ವಿಷಯಕ್ಕೆ ಹೋಗು

ನಮೋ ಕಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮೋ ಕಥೆಯು ಕಿಂಗ್ಶುಕ್ ನಾಗ್ ಅವರು ಬರೆದಿರುವ ರಾಜಕೀಯ ಸಂಬಂಧಿತ ಪುಸ್ತಕ. ಈ ಪುಸ್ತಕದಲ್ಲಿ ನಾವು ನರೇಂದ್ರ ಮೋದಿಯವರ ರಾಜಕೀಯ ಜೀವನದ ಬಗ್ಗೆ ಓದಬಹುದು. ನರೇಂದ್ರ ಮೋದಿಯವರ ಜೀವನದ ಹಲವಾರು ಘಟನೆಗಳ ಬಗ್ಗೆ ನಾವು ಈ ಪುಸ್ತಕದಲ್ಲಿ ಓದಬಹುದು. ಈ ಪುಸ್ತಕವನ್ನು ೨೦೧೩ರಲ್ಲಿ ಬಿಡುಗಡೆ ಮಾಡಲಾಯಿತು. ಪುಸ್ತಕದ ಮೊದಲನೆ ಭಾಗದಲ್ಲಿ ನಾಗ್ ಅವರು ಮೋದಿಯವರು ಭಾರತಕ್ಕೆ ತಂದ ಭರವಸೆಯ ಬಗ್ಗೆ ಮಾತಾಡಿದ್ದಾರೆ. ನರೇಂದ್ರ ಮೋದಿಯವರ ಆಡಳಿತದಿಂದಾಗಿ ದೇಶದ ರಾಜಕೀಯ ಬದಲಾಗಿದೆ ಎನ್ನುವುದು ನಾಗ್ ಅವರ ಅಭಿಪ್ರಾಯ.

ಪ್ರಧಾನಿಯಾಗುವ ಸಾಧ್ಯತೆ

[ಬದಲಾಯಿಸಿ]

ನಾಗ್ ಅವರು ಮೋದಿಯವರು ದೇಶದ ಪ್ರಧಾನಿಯಾಗುವ ಸಾಧ್ಯತೆಯ ಬಗ್ಗೆ ಪುಸ್ತಕದ ಮೊದಲನೆ ವಿಭಾಗದಲ್ಲಿ ಬರೆದಿದ್ದಾರೆ. ಈ ವಿಭಾಗದಲ್ಲಿ ನಾಗ್ ಅವರು ಮೋದಿಯವರ ಸಾಮರ್ಥ್ಯದ ಬಗ್ಗೆ ಬರೆದಿದ್ದಾರೆ. ಮೋದಿಯವರು ಸತತ ಮೂರನೆ ಬಾರಿಗೆ ಗುಜರಾತಿನ ವಿಧಾನಸಭೆಯ ಚುನಾವಣೆಯನ್ನು ಗೆದ್ದರು. ಇದರಿಂದಾಗಿ ಮೋದಿಯವರ ಬಗ್ಗೆ ಜನರಿಗಿರುವ ನಂಬಿಕೆ ಹೆಚ್ಚಾಗಿದೆ. ಮೋದಿಯವರ ಈ ಸಾಧನೆಯಿಂದಾಗಿ ಮೋದಿಯವರು ಪ್ರಧಾನಿಯಾಗುವುದು ಬಹುತೇಕ ಖಚಿತ ಎಂದು ಅವರ ಅಭಿಮಾನಿಗಳು ಭಾವಿಸಿದ್ದಾರೆ. ಗುಜರಾತಿನ ಮುಸ್ಲಿಂ ಸಮುದಾಯವು ಕೂಡ ಮೋದಿಯವರನ್ನು ಇತ್ತೀಚಿನ ದಿನಗಳಲ್ಲಿ ಒಪ್ಪಿಕೊಳ್ಳುತ್ತಿದೆ. ಮೋದಿಯವರು ಗುಜರಾತಿನ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರೆಲ್ಲ ಮೋದಿಯವರನ್ನು ಪ್ರಧಾನಿಯಾಗಿಸುವ ಆಸೆಯನ್ನಿಟ್ಟುಕೊಂಡಿದ್ದಾರೆ. ನಾಗ್ ಅವರು ಪುಸ್ತಕದ ಈ ಭಾಗದಲ್ಲಿ ಮೋದಿಯವರಿಗುಂಟಾಗಬಹುದಾದ ಕೆಲವು ತೊಂದರೆಗಳ ಬಗ್ಗೆಯೂ ಬರೆದಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಸದಸ್ಯರೆಲ್ಲ ಮೋದಿಯವರನ್ನು ಒಪ್ಪಿಕೊಂಡರೂ, NDA ಗುಂಪಿನಲ್ಲಿರುವ ಇತರ ಪಕ್ಷಗಳು ಮೋದಿಯವರನ್ನು ಒಪ್ಪಿಕೊಳ್ಳದೆ ಇರುವಂತಹ ಸಾಧ್ಯತೆಯೂ ಇದೆ ಎಂದು ಲೇಖಕರ ಭಾವನೆ. ಹೀಗೆ ಹಲವಾರು ಸಮಸ್ಯೆಗಳು ಕೂಡ ಮೋದಿಯವರನ್ನು ಎದುರಿಸಬಹುದೆಂದು ನಾಗ್ ಅವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಚುನಾವಣೆಯ ಮೊದಲು ಏನನ್ನಾದರೂ ಹೇಳುವುದು ಅಸಾಧ್ಯ ಎಂದು ನಾಗ್ ಅವರ ಅಭಿಪ್ರಾಯ.

