ್ಸೈಟ್ಸ್ ರ ಸುಮಾರು 400 ವರ್ಷಗಳ ಆಳ್ವಿಕೆಯ ಸಂದರ್ಭದಲ್ಲಿ ತಾಮ್ರಯುಗದ ಉತ್ತರಾರ್ಧದಲ್ಲಿ,ಇದನ್ನು ಕರುಂಡಿಸ್ ಯುನಿಆಶ್ ಎಂದು ಪುನರ್ನಾಮಕರಣ ಮಾಡಲಾಯಿತು.[ಸೂಕ್ತ ಉಲ್ಲೇಖನ ಬೇಕು]
ಹಮ್ಮುರಬಿ ಬ್ಯಾಬಿಲೋನಿಯಾದ ನ್ಯಾಯಸೂತ್ರಗಳನ್ನು ಕ್ರೂಡೀಕರಿಸಿದ ಹೆಮ್ಮೆಗೆ ಪಾತ್ರನಾಗಿದ್ದಾನೆ.ಹಮ್ಮುರಬಿಯ ನ್ಯಾಯ ಸೂತ್ರಗಳು ಕಾನೂನಿನ ಚಿಂತನಾ ವಿಧಾನದ ಮೇಲೆ ಶಾಶ್ವತವಾದ ಪ್ರಭಾವ ಬೀರಿದ್ದವು.
ನಗರವು ಯುಪ್ರಿಟೀಸ್ ನದಿಯ ತೀರದಲ್ಲಿ ಬೆಳವಣಿಗೆ ಕಂಡಿತಲ್ಲದೇ, ಅದರ ಬಲ ಹಾಗು ಎಡಭಾಗದ ತೀರದುದ್ದಕ್ಕೂ ಜನವಸತಿ ಪ್ರಮಾಣವು ಸಮವಾಗಿ ವಿಭಜಿಸಲ್ಪಟ್ಟಿತು. ಬ್ಯಾಬಿಲೋನ್ ಕಾಲಸರಿದಂತೆಲ್ಲ ಬೆಳೆದು,ಭವ್ಯತೆಯನ್ನು ಪಡೆದುಕೊಂಡಿತಾದರೂ, ನಿಧಾನವಾಗಿ ಅಸಿರಿಯನ್ನರ ಅಳ್ವಿಕೆಗೆ ಒಳಪಟ್ಟಿತು.
ಬ್ಯಾಬಿಲೋನ್ ca. ಕ್ರಿಸ್ತಪೂರ್ವ1770 ರಿಂದ ಕ್ರಿಸ್ತಪೂರ್ವ 1670 ರ ವರೆಗು ಹಾಗು ca. ಕ್ರಿಸ್ತಪೂರ್ವ 612 ರಲ್ಲಿ ಮತ್ತು ಕ್ರಿಸ್ತಪೂರ್ವ320 ರಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ನಗರವಾಗಿತ್ತು ಎಂದು ಅಂದಾಜು ಮಾಡಲಾಗಿದೆ. ಬಹುಶಃ ಇದು 200,000ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ಮೊದಲ ನಗರವಾಗಿದೆ.[೫]
ಅಸಿರಿಯನ್ ಕಾಲ
[ಬದಲಾಯಿಸಿ]ಅಸಿರಿಯಾದ ಸೆನ್ನಾಚೆರಿಬ್ ರ ಆಳ್ವಿಕೆಯ ಕಾಲದಲ್ಲಿ ,ಬ್ಯಾಬಿಲೋನಿಯಾದಲ್ಲಿ ಮುಶೆಸಿಜಿಬ್-ಮರ್ದುಕ್ ಮುಂದಾಳತ್ವದಲ್ಲಿ ನಿರಂತರವಾಗಿ ದಂಗೆಗಳು ನಡೆಯುತ್ತಿದ್ದವು .ಈ ದಂಗೆಗಳನ್ನು ಬ್ಯಾಬಿಲೋನ್ ನ ನಗರವನ್ನು ಸಂಪೂರ್ಣ ಧ್ವಂಸಮಾಡುವ ಮೂಲಕ ಅಡಗಿಸಲಾಯಿತು. ಕ್ರಿಸ್ತಪೂರ್ವ 689ರಲ್ಲಿ, ಗೋಡೆಗಳನ್ನು ,ದೇವಸ್ಥಾನಗಳನ್ನು ಹಾಗು ಸ್ಥಳಗಳನ್ನು ಧ್ವಂಸಮಾಡಲಾಗಿತ್ತಲ್ಲದೇ,ಇವುಗಳ ಅವಶೇಷಗಳನ್ನು ಅರ್ಕುಟ್ಸ್ ಸಮುದ್ರದಕ್ಕೆ ಎಸೆಯಲಾಗಿದ್ದಿತ್ತು.ಈ ಸಮುದ್ರ ಹಿಂದೆ ಇದ್ದ ಬ್ಯಾಬಿಲೋನ್ ಗೆ ದಕ್ಷಿಣಭಾಗದಲ್ಲಿ ಎಲ್ಲೆಯಾಗಿದ್ದಿತ್ತು. ಈ ಕೃತ್ಯ ಮೆಸಪಟೋಮಿಯಾದ ಧಾರ್ಮಿಕ ಪ್ರಜ್ಞಾನವಂತರ ಮೇಲೆ ಆಘಾತವನ್ನು ಉಂಟುಮಾಡಿತು;ಅನಂತರ ಸೆನ್ನಚೆರಿಬ್ ನ ಮಕ್ಕಳು ಈ ಕೃತ್ಯಕ್ಕೆ ಪ್ರಾಯಶ್ಚಿತ್ತವೆಂಬಂತೆ ಅವನನ್ನು ಕೊಂದರಲ್ಲದೇ , ಅವನ ಉತ್ತರಾಧಿಕಾರಿಯಾದ ಇಸರ್ ಹದ್ದುನ್ ರಾಜನಾಗಲು ಹಳೆಯ ನಗರವನ್ನು ಪುನರ್ನಿರ್ಮಿಸಲು ತ್ವರೆಮಾಡಿದನು.ಅಲ್ಲದೇ ಅವನ ಅಳ್ವಿಕೆಯ ಕಾಲದ ಸಂದರ್ಭದಲ್ಲಿ ಅದನ್ನು ತನ್ನ ವಾಸಸ್ಥಾನವಾಗಿಸಿಕೊಂಡನು. ಆತನ ಮರಣದ ನಂತರ ಬ್ಯಾಬಿಲೋನಿಯ, ಆತನ ಮೊದಲನೆಯ ಮಗನಾದ ಶಮಶ್-ಶುಮ್-ಯುಕಿನ್ ನ ಅಳ್ವಿಕೆಗೆ ಒಳಪಟ್ಟಿತು, ಇವನು ಕ್ರಿಸ್ತಪೂರ್ವ 652 ರಲ್ಲಿ ಇತನ ತಮ್ಮನಾದ ಅಸುರ್ ಬಾನಿಪಾಲ್ ನ ವಿರುದ್ಧ ನಿನೆವ್ ನಲ್ಲಿ ಸತತವಾಗಿ ಹೋರಾಡುತ್ತಿರಬೇಕಾಯಿತು.
ಬ್ಯಾಬಿಲೋನ್ ಮತ್ತೊಮ್ಮೆ ಅಸಿರಿಯನ್ನ ರ ಕೈಕೆಳಗೆ ಬಂದದ್ದಲ್ಲದೇ, ಅವರನ್ನು ಹಸಿವಿನಿಂದ ಬಳಲಿಸಿ ವಶಪಡಿಸಿಕೊಂಡರು. ಅಸುರ್ ಬಾನಿಪಾಲ್ ನಗರವನ್ನು ಸ್ವಚ್ಛ ಗೊಳಿಸಿದ್ದಲ್ಲದೇ , "ಸಮನ್ವಯ ಸೇವೆಯನ್ನು" ಆಚರಿಸಿದನು,ಆದರೆ "ಬೆಲ್ ನಿಂದ ಹಿಂತೆಗೆಯಲು ಆತನಿಗೆ " ಧೈರ್ಯ ಸಾಲಲಿಲ್ಲ. ಅಸಿರಿಯನ್ ಸಾಮ್ರಾಜ್ಯದ ಪತನದ ನಂತರ,ಬ್ಯಾಬಿಲೋನಿಯನ್ನರು ದೇವರ ಮತ್ತೊಂದು ಕೋಪಕ್ಕೆ ಗುರಿಯಾಗಬೇಕಾಯಿತು. (ಅಲ್ಬರ್ಟ್ ಹೌಟಂಮ್-ಸ್ನ್ಚಿನ್ಡಲರ್, "ಬ್ಯಾಬಿಲೋನ್," ಎನ್ ಸೈಕ್ಲೋಪೀಡಿಯ ಬ್ರಿಟಾನಿಕ , 11ನೇ ed.)
ನಿಯೋ-ಬ್ಯಾಬಿಲೋನಿಯನ್ ಕ್ಯಾಲ್ಡೀಯನ್ ಸಾಮ್ರಾಜ್ಯ
[ಬದಲಾಯಿಸಿ]ನ್ಯಾಬೊಪೊಲಾಸರ್ನ ಅಳ್ವಿಕೆಯಲ್ಲಿ , ಬ್ಯಾಬಿಲೋನ್ ನಲ್ಲಿದ್ದ ಅಸಿರಿಯನ್ ನಿಯಮಗಳನ್ನು ಕ್ರಿಸ್ತಪೂರ್ವ 612 ರಲ್ಲಿ ತೆಗೆದುಹಾಕಿದ್ದಲ್ಲದೇ, ಬ್ಯಾಬಿಲೋನ್ ಅನ್ನು ನಿಯೋ-ಬ್ಯಾಬಿಲೋನಿಯನ್ ಕ್ಯಾಲ್ಡೀಯನ್ ಸಾಮ್ರಾಜ್ಯದ ರಾಜಧಾನಿಯನ್ನಾಗಿಸಿಕೊಂಡ.[೬][೭][೮]
ಬ್ಯಾಬಿಲೋನಿಯನ್ ಸ್ವತಂತ್ರವನ್ನು ಪುನಸ್ಸಂಪಾದಿಸುವ ಮೂಲಕ, ವಾಸ್ತುಶಿಲ್ಪದ ಹೊಸ ಯುಗವೇ ಹುಟ್ಟಿಕೊಂಡಿತು.ಇವನ ಮಗನಾದ ನೆಬುಕಡ್ನಿಜರ್ II (ಕ್ರಿಸ್ತಪೂರ್ವ604–561) ಬ್ಯಾಬಿಲೋನ್ ಅನ್ನು ಪ್ರಾಚೀನ ಪ್ರಪಂಚದ ಅದ್ಭುತಗಳಲ್ಲಿ ಒಂದಾಗಿಸಿದ.[೯] ನೆಬುಕಡ್ನಿಜರ್ ಎಟಮೆನ್ಯಾನ್ಕಿ ಜಿಗ್ಗುರಾತ್ ಅನ್ನು ಒಳಗೊಂಡಂತೆ ಅರಮನೆಗಳನ್ನು ಹಾಗು ಇಷತರ್ ಗೇಟ್ ಅನ್ನು ಸಂಪೂರ್ಣವಾಗಿ ಪುನಃ ನಿರ್ಮಿಸುವಂತೆ ಆಜ್ಞೆಮಾಡಿದನು.ಇದು ಬ್ಯಾಬಿಲೋನ್ ಅನ್ನು ಸುತ್ತುವರೆದಿರುವ ಎಂಟು ದ್ವಾರಗಳಲ್ಲಿ ಅತ್ಯಂತ ಅದ್ಭುತವಾದ ಗೇಟ್(ಬಾಗಿಲು) ಆಗಿದೆ. ಇಷತರ್ ಗೇಟ್ ಅನ್ನು ಬರ್ಲಿನ್ನಲ್ಲಿರುವ ಪೆರ್ಗಾಮಾನ್ ಸಂಗ್ರಹಾಲಯದಲ್ಲಿ ಪುನರ್ನಿರ್ಮಿಸಲಾಯಿತು. ಏಕೆಂದರೆ ಹಿಂದೆ ಇದ್ದ ಇಷತರ್ ಗೇಟ್ ನಲ್ಲಿ ಕೇವಲ ತಳಪಾಯ ಹಾಗು ಚೆಲ್ಲ ಪಿಲ್ಲಿಯಾಗಿ ಬಿದ್ದಿರುವ ಇಟ್ಟಿಗೆಗಳು ಮಾತ್ರ ಕಾಣಸಿಗುತ್ತವೆ. ನೆಬುಕಡ್ನಿಜರ್ ,ಬ್ಯಾಬಿಲೋನ್ ನ ತೂಗು ತೋಟ (ಪ್ರಾಚೀನ ಪ್ರಪಂಚದ ಏಳು ಅದ್ಭುತಗಳಲ್ಲಿ ಇದೂ ಒಂದು)ವನ್ನು ನಿರ್ಮಿಸಿದ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ, ಇದನ್ನು ಈತನ ಪ್ರೀತಿ ಪಾತ್ರಳಾದ ಹೆಂಡತಿ ಅಮೈಟಿಸ್ ಗಾಗಿ ಕಟ್ಟಿಸಿದ್ದನೆಂದು ಹೇಳಲಾಗಿದೆ. ತೋಟಗಳು ಯುದ್ಧಗಳಿಂದ ಧ್ವಂಸವಾಗಿರಬಹುದು. ಜರ್ಮನ್ ಪುರಾತತ್ತ್ವ ಶಾಸ್ತ್ರಜ್ಞನಾದ ರಾಬರ್ಟ್ ಕೋಲ್ಡೆವೇ ಯ ಭೂಶೋಧನೆಗಳು ಇದರ ಸ್ಥಾಪನೆಯನ್ನು ಬಯಲುಮಾಡಿದರೂ, ಅನೇಕ ಇತಿಹಾಸಕಾರರು ಇದರ ಸ್ಥಳದ ಬಗ್ಗೆ ಅಸಮ್ಮತಿ ಹೊಂದಿದ್ದಾರಲ್ಲದೇ ಇವು ನೈನ್ ವೇ ಯಲ್ಲಿರುವ ತೋಟಗಳಾಗಿರಬಹುದೆಂದು ಕೆಲವರು ತಪ್ಪು ತಿಳಿದುಕೊಂಡಿದ್ದಾರೆ.
