ವಿಷಯಕ್ಕೆ ಹೋಗು

ಪೀಕಾಕ್ ಲಾಮೆಂಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಕಾಕ್ ಲಾಮೆಂಟ್ (ಸಿಂಹಳೀಯ ಶೀರ್ಷಿಕೆ: ವಿಹಂಗ ಪ್ರೇಮಯ), 2022 ರ ಶ್ರೀಲಂಕಾದ ಸಿಂಹಳೀಯ ಭಾಷೆಯ ನಾಟಕ ಚಲನಚಿತ್ರವಾಗಿದ್ದು, ಸಂಜೀವ ಪುಷ್ಪಕುಮಾರ ರವರು ಬರೆದು ನಿರ್ದೇಶಿಸಿದ್ದಾರೆ. ಈ ಚಲನಚಿತ್ರವನ್ನು ಪಿಲ್ಗ್ರಿಮ್‌ನ ಚಿಯಾರಾ ಬಾರ್ಬೋ ರವರು ಸಹ-ನಿರ್ಮಾಣ ಮಾಡಿದ್ದಾರೆ.[] ಈ ಚಲನಚಿತ್ರವು 2022 ರಲ್ಲಿ 35 ನೇ ಟೋಕಿಯೋ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅದರ ಪ್ರಥಮ ಪ್ರದರ್ಶನವನ್ನು ಹೊಂದಿತ್ತು.[][]

ಸಾರಾಂಶ

[ಬದಲಾಯಿಸಿ]

ಶ್ರೀಲಂಕಾದ ಪೂರ್ವ ಪ್ರಾಂತ್ಯದ ಸಣ್ಣ ಹಳ್ಳಿಯೊಂದರಲ್ಲಿ ಹುಟ್ಟಿ ಬೆಳೆದ 19 ವರ್ಷದ ಹುಡುಗ ಅಮಿಲ(ಅಕಲಂಕ ಪ್ರಭಾಶ್ವರ)ನ ಕಥೆ. ಆಘಾತಕಾರಿ ಘಟನೆಗಳ ಸರಣಿಯ ನಂತರ ಅವನು ತನ್ನ ಜೀವನವನ್ನು ಮುಂದುವರಿಸುವ ದ್ರಢ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಇವರು ತನ‍್ನ ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಅವರ ಜೀವನ ಅನಾಥ ಹಾಗೂ ಅಸಹಾಯಕವಾಗಿ ಬಿಡುವುದು. ನಂತರ, ಅವರು ಗಗನಚುಂಬಿದ ಕಟ್ಟಡಗಳು, ಬಲಿಷ್ಠ ಮೂಲಸೌಕರ್ಯಗಳು ಮತ್ತು ಪ್ರಮುಖ ಸ್ಮಾರಕಗಳ ಮೂಲಕ ಹೆಚ್ಚು ಅಭಿವೃದ್ಧಿಯಾಗಿದ್ದ ಕೊಲಂಬೋ ನಗರಕ್ಕೆ ಸ್ಥಳಾಂತರಗೊಳ್ಳುತ್ತಾರೆ. ಇದು ಅವರು ಹುಟ್ಟಿದ ಪ್ರದೇಶಕ್ಕಿಂತ ಸಾಕಷ್ಟು ಮುನ್ನೋಟದಲ್ಲಿತ್ತು. ಅವರು ತಮ್ಮ ಪ್ರಾರಂಭಿಕ ದಿನಗಳಲ್ಲಿ ಎದುರಿಸಿದ ಕಷ್ಟಕರ ಹಾಗೂ ಗೊಂದಲಪೂರ್ಣ ಸಂದರ್ಭಗಳಿಂದ ಕಲಿತ ಜೀವನ ಪಾಠಗಳ ನಂತರ, ತಮ್ಮ ಜೀವನ ಮಟ್ಟವನ್ನು ಅಭಿವೃದ್ಧಿಪಡಿಸಲು ಹಾಗೂ ತಮ್ಮ ಜೀವನಕ್ಕೆ ಹೊಸ ಮಾರ್ಗವನ್ನು ನೀಡುವ ಉದ್ದೇಶದಿಂದ ಕೊಲಂಬೋಗೆ ಸ್ಥಳಾಂತರವಾಗುವ ನಿರ್ಧಾರ ಮಾಡಿದರು. ಅವನು ತನ್ನ ನಾಲ್ಕು ಕಿರಿಯ ಒಡಹುಟ್ಟಿದವರನ್ನು ನೋಡಿಕೊಳ್ಳಲು ಮತ್ತು ಆರೈಕೆ ಮಾಡಲು ಈ ತೀರ್ಮಾನವನ್ನು ಮಾಡುತ್ತಾನೆ. ಅವನ ಸಹೋದರಿಯರಲ್ಲಿ ಒಬ್ಬರಾದ ಇನೋಕಾರವರು ಟೆಟ್ರಾಲಜಿ ಆಫ್ ಫಾಲೋಟ್ ಎಂಬ ಜನ್ಮಜಾತ ಹೃದಯ ದೋಷದಿಂದ ಬಳಲುತ್ತಿದ್ದರು. ತುರ್ತು ಶಸ್ತ್ರಚಿಕಿತ್ಸೆಗೆ ತಕ್ಷಣವೇ ವ್ಯವಸ್ಥೆ ಮಾಡುವಂತೆ ವೈದ್ಯರು ಅಮಿಲಾಗೆ ಸಲಹೆ ನೀಡಿದರು, ಇದನ್ನು ಭಾರತದಲ್ಲಿ ಎರಡು ತಿಂಗಳ ಅವಧಿಯಲ್ಲಿ ಮುಂದುವರಿಸಬೇಕಾಗಿತ್ತು.[][]

