ಬತ್ತಿ
ಗೋಚರ
ಬತ್ತಿಯು ಎಣ್ಣೆ ದೀಪ ಅಥವಾ ಮೋಂಬತ್ತಿಯ ಜ್ವಾಲೆಯನ್ನು ಹೊರುವ, ಸಾಮಾನ್ಯವಾಗಿ ಹೆಣೆದ ಹತ್ತಿಯಾಗಿರುತ್ತದೆ. ಬತ್ತಿಯು ಲೋಮನಾಳ ಕ್ರಿಯೆಯಿಂದ ಕಾರ್ಯ ಮಾಡುತ್ತದೆ, ಇಂಧನವನ್ನು ಜ್ವಾಲೆಗೆ ಸಾಗಿಸುತ್ತದೆ. ದ್ರವ ಇಂಧನವು (ಸಾಮಾನ್ಯವಾಗಿ ಎಣ್ಣೆ ಅಥವಾ ಕರಗಿದ ಮೇಣ) ಜ್ವಾಲೆಯನ್ನು ತಲುಪಿದಾಗ, ಆವಿಯಾಗಿ ದಹಿಸುತ್ತದೆ. ಎಣ್ಣೆ ದೀಪ ಅಥವಾ ಮೋಂಬತ್ತಿಯು ಹೇಗೆ ಉರಿಯುತ್ತದೆ ಎಂಬುದರ ಮೇಲೆ ಬತ್ತಿಯು ಪರಿಣಾಮ ಬೀರುತ್ತದೆ. ಬತ್ತಿಯ ಪ್ರಮುಖ ಲಕ್ಷಣಗಳಲ್ಲಿ ವ್ಯಾಸ, ಪೆಡಸುತನ, ಅಗ್ನಿ ನಿರೋಧಕ ಗುಣ, ಮತ್ತು ಬಿಗಿಯಾಗುವ ಸಾಮರ್ಥ್ಯ ಸೇರಿವೆ.
ಬತ್ತಿಗಳನ್ನು ಸಾಮಾನ್ಯವಾಗಿ ಹೆಣೆದ ಹತ್ತಿಯಿಂದ ತಯಾರಿಸಲಾಗುತ್ತದೆ.[೧] ಕೆಲವೊಮ್ಮೆ ಬತ್ತಿಗಳನ್ನು ಚಪ್ಪಟೆಯಾಗಿ ಹೆಣೆಯಲಾಗುತ್ತದೆ. ಇದರಿಂದ ಅವು ಉರಿದಾಗ ಅವು ಮತ್ತೆ ಜ್ವಾಲೆಯೊಳಗೆ ಸುತ್ತಿಕೊಳ್ಳುತ್ತವೆ, ಹಾಗಾಗಿ ಅವು ಸ್ವದಾಹಿಯಾಗುತ್ತವೆ. ಈ ಬತ್ತಿಗಳ ಪರಿಚಯದ ಮೊದಲು, ಜ್ವಾಲೆಯನ್ನು ಆರಿಸದೇ ಹೆಚ್ಚಿನ ಬತ್ತಿಯನ್ನು ಕತ್ತರಿಸಲು ವಿಶೇಷ ಕತ್ತರಿಗಳನ್ನು ಬಳಸಲಾಗುತ್ತಿತ್ತು.
ಉಲ್ಲೇಖಗಳು
[ಬದಲಾಯಿಸಿ]- ↑ Franz Willhöft and Rudolf Horn "Candles" in Ullmann's Encyclopedia of Industrial Chemistry, 2000, Wiley-VCH, Weinheim. doi:10.1002/14356007.a05_029