ಬೆಲ್ ಬಾಟಮ್
ಬೆಲ್ ಬಾಟಮ್: ದಿ ಅಡ್ವೆಂಚರ್ಸ್ ಆಫ್ ಡಿಟೇಕ್ಟಿವ್ ದಿವಾಕರ್ | |
---|---|
Directed by | ಜಯತೀರ್ಥ |
Screenplay by | ಜಯತೀರ್ಥ |
Story by | ದಯಾನಂದ ಟಿ.ಕೆ |
Produced by | ಸಂತೋಷ್ ಕುಮಾರ್ ಕೆ.ಸಿ |
Starring | ರಿಷಭ್ ಶೆಟ್ಟಿ ಹರಿಪ್ರಿಯಾ ಅಚ್ಯುತ್ ಕುಮಾರ್ ಯೋಗರಾಜ್ ಭಟ್ |
Cinematography | ಅರವಿಂದ್ ಕಶ್ಯಪ್ |
Edited by | ಕೆ.ಎಂ. ಪ್ರಕಾಶ್ |
Music by | ಬಿ.ಅಜನೀಶ್ ಲೋಕನಾಥ್ |
Production company | ಗೋಲ್ಡನ್ ಹಾರ್ಸ್ ಸಿನೆಮಾ |
Release date | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
Country | ಭಾರತ |
Language | ಕನ್ನಡ |
ಬೆಲ್ ಬಾಟಮ್: ದಿ ಅಡ್ವೆಂಚರ್ಸ್ ಆಫ್ ಡಿಟೇಕ್ಟಿವ್ ದಿವಾಕರ್ ಇದು ೨೦೧೯ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು ಇದನ್ನು ಜಯತೀರ್ಥ ಅವರು ನಿರ್ದೇಶಿಸಿದ್ದಾರೆ. ಇದರ ಕಥೆಯನ್ನು ದಯಾನಂದ ಟಿ.ಕೆ. ಅವರು ಬರೆದಿದ್ದಾರೆ. ೮೦ರ ದಶಕದಲ್ಲಿ ನಡೆಯುವ ಈ ಚಿತ್ರವನ್ನು ಸಂತೋಷ್ ಕುಮಾರ್ ಕೆ.ಸಿ. ಅವರು ಗೋಲ್ಡನ್ ಹಾರ್ಸ್ ಸಿನೆಮಾಸ್ ಬ್ಯಾನರ್‌ನಡಿಯಲ್ಲಿ ನಿರ್ಮಿಸಿದ್ದಾರೆ.[೧] ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.[೨][೩] ಅಚ್ಯುತ್ ಕುಮಾರ್, ಯೋಗರಾಜ್ ಭಟ್ ಮತ್ತು ಪ್ರಮೋದ್ ಶೆಟ್ಟಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಬಿ.ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದರೆ, ಅರವಿಂದ್ ಕಶ್ಯಪ್ ಛಾಯಾಗ್ರಹಣವನ್ನು ಮಾಡಿದ್ದಾರೆ ಮತ್ತು ಕೆ.ಎಂ.ಪ್ರಕಾಶ್ ರವರು ಚಿತ್ರವನ್ನು ಸಂಪಾದಿಸಿದ್ದಾರೆ. ರಘು ನಡುವಳ್ಳಿ ರವರು ಚಿತ್ರದ ಸಂಭಾಷಣೆಯನ್ನು ಬರೆದಿದ್ದಾರೆ.[೪]
ಈ ಚಿತ್ರವು ೧೫ ಫೆಬ್ರವರಿ ೨೦೧೯ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು. ಈ ಚಿತ್ರವು ೨೫ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಶತದಿನೋತ್ಸವವನ್ನು ಆಚರಿಸಿತು. ಈ ಚಿತ್ರದ ಪ್ರಚಾರವನ್ನು ಆಡಿಯೋ ಟ್ರೇಲರ್ ಬಿಡುವ ಮೂಲಕ ವಿಭಿನ್ನವಾಗಿ ಮಾಡಲಾಯಿತು. ಇದರೊಂದಿಗೆ ಆಡಿಯೋ ಟ್ರೇಲರ್ ಬಿಡುಗಡೆ ಮಾಡಿದ ವಿಶ್ವದ ಮೊದಲ ಚಿತ್ರ ಇದಾಯಿತು.[೫] ಚಿತ್ರದ ಟ್ರೇಲರ್ ಅನ್ನು ಹರಿಕಥೆಯ ಮಾದರಿಯಲ್ಲಿ ಬಿಡುಗಡೆ ಮಾಡಲಾಯಿತು.