ಬ್ಯಾಬಿಲೋನ್ ಅನ್ನು ಪರ್ಷಿಯ ವಶಪಡಿಸಿಕೊಂಡದ್ದು
[ಬದಲಾಯಿಸಿ]ಕ್ರಿಸ್ತಪೂರ್ವ 539 ರಲ್ಲಿ, ಹಿಂದೆಂದೂ ನಡೆಯದ ಒಪೀಸ್ ಕದನದಲ್ಲಿ ನಿಯೋ-ಬ್ಯಾಬಿಲೋನಿಯನ್ ಸಾಮ್ರಾಜ್ಯವು ಪರ್ಷಿಯಾದ ಶ್ರೇಷ್ಠ ರಾಜನಾದ ಸೈರಸ್ ನ ವಶವಾಯಿತು. ಬ್ಯಾಬಿಲೋನ್ ನ ಹೆಸರಾಂತ ಗೋಡೆಗಳನ್ನು ಭೇಧಿಸುವುದು ಅಸಾಧ್ಯವಾಗಿತ್ತು. ಇದರ ಅನೇಕ ಗೇಟ್ ಗಳಲ್ಲಿ ಕೇವಲ ಒಂದು ಗೇಟಿನ ಮೂಲಕ ಅಥವಾ ದಪ್ಪ ಗೋಡೆಯ ಕೆಳಗೆ ನೀರಿನ ಉಬ್ಬರ ಕಡಿಮೆ ಇದ್ದಾಗ ಯುಪ್ರಿಟೀಸ್ ನದಿಯ ಮೂಲಕ ಮಾತ್ರ ನಗರದೊಳಗೆ ಪ್ರವೇಶಿಸಬಹುದಾಗಿದ್ದಿತು. ನದಿಗಳ ಅಂತಃಪ್ರವಾಹ ಹಾಗು ಬಹಿಃಪ್ರವಾಹದಲ್ಲಿರುವ ಮೆಟಲ್ ಗೇಟ್ ಗಳು ಅಂತರ್ಜಲದಮೂಲಕ ಪ್ರವೇಶಿಸುವವರನ್ನು ತಡೆಹಿಡಿಯುತ್ತಿದ್ದವು.ಅವುಗಳನ್ನು ತಲುಪಲು ಉಸಿರನ್ನು ಹಿಡಿದಿಟ್ಟುಕೊಳ್ಳಬೇಕು. ಸೈರಸ್ (ಅಥವಾ ಅವನ ಸೇನಾಪತಿ) ಯುಪ್ರಿಟೀಸ್ ನದಿಯನ್ನು ಬಳಸಿಕೊಂಡು ನಗರವನ್ನು ಪ್ರವೇಶಿಸಲು ಬಳಸುವ ಯೋಜನೆಯನ್ನು ರೂಪಿಸಿದ್ದನು. ಪ್ರತಿಯೊಂದು ಮೂಲೆಯಲ್ಲೂ ದೊಡ್ದ ಸೈನ್ಯವನ್ನು ನಿಲ್ಲಿಸಿ, ಸಂಜ್ಞೆ ಮಾಡುವವರೆಗು ಕಾಯುವಂತೆ ಸೂಚನೆ ನೀಡಿದ್ದನು. ಬ್ಯಾಬಿಲೋನಿಯನ್ನರು ರಾಷ್ಟ್ರೀಯ ಹಬ್ಬದ ನೀರಿಕ್ಷೆಯಲ್ಲಿದ್ದಾಗ (ಡ್ಯಾನಿಯಲ್ V ಯಲ್ಲಿ ಹೇಳಿರುವಂತೆ ಇದು ಬ್ಲೆಷಜರ್ ನ ಹಬ್ಬವಾಗಿದೆ)ಸೈರಸ್ ನ ಸೈನ್ಯವು ಯುಪ್ರಿಟೀಸ್ ನದಿಯನ್ನು ಯುಪ್ರಿಟೀಸ್ ನದಿಯ ನೀರನ್ನು ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಾಗುವಂತೆ ಬದಲಾಯಿಸುವ ಮೂಲಕ ಮನುಷ್ಯನ ಮಂಡಿಯವರೆಗು ಹರಿಯುವಂತೆ ಅಥವಾ ಸಂಪೂರ್ಣವಾಗಿ ಬತ್ತಿ ಹೋಗುವಂತೆ ಮಾಡಿದ. ಸೈನಿಕರು ಮೊಣಕಾಲ ವರೆಗಿನ ನೀರಿನಲ್ಲಿ ಅಥವಾ ಒಣಗಿದ ಕೆಸರಿನಲ್ಲಿ ಗೋಡೆಯ ಕೆಳಗೆ ನುಗ್ಗಿದರು. ನಗರದ ಕೇಂದ್ರದಲ್ಲಿದ್ದ ಬಹುಪಾಲು ಬ್ಯಾಬಿಲೋನಿಯನ್ನರ ನಡುವೆ ಒಡಕಿದ್ದಾಗ ಪರ್ಷಿಯನ್ ಸೈನ್ಯವು ನಗರದ ಹೊರವಲಯದಲ್ಲಿರುವ ನಗರಗಳನ್ನು ಆಕ್ರಮಿಸಿದ್ದಿತ್ತು. ಹೆರೋಡಟಸ್ ಇದನ್ನು ಸವಿಸ್ತಾರವಾಗಿ ಬರೆದಿದ್ದಾನಲ್ಲದೇ,[೧೦] ಇದನ್ನು ಹೀಬ್ರೂ ಬೈಬಲ್ ನ ಒಂದು ಭಾಗದಲ್ಲಿಯೂ ಹೇಳಲಾಗಿದೆ.[೧೧][೧೨] ಸೈರಸ್ ಬ್ಯಾಬಿಲೋನ್ ನ ಗೇಟ್ ನ ಮೂಲಕ ಪ್ರವೇಶಿಸಿ, ಅಶಕ್ತರಾಗಿದ್ದ ಹಾಗು ಅಮಲಿನಲ್ಲಿದ್ದ ಬ್ಯಾಬಿಲೋನಿಯನ್ನರ ಜೊತೆಯಲ್ಲಿ ನಗರವನ್ನು ಆಕ್ರಮಿಸಿದನು.
ತರುವಾಯ ಸೈರಸ್, ಜೂ ಗಳನ್ನು ಒಳಗೊಂಡಂತೆ ಸೆರೆಹಿಡಿದಿದ್ದ ಜನರನ್ನು ಅವರ ಪ್ರದೇಶಕ್ಕೆ ಮರಳಿಸುವಂತೆ(ಹಳೆಯ ಒಡಂಬಡಿಕೆಯಲ್ಲಿ ಹೇಳಿರುವಂತೆ) ಹಾಗು ಅವರ ದೇವಸ್ಥಾನಗಳನ್ನು ಜೆರೂಸಲಮ್ ನಲ್ಲಿ ಮತ್ತೆ ಕಟ್ಟಲು ಅವಕಾಶನೀಡುವಂತೆ ಆಜ್ಞೆ ಹೋರಡಿಸಿದನು.
ಸೈರಸ್ ಹಾಗು ಅನಂತರದ ಪರ್ಷಿಯನ್ ರಾಜನಾದ ಶ್ರೇಷ್ಠ ದೊರೆ ಡ್ಯಾರಿಯಸ್ ನ ಕೈಕೆಳಗೆ , ಬ್ಯಾಬಿಲೋನ್ 9ನೇ ಪ್ರಾಂತ್ಯದ ರಾಜಧಾನಿಯಾಯಿತು.(ದಕ್ಷಿಣಕ್ಕೆ ಬ್ಯಾಬಿಲೋನಿಯ ಹಾಗು ಉತ್ತರಕ್ಕೆ ಅಥುರ),ಅಲ್ಲದೇ ಕಲಿಕೆಯ ಹಾಗು ವೈಜ್ಞಾನಿಕ ಪ್ರಗತಿಯ ಕೇಂದ್ರವಾಯಿತು. ಪರ್ಷಿಯಾದ ಅಕೀಮನಿಡ್ ರ ಕಾಲದಲ್ಲಿ , ಪ್ರಾಚೀನ ಬ್ಯಾಬಿಲೋನಿಯನ್ನರ ಖಗೋಳ ವಿಜ್ಞಾನ ಹಾಗು ಗಣಿತಶಾಸ್ತ್ರದ ಕಲೆಗಳು ಪುನಃ ಚೈತನ್ಯ ಪಡೆದವು ಹಾಗು ಅಭಿವೃದ್ಧಿ ಹೊಂದಿದವು. ಬ್ಯಾಬಿಲೋನಿಯನ್ ವಿದ್ವಾಂಸರು ನಕ್ಷತ್ರ ಪುಂಜಗಳ ನಕ್ಷೆಯನ್ನು ತಯಾರಿಸಿದರು. ನಗರವು ಪರ್ಷಿಯನ್ ಸಾಮ್ರಾಜ್ಯದ ಆಡಳಿತ ಕೇಂದ್ರವಾಯಿತು ,ಆಗ ಇದ್ದಂತಹ ನಗರಗಳಲ್ಲಿ ಅತ್ಯಂತ ಶ್ರೇಷ್ಠವಾದ ಹಾಗು ಶಕ್ತಿಶಾಲಿಯಾದ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದಿತ್ತು. ಅಲ್ಲದೇ ಆ ಪ್ರದೇಶದ ಸುಮಾರು ಎರಡು ಶತಮಾನಗಳ ಇತಿಹಾಸದಲ್ಲಿ ಪ್ರಮುಖ ಪಾತ್ರವಹಿಸಿದೆ. ಆ ಶತಮಾನವನ್ನು ಅರ್ಥೈಸಿಕೊಳ್ಳಲ್ಲು ಇದು ಸ್ಪಷ್ಟ ಚಿತ್ರಣವನ್ನು ನೀಡುತ್ತದೆ ಎಂದು ಪ್ರಮುಖ ಪುರಾತತ್ತ್ವ ಸಂಶೋಧನೆಗಳು ತಿಳಿಸಿವೆ.[೧೩][೧೪]
ಹಿಂದೆ ಇದ್ದ ಪರ್ಷಿಯನ್ ರಾಜರುಗಳು ಮರ್ದುಕ್ ನ ಧಾರ್ಮಿಕ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಿಸಿದರು, ಆದರೆ ಡ್ಯಾರಿಯಸ್ III ನ ಕಾಲದಲ್ಲಿ, ಅತಿಯಾದ ತೆರಿಗೆ ಹಾಗು ಅಸಂಖ್ಯಾತ ಯುದ್ಧಗಳ ಕಾರಣ ಬ್ಯಾಬಿಲೋನಿಯನ್ನರ ಪವಿತ್ರ ಸ್ಮಾರಕಗಳು ಹಾಗು ಕಾಲುವೆಗಳು, ಅಲ್ಲದೇ ಸುತ್ತಲಿನ ಪ್ರದೇಶಗಳು ನಾಶವಾದವು. ಕ್ರಿಸ್ತಪೂರ್ವ 522 , ಕ್ರಿಸ್ತಪೂರ್ವ521 ಹಾಗು ಕ್ರಿಸ್ತಪೂರ್ವ 482ರಲ್ಲಿ ನಡೆದ ಮೂರು ದಂಗೆಗಳ ಹೊರತಾಗಿಯೂ ಕ್ರಿಸ್ತಪೂರ್ವ 331ರಲ್ಲಿ ಶೇಷ್ಠ ರಾಜನಾದ ಅಲೆಗ್ಸಾಂಡರ್ ಪ್ರವೇಶಿಸುವ ವರೆಗೂ ಬ್ಯಾಬಿಲೋನ್ ನ ರಾಜ್ಯ ಹಾಗು ನಗರಗಳು ಪರ್ಷಿಯನ್ ರ ಹಿಡಿತದಲ್ಲೇ ಉಳಿದುಕೊಂಡಿದ್ದವು.
