ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ | |
---|---|
ಹಾಲಿ | |
ಅಧಿಕಾರ ಸ್ವೀಕಾರ 4 September 2017 | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಅರುಣ್ ಜೇಟ್ಲಿ |
ಅಧಿಕಾರ ಅವಧಿ 26 May 2014 – 3 September 2017 | |
ಪ್ರಧಾನ ಮಂತ್ರಿ | ನರೇಂದ್ರ ಮೋದಿ |
ಪೂರ್ವಾಧಿಕಾರಿ | ಆನಂದ್ ಶರ್ಮಾ |
ಉತ್ತರಾಧಿಕಾರಿ | ಸುರೇಶ್ ಪ್ರಭು |
ಅಧಿಕಾರ ಅವಧಿ 2010 – 2014 | |
ಉತ್ತರಾಧಿಕಾರಿ | ಶೈನಾ ಎನ್ಸಿ |
ಹಾಲಿ | |
ಅಧಿಕಾರ ಸ್ವೀಕಾರ 1 July 2016 | |
ಪೂರ್ವಾಧಿಕಾರಿ | ಎಂ ವೆಂಕಯ್ಯ ನಾಯ್ಡು, ಬಿಜೆಪಿ |
ಅಧಿಕಾರ ಅವಧಿ 26 June 2014 – 21 June 2016 | |
ವೈಯಕ್ತಿಕ ಮಾಹಿತಿ | |
ಜನನ | ಮದುರೈ | ೧೮ ಆಗಸ್ಟ್ ೧೯೫೯
ರಾಜಕೀಯ ಪಕ್ಷ | ಭಾರತೀಯ ಜನತಾ ಪಾರ್ಟಿ |
ಸಂಗಾತಿ(ಗಳು) | ಪರಕಾಲಾ ಪ್ರಭಾಕರ್ |
ಮಕ್ಕಳು | 1 |
ವಾಸಸ್ಥಾನ | ಹೈದರಾಬಾದ್, ತೆಲಂಗಾಣ |
ಅಭ್ಯಸಿಸಿದ ವಿದ್ಯಾಪೀಠ | Seethalakshmi Ramaswamy College, Tiruchirapalli Jawaharlal Nehru University |
ನಿರ್ಮಲಾ ಸೀತಾರಾಮನ್ ಭಾರತೀಯ ರಾಜಕಾರಣಿ, ಅವರು ಪ್ರಸ್ತುತ ಭಾರತದ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸುತಿದ್ದಾರೆ. ಸೀತಾರಾಮನ್ ಅವರು ಹಣಕಾಸು ಮತ್ತು ಮಿನಿಸ್ಟ್ರಿ ಆಫ್ ಫೈನಾನ್ಸ್ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಿಯ ಅಡಿಯಲ್ಲಿ ಸ್ವತಂತ್ರ ಹೊಂದಿರುವ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅದಕ್ಕೆ ಮೊದಲು ಅವರು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರರಾಗಿದ್ದರು. 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಆಂಧ್ರಪ್ರದೇಶದಿಂದ ರಾಜ್ಯಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು . ಪ್ರಸ್ತುತ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಚುನಾಯಿತರಾಗಿದ್ದಾರೆ.
ಓದು
[ಬದಲಾಯಿಸಿ]ನಿರ್ಮಲಾ ಸೀತಾರಾಮನ್ ಮದುರೈನಲ್ಲಿ ತಮಿಳು ಐಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು. ನಿರ್ಮಲಾ ಅವರು ತಿರುಚ್ಚಿರಾಪಳ್ಳಿಯಲ್ಲಿ ಬಿ.ಎ. ಪದವಿ ಪಡೆದು, ನಂತರ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ದಿಲ್ಲಿಯ ಜವಾಹರ್‍ಲಾಲ್ ನೆಹರು ವಿಶ್ವವಿದ್ಯಾಲಯದಿಂದ ಪಡೆದರು.
ವೃತ್ತಿ
[ಬದಲಾಯಿಸಿ]ನಿರ್ಮಲಾ ಸೀತಾರಾಮನ್ ಅವರು ಲಂಡನ್‌ನ ರೀಜೆಂಟ್ ಸ್ಟ್ರೀಟ್‌ನಲ್ಲಿರುವ ಗೃಹಲಂಕಾರ ಅಂಗಡಿಯಾದ ಹ್ಯಾಬಿಟಾಟ್‌ನಲ್ಲಿ ಮಾರಾಟಗಾರರಾಗಿ ಕೆಲಸ ಮಾಡಿದರು. ಅವರು ಬ್ರಿಟನ್ನಿನ ಅಗ್ರಿಕಲ್ಚರಲ್ ಇಂಜಿನಿಯರ್ಸ್ ಅಸೋಸಿಯೇಷನ್‌ನಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ . ಅಲ್ಲಿನ ವಾಸ್ತವ್ಯದ ಸಮಯದಲ್ಲಿ, PWC ಗಾಗಿ ಹಿರಿಯ ವ್ಯವಸ್ಥಾಪಕರಾಗಿ (R&D) ಮತ್ತು ಸಂಕ್ಷಿಪ್ತವಾಗಿ BBC ವರ್ಲ್ಡ್ ಸರ್ವೀಸ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ.