ಸಂಘ ಪರಿವಾರದ ಸದಸ್ಯನಾಗಿ

[ಬದಲಾಯಿಸಿ]

ಮೋದಿಯವರು ರಾಷ್ತ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದ ದಿನಗಳ ಬಗ್ಗೆಯೂ ನಾಗ್ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ. ಮೋದಿಯವರು ಚಿಕ್ಕಂದಿನಿಂದಲೆ ಸಂಘದ ಪುತ್ರನಂತೆ ಬೆಳೆದವರು. ಮೋದಿಯವರು ಗುಜರಾತಿನ ವಾದ್ನಗರದಿಂದ ಹದಿನೇಳನೇ ವಯಸ್ಸಿನಲ್ಲಿ ತಮ್ಮ ಮನೆ ಬಿಟ್ಟು ಹೋಗಿದ್ದರು. ಬಾಲ್ಯ ವಿವಾಹಕ್ಕೊಳಗಾಗಿದ್ದ ಮೋದಿಯವರು ತಮ್ಮ ವಿವಾಹವನ್ನೊಪ್ಪಿಕೊಳ್ಳದೆ ಮನೆ ಬಿಟ್ಟ ವಿಷಯವನ್ನು ನಾವು ಇಲ್ಲಿ ಕಾಣಬಹುದು. ಮೋದಿಯವರು ತಮ್ಮ ತಂದೆಯೊಂದಿಗೆ ಬಸ್ ನಿಲ್ದಾಣವೊಂದರಲ್ಲಿ ಚಹಾ ಮಾರುತ್ತಿದ್ದರು. ನಾಗ್ ಅವರು ಮೋದಿಯವರ ಈ ದಿನಗಳ ಬಗ್ಗೆ ಬಹಳ ವಿಶೇಷವಾದ ರೀತಿಯಲ್ಲಿ ಬರೆದಿದ್ದಾರೆ. ಎಂಟನೆ ವಯಸ್ಸಿನಲ್ಲಿ ಮೋದಿಯವರು ಸಂಘವನ್ನು ಸೇರಿದರು. ಬಾಲ ಸದಸ್ಯನಾಗಿದ್ದ ಮೋದಿಯವರ ಕಾರ್ಯನಿರ್ವಹಣೆಯ ಶೈಲಿ ಸಂಘದ ಉಳಿದ ಸದಸ್ಯರಿಗೆ ಬಹಳ ಹಿಡಿಸಿತು. ರಾಷ್ತ್ರೀಯ ಸ್ವಯಂಸೇವಕ ಸಂಘವನ್ನು ಸೇರಿದ ಮೇಲೆ ನರೇಂದ್ರ ಮೋದಿಯವರಿಗೆ ಜೀವನದಲ್ಲಿ ಒಂದು ಉದ್ದೇಶ ಸಿಕ್ಕಿದಂತಾಯಿತು ಎಂದು ನಾಗ್ ಅವರು ಭಾವಿಸಿದ್ದಾರೆ. ೧೯೭೫ರ ತುರ್ತುಪರಿಸ್ಥಿತಿಯ ಸಮಯದಲ್ಲಿ ಸಂಘವು ಶ್ರೀಮತಿ ಇಂದಿರಾ ಗಾಂಧಿಯವರನ್ನು ಸಂಪೂರ್ಣವಾಗಿ ವಿರೋಧಿಸಿತ್ತು. ದೇಶದೆಲ್ಲೆಡೆ ಭಯದ ವಾತಾವರಣವುಂಟಾಗಿತ್ತು. ಗುಜರಾತಿನಲ್ಲಿ ತುರ್ತುಪರಿಸ್ಥಿಯ ವಿರುದ್ಧ ಸಂಘವು ವಿಶೇಷವಾದ ರೀತಿಯಲ್ಲಿ ಹೋರಾಡಿತ್ತು. ಈ ಹೋರಾಟದಲ್ಲಿ ಮೋದಿಯವರು ದೊಡ್ದ ಪಾತ್ರವನ್ನು ವಹಿಸಿದ್ದರು. ಹೀಗೆ ಸಂಘದಲ್ಲಿ ಚಿಕ್ಕ ಕಾರ್ಯಕರ್ತನಿಂದ ದೊಡ್ದ ಮಟ್ಟಕ್ಕೆ ಮೋದಿಯವರು ತಲುಪಿದರು. ೧೯೮೭ರಲ್ಲಿ ಮೋದಿಯವರು ಭಾರತೀಯ ಜನತಾ ಪಾರ್ಟಿಯನ್ನು ಸಂಘದ ಮೂಲಕ ಸೇರಿದರು. ಭಾರತೀಯ ಜನತಾ ಪಾರ್ಟಿಯನ್ನು ಸೇರಿದ ಮೇಲೆ ಮೋದಿಯವರ ಜೀವನ ಹೊಸ ತಿರುವನ್ನು ತೆಗೆದುಕೊಂಡಿತು.