ಹೆಲಿನಿಸ್ಟಿಕ್ ಕಾಲ
[ಬದಲಾಯಿಸಿ]ಕ್ರಿಸ್ತಪೂರ್ವ 331 ರಲ್ಲಿ ಡೇರಿಯಸ್ III, ಪ್ರಾಚೀನ ಗ್ರೀಕ್ ಪ್ರಭುವಾದ ಶ್ರೇಷ್ಠ ದೊರೆ ಅಲೆಗ್ಸಾಂಡರ್ ನ ಸೈನ್ಯನದಿಂದ ಗೌಗಮೇಲ ಕದನದಲ್ಲಿ ಸೋಲಲ್ಪಟ್ಟನ್ನಲ್ಲದೇ, ಅಕ್ಟೋಬರ್ ನಲ್ಲಿ ಬ್ಯಾಬಿಲೋನ್ ಯುವ ಸಾಮ್ರಾಟನ ಅಳ್ವಿಕೆಗೊಳಪಟ್ಟಿತು. ಈ ದಾಳಿಯ ಬಗೆಗಿನ ಸ್ಥಳಿಯ ವೃತ್ತಾಂತದ ಪ್ರಕಾರ ಅಲೆಗ್ಸಾಂಡರ್ ಅಲ್ಲಿಯ ನಿವಾಸಿಗಳನ್ನು ಲೂಟಿಮಾಡುವಂತಿರಲಿಲ್ಲ.[೧೫]
ಅಲೆಗ್ಸಾಂಡರ್ ನ ಆಡಳಿತದಲ್ಲಿ, ಬ್ಯಾಬಿಲೋನ್ ಮತ್ತೇ ವ್ಯಾಪಾರದ ಹಾಗು ಕಲಿಕೆಯ ಕೇಂದ್ರವಾಗಿ ಅಭಿವೃದ್ಧಿ ಹೊಂದಿತು. ಕ್ರಿಸ್ತಪೂರ್ವ 323 ರಲ್ಲಿ ಅಲೆಗ್ಸಾಂಡರ್ ,ನೆಬುಕಡ್ನಿಜರ್ ಅರಮನೆಯಲ್ಲಿ ಸಾವನ್ನಪ್ಪಿದ ನಂತರ ಅವನ ಸಾಮ್ರಾಜ್ಯವು ಅವನ ಸೇನಾಧಿಪತಿಗಳೊಳಗೆ ಹಂಚಿಹೋಯಿತು. ಬ್ಯಾಬಿಲೋನ್ ಮಧ್ಯವಧಿಯಲ್ಲಿ ಮತ್ತೊಮ್ಮೆ ಸಿಕ್ಕಿಕೊಳ್ಳುವುದರ ಜೊತೆಯಲ್ಲಿ ಹೋರಾಟದ ಯುಗ ಪ್ರಾರಂಭವಾಯಿತು.
ಗದ್ದುಗೆಗಾಗಿ ನಡೆಯುತ್ತಿದ್ದ ನಿರಂತರ ಗಲಭೆಗಳು ಬ್ಯಾಬಿಲೋನ್ ಅನ್ನು ಬರಿದಾಗಿಸಿದವು. ಕ್ರಿಸ್ತಪೂರ್ವ 275 ರಲ್ಲಿ ಬರೆಸಿರುವ ಶಾಸನಫಲಕದಲ್ಲಿ ತಿಳಿಸಿರುವಂತೆ ಬ್ಯಾಬಿಲೋನ್ ನ ಮೂಲನಿವಾಸಿಗಳನ್ನು ಹೊಸದಾಗಿ ರೂಪುಗೊಂಡ ಹಾಗು ಇಸಗಿಲ್ಲವೆಂಬ ಪ್ರಾಚೀನ ಹೆಸರು ಕೊಡಲಾದ ಸೆಲ್ಯೂಶಿಯಾಕ್ಕೆ ರವಾನಿಸಲಾಯಿತು. ಹೀಗೆ ಗಡೀಪಾರು ಮಾಡಿದ್ದರಿಂದ,ಬ್ಯಾಬಿಲೋನ್ ನ ಇತಿಹಾಸ ಮುಕ್ತಾಯವಾಗುವ ಸ್ಥಿತಿ ತಲುಪಿತು, ಆದರೂ ಒಂದು ಶತಮಾನಕ್ಕೂ ಹೆಚ್ಚು ಕಾಲದ ನಂತರವೂ,ಅದರ ಹಳೆಯ ಪವಿತ್ರ ಸ್ಥಳಗಳಲ್ಲಿ ಬಲಿಗಳು ನಿಲ್ಲಲಿಲ್ಲ.[೧೬] ಕ್ರಿಸ್ತಪೂರ್ವ 141ರಲ್ಲಿ ಪಾರ್ತಿಯನ್ ಸಾಮ್ರಾಜ್ಯದಾಳ್ವಿಕೆಗೆ ಒಳಪಟ್ಟಾಗ , ಬ್ಯಾಬಿಲೋನ್ ಸಂಪೂರ್ಣವಾಗಿ ನಾಶಹೊಂದಿತ್ತಲ್ಲದೇ, ಅದರ ಮೇಲೆ ಸಂಪೂರ್ಣವಾದ ಮಬ್ಬು ಕವಿದಿದ್ದಿತ್ತು.
ಪರ್ಷಿಯನ್ ಸಾಮ್ರಾಜ್ಯದ ಕಾಲ
[ಬದಲಾಯಿಸಿ]ಪಾರ್ತಿಯನ್ನರ ಆಳ್ವಿಕೆಯಲ್ಲಿ, ಹಾಗು ನಂತರದ, ಸ್ಯಾಸನಿಡ್ ಪರ್ಷಿಯನ್ನರ ಅಳ್ವಿಕೆಯಡಿಯಲ್ಲಿ, ಬ್ಯಾಬಿಲೋನ್ ಒಂಭತ್ತು ಶತಮಾನಗಳತನಕ ಕ್ರಿಸ್ತಶಕ 650 ರ ವರೆಗೂ ಪರ್ಷಿಯನ್ ಸಾಮ್ರಾಜ್ಯದ ಪ್ರಾಂತ್ಯ ಪ್ರದೇಶವಾಗಿ ಉಳಿದುಕೊಂಡಿತು.ಇದು ಅರ್ಮೇಯಿಕ್ ವರ್ಗದ ವಿವಿಧ ಭಾಷೆಗಳನ್ನು ಮಾತನಾಡುವ ಅದರದೇ ಅದ ಜನರನ್ನು ಹಾಗು ಸಂಸ್ಕೃತಿಯನ್ನು ಹೊಂದುತ್ತ ಹೋಯಿತು. ಈ ಜನರು ಬ್ಯಾಬಿಲೋನ್ ಆನ್ನು ಅವರ ಜನ್ಮಸ್ಥಳವೆಂದು ಹೇಳಿಕೊಳ್ಳಲ್ಲು ಪ್ರಾರಂಬಿಸಿದರು. ಅವರ ಸಾಂಸ್ಕೃತಿಕ ಉತ್ಪನ್ನಗಳಿಗೆ ಕೆಲವು ಉದಾಹರಣೆಗಳು ಬ್ಯಾಬಿಲೋನಿಯನ್ ಟಾಲ್ ಮಡ್ ನಲ್ಲಿ , ಮ್ಯಾನ್ ಡೀನ್ ಪ್ರದೇಶದಲ್ಲಿ, ಹಾಗು ಮಣಿ ಎಂಬ ಸಂತನ ಪ್ರದೇಶಗಳಲ್ಲಿ ವಿರಳವಾಗಿ ಕಂಡುಬಂದಿವೆ. ಕ್ರಿಸ್ತಶಕ 1 ಮತ್ತು 2 ನೇಯ ಶತಮಾನಗಳಲ್ಲಿ ಕ್ರೈಸ್ತಧರ್ಮ ಮೆಸಪಟೋಮಿಯದಲ್ಲಿ ಕಾಣಿಸಿಕೊಂಡಿತಲ್ಲದೇ , ಬ್ಯಾಬಿಲೋನ್ ಚರ್ಚ್ ಆಫ್ ದಿ ಈಸ್ಟ್ ನ ಬಿಷಪ್ ರವರ ವಾಸಸ್ಥಾನವಾಯಿತು.
ಪುರಾತತ್ತ್ವ ಶಾಸ್ತ್ರ
[ಬದಲಾಯಿಸಿ]ಬ್ಯಾಬಿಲೋನ್ ಪ್ರದೇಶವು ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಸುಮಾರು 2 ಅಥವಾ 1 ಕಿಲೋಮೀಟರ್ ವರೆಗೂ ಇರುವಂತಹ ಉದ್ದವಾದ ಪ್ರದೇಶಗಳಿಂದ ಸುತ್ತುವರೆದಿರುವುದಲ್ಲದೇ ಅನೇಕ ದಿಣ್ಣೆಗಳನ್ನು ಒಳಗೊಂಡಿದೆ.[ಸೂಕ್ತ ಉಲ್ಲೇಖನ ಬೇಕು] ಈ ಪ್ರದೇಶವು ಪಶ್ಚಿಮಕ್ಕೆ ಯುಪ್ರಿಟೀಸ್ ನದಿಯಿಂದ ಸುತ್ತುವರೆಯಲ್ಪಟ್ಟಿದ್ದು, ಉಳಿದಭಾಗಗಳು ನಗರದ ಪ್ರಾಚೀನ ಗೋಡೆಗಳಿಂದ ಸುತ್ತುವರೆಯಲ್ಪಟ್ಟಿವೆ. ಯುಪ್ರಿಟೀಸ್ ನದಿಯು ಮೂಲತಃ ನಗರವನ್ನು ಇಬ್ಭಾಗವಾಗಿಸಿದೆ.ಇದು ಆ ಪ್ರದೇಶದಲ್ಲಿ ನಡೆದಿರುವ ಸಹಜ ಕ್ರಿಯೆಯಾಗಿದೆ. ಆದರೆ ನದಿಯು ಹರಿಯುವ ದಿಕ್ಕನ್ನು ಬದಲಾಯಿಸಿದ ಕಾರಣ ನಗರದ ಹಿಂದೇದ್ದಂತಹ ಪಶ್ಚಿಮ ಭಾಗದಲ್ಲಿ ಉಳಿದಿದ್ದ ಅವಶೇಷಗಳು ಈಗ ಪ್ರವಾಹದಲ್ಲಿ ಮುಳುಗಿಹೋಗಿವೆ. ನದಿಯ ಪಶ್ಚಿಮದಿಕ್ಕಿನಲ್ಲಿ ನಗರದ ಗೋಡೆಯ ಸ್ವಲ್ಪ ಭಾಗವೂ ಕೂಡ ಉಳಿದಿದೆ.ಈ ಪ್ರದೇಶದ ವಿಭಿನ್ನವಾದ ದಿಣ್ಣೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ.
ಅವುಗಳೆಂದರೆ:
- ಕಸರ್ – ಅರಮನೆ ಅಥವಾ ಕೋಟೆ ಎಂದೂ ಕೂಡ ಕರೆಯಲಾಗುತ್ತದೆ. ಇದು ನ್ಯಾಬೊಪೊಲಾಸರ್ ಕಟ್ಟಿಸಿದ ನಿಯೋ-ಬ್ಯಾಬಿಲೋನಿಯನ್ ಜಿಗ್ಗುರಾತ್ ಎಟಮೆನ್ಯಾನ್ಕಿ ಇರುವ ಸ್ಥಳವಾಗಿದ್ದು, ಬಳಿಕ ನೆಬುಕಡ್ನಿಜರ್ ಹಾಗು ಈ ಪ್ರದೇಶದ ಕೇಂದ್ರದಲ್ಲಿದೆ.
- ಅಮ್ರನ್ ಇಬ್ನ್ ಆಲಿ – ಇದು ದಕ್ಷಿಣದಲ್ಲಿದ್ದು, 25 ಮೀಟರ್ ಉದ್ದವಿರುವ ಮೂಲಕ ಅತ್ಯಂತ ಉದ್ದದ ದಿಣ್ಣೆಯಾಗಿದೆ. ಇದು ಈಸಗಿಲ ವಿರುವ ಪ್ರದೇಶವಾಗಿದೆ. ,ಈಸಗಿಲ ಮರ್ದುಕ್ ನ ದೇವಸ್ಥಾನವಾಗಿದ್ದು ,ಎಅ ಮತ್ತು ನಬು ದೇವರುಗಳಿಗೆ ಗುಡಿಯನ್ನು ಒಳಗೊಂಡಿದೆ.
- ಹೊಮೆರಾ – ಪಶ್ಚಿಮದಿಕ್ಕಿನಲ್ಲಿರುವ ನಸುಗೆಂಪಾದ ದಿಣ್ಣೆಯಾಗಿದೆ. ಬಹುಪಾಲು ಹೆಲಿನಿಸ್ಟಿಕ್ ನ ಅವಶೇಷಗಳು ಇಲ್ಲಿವೆ.
- ಬ್ಯಾಬಿಲ್ – ಪ್ರದೇಶದ ಉತ್ತರದ ಕೊನೆಯಲ್ಲಿದೆಯಲ್ಲದೇ, ಸುಮಾರು 22 ಮೀಟರ್ ಗಳಷ್ಟು ಎತ್ತರವಾಗಿದೆ. ಪ್ರಾಚೀನಕಾಲದಿಂದಲು ಬೃಹತ್ ಪ್ರಮಾಣದ ಇಟ್ಟಿಗೆಯನ್ನು ಇಲ್ಲಿ ಕದಿಯಲಾಗಿದೆ.(ಅಥವಾ ನಿಮ್ಮ ಪ್ರಕಾರ ಇಟ್ಟಿಗೆ ಮರುಬಳಕೆ). ಇದು ನೆಬುಕಡ್ನಿಜರ್ ಕಟ್ಟಿಸಿದ ಅರಮನೆಯನ್ನು ಹೊಂದಿದೆ.
