ಬೆಂಗಳೂರು ನಗರ ರೈಲ್ವೆ ನಿಲ್ದಾಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಬೆಂಗಳೂರು ನಗರ) ರೈಲ್ವೆ ನಿಲ್ದಾಣ | |
---|---|
ಭಾರತೀಯ ರೈಲ್ವೆ ನಿಲ್ದಾಣ | |
ಸ್ಥಳ | ರೈಲ್ವೆ ನಿಲ್ದಾಣ ರಸ್ತೆ, ಗುಬ್ಬಿ ತಿರುವು, ಬೆಂಗಳೂರು, ಕರ್ನಾಟಕ, India |
ನಿರ್ದೇಶಾಂಕ | 12°58′42″N 77°34′10″E / 12.97833°N 77.56944°E |
ಎತ್ತರ | 896.920 metres (2,942.65 ft) |
ಒಡೆತನದ | ಭಾರತೀಯ ರೈಲ್ವೆ |
ನಿರ್ವಹಿಸುತ್ತದು | ನೈಋತ್ಯ ರೈಲ್ವೆ |
ಗೆರೆ(ಗಳು) | ಚೆನ್ನೈ ಕೇಂದ್ರ-ಬೆಂಗಳೂರು ನಗರ ಮಾರ್ಗ |
ವೇದಿಕೆ | ೧೦ |
ಸಂಪರ್ಕಗಳು | ಕೆಂಪೇಗೌಡ ಬಸ್ ನಿಲ್ದಾಣ, ನಮ್ಮ ಮೆಟ್ರೋ |
Construction | |
ಪಾರ್ಕಿಂಗ್ | ಇದೆ |
Other information | |
ಸ್ಥಿತಿ | ಚಾಲ್ತಿಯಲ್ಲಿದೆ |
ನಿಲ್ದಾಣದ ಸಂಕೇತ | SBC |
ವಿದ್ಯುನ್ಮಾನ | ಹೌದು |
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ[೧] ರೈಲ್ವೆ ನಿಲ್ದಾಣ ಎಂದು ಅಧಿಕೃತವಾಗಿ ಹೆಸರಿಸಲಾಗಿರುವ ಬೆಂಗಳೂರು ನಗರ ರೈಲ್ವೆ ನಿಲ್ದಾಣವು ಬೆಂಗಳೂರು ನಗರದ ಮುಖ್ಯ ರೈಲ್ವೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಲ್ದಾಣವನ್ನು ಕನ್ನಡನಾಡಿನ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಮೇ ೨೦೧೫ ರಲ್ಲಿ ಮರುನಾಮಕರಣ[೨] ಮಾಡಲಾಗಿ, ೩ ಫೆಬ್ರವರಿ ೨೦೧೬ ರಿಂದ ಅಧಿಕೃತಗೊಳಿಸಲಾಗಿದೆ.[೧] ಈ ನಿಲ್ದಾಣವು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಾಗಿಕೊಂಡಿದೆ. ಈ ನಿಲ್ದಾಣವು ನೈಋತ್ಯ ರೈಲ್ವೆ ಹಾಗು ಭಾರತೀಯ ರೈಲ್ವೆಯ ಬಹುಮುಖ್ಯ ಕೇಂದ್ರವಾಗಿದೆ. ಈ ನಿಲ್ದಾಣವು ೧೦ ಅಂಕಣಗಳು ಹಾಗು ೨ ಪ್ರವೇಶ ದ್ವಾರಗಳನ್ನು ಹೊಂದಿದೆ. ಇದು ಭಾರತದ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ.
ಕೂಡು ನಿಲ್ದಾಣ(ಜಂಕ್ಷನ್)
[ಬದಲಾಯಿಸಿ]ಬೆಂಗಳೂರು ಭಾರತದ ಬಹುಮುಖ್ಯ ಕೂಡು ನಿಲ್ದಾಣಗಳಲ್ಲೊಂದಾಗಿದೆ. ಮೊದಲ ೭ ಅಂಕಣಗಳು ಚೆನ್ನೈ ಮತ್ತು ಸೇಲಂ ರೈಲ್ವೆ ಮಾರ್ಗಗಳನ್ನು ಸಂಪರ್ಕಿಸುತ್ತವೆ. ಹುಬ್ಬಳ್ಳಿಯಿಂದ ಯಶವಂತಪುರ ಮಾರ್ಗದಲ್ಲಿ ಬರುವ ರೈಲುಗಳು ೮ ರಿಂದ ೧೦ನೆ ಅಂಕಣಗಳನ್ನು ಸೇರುತ್ತವೆ . ಅಂಕಣ ೫ ರಿಂದ ೧೦ರಲ್ಲಿ, ಮೈಸೂರುಕಡೆಗೆ ಪ್ರಯಾಣಿಕ ಗಾಡಿಗಳು ಹೊರಡುತ್ತವೆ. ಅಂಕಣ ೪ ಮತ್ತು ೫ರ ಮಧ್ಯ ಇರುವ ಹಳಿಗಳನ್ನು ರೈಲುಗಳನ್ನು ನಿಲ್ಲಿಸಲು ಬಳಸಲಾಗುತ್ತದೆ. ಬೆಂಗಳೂರು ನಗರ ರೈಲ್ವೆ ನಿಲ್ದಾಣದಿಂದ ೫ ರೈಲ್ವೆ ಮಾರ್ಗಗಳು ಹಾದು ಹೋಗುತ್ತವೆ. ಗುಂತಕಲ್ ಮಾರ್ಗವಾಗಿ ಹೈದರಾಬಾದ್, ಕೃಷ್ಣರಾಜಪುರ ಮಾರ್ಗವಾಗಿ ಚೆನ್ನೈ, ಹೊಸೂರು ಮಾರ್ಗವಾಗಿ ಸೇಲಂ, ಮೈಸೂರು, ತುಮಕೂರು ಮಾರ್ಗವಾಗಿ ಹುಬ್ಬಳ್ಳಿ, ಬೀರೂರು. ಬೆಂಗಳೂರು ದಂಡು, ಬಂಗಾರಪೇಟೆ ಮೂಲಕ ಹಾದುಹೋಗುವ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗವನ್ನು ಸಂಪೂರ್ಣ ವಿದ್ಯುದೀಕರಿಸಲಾಗಿದ್ದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಈ ನಿಲ್ದಾಣದಿಂದ ದಿನಂಪ್ರತಿ ೬೩ ವೇಗದೂತ ರೈಲುಗಳನ್ನೊಳಗೊಂಡು ಒಟ್ಟು ೮೮ ರೈಲುಗಳು ಕಾರ್ಯಾಚರಿಸುತ್ತವೆ ಮತ್ತು ಅಂದಾಜು ೨,೨೦,೦೦೦ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ.[೩]
