ಪಪ್ರಿಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪಪ್ರಿಕಾ ಕೆಂಪು ಮೆಣಸಿನಕಾಯಿಗಳನ್ನು ಒಣಗಿಸಿ ಪುಡಿಮಾಡಿ ತಯಾರಿಸಿದ ಸಂಬಾರ ಪದಾರ್ಥ.[೧] ಪಪ್ರಿಕಾಗೆ ಬಳಸಲಾಗುವ ಮೆಣಸಿನಕಾಯಿಗಳು ಸೌಮ್ಯವಾಗಿರುತ್ತವೆ ಮತ್ತು ತೆಳು ತಿರುಳನ್ನು ಹೊಂದಿರುತ್ತವೆ.[೨][೩]

ಪಪ್ರಿಕಾವನ್ನು ತಯಾರಿಸಲು ಬಳಸಲಾಗುವ ಮೆಣಸಿನಕಾಯಿಗಳನ್ನು ಉತ್ತರ ಅಮೆರಿಕದಿಂದ, ನಿರ್ದಿಷ್ಟವಾಗಿ ಮಧ್ಯ ಮೆಕ್ಸಿಕೊದಲ್ಲಿ ಹುಟ್ಟಿಕೊಂಡಿವೆ, ಅಲ್ಲಿ ಅವುಗಳನ್ನು ಶತಮಾನಗಳಿಂದ ಬೆಳೆಸಲಾಗುತ್ತಿದೆ. ವೈವಿಧ್ಯಮಯ ಪಾಕಪದ್ಧತಿಗಳಲ್ಲಿ ಅನೇಕ ಬಗೆಯ ಭಕ್ಷ್ಯಗಳಿಗೆ ಬಣ್ಣ ಮತ್ತು ಪರಿಮಳವನ್ನು ಬರಿಸಲು ಪಪ್ರಿಕಾವನ್ನು ಬಳಸಲಾಗುತ್ತದೆ.

ಪಪ್ರಿಕಾ ಸೌಮ್ಯದಿಂದ ಹಿಡಿದು ಕಾರವಾಗಿ ಇರಬಹುದು - ಪರಿಮಳವು ದೇಶದಿಂದ ದೇಶಕ್ಕೆ ಬದಲಾಗುತ್ತದೆ - ಆದರೆ ಬೆಳೆಸಲಾದ ಬಹುತೇಕ ಎಲ್ಲ ಸಸ್ಯಗಳು ಸಿಹಿ ವಿಧವನ್ನು ಉತ್ಪಾದಿಸುತ್ತವೆ.[೪]

ಪಪ್ರಿಕಾವನ್ನು ಪ್ರಪಂಚದಾದ್ಯಂತ ಹಲವಾರು ಭಕ್ಷ್ಯಗಳಲ್ಲಿ ಒಂದು ಘಟಕಾಂಶವಾಗಿ ಬಳಸಲಾಗುತ್ತದೆ. ಇದನ್ನು ಮುಖ್ಯವಾಗಿ ಅನ್ನ, ಸ್ಟ್ಯೂಗಳು ಹಾಗೂ ಗೂಲಾಶ್‍ನಂತಹ ಸೂಪ್ಗಳನ್ನು ರುಚಿಗೊಳಿಸಲು ಮತ್ತು ಅವಕ್ಕೆ ಬಣ್ಣ ಬರಿಸಲು ಮತ್ತು ಮಾಂಸ ಹಾಗೂ ಇತರ ಮಸಾಲೆಗಳೊಂದಿಗೆ ಬೆರೆಸಿದ ಸ್ಪ್ಯಾನಿಷ್ ಚೋರಿಜೊದಂತಹ ಸಾಸೇಜ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಅಮೇರಿಕದಲ್ಲಿ, ಪಪ್ರಿಕಾವನ್ನು ಆಗಾಗ್ಗೆ ಆಹಾರಗಳ ಮೇಲೆ ಕಚ್ಚಾ ಆಗಿ ಅಲಂಕರಿಸಲು ಸಿಂಪಡಿಸಲಾಗುತ್ತದೆ. ಆದರೆ ಎಣ್ಣೆಯಲ್ಲಿ ಇದನ್ನು ಬಿಸಿ ಮಾಡುವ ಮೂಲಕ ಪರಿಮಳವನ್ನು ಹೆಚ್ಚು ಪರಿಣಾಮಕಾರಿಯಾಗಿ ತರಲಾಗುತ್ತದೆ. 

ಉಲ್ಲೇಖಗಳು[ಬದಲಾಯಿಸಿ]

  1. "pepper". Retrieved April 7, 2017.
  2. Derera, Nicholas F.; Nagy, Natalia; Hoxha, Adriana (January 2005). "Condiment paprika research in Australia". Journal of Business Chemistry. 2 (1): 4–18.[ಶಾಶ್ವತವಾಗಿ ಮಡಿದ ಕೊಂಡಿ]
  3. Vaughan, John; Geissler, Catherine (2009). The New Oxford Book of Food Plants (2 ed.). Oxford: Oxford University Press. pp. 146–147. ISBN 9780191609497.
  4. Sasvari, Joanne (2005). Paprika: A Spicy Memoir from Hungary. Toronto, ON: CanWest Books. p. 202. ISBN 9781897229057. Retrieved 20 October 2016.
"https://kn.wikipedia.org/w/index.php?title=ಪಪ್ರಿಕಾ&oldid=1056307" ಇಂದ ಪಡೆಯಲ್ಪಟ್ಟಿದೆ