ವಿಷಯಕ್ಕೆ ಹೋಗು

ಪ್ರಕಟಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮುದ್ರಣ

ಪ್ರಕಟಣೆ ಎಂದರೆ ಸಾರ್ವಜನಿಕರಿಗಾಗಿ ಮಾಹಿತಿಯನ್ನು ಲಭ್ಯವಾಗಿಸುವುದು.[][] ಈ ಪದದ ನಿರ್ದಿಷ್ಟ ಬಳಕೆಯು ದೇಶಗಳ ನಡುವೆ ಬದಲಾಗಬಹುದಾದರೂ, ಇದನ್ನು ಸಾಮಾನ್ಯವಾಗಿ ಕಾಗದ (ವೃತ್ತಪತ್ರಿಕೆಗಳು, ನಿಯತಕಾಲಿಕಗಳು, ಕ್ಯಾಟಲಾಗು ಸೂಚಿಗಳು) ಸೇರಿದಂತೆ, ಪಠ್ಯ, ಚಿತ್ರಗಳು ಅಥವಾ ಇತರ ಶ್ರವ್ಯ-ದೃಶ್ಯ ಮಾಹಿತಿಗೆ ಅನ್ವಯಿಸಲಾಗುತ್ತದೆ. ಪ್ರಕಟಣೆ ಶಬ್ದವು ಪ್ರಕಟಿಸುವ ಕ್ರಿಯೆ, ಮತ್ತು ಯಾವುದೇ ಮುದ್ರಿತ ಪ್ರತಿಗಳನ್ನೂ ಸೂಚಿಸುತ್ತದೆ.

ಬಗೆಗಳು

[ಬದಲಾಯಿಸಿ]
  • ಪುಸ್ತಕ: ಎರಡು ರಕ್ಷಾಕವಚಗಳ ಮಧ್ಯೆ ಒಟ್ಟಾಗಿ ಲಗತ್ತಿಸಲಾದ ಪುಟಗಳು. ಒಬ್ಬ ವ್ಯಕ್ತಿಗೆ ಅದರಿಂದ ಓದಲು ಅಥವಾ ಅದರಲ್ಲಿ ಬರೆಯಲು ಅವಕಾಶ ನೀಡುತ್ತವೆ.
  • ಕಿರುಪುಸ್ತಕ: ಕಾಗದದ ಒಂದು ಹಾಳೆಗಿಂತ ಹೆಚ್ಚಿರುವ ಕರಪತ್ರ, ಸಾಮಾನ್ಯವಾಗಿ ಪುಸ್ತಕದ ಶೈಲಿಯಲ್ಲಿ ಲಗತ್ತಿಸಲ್ಪಟ್ಟಿರುತ್ತದೆ.
  • ದಿನಚರಿ: ಒಳಗೆ ಖಾಲಿ ಪುಟಗಳಿರುವ ಪುಸ್ತಕ. ಇದು ಯಾವುದೇ ವೈಯಕ್ತಿಕ ಮಾಹಿತಿಯನ್ನು ಬರೆಯಲು ಅವಕಾಶ ನೀಡುತ್ತದೆ.
  • ವೃತ್ತಪತ್ರಿಕೆ: ಸುದ್ದಿ, ಕ್ರೀಡೆ, ಮಾಹಿತಿ ಮತ್ತು ಜಾಹೀರಾತುಗಳನ್ನು ಮುದ್ರಿಸಿರುವ ಹಲವು ಪುಟಗಳ ಪ್ರಕಟಣೆ. ವೃತ್ತಪತ್ರಿಕೆಗಳನ್ನು ದೈನಿಕವಾಗಿ, ಸಾಪ್ತಾಹಿಕವಾಗಿ, ಮಾಸಿಕವಾಗಿ, ತ್ರೈಮಾಸಿಕವಾಗಿ, ಅಥವಾ ವಾರ್ಷಿಕವಾಗಿ ಪ್ರಕಟಿಸಿ ವಿತರಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಪ್ರಕಟಣೆ&oldid=1116051" ಇಂದ ಪಡೆಯಲ್ಪಟ್ಟಿದೆ