ಮೊದಲನೆಯ ಬ್ಯಾಬಿಲೋನಿಯನ್ ರಾಜ ಸಂತತಿಯ ಕೈಕೆಳಗೆ 2ನೇ ಸಹಸ್ರವರ್ಷದ ಪೂರ್ವಾರ್ಧದಲ್ಲಿ ಹಾಗು ಮತ್ತೆ ನಂತರದ ಸಹಸ್ರವರ್ಷದಲ್ಲಿ ಬ್ಯಾಬಿಲೋನ್ ನ ಕಸ್ಸೈಟ್ ರಾಜ ಸಂತತಿಯಡಿಯಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವುದರ ಮೂಲಕ ಈ ಪ್ರದೇಶದಲ್ಲಿ ವೃತ್ತಿ ಜೀವನ 3ನೇ ಸಹಸ್ರವರ್ಷದಲ್ಲಿ ಕಂಡುಬಂದಿದೆ. ದುರಾದೃಷ್ಟವಶಾತ್, ಆ ಕಾಲದಿಂದ ಬ್ಯಾಬಿಲೋನ್ ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ಯಾವುದೇ ಅಭಿವೃದ್ಧಿ ಕಂಡುಬರಲಿಲ್ಲ. ಮೊದಲನೆಯದಾಗಿ, ಶತಮಾನಗಳ ನಂತರ ಈ ಪ್ರದೇಶದಲ್ಲಿ ನೀರುಜಾರನ್ನು ಮಾಡಲಾಯಿತಲ್ಲದೇ, ಪ್ರಸ್ತುದ ಪುರಾತತ್ತ್ವ ಶಾಸ್ತ್ರದ ವಿಧಾನಗಳು ನಿಯೋ-ಬ್ಯಾಬಿಲೋನಿಯನ್ ಸಾಮ್ರಾಜ್ಯಕ್ಕೆ ಅಪರಿಚಿತವಾಗಿದ್ದ ಕಾಲಕ್ಕಿಂತಲು ಮೊದಲೇ ಹಸ್ತಕೃತಿಗಳನ್ನು ಮಾಡಲಾಗಿತ್ತು. ಎರಡನೆಯದಾಗಿ , ನಿಯೋ-ಬ್ಯಾಬಿಲೋನಿಯನ್ನರು ನಗರದಲ್ಲಿ ಕಟ್ಟಡಗಳನ್ನು ಪುನರ್ನಿರ್ಮಿಸುವ ಬೃಹತ್ ಪ್ರಮಾಣದ ಯೋಜನೆಗಳನ್ನು ಹಾಕಿಕೊಂಡರು. ಈ ಯೋಜನೆಗಳಿಂದಾಗಿ ಹಿಂದಿನ ದಾಖಲೆಗಳೆಲ್ಲವು ಅಸ್ಪಷ್ಟವಾದವು ಅಥವಾ ನಾಶವಾದವು. ಮೂರನೆಯದಾಗಿ, ನಗರದ ಪಶ್ಚಿಮ ದಿಕ್ಕಿನ ಅರ್ಧ ಭಾಗದಲ್ಲಿರುವ ಬಹುಪಾಲು ಸ್ಥಳಗಳು ಈಗ ಯುಪ್ರಿಟೀಸ್ ನದಿಯಲ್ಲಿ ಮುಳುಗಿಹೋಗಿವೆ. ನಾಲ್ಕನೆಯದಾಗಿ, ಬ್ಯಾಬಿಲೋನ್ ಅನ್ನು ಅನೇಕ ಬಾರಿ ಲೂಟಿಮಾಡಲಾಯಿತು, 2ನೇ ಸಹಸ್ರವರ್ಷದಲ್ಲಿ ಹಿಟೈಟ್ಸ್ ಮತ್ತು ಎಲಮೈಟ್ಸ್ ಗಳ, ನಂತರ ನಿಯೋ-ಅಸಿರಿಯನ್ ಸಾಮ್ರಾಜ್ಯ ಹಾಗು 1ನೇಯ ಸಹಸ್ರವರ್ಷದಲ್ಲಿ ಅಕೀಮನಿಡ್ ಸಾಮ್ರಾಜ್ಯ ಲೂಟಿಮಾಡಿದರು. ಬ್ಯಾಬಿಲೋನಿಯನ್ನರು ಅವರ ಅಳ್ವಿಕೆಯ ವಿರುದ್ಧ ದಂಗೆ ಎದ್ದ ನಂತರ ಹೆಚ್ಚು ಲೂಟಿಮಾಡಿದರು. ಕೊನೆಯಾದಾಗಿ, ಕಟ್ಟಡ ಕಟ್ಟಲು ಬೇಕಾದ ವಸ್ತುಗಳಿಗಾಗಿ ವಾಣಿಜ್ಯ ಉದ್ದೇಶದಿಂದ ದೀರ್ಘಾವಧಿಯ ವರೆಗೆ ನೆಲವನ್ನು ಅಗೆಯಲಾಯಿತು.
ಅಂದಿನ ಬ್ಯಾಬಿಲೋನ್ ನ ಪರಿಚಯವನ್ನು ವಿವಿಧ ಪ್ರದೇಶಗಳಲ್ಲಿ ಕಂಡು ಬಂದಿರುವ ಶಾಸನಗಳ ಅವಶೇಷಗಳನ್ನು ಒಟ್ಟುಗೂಡಿಸುವ ಮೂಲಕ ನೋಡಬಹುದು, ಉದಾಹರಣೆಗೆ ಉರುಕ್, ನಿಪ್ಪುರ್, ಮತ್ತು ಹರಾಡಮ್ ನಲ್ಲಿ ಕಂಡುಬಂದಿವೆ. ಪುರಾತತ್ತ್ವ ಭೂಶೋಧನೆಯಿಂದ ಹಾಗು ಶಾಸ್ತ್ರೀಯ ಪದ್ಧತಿಗಳ ಮೂಲಕ ನಿಯೋ-ಬ್ಯಾಬಿಲೋನಿಯನ್ ನಗರದ ಮಾಹಿತಿಯನ್ನು ಕಂಡುಹಿಡಿಯಲಾಗಿದೆ. ಬಹುಶಃ ಟೆಸಿಯಾಸ್, ಹೆರೋಡಟಾಸ್, ಕ್ವೇನ್ಟಸ್ ಕರ್ಟಿಯಸ್ ರುಫುಸ್, ಸ್ಟರ್ಬೊ, ಹಾಗು ಕ್ಲೆಟರ್ಚಸ್ ರನ್ನು ಒಳಗೊಂಡಂತೆ ಅನೇಕ ಶಾಸ್ತ್ರೀಯ ಇತಿಹಾಸಗಾರರು ಬ್ಯಾಬಿಲೋನ್ ಅನ್ನು ವೀಕ್ಷಿಸಿ ವರ್ಣಿಸಿದ್ದಾರೆ. ಈ ವರದಿಗಳು ನಿಖರತೆಯಲ್ಲಿ ವ್ಯತ್ಯಾಸವನ್ನು ಹೊಂದಿರುವುದಲ್ಲದೇ, ಕೆಲವು ರಾಜಕೀಯ ಹಸ್ತಕ್ಷೇಪವಿದ್ದರೂ ಇವು ಉಪಯುಕ್ತ ಮಾಹಿತಿಯನ್ನು ಒದಗಿಸುತ್ತವೆ.
ಮೊದಲು ದಾಖಲಿಸಲ್ಪಟ್ಟ ಬ್ಯಾಬಿಲೋನ್ ನ ಪುರಾತತ್ತ್ವ ಭೂಶೋಧನೆಯನ್ನು ಕ್ಲೌಡಿಯಸ್ ಜೇಮ್ಸ್ ರಿಚ್ 1811-12ರಲ್ಲಿ ಹಾಗು 1817ರಲ್ಲಿ ಮತ್ತೆ ಮಾಡಿದ್ದರು.[೧೭][೧೮] ರಾಬರ್ಟ್ ಮಿಗ್ ನ್ಯಾನ್ 1827 ರಲ್ಲಿ ಈ ಪ್ರದೇಶವನ್ನು ಸಂಪೂರ್ಣವಾಗಿ ಉತ್ಖನನ ಮಾಡಿಸಿದರು.[೧೯] ವಿಲಿಯಂ ಲಾಫ್ಟಸ್ 1849 ರಲ್ಲಿ ಅಲ್ಲಿಗೆ ಭೇಟಿಕೊಟ್ಟಿದ್ದರು.[೨೦]
ಆಸ್ಟಿನ್ ಹೆನ್ರಿ ಲೇಯಾರ್ಡ್ 1850 ರಲ್ಲಿ ಅಲ್ಲಿಗೆ ಭೇಟಿಕೊಟ್ಟಾಗ ಅಲ್ಲಿಂದ ಹಿಂದಿರುಗುವ ಮೊದಲು ಕೆಲವು ಪರೀಕ್ಷೆಗಳನ್ನು ಮಾಡಿದ್ದರು.[೨೧] ಪುಲ್ಗೆನ್ಸ್ ಫ್ರೆಸ್ನೆಲ್ ಮತ್ತು ಜೂಲಿಯಸ್ ಒಪೇರ್ಟ್ ಬ್ಯಾಬಿಲೋನ್ ನಲ್ಲಿ 1852 ರಿಂದ 1854 ರ ವರೆಗೆ ಬೃಹತ್ ಪ್ರಮಾಣದಲ್ಲಿ ಭೂಶೋಧನೆ ನಡೆಸಿದರು. ದುರಾದೃಷ್ಟವಶಾತ್ ,ನಲವತ್ತು ಹಸ್ತಕೃತಿ ಗಳನ್ನು ಒಳಗೊಂಡಿದ್ದ ಮರದ ದಿಮ್ಮಿ ಟೈಗ್ರಿಸ್ ನದಿಯಲ್ಲಿ ಮುಳುಗಿ ಹೋದಾಗ ಅವರ ಪ್ರಯತ್ನದ ಬಹುಪಾಲು ಫಲಿತಾಂಶ ನಷ್ಟವಾಯಿತು.[೨೨][೨೩]
ಹೆನ್ರಿ ಕ್ರೇಸ್ ವಿಕ್ ರಾವಲ್ ಸನ್ ಮತ್ತು ಜಾರ್ಜ್ ಸ್ಮಿತ್ 1854 ರಲ್ಲಿ ಅಲ್ಲಿ ಸಂಕ್ಷಿಪ್ತವಾಗಿ ಕಾರ್ಯನಿರ್ವಹಿಸಿದರು. ಪ್ರಮುಖ ಉತ್ಖನನವೆಂದು ಕರೆಯಲ್ಪಡುವ ಮುಂದಿನ ಉತ್ಖನನವನ್ನು ಹಾರ್ಮ್ಯುಜ್ಡ್ ರಾಸ್ಸಮ್ ಎಂಬುವನ್ನು ಬ್ರಿಟಿಷ್ ಸಂಗ್ರಹಾಲಯದ ಪ್ರತಿನಿಧಿಯಾಗಿ ನಡೆಸಿದನು. ಈ ಕೆಲಸ 1879ರಲ್ಲಿ ಪ್ರಾರಂಭವಾಗಿ 1882 ರ ವರೆಗಗೂ ಮುಂದುವರೆಯಿತು.ಅಲ್ಲದೇ ಇದು ದೊಡ್ಡ ಪ್ರಮಾಣದಲ್ಲಿ ಅಲ್ಲಿ ನಡೆಯುತ್ತಿದ್ದ ಲೂಟಿಯಿಂದ ಪ್ರಚೋದಿಸಲ್ಪಟ್ಟಿತು. ಹಸ್ತಕೃತಿಗಳನ್ನು ಹುಡುಕಲು ಕೈಗಾರಿಕಾ ಮಟ್ಟದ ಶೋಧನೆಯನ್ನು ಮಾಡುವ ಮೂಲಕ ರಾಸ್ಸನ್ ಕ್ಯೂನಿಫಾಂ(ಕೋನಲಿಪಿಯ)ನಲ್ಲಿದ್ದ ಬೃಹತ್ ಪ್ರಮಾಣದ ಶಾಸನ ಫಲಕಗಳನ್ನು ಪಡೆದುಕೊಂಡನು. ಆ ದಿನಗಳಲ್ಲಿ ಸಾಮಾನ್ಯವಾಗಿದ್ದ ಸತತ ಪ್ರಯತ್ನದ ಉತ್ಖನನ ವಿಧಾನಗಳು ಪುರಾತತ್ತ್ವ ಶಾಸ್ತ್ರದ ಪರಿಸ್ಥಿತಿಗಳಿಗೆ ಹೆಚ್ಚು ಹಾನಿಯನ್ನುಂಟು ಮಾಡಿದ್ದವು.[೨೪][೨೫]