ಅವರು ರಾಷ್ಟ್ರೀಯ ಮಹಿಳಾ ಆಯೋಗದಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 2017 ರಲ್ಲಿ, ಅವರು ಹೈದರಾಬಾದ್‌ನಲ್ಲಿ ಪ್ರಣವ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ . ಲಂಡನ್ ನಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ ಸಂಸ್ಥೆಯಲ್ಲಿ ಆರ್ಥಿಕ ವ್ಯವಹಾರಗಳ ಅಧಿಕಾರಿಯಾಗಿ ಬಹುಕಾಲ ಕಾರ್ಯಗೈಯ್ದರು.[೩]
೨೦೦೩-೨೦೦೫ರ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು.
ಪರಿವಾರ
[ಬದಲಾಯಿಸಿ]ಸ್ನಾತಕೋತ್ತರ ಪದವಿ ಸಮಯದಲ್ಲಿ ತಮ್ಮ ಸಹಪಾಠಿ ಪರಕಾಲ ಪ್ರಭಾಕರರನ್ನು ಸಂಧಿಸಿದ ನಿರ್ಮಲಾ, ಪ್ರಭಾಕರರನ್ನು ೧೯೮೬ರಲ್ಲಿ ವರಿಸಿದರು. ಮಗಳು ವಾಗ್ಮಯೀ ಪತ್ರಕರ್ತೆ. [೪]
ರಾಜಕೀಯ ಜೀವನ
[ಬದಲಾಯಿಸಿ]೨೦೦೮ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದರು. ತಮ್ಮ ವಾಕ್ಚಾತುರ್ಯದಿಂದ ಅಲ್ಪಕಾಲದಲ್ಲಿಯೇ ಪಕ್ಷದ ವಕ್ತಾರೆಯಾದಗಿ ನೇಮಕಗೊಂಡರು. ಸುಷ್ಮಾ ಸ್ವರಾಜ್ ರ ನಂತರ ಈ ಉನ್ನತ ಹುದ್ದೆ ಪಡೆದ ಮಹಿಳೆ ಎಂಬುದು ನಿರ್ಮಲಾರ ಹೆಗ್ಗಳಿಕೆ. ವಕ್ತಾರೆಯಾಗಿದ್ದಾಗ ಅವರು ಸುದ್ದಿ ವಾಹಿನಿಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರು. ನಿರ್ಮಲಾ ಸೀತಾರಾಮನ್ ನರೇಂದ್ರ ಮೋದಿಯವರ ಮಂತ್ರಿಮಂಡಲವನ್ನು ಮೇ ೨೦೧೪ರಲ್ಲಿ ಸೇರಿದರು.[೫] ಸೆಪ್ಟೆಂಬರ್ ೩ರ ಸಂಪುಟ ಪುನರ್ರಚನೆಯಲ್ಲಿ ರಕ್ಷಣಾ ಖಾತೆಯನ್ನು ಪಡೆದರು.
ಸರ್ಕಾರೀ ಸೇವೆ
[ಬದಲಾಯಿಸಿ]- 26 ಮೇ 2014 – 3 ಸೆಪ್ಟೆಂಬರ್ 2017 : ವಾಣಿಜ್ಯ ಖಾತೆಯ ರಾಜ್ಯ ಸಚಿವೆ (ಸ್ವತಂತ್ರ ನಿರ್ವಹಣೆ)
- 3 ಸೆಪ್ಟೆಂಬರ್ 2017 – 30 ಮೇ 2019 :ರಕ್ಷಣಾ ಖಾತೆಯ ಸಂಪುಟ ಸಚಿವೆ
- 30 ಮೇ 2019 - ಹಾಲಿ ಕೇಂದ್ರ ಸರ್ಕಾರದ ಹಣಕಾಸು ಸಚಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ http://commerce.nic.in/bio/CIMBiodata.pdf
- ↑ "Nirmala Sitharaman Wins Rajya Sabha Seat From Karnataka, Congress Gets 3".
- ↑ https://yourstory.com/2017/09/nirmala-sitharaman-defense-minister/
- ↑ https://web.archive.org/web/20220418024138/https://www.vangmayi.in/
- ↑ http://timesofindia.indiatimes.com/india/modi-cabinet-reshuffle-full-list-of-pm-modis-council-of-ministers/articleshow/60348346.cms