ಮೋಂಬತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೋಂಬತ್ತಿಯು (ಮೇಣದ ಬತ್ತಿ) ಬೆಳಕು, ಮತ್ತು ಕೆಲವು ಸಂದರ್ಭಗಳಲ್ಲಿ, ಪರಿಮಳ ನೀಡಲು/ಬೀರಲು ಮೇಣದಲ್ಲಿ ನೆಡಲಾಗಿರುವ ಬೆಂಕಿ ಹತ್ತಿಸಬಲ್ಲ ಬತ್ತಿ, ಅಥವಾ ಟ್ಯಾಲೊದಂತಹ ಮತ್ತೊಂದು ದಹ್ಯ ಘನವಸ್ತು. ಮೋಂಬತ್ತಿಯು ಶಾಖವನ್ನು ಕೂಡ ಒದಗಿಸಬಲ್ಲದು, ಅಥವಾ ಇದನ್ನು ಕಾಲವನ್ನು ಲೆಕ್ಕವಿಡುವ ವಿಧಾನವಾಗಿಯೂ ಬಳಸಬಹುದು. ವಿದ್ಯುತ್ ನಿಲುಗಡೆಯ ಸಂದರ್ಭದಲ್ಲಿ ಬೆಳಕು ನೀಡಲು ಮೋಂಬತ್ತಿಯನ್ನು ಬಳಸಬಹುದು.

ಮೋಂಬತ್ತಿಗಳನ್ನು ತಯಾರಿಸುವ ವ್ಯಕ್ತಿಯನ್ನು ಸಾಂಪ್ರದಾಯಿಕವಾಗಿ ಮೋಂಬತ್ತಿಕಾರನೆಂದು ಕರೆಯಲಾಗುತ್ತದೆ. ಮೋಂಬತ್ತಿ ಕಂಬಗಳು ಎಂದೂ ಕರೆಯಲ್ಪಡುವ ಸರಳ ಮೇಜಿನ ಮೇಲಿನ ಮೋಂಬತ್ತಿಪೀಠಗಳಿಂದ ಹಿಡಿದು ಸಂಕೀರ್ಣ ಗೊಂಡೆದೀಪಗಳವರೆಗೆ ಮೋಂಬತ್ತಿಗಳನ್ನು ಹಿಡಿದಿಟ್ಟುಕೊಳ್ಳಲು ವಿವಿಧ ಸಾಧನಗಳನ್ನು ಆವಿಷ್ಕರಿಸಲಾಗಿದೆ.

ಬಾಹ್ಯ ಕೊಂಡಿಗಳು[ಬದಲಾಯಿಸಿ]