ಭಾರತೀಯ ಜನತಾ ಪಾರ್ಟಿಯ ಸದಸ್ಯರಾಗಿ

[ಬದಲಾಯಿಸಿ]

೧೯೮೭ರಲ್ಲಿ ಪಕ್ಷವನ್ನು ಸೇರಿದ ಮೋದಿಯವರು ಕೇವಲ ಒಂದು ವರ್ಷದ ಒಳಗೆ ಪಕ್ಷದಲ್ಲಿ ಗೌರವಾನ್ವಿತ ಸ್ಥಾನಕ್ಕೆ ಮೋದಿಯವರು ಏರಿದರು. ಮೋದಿಯವರು ಗುಜರಾತ್ ಬಿಜೆಪಿಯ ಮುಖ್ಯ ಕಾರ್ಯದರ್ಶಿಗಳಾದರು. ತದನಂತರ ಮೋದಿಯವರು ಗುಜರಾತಿನಲ್ಲಿ ಒಂದು ನ್ಯಾಯ ಯಾತ್ರೆಯನ್ನು ಆಯೋಜಿಸಿದ್ದರು. ಎರಡು ವರ್ಷಗಳ ನಂತರ ಸನ್ಮಾನ್ಯರು ಲೋಕಶಕ್ತಿ ಯಾತ್ರೆಯನ್ನು ಆಯೋಜಿಸಿದರು. ಕಳ್ಳ ಸಾರಾಯಿಯ ವಿರುದ್ಧ ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಸೋಮನಾಥದಿಂದ ಅಯ್ಯೋಧ್ಯೆಯ ವರೆಗೆ ಶ್ರೀ ಅಡ್ವಾಣಿಯವರು ಆಯೋಜಿಸಿದ್ದ ರಥ ಯಾತ್ರೆಯ ಮುಖ್ಯ ಕಾರ್ಯ ನಿರ್ವಹಣೆಯನ್ನು ಮೋದಿಯವರು ಮಾಡಿದ್ದರು.ಈ ಯಾತ್ರೆಯ ಬಳಿಕ ಗುಜರಾತಿನಲ್ಲಿ ಮೋದಿಯವರು ಪಕ್ಷದ ಸರ್ವಾಧಿಕಾರಿಯಾದರು.೧೯೯೫ರ ಗುಜರಾತಿನ ಚುನಾವಣೆಯ ಬಳಿಕ ಕೇಶುಭಾಯ್ ಪಟೇಲ್ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮಾಡಲಾಯಿತು.೨೦೦೧ರಲ್ಲಿ ಕೇಶುಭಾಯ್ ಪಟೇಲ್ ಅವರ ರಾಜೀನಾಮೆಯ ಬಳಿಕ ಮೋದಿಯವರು ಮೊದಲನೆ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾದರು. ನಾಗ್ ಅವರು ನಂತರ ೨೦೦೨ರ ಗೋಧ್ರಾ ಕೋಮು ಗಲಭೆಯ ಬಗ್ಗೆ ಬರೆದಿದ್ದಾರೆ. ಈ ಭಾಗದಲ್ಲಿ ನಾವು ಗೋಧ್ರಾದಲ್ಲಿ ನಡೆದ ನರಮೇಧದ ಬಗ್ಗೆ ಒಂದು ಸಂಪೂರ್ಣ ಚಿತ್ರವನ್ನು ಕಾಣಬಹುದು. ಕೋಮು ಗಲಭೆಯ ಕೆಲವು ಕ್ರೂರ ವಿಷಯವನ್ನು ಬಗ್ಗೆ ಕೂಡ ನಾಗ್ ಅವರು ಬರೆದಿದ್ದಾರೆ. ಗಲಭೆಯ ಹಿಂದೆ ಮೋದಿಯವರ ಯಾವುದೆ ಕೈವಾಡವಿರಲಿಲ್ಲವೆಂದು ನ್ಯಾಯಾಲಯವು ಘೋಷಿಸಿದೆ. ಮುಖ್ಯಮಂತ್ರಿಯಾಗಿ ಮೋದಿಯವರು ರಾಜ್ಯಕ್ಕೆ ಹೊಸದಾದ ಯೋಜನೆಗಳನ್ನು ಘೋಷಿಸಿದರು. ಮೋದಿಯವರ ವೈಬ್ರೆಂಟ್ ಗುಜರಾತ್ ಕಾರ್ಯಕ್ರಮಗಳ ಬಗ್ಗೆ ನಾವು ತಿಳಿದುಕೊಳ್ಳಬಹುದು. ರಾಜ್ಯಕ್ಕೆ ವಿದೇಶಿ ಬಂಡವಾಳವನ್ನು ತಂದ ಮೋದಿಯವರು ರಾಜ್ಯವನ್ನು ಬೆಳೆಸಿದರು. ಗುಜರಾತ್ ರಾಜ್ಯವು ಮೋದಿಯವರ ಸಾರಥ್ಯದಲ್ಲಿ ಒಂದು ಮಾದರಿ ರಾಜ್ಯವಾಯಿತು ಎಂದು ನಾಗ್ ಅವರ ಅಭಿಪ್ರಾಯ.