ಬ್ಯಾಬಿಲೋನ್ ನಲ್ಲಿ ಜರ್ಮನ್ ಓರಿಯಂಟಲ್ ಸೊಸೈಟಿಯಿಂದ ಕಳುಹಿಸಲಾದ ತಂಡವು ರಾಬರ್ಟ್ ಕೋಲ್ಡ್ ವೇ ಯ ನೇತೃತ್ವದಲ್ಲಿ ಮೊಟ್ಟ ಮೊದಲನೆಯ ವೈಜ್ಞಾನಿಕ ಪುರಾತತ್ತ್ವಶಾಸ್ತ್ರದ ಉತ್ಖನನವನ್ನು ನಡೆಸಿತು. ವಿಶ್ವಯುದ್ಧದ I ರ ಪ್ರವೇಶವಾಗುವವರೆಗೂ 1899 ರಿಂದ 1917 ರ ವರೆಗೆ ಪ್ರತಿವರ್ಷ ಉತ್ಖನನವನ್ನು ಮಾಡಲಾಗುತ್ತಿತ್ತು. ಆರಂಭಿಕ ಪ್ರಯತ್ನವನ್ನು ಮರ್ದುಕ್ ದೇವಸ್ಥಾನವನ್ನು ಒಳಗೊಂಡಂತೆ ಮಾಡಲಾಗಿತ್ತು. ಇದರ ಪ್ರಕ್ರಿಯೆಯು ಪುರಾತನ ಗೋಡೆಗಳ ವರಗೆ ಉತ್ಖನನ ಕಾರ್ಯ ನಡೆದು ಇದು ನಗರಕ್ಕೂ ವ್ಯಾಪಿಸಿತು. ಪತ್ತೆಹಚ್ಚಲಾದ ನೂರಾರು ಶಾಸನಫಲಕಗಳು, ಹಾಗು ಪ್ರಮುಖ ಇಷತರ್ ಗೇಟ್ ಅನ್ನು ಜರ್ಮನಿಗೆ ಸಾಗಿಸಲಾಯಿತು.[೨೬][೨೭][೨೮][೨೯][೩೦][೩೧]
ಮುಂದಿನ ಉತ್ಖನನವನ್ನು ಜರ್ಮನ್ ಪುರಾತತ್ತ್ವಶಾಸ್ತ್ರ ಸಂಸ್ಥೆಯಿಂದ ಹೇನ್ ರಿಚ್ J. ಲೆನ್ ಜೆನ್ 1956 ರಲ್ಲೂ ಹಾಗು ಹ್ಯಾನ್ಸ್ ಜೋರ್ಗ್ ಸ್ಕಿಮಿಡ್ 1962ರಲ್ಲೂ ನಡೆಸಿದರು. ಲೆನ್ ಜಿನ್ ಹೆಲಿನಿಸ್ಟಿಕ್ ರಂಗಮಂದಿರದ ಮೇಲೆ ಕಾರ್ಯನಿರ್ವಹಿಸಿದರೆ , ಸ್ಕಿಮಿಡ್ ಜಿಗ್ಗುರಾತ್ ಎಟಮೆನ್ಯಾನ್ಕಿ ದೇವಸ್ಥಾನದ ಮೇಲೆ ಕಾರ್ಯನಿರ್ವಹಿಸಿದನು.[೩೨]
ಸೆಂಟ್ರೊ ಸ್ಕ್ಯಾವಿ ಡಿ ಟೋರಿನೊ ಪರ್ ಇಲ್ ಮೆಡಿಯೊ ಓರಿಯಂಟೆ e l'ಏಷ್ಯ ಮತ್ತು ದಿ ಇರಾಕಿ-ಇಟಾಲಿಯನ್ ಪುರಾತತ್ತ್ವಶಾಸ್ತ್ರದ ವೈಜ್ಞಾನಿಕ ಸಂಸ್ಥೆಯ ಪ್ರತಿನಿಧಿಯಾಗಿ G. ಬರ್ಗಮಿನಿ, ಬ್ಯಾಬಿಲೋನ್ ನ ಪ್ರದೇಶಗಳ ಭೂಶೋಧನೆಯನ್ನು ಇತ್ತೀಚೆಗೆ ನಡೆಸಿದರು. ಈ ಕೆಲಸವು 1974 ರ ಉತ್ಖನನ ಕಾಲದಲ್ಲಿ ಆರಂಭವಾಯಿತಲ್ಲದೇ 1977 ರಲ್ಲಿ ನಡೆಸಲಾದ ಸ್ಥಳಾಕೃತಿಯ ಸರ್ವೆಯವರೆಗೂ ಮುಂದುವರೆಯಿತು.[೩೩] ಇದರಲ್ಲಿ ಹಳೆಯ ಜರ್ಮನ್ ಮಾಹಿತಿಯನ್ನು ಪುನಃ ಪರೀಕ್ಷಿಸಿದಾಗ ಹುಟ್ಟಿಕೊಂಡ ಪ್ರಶ್ನೆಗಳನ್ನು ಸ್ಪಷ್ಟಪಡಿಸುವ ಕಡೆಗೆ ಹೆಚ್ಚು ಗಮನಕೊಡಲಾಗಿತ್ತು. ಬರ್ಗ್ ಮಿನಿ 1987-1989 ರಲ್ಲಿ ಒಂದು ಶತಕದ ನಂತರ ಮತ್ತೆ ಉತ್ಖನನವನ್ನು ನಡೆಸಿದ. ಈ ಉತ್ಖನನದಲ್ಲಿ ಬ್ಯಾಬಿಲೋನ್ ನ ಕಾಲು ಭಾಗದಷ್ಟಿರುವ ಶು-ಅನ್ನ ನಗರದಲ್ಲಿರುವ ಇಷರ್ ಮತ್ತು ನಿನುರ್ತ ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶಗಳ ಕಡೆ ಗಮನಹರಿಸಲಾಯಿತು.[೩೪][೩೫]
ಬ್ಯಾಬಿಲೋನ್ ನಲ್ಲಿ ನವೀಕರಣದ ಪ್ರಯತ್ನಗಳು ನಡೆಯುವ ಸಂದರ್ಭದಲ್ಲಿ, ಇರಾಕಿ ಸ್ಟೇಟ್ ಆರ್ಗನೈಸೇಶನ್ ಫಾರ್ ಆನ್ಟಿಕ್ವಿಟಿ ಅಂಡ್ ಹೆರಿಟೇಜ್ ಸ್ವಲ್ಪ ಪ್ರಮಾಣದ ಉತ್ಖನನವನ್ನು ಹಾಗು ಭೂಮಿಯಗೆದು ಸ್ಥಳಾವಕಾಶ ಮಾಡಿತ್ತೆಂದು ತಿಳಿಸಲಾಗಿದೆ. ಕಳೆದ ಕೆಲವು ದಶಕಗಳಲ್ಲಿ ರಾಷ್ಟ್ರದಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದ ಪುರಾತತ್ತ್ವಶಾಸ್ತ್ರದ ಚಟುವಟಿಕೆಗಳು ವಿರಳವಾದವು.[೩೬][೩೭]
ಪುನರ್ನಿರ್ಮಾಣ
[ಬದಲಾಯಿಸಿ]ಇಸವಿ 1983ರಲ್ಲಿ ,ಸದ್ದಾಮ್ ಹುಸೇನ್ ಪುನರ್ಸ್ಥಾಪನೆ ಹಾಗು ನಿರ್ಮಾಣದ ಮೇಲೆ ಖರ್ಚು ಮಾಡುವ ಮೂಲಕ ಹಿಂದಿನ ಅವಶೇಷಗಳ ಮೇಲೆ (ಈ ಪುನನಿರ್ಮಾಣದಿಂದ ಹಸ್ತಕೃತಿಗಳು ಮತ್ತು ಇತರ ಅವಶೇಷಗಳು ಈಗ ನಗರದ ಅಡಿಯಲ್ಲಿ ಹುದುಗಿ ಹೋಗಿವೆ)ನಗರವನ್ನು ಪುನರ್ನಿರ್ಮಿಸಲು ಪ್ರಾರಂಭಿಸಿದ. ಹಲವು ಇಟ್ಟಿಗೆಗಳ ಮೇಲೆ ಇವನ ಹೆಸರನ್ನು ಅಚ್ಚೊತ್ತಿಸುವ ಮೂಲಕ ಇವನು ನೆಬುಕಡ್ನಿಜರ್ ನನ್ನು ಅನುಸರಿಸಿದನು. ಪದೇ ಪದೇ ಬರೆಯಲಾದ ಒಂದು ಕೆತ್ತನೆಯನ್ನು ಓದಿದಾಗ: ಕೆತ್ತನೆ , "ಇರಾಕ್ ಅನ್ನು ವೈಭವೀಕರಿಸಲು ಇದನ್ನು ನೆಬುಕಡ್ನಿಜರ್ ನ ಮಗನಾದ ಸದ್ದಾಮ್ ಹುಸೇನ್ ಕಟ್ಟಿಸಿದ್ದಾನೆ " ಎಂಬ ಅರ್ಥಕೊಡುತ್ತದೆ. ಇದು ಉರ್(Ur) ನಲ್ಲಿರುವ ಜಿಗ್ಗುರಾತ್ ಅನ್ನು ನೆನಪಿಗೆ ತರುತ್ತದೆ, ಏಕೆಂದರೆ ಇಲ್ಲಿಯ ಪ್ರತಿಯೊಂದು ಇಟ್ಟಿಗೆಯ ಮೇಲೆ "ಉರ್-ನಮ್ಮು ಎಂಬ ಅಚ್ಚೊತ್ತಲಾಗಿರುತ್ತದೆ .ಇವನುನಾನ್ನಾ ದೇವಸ್ಥನಾವನ್ನು ಕಟ್ಟಿಸಿದ ಉರ್ ನ ರಾಜ ". ಹುಸೇನ್ ನ ಆಳ್ವಿಕೆ ಕೊನೆಗೊಂಡ ನಂತರ ಇಟ್ಟಿಗೆಗಳು ಸಂಗ್ರಹಕಾರರಿಗೆ ಬೇಕಾದಂತಹ ವಸ್ತುಗಳಾದವು. ಅಲ್ಲದೇ ಕಟ್ಟಡಗಳು ಅವುಗಳ ಮೂಲಸ್ಥಿತಿಗೆ ಹಿಂದಿರುಗುವ ಯಾವುದೇ ಸಾಧ್ಯತೆಗಳಿರಲಿಲ್ಲ. ಕಟ್ಟಡಗಳ ಪ್ರವೇಶದ್ವಾರದಲ್ಲಿ ಅವನ ಹಾಗು ನೆಬುಕಡ್ನಿಜರ್ ನ ಹೆಚ್ಚು ವರ್ಣಚಿತ್ರಗಳನ್ನು ಹಾಕಿಸಿದ್ದನು. ಅಲ್ಲದೇ ಮೆರವಣಿಗೆಯ ಹಾದಿಯಲ್ಲಿ ಪ್ರಾಚೀನ ಕಂಬಗಳಿರುವ ದೊಡ್ಡ ಹೆದ್ದಾರಿ ಹಾಗು 2,600 ವರ್ಷಗಳ ಹಿಂದಿನ ಕಪ್ಪು ಕಲ್ಲಿನ ಬ್ಯಾಬಿಲೋನ್ ನ ಸಿಂಹದ ಶಿಲೆಯನ್ನು ನಿಲ್ಲಿಸಿದ್ದ.
ಗಲ್ಫ್ ಕದನ ಅಂತ್ಯಗೊಂಡ ನಂತರ ಸದ್ದಾಮ್ ಕೆಲವು ಹಳೆಯ ಕಟ್ಟಡಗಳ ಮೇಲೆ ಆಧುನಿಕ ಅರಮನೆಯನ್ನು ಕಟ್ಟಬೇಕೆಂದು ಕೊಂಡ; ಇದನ್ನು ಸುಮೇರಿಯನ್ ಜಿಗ್ಗುರಾತ್ ನ ಪಿರಮಿಡ್ಡಿನ ಆಕಾರದಲ್ಲಿ ಕಟ್ಟಲಾಯಿತು . ಅದನ್ನು ಅವನು ಸದ್ದಾಮ್ ಹಿಲ್ ಎಂದು ಕರೆದ. 2003 ರಲ್ಲಿ, ಅವನು ಬ್ಯಾಬಿಲೋನ್ ನ ಸುತ್ತಲು ಕೇಬಲ್ ಕಾರ್ ಲೈನ್ ನನ್ನು ನಿರ್ಮಿಸಲು ಸಿದ್ದವಾಗಿದ್ದ ಆದರೆ ಯುದ್ಧ ಪ್ರಾರಂಭವಾದ ಕಾರಣ ಯೋಜನೆಯನ್ನು ಮುಂದುವರೆಸಲಾಗಲಿಲ್ಲ.
