ಯಮ(ಯೋಗ)
ಗೋಚರ
ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವುಗಳನ್ನು ಯಮವೆಂದು ಕರೆಯುತ್ತಾರೆ. ಈ ಯಮ ಮತ್ತು ನಿಯಮಗಳನ್ನು ಸಾರ್ವಭೌಮ ವ್ರತಗಳೆಂದು ಪತಂಜಲಿ ಯೋಗಶಾಸ್ತ್ರ ತಿಳಿಸುತ್ತದೆ.
- ಅಹಿಂಸೆಯೆಂದರೆ ಯಾವುದೇ ಜೀವಿಗೂ ತ್ರಿಕರಣಗಳಿಂದಲೂ ತೊಂದರೆಯನ್ನು ಉಂಟುಮಾಡದಿರುವುದು.
- ಸತ್ಯವೆಂದರೆ ಇದ್ದುದನ್ನು ಇದ್ದ ಹಾಗೆಯೇ ತ್ರಿಕರಣಗಳಿಂದಲೂ ಸಾಧಿಸುವುದು.
- ಅಸ್ತೇಯವೆಂದರೆ ಯಾರಿಂದಲೂ ಏನನ್ನೂ ಕದಿಯದಿರುವುದು.
- ಬ್ರಹ್ಮಚರ್ಯವೆಂದರೆ ಜಿತೇಂದ್ರಿಯತೆ.
- ಅಪರಿಗ್ರಹವೆಂದರೆ ಯಾರಿಂದಲೂ ಏನನ್ನೂ ಸ್ವೀಕರಿಸದಿರುವುದು.