ಕಿಂಗ್ಶುಕ್ ನಾಗ್ ಅವರ ಮುಖ್ಯ ಅಭಿಪ್ರಾಯ

[ಬದಲಾಯಿಸಿ]

ಜನರು ಮೋದಿಯವರನ್ನು ಪ್ರೀತಿಸಿದರೂ, ದ್ವೇಶಿಸಿದರೂ ತಿರಸ್ಕರಿಸುವಂತಿಲ್ಲ ಎಂದು ನಾಗ್ ಅವರು ಹೇಳಿದ್ದಾರೆ. ಮೋದಿಯವರಿಂದಾಗಿ ಭಾರತೀಯರು ಬದಲಾವಣೆಯನ್ನು ಬಯಸುವಂತಾಗಿದೆಯೆಂದು ನಾಗ್ ಅವರ ಅಭಿಪ್ರಾಯ. ದೆಹೆಲಿಯ ಕಡೆಗೆ ಬಹಳ ವೇಗವಾಗಿ ಮೋದಿಯವರು ಸಾಗುತ್ತಾರೆಂದು ಲೇಖಕರು ಪುಸ್ತಕದಲ್ಲಿ ಹೇಳಿದ್ದಾರೆ. ಭಾರತದ ಯುವ ಜನತೆಯು ಮೋದಿಯವರನ್ನು ಬೆಂಬಲಿಸುತ್ತಿರುವುದು ಮೋದಿಯವರ ಸಾಮರ್ಥ್ಯದ ಪ್ರತೀಕ. ಲೆಖಕರು ಪಕ್ಷಪಾತವಿಲ್ಲದೆ ಈ ಪುಸ್ತಕವನ್ನು ಬರೆದಿದ್ದಾರೆ, ಆದರೆ ಮೋದಿಯವರ ಸಾಧನೆಗಳು ಮತ್ತು ಪ್ರಗತಿಯ ರಾಜಕಾರಣದ ಬಗ್ಗೆ ನಾಗ್ ಅವರು ಪ್ರಶಂಸೆ ತೋರಿದ್ದಾರೆ. ಈಗಿನ ರಾಜಕಾರಣದ ಅತಿ ಮುಖ್ಯ ವ್ಯಕ್ತಿತ್ವ ಮೋದಿಯವರದ್ದು ಎಂದು ನಾಗ್ ಅವರ ಅಭಿಪ್ರಾಯ.