ಕಥಾವಸ್ತು
[ಬದಲಾಯಿಸಿ]ಡಿಟೆಕ್ಟಿವ್ ದಿವಾಕರ್ (ರಿಷಬ್ ಶೆಟ್ಟಿ) ವೃತ್ತಿಯಿಂದ ಕಾನ್‌ಸ್ಟೆಬಲ್ ಆದರೆ ಹೃದಯದಲ್ಲಿ ಪತ್ತೇದಾರಿ. ಅವನು ಗೋವಾದಲ್ಲಿ ಸಿಐಡಿ ೯೯೯, ಜೇಡರ ಬಲೆ ನಂತಹ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಬಾಂಡ್ ಮಾದರಿಯ ಚಲನಚಿತ್ರಗಳನ್ನು ನೋಡುತ್ತಾ ಬೆಳೆಯುತ್ತಾನೆ. ಮತ್ತು ಪತ್ತೇದಾರಿ ಕಾದಂಬರಿಗಳನ್ನು ಓದುತ್ತಾ ಓದುತ್ತಾ ಸ್ವತಃ ಒಬ್ಬ ಪತ್ತೆದಾರನಾಗುವ ಕನಸು ಕಾಣುತ್ತಾನೆ. ಊರಿನ ಕೆಲವು ಜನರ ಇವನ ಬಳಿ ಪ್ರಾಣಿಗಳ ಸಾವಿನ ರಹಸ್ಯವನ್ನು ಪತ್ತೆಹಚ್ಚಲು ಕೇಳಿಕೊಂಡು ಬರುತ್ತಾರೆ. ಇದರಿಂದ ದಿವಾಕರ್ ಬಹಳ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ದಿವಾಕರ ನ ತಂದೆ ಅಣ್ಣಪ್ಪ (ಅಚ್ಯುತ್ ಕುಮಾರ್) ಅವರ ಭಾರೀ ಒತ್ತಡ, ಇವನನ್ನು ಪೊಲೀಸ್ ಕಾನ್‌ಸ್ಟೆಬಲ್ ಆಗುವಂತೆ ಮಾಡುತ್ತದೆ. ಒಂದು ತಿಂಗಳಲ್ಲಿ, ಅವನ ಹಿರಿಯ ಅಧಿಕಾರಿ ಸಹದೇವ (ಪ್ರಮೋದ್ ಶೆಟ್ಟಿ) ನೀಡಿದ ಕೊಲೆ ರಹಸ್ಯವನ್ನು ಸುಲಭವಾಗಿ ಪರಿಹರಿಸುತ್ತಾನೆ. ಇದು ಅವನನ್ನು ಜನಪ್ರಿಯಗೊಳಿಸುತ್ತದೆ ಮತ್ತು ನೆರೆಹೊರೆಯಲ್ಲಿರುವ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿರುವ ಮುಂದಿನ ದೊಡ್ಡ ದರೋಡೆಗಳನ್ನು ಪರಿಹರಿಸಲು ಇವನನ್ನು ಆಯ್ಕೆ ಮಾಡಲಾಗುತ್ತದೆ. ಒಂದು ದಿನ ಅವನ ಕಣ್ಣ ಎದುರಲ್ಲೇ ಲಾಕರ್ ಪೆಟ್ಟಿಗೆಯಲ್ಲಿ ಇದ್ದ ಚಿನ್ನ, ಹಣವೆಲ್ಲ ಕಾಣೆಯಾದಗ ಅವನು ಆತಂಕಗೊಳ್ಳುತ್ತಾನೆ. ದಿವಾಕರ ಮೊದಲು ಪಕ್ಷಿ ಸಾಕುವವನೊಬ್ಬನ್ನು ವಿಚಾರಿಸುತ್ತಾನೆ. ಅವನಿಂದ ಮರಕುಟಿಕ (ಯೋಗರಾಜ್ ಭಟ್)ನ ಬಗ್ಗೆ ತಿಳಿಯುತ್ತದೆ. ಮರಕುತಿಕನನ್ನು ವಿಚಾರಿಸಿದ ನಂತರ ಸೆಗಣಿ ಪಿಂಟೊವನ್ನು (ಸುಜಯ್ ಶಾಸ್ತ್ರಿ) ವಿಚಾರಿಸತ್ತಾನೆ. ನಂತರ ಪ್ರಕರಣವನ್ನು ಪರಿಹರಿಸುವಾಗ, ಆ ಪ್ರದೇಶದಲ್ಲಿ ಕಳ್ಳ ಭಟ್ಟಿ ಮಾರುವ ಕುಸುಮಾ (ಹರಿಪ್ರಿಯಾ) ಮೇಲೆ ಇವನಿಗೆ ಪ್ರೀತಿ ಆಗುತ್ತದೆ. ತನಿಖೆ ನಡೆಸುತ್ತ ನಡೆಸುತ್ತಾ ಕುಸುಮಾಳ ಮೇಲೆಯೇ ಇವನಿಗೆ ಅನುಮಾನ ಬರುತ್ತದೆ. ಠಾಣೆಗಳು ಕಳುವಾದ ಎಲ್ಲ ದಿನವೂ ಕುಸುಮ ಬೇರೆ ಬೇರೆ ಹೆಸರುಗಳಲ್ಲಿ ಅಲ್ಲಿಗೆ ದೂರು ನೀಡಲು ಬಂದಿರುತ್ತಾಳೆ. ಎಲ್ಲ ಚುಕ್ಕೆಗಳನ್ನು ಜೋಡಿಸುತ್ತ ಹೋದಾಗ ದಿವಾಕರನಿಗೆ ಸತ್ಯ ಗೋಚರಿಸುತ್ತದೆ. ಈ ಪ್ರಕರಣವನ್ನು ದಿವಾಕರ ಹೇಗೆ ಪರಿಹರಿಸುತ್ತಾನೆ ಎಂಬುದೇ ಈ ಚಿತ್ರದ ಸಾರಾಂಶ.
ಪಾತ್ರವರ್ಗ
[ಬದಲಾಯಿಸಿ]- ರಿಷಬ್ ಶೆಟ್ಟಿ, ಡಿಟೇಕ್ಟಿವ್ ದಿವಾಕರನಾಗಿ
- ಹರಿಪ್ರಿಯಾ, ಕುಸುಮ ಆಗಿ
- ಅಚ್ಯುತ್ ಕುಮಾರ್, ಅಣ್ಣಪ್ಪ ಆಗಿ
- ಯೋಗರಾಜ್ ಭಟ್, ಮರಕುಟಿಕನಾಗಿ
- ಪ್ರಮೋದ್ ಶೆಟ್ಟಿ, ಇನ್ಸ್ಪೆಕ್ಟರ್ ಸಹದೇವನಾಗಿ
- ಸುಜಾಯ್ ಶಾಸ್ತ್ರಿ, ಸಗಣಿ ಪಿಂಟೋ ಆಗಿ
- ಶಿವಮಾಣಿ, ಮಂತ್ರವಾದಿ ಮೋಡಿ ಮಂಜಪ್ಪನಾಗಿ[೬]
- ದಿನೇಶ್ ಮಂಗಳೂರು, ಸೇಠ್ ಆಗಿ
- ಪಿ ಡಿ ಸತೀಶ್ ಚಂದ್ರ ಗುರುಪಾದನಾಗಿ
- ಪ್ರಕಾಶ್ ತುಮಿನಾಡ್, ಕಾನ್ಸ್ಟೇಬಲ್ ಖುರೇಷಿಯಾಗಿ
ಧ್ವನಿಸುರುಳಿ
[ಬದಲಾಯಿಸಿ]Untitled | |
---|---|
ಬಿ.ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನಲೆ ಸಂಗೀತ ಮತ್ತು ಹಾಡುಗಳನ್ನು ಸಂಯೋಜಿಸಿದ್ದಾರೆ.[೭] ಹಾಡುಗಳಿಗೆ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ರಘು ನಡುವಳ್ಳಿ ಅವರು ಬರೆದಿದ್ದಾರೆ.