UN ಅಧಿಕಾರಿಗಳು ಮತ್ತು ಇರಾಕ್ ನ ನಾಯಕರು ಬ್ಯಾಬಿಲೋನ್ ಅನ್ನು ಪುನರ್ಸ್ಥಾಪಿಸಿ ಸಾಂಸ್ಕೃತಿಕ ಕೇಂದ್ರವಾಗಿಸುವ ಯೋಜನೆಯನ್ನು ಹೊಂದಿದ್ದಾರೆ ಎಂದು 2006 ರ ಏಪ್ರಿಲ್ ತಿಂಗಳಿನಲ್ಲಿ ಪ್ರಕಟವಾದ ಲೇಖನದಲ್ಲಿ ಹೇಳಲಾಗಿದೆ.[೩೮][೩೯]
2009 ರ ಮೇ ತಿಂಗಳಿನ ಹೊತ್ತಿಗೆ, ಬ್ಯಾಬಿಲ್ ನ ಪ್ರಾಂತೀಯ ಸರ್ಕಾರವು ಪ್ರವಾಸದ ಸ್ಥಳಗಳನ್ನು ಮತ್ತೆ ತೆರೆಯಲಾಯಿತು.
U.S. ಮಿಲಿಟರಿ(ಸೈನ್ಯದ)ಯ ಪರಿಣಾಮಗಳು
[ಬದಲಾಯಿಸಿ]2003ರಲ್ಲಿ ಇರಾಕ್ ನ ಮೇಲಿನ ದಾಳಿಯ ನಂತರ ಕಡಲಿನ ದಂಡಯಾತ್ರೆ ಸೈನ್ಯಬಲದ 1ನೇಯ ಜನರಲ್ ಆದ ಜೇಮ್ಸ್ T. ಕಾನ್ ವೇ ಯ ನೇತೃತ್ವದಲ್ಲಿ ಸೈನ್ಯಾಧಾರಿತ "ಕ್ಯಾಂಪ್ ಆಲ್ಫ್" ವನ್ನು ನಿರ್ಮಿಸಿದ್ದಕ್ಕಾಗಿ ಹಾಗು ಬ್ಯಾಬಿಲೋನಿಯನ್ ಪ್ರಾಚೀನ ಕಟ್ಟಡಗಳ ಮೇಲೆ ಹೆಲಿಪ್ಯಾಡ್ ಅನ್ನು ನಿರ್ಮಿಸಲು ಇತರ ಸೌಲಭ್ಯವನ್ನು ಪಡೆದದ್ದಕ್ಕಾಗಿ US ಸೈನ್ಯವು ಟೀಕೆಗೊಳಗಾಯಿತು.
US ಸೈನ್ಯವು ಕೆಲ ಸಮಯದವರೆಗೆ ಈ ಪ್ರದೇಶವನ್ನು ಆಕ್ರಮಿಸಿಕೊಂಡುದಲ್ಲದೇ,ಪುರಾತತ್ತ್ವಶಾಸ್ತ್ರದ ದಾಖಲೆಗಳಿಗೆ ತುಂಬಲಾಗದ ಹಾನಿಯನ್ನುಂಟು ಮಾಡಿದರು. ಬ್ರಿಟಿಷ್ ಸಂಗ್ರಹಾಲಯದ ಸಮೀಪ ಪ್ರಾಚ್ಯ ವಿಭಾಗದ ವರದಿಯಲ್ಲಿ , ಹೆಲಿಕ್ಯಾಪ್ಟರ್ ಗಳು ಇಳಿಯಲು ಬೇಕಾದ ಹಾಗು ಬೃಹತ್ ಗಾತ್ರದ ವಾಹನಗಳನ್ನು ನಿಲ್ಲಿಸಲು ಬೇಕಾದ ಸ್ಥಳವನ್ನು ನಿರ್ಮಿಸಲು ಪುರಾತತ್ತ್ವಶಾಸ್ತ್ರದ ಪ್ರದೇಶಗಳ ಭಾಗಗಳನ್ನು ಹೇಗೆ ಮಟ್ಟಮಾಡಲಾಗಿದೆ ಎಂಬುದನ್ನು Dr. ಜಾನ್ ಕ್ರುಟೈಸ್ ವಿವರಿಸಿದ್ದಾರೆ. ದಾಳಿನಡೆಸಿದ ಸೈನ್ಯಗಳು
- "ಪ್ರಾಚೀನಕಾಲದ ಅತ್ಯಂತ ಪ್ರಖ್ಯಾತ ಸ್ಮಾರಕವಾದ ಇಷತರ್ ಗೇಟ್ ಗೆ ಹಾನಿಯನ್ನುಂಟು ಮಾಡಿದವು [...] ಇಟ್ಟಿಗೆಯಿಂದ ಮಾಡಲಾದ 2,600 ವರ್ಷಗಳ ಹಿಂದಿನ ನೆಲಗಟ್ಟನ್ನು US ಸೈನ್ಯದ ವಾಹನಗಳು ಜಜ್ಜಿಹಾಕಿದವು.ಪುರಾತತ್ತ್ವಶಾಸ್ತ್ರದ ಅವಶೇಷಗಳು ಆ ಪ್ರದೇಶದಲ್ಲೆಲ್ಲಾ ಚೆಲ್ಲಾಪಿಲ್ಲಿಯಾದವು,ಪ್ರಾಚೀನ ನಿಕ್ಷೇಪಗಳಲ್ಲಿ 12 ಕ್ಕಿಂತ ಹೆಚ್ಚು ಕಂದಕಗಳನ್ನು ಮಾಡಲಾಯಿತು.ಅಲ್ಲದೇ ಸೈನ್ಯದ ಮೂಲಕ ಬೃಹತ್ ಪ್ರಮಾಣದಲ್ಲಿ ಮಣ್ಣನ್ನು ತಳ್ಳುವ ಯೋಜನೆಗಳು ವಿಜ್ಞಾನಿಗಳಿಗೆ ಮುಂದಿನ ಶತಮಾನದಲ್ಲಿ ಉಪಯೋಗಕ್ಕೆ ಬಾರದಂತೆ ಆ ಪ್ರದೇಶವನ್ನು ಕೆಡಿಸಿದರು[...] ಇವೆಲ್ಲದರ ಜೊತೆಯಲ್ಲಿ ಸೈನಿಕರು ಗೋಡೆಯಿಂದ ಇಟ್ಟಿಗೆಗಳನ್ನು ತೆಗೆಯುವಾಗ ಇಷತರ್ ಗೇಟ್ ನಲ್ಲಿ ಇಟ್ಟಿಗೆಗಳಿಂದ ಮಾಡಲಾದ ಒಂಭತ್ತು ಡ್ರ್ಯಾಗನ್ ಚಿತ್ರಗಳನ್ನು ಹಾಳುಮಾಡಿದರು."
ನಿರ್ವಹಣಾ ಕಾರ್ಯಗಳನ್ನು "ಬ್ಯಾಬಿಲೋನ್ ಸಂಗ್ರಹಾಲಯದ ಪ್ರಧಾನರೊಡನೆ" ಚರ್ಚಿಸಲಾಗಿದೆ ಎಂದು US ಮಿಲಿಟರಿ ವಕ್ತಾರ ತಿಳಿಸಿದ್ದಾರೆ.[೪೦]
ಇರಾಕಿ ಸ್ಟೇಟ್ ಬೋರ್ಡ್ ಫಾರ್ ಹೆರಿಟೇಜ್ ಅಂಡ್ ಅನ್ಟಿಕ್ವಿಟೀಸ್ ನ ಮುಖ್ಯಸ್ಥನಾದ ಡೋನಿ ಜಾರ್ಜ್, "ಈ ಅವ್ಯವಸ್ಥೆಯನ್ನು ಸರಿಮಾಡಲು ದಶಕಗಳೇ ಹಿಡಿಯಬಹುದು" ಎಂದು ಹೇಳಿದ್ದಾರೆ .[೪೧] 1ನೆಯ ಕಡಲ ದಂಡಯಾತ್ರೆಯ ಸೈನ್ಯದ ಸಿಬ್ಬಂಧಿವರ್ಗಗಳ ಮುಖ್ಯಸ್ಥ ಕೊಲೊನೆಲ್ ಜಾನ್ ಕೊಲೆಮನ್, ಅವನ ನೇತೃತ್ವದಲ್ಲಿದ್ದ ಸೈನ್ಯದ ಸೇವಕವರ್ಗವು ಮಾಡಿರುವಂತಹ ಹಾನಿಗೆ 2006 ರ ಏಪ್ರಿಲ್ ನಲ್ಲಿ ಕ್ಷಮೆಯನ್ನು ಕೇಳಿಕೊಂಡ. ಆದರೂ US ನ ಸೈನ್ಯದಿಂದ ಇತರ ಲೂಟಿಗಾರರಿಗಿಂತ ಕಡಿಮೆ ಹಾನಿಯುಂಟಾಗಿದೆ ಎಂದು ಹೇಳಿದ್ದಾರೆ .[೪೨] ಆಲ್ಫ್ ಕ್ಯಾಂಪ್ ಅನ್ನು ಕಟ್ಟಲು ಕೆಲವು ಪ್ರಾಚೀನ ಅವಶೇಷಗಳು ತೆಗೆದುಹಾಕಲಾಯಿತು. ಇರಾಕ್ ನಲ್ಲಿ ಉದ್ಯೋಗ ಪ್ರಾರಂಭವಾದಾಗಿನಿಂದಲೂ ಜನಪ್ರಿಯವಾಗಿರುವ ಪ್ರಾಚೀನ ಅವಶೇಷಗಳ ಮಾರುಕಟ್ಟೆಗೆ ನಿಸ್ಸಂದೇಹವಾಗಿ ಅವುಗಳನ್ನು ಮಾರಲಾಯಿತು.[೪೩]
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- I.L. ಫಿಂಕೆಲ್, M.J. ಸೆಮೊರ್, ಬ್ಯಾಬಿಲೋನ್ , ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಮುದ್ರಣಸಂಸ್ಥೆ, 2009 ISBN 0195385403
- ಜೊಆನ್ ಓಟ್ಸ್, ಬ್ಯಾಬಿಲೋನ್ , ಥೇಮ್ಸ್ ಮತ್ತು ಹಡ್ಸನ್, 1986. ISBN 0-500-02095-7 (hardback) ISBN 0-500-27384-7 (paperback)
- ದಿ ಏನ್ ಷಿಯಂಟ್ ಮಿಡಲ್ ಈಸ್ಟರ್ನ್ ಕ್ಯಾಪಿಟಲ್ ಸಿಟಿ — ರಿಫ್ಲೆಕ್ಷನ್ ಅಂಡ್ ನೇವಲ್ ಆಫ್ ದಿ ವರ್ಲ್ಡ್ ಸ್ಟೀಫನ್ ಮೌಲ್ ನಿಂದ ("ಡೈ ಆಲ್ ಟೋರಿಯಂಟಲಿಶೆ ಹೌಪ್ ಸ್ಯಾಡ್ — ಅಬ್ಬಿಲ್ಡ್ ಅಂಡ್ ನೇಬಲ್ ಡರ್ ವೆಲ್ಟ್," ಇನ್ ಡೈ ಓರಿಯಂಟಲಿಶೆ ಸ್ಯಾಡ್: ಕಾಂಟಿನ್ಯೂಟ್ಯಾಟ್. ವ್ಯಾಂಡಲ್. ಬ್ರುಕ್. 1ಇಂಟರ್ ನ್ಯಾಷನೇಲ್ಸ್ ಕಾಲೋಕಿಯಮ್ ಡರ್ ಡಚನ್ ಓರಿಯಂಟ್ -ಜಿಸೆಲ್ ಶ್ಯಾಫ್ಟ್. 9.-1 0. ಇಂಟರ್ ನ್ಯಾಷನೇಲ್ಸ್ ಕಾಲೋಕಿಯಮ್ ಡರ್ ಡಚನ್ ಓರಿಯಂಟ್ನ್ ಜಿಸೆಲ್ ಶ್ಯಾಫ್ಟ್ ಮೇ 1996 ಇನ್ ಹೇಲ್/ಸೇಲ್, ಸಾರ್ಬ್ರೂಕರ್ ಡ್ರಕೇರಿ ಅಂಡ್ ವರ್ಲ್ಯಾಗ್ (1997), p. 109-124.
- Chisholm, Hugh, ed. (1911). . Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - Kim Gamel (July 9, 2009). "UNESCO: Invasion Seriously Harmed Historic Babylon". Associated Press. Archived from the original on July 23, 2009.
ಟಿಪ್ಪಣಿಗಳು
[ಬದಲಾಯಿಸಿ]- ↑ ಡೈಟ್ಸ್ ಓಟೋ ಎಡ್ಜಾರ್ಡ್: ಜೀಶಿಶ್ ಷ್ಟೆ ಮೆಸಪಟೋಮಿಯನ್ಸ್. ವನ್ ಡೆನ್ ಸುಮರ್ ಅರ್ನ್ ಬಿಸ್ ಜು ಅಲೆಗ್ಸಾಂಡರ್ ಡೆಮ್ ಗ್ರೋಬೆನ್ , ಬೆಕ್, ಮುನ್ ಶೆನ್ 2004, p. 121.