ಸದ್ಭಾವನೆಯ ಮಂತ್ರ

[ಬದಲಾಯಿಸಿ]

೨೦೦೯ರ ಒಳಗಾಗಿ ಹಲವು ಜನರು ಮೋದಿಯವರನ್ನು ಭಾವಿ ಪ್ರಧಾನಿ ಎಂದು ಭಾವಿಸಿದ್ದರು. ಮೋದಿಯವರು ಮುಸ್ಲಿಮ್ ಸಮುದಾಯಕ್ಕೂ ಹತ್ತಿರವಾಗುತ್ತಾ ಹೋದರು. ಮುಸ್ಲಿಂ ಸಮುದಾಯದ ಓರ್ವ ವ್ಯಕ್ತಿಯನ್ನು ಮೋದಿಯವರು ಗುಜರಾತಿನ DGPಯಾಗಿ ನೇಮಿಸಿದರು. ಮೋದಿಯವರು ಮುಸ್ಲಿಂ ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಯೋಜಿಸಿದ್ದಾರೆ. ದೇಶದ ಹಲವಾರು ರಾಜ್ಯಗಳಿಂದ ಮುಸ್ಲಿಮರು ತಮ್ಮ ದುಡಿಮೆಗಾಗಿ ಗುಜರಾತಿಗೆ ಬರುತ್ತಿದ್ದಾರೆ. ಗುಜರಾತಿನ ಮೌಲಾನಾ ಘುಲಾಮ್ ಮೊಹಮ್ಮದ್ ವಸ್ತಾನ್ವಿ ಎನ್ನುವವರು ಮುಸಲ್ಮಾನರಿಗೆ ಮೋದಿಯವರ ಸರ್ಕಾರದ ಕೆಳಗೆ ಉದ್ಯೋಗಾವಕಾಶಗಳು ದೊರಕಿವೆ ಎಂದು ಅಭಿಪ್ರಾಯ ಪಟ್ಟರು. ಸೆಪ್ಟೆಂಬರ್ ೧೭ ೨೦೧೧ರಂದು ಮೋದಿಯವರು ತಮ್ಮ ಸದ್ಭಾವನ ಮಿಶನ್ ಪ್ರಾರಂಭಿಸಿದರು.ಈ ಯೋಜನೆಯನ್ನು ಮೋದಿಯವರು ಗುಜರಾತಿನ ಎಲ್ಲ ಜನರಲ್ಲಿ ಭ್ರಾತೃತ್ವ ಬರಲಿ ಎಂದು ಆಯೋಜಿಸಿದರು. ಇದೇ ಸಮಯದಲ್ಲಿ ಉಛ್ಛ ನ್ಯಾಯಾಲಯವು ಗೋಧ್ರಾ ಹತ್ಯೆಯಲ್ಲಿ ಮೋದಿಯವರ ಕೈವಾಡವಿಲ್ಲವೆಂದು ಹೇಳಿಕೆ ನೀಡಿತು. ಮೋದಿಯವರು ಸದ್ಭಾವನಾ ಯೋಜನೆಗೆ ಹಲವಾರು ಗಣ್ಯರನ್ನು ಕರೆದರು. ಈ ಯೋನೆಯನ್ನು ಮಹಾನ್ ಯೋಜನೆಯಾಗಿ ಪರಿವರ್ತಿಸಿದರು. ಈ ಯೋಜನೆಯ ವೇಳೆ ಮೋದಿಯವರು ಮೂರು ದಿನಗಳ ಕಾಲ ಉಪವಾಸ ಮಾಡಿದರು. ತಮ್ಮ ಪಕ್ಷವು ಕೇವಲ ಒಂದು ಸಮುದಾಯಕ್ಕೆ ಕೆಲಸ ಮಾಡದೆ ಆರು ಕೋಟಿ ಗುಜರಾತಿಗಳಿಗಾಗಿ ಕೆಲಸ ಮಾಡುವುದಾಗಿ ಹೇಳಿದರು. ಈ ಯೋಜನೆಯ ವೇಳೆ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿಯಾದ ಸುಶ್ಮಾ ಸ್ವರಾಜ್ ಅವರು ಮೋದಿಯವರ ಕಾರ್ಯಶೈಲಿಯನ್ನು ಹೊಗಳಿದರು. ಈ ಯೋಜನೆಯು ಬಹಳ ಸಫಲವಾಗದಿದ್ದರೂ ಸಣ್ಣ ಮಟ್ಟಿನ ಸಫಲತೆಯನ್ನು ಕಂಡಿತು.

