ಪ್ರಕಟಣೆ
ಗೋಚರ
ಪ್ರಕಟಣೆ ಎಂದರೆ ಸಾರ್ವಜನಿಕರಿಗಾಗಿ ಮಾಹಿತಿಯನ್ನು ಲಭ್ಯವಾಗಿಸುವುದು.[೧][೨] ಈ ಪದದ ನಿರ್ದಿಷ್ಟ ಬಳಕೆಯು ದೇಶಗಳ ನಡುವೆ ಬದಲಾಗಬಹುದಾದರೂ, ಇದನ್ನು ಸಾಮಾನ್ಯವಾಗಿ ಕಾಗದ (ವೃತ್ತಪತ್ರಿಕೆಗಳು, ನಿಯತಕಾಲಿಕಗಳು, ಕ್ಯಾಟಲಾಗು ಸೂಚಿಗಳು) ಸೇರಿದಂತೆ, ಪಠ್ಯ, ಚಿತ್ರಗಳು ಅಥವಾ ಇತರ ಶ್ರವ್ಯ-ದೃಶ್ಯ ಮಾಹಿತಿಗೆ ಅನ್ವಯಿಸಲಾಗುತ್ತದೆ. ಪ್ರಕಟಣೆ ಶಬ್ದವು ಪ್ರಕಟಿಸುವ ಕ್ರಿಯೆ, ಮತ್ತು ಯಾವುದೇ ಮುದ್ರಿತ ಪ್ರತಿಗಳನ್ನೂ ಸೂಚಿಸುತ್ತದೆ.
ಬಗೆಗಳು
[ಬದಲಾಯಿಸಿ]- ಪುಸ್ತಕ: ಎರಡು ರಕ್ಷಾಕವಚಗಳ ಮಧ್ಯೆ ಒಟ್ಟಾಗಿ ಲಗತ್ತಿಸಲಾದ ಪುಟಗಳು. ಒಬ್ಬ ವ್ಯಕ್ತಿಗೆ ಅದರಿಂದ ಓದಲು ಅಥವಾ ಅದರಲ್ಲಿ ಬರೆಯಲು ಅವಕಾಶ ನೀಡುತ್ತವೆ.
- ಕಿರುಪುಸ್ತಕ: ಕಾಗದದ ಒಂದು ಹಾಳೆಗಿಂತ ಹೆಚ್ಚಿರುವ ಕರಪತ್ರ, ಸಾಮಾನ್ಯವಾಗಿ ಪುಸ್ತಕದ ಶೈಲಿಯಲ್ಲಿ ಲಗತ್ತಿಸಲ್ಪಟ್ಟಿರುತ್ತದೆ.
- ದಿನಚರಿ: ಒಳಗೆ ಖಾಲಿ ಪುಟಗಳಿರುವ ಪುಸ್ತಕ. ಇದು ಯಾವುದೇ ವೈಯಕ್ತಿಕ ಮಾಹಿತಿಯನ್ನು ಬರೆಯಲು ಅವಕಾಶ ನೀಡುತ್ತದೆ.
- ವೃತ್ತಪತ್ರಿಕೆ: ಸುದ್ದಿ, ಕ್ರೀಡೆ, ಮಾಹಿತಿ ಮತ್ತು ಜಾಹೀರಾತುಗಳನ್ನು ಮುದ್ರಿಸಿರುವ ಹಲವು ಪುಟಗಳ ಪ್ರಕಟಣೆ. ವೃತ್ತಪತ್ರಿಕೆಗಳನ್ನು ದೈನಿಕವಾಗಿ, ಸಾಪ್ತಾಹಿಕವಾಗಿ, ಮಾಸಿಕವಾಗಿ, ತ್ರೈಮಾಸಿಕವಾಗಿ, ಅಥವಾ ವಾರ್ಷಿಕವಾಗಿ ಪ್ರಕಟಿಸಿ ವಿತರಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Berne Convention, article 3(3) Archived 2012-09-11 ವೇಬ್ಯಾಕ್ ಮೆಷಿನ್ ನಲ್ಲಿ.. URL last accessed 2010-05-10.
- ↑ Universal Copyright Convention, Geneva text (1952), article VI Archived 2012-11-25 ವೇಬ್ಯಾಕ್ ಮೆಷಿನ್ ನಲ್ಲಿ.. URL last accessed 2010-05-10.