- ↑ ಲಿಯಾನ್ ಜೆಕಬ್-ರಾಸ್ಟ್, ಜೋಶಿಮ್ ಮರ್ಜಾನ್: ಬ್ಯಾಬಿಲೋನ್ , ed. ಸ್ಟ್ಯಾಟ್ ಲಿಶೆ ಮುಸೀನ್ ಜು ಬರ್ಲಿನ್. ವೋರ್ಡರಾಸಿಯೇಟ್ ಟಿಸಿಶ್ ಮ್ಯೂಸಿಯಂ, (ಕ್ಲೀನ್ ಶ್ರಿಫ್ಟನ್ 4), 2. ಹಾಫ್ ಲ್ಯಾಗ್, ಪುಟ್ ಬಸ್ 1990, p. 2
- ↑ ಸ್ಟೆಫನಿ ಡೇಲಿ, ಬ್ಯಾಬಿಲೋನ್ Uchicago.edu Archived 2012-07-30 ವೇಬ್ಯಾಕ್ ಮೆಷಿನ್ ನಲ್ಲಿ. ನಲ್ಲಿ ನೈನ್ ವೇ ಯನ್ನು ಒಳಗೊಂಡಂತೆ ಇತರ ನಗರಗಳಿಗು ಹೆಸರನ್ನು ಹೊಂದಿದೆ, ಪ್ರೊಸೀಡಿಂಗ್ ಆಫ್ ದಿ 51st ರೆನ್ ಕಾಂಟರೆ ಅಸ್ಸಿರಿಯೋಲಾಗ್ವಿಕ್ ಇಂಟರ್ ನ್ಯಾಷನಾಲ್, ಓರಿಯಂಟಲ್ ಇನ್ ಸ್ಟಿಟ್ಯೂಟ್ SAOC 62, pp. 25-33, 2005
- ↑ "Alexander's Dream of a United Nations". Archived from the original on 2010-05-18. Retrieved 2010-01-06.
- ↑ ಟರ್ಟಿಯಸ್ ಚ್ಯಾಂಡಲರ್. ಫೋರ್ ತೌಸಂಡ್ ಯಿಯರ್ಸ್ ಆಫ್ ಅರ್ಬನ್ ಗ್ರೋತ್:ಆನ್ ಹಿಸ್ತೋರಿಕಲ್ ಸೆನ್ಸನ್ (1987), St. ಡೇವಿಡ್ಸ್ ವಿಶ್ವವಿದ್ಯಾನಿಲಯದ ಮುದ್ರಣಸಂಸ್ಥೆ (etext.org). ISBN 0-19-211579-0 See ಐತಿಹಾಸಿಕ ನಗರ ಸಮುದಾಯಗಳ ಗಾತ್ರವನ್ನು ನೋಡಿ.
- ↑ ಬ್ರ್ಯಾಡ್ ಫೋರ್ಡ್, ಆಲ್ ಫ್ರೆಡ್ S. (2001). ವಿತ್ ಅರೋ ಸ್ವಾರ್ಡ್, ಅಂಡ್ ಸ್ಪಿಯರ್: ಅ ಹಿಸ್ಟ್ರಿ ಆಫ್ ವಾರ್ ಫೇರ್ ಇನ್ ದಿ ಏನ್ ಷಂಟ್ ವಲ್ಡ್ , pp. 47-48. ಗ್ರೀನ್ ವುಡ್ ಪಬ್ಲಿಷಿಂಗ್ ಗ್ರೂಪ್ . ISBN 0791067726
- ↑ ಕುರ್ಟೈಸ್, ಅಡ್ರಿಯನ್; ಹರ್ಬರ್ಟ್ ಗಾರ್ಡಬ್ ಮೇ (2007). ಆಕ್ಸ್ ಫರ್ಡ್ ಬೈಬಲ್ ಅಟ್ಲಾಸ್ ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಮುದ್ರಣಸಂಸ್ಥೆ ISBN 978-0191001581 p. 122 "chaldean+empire"&num=100 Google Books Search
- ↑ ವೊನ್ ಸೊಡೆನ್, ವಿಲ್ ಫ್ರೆಡ್; ಡೊನಾಲ್ಡ್ G. ಸ್ಚೆಲೆ (1996). ವಿಲಿಯಂ B. ಎರ್ಡ್ ಮನ್ಸ್ ISBN 978-0802801425 p. 60 "chaldean+empire"&num=100#PPA60,M1 Google Books Search
- ↑ ಸ್ಯಾಗ್ಸ್, H.W.F. (2000). ಬ್ಯಾಬಿಲೋನಿಯನ್ಸ್ , p. 165. ಕ್ಯಾಲಿಫೋರ್ನಿಯ ಮುದ್ರಣಾಲಯದ ವಿಶ್ವವಿದ್ಯಾಲಯ. ISBN 0791067726
- ↑ ಹೆರೋಡಾಟಸ್, ಪುಸ್ತಕ 1, ವಿಭಾಗ 191
- ↑ ಇಸೈಯ 44:27
- ↑ ಜೆರೆಮಿಯ 50-51
- ↑ ಫರ್ ಗಾಟನ್ ಎಂಪೈರ್: ದಿ ವಲ್ಡ್ ಆಫ್ ಏನ್ ಷಂಟ್ ಪರ್ಶಿಯ ದಿ ಬ್ರಿಟಿಷ್ ಮ್ಯೂಸಿಯಂ . ಪ್ರವೇಶ ಏಪ್ರಿಲ್ 2008 ರ ಏಪ್ರಿಲ್ 2,
- ↑ ಮೆಸಪಟೋಮಿಯ: ದಿ ಪರ್ಷಿಯನ್ಸ್
- ↑ Beck, Roger B. (1999). World History: Patterns of Interaction. Evanston, IL: McDougal Littell. ISBN 0-395-87274-X.
{{cite book}}
: Unknown parameter|coauthors=
ignored (|author=
suggested) (help)CS1 maint: extra punctuation (link) - ↑ Chisholm, Hugh, ed. (1911). . Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - ↑ ಕ್ಲೌಡಿಯಸ್ J. ರಿಚ್,ನ ಬ್ಯಾಬಿಲೋನ್ ಕಟ್ಟಗಳ ಮೇಲಿನ ಪ್ರಬಂಧ, 1815
- ↑ ಕ್ಲೌಡಿಯಸ್ J. ರಿಚ್, ನ ಬ್ಯಾಬಿಲೋನ್ ಮೇಲಿನ ಎರಡನೇ ಪ್ರಬಂಧ;ಪ್ರಾಚೀನ ಬ್ಯಾಬಿಲೋನ್ ನ ಚಿತ್ರಣದ ಸದೃಶ್ಯತೆಯ ಬಗೆಗಿನ ಹಾಗು ಇನ್ನೂ ಸೈಟ್ ನಲ್ಲಿ ಕಾಣಬಹುದಾದ ಅವಶೇಷಗಳ ಶೋಧನೆಯನ್ನು ಒಳಗೊಂಡಿದೆ, 1818
- ↑ ಗೂಗಲ್ ಬುಕ್ಸ್ ಸರ್ಚ್, ರಾಬರ್ಟ್ ಮಿಗ್ ನ್ಯಾನ್, ಟ್ರಾವೆಲ್ಸ್ ಇನ್ ಚಾಲ್ಡಿಯ, ಬುಸೋರ್ ನಿಂದ ಬಾಗ್ದಾದ್, ಹಿಲ್ಲಹ್, ಮತ್ತು ಬ್ಯಾಬಿಲೋನ್ ನ ವರೆಗೆ 1827 ರಲ್ಲಿ ಕಾಲ್ನಡಿಗೆಯಲ್ಲಿ ಮಾಡಿರುವ ಪ್ರಯಾಣವನ್ನು ಒಳಗೊಂಡಿದೆ, , H. ಕಾಲ್ ಬರ್ನ್ ಮತ್ತು R. ಬೆಂಟ್ಲೇ, 1829 ISBN 1402160135
- ↑ ಗೂಗಲ್ ಬುಕ್ಸ್ ಸರ್ಚ್, ವಿಲಿಯಂ K. ಲಾಫ್ ಟಸ್, ಟ್ರಾವೆಲ್ಸ್ ಅಂಡ್ ರಿಸರ್ಚಸ್ ಇನ್ ಚಾಲ್ಡಿಯ ಅಂಡ್ ಸುಸೈನ, ಟ್ರಾವೆಲ್ಸ್ ಅಂಡ್ ರಿಸರ್ಚಸ್ ಇನ್ ಚಾಲ್ಡಿಯ ಅಂಡ್ ಸುಸೈನ: ವಾರ್ಕ, ದಲ್ಲಿನ ಉತ್ಖನನದ ಪಟ್ಟಿಗಳ ಜೊತೆಯಲ್ಲಿ "ಎರೆಕ್" ಆಫ್ ನಿಮ್ರೋಡ್, ಅಂಡ್ ಶುಶ್, "ಶುಷನ್ ದಿ ಪ್ಯಾಲೆಸ್" ಆಫ್ ಇಷತರ್, ಇನ್ 1849-52, ರಾಬರ್ಟ್ ಕಾರ್ಟರ್ & ಬ್ರದರ್ಸ್, 1857
- ↑ ಗೂಗಲ್ ಬುಕ್ಸ್ ಸರ್ಚ್, A. H. ಲೆಯಾರ್ಡ್, ಡಿಸ್ಕವರೀಸ್ ಇನ್ ದಿ ರೂಇನ್ಸ್ ಆಫ್ ನೈನ್ ವೇ ಅಂಡ್ ಬ್ಯಾಬಿಲೋನ್, J. ಮುರ್ರೇ, 1853
- ↑ J. ಒಪೇರ್ಟ್, ಎಕ್ಸ್ ಪಿಡಿಷನ್ ಸೈನ್ ಟಿಫಿಕ್ ಎನ್ ಮೆಸಪಟೋಮಿಯ ಎಗ್ಸಿಕ್ಯೂಟಿ ಪರ್ ಆರ್ಡರೆ ಡು ಗವರ್ನಮೆಂಟ್ ಡೆ 1851 ಅ 1854. ಟಾಮ್ I: ರಿಲೇಷನ್ ಡು ವಯೇಜ್ ಎಟ್ ರಿಸಲ್ಟೆಟ್ ಡೆ l'ಎಕ್ಸ್ಪೆಡಿಷನ್, 1863 (ISBN 0543749452 ಕೂಡ) ಟಾಮ್ II: ಡೆಚಿಫ್ರಿಮೆಂಟ್ ಡೆಸ್ ಇನ್ ಸ್ಕ್ರಿಪ್ಷನ್ಸ್ ಕ್ಯೂನಿಫಾಮ್ಸ್, 1859 (ISBN 0543749398 ಕೂಡ)
- ↑ H V. ಹಿಲ್ ಪ್ರೆಕ್ಟ್, ಎಕ್ಸ್ ಪ್ಲೋರೇಷನ್ ಇನ್ ದಿ ಬೈಬಲ್ ಲ್ಯಾಂಡ್ಸ್ ಡ್ಯೂರಿಂಗ್ ದಿ 19th ಸೆಂಚ್ಯುರಿ, A. J. ಹಾಲ್ ಮ್ಯಾನ್, 1903
- ↑ Archive.org, ಹಾರ್ ಮುಜ್ದ್ ರಸ್ಸಾಮ್, ಅಶುರ್ ಅಂಡ್ ದಿ ಲ್ಯಾಂಡ್ ಆಫ್ ನಿಮ್ರೋಡ್: ಪ್ರಾಚೀನ ಕಟ್ಟಡಗಳ ನೈನ್ ವೇ, ಅಶುರ್, ಸೆಫ್ರವೈಮ್, ಕಾಲಾಹ್ ದ ಪ್ರಾಚೀನ ಕಟ್ಟಡಗಳ ಮೇಲೆ ಮಾಡಿರುವ ಅವಶೇಷಗಳು, [etc]..., ಕರ್ಟ್ಸ್ & ಜೆನ್ನಿಂಗ್ಸ್, 1897
- ↑ ಜುಲಿಯನ್ ರಿಡೇ, ಹಾರ್ಮುಜ್ಡ್ ರಾಸ್ಸಮ್ ಮತ್ತು ಅವನ ಅವಿಷ್ಕಾರಗಳು, ಇರಾಕ್, vol. 55, pp. 39-62, 1993
- ↑ ಗೂಗಲ್ ಬುಕ್ಸ್ ರಿಸರ್ಚ್, R. ಕೋಲ್ಡ್ ವೇ, ದಾಸ್ ವೈಡರ್ ಎರ್ಸ್ಟಹ್ಯಾಂಡ್ ಬ್ಯಾಬಿಲೋನ್, ಡೈ ಬಿಶ್ರಿಗೇನ್ ಎರ್ಗೇಬ್ ನಿಸ್ಸೆ ದೆರ್ ಡಚ್ಚಶಿನ್ ಆಸ್ಗ್ರಬುನ್ಗೇನ್, J.C. ಹಿನ್ ರಿಚ್ಸ್, 1913, ವಿತ್ ಆನ್ ಲೈನ್ ಇಂಗ್ಲೀಷ್ ಟ್ರಾನ್ಸ್ ಲೇಷನ್: ಆಗ್ನೇಸ್ ಸೋಫಿಯ ಗ್ರಿಫ್ತ್ ಜಾನ್ಸ್, ದಿ ಎಕ್ಸವೇಷನ್ಸ್ ಅಟ್ ಬ್ಯಾಬಿಲೋನ್ ಬೈ ರಾಬರ್ಟ್ ಕೋಲ್ಡ್ ವೇ, ಮ್ಯಾಕ್ ಮಿಲನ್ ಅಂಡ್ Co., 1914
- ↑ R. ಕೋಲ್ಡ್ ವೇ, ಡೈ ಟೆಂಪಲ್ ವಾನ್ ಬ್ಯಾಬಿಲೋನ್ ಅಂಡ್ ಬೋರ್ಸಿಪ್ಪ, WVDOG, vol. 15, pp. 37-49, 1911 (German)
- ↑ R. ಕೋಲ್ಡ್ ವೇ, ಬ್ಯಾಬಿಲೋನ್ ನಲ್ಲಿರುವ ದಾಸ್ ಇಷ್ ತರ್-ಟಾರ್ , WVDOG, vol. 32, 1918
- ↑ F. ವೆಟ್ ಜೆಲ್, ಡೈ ಸ್ಯ್ಟಾಡ್ಟ್ ಮೌರೇನ್ von ಬ್ಯಾಬಿಲೋನ್, WVDOG, vol. 48, pp. 1-83, 1930