ಮೋದಿಯವರ ವ್ಯಕ್ತಿತ್ವ

[ಬದಲಾಯಿಸಿ]

ಗುಜರಾತ್ ಆಧುನಿಕ ರಾಜ್ಯವಾಗಿದೆ. ಆದರೆ ಈ ರಾಜ್ಯದಲ್ಲಿ ಸಾರಾಯಿ ಮಾರುವಂತಿಲ್ಲ. ಸಾರಾಯಿ ಇಲ್ಲದ ಕಾರಣ ಗುಜರಾತಿನ ಮಹಿಳೆಯರು ಸುರಕ್ಶಿತವಾಗಿದ್ದಾರೆಂದು ಹಲವರು ಭಾವಿಸಿದ್ದಾರೆ. ಗುಜರಾತಿನಲ್ಲಿ ಸಾರಾಯಿ ಸಿಗದೆ ಇರುವುದು ಇದು ಮಹಾತ್ಮಾ ಗಾಂಧಿಯವರ ಹುಟ್ಟು ಸ್ಥಳವೆಂದು. ಮೋದಿಯವರು ಇಂದಿಗೂ ಸಹ ಸಾರಾಯಿಯನ್ನು ಗುಜರಾತಿನಲ್ಲಿ ನಿಶೇದಿಸಿದ್ದಾರೆ. ಕೆಲವರು ಮೋದಿಯವರಿಗೆ ಗುಜರಾತ್ ಹೃದಯ ಸಾಮ್ರಾಟ್ ಎಂದು ನಾಮಕರಣ ಮಾಡಿದ್ದಾರೆ. ಇದು ಮೋದಿಯವರ ವ್ಯಕ್ತಿತ್ವದಿಂದಾಗಿ. ಜನರ ಭಾವನೆಯನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಮೋದಿಯವರಿಗಿದೆಯೆಂದು ರಾಜ್ಯಶಾಸ್ತ್ರ ಪರಿಣಿತರು ಭಾವಿಸಿದ್ದಾರೆ. ನಿರ್ಧಾರಗಳನ್ನು ವೇಗವಾಗಿ ತೆಗೆದುಕೊಳ್ಳುವ ಸಾಮರ್ಥ್ಯ ಇವರಿಗಿದೆಯೆಂದು ಜನರು ಭಾವಿಸಿದ್ದಾರೆ. ಕಾನೂನಿನ ಸ್ಥಿಥಿಯನ್ನು ಕಾಪಾಡುವ ಶಕ್ತಿ ಮೋದಿಯವರಿಗಿದೆಯೆಂದು ಜನ ಭಾವಿಸಿದ್ದಾರೆ. ಯೋಜನೆಗಳನ್ನು ಆಯೋಜಿಸುವುದರಲ್ಲಿ ಮೋದಿಯವರು ಎತ್ತಿದ ಕೈ. ಮೋದಿಯವರಂತಹ ನಾಯಕನಿಗಾಗಿ ಗುಜರಾತಿಗಳೆಲ್ಲ ಕಾಯುತ್ತಿದ್ದರು. ನಾಗ್ ಅವರು ಹಲವಾರು ಜನರ ಅಭಿಪ್ರಾಯಗಳ ಬಗ್ಗೆ ಕೂಡ ಈ ಪುಸ್ತಕದಲ್ಲಿ ಬರೆದಿದ್ದಾರೆ. ಮೋದಿಯರು ಸಭೆಗೆ ಬಂದ ಕೂಡಲೆ ಜನರೆಲ್ಲ ಗುಜರಾತಿನ ಹುಲಿಯು ಬಂತು ಎಂದು ಭಾವಿಸುತ್ತಾರೆ. ರಾಷ್ತ್ರೀಯ ಸ್ವಯಂ ಸೇವಕ ಸಂಘದ ಸದಸ್ಯರಾಗಿದ್ದಾಗ ಇವರಿಗೆ ಜನರ ಮುಂದೆ ಮಾತಾಡುವ ಹುಮ್ಮಸ್ಸು ಬಂತು. ಗುಜರಾತಿನ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಲು ಇದೂ ಒಂದು ಕಾರಣವೆ. ಮೋದಿಯವರು ಸಣ್ಣ ಸಹಾಯವನ್ನು ಮಾಡಿದರೂ ಒಂದು ದೊಡ್ಡ ಸಹಾಯ ಮಾಡಿದಂತೆ ಕಾಣುತ್ತದೆಯೆಂದು ನಾಗ್ ಅವರು ಭಾವಿಸಿದ್ದಾರೆ. ಮೋದಿಯವರು ತಮಗೆ ಹಿಡಿಸಿದ ವಿಶಯವನ್ನು ಯಾವುದೇ ರೀತಿಯಲ್ಲೂ ಬಿಟ್ಟು ಕೊಡುವುದಿಲ್ಲವೆಂದು ನಾಗ್ ಅವರು ಬರೆದಿದ್ದಾರೆ. ಮೋದಿಯವರು ದೇವರನ್ನು ಬಹಳ ನಂಬುತ್ತಾರೆ. ಇವರು ಹಿಂದೂ ಧರ್ಮದ ಬಗ್ಗೆ ಬಹಳ ವಿಶಯಗಳನ್ನು ತಿಳಿದುಕೊಂಡಿದ್ದಾರೆ. ದುರ್ಗಾ ದೇವಿಯ ದೊಡ್ಡ ಭಕ್ತ ಮೋದಿಯವರು. ನವರಾತ್ರಿಯ ಸಮಯದಲ್ಲಿ ಮೋದಿಯವರು ಒಂಭತ್ತು ದಿನಗಳ ಕಾಲ ಉಪವಾಸ ಮಾಡುತ್ತಾರೆ. ದೇಶದ ಹಲವಾರು ದೇವಾಲಯಗಳಿಗೆ ಇವರು ಭೇಟಿ ನೀಡಿದ್ದಾರೆ. ಭಾರತದ ಸಂಸ್ಕೃತಿಯ ಬಗ್ಗೆಯೂ ಇವರಿಗೆ ಅಪಾರವಾದ ಗೌರವ. ಮೋದಿಯವರು ಜೀವನದ ಹಲವಾರು ಮೌಲ್ಯಗಳನ್ನು ಸ್ವಾಮಿ ವಿವೇಕಾನಂದರ ಸಂದೇಶಗಳಿಂದ ಪಡೆದುಕೊಂಡರು. ವಿವೇಕಾನಂದ ಯುವ ಯಾತ್ರೆಯನ್ನೂ ಸಹ ಗುಜರಾತಿನಲ್ಲಿ ಮಾಡಿದ್ದಾರೆ. ಮೋದಿಯವರು ಸಾಮೂಹಿಕ ತಾಣಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಯುವ ಜನಾಂಗದ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಇವರು ಫೇಸ್ಬುಕ್, ಟ್ವಿಟರ್ಗಳನ್ನು ಉಪಯೋಗಿಸುತ್ತಾರೆ.