ಅಮಿಲಾ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ $15,000 ಮೊತ್ತವನ್ನು ಸಂಗ್ರಹಿಸುವುದಾಗಿ ಭರವಸೆ ನೀಡುತ್ತಾನೆ. ಆದರೆ, ಚೀನಾದ ಕಟ್ಟಡ ನಿರ್ಮಾಣ ಸ್ಥಳದಲ್ಲಿ ನಿರ್ಮಾಣ ಕೆಲಸಗಾರನಾಗಿ ಅವನ ಕೆಲಸವು ಅವನಿಗೆ ಅಷ್ಟು ವೇತನವನ್ನು ಕೇಳುವ ಅವಕಾಶವನ್ನು ನೀಡುವುದಿಲ್ಲ. ಇದರಿಂದ ಅವನು ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಭರಿಸಲು ಅಗತ್ಯವಿರುವ ಕನಿಷ್ಠ ಮೊತ್ತವನ್ನು ಕಷ್ಟಪಟ್ಟು ಸಂಗ್ರಹಿಸಿಕೊಳ್ಳಬೇಕಾಗುತ್ತಿತ್ತು. ಇದರ ಮಧ್ಯೆ, ಅಮಿಲನಿಗೆ ತಿಳಿಯದಂತೆ ಆತನ ಒಡಹುಟ್ಟಿದವರು ಬೀದಿಗಳಲ್ಲಿ ಭಿಕ್ಷೆ ಬೇಡುವ ಮೂಲಕ ಹಣ ಸಂಗ್ರಹಿಸಲು ನಿರ್ಧರಿಸಿದ್ದರು. ದಿನಗಳು ಕಳೆದಂತೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತ ಹೋಗುತ್ತದೆ. ಆದರೆ, ಒಮ್ಮೆ 55 ವರ್ಷದ ಮಹಿಳೆ ಮಾಲಿನಿ(ಸಬಿತಾ ಪೆರೆರಾ) ಅವರನ್ನು ಭೇಟಿಯಾದಾಗ ಅವರು ಭರವಸೆಯನ್ನು ಕಂಡುಕೊಳ್ಳುತ್ತಾರೆ. ಮಾಲಿನಿಯವರು ತನ್ನ ಮಕ್ಕಳ ಕಳ್ಳಸಾಗಣೆ ವ್ಯವಹಾರದಲ್ಲಿ ಕೆಲಸಕ್ಕೆ ನೇಮಕ ಮಾಡುವ ಮೂಲಕ ಅಮಿಲನಿಗೆ ಸಹಾಯ ಮಾಡಲು ನಿರ್ಧರಿಸಿದರು. ಆ ಕೆಲಸವು ನೈತಿಕ ಪರಿಗಣನೆಗಳಿಗೆ ವಿರುದ್ಧವಾಗಿದ್ದರೂ ಸಹ, ಅಮಿಲಾ ಆ ಕೆಲಸವನ್ನು ತ್ಯಾಗ ಮಾಡಲಾಗಲಿಲ್ಲ. ಪರಿಸ್ಥಿತಿಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ತನ್ನ ಸಹೋದರಿಯ ವೈದ್ಯಕೀಯ ಶಸ್ತ್ರಚಿಕಿತ್ಸೆಯ ವೆಚ್ಚಕ್ಕಾಗಿ ಹಣವನ್ನು ಸಂಗ್ರಹಿಸಲು ಹಾಬ್ಸನ್‌ನ ಆಯ್ಕೆಯಾಗಿ ಅವಕಾಶವನ್ನು ತೆಗೆದುಕೊಳ್ಳುತ್ತಾನೆ. ಅಮಿಲಾ ನಂತರ ಮಹಿಳೆಯರನ್ನು ಕಾನೂನುಬಾಹಿರವಾಗಿ ಸಾಗಿಸಲು ಮತ್ತು ಹಣ ಗಳಿಸಲು ಮುಂದುವರಿಯುತ್ತಾನೆ, ಆದರೆ ಕೊನೆಗೆ ತನ್ನ ಕ್ರಿಯೆಗಳಿಂದ ಉಂಟಾಗಬಹುದಾದ ಪರಿಣಾಮಗಳನ್ನು ಅವನು ಅರಿತುಕೊಳ್ಳುತ್ತಾನೆ.[][] ನಂತರ ಅವರು ಎಲ್ಲಾ ಸಂತ್ರಸ್ತ ಮಹಿಳೆಯರ ಬಗ್ಗೆ ಸಹಾನುಭೂತಿ ಹೊಂದುತ್ತಾರೆ ಮತ್ತು ಅವರನ್ನುಅಪಾಯದಿಂದ ಪಾರಾಗಿಸಲು ನದೀ (ದಿನಾರಾ ಪುಂಚಿಹೆವಾ) ಎಂಬ ಮಹಿಳೆಯೊಂದಿಗೆ ಸ್ನೇಹವನ್ನು ಬೆಳೆಸುತ್ತಾನೆ.

