ವಿಷಯಕ್ಕೆ ಹೋಗು

ಪ್ರೀತಿ ನಾಗರಾಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ರೀತಿ ನಾಗರಾಜ್
ಜನನದಾವಣಗೆರೆ, ಕರ್ನಾಟಕ
ವೃತ್ತಿಲೇಖಕಿ, ರಂಗಕರ್ಮಿ, ಅಂಕಣ ಬರಹಗಾರ್ತಿ, ಪತ್ರಕರ್ತೆ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾಲಯ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ

ಪ್ರೀತಿ ನಾಗರಾಜ್ (ಆಂಗ್ಲ:Preethi Nagaraj), ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬರೆಯುವ ಲೇಖಕಿ, ಪತ್ರಕರ್ತೆ ಮತ್ತು ಅಂಕಣ ಬರಹಗಾರ್ತಿ. ಪ್ರಚಲಿತ ವಿದ್ಯಮಾನಗಳ ವಿಶ್ಲೇಷಣೆಗಳುಳ್ಳ ಅವರ ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಸಾರವಾದ ಅವರ ‛ಮಿರ್ಚಿ ಮಂಡಕ್ಕಿ’ ಅಂಕಣ ಬರಹಗಳು ಅಪಾರ ಮೆಚ್ಚುಗೆಗೆ ಪಾತ್ರವಾಗಿ, ಪುಸ್ತಕವಾಗಿಯೂ ಪ್ರಕಟಗೊಂಡಿವೆ.[]

ವೃತ್ತಿ

[ಬದಲಾಯಿಸಿ]

ಬಾಲ್ಯದಿಂದಲೂ ರಂಗಭೂಮಿಯ ವಾತಾವರಣದಲ್ಲಿಯೇ ಬೆಳೆದ ಪ್ರೀತಿ, ರಂಗಚಟುವಟಿಕೆಗಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಪತ್ರಕರ್ತೆಯಾಗಿ ತಮ್ಮ ವೃತ್ತಿ ಆರಂಭಿಸಿದ ಪ್ರೀತಿಯವರು ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್'ಪ್ರೆಸ್, CNBC ಮುಂತಾದ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

ಪಿ.ಶೇಷಾದ್ರಿ ನಿರ್ದೇಶನದ, ರಾಷ್ಟ್ರ ಪ್ರಶಸ್ತಿ ಪಡೆದ ಡಿಸೆಂಬರ್ 1 ಚಿತ್ರಕ್ಕೆ ಚಿತ್ರಕತೆ ಸಹಾಯಕರಾಗಿ ಕೆಲಸ ಮಾಡಿದ ಪ್ರೀತಿ, ಅದೇ ಚಿತ್ರದಲ್ಲಿ ನಟಿಸಿದ್ದಾರೆ.[]

ರಂಗಕರ್ಮಿ, ನಟಿ ಬಿ.ಜಯಶ್ರೀ ಅವರ ಆತ್ಮಕಥೆ "ಕಣ್ಣಾಮುಚ್ಚೆ ಕಾಡೇಗೂಡೇ" ಕೃತಿಯ ನಿರೂಪಣೆ ಮಾಡಿರುವ ಪ್ರೀತಿ, ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರಲ್ಲಿ ಪ್ರಮುಖರು.[]

ಕೃತಿಗಳು

[ಬದಲಾಯಿಸಿ]
  • "ಮಿರ್ಚಿ ಮಂಡಕ್ಕಿ" - ಭಾಗ ೧, ೨[]
  • "ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ"

ಇತ್ಯಾದಿ

ಪ್ರಶಸ್ತಿಗಳು

[ಬದಲಾಯಿಸಿ]
  • 2016 - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ("ಕಣ್ಣಾಮುಚ್ಚೆ ಕಾಡೇಗೂಡೇ" ಜೀವನ ಚರಿತ್ರೆಗೆ)[][]
  • 2010 - ಸರೋಜಿನಿ ನಾಯ್ಡು ಬಹುಮಾನ ( "ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ" ಲೇಖನಕ್ಕೆ)[]

ಇತ್ಯಾದಿ.

ಉಲ್ಲೇಖಗಳು

[ಬದಲಾಯಿಸಿ]
  1. "Mirchi Mandakki - Prajavani". Prajavani.net.
  2. "Interview of Preethi Nagaraj". Bangalore first.in. May 3, 2014.
  3. "‛ಕಣ್ಣಾಮುಚ್ಚೆ ಕಾಡೇ ಗೂಡೇ' - ಪ್ರೀತಿ ನಾಗರಾಜ". pustakapremi.com. Feb 29, 2020.
  4. "ಪ್ರೀತಿ ನಾಗರಾಜ್ ಅವರ 'ಮಿರ್ಚಿ ಮಂಡಕ್ಕಿ'". www.navakarnatakaonline.com. Archived from the original on 2020-08-10. Retrieved 2020-09-06.
  5. "ಪ್ರೀತಿ ನಾಗರಾಜ್, ಶಾಂತಿ ಅಪ್ಪಣ್ಣ ಸೇರಿದಂತೆ ಹಲವರಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ' ಘೋಷಣೆ". dailyhunt.com. March 1, 2018.
  6. "Preethi Nagaraj at Mysore Literature Festival". www.mysoreliteraturefestival.com.
  7. "ಲೇಖಕಿ ಪ್ರೀತಿ ನಾಗರಾಜ್". Bookbrahma.com.

ಬಾಹ್ಯ ಕೊಂಡಿಗಳು

[ಬದಲಾಯಿಸಿ]