ಧೃತಿ
ಗೋಚರ
ಧೃತಿ ಒಂದು ಸಂಸ್ಕೃತ ಶಬ್ದವಾಗಿದೆ. ಇದು ಯಮಗಳಲ್ಲಿ ಒಂದು. ಇದರರ್ಥ 'ದೃಢ ನಿಶ್ಚಯದಿಂದ ಕಾರ್ಯನಿರ್ವಹಿಸುವುದು' (ಭಗವದ್ಗೀತೆ ೧೮.೨೬), 'ಸಹನೆ' (ಭಾಗವತ ಪುರಾಣ ೫.೫.೧೦-೧೩), 'ಸ್ಥಿರ ಸಂಕಲ್ಪ' (ಚೈತನ್ಯ ಚರಿತಾಮೃತ ಮಧ್ಯ ೨೪.೧೧) ಮತ್ತು 'ಏಕನಿಷ್ಠ ಸಾಧನೆ' (ಚೈತನ್ಯ ಚರಿತಾಮೃತ ಮಧ್ಯ ೨೪.೧೭೪), 'ನಿಯಮಿತವಾಗಿ ಧರಿಸುವುದು' (ಚೈತನ್ಯ ಚರಿತಾಮೃತ ಮಧ್ಯ ೨೪.೩೩೩) ಮತ್ತು ಹನ್ನೊಂದು ರುದ್ರಾಣಿಗಳಲ್ಲಿ ಒಂದನ್ನು (ಭಾಗವತ ಪುರಾಣ ೩.೧೨.೧೩) ಸೂಚಿಸುತ್ತದೆ.[೧] ಧೃತಿ ಶಬ್ದಕ್ಕೆ ಸರಿಯಾದ ಆಂಗ್ಲ ಸಮಾನಾರ್ಥಕ ಶಬ್ದವಿಲ್ಲ. ಇದು ಧೃ (ಸಹಿಸು ಎಂಬ ಅರ್ಥ) ಮೂಲದಿಂದ ವ್ಯುತ್ಪನ್ನವಾಗಿದೆ.[೨] ಇದನ್ನು ಒಂದು ಗುರಿಯತ್ತ ನಿರಂತರವಾಗಿ ಪ್ರಯತ್ನಿಸುವಂತೆ ಮಾಡುವ ಮನುಷ್ಯನಲ್ಲಿನ ಸೂಕ್ಷ್ಮ ಶಕ್ತಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಎಲ್ಲ ವಿರೋಧಗಳು ಮತ್ತು ಅಡೆತಡೆಗಳನ್ನು ಎದುರಿಸಿ ಜಯಿಸಲು ಧೈರ್ಯ, ಉತ್ಸಾಹ ಮತ್ತು ದೃಢನಿಷ್ಠೆಯನ್ನು ಒದಗಿಸುತ್ತದೆ.[೩]
ಉಲ್ಲೇಖಗಳು
[ಬದಲಾಯಿಸಿ]- ↑ "dhrti". Archived from the original on 2014-09-24. Retrieved 2019-05-08.
- ↑ The Upanishads. Penguin. p. 432.
- ↑ Holy Gita Ready Reference. Chinmaya Mission. p. 417.[permanent dead link]