- ↑ F. ವೆಟ್ ಜೆಲ್ ಮತ್ತು F.H. ವೇಸ್ ಬ್ಯಾಕ್, ದಾಸ್ ಹೌಪಥೇಲಿಂಗ್ಟಮ್ ದೆಸ್ ಮರ್ದುಕ್ ಇನ್ ಬ್ಯಾಬಿಲೋನ್: ಈಸಗಿಲ ಅಂಡ್ ಎಟಮೆನ್ಯಾನ್ಕಿ, WVDOG, vol. 59, pp. 1-36, 1938
- ↑ F. ವೆಟ್ ಜೆಲ್ et al., ದಾಸ್ ಬ್ಯಾಬಿಲೋನ್ ಡರ್ ಸ್ಪಾಟ್ ಸೈಟ್, WVDOG, vol. 62, Gebr. ಮನ್, 1957 (1998 ಪುನರ್ಮುದ್ರಣ ISBN 3786120013)
- ↑ ಹ್ಯಾನ್ಸ್ ಜೋರ್ಗ್ ಸ್ಜಿಮಿಡ್, ದೇರ್ ಟೆಂಮ್ ಪೆಲ್ಟ್ರಮ್ ಎಟಮೆನ್ಯಾನ್ಕಿ ಇನ್ ಬ್ಯಾಬಿಲೋನ್, ಜಬರಾನ್, 1995, ISBN 3805316100
- ↑ G. ಬರ್ಗ್ ಮಿನಿ, ಪುನ ಪರಿಶೀಲಿಸಲ್ಪಟ್ಟ ಬ್ಯಾಬಿಲೋನ್ ಮಟ್ಟಗಳು, ಮೆಸಪಟೋಮಿಯ, vol. 12, pp. 111-152, 1977
- ↑ G. ಬರ್ಗ್ ಮಿನಿ, ಶು-ಅನ್ನ್ ಬ್ಯಾಬಿಲೋನ್ ನಲ್ಲಿ ಮಾಡಿದ ಉತ್ಖನನಗಳು 1987, ಮೆಸಪಟೋಮಿಯ, vol. 23, pp. 5-17, 1988
- ↑ G. ಬರ್ಗ್ ಮಿನಿ, 1988-1989 ರಲ್ಲಿ ಬ್ಯಾಬಿಲೋನ್ ಶು-ಅನ್ನ ದಲ್ಲಿ ಮಾಡಲಾದ ಉತ್ಖನನಗಳ ಪ್ರಮುಖ ವರದಿ, ಮೆಸಪಟೋಮಿಯ, vol. 25, pp. 5-12, 1990
- ↑ 1981-1982 ರ ವರೆಗೆ ಇರಾಕ್ ನಲ್ಲಿ ಮಾಡಲಾದ ಉತ್ಖನನಗಳು, ಇರಾಕ್, vol. 45, no. 2, pp. 199-224,1983
- ↑ ಫಾರುಕ್ N. H. Al-ರಾವಿ, ಬ್ಯಾಬಿಲೋನ್ ನಲ್ಲಿರುವ ನ್ಯಾಬೊಪೊಲಾಸರ್ ನ "ಇಮ್ ಗುರ್- ಎನ್ ಲಿಲ್ ಗೋಡೆಯ ಪುನಃ ಸ್ಥಾಪನಾ ಕಾರ್ಯ , ಇರಾಕ್, vol. 47, pp. 1-13, 1985
- ↑ ಜೆಟ್ಲ್ ಮ್ಯಾನ್, ಜ್ಯಾಫರಿ. ಯುನೆಸ್ಕೋ ಇಂಟೆಂಡೆಡ್ ಟು ಪುಟ್ ದಿ ಮ್ಯಾಜಿಕ್ ಬ್ಯಾಕ್ ಇನ್ ಬ್ಯಾಬಿಲೋನ್, ಇಂಟರ್ ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್ ,2006 ರ ಏಪ್ರಿಲ್ 21. ಪ್ರವೇಶ 2008 ಏಪ್ರಿಲ್ 19.
- ↑ ಮ್ಯಾಕ್ ಬ್ರೈಡ್, ಎಡ್ವರ್ಡ್. ಮಾನ್ಯುಮೆಂಟ್ಸ್ ಟು ಸೆಲ್ಫ್: ಬಾಗ್ದಾದ್'ಸ್ ಗ್ರ್ಯಾಂಡ್ಸ್ ಪ್ರಾಜೆಕ್ಟ್ಸ್ ಇನ್ ದಿ ಏಜ್ ಆಫ್ ಸದ್ದಾಮ್ ಹುಸೇನ್ Archived 2005-12-10 ವೇಬ್ಯಾಕ್ ಮೆಷಿನ್ ನಲ್ಲಿ., ಮೆಟ್ರೋಪೊಲಿಸ್ ಮ್ಯಾಗ್ . ಪ್ರವೇಶ 2008 ರ ಏಪ್ರಿಲ್ 19.
- ↑ "Damage seen to ancient Babylon". The Boston Globe. January 16, 2005.
- ↑ ಹೆರಿಟೇಜ್ ನ್ಯೂಸ್ ಫ್ರಮ್ ಅರೌಂಡ್ ದಿ ವಲ್ಡ್ Archived 2016-02-02 ವೇಬ್ಯಾಕ್ ಮೆಷಿನ್ ನಲ್ಲಿ., ವಲ್ಡ್ ಹೆರಿಟೇಜ್ ಅಲರ್ಟ್! . ಪ್ರವೇಶ 2008 ರ ಏಪ್ರಿಲ್ 19,
- ↑ ಕಾರ್ನ್ ವೆಲ್, ರುಪರ್ಟ್. US ಕೊಲೊನೆಲ್ ಆಫರ್ಸ್ ಇರಾಕ್ ಆನ್ ಅಪಾಲೊಜು ಆಫ್ ಸಾರ್ಟ್ಸ್ ಫಾರ್ ಡೈವಸ್ಟೇಷನ್ ಆಫ್ ಬ್ಯಾಬಿಲೋನ್ Archived 2011-09-19 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಇನ್ ಡಿಪೆಂಡಂಟ್ , 2006 ರ ಏಪ್ರಿಲ್ 15. ಪ್ರವೇಶ 2008 ಏಪ್ರಿಲ್ 19.
- ↑ J. E. ಕುರ್ಟೈಸ್, "ಬ್ಯಾಬಿಲೋನ್ ನಲ್ಲಿ 2004 ರ ಡಿಸೆಂಬರ್ 11 – 13 ರಂದು ನಡೆದ ಸಭೆಯ ವರದಿ ", ಬ್ರಿಟಿಷ್ ಮ್ಯೂಸಿಯಂ Archived 2011-05-22 ವೇಬ್ಯಾಕ್ ಮೆಷಿನ್ ನಲ್ಲಿ., 2004
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ವೆಬ್ ಪೇಜ್ - ಬ್ಯಾಬಿಲೋನ್ ದಿ ಗ್ರೇಟ್
- ಇರಾಕ್ ಇಮೇಜ್ - ಬ್ಯಾಬಿಲೋನ್ ಸ್ಯಾಟಲೈಟ್ ಆಬ್ ಸರ್ವೆಷನ್ Archived 2009-04-21 ವೇಬ್ಯಾಕ್ ಮೆಷಿನ್ ನಲ್ಲಿ.
- ಸೈಟ್ ಪೊಟೊಗ್ರಾಫ್ಸ್ ಆಫ್ ಬ್ಯಾಬಿಲೋನ್ - ಓರಿಯಂಟಲ್ ಇನ್ ಸ್ಟಿಟ್ಯೂಟ್ Archived 2009-04-27 ವೇಬ್ಯಾಕ್ ಮೆಷಿನ್ ನಲ್ಲಿ.
- ಎನ್ ಸೈಕ್ಲಪೀಡಿಯ ಬ್ರಿಟಾನಿಕ, ಬ್ಯಾಬಿಲೋನ್
- ಪ್ಲ್ಯಾನ್ಸ್ ಆಫ್ ಬ್ಯಾಬಿಲೋನ್ ರೂಇನ್ಸ್ - ಓಟ್ಸ್, J. ಬ್ಯಾಬಿಲೋನ್. [permanent dead link]ಲಂಡನ್: ಥೇಮ್ಸ್ ಅಂಡ್ ಹಡ್ಸನ್, 1979[permanent dead link]
- 1901-1906 ಜೂಇಷ್ ಎನ್ ಸೈಕ್ಲಪೀಡಿಯ, ಬ್ಯಾಬಿಲೋನ್
- ಇರಾಕ್ ಯುದ್ಧ
- ಬ್ಯಾಬಿಲೋನ್ ರೆಕ್ಡ್ ಬೈ ವಾರ್ , ದಿ ಗಾರ್ಡಿಯನ್, ಜನವರಿ 15, 2005
- ಮಿರೋಸ್ ಲಾ ಒಲ್ಬರೇಸ್, ದಿ ಪಾಲಿಶ್ ಕಾಂಟ್ರಿಟ್ರಿಬ್ಯೂಷನ್ ಟು ಪ್ರೊಟೆಕ್ಷನ್ ಆಫ್ ದಿ ಆರ್ಕ್ಯಾಲಾಜಿಕಲ್ ಹೆರಿಟೇಜ್ ಇನ್ ಸೆಂಟ್ರಲ್ ಸೌತ್ ಇರಾಕ್, ನವೆಂಬರ್ 2003 ಟು ಏಪ್ರಿಲ್ 2005 , ಕನ್ಸರ್ವೇಷನ್ ಅಂಡ್ ಮ್ಯಾನೆಂಜ್ ಮೆಂಟ್ ಆಫ್ ಆರ್ಕ್ಯಾಲಾಜಿಕಲ್ ಸೈಟ್ಸ್ ವಾಲ್ಯುಮ್ 8, ನಂಬರ್ 2, 2007 , pp. 88-104(17)[permanent dead link]
- Kim Gamel (July 9, 2009). "UNESCO: Invasion Seriously Harmed Historic Babylon". Associated Press.
- UNESCO ಫೆನಲ್ ರಿಪೋರ್ಟ್ ಆನ್ ಡ್ಯಾಮೇಜ್ ಅಸೆಸ್ ಮೆಂಟ್ ಇನ್ ಬ್ಯಾಬಿಲೋನ್
- Pages using gadget WikiMiniAtlas
- Pages using duplicate arguments in template calls
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: unsupported parameter
- CS1 maint: extra punctuation
- CS1 errors: empty unknown parameters
- Wikipedia articles incorporating a citation from the 1911 Encyclopaedia Britannica with an unnamed parameter
- Articles with German-language external links
- Pages using ISBN magic links
- Coordinates on Wikidata
- Articles containing Ancient Greek (to 1453)-language text
- Articles with unsourced statements from May 2010
- Articles with invalid date parameter in template
- Articles containing Hebrew-language text
- Articles containing Classical Syriac-language text
- Articles containing Arabic-language text
- Articles with unsourced statements from April 2010
- Commons category link is on Wikidata
- All articles with dead external links
- Articles with dead external links from ಆಗಸ್ಟ್ 2021
- Articles with permanently dead external links
- ಅಮೊರೈಟ್ ನಗರಗಳು
- ಪ್ರಾಚೀನ ನಗರಗಳು
- ಇರಾಕ್ ನಲ್ಲಿರುವ ಪುರಾತತ್ತ್ವಶಾಸ್ತ್ರದ ಸ್ಥಳಗಳು
- ಬ್ಯಾಬಿಲೋನ್
- ಹಿಂದೆ ಇರಾಕ್ ನಲ್ಲಿದ್ದ ಜನನಿಬಿಡ ಸ್ಥಳಗಳು
- ಹೀಬ್ರೂ ಬೈಬಲ್ ನಲ್ಲಿರುವ ಸ್ಥಳಗಳು
- ಚಾರಿತ್ರಿಕ ಯಹೂದಿ ಸಮುದಾಯಗಳು
- ಇರಾಕ್ನ ಇತಿಹಾಸ
- ವರ್ಧಿಸುವ ಅರ್ಧಚಂದ್ರ
- ಯುಪ್ರಿಟೀಸ್ ನದಿಯಲ್ಲಿರುವ ನಗರಗಳು ಮತ್ತು ಪಟ್ಟಣಗಳು
- ಇತಿಹಾಸ
- ಐತಿಹಾಸಿಕ ಸ್ಥಳಗಳು