ಹಾಡುಗಳು | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಗಾಯಕ(ರು) | ಸಮಯ |
1. | "ಏತಕೆ" | ಯೋಗರಾಜ್ ಭಟ್ | ವಿಜಯ್ ಪ್ರಕಾಶ್ | 04:07 |
2. | "ಆದಿ ಜ್ಯೋತಿ ಬನ್ ಯೋ" | ಜನಪದ | ಕಡಬಗೆರೆ ಮುನಿರಾಜು | 03:38 |
3. | "ರೇಟ್ರೋ ಕ್ಲಬ್" | ರಘು ನಡುವಳ್ಳಿ | ಸಂಗೀತ ರವೀಂದ್ರನಾಥನ್ | 03:33 |
4. | "ಆಡಿಯೋ ಟ್ರೇಲರ್" | ಬಿ. ಅಜನೀಶ್ ಲೋಕನಾಥ್ | 02:40 | |
ಒಟ್ಟು ಸಮಯ: | 13:54 |
ಉಲ್ಲೇಖಗಳು
[ಬದಲಾಯಿಸಿ]- ↑ "'Bell Bottom is a comedy thriller that will appeal to all'". ದಿ ಟೈಮ್ಸ್ ಆಫ್ ಇಂಡಿಯಾ. 15 ಫೆಬ್ರವರಿ 2019.
- ↑ "Rishab Shetty as hero in Bell Bottom to be helmed by Jayatheertha". ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್. 9 ಜನವರಿ 2018.
- ↑ "Hariprriya reunites with Jayatheertha in 'Bell Bottom'". ಡೆಕ್ಕನ್ ಹೆರಾಲ್ಡ್. 10 ಮಾರ್ಚ್ 2018.
- ↑ "Bell Bottom – ಬೆಲ್ ಬಾಟಂ (2019/೨೦೧೯)". ಕನ್ನಡ ಮೂವೀಸ್ ಇನ್ಫೋ. 15 ಫೆಬ್ರವರಿ 2019.
- ↑ "Rishab Shetty's Bell Bottom Becomes The First Ever Movie In The World To Release An Audio Trailer". ಮೆಟ್ರೋ ಸಾಗ. 8 ಫೆಬ್ರವರಿ 2019. Archived from the original on 10 ನವೆಂಬರ್ 2019. Retrieved 10 ನವೆಂಬರ್ 2019.
- ↑ ಬೆಂಗಳೂರು ಮಿರರ್ ಬ್ಯುರೋ. "Shivamani to reprise Bell Bottom role in Tamil". ಬೆಂಗಳೂರು ಮಿರರ್. Retrieved 14 ಏಪ್ರಿಲ್ 2019.
- ↑ "Bell Bottom Songs". ಗಾನ. ಡಿಸೆಂಬರ್ 2018.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಬೆಲ್ ಬಾಟಮ್ at IMDb
- Pages using the JsonConfig extension
- Use dmy dates from November 2019
- Articles with invalid date parameter in template
- Short description is different from Wikidata
- Template film date with 1 release date
- Pages using infobox film with unknown parameters
- Music infoboxes with unknown value for type
- Articles using infobox templates with no data rows
- Album articles with non-standard infoboxes
- Articles with hAudio microformats
- Album articles lacking alt text for covers
- Pages using infobox album with empty type parameter
- Pages using infobox album with unknown parameters
- ಇನ್ಪುಟ್ ದೋಷಗಳನ್ನು ಹೊಂದಿರುವ ಟ್ರ್ಯಾಕ್ ಪಟ್ಟಿ
- ಚಲನಚಿತ್ರಗಳು
- ಕನ್ನಡ ಚಲನಚಿತ್ರಗಳು
- ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗೆ ಬರೆದ ಲೇಖನ
- ವರ್ಷ-೨೦೧೯ ಕನ್ನಡಚಿತ್ರಗಳು