ಮುಂದಿನ ದಿನಗಳು

[ಬದಲಾಯಿಸಿ]

ನಾಗ್ ಅವರು ಮೋದಿಯವರು ದೇಶದ ಪ್ರಧಾನಿಯಾಗುವ ಸಾಧ್ಯತೆಯ ಬಗ್ಗೆ ಪುಸ್ತಕದ ಮೊದಲನೆ ವಿಭಾಗದಲ್ಲಿ ಬರೆದಿದ್ದಾರೆ. ಈ ವಿಭಾಗದಲ್ಲಿ ನಾಗ್ ಅವರು ಮೋದಿಯವರ ಸಾಮರ್ಥ್ಯದ ಬಗ್ಗೆ ಬರೆದಿದ್ದಾರೆ. ಮೋದಿಯವರು ಸತತ ಮೂರನೆ ಬಾರಿಗೆ ಗುಜರಾತಿನ ವಿಧಾನಸಭೆಯ ಚುನಾವಣೆಯನ್ನು ಗೆದ್ದರು. ಇದರಿಂದಾಗಿ ಮೋದಿಯವರ ಬಗ್ಗೆ ಜನರಿಗಿರುವ ನಂಬಿಕೆ ಹೆಚ್ಚಾಗಿದೆ. ಮೋದಿಯವರ ಈ ಸಾಧನೆಯಿಂದಾಗಿ ಮೋದಿಯವರು ಪ್ರಧಾನಿಯಾಗುವುದು ಬಹುತೇಕ ಖಚಿತ ಎಂದು ಅವರ ಅಭಿಮಾನಿಗಳು ಭಾವಿಸಿದ್ದಾರೆ. ಗುಜರಾತಿನ ಮುಸ್ಲಿಂ ಸಮುದಾಯವು ಕೂಡ ಮೋದಿಯವರನ್ನು ಇತ್ತೀಚಿನ ದಿನಗಳಲ್ಲಿ ಒಪ್ಪಿಕೊಳ್ಳುತ್ತಿದೆ. ಮೋದಿಯವರು ಗುಜರಾತಿನ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿದ್ದಾರೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರೆಲ್ಲ ಮೋದಿಯವರನ್ನು ಪ್ರಧಾನಿಯಾಗಿಸುವ ಆಸೆಯನ್ನಿಟ್ಟುಕೊಂಡಿದ್ದಾರೆ. ಮೋದಿಯವರನ್ನು ಪ್ರಧಾನಿಯಾಗಿ ನೋಡುವ ಆಸೆ ಕೋಟ್ಯಾಂತರ ಜನರಿಗಿದೆ. ಇಂತಹ ಜನರ ಆಸೆಯನ್ನು ಮೋದಿಯವರು ಪೂರೈಸುತ್ತಾರಾ ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿ ನೋಡ ಬೇಕಾಗಿದೆ. ವಿಶ್ವ ಹಿಂದೂ ಪರಿಶತ್ತಿನವರು ಈಗ ಗುಜರಾತ್ ಇರುವಂತೆ ಮುಂದೆ ಭಾರತವಿರುತ್ತದೆಂದು ಹೇಳಿಕೆ ಕೊಟ್ಟಿದ್ದಾರೆ. ಅನಿಲ್ ಅಂಬಾನಿಯವರು ಮೋದಿಯವರನ್ನು ಹೊಗಳಿ ಮಾತನಾಡಿದ್ದಾರೆ. ಇವರು ಮೋದಿಯವರನ್ನು ರಾಜರಲ್ಲಿ ರಾಜ ಎಂದು ಕರೆದಿದ್ದಾರೆ. ಗುಜರಾತಿನ ವೈಬ್ರೆಣ್ಟ್ ಗುಜರಾತ್ ಸಮಾವೇಶದಲ್ಲಿ ಜಗತ್ತಿನ ೧೨೦ ದೇಶದ ಕಡೆಯಿಂದ ರೂವಾರಿಗಳು ಬಂದಿದ್ದರು. ಭಾರತದ ಹಲವಾರು ಉದ್ಯಮಿಗಳು ಮೋದಿಯವರು ಪ್ರಧಾನಿಯಾಗಲಿಯೆಂದು