ಪಾತ್ರ

[ಬದಲಾಯಿಸಿ]
  • ಅಮಿಲನಾಗಿ ಅಕಲಂಕ ಪ್ರಭಾಶ್ವರ
  • ಮಾಲಿನಿ ಪಾತ್ರದಲ್ಲಿ ಸಬೀತಾ ಪೆರೇರಾ
  • ದಿನಾರಾ ಪುಂಚಿಹೆವಾ ನದೀ ಯ ಪಾತ್ರದಲ್ಲಿ
  • ಮಹೇಂದ್ರ ಪೆರೇರಾ
  • ಲೊರೆಂಜೊ ಅಕ್ವಾವಿವಾ
  • ಅಮಿತ ವೀರಸಿಂಗ್

ಪ್ರೀಮಿಯರ್

[ಬದಲಾಯಿಸಿ]

ನವೆಂಬರ್ 2023 ರಲ್ಲಿ, ಚಲನಚಿತ್ರವನ್ನು 54 ನೇ ಗೋವಾ ಅಂತರರಾಷ್ಟ್ರೀಯ ಗೋವಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.[] ಈ ಚಲನಚಿತ್ರವು 35 ನೇ ಟೋಕಿಯೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಮುಖ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿತು. ಹಾಗೂ ಎರಡು ಪತ್ರಿಕಾ, ಉದ್ಯಮ ಪ್ರದರ್ಶನಗಳು ಮತ್ತು ಮೂರು ಸಾರ್ವಜನಿಕ ಪ್ರದರ್ಶನಗಳನ್ನು ಹೊಂದಿತ್ತು.[][]

ಪುರಸ್ಕಾರಗಳು

[ಬದಲಾಯಿಸಿ]

ಜರ್ಮನಿಯಲ್ಲಿ ಯುರೋಪಿಯನ್ ವರ್ಕ್ ಇನ್ ಪ್ರೋಗ್ರೆಸ್ ಕೋಲೋನ್ (EWIP) ನ ನಾಲ್ಕನೇ ಆವೃತ್ತಿಯ 24 ಚಲನಚಿತ್ರ ಯೋಜನೆಗಳಲ್ಲಿ ಒಂದಾಗಿ ಇದನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು. ಈ ಚಲನಚಿತ್ರವು 2022 ರಲ್ಲಿ 35 ನೇ ಟೋಕಿಯೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಕಲಾತ್ಮಕ ಕೊಡುಗೆಯನ್ನು ಗೆದ್ದುಕೊಂಡಿತು.[೧೦]

ಉಲ್ಲೇಖಗಳು

[ಬದಲಾಯಿಸಿ]
  1. "ඉතාලියේ රිදී තිරයට ගිය 'විහඟ ප්‍රේමය' (Peacock Lament)". sinhala.adaderana.lk (in ಇಂಗ್ಲಿಷ್). Retrieved 2024-11-22.
  2. "【Peacock Lament】| 35th Tokyo International Film Festival(2022)". 2022.tiff-jp.net. Retrieved 2024-11-22.
  3. ೩.೦ ೩.೧ "'Peacock Lament' competes in Tokyo". Print Edition - The Sunday Times, Sri Lanka. Retrieved 2024-11-22.
  4. Hallas, Roger (2023-08-16). "PEACOCK LAMENT • Syracuse Univeristy Human Rights Film Festival". Syracuse Univeristy Human Rights Film Festival (in ಅಮೆರಿಕನ್ ಇಂಗ್ಲಿಷ್). Retrieved 2024-11-22.
  5. "Tokyo Film Festival Review: Peacock's Lament". Backseat Mafia (in ಬ್ರಿಟಿಷ್ ಇಂಗ್ಲಿಷ್). 2022-10-31. Retrieved 2024-11-22.
  6. Kotzathanasis, Panos (2023-11-30). "Film Review: Peacock Lament (2022) by Sanjeewa Pushpakumara". Asian Movie Pulse (in ಅಮೆರಿಕನ್ ಇಂಗ್ಲಿಷ್). Retrieved 2024-11-22.
  7. Peacock Lament (2022) | MUBI (in ಇಂಗ್ಲಿಷ್). Retrieved 2024-11-22 – via mubi.com.
  8. "'Peacock Lament' goes to Goa IFF". Print Edition - The Sunday Times, Sri Lanka. Retrieved 2024-11-22.
  9. Noh2022-09-21T14:21:00+01:00, Jean. "Tokyo International Film Festival unveils line-up for first full-scale physical edition in three years". Screen (in ಇಂಗ್ಲಿಷ್). Retrieved 2024-11-22.{{cite web}}: CS1 maint: numeric names: authors list (link)
  10. Ide2022-11-02T15:36:00+00:00, Wendy. "'Peacock Lament': Tokyo Review". Screen (in ಇಂಗ್ಲಿಷ್). Retrieved 2024-11-22.{{cite web}}: CS1 maint: numeric names: authors list (link)


[ಬದಲಾಯಿಸಿ]