ರೈಲ್ವೆ ಬಡಾವಣೆ
[ಬದಲಾಯಿಸಿ]ನಿಲ್ದಾಣದ ಹಿಂಭಾಗದಲ್ಲಿ ರೈಲ್ವೆ ಸಿಬ್ಬಂದಿಗಳಿಗಾಗಿಯೆ ಬಡಾವಣೆಯೊಂದನ್ನು ಸ್ಥಾಪಿಸಲಾಗಿದ್ದು. ಈ ಕಾಲೋನಿಯು ಶಾಲೆ, ಆಸ್ಪತ್ರೆ, ಆಟದ ಮೈದಾನ ಮುಂತಾದ ಮೂಲಸೌಕರ್ಯಗಳನ್ನೊಳಗೊಂಡಿದೆ.
ವಿಸ್ತರಣೆ
[ಬದಲಾಯಿಸಿ]ಟಿಕೇಟ್ ಮುಂಗಟ್ಟೆ, ಕೆಳಮಹಡಿಯ ವಾಹನ ನಿಲ್ದಾಣ ಹಾಗು ಪ್ರಯಾಣಿಕರ ಚಾವಡಿಗಳನ್ನೊಳಗೊಂಡ ಸುಸಜ್ಜಿತ ಕಟ್ಟಡವು ಓಕಳೀಪುರ ಪ್ರವೇಶ ದ್ವಾರದಲ್ಲಿ ಸೇವೆಗೆ ಮುಕ್ತಗೊಳಿಸಲಾಗಿದೆ.[೪]
ಸ್ಥಳ
[ಬದಲಾಯಿಸಿ]ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್)ನ ಹತ್ತಿರ.
ಹಳೆ ಮೈಸೂರು ರಸ್ತೆ | ಓಕಳೀಪುರ | ಶೇಷಾದ್ರಿ ರಸ್ತೆ | ||
ಹಳೆ ಮೈಸೂರು ರಸ್ತೆ | ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) | |||
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ನಗರ ರೈಲ್ವೆ ನಿಲ್ದಾಣ | ||||
ಮಾಗಡಿ ರಸ್ತೆ | ಟಿಸಿಎಂ ರೋಯನ್ ರಸ್ತೆ | ಗುಬ್ಬಿ ತೋಟದಪ್ಪ ರಸ್ತೆ/ಕೆಂಪೇಗೌಡ ಬಸ್ ನಿಲ್ದಾಣ(ಮೆಜೆಸ್ಟಿಕ್) |
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ "South Central Railway Press Release".
- ↑ "Bengaluru railway station to be named after Sangolli Rayanna". Deccan Harald, Newspaper. 1 May 2015. Retrieved 17 September 2015.
- ↑ "Bengaluru still on waitlist for better rail facilities". The Hindu. Chennai, India. 5 March 2013. Retrieved 5 March 2013.
- ↑ "Ministers Bat For Suburban Rail Services". New Indian Express. 21 June 2015. Archived from the original on 1 ನವೆಂಬರ್ 2015. Retrieved 11 ಮಾರ್ಚ್ 2016.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using gadget WikiMiniAtlas
- Pages using the JsonConfig extension
- Coordinates on Wikidata
- Articles using Infobox station with links or images inside name
- Pages with no open date in Infobox station
- Pages using infobox station with unknown parameters
- Commons category link is on Wikidata
- ಬೆಂಗಳೂರಿನ ರೈಲ್ವೆ ನಿಲ್ದಾಣಗಳು
- ಬೆಂಗಳೂರು ರೈಲ್ವೆ ವಿಭಾಗ
- ಕರ್ನಾಟಕದ ರೈಲ್ವೆ ನಿಲ್ದಾಣಗಳು
- ಕರ್ನಾಟಕದ ರೈಲ್ವೆ ಕೂಡು ನಿಲ್ದಾಣಗಳು