ಆಶಿಸಿದ್ದಾರೆ. ಒಟ್ಟಿನಲ್ಲಿ ಮೋದಿಯವರ ಹೆಸರು ದೇಶದಾದ್ಯಂತ ಪಸರುತ್ತಿದೆ. ಭಾರತದ ಎಲ್ಲ ರಾಜ್ಯಗಳ ಪೈಕಿ ಗುಜರಾತ್ ರಾಜ್ಯವು ಅತಿ ಅಭಿವೃದ್ಧಿ ಕಂಡ ರಾಜ್ಯವೆಂದು ವಿದೇಶದವರು ಭಾವಿಸಿದ್ದಾರೆ. ಜನರು ಮೋದಿಯವರನ್ನು ಪ್ರೀತಿಸಿದರೂ, ದ್ವೇಶಿಸಿದರೂ ತಿರಸ್ಕರಿಸುವಂತಿಲ್ಲ ಎಂದು ನಾಗ್ ಅವರು ಹೇಳಿದ್ದಾರೆ. ಮೋದಿಯವರಿಂದಾಗಿ ಭಾರತೀಯರು ಬದಲಾವಣೆಯನ್ನು ಬಯಸುವಂತಾಗಿದೆಯೆಂದು ನಾಗ್ ಅವರ ಅಭಿಪ್ರಾಯ. ದೆಹೆಲಿಯ ಕಡೆಗೆ ಬಹಳ ವೇಗವಾಗಿ ಮೋದಿಯವರು ಸಾಗುತ್ತಾರೆಂದು ಲೇಖಕರು ಪುಸ್ತಕದಲ್ಲಿ ಹೇಳಿದ್ದಾರೆ. ಮೋದಿಯವರ ಬಗ್ಗೆ ನಾವು ಈ ಪುಸ್ತಕವನ್ನು ಓದಿದ ಮೇಲೆ ಅವರ ಬಗ್ಗೆ ಕೇವಲ ಒಂದು ಅಭಿಪ್ರಾಯವನ್ನು ಇಟ್ಟಕೊಳ್ಳುವುದು ಅಸಾಧ್ಯ. ನಮ್ಮ್ದೇ ಆದ ರೀತಿಯಲ್ಲಿ ನಾವು ಮೋದಿಯವರನ್ನು ನೋಡಬೇಕು.

ಟಿಪ್ಪಣಿಗಳು

[ಬದಲಾಯಿಸಿ]

1.) http://www.goodreads.com/book/show/17847768-the-namo-story

2.) https://archive.is/20140128122411/www.hindustantimes.com/lifestyle/books/review-the-namo-story-a-political-life/article1-1043124.aspx

3.) http://ibnlive.in.com/chat/view/kingshuk-nag/1690.html

4.) http://books.rediff.com/book/the-namo-story--a-political-life/9788174369383 Archived 2013-09-25 ವೇಬ್ಯಾಕ್ ಮೆಷಿನ್ ನಲ್ಲಿ.

ಉಲ್ಲೇಖಗಳು

[ಬದಲಾಯಿಸಿ]

1.) Nag, K. (2013). The Namo Story a political life. New Delhi: Roli Books.

"https://kn.wikipedia.org/w/index.php?title=ನಮೋ_ಕಥೆ&oldid=1190828" ಇಂದ ಪಡೆಯಲ್ಪಟ